ಪೈಲ್ವಾನ್ ಕೃಷ್ಣ ಅಲಿಯಾಸ್ ಕಿಚ್ಚನ ಅಬ್ಬರ, ಕೃಷ್ಣ ನಿರ್ದೇಶನದ ಪೈಲ್ವಾನ್, ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರ ಮುಖದಲ್ಲಿ ನಗು ಅರಳಿಸಿದೆ. ಒಂದು ಲೆಕ್ಕಾಚಾರದ ಪ್ರಕಾರ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ನಿರ್ಮಾಪಕರು ಸೇಫ್ ಆಗಿದ್ದರು. ಈಗ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಪೈಲ್ವಾನ್ ಮೊದಲ ದಿನ 10 ಕೋಟಿ ಎಂಬ ಸುದ್ದಿಯಿತ್ತಲ್ಲ, ಅದು ಕನ್ನಡದ್ದು ಮಾತ್ರ. ಎಲ್ಲ 5 ಭಾಷೆಗಳ ಕಲೆಕ್ಷನ್ ಲೆಕ್ಕ ತೆಗೆದುಕೊಂಡರೆ ಮೊದಲ ದಿನ ಕಲೆಕ್ಷನ್ 18 ಕೋಟಿ ದಾಟಿದೆ.
ಇನ್ನು 2ನೇ ದಿನದ ಕಲೆಕ್ಷನ್ 15 ಕೋಟಿ. ಕನ್ನಡವೊಂದರ ಕಲೆಕ್ಷನ್ 9 ಕೋಟಿ. ಈ ಎರಡೂ ಕಲೆಕ್ಷನ್ ಆಗಿರೋದು ಬ್ಯುಸಿ ವೀಕ್ ಡೇಗಳಲ್ಲಿ ಎನ್ನುವುದು ವಿಶೇಷ.
ಚಿತ್ರಕ್ಕೆ ಸಿಕ್ಕಿರುವ ಅದ್ಭುತ ರೆಸ್ಪಾನ್ಸ್ ವೀಕೆಂಡ್ ರಜಾದಿನಗಳಲ್ಲಿ ಕಲೆಕ್ಷನ್‍ನ್ನು ಹೆಚ್ಚಿಸುವ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಅಡ್ವಾನ್ಸ್ ಬುಕ್ಕಿಂಗ್ ಹೌಸ್ ಫುಲ್ ಆಗಿದ್ದು, ಹೊಸ ದಾಖಲೆ ಬರೆಯಲು ಹೊರಟಿದ್ದಾನೆ ಪೈಲ್ವಾನ್.