` krishna dp, - chitraloka.com | Kannada Movie News, Reviews | Image

krishna dp,

  • ಪೈರಸಿಯಿಂದ ಪೈಲ್ವಾನ್ ಕಳೆದುಕೊಂಡಿದ್ದು 5 ಕೋಟಿಗೂ ಹೆಚ್ಚು..!

    pailwan looses more than 5 crores

    ಪೈಲ್ವಾನ್ ಚಿತ್ರ 100 ಕೋಟಿ ಕ್ಲಬ್ ಸೇರಿತಾ..? ಅಷ್ಟೊಂದು ಭರ್ಜರಿ ಪ್ರದರ್ಶನ ಕಾಣುತ್ತಿರೋ ಚಿತ್ರ ಈವರೆಗೆ ಗಳಿಸಿರೋ ಹಣ ಎಷ್ಟು..? ಹೀಗೆ ಪ್ರೇಕ್ಷಕರದ್ದು ಹತ್ತಾರು ಪ್ರಶ್ನೆ. ಪೈಲ್ವಾನ್ ನಿರ್ಮಾಪಕರು ಸೇಫ್ ಹಂತ ದಾಟಿ, ಲಾಭ ನೋಡುತ್ತಿದ್ದಾರೆ. ಒಂದು ಮೂಲದ ಪ್ರಕಾರ ಚಿತ್ರದ ಗಳಿಕೆ 85 ಕೋಟಿ ದಾಟಿದೆ. ಆದರೆ ಅಧಿಕೃತವಾಗಿ ಹೇಳಿಕೊಳ್ಳುತ್ತಿಲ್ಲ. ಇದು ಒಂದು ವಿಷಯವಾದರೆ, ಪೈರಸಿಯಿಂದಾಗಿ ಚಿತ್ರತಂಡ ಕಳೆದುಕೊಂಡಿರೋದು 5 ಕೋಟಿಗೂ ಹೆಚ್ಚು ಎನ್ನುವ ಸುದ್ದಿ ಬಹಿರಂಗವಾಗಿದೆ.

    ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನೂ ಹಲವು ಕ್ರಿಮಿನಲ್‍ಗಳ ಹುಡುಕಾಟ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡಿದರೂ ಗೊತ್ತಾಗಲ್ಲ ಎಂದುಕೊಂಡಿದ್ದವರನ್ನು ಸುಮ್ಮನೆ ಬಿಡಲ್ಲ ಎಂದು ಸುದೀಪ್ ಗುಡುಗಿರುವುದಷ್ಟೇ ಅಲ್ಲ, ಸೀರಿಯಸ್ಸಾಗಿ ಹೆಜ್ಜೆಯಿಟ್ಟಿದ್ದಾರೆ.

    ಪ್ರತಿದಿನವೂ 100ಕ್ಕೂ ಹೆಚ್ಚು ಪೈರಟ್ ಸಿನಿಮಾ ಲಿಂಕ್ ಡಿಲೀಟ್ ಮಾಡುತ್ತಿರುವ ಚಿತ್ರತಂಡ, ಪೈರಸಿಯಿಂದಾಗಿಯೇ ಕಳೆದುಕೊಂಡಿರುವ ಮೊತ್ತ 5 ಕೋಟಿಗೂ ಹೆಚ್ಚು. ಇದರಿಂದಾಗಿ ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಿಸಿದ ನಿರ್ಮಾಪಕರಿಗೆ ಬರಬೇಕಾದ ಹಣ, ಎಲ್ಲೋ ಕತ್ತಲಲ್ಲಿ ಕುಳಿತು ಕದ್ದು ಸಿನಿಮಾ ಮಾಡಿದವನಿಗೆ ಹೋಗುತ್ತಿದೆ. ಇದುವರೆಗೆ ಹೆಚ್ಚೂ ಕಡಿಮೆ 1 ಸಾವಿರ ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery