` amruthamathi, - chitraloka.com | Kannada Movie News, Reviews | Image

amruthamathi,

 • ಅಮೃತಮತಿ ವಿಷ ಕೊಡಲ್ಲ.. ಹಾಗಾದರೆ.. ಬರಗೂರರ ಅಮೃತಮತಿ ಕ್ಲೈಮಾಕ್ಸ್ ಏನು..?

  baraguru changed amruthamathi climax scene

  ಅಮೃತಮತಿಯ ಕಥೆ ಗೊತ್ತಿದ್ದವರಿಗೆ ಅದು ಗೊತ್ತಿದ್ದೇ ಇರುತ್ತೆ. ಸುಂದರ ರಾಜ ಗಂಡನಾಗಿದ್ದರೂ, ಅಷ್ಟಾವಂಕನ ಜೊತೆ ಅಕ್ರಮ ಸಂಬಂಧ ಬೆಳೆಸುವ ಅಮೃತಮತಿ, ಅದು ತನ್ನ ಪತಿ ಮತ್ತು ಮನೆಯವರಿಗೆ ತಿಳಿಯಿತು ಎಂದು ಗೊತ್ತಾದ ಮೇಲೆ ಎಲ್ಲರಿಗೂ ವಿಷವಿಟ್ಟು ಕೊಂದುಬಿಡುತ್ತಾಳೆ. ಆದರೆ, ಅದೇ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿರುವ ಬರಗೂರು, ಕಥೆಯನ್ನು ಬದಲಿಸಿದ್ದಾರೆ.

  ಅದು ಹೆಣ್ಣಿನ ಘನತೆ ಹೆಚ್ಚಿಸುವಂತಿದೆ ಎನ್ನುವ ಬರಗೂರು, ಯಶೋಧರ ಚರಿತೆಯ ಅಮೃತಮತಿಗೆ ಈ ಸಿನಿಮಾದಲ್ಲಿ ಮರುಹುಟ್ಟು ಕೊಟ್ಟಿದ್ದೇನೆ ಎನ್ನುತ್ತಾರೆ. ಬರಗೂರು ರಾಮಚಂದ್ರಪ್ಪ ಅವರಿಗೆ ಹರಿಪ್ರಿಯಾ ಅವರ ನಟನೆ ಅದೆಷ್ಟು ಇಷ್ಟವಾಗಿದೆ ಎಂದರೆ, ಹರಿಪ್ರಿಯಾ ಇದ್ದಿದ್ದರೆ, ಹರಿಪ್ರಿಯಾರಂತೆಯೇ ಇರುತ್ತಿದ್ದರು ಎನ್ನುವಷ್ಟು.

  ಬರಗೂರು ರಾಮಚಂದ್ರಪ್ಪನವರ ವಿದ್ಯಾರ್ಥಿ ಕಿಶೋರ್, ಯಶೋಧರನಾಗಿ ನಟಿಸಿದ್ದರೆ, ತಿಲಕ್ ಅಷ್ಟಾವಂಕನಾಗಿದ್ದಾರೆ. ಸುಂದರ್ ರಾಜ್-ಪ್ರಮೀಳಾ ಜೋಷಾಯ್, ಯಶೋಧರನ ತಂದೆತಾಯಿಯಾಗಿದ್ದಾರೆ. ಇಂಚರ ಪ್ರೊಡಕ್ಷನ್ಸ್‍ನ ಪುಟ್ಟಣ್ಣ ನಿರ್ಮಾಣದ ಚಿತ್ರ ಅಮೃತಮತಿ.

 • 'Amruthamathi' Selected For Boston International Film Festival

  'Amruthamathi' Selected For Boston International Film Festival

  Haripriya starrer 'Amruthamathi' has been selected for the India International Film Festival in Boston from Sep 18 to 20.

  'Amruthamathi's directed by Baraguru Ramachandrappa was earlier selected for Noida and Austria film festivals. Haripriya had also won the Best Actress award at the Noida Film Festival. Now the film has been selected for screening at the India International Film Festival in Boston.

  Baraguru Ramachandrappa has scripted the film based on Janna Kavi's 'Yashodara Charitha'. Kishore, Haripriya, Tilak, Sundarraj, Pramila Joshai and others in prominent roles in the film.

 • Amruthamathi Selected For Indian World Film Festival

  amruthamathi selected for indian world film festival

  Writer-director Baraguru Ramachandrappa's latest 'Amruthamathi' starring Kishore, Hariprriya and others in the lead has been officially selected for screening during the 4th Indian World Film Festival, which is scheduled to be held in Noida.

  The film is also selected for competition at the festival under three categories - best picture, best director and best actress in a leading role. The period film is based on Yashodhara Charite, a popular work from Mahakavi Janna. 

  Hariprriya plays the protagonist's role of Amruthamathi, a wife of Yuavaraja Yashodhara who falls in love with Ashtaavanka, who tends to the horses in the palace.

  According to the makers, Amruthamathi revolves around the wife of yuvaraja yashodhara, Amruthamathi, who  is unhappy with the royal lifestyle. "One day she accidentally hears a song sung by a servant Astaavanka, who tends to the horses. She falls in love with him. The story will be from the point of view of the queen, webbed around the conflict of values in the mind of Amruthamathi."

   

 • Hariprriya Dubs for Amruthamathi In A Day

  haripriya dubs for amruthamathi

  The pretty damsel Hariprriya who is busy with multiple projects has dubbed for her upcoming venture 'Amruthamathi', in just a day's time!

  Sharing her dubbing experience with Chitraloka, the actress said that it was a great learning experience while working for yet another exciting project. "And, dubbing for it in just a day's time gave me greater satisfaction, which boosts my confidence to attempt challenging tasks as an artist," she says.

  After the success of Ellidde Illi Tanaka, Hariprriya is soon to return with Kannad Gotilla and then in Rishab Shetty's brainchild 'Katha Sangama', which is made in dedication to legendary Kannada filmmaker Puttanna Kanagal. Thereafter, she has Bicchugatti, and one more commercial entertainer alongside First Rank Raju fame Gurunandan.

  Amruthamathi is being directed by renowned writer Baraguru Ramachandra.

 • ಅಮೃತಮತಿ ಶೂಟಿಂಗ್.. ಡಬ್ಬಿಂಗ್ ಮುಗಿಸಿದ ಹರಿಪ್ರಿಯಾ

  hari[riya completes amruthamathi dubbing

  ಅಮೃತಮತಿ, ಜನ್ನನ ಯಶೋಧರ ಕವಿತೆ ಎಂಬ ಮಹಾಕಾವ್ಯದ ನಾಯಕಿ. ಸುರಸುಂದರಿಯಾಗಿದ್ದ ಅಮೃತಮತಿ, ಪತಿ ಯಶೋಧರನಲ್ಲಿ ಸುಖವನ್ನು ಕಾಣದೆ, ಗಜಲಾಯದ ಮಾವುತ ಅಷ್ಟಾವಂಕನಲ್ಲಿ ಮೋಹಗೊಳ್ಳುತ್ತಾಳೆ. ಇದನ್ನು ತಿಳಿದ ರಾಜ ಯಶೋಧರ ಆಕೆಯನ್ನು ಕೊಲ್ಲಲು ಮುಂದಾಗುತ್ತಾನೆ. ನಂತರ ಜೈನ ಧರ್ಮದ ನೆನಪಾಗಿ ಹಿಟ್ಟಿನ ಹುಂಜವನ್ನು ಬಲಿ ಕೊಡುತ್ತಾನೆ. ಅದರ ಸೌಂದರ್ಯಕ್ಕೆ ಮರುಳಾಗಿ ಆ ಹಿಟ್ಟಿನ ಹುಂಜಕ್ಕೆ ಆತ್ಮವೊಂದು ಸೇರಿಕೊಳ್ಳುತ್ತದೆ. ಹಿಟ್ಟಿನ ಹುಂಜವನ್ನು ಬಲಿಕೊಟ್ಟ ತಪ್ಪಿಗೆ ಆತ ಮಾನಸಿಕ ಹಿಂಸೆಗೊಳಗಾಗುತ್ತಾನೆ. ತನ್ನ ಮತ್ತು ಅಷ್ಟಾವಂಕನ ಅಕ್ರಮ ಸಂಬಂಧ ರಾಜನಿಗೆ ಗೊತ್ತಾಗಿದೆ ಎಂದು ತಿಳಿದ ಅಮೃತಮತಿ, ಪತಿಯನ್ನು ವಿಷವಿಕ್ಕಿ ಕೊಲ್ಲುತ್ತಾಳೆ. ಕೊನೆಗೆ ಹೀನಾಯ ಸಾವು ಕಂಡು ಧೂಮಪ್ರಭೆ ಎಂಬ ನರಕಕ್ಕೆ ಹೋಗುತ್ತಾಳೆ.

  ಇದು ಜನ್ನನ ಯಶೋಧರ ಚರಿತೆಯ ಕಥೆ. ಇದೇ ಕಥೆಯನ್ನಿಟ್ಟುಕೊಂಡು ಗಿರೀಶ್ ಕಾರ್ನಾಡ್ ಹಿಟ್ಟಿನ ಹುಂಜ ಎಂಬ ನಾಟಕವನ್ನೂ ರಚಿಸಿದ್ದರು. ಜನ್ನನ ಕೃತಿಯನ್ನು ಆಧರಿಸಿ ಈಗ ಬರಗೂರು ರಾಮಚಂದ್ರಪ್ಪ, ಅಮೃತಮತಿ ಎಂಬ ಸಿನಿಮಾ ಮಾಡಿದ್ದಾರೆ. ಅಮೃತಮತಿಯ ಪಾತ್ರದಲ್ಲಿ ನಟಿಸಿರುವುದು ಹರಿಪ್ರಿಯಾ. ಎರಡು ತಿಂಗಳ ಹಿಂದೆ ಶುರುವಾಗಿದ್ದ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಹರಿಪ್ರಿಯಾ ತಮ್ಮ ಪಾತ್ರದ ಡಬ್ಬಿಂಗ್ ಕೂಡಾ ಮುಗಿಸಿಕೊಟ್ಟಿದ್ದಾರೆ. ಅದೂ ಒಂದೇ ದಿನದಲ್ಲಿ.

  ‘ಇದು 13ನೇ ಶತಮಾನದ ಕಥೆಯಾಗಿದ್ದರಿಂದ, ಸಂಭಾಷಣೆ ಸಖತ್ತಾಗಿತ್ತು. ಸಾಹಿತ್ಯದ ಪರಿಪೂರ್ಣ ಸೊಗಸು ಅಲ್ಲಿತ್ತು. ಇಷ್ಟು ಕಡಿಮೆ ಅವಧಿಯಲ್ಲಿಮುಗಿಸಿದ ನನ್ನ ಮೊದಲ ಸಿನಿಮಾ ಇದು ಎಂದಿರುವ ಹರಿಪ್ರಿಯಾ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಪ್ಲಾನಿಂಗ್ನ್ನು ಹೊಗಳಿದ್ದಾರೆ. ಅವರೊಬ್ಬ ಅದ್ಭುತ ನಿರ್ದೆಶಕ. ಇಂಥಾದ್ದೊಂದು ಚಿತ್ರದಲ್ಲಿ ನಟಿಸಿದ್ದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ ಹರಿಪ್ರಿಯಾ.

  ಹರಿಪ್ರಿಯಾಗೆ ಕನ್ನಡ ಭಾಷೆಯ ಮೇಲೆ ಅದ್ಭುತ ಹಿಡಿತವಿದೆ. ಇದು ಹರಿಪ್ರಿಯಾ ಅಂತಹ ಕ್ಲಿಷ್ಪ ಪಾತ್ರದ ಸಂಭಾಷಣೆಯ ಡಬ್ಬಿಗ್ನ್ನು ಒಂದೇ ದಿನದಲ್ಲಿ ಮುಗಿಸಲು ಸಹಕಾರಿಯಾಗಿದೆ.

   

 • ಆಸ್ಟ್ರಿಯಾಕ್ಕೆ ಅಮೃತಮತಿ

  amruthamathi to be screened at astria film festival

  ಕನ್ನಡದ ಶ್ರೇಷ್ಟ ಕಾವ್ಯಕೃತಿಗಳಲ್ಲೊಂದಾದ ಯಶೋಧರ ಚರಿತೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕಾವ್ಯ ಕೃತಿಯನ್ನಾಧರಿಸಿ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಅಮೃತಮತಿ ಸಿನಿಮಾ, ಈಗ ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

  ಆನ್‍ಲೈನ್ ಸ್ಕ್ರೀನಿಂಗ್ ಮೂಲಕ, ಜುಲೈ 22ರಿಂದ ಆಗಸ್ಟ್ 5ರವರೆಗೆ ನಡೆಯುವ ಫಿಲಂ ಫೆಸ್ಟಿವಲ್ ಇದು. ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಶಾಸಕ ಪುಟ್ಟಣ್ಣ ನಿರ್ಮಿಸಿರುವ ಚಿತ್ರವಿದು. ಹರಿಪ್ರಿಯಾ ನಾಯಕಿಯಾಗಿರುವ ಚಿತ್ರಕ್ಕೆ ಬರಗೂರು ನಿರ್ದೇಶನವಿದೆ. ಈಗಾಗಲೇ ಹರಿಪ್ರಿಯಾ ಇನ್ನೊಂದು ಫಿಲಂ ಫೆಸ್ಟಿವಲ್‍ನಲ್ಲಿ ಶ್ರೇಷ್ಟ ನಟಿ ಪ್ರಶಸ್ತಿ ಗೆದ್ದಿರುವ ಚಿತ್ರವಿದು. ಹರಿಪ್ರಿಯಾ ಅಮೃತಮತಿಯಾಗಿ, ಕಿಶೋರ್ ಯಶೋಧರನಾಗಿ ನಟಿಸಿರುವ ಚಿತ್ರದಲ್ಲಿ ಅಷ್ಟಾವಂಕನಾಗಿ ನಟಿಸಿರುವುದು ತಿಲಕ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery