ಕನ್ನಡದ್ದೇ ಉಪಭಾಷೆಯಾದ ತುಳು, ಕರ್ನಾಟಕ ಕರಾವಳಿ ಜನರ ಹೃದಯದ ಭಾಷೆ. ಈಗ ಅದೇ ತುಳುವಿನಲ್ಲಿ ಸ್ಪೆಷಲ್ ಹಾಡೇ ಬಂದಿದೆ. ಅದು ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಚಿತ್ರದಲ್ಲಿ. ತೆಂಬಾರೆ ಬೊಟ್ಟುವನ ಎಂಬ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಡಾ. ನಾಗೇಂದ್ರ ಪ್ರಸಾದ್. ಸೋನು ಕಕ್ಕರ್ ಹಾಡಿರುವ ಹಾಡಿಗೆ ಗುರುಕಿರಣ್ ಸಂಗೀತವಿದೆ.
ತೆAಬಾರೆ ಬೊಟ್ಟುವನ ಪಕ್ಕಾ ಟಪ್ಪಾಂಗುಚ್ಚಿ ಸಾಂಗು. ಹುಚ್ಚು ಹತ್ತಿಸುವಂತೆ ಹೆಜ್ಜೆ ಹಾಕಿರೋದು ನಿಧಿ ಸುಬ್ಬಯ್ಯ. ದ್ವಾರಕೀಶ್ ಬ್ಯಾನರ್‌ನಲ್ಲಿ ಸಿದ್ಧವಾಗಿರೋ ಚಿತ್ರಕ್ಕೆ ಯೋಗಿ ದ್ವಾರಕೀಶ್ ನಿರ್ಮಾಪಕರಾದರೆ, ಪಿ.ವಾಸು ನಿರ್ದೇಶಕ. ಶಿವರಾಜ್ ಕುಮಾರ್ ಎದುರು ರಚಿತಾ ರಾಮ್ ನಾಯಕಿ. ಅನಂತ್ ನಾಗ್, ಸುಹಾಸಿನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.