ನಿರ್ದೇಶಕ ಗುರುದೇಶಪಾಂಡೆಯವರ ಸಿನೆಮಾ ಅಧ್ಯಯನ ಸಂಸ್ಥೆ G ACADEMY ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ರೋರಿಂಗ್ ಸ್ಟಾರ್ ಶ್ರೀಮುರಳಿ, ಐಪಿಎಸ್ ಅಧಿಕಾರಿ ಸುನಿಲ್ ಕುಮಾರ್ ಹಾಗು ನಟಿ ತಾರಾ ಅನುರಾಧ ಅವರು ಅಕಾಡೆಮಿಗೆ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ, ವಿ ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್, ಲೋಕಸಭಾ ಸದಸ್ಯರಾದ ಶಿವರಾಮೇಗೌಡರು, ಸಂಗೀತ ನಿರ್ದೇಶಕ ಎಮಿಲ್ , KFCC ಅಧ್ಯಕ್ಷರಾದ ಡಿ. ಅರ್ ಜಯರಾಜ್ ಮುಂತಾದ ಗಣ್ಯರುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
"ಸಿನಿಮಾದಲ್ಲಿ ಏನಾದರೂ ಸಾಧಿಸಬೆಂದವರಿಗೆ ಸರಿಯಾದ ಮಾರ್ಗದರ್ಶನ , ನುರಿತ ತರಬೇತಿ, ಸಿನಿಮಾ ಕುರಿತಾದ ತಂತ್ರಗಾರಿಕೆ ನೀಡಲು ಅಕಾಡೆಮಿ ಸದಾ ಸಿದ್ದವಾಗಿರುತ್ತದೆ" ಎಂದು ಅಕಾಡೆಮಿಯ ಸಂಸ್ಥಾಪಕರಾದ ಗುರುದೇಶಪಾಂಡೆಯವರು ಹೇಳಿದರು.