ಕನ್ನಡದಲ್ಲಿ ಯಮ ಎಂದರೆ ತಕ್ಷಣ ಕಣ್ಮುಂದೆ ಬರೋ ಹೆಸರು ದೊಡ್ಡಣ್ಣ. ಯಮಹೋ ಯಮಃ ಎಂಬ ದೊಡ್ಡಣ್ಣ ಸ್ಟೈಲ್ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಸದಾ ಹಸಿರು. ಈಗ ಅವರ ಸ್ಟೈಲಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಚಿಕ್ಕಣ್ಣ. ಸಾಕ್ಷಾತ್ ಯಮಧರ್ಮನಾಗಿದ್ದಾರೆ.
ಬಿಲ್‍ಗೇಟ್ಸ್ ಚಿತ್ರದಲ್ಲಿ ಚಿಕ್ಕಣ್ಣ ಯಮಧರ್ಮನ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಶ್ರೀನಿವಾಸ್ ನಿರ್ದೇಶನದ ಬಿಲ್‍ಗೇಟ್ಸ್ ಚಿತ್ರದಲ್ಲಿ ನರಕಾಧಿಪತಿಯಾಗಿ ನಟಿಸಿರುವ ಚಿಕ್ಕಣ್ಣ, ಟೀಸರ್‍ನಲ್ಲಿ ಹೇಳಿರೋದು ಒಂದೇ ಒಂದು ಡೈಲಾಗ್. ಚಿತ್ರಗುಪ್ತರೇ ಸಭೆ ಪ್ರಾರಂಭವಾಗಲಿ ಎಂಬ ಪುಟ್ಟ ತುಣುಕು ಬಿಟ್ಟಿದೆ ಬಿಲ್‍ಗೇಟ್ಸ್ ಟೀಂ.
ಚಿಕ್ಕಣ್ಣ ಜೊತೆ ಶಿಶಿರ, ರೋಜಾ, ಅಕ್ಷತಾ ರೆಡ್ಡಿ ನಟಿಸಿರುವ ಚಿತ್ರಕ್ಕೆ ವಸಂತ್ ಕುಮಾರ್ ಮತ್ತು ನಿರ್ದೇಶಕ ಶ್ರೀನಿವಾಸ್ ಅವರೇ ನಿರ್ಮಾಪಕರು. ಹೊಸ ಚಿತ್ರಕ್ಕೆ ಹೊಸ ಟೀಸರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.