ಸ್ಯಾಂಡಲ್ವುಡ್ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಈಗ ಕಾಲೇಜು ಸ್ಟೂಡೆಂಟ್ ಆಗಿ ಬರಲು ರೆಡಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ರಚಿತಾ. ಈ ಚಿತ್ರದಲ್ಲಿ ಅವರದ್ದು ಕಾಲೇಜು ಸ್ಟೂಡೆಂಟ್ ಪಾತ್ರ.
ಯೋಗರಾಜ್ ಭಟ್-ಶಶಾಂಕ್ ನಿರ್ಮಾಣದ ಸೀರೆ, ನಾಗೇಂದ್ರ ಪ್ರಸಾದ್ ನಿರ್ದೇಶನದ ಪಂತ್ರ, ರಮೇಶ್ ಅರವಿಂದ್ ನಿರ್ದೇಶನದ 100, ಜೋಗಿ ಪ್ರೇಮ್ ಅವರ ಏಕ್ ಲವ್ ಯಾ, ಏಪ್ರಿಲ್, ಸಂಜು ಅಲಿಯಾಸ್ ಸಂಜು, ದಾಳಿ.. ಹೀಗೆ ಹಲವು ಚಿತ್ರಗಳ ನಡುವೆಯೇ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ರಚಿತಾ ರಾಮ್.
ಅಂದಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ತೆರೆ ಕಾಣುತ್ತಿದೆ. ಇದು ಈ ವರ್ಷ ರಚಿತಾ ರಾಮ್ ನಟಿಸಿರುವ 7ನೇ ಸಿನಿಮಾ. ಈ ವರ್ಷ ಸೀತಾರಾಮ ಕಲ್ಯಾಣ, ಐ ಲವ್ ಯೂ, ರುಸ್ತುಂ, ನಟಸಾರ್ವಭೌಮ ಚಿತ್ರಗಳಲ್ಲಿ ನಟಿಸಿರುವ ರಚಿತಾ ರಾಮ್, ಅಮರ್ ಹಾಗೂ ಭರಾಟೆಯಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಎಲ್ಲವೂ ಸೇರಿದರೆ ಮುಂದಿನ ವಾರ ಬರುತ್ತಿರುವ ಆಯುಷ್ಮಾನ್ ಭವ 7ನೇ ಸಿನಿಮಾ.
ಈಗ ಓಕೆ ಎಂದಿರುವ ವೀರಂ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಹೀರೋ. ಆ ಚಿತ್ರದಲ್ಲಿ ಪ್ರಜ್ವಲ್ ವಿಷ್ಣು ಅಭಿಮಾನಿಯಾಗಿ ಕಾಣಿಸಿಕೊಂಡಿದ್ಧಾರೆ ಖಾದರ್ ಕುಮಾರ್ ನಿರ್ದೇಶನದ ಚಿತ್ರ ವಿಷ್ಣು ಹುಟ್ಟುಹಬ್ಬದಂದೇ ಲಾಂಚ್ ಆಗಿದೆ.