` radhika narayan, - chitraloka.com | Kannada Movie News, Reviews | Image

radhika narayan,

  • ನನ್ನ ಜೀವನ ನನ್ನದಷ್ಟೇ ಎನ್ನುವವರಿಗೆ ಮುಂದಿನ ನಿಲ್ದಾಣ

    mundina nildana is a youthful stiry

    ಮುಂದಿನ ನಿಲ್ದಾಣ, ಯಾವ ಕೆಟಗರಿಯ ಸಿನಿಮಾ..? ಚಿತ್ರದ ಟ್ರೇಲರ್ ನೋಡಿದವರಿಗೆ ಹುಟ್ಟುವ ಕುತೂಹಲ ಅದು. ಕ್ಲಾಸಿಕ್ ಎನ್ನಿಸುವ ಟ್ರೇಲರ್, ವ್ಹಾವ್ ಎನ್ನಿಸುವ ನಾಯಕಿಯರ ಚೆಲುವು ಮತ್ತು ವ್ಹಾಟ್ ಇಟ್ ಈಸ್ ಎನ್ನಿಸುವ ಹೀರೋ. ಕಥೆಯ ಕೆಟಗರಿ ಯಾವುದು..? ಅಂದಹಾಗೆ ಇದು ಪಕ್ಕಾ ಯೂಥ್‌ಫುಲ್ ಫಿಲ್ಮ್.

    ಚಿತ್ರದ ಕಥಾ ನಾಯಕನ ಬದುಕು, ದೃಷ್ಟಿಕೋನವೇ ಬೇರೆ. ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳದೆ, ತನ್ನಿಷ್ಟ ಬಂದAತೆ ಬದುಕುವ ಹುಡುಗ ಪಾರ್ಥ. ಆ ಪಾರ್ಥನ ಲೈಫಿನಲ್ಲಿ ಮೂರು ಹುಡುಗಿಯರು ಎಂಟ್ರಿ ಕೊಡುತ್ತಾರೆ. ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್ ಜೊತೆಗೆ ದತ್ತಣ್ಣನೂ ಇದ್ದಾರೆ. ಲವ್ ಬ್ರೇಕಪ್ ಆದ ಮೇಲೆ ಜೀವನವೇ ಖತಂ ಎಂದುಕೊಳ್ಳುವ ಯುವ ಜನಾಂಗಕ್ಕೆ ಮುಂದಿನ ನಿಲ್ದಾಣದಲ್ಲೊಂದು ಸಂದೇಶವೂ ಇದೆ. ಇದು ವಿನಯ್ ಭಾರದ್ವಾಜ್ ನಿರ್ದೇಶನದ ಸಿನಿಮಾ. ಚಿತ್ರದ ಸೆಲಬ್ರಿಟಿ ಶೋಗೆ ವಂಡರ್‌ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಮೆಚ್ಚಿಕೊಳ್ಳಬೇಕಿರುವುದು ಪ್ರೇಕ್ಷಕ ಪ್ರಭು.

  • 'Mundina Nildana' Premiere Show In America

    mundina nildana premiere show in america

    Praveen Tej's new film 'Mundina Nildana, which also stars  Radhika Naryan, Ananya Kashyap and others in prominent roles is ready and the film is all set to be premiered in America on the 23rd of November.

    Recently, the trailer of the film has been released in Chamundeshwari Studios in Bangalore. Director Vinay Bharadwaj has announced that the film's premiere will be held on the 23rd of this month, followed by a state wide release on the 29th of November. KRG Studios will be distributing the film across Karnataka.

    Well known anchor Vinay Bharadwaj who had hosted talk shows like 'Maathu Kathe Vinay Jothe', 'Let's Talk With Vinay' and others has turned independent director with this film. The film revolves around three people and about their journey in life. Vasuki Vaibhav has composed the songs for the film

  • Mundina Nildana Movie Review: Chitraloka Rating 4/ 5*

    mundina nildana movie review

    A famous American author says, "Embrace the glorious mess that you are." Indeed, life is a beautiful mess and the relationships are another facet of it, and so is Vinay Bharadwaj's 'Mundina Nildana' which deals with various complexities of life through the prisms of three different characters - Partha, Meera and Ahana.

    In other words, it is a reflection of the majority of present generation youth, their perception towards their journey in life towards a destination of their own with many stops altering the course of it.

    The first thing which impresses 'Mundina Nildana' which means the next stop or the destination, is the quality of its making. With the sound technical support and the best in the field behind the making of it, it is a 'reel treat' to experience the beautiful saga on life with a distinctive journey on the silver screen. Seven soothing songs with a pleasing background score elevates the journey to another level.

    The protagonist, Partha played by the talented Praveen Tej, is a software engineer whose real passion is photography. Whereas, Radhika Narayan as Meera is an art curator who is looking for a soul mate and and Ahana, a medical student who has dream set to become a cancer specialist. She is fun loving with no heart for commitments. The journey takes off with Partha sharing his life's journey around Meera and Ahana.

    Now, a photographer, Partha is at a stage where he has to decide on moving on with the life and his goal set on a new journey. There is more to it than just the three lives, as Mundina Nildana is a celebration of life, relationships and much more. Make sure your next stop is at a theatre near you which is screening Mundina Nildana from this Friday.

  • ಇದು ನನ್ನ ರೀ ಎಂಟ್ರಿ - ರಾಧಿಕಾ ನಾರಾಯಣ್

    radhika narayan image

    ರಾಧಿಕಾ ನಾರಾಯಣ್ ಪ್ರಧಾನ ಪಾತ್ರದಲ್ಲಿರುವ ಮುಂದಿನ ನಿಲ್ದಾಣ ಈಗ ಚಿತ್ರಮಂದಿರಗಳಲ್ಲಿದೆ. ಚಿತ್ರದ ನಾಯಕಿ ರಾಧಿಕಾ ನಾರಾಯಣ್. ರಂಗಿತರಂಗದ ಮೂಲಕ ರಾಧಿಕಾ ಚೇತನ್ ಆಗಿ ಮಿಂಚು ಹರಿಸಿದ್ದವರು ಈಗ ರಾಧಿಕಾ ನಾರಾಯಣ್ ಆಗಿದ್ದಾರೆ. ಅರೆ.. ಅವರೆಲ್ಲಿ ದೂರ ಹೋಗಿದ್ದಾರೆ. ಗ್ಯಾಪ್ ಕೂಡಾ ಇಲ್ಲವಲ್ಲ.. ಅದು ಹೇಗೆ ರೀ ಎಂಟ್ರಿ ಎನ್ನುತ್ತಿದ್ದವರಿಗೆ ಸ್ವತಃ ರಾಧಿಕಾ ಉತ್ತರ ಕೊಟ್ಟಿದ್ದಾರೆ.

    ಇದುವರೆಗೆ ನಾನು ಮಾಡಿದ ಚಿತ್ರಗಳು ಸಸ್ಪೆನ್ಸ್ ಥ್ರಿಲ್ಲರ್, ಹಾರರ್ ಜಾನರ್ ಸಿನಿಮಾಗಳು. ಹೀಗಾಗಿ ಸೀರಿಯಸ್ ಆಗಿಯೋ, ಗೃಹಿಣಿಯಾಗಿಯೋ ಕಾಣಿಸಿಕೊಂಡಿದ್ದೆ. ನನ್ನನ್ನು ನಾನು ಚಾರ್ಮಿಂಗ್ ಆಗಿ, ಸ್ಟೆಟೀಲಿಷ್ ಆಗಿ ತೋರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದು ಮುಂದಿನ ನಿಲ್ದಾಣದಲ್ಲಿ ಸಾಧ್ಯವಾಗಿದೆ. ಹೀಗಾಗಿಯೇ ಇದನ್ನು ನಾನೇ ಮರು ಎಂಟ್ರಿ ಎನ್ನುತ್ತಿದ್ದೇನೆ' ಎನ್ನುತ್ತಾರೆ ರಾಧಿಕಾ.

    ಚಿತ್ರದಲ್ಲಿ ಮೀರಾ ಶರ್ಮಾ ಎಂಬ ಪಾತ್ರ ಮಾಡಿರುವ ರಾಧಿಕಾ ಆರ್ಟ್ ಕ್ಯುರೇಟರ್ ಆಗಿರುತ್ತಾಳೆ. ಬೆಟ್ಟದಷ್ಟು ಕನಸಿರುವ ಹುಡುಗಿ, ಸಂಗಾತಿಯ ಹುಡುಕಾಟದಲ್ಲಿರುತ್ತಾಳೆ. ಅದೇ ಅವಳ ಮುಂದಿನ ನಿಲ್ದಾಣ. ಆಗ ನಡೆಯುವ ಅನಿರೀಕ್ಷಿತ ಘಟನೆಗಳೇ ಚಿತ್ರದ ಕಥೆ.

    ಪ್ರವೀಣ್ ತೇಜ್ ನಾಯಕ. ಅನನ್ಯ ಕಶ್ಯಪ್ ಇನ್ನೊಂದು ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ವಿನಯ್ ಭಾರದ್ವಾಜ್ ನಿರ್ದೇಶಕ.

  • ಕ್ಲಾಸ್ ವರ್ಗದವರ ಮನಗೆದ್ದ ಮುಂದಿನ ನಿಲ್ದಾಣ

    mundina nildana grabs audinece attention

    ಮುಂದಿನ ನಿಲ್ದಾಣ, ಕ್ಲಾಸ್ ವರ್ಗದವರ ಕಥೆ. ಸಾಫ್ಟ್ವೇರ್ ಎಂಜಿನಿಯರ್ ಕಂ ಫೋಟೋಗ್ರಾಫರ್ ನಾಯಕ ಪಾರ್ಥ. ಇನ್ನೊಬ್ಬಳು ಆರ್ಟ್ ಕ್ಯುರೇಟರ್ ಮೀರಾ, ಡಾಕ್ಟರ್ ಅಹನಾ.. ಈ ಮೂರು ಪಾತ್ರಗಳ ನಡುವೆ ಸಾಗುವ ವಿಭಿನ್ನ ಪ್ರೇಮಕಥೆ. ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್ ಮಧ್ಯೆ ಪ್ರವೀಣ್ ತೇಜ್ ಮೂವರೂ ಪಾತ್ರಗಳನ್ನು ಜೀವಿಸಿದಂತೆ ನಟಿಸಿದ್ದಾರೆ.

    ಜೀವನಕ್ಕೆ, ಸಂಸಾರಕ್ಕೆ ಮದುವೆ ಎಂಬ ಬಂಧನ ಬೇಕಾ..? ಯಾರೊಬ್ಬರ ಮುಲಾಜಿನಲ್ಲೂ ಇಲ್ಲದೆ ಬದುಕುವುದು ಸಾಧ್ಯವಿಲ್ಲವಾ..? ಇಂತಹ ಪ್ರಶ್ನೆಗಳ ಹುಡುಕಾಟದಲ್ಲಿಯೇ ಸುಂದರ ಕನಸು ಕಾಣುವ, ನೋವು ತಿನ್ನುವ ಯುವಕ, ಯುವತಿಯರ ಬದುಕು..ಎಲ್ಲಿಗೆ ನಿಲ್ಲುತ್ತೆ..?

    ಎಲ್ಲಿಯೂ ನಿಲ್ಲುವುದಿಲ್ಲ ಎನ್ನುವ ನಿರ್ದೇಶಕ ವಿನಯ್ ಭಾರದ್ವಾಜ್, ಕ್ಲೈಮಾಕ್ಸ್ ತೋರಿಸದೆಯೇ ಕ್ಲೈಮಾಕ್ಸ್ ತಲುಪಿಸಿರುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ವಿಶೇಷವಾಗಿ.. ಕ್ಲಾಸ್ ವರ್ಗದ ಪ್ರೇಕ್ಷಕರಿಗೆ. ಮುಂದಿನ ನಿಲ್ದಾಣ ಎನ್ನುವುದು ಅಂತ್ಯವಲ್ಲ.. ಆರಂಭ ಎನ್ನುವಲ್ಲಿಯೇ ನಿರ್ದೇಶಕರ ಕ್ಲಾಸಿಕ್ ಟಚ್ ಇಷ್ಟವಾಗುತ್ತೆ.

  • ಚೇಸ್ : ಪೊಲೀಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್

    ಚೇಸ್ : ಪೊಲೀಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್

    ರಂಗಿತರಂಗ ರಾಧಿಕಾ ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದ ನಾಯಕಿ. ರಾಧಿಕಾ ನಾರಾಯಣ್ ನಟಿಸಿದ್ದಾರೆ ಎಂದರೆ ಆ ಚಿತ್ರದಲ್ಲಿ ಒಂದೊಳ್ಳೆ ಕಥೆಯಿದೆ ಎಂದು ಭರವಸೆಯಿಂದ ಹೇಳಬಹುದು. ರಾಧಿಕಾ ಅವರ ಟ್ರ್ಯಾಕ್ ರೆಕಾರ್ಡ್ ಹಾಗಿದೆ. ಹೀಗಾಗಿಯೇ ಚೇಸ್ ಚಿತ್ರದ ಮೇಲೆ ಭರವಸೆಯೂ ಇದೆ.

    ಚೇಸ್ ಚಿತ್ರದಲ್ಲಿ ನನ್ನದು ಪೊಲೀಸ್ ಪಾತ್ರ. ಹಾಗಂತ ಕಂಪ್ಲೀಟ್ ಕಾಪ್ ಅಲ್ಲ. ಟ್ರೈನಿಂಗ್‍ನಲ್ಲಿರೋ ಪೊಲೀಸ್ ನಾನು. ಆದರೆ ಕೆಲವು ಬೆಳವಣಿಗೆಗಳಿಂದಾಗಿ ಡ್ಯೂಟಿ ತಗೊಳ್ಳೋಕೆ ಆಗಲ್ಲ. ಒಂದು ವಿಚಿತ್ರ ಪರಿಸ್ಥಿತಿಯೊಳಗೆ ಸಿಕ್ಕಿಕೊಳ್ಳೋ ಪಾತ್ರ ನನ್ನದು ಎನ್ನುವ ರಾಧಿಕಾಗೆ ಚಿತ್ರದಲ್ಲಿ ಸ್ಟಂಟ್ ಸೀನ್‍ಗಳೂ ಇವೆಯಂತೆ. ನಾಯಿಯ ಜೊತೆಯೂ ನಟಿಸಿದ್ದಾರಂತೆ.

    ರಾಧಿಕಾ ಅವರ ಜೊತೆ ಅವಿನಾಶ್ ನರಸಿಂಹ ರಾಜು, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ, ಸುಶಾಂತ್ ಪೂಜಾರಿ ಸೇರಿದಂತೆ ಕಲಾವಿದರ ಸೈನ್ಯವೇ ಇದೆ. ವಿಲೋಕ್ ಶೆಟ್ಟಿ ನಿರ್ದೇಶನದ ಟ್ರೇಲರ್ ಕುತೂಹಲ ಹುಟ್ಟಿಸಿದೆ. 

  • ಮಧುಬಾಲಾ ಮರೆತ ದತ್ತಣ್ಣ ಈಗ ರಾಧಿಕಾ ಅಭಿಮಾನಿ

    dattanna praises radhika narayan

    ದತ್ತಣ್ಣ ಬಾಲಿವುಡ್ ನಟಿ ಮಧುಬಾಲಾ ಅವರ ಕಟ್ಟರ್ ಫ್ಯಾನ್. ಕಟ್ಟರ್ ಅಂದ್ರೆ ಕಟ್ಟರ್ ಅಭಿಮಾನಿ. ಅವರ ಕಾಲದ ಅತಿಲೋಕ ಸುಂದರಿ ಮಧುಬಾಲಾ. ತನ್ನ ನಗುವಿನಿಂದಲೇ ನೋಡುಗರ ಹೃದಯದಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದ ಸರಳ ಸುಂದರಿ. ಈಗ ದತ್ತಣ್ಣ ಆ ಮಧುಬಾಲಾರನ್ನೇ ಬಿಟ್ಟು ರಾಧಿಕಾ ನಾರಾಯಣ್ ಅಭಿಮಾನಿಯಾಗಿಬಿಟ್ಟಿದ್ದಾರೆ. ಅದೆಲ್ಲದಕ್ಕೂ ಕಾರಣವಾಗಿರೋದು ಮುಂದಿನ ನಿಲ್ದಾಣ.

    ಮುಂದಿನ ನಿಲ್ದಾಣದಲ್ಲಿ ರಾಧಿಕಾ ಮೀರಾ ಅನ್ನೋ ಮಾಡರ್ನ್ ಹುಡುಗಿಯ ಪಾತ್ರ ಮಾಡಿದ್ದಾರೆ. ಸೀರಿಯಸ್ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದ ರಾಧಿಕಾ, ಇಲ್ಲಿ ಬೆರಗು ಹುಟ್ಟಿಸುತ್ತಾರೆ. ಮತ್ತೆ ಮತ್ತೆ ನೋಡಬೇಕು.. ತಿರ್ ತಿರುಗಿ ನೋಡಬೇಕು ಎಂಬ ಆಸೆ ಹುಟ್ಟಿಸುತ್ತಾರೆ. ಹೀಗಾಗಿಯೇ ದತ್ತಣ್ಣ ಈಗ ರಾಧಿಕಾ ಫ್ಯಾನ್.

    ಸುಮ್ನೆ ಒಂದ್ಸಲ ಟೀಂ ಜೊತೆ ಸಿನಿಮಾ ನೋಡೋಣ ಎಂದುಕೊAಡು ನೋಡಿದೆ. ನೋಡ್ತಾ ನೋಡ್ತಾ ನನ್ನ ಜೊತೆ ನಟಿಸಿದ್ದ ರಾಧಿಕಾ ಇವರೇನಾ ಎಂದು ಎನಿಸಿಬಿಟ್ಟಿತು. ಅಷ್ಟು ಚೆಂದವಾಗಿ ಕಾಣ್ತಾರೆ. ಅದ್ಭುತವಾಗಿ ನಟಿಸಿದ್ದಾರೆ ಎನ್ನುವ ದತ್ತಣ್ಣ, ನಾನೀಗ ಮಧುಬಾಲಾರನ್ನು ಬಿಟ್ಟು ರಾಧಿಕಾ ಅಭಿಮಾನಿಯಾಗಿದ್ದೇನೆ ಎಂದಿದ್ದಾರೆ. ವಿನಯ್ ಭಾರದ್ವಾಜ್ ನಿರ್ದೇಶನದ ಮುಂದಿನ ನಿಲ್ದಾಣ ಇದೇ ವಾರ ರಿಲೀಸ್ ಆಗುತ್ತಿದೆ.

  • ಮುಂದಿನ ನಿಲ್ದಾಣ.. ಏನಿದು ರೋಮಾಂಚನ..?

    munidna nildana movie shows increased

    ಇದೇ ವಾರ ರಿಲೀಸ್ ಆದ ಮುಂದಿನ ನಿಲ್ದಾಣ ಚಿತ್ರ ವ್ಹಾವ್ ಎನ್ನಿಸುವಂತಾ ಸಾಧನೆ ಮಾಡಿಬಿಟ್ಟಿದೆ. ಕ್ಲಾಸ್ ವರ್ಗದ ಪ್ರೇಕ್ಷಕರನ್ನೇ ಟಾರ್ಗೆಟ್ ಆಗಿಟ್ಟುಕೊಂಡು ರೂಪಿಸಿರುವ ಸಿನಿಮಾ, ರೋಮಾಂಚನವನ್ನೇ ಸೃಷ್ಟಿಸಿಬಿಟ್ಟಿದೆ. ಹೇಗೆಂದರೆ ರಿಲೀಸ್ ಆದ ಎರಡನೇ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದೆ.

    ಬೆಂಗಳೂರಿನ ಊರ್ವಶಿಯಲ್ಲಿ ಸಂಜೆ 6 ಗಂಟೆಗೆ ಎಕ್ಸಾ÷್ಟç ಶೋ ಕೊಟ್ಟಿದ್ದರೆ, ಮಲ್ಟಿಪ್ಲೆಕ್ಸುಗಳಲ್ಲಿ ಶೋ ಸಂಖ್ಯೆ ಹೆಚ್ಚಾಗಿವೆ.

    ಇಟಿಎದಲ್ಲಿ 2, ಊರ್ವಶಿಯಲ್ಲೂ 2, ಆರ್‌ಎಂಝಡ್ ಐನಾಕ್ಸ್ 3, ಮಂಗಳೂರು ಬಿಗ್ ಸಿನಿಮಾ 2, ಮೈಸೂರು ವಿಷನ್ 2 ಶೋ ಹೆಚ್ಚಿಸಿವೆ. ಮುಂದಿನ ನಿಲ್ದಾಣ ತಮ್ಮ ಕಂಬ್ಯಾಕ್ ಚಿತ್ರ ಎಂದು ಹೇಳಿಕೊಂಡಿದ್ದರು ರಾಧಿಕಾ ನಾರಾಯಣ್.

    ರಾಧಿಕಾ ನಾರಾಯಣ್, ಹೊಸ ಗ್ಲಾಮರ್ ಲುಕ್‌ನಲ್ಲಿ ಮಿಂಚು ಹರಿಸಿದ್ದರೆ, ಪ್ರವೀಣ್ ತೇಜ್, ಅನನ್ಯ ಮೋಡಿ ಮಾಡಿದ್ದರು. ಮೊದಲ ಚಿತ್ರದಲ್ಲೇ ವಿನಯ್ ಭಾರದ್ವಾಜ್ ತಾವೊಬ್ಬ ಪ್ರತಿಭಾವಂತ ನಿರ್ದೇಶಕ ಎಂದು ನಿರೂಪಿಸಿದ್ದರು. ಈಗ ಪ್ರೇಕ್ಷಕರ ಜೈಕಾರವೂ ಸಿಕ್ಕಿದೆ.

  • ಮುಂದಿನ ನಿಲ್ದಾಣದಲ್ಲಿ ವಿಶೇಷಗಳ ಮೆರವಣಿಗೆ

    mundina nildana is a journey of 3 youths

    ಮುಂದಿನ ನಿಲ್ದಾಣ ಇದೇ ವಾರ ತೆರೆಗೆ ಬರುತ್ತಿರುವ ಸಿನಿಮಾ. ರಾಧಿಕಾ ಚೇತನ್, ತಮ್ಮ ಹೆಸರನ್ನು ರಾಧಿಕಾ ನಾರಾಯಣ್ ಎಂದು ಬದಲಿಸಿಕೊಂಡ ಮೇಲೆ ಬರುತ್ತಿರುವ ಮೊದಲ ಚಿತ್ರವೂ ಹೌದು. ಚಿತ್ರದಲ್ಲಿ ರಾಧಿಕಾ ನಾರಾಯಣ್ ಅವರ ಹೆಸರು ಮೀರಾ ಶರ್ಮ.

    ಗ್ಲಾಮರಸ್ ಲುಕ್ಕಿನ ರಾಧಿಕಾ ಚಿತ್ರದಲ್ಲಿ ಇದುವರೆಗೂ ಕಾಣದೇ ಇರುವ ಗ್ಲಾಮರ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದೇ ವಿಶೇಷ.

    ಇಡೀ ಚಿತ್ರದಲ್ಲಿ ವಿಶೇಷತೆಗಳ ಮೆರವಣಿಗೆಯೇ ಇದೆ. ನಿರ್ದೇಶಕ ವಿನಯ್ ಭಾರದ್ವಾಜ್, ಬ್ಯಾಂಕಿAಗ್ ಕ್ಷೇತ್ರದಲ್ಲಿದ್ದವರು. ಈಗ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪಾರ್ಥ, ಮೀರಾ ಮತ್ತು ಅಹನಾ.. ಈ ಮೂರು ಪಾತ್ರಗಳು ಹುಡುಕಿಕೊಳ್ಳುವ ಮುಂದಿನ ನಿಲ್ದಾಣವೇ ಮುಂದಿನ ನಿಲ್ದಾಣದ ಕಥೆ.

    ನಿರ್ದೇಶಕ ವಿನಯ್ ಭಾರದ್ವಾಜ್ ಅವರಿಗೆ ರಾಧಿಕಾ ನಾರಾಯಣ್, ಪ್ರವೀಣ್ ತೇಜ್, ಅನನ್ಯಾ ಕಶ್ಯಪ್ ಜೊತೆಯಾಗಿದ್ದಾರೆ.

  • ಮೂವರ ಲವ್ ಸ್ಟೋರಿ.. ಮೂರು ಜರ್ನಿ.. ಮುಂದಿನ ನಿಲ್ದಾಣದ ಸ್ಪೆಷಲ್

    mundina nildana is a journey of 3 different people

    ಮುಂದಿನ ನಿಲ್ದಾಣ, ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಮತ್ತು ಅನನ್ಯ ಕಶ್ಯಪ್ ಅಭಿನಯದ ಸಿನಿಮಾ. ಸಿನಿಮಾದಲ್ಲಿ ಮೂರು ಪ್ರಧಾನ ಪಾತ್ರಗಳಿವೆ. ಪಾರ್ಥ.. ಮೀರಾ.. ಅಹನಾ.. ಮೂವರೂ ಲೈಫ್ ನೋಡುವ ರೀತಿಯೇ ಬೇರೆ. ಹೀಗೆ ಮೂರು ದೃಷ್ಟಿಕೋನದವರ ಲೈಫ್ ಜರ್ನಿಯೇ ಮುಂದಿನ ನಿಲ್ದಾಣ.

    ಅಲ್ಲಿ ಪ್ರೀತಿ, ಆಕರ್ಷಣೆ, ತುಂಟಾಟ, ಗಾಂಭೀರ್ಯ, ನವಿರಾದ ಪೋಲಿತನ, ಕಾಮ ಎಲ್ಲವೂ ಇದೆ. ಅದೆಲ್ಲದರ ನಡುವೆಯೂ ಅವರು ತಲುಪುವ ಮುಂದಿನ ನಿಲ್ದಾಣ ಯಾವುದು ಎನ್ನುವುದೇ ಚಿತ್ರದ ಕುತೂಹಲ.

    ವಿನಯ್ ಭಾರದ್ವಾಜ್ ನಿರ್ದೇಶನದ ಚಿತ್ರಕ್ಕೆ ಎ.ಆರ್.ರೆಹಮಾನ್ ಅವರ ಶಿಷ್ಯ ಜಿಮ್ ಸತ್ಯ ಅವರ ಸಂಗೀತವಿದೆ. ನವೆಂಬರ್ ಕೊನೆಯ ವಾರ ಚಿತ್ರ ರಿಲೀಸ್ ಆಗುತ್ತಿದೆ.

  • ಮೊದಲು ಡ್ರಗ್ ಅಡಿಕ್ಷನ್.. ಆಮೇಲೆ ಮುಂದಿನ ನಿಲ್ದಾಣ ಅಡಿಷನ್..!

    radhika narayan Image from Mundina Nildana

    ಮುಂದಿನ ನಿಲ್ದಾಣ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ತುಂಬಾ ದಿನಗಳೇನೂ ಇಲ್ಲ. ಇಡೀ ಟ್ರೇಲರಿನಲ್ಲಿ ಎದ್ದು ಕಾಣ್ತಿರೋದು ರಾಧಿಕಾ ನಾರಾಯಣ್. ರಂಗಿತರAಗದ ಚೆಲುವೆ ಇವರೇನಾ ಎನ್ನುವಷ್ಟರ ಮಟ್ಟಿಗೆ ಬೆರಗು ಹುಟ್ಟಿಸಿದ್ದಾರೆ ರಾಧಿಕಾ. ಪಕ್ಕಾ ಸ್ಟೆöÊಲಿಷ್ ಲುಕ್. ಮಾಡರ್ನ್ ಮೀರಾ.

    ನಿರ್ದೇಶಕ ವಿನಯ್ ಭಾರದ್ವಾಜ್ ಇದಕ್ಕೂ ಮೊದಲು ಒಂದು ಆಲ್ಬಂ ಮಾಡಿದ್ದರು. ಅದರಲ್ಲಿ ನನಗೆ ಡ್ರಗ್ ಅಡಿಕ್ಟ್ ರೋಲ್ ಕೊಟ್ಟಿದ್ದರು. ಅದು ಒಂದು ರೀತಿಯಲ್ಲಿ ನನ್ನ ಅಡಿಷನ್ ಆಗಿತ್ತು ಎಂದಿದ್ದಾರೆ ರಾಧಿಕಾ.

    ಚಿತ್ರಕ್ಕಾಗಿ ಯೋಗ ಮಾಡಿ, ದಿನಕ್ಕೆ ೭೦-೮೦ ಸೂರ್ಯ ನಮಸ್ಕಾರ ಮಾಡಿದ್ದ ರಾಧಿಕಾ, ಪಾತ್ರಕ್ಕಾಗಿ ಏಳೆಂಟು ಕೆಜಿ ತೂಕ ಇಳಿಸಿಕೊಂಡರAತೆ. 

  • ರಾಧಿಕಾ ಚೇತನ್ ಇನ್ಮುಂದೆ ರಾಧಿಕಾ ನಾರಾಯಣ್

    radhika chethan changed her name to radhika narayan

    ರಂಗಿತರಂಗ ಚಿತ್ರದಿಂದ ಕನ್ನಡ ಚಿತ್ರರಸಿಕರಿಗೆ ಪರಿಚಿತವಾದ ಹೆಸರು ರಾಧಿಕಾ ಚೇತನ್. ಮೊದಲ ಚಿತ್ರವೇ ಸೂಪರ್ ಡ್ಯೂಪರ್ ಹಿಟ್. ಅಲ್ಲದೆ, ಕನ್ನಡ ಚಿತ್ರರಂಗದ ಕೆಲವೇ ಮೆಥಡ್ ಆ್ಯಕ್ಟರ್‍ಗಳಲ್ಲಿ ರಾಧಿಕಾ ಚೇತನ್ ಕೂಡಾ ಒಬ್ಬರು. ನಟಿಯಷ್ಟೇ ಅಲ್ಲದೆ, ಕಥಕ್ ಡ್ಯಾನ್ಸರ್, ಎಂಜಿನಿಯರ್, ರಂಗಭೂಮಿ ಕಲಾವಿದೆ, ಕಿರುಚಿತ್ರಗಳ ನಿರ್ಮಾಣ, ಯೋಗ ಗುರು... ಹೀಗೆ ಹಲವು ರೀತಿಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಚೇತನ್ ಈಗ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

    ರಾಧಿಕಾ ಚೇತನ್ ಇನ್ನು ಮುಂದೆ ರಾಧಿಕಾ ನಾರಾಯಣ್ ಆಗಿ ಕಂಟಿನ್ಯೂ ಆಗಲಿದ್ದಾರೆ. ಹೆಸರು ಬದಲಾವಣೆಗೆ ಏನು ಕಾರಣ..? ಇದಕ್ಕೆ ಉತ್ತರ ಸಿಕ್ಕಿಲ್ಲ. ರಂಗಿತರಂಗ, ಯು ಟರ್ನ್, ಕಾಫಿ ತೋಟ.. ಹೀಗೆ ವಿಭಿನ್ನ ಚಿತ್ರಗಳ ಮೂಲಕವೇ ಗಮನ ಸೆಳೆದಿರುವ ರಾಧಿಕಾ ನಾರಾಯಣ್ ಕೈಲಿ ಈಗ ಮುಂದಿನ ನಿಲ್ದಾಣ, ಚೇಸ್, ಶಿವಾಜಿ ಸುರತ್ಕಲ್ ಚಿತ್ರಗಳಿವೆ.

  • ಶಿವಾಜಿ ಸುರತ್ಕಲ್ -2 ಆರಂಭ

    ಶಿವಾಜಿ ಸುರತ್ಕಲ್ -2 ಆರಂಭ

    ಲಾಕ್ ಡೌನ್ ಶುರುವಾಗುವ ಮುನ್ನ ರಿಲೀಸ್ ಆಗಿ ಹಿಟ್ ಆಗಿದ್ದ ಚಿತ್ರ ಶಿವಾಜಿ ಸುರತ್ಕಲ್. ರಮೇಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರವೀಗ 2ಭಾಗದಲ್ಲಿ ತೆರೆಗೆ ಬರುತ್ತಿದೆ. ಶಿವಾಜಿ ಸುರತ್ಕಲ್ 2 ಚಿತ್ರ ಶುರುವಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರೋ ಬಂಡೆ ಗಣೇಶ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

    ರಮೇಶ್, ರಾಧಿಕಾ ನಾರಾಯಣ್ ಜೊತೆಗೆ ಈ ಬಾರಿ ಮೇಘನಾ ಗಾಂವ್ಕರ್, ವಿನಾಯಕ್ ಜೋಷಿ, ರಾಕೇಶ್ ಸೇರ್ಪಡೆಗೊಂಡಿದ್ದಾರೆ. ಎಲ್ಲರದ್ದೂ ಪೊಲೀಸ್ ಪಾತ್ರಗಳೇ ಎನ್ನುವುದು ವಿಶೇಷ. ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಚಿತ್ರೀಕರಣ ಡಿಸೆಂಬರ್‍ನಲ್ಲಿ ಶುರುವಾಗಲಿದೆ.