` kabza, - chitraloka.com | Kannada Movie News, Reviews | Image

kabza,

 • ಭಾರ್ಗವ್ ಭಕ್ಷಿ ಸುದೀಪ್

  ಭಾರ್ಗವ್ ಭಕ್ಷಿ ಸುದೀಪ್

  ಪಾತ್ರ ಚೆನ್ನಾಗಿದೆ, ಅಭಿನಯಕ್ಕೆ ಸ್ಕೋಪ್ ಇದೆ, ಎಕ್ಸ್‍ಪೆರಿಮೆಂಟ್ ಮಾಡೋಕೆ ಅವಕಾಶವಿದೆ.. ಎನಿಸಿದರೆ ಹೀರೋನಾ..? ವಿಲನ್ನಾ..? ಪೋಷಕ ಪಾತ್ರನಾ ಅನ್ನೋದನ್ನೂ ನೋಡದೆ ಯೆಸ್ ಎನ್ನುವ ಕಿಚ್ಚ ಸುದೀಪ್, ಈ ಬಾರಿ ಭಾರ್ಗವ್ ಭಕ್ಷಿ ಆಗುತ್ತಿದ್ದಾರೆ. ಅದು ಕಬ್ಜ ಚಿತ್ರದಲ್ಲಿ. ಈ ಚಿತ್ರಕ್ಕೆ ಹೀರೋ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು. ಒಟ್ಟು 7 ಭಾಷೆಗಳಲ್ಲಿ ಬರುತ್ತಿರುವ ಸಿನಿಮಾಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

  ಸುದೀಪ್ ಪಾತ್ರ ಏನು..? ಹೀರೋನಾ..? ವಿಲನ್ನಾ..? ಹೇಗಿರುತ್ತೆ ಪಾತ್ರ ಅನ್ನೋದನ್ನು ತೆರೆಯ ಮೇಲೇ ನೋಡಿ ಎಂದಿದ್ದಾರೆ ಚಂದ್ರು.

  ಆರ್.ಚಂದ್ರು ಅವರ ಕಥೆ, ತಮ್ಮ ಪಾತ್ರದ ನರೇಷನ್ ಹಾಗೂ ಚಂದ್ರು ಅವರ ಕಬ್ಜ ಮೇಕಿಂಗ್ ನೋಡಿಯೇ ಪಾತ್ರಕ್ಕೆ ಓಕೆ ಎಂದಿದ್ದಾರಂತೆ ಸುದೀಪ್.

 • ಮಿನರ್ವ ಮಿಲ್ ಈಗ ಕಂಪ್ಲೀಟ್ ಕಬ್ಜಾ

  ಮಿನರ್ವ ಮಿಲ್ ಈಗ ಕಂಪ್ಲೀಟ್ ಕಬ್ಜಾ

  ಅಲ್ಲಿ ನೋಡಿದರೆ ಮುಂಬೈ ಗಲ್ಲಿ.. ಇಲ್ಲಿ ನೋಡಿದರೆ ಅದ್ಯಾವುದೋ ಬೀದಿ.. ಅತ್ತ ಕಡೆ ಜೈಲು.. ಇತ್ತ ಕಡೆ ಸೆಲ್ಲು.. ಮಧ್ಯದಲ್ಲೊಂದು ಮೈದಾನ.. ಅಲ್ಲೆಲ್ಲೋ ಒಂದು ದೇವಸ್ಥಾನ.. 80ರ ದಶಕದ ಡಿಸೈನ್ ಡಿಸೈನ್ ಕಾರುಗಳು... ಬಿಡುವೇ ಇಲ್ಲದೆ ದುಡಿಯುತ್ತಿರೋ 300ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರು...

  ಇದೆಲ್ಲವೂ ಕಾಣ್ತಿರೋದು ಮಿನರ್ವ ಮಿಲ್‍ನಲ್ಲಿ. ಉಪೇಂದ್ರ, ಸುದೀಪ್ ಒಟ್ಟಿಗೇ ನಟಿಸುತ್ತಿರುವ ಈ ಚಿತ್ರಕ್ಕೀಗ ಆರ್.ಚಂದ್ರು 40ಕ್ಕೂ ಹೆಚ್ಚು ಸೆಟ್‍ಗಳನ್ನ ಹಾಕಿಸ್ತಿದ್ದಾರೆ.

  ಕೆಜಿಎಫ್ ಸಿನಿಮಾಗೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ್ದ ಶಿವಕುಮಾರ್, ಇಲ್ಲಿ ಅದಕ್ಕಿಂತ ಭಿನ್ನವಾಗಿ ಕಲರ್ ಫುಲ್ ಸೆಟ್ ಹಾಕಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾಗೆ ಇಷ್ಟು ದೊಡ್ಡ ಬಜೆಟ್, ಅದ್ಧೂರಿತನ ಬೇಕೇ ಬೇಕು. ಇಲ್ಲಿಯೇ ಸುಮಾರು 80 ದಿನ ಶೂಟಿಂಗ್ ನಡೆಯುತ್ತೆ. ಒಟ್ಟಾರೆ 40 ಸೆಟ್ ಹಾಕಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು.

 • ಮುಂಬೈನಲ್ಲಿ ಮತ್ತೊಮ್ಮೆ ಸುದೀಪ್ ಕನ್ನಡ ಡಿಂಡಿಮ

  ಮುಂಬೈನಲ್ಲಿ ಮತ್ತೊಮ್ಮೆ ಸುದೀಪ್ ಕನ್ನಡ ಡಿಂಡಿಮ

  ಕಿಚ್ಚ ಸುದೀಪ್ ಕನ್ನಡದ ಹೆಮ್ಮೆಯ ನಟ. ಎಲ್ಲಿಯೇ ಹೋದರು ಕನ್ನಡತನವನ್ನಂತೂ ಬಿಡುವುದಿಲ್ಲ. ಇತ್ತೀಚೆಗೆ ಕನ್ನಡದ ವಿಷಯಕ್ಕೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರಿಗೆ ಕನ್ನಡದ ಪಾಠ ಮಾಡಿದ್ದ ಸುದೀಪ್, ಹಿಂದಿಯ ಟಿವಿ ಶೋವೊಂದರಲ್ಲಿ ಕನ್ನಡ್ ಎಂದ ನಿರೂಪಕಿಗೆ ಕನ್ನಡ್ ಅಲ್ಲ, ಅದು ಕನ್ನಡ ಎಂದು ತಿದ್ದಿ ಹೇಳಿದ್ದರು. ಇದೀಗ ಮುಂಬೈನಲ್ಲಿ ಮತ್ತೊಮ್ಮೆ ಕನ್ನಡ ಡಿಂಡಿಮ ಮೊಳಗಿಸಿದ್ದಾರೆ. ಕಬ್ಜ ಪ್ರೀ ರಿಲೀಸ್ ಈವೆಂಟ್‍ನಲ್ಲಿ.

  ಉಪೇಂದ್ರ, ಸುದೀಪ್, ಶಿವಣ್ಣ ಅಭಿನಯದ ಕಬ್ಜ ಚಿತ್ರದ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್ ಚಂದ್ರು ಸುದೀಪ್, ಉಪೇಂದ್ರ, ಶಿವಣ್ಣ ಅವರ ಅಭಿಮಾನಿ ನಾನು. ಅವರೊಟ್ಟಿಗೆ ಒಂದು ಫೋಟೊ ತೆಗೆದುಕೊಂಡರೆ ಸಾಕು ಎಂದುಕೊಂಡಿದ್ದವನು ನಾನು ಆದರೆ ಅವರು ಕೊಟ್ಟಂತಹಾ ಪ್ರೀತಿ, ನನ್ನ ಮೇಲಿಟ್ಟ ವಿಶ್ವಾಸದಿಂದಲೇ ಕಬ್ಜ ಸಿನಿಮಾ ಆಗಿದೆ. ಕಬ್ಜ’ ಸಿನಿಮಾವನ್ನು ನಾನು ಮಾಡಿದ್ದಲ್ಲ. ಯಾವುದೋ ಒಂದು ಶಕ್ತಿ ನನ್ನಿಂದ ಈ ಸಿನಿಮಾವನ್ನು ಮಾಡಿಸಿದೆ. ಇಷ್ಟು ದೊಡ್ಡ ಸ್ಟಾರ್ಗಳು ಅಲ್ಲಿಂದ ಇಲ್ಲಿಯವರೆಗೆ ಬಂದು ಬೆಂಬಲಿಸುತ್ತಿರುವುದು ಪುಣ್ಯ. 17 ರಂದು ಸಿನಿಮಾ ಬಿಡುಗಡೆ ಆದ ಮೇಲೆ ನಾನು ಮಾತನಾಡುತ್ತೀನಿ. ಕಬ್ಜ ಸಿನಿಮಾ ನಾನೊಬ್ಬನೆ ಮಾಡಿದ್ದಲ್ಲ. ಇದೊಂದು ಟೀಂ ವರ್ಕ್. ನಟರು, ತಂತ್ರಜ್ಞರು ಸೇರಿ ಮಾಡಿದ ಸಿನಿಮಾ ಎಂದರು. ತಕ್ಷಣ ಮೈಕ್ ತೆಗೆದುಕೊಂಡ ಸುದೀಪ್ ಇವರ ಮಾತನ್ನು ನಾನು ತರ್ಜುಮೆ ಮಾಡುತ್ತೇನೆ ಎಂದು ಹೇಳಿ, ಇವರು ಬಹಳ ವಿಶಾಲ ಅರ್ಥದಲ್ಲಿ ಹೇಳಿದ್ದೇನೆಂದರೆ ಬೇಗ ಕನ್ನಡ ಕಲಿಯಿರಿ ಎನ್ನುವ ಮೂಲಕ ಕನ್ನಡ ಡಿಂಡಿಮ ಮೊಳಗಿಸಿದರು.

  ಮೊದಲೆಲ್ಲ ಹೀಗಿರಲಿಲ್ಲ. ಬೇರೆ ಭಾಷೆಯವರು ಅಲ್ಲಿನ ವೇದಿಕೆಗಳಲ್ಲಿ ಏನೇ ಎಡವಟ್ಟು ಮಾಡಿದರೂ ಸಹಿಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಹಾಗಿಲ್ಲ. ಕೆಜಿಎಫ್ ಈವೆಂಟ್‍ನಲ್ಲಿ ತೆಲುಗು ನಿರ್ಮಾಪಕರೊಬ್ಬರು ಕೆಜಿಎಫ್ ಬಂದ ಮೇಲೆ ಕನ್ನಡ ಚಿತ್ರರಂಗದ ಗೊತ್ತಾಯ್ತು ಎಂಬ ಅರ್ಥದಲ್ಲಿ ಮಾತನಾಡಿದಾಗ ವೇದಿಕೆಯಲ್ಲೇ ಯಶ್ ತಿದ್ದಿದ್ದರು. ತಮ್ಮದೇ ಚಿತ್ರವನ್ನು ವಿತರಣೆ ಮಾಡುತ್ತಿದ್ದವರಿಗೆ ಕನ್ನಡ ಚಿತ್ರರಂಗ ಬೆಳೆಸಿದ್ದು ನಾವಲ್ಲ. ಹಿಂದೆಯೂ ಒಳ್ಳೆಯ ಚಿತ್ರಗಳಿದ್ದವು ಎಂದಿದ್ದರು. ಸುದೀಪ್ ವಿಷಯವಂತೂ ಬೇರೆಯದೇ. ಬೇರೆ ಭಾಷೆಯ ನಟರಿಗೂ ಕನ್ನಡ ಕಲಿಸಿದ್ದು ಸುದೀಪ್ ಸಾಧನೆ. ಉಪೇಂದ್ರ, ದುನಿಯಾ ವಿಜಯ್, ಇದೀಗ ಬೇರೆ ಭಾಷೆಗೂ ಮುಖ ಮಾಡಿರುವ ಶಿವಣ್ಣ ಸೇರಿದಂತೆ ಎಲ್ಲರೂ ಈಗ ಕನ್ನಡವನ್ನು ಹೆಮ್ಮೆಯ ಭಾಷೆ ಎಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ.

 • ಸುದೀಪ್ ಕಬ್ಜ ಬಿಟ್ಟರು ಎಂಬ ಸುದ್ದಿ ಹಬ್ಬಿದ್ದಾದರೂ ಹೇಗೆ..?

  ಸುದೀಪ್ ಕಬ್ಜ ಬಿಟ್ಟರು ಎಂಬ ಸುದ್ದಿ ಹಬ್ಬಿದ್ದಾದರೂ ಹೇಗೆ..?

  ಕಬ್ಜ. ಈ ವರ್ಷವೇ ರಿಲೀಸ್ ಆಗಬೇಕಿರುವ ಬಹು ನಿರೀಕ್ಷಿತ ಸಿನಿಮಾ. ಉಪೇಂದ್ರ ಮತ್ತು ಕಿಚ್ಚ ಸುದೀಪ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಕಬ್ಜ. ಆರ್. ಚಂದ್ರು ಅವರೇ ನಿರ್ಮಾಪಕರಾಗಿದ್ದು ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಇತ್ತೀಚೆಗೆ ಗಾಂಧಿ ನಗರದಲ್ಲಿ ಒಂದು ಸುದ್ದಿ ಹರಿದಾಡೋಕೆ ಶುರುವಾಗಿತ್ತು.

  ಸುದೀಪ್ ಕಬ್ಜ ಚಿತ್ರದಿಂದ ಹೊರ ನಡೆದಿದ್ದಾರಂತೆ. ವಿಕ್ರಾಂತ್ ರೋಣ ಪ್ರಮೋಷನ್`ಗೆ ಟೈಂ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಬ್ಜ ಬಿಟ್ಟಿದ್ದಾರಂತೆ ಅನ್ನೋ ಸುದ್ದಿಗಳವು. ಈ ಬಗ್ಗೆ ಈಗ ಸ್ವತಃ ಆರ್.ಚಂದ್ರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸುದೀಪ್ ಕಬ್ಜ ಚಿತ್ರತಂಡದ ಜೊತೆಯಲ್ಲಿದ್ದಾರೆ. ಗಾಳಿಸುದ್ದಿಗಳನ್ನೆಲ್ಲ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

  ಕಬ್ಜ ಸೆಟ್ಟೇರಿದ್ದು ಸುಮಾರು 2 ವರ್ಷಗಳ ಹಿಂದೆ. 7 ಭಾಷೆಗಳಲ್ಲಿ ಸಿದ್ಧವಾಗುತ್ತಿರೋ ಚಿತ್ರದಲ್ಲಿ 80ರ ದಶಕದ ಅಂಡರ್‍ವಲ್ರ್ಡ್ ಸ್ಟೋರಿ ಇದೆ. ಉಪ್ಪಿ, ಸುದೀಪ್ ಜೊತೆ ಶ್ರಿಯಾ ಸರಣ್ ನಟಿಸುತ್ತಿದ್ದು, ಇನ್ನೊಬ್ಬ ನಾಯಕಿ ಯಾರು ಅನ್ನೋದನ್ನ ಈಗಲೂ ಸಸ್ಪೆನ್ಸ್‍ನಲ್ಲೇ ಇಟ್ಟಿದ್ದಾರೆ ಚಂದ್ರು. ಜೊತೆಗೆ ಪೊಸಾನಿ ಕೃಷ್ಣ ಮುರಳಿ, ಮುರಳಿ ಶರ್ಮಾ ಸೇರಿದಂತೆ ಬೃಹತ್ ತಾರಾಬಳಗ ಇದೆ.

 • ಸೆಲಬ್ರೇಷನ್ ಆಫ್ ದ ಇಯರ್ : ಕಬ್ಬದ ಸುರ್ ಸುರ್ ಬತ್ತಿ

  ಸೆಲಬ್ರೇಷನ್ ಆಫ್ ದ ಇಯರ್ : ಕಬ್ಬದ ಸುರ್ ಸುರ್ ಬತ್ತಿ

  ಕಬ್ಜದ ಮತ್ತೊಂದು ಹಾಡು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ಸುರ್ ಸುರ್ ಬತ್ತಿ ಸಾಂಗು, ಪಡ್ಡೆ ಹೈಕಳ ಎದೆಯಲ್ಲಿ ಸರ್ ಸರ್ ಅಂತಾ ಸುರ್ ಸುರ್ ಬತ್ತಿ ಇಟ್ಟಿದೆ. ಈ ಹಾಡನ್ನು ಬಿಡುಗಡೆ ಮಾಡುವ ಮುನ್ನ ದ ಸೆಲೆಬ್ರೇಷನ್ ಸಾಂಗ್ ಆಫ್ ದ ಇಯರ್ ಎಂದು ಹೇಳಿಲದ್ದ ಚಿತ್ರತಂಡ ಮಾತನ್ನು ಉಳಿಸಿಕೊಂಡಿದೆ. ಕೇಳುಗರಿಗೆ ಹಾಗೂ ನೋಡುಗರಿಗೆ ಇಬ್ಬರಲ್ಲೂ ಕಿಚ್ಚು ಹತ್ತಿಸಿದೆ ಈ ಹಾಡು.

  ಬಸಣ್ಣಿಯಾಗಿ ಬಾಂಬೆ ಮಿಠಾಯಿ ತಿನ್ನಿಸಿದ್ದ ತಾನ್ಯಾ ಹೋಪ್, ಸುರ್ ಸುರ್ ಬತ್ತಿಯಲ್ಲಿ ಸೊಂಟ ಬಳುಕಿಸಿದ್ದಾರೆ. ಉಪೇಂದ್ರ ವಿಂಟೇಜ್ ಸೂಟ್ ಧರಿಸಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಈ ಹಾಡಿನ ಸಾಹಿತ್ಯ ಬರೆದಿದ್ದು, ಏರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ದನಿ ನೀಡಿದ್ದಾರೆ‌

  ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟ ಸಾರ್ವಭೌಮ ಹಾಗೂ ಯುವರತ್ನ ಮತ್ತು ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಹಾಡಿಗೆ ನೃತ್ಯ ಸಂಯೋಜಿಸಿದ್ದ ಜಾನಿ ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ ಅನ್ನೋದು ಲಿರಿಕಲ್ ವಿಡಿಯೋದಲ್ಲಿನ ಕಟ್ಸ್ಗಳಿಂದಲೇ ಗೊತ್ತಾಗುತ್ತಿದೆ.

  ಉಪ್ಪಿ, ಸುದೀಪ್, ಶ್ರೇಯಾ ಸರಣ್ ಅಭಿನಯದ ಚಿತ್ರದ ಹಾಡು ರಿಲೀಸ್ ಆಗಿದ್ದು ಶಿಡ್ಲಘಟ್ಟದಲ್ಲಿ. ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಯಿಂದ ಬಿಡುಗಡೆಯಾದ ಹಾಡಿದು. ಶಿವರಾತ್ರಿಯಂದು ನಮಾಮಿ ಹಾಡಿನ ಮೂಲಕ ಭಕ್ತಿಯ ಉತ್ತುಂಗ ತೋರಿಸಿದ್ದ ಚಂದ್ರು, ಈ ಹಾಡಿನಲ್ಲಿ ಮಾದಕತೆಯ ಮತ್ತೊಂದು ಮಜಲು ತೋರಿಸಿದ್ದಾರೆ.

 • ಸ್ವಾತಂತ್ರ್ಯ ಹೋರಾಟಗಾರನ ಮಗ ಭೂಗತ ನಾಯಕನಾಗುವ ಕಥೆ : ಕಬ್ಬ

  ಸ್ವಾತಂತ್ರ್ಯ ಹೋರಾಟಗಾರನ ಮಗ ಭೂಗತ ನಾಯಕನಾಗುವ ಕಥೆ : ಕಬ್ಬ

  ಅಪ್ಪ ಸ್ವಾತಂತ್ರ್ಯ ಹೋರಾಟಗಾರ. ಅಮರೇಶ್ವರ. ಆತನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುವ ಕಥೆ ಕಬ್ಬ ಚಿತ್ರದ್ದು. ಡಾನ್ ಆಗುವುದಷ್ಟೇ ಅಲ್ಲ, ತನ್ನದೇ ಛಾಪನ್ನೂ ಮೂಡಿಸುವ ವ್ಯಕ್ತಿಯ ಕಥೆ ಕಬ್ಜ ಚಿತ್ರದಲ್ಲಿದೆ.

  ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.

  ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕು ಗಳನ್ನು ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಮೊದಲ ಹಂತವಾಗಿ ಹಿಂದಿ ಟೀಸರ್ ಬಿಡುಗಡೆಯಾಗಿದೆ.  ಶ್ರೀ ಸಿದ್ಧೇಶ್ವರ ಎಂಟರ್‍ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

  ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ ನಟ ಉಪೇಂದ್ರ. ಕಿಚ್ಚ ಸುದೀಪ್ ಸಹ ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ  ಪ್ರತಿಫಲ’ ಎಂದಿದ್ದಾರೆ.

  ‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ.

 • ಹಾಲಿವುಡ್ ಸ್ಟೈಲ್`ನಲ್ಲಿ ಕಬ್ಜಾ ಪೋಸ್ಟರ್

  ಹಾಲಿವುಡ್ ಸ್ಟೈಲ್`ನಲ್ಲಿ ಕಬ್ಜಾ ಪೋಸ್ಟರ್

  ಕಬ್ಜ ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ. ಪೋಸ್ಟರ್ ನೋಡುತ್ತಿದ್ದರೆ, ಪಕ್ಕಾ ಹಾಲಿವುಡ್ ಸ್ಟೈಲ್ ನೆನಪಿಸುತ್ತಿದೆ. ಅಭಿಮಾನಿಗಳಂತೂ ಫುಲ್ ಫಿದಾ. ಉಪೇಂದ್ರ ಮತ್ತು ಸುದೀಪ್ ಅವರ ಸ್ಟೈಲಿಷ್ ಲುಕ್ ಹಾಗಿದೆ.

  ಸಚಿವ ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಸ್ವತಃ ನಿರ್ದೇಶಕ ಆರ್.ಚಂದ್ರು. ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಮಾರ್ಕೆಟ್‍ಗಾಗಿಯೇ ನಿರ್ಮಾಣವಾಗುತ್ತಿರುವ ಚಿತ್ರ ಕಬ್ಜ. ಚಿತ್ರದಲ್ಲಿ ಖ್ಯಾತನಾಮರ ಸೈನ್ಯವೇ ಸೇರಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್, ತಮಿಳಿನ ಐ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ಅನೂಪ್ ರೇವಣ್ಣ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ಉಪ್ಪಿ ಕಿಚ್ಚ ಚಿತ್ರದಲ್ಲಿ ಸಾಥ್ ಕೊಡುತ್ತಿದ್ದಾರೆ.

  ಸದ್ಯಕ್ಕೆ ಸೆನ್ಸೇಷನ್‍ನಲ್ಲಿರುವ ಕೆಜಿಎಫ್ 2, ವಿಕ್ರಾಂತ್ ರೋಣ, ತೆಲುಗಿನ ಪುಷ್ಪ, ಆರ್‍ಆರ್‍ಆರ್ ಚಿತ್ರಗಳ ಜೊತೆ ಕಬ್ಜ ಕೂಡಾ ಇದೆ ಎನ್ನುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಆರ್.ಚಂದ್ರು. ಚಿತ್ರಕ್ಕೆ ಇನ್ನೂ ನಾಯಕಿ ಫಿಕ್ಸ್ ಆಗಿಲ್ಲ. ಈಗಾಗಲೇ ದೊಡ್ಡ ದೊಡ್ಡ ಸಂಸ್ಥೆಗಳನ್ನು ಚಿತ್ರವನ್ನು ಕೊಳ್ಳುವುದಕ್ಕೆ ಮುಂದೆ ಬಂದಿವೆ.