ಬನಾರಸ್. ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿರೋ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯ ಸಿನಿಮಾ. ಟೈಂ ಮೆಷಿನ್ ಮತ್ತು ಲವ್ ಸ್ಟೋರಿಯ ಮಧ್ಯೆ ಹಿಂದೂಗಳ ಪುಣ್ಯಕ್ಷೇತ್ರ ಬನಾರಸ್‍ನಲ್ಲಿ ನಡೆಯೋ ವಿಭಿನ್ನ ಪ್ರೇಮಕಥೆ. ಹೀರೋ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಆದರೆ ಹೀರೋಯಿನ್ ಪಂಚತಂತ್ರದ ಶೃಂಗಾರದ ಹೊಂಗೇಮರ ಸೋನಲ್ ಮಂಥೆರೋ. ಬೆಲ್‍ಬಾಟಂ, ಬುಲೆಟ್ ಬಸ್ಯಾ, ಒಲವೇ ಮಂದಾರ, ಬ್ಯೂಟಿಫುಲ್ ಮನಸುಗಳು, ಟೋನಿ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ಕೊಟ್ಟಿರುವ ಜಯತೀರ್ಥ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಚಿತ್ರಪ್ರೇಮಿಗಳ ಮುಂದೆ ಬರುತ್ತಿದ್ದಾರೆ.
ಎಲ್ಲರೂ ಕಾಶಿಗೆ ವಯಸ್ಸಾದ ಮೇಲೆ ಹೋಗಿ ಬರಬೇಕು ಎನ್ನುತ್ತಾರೆ. ಸಾಯುವ ಮುನ್ನ ಕಾಶಿ ದರ್ಶನ ಮಾಡಬೇಕು ಎನ್ನುತ್ತಾರೆ. ಆದರೆ ನನ್ನ ಪ್ರಕಾರ ಯೌವನದಲ್ಲಿದ್ದಾಗಲೇ ಕಾಶಿಗೆ ಹೋಗಬೇಕು. ಕಾಶಿಯ ಜೀವನ ನಮ್ಮ ಬದುಕನ್ನು ಬದಲಿಸುತ್ತದೆ ಎನ್ನುತ್ತಾರೆ ನಾಯಕಿ ಸೋನಲ್. ಬನಾರಸ್ ಚಿತ್ರೀಕರಣಕ್ಕಾಗಿ 40 ದಿನ ಕಾಶಿಯಲ್ಲೇ ಇದ್ದ ಸೋನಲ್ ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಕಥೆ ಪ್ರಾದೇಶಿಕತೆಯನ್ನೂ ಮೀರಿ ಎಲ್ಲರಿಗೂ ಅನ್ವಯವಾಗುವಂತದ್ದು ಎನ್ನುವುದನ್ನು ಮರೆಯೋದಿಲ್ಲ.
ಚಿತ್ರದಲ್ಲಿ ನನ್ನದು ಧನಿ ಅನ್ನೋ ಹುಡುಗಿಯ ಪಾತ್ರ. ರಿಯಾಲಿಟಿ ಶೋಗಳಲ್ಲಿ ಹಾಡುವ ಕನಸು ಹೊತ್ತ, ಸಿಂಗರ್ ಆಗುವ ಕನಸು ಕಾಣುವ ಹುಡುಗಿ. ಚಿತ್ರದಲ್ಲಿ ನನ್ನ ಮತ್ತು ಝೈದ್ ಮಧ್ಯೆ ಭಾವನಾತ್ಮಕ ದೃಶ್ಯಗಳಿಗೆ. ಚಿತ್ರದಲ್ಲೊಂದು ಸಂದೇಶವೂ ಇದೆ ಎನ್ನುವ ಸೋನಲ್ ಝೈದ್ ಖಾನ್ ಅವರಿಗೆ ಇದು ಮೊದಲ ಚಿತ್ರ ಎನ್ನಿಸುವುದಿಲ್ಲ. ತರಬೇತಿ ಪಡೆದು ಬಂದಿದ್ದಾರೆ. ಮೊದ ಮೊದಲ ಅವರ ಪೊಲಿಟಿಕಲ್ ಬ್ಯಾಕ್‍ಗ್ರೌಂಡ್‍ನಿಂದಾಗಿ ಬೆರೆಯಲು ಕಷ್ಟವಾಯಿತಾದರೂ ಸಿನಿಮಾ ಮುಗಿಯುವ ಹೊತ್ತಿಗೆ ಕ್ಲೋಸ್ ಫ್ರೆಂಡ್ಸ್ ಆಗಿದ್ದೆವು ಎನ್ನುತ್ತಾರೆ ಸೋನಲ್.