` kabza, - chitraloka.com | Kannada Movie News, Reviews | Image

kabza,

 • ಕಬ್ಜ ರಿಲೀಸ್ ಡೇಟ್ 24ಕ್ಕೆ ಅನೌನ್ಸ್

  ಕಬ್ಜ ರಿಲೀಸ್ ಡೇಟ್ 24ಕ್ಕೆ ಅನೌನ್ಸ್

  ಜನವರಿ 24ನ್ನು ಇಡೀ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ವರ್ಷದ ಇಂಡಿಯಾದ ಟಾಪ್ ನಿರೀಕ್ಷಿತ ಚಿತ್ರಗಳಲ್ಲಿ ಕಬ್ಜಾ ಕೂಡಾ ಒಂದು. ಕರ್ನಾಟಕದ ಟಾಪ್ 1 ಬಹುನಿರೀಕ್ಷಿತ ಸಿನಿಮಾ. ಏಕೆಂದರೆ ಚಿತ್ರದಲ್ಲಿ ಇರೋದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್. ಸಹಜವಾಗಿಯೇ ಕುತೂಹಲ ಜಾಸ್ತಿ. ಆ ಕುತೂಹಲ ಹೆಚ್ಚಿಸಲೆಂದೇ ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದ್ದಾರೆ. ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತೇವೆ ಎಂದು ಒಂದು ದಿನಾಂಕ ಘೋಷಿಸುವುದು ಹೊಸತು. ಅಂತಹ ಯೋಜನೆ ಸಿದ್ಧ ಮಾಡಿರುವ ಚಂದ್ರು, ಯಾವಾಗ ರಿಲೀಸ್ ಅನ್ನೋದನ್ನ ಜನವರಿ 24ರಂದು ಘೋಷಣೆ ಮಾಡ್ತಾರಂತೆ.

  ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಐದಲ್ಲ, ಒಟ್ಟಾರೆ 8 ಬಾಷೆಗಳಲ್ಲಿ ಬರುತ್ತಿರೋ ಚಿತ್ರ ಕಬ್ಜ. ಕಳೆದ ವರ್ಷವಿಡೀ ಕನ್ನಡ ಚಿತ್ರಗಳ ಅಬ್ಬರ ಇಡೀ ಇಂಡಿಯಾದಲ್ಲಿ ಕೇಳಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಭರ್ಜರಿ ಭರ್ಜರಿ ಭರ್ಜರಿ ಸದ್ದು ಮಾಡಿದ್ದವು. ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದರ ಜೊತೆಗೆ ಇಂಡಿಯನ್ ಪ್ರೇಕ್ಷಕರ ಹೃದಯವನ್ನು ಕೊಳ್ಳೆ ಹೊಡೆದಿದ್ದವು. ಇದೀಗ ಕಬ್ ಚಿತ್ರದ ರಿಲೀಸ್ ಡೇಟ್ ಜನವರಿ 24ರಂದು ಘೋಷಣೆಯಾಗುತ್ತಿದೆ.

 • ಕಬ್ಜ ವಿಶೇಷ ದಾಖಲೆ : ಕೆಜಿಎಫ್ ಹೋಲಿಕೆಗೆ ಉಪ್ಪಿ ಹೇಳಿದ್ದೇನು..?

  ಕಬ್ಜ ವಿಶೇಷ ದಾಖಲೆ : ಕೆಜಿಎಫ್ ಹೋಲಿಕೆಗೆ ಉಪ್ಪಿ ಹೇಳಿದ್ದೇನು..?

  ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಸರಣ್ ಪ್ರಧಾನ ಪಾತ್ರದಲ್ಲಿರೋ ಕಬ್ಜ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಕಬ್ಬ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಮತ್ತು ಒರಿಯಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

  ಕಬ್ಬ ಟೀಸರ್ ಮೇಕಿಂಗ್ ಅದ್ಧೂರಿಯಾಗಿದೆ. ಮ್ಯೂಸಿಕ್, ಮೇಕಿಂಗ್.. ಎಲ್ಲದರಲ್ಲೂ ಅದ್ಧೂರಿತನವಿದೆ. ಗ್ಯಾಂಗ್ ಸ್ಟರ್ ಒಬ್ಬನ ಕಥೆಯನ್ನು ಹೇಳುತ್ತಿದೆ. ಟೀಸರ್ ನೋಡಿದವರು ಕೆಜಿಎಫ್ ರೀತಿ ಇದೆ ಎಂದು ಹೋಲಿಕೆ ಮಾಡುತ್ತಿದ್ದಾರೆ. ಇದರ ಮಧ್ಯೆ ಆನಂದ್ ಆಡಿಯೋದ ಕಬ್ಜ ಟೀಸರ್ ಯೂಟ್ಯೂಬ್‍ನಲ್ಲಿ ಈಗಲೂ ನಂ.1 ಟ್ರೆಂಡಿಂಗ್. ನೋಡಿದವರ ಸಂಖ್ಯೆ 15 ಮಿಲಿಯನ್. ಅಂದರೆ ಒಂದೂವರೆ ಕೋಟಿಗೂ ಹೆಚ್ಚು.

  ಇದರ ಮಧ್ಯೆ ಕೆಜಿಎಫ್ ಹೋಲುತ್ತಿದೆ ಎಂಬ ಮಾತಿಗೆ ಖುದ್ದು  ಉಪೇಂದ್ರ ಹೇಳಿರೋದಿಷ್ಟು. ಹೋಲಿಕೆ ಸಹಜ. ಆದರೆ ಸಿನಿಮಾ ಬಂದ ಮೇಲಷ್ಟೇ ಕೆಜಿಎಫ್ ಕಥೆಯೇ ಬೇರೆ. ಕಬ್ಜ ಕಥೆಯೇ ಬೇರೆ ಎನ್ನುವುದನ್ನು ಅರ್ಥ ಮಾಡಿಕೊಳ್ತಾರೆ. ಮೇಕಿಂಗ್ ಹಾಗೂ ಅದ್ಧೂರಿ ಸೆಟ್ ನೋಡಿದವರಿಗೆ ಹಾಗನ್ನಿಸುವುದು ಸಹಜ ಎಂದಿದ್ದಾರೆ ಉಪ್ಪಿ. ಅಲ್ಲದೆ ಕೆಜಿಎಫ್‍ಗೆ ಹೋಲಿಸುವುದು ಸಂತೋಷದ ವಿಚಾರವೇ ಎಂದೂ ಹೇಳಿದ್ದಾರೆ.

 • ಕಬ್ಜ ಸೆಟ್`ಗಳಿಗೆ ಮಾಡಿದ ಖರ್ಚಿನಲ್ಲೇ 2 ಸಿನಿಮಾ ಮಾಡಬಹುದಿತ್ತು..!

  ಕಬ್ಜ ಸೆಟ್`ಗಳಿಗೆ ಮಾಡಿದ ಖರ್ಚಿನಲ್ಲೇ 2 ಸಿನಿಮಾ ಮಾಡಬಹುದಿತ್ತು..!

  ಕಬ್ಜ ಸಿನಿಮಾ ಮುಂದಿನ ವಾರ ರಿಲೀಸ್ ಆಗಲಿದೆ. ಪುನೀತ್ ಹುಟ್ಟುಹಬ್ಬದ ದಿನಿವೇ ರಿಲೀಸ್ ಆಗಲಿರುವ ಕಬ್ಜ ಚಿತ್ರಕ್ಕೆ ತ್ರಿಬಲ್ ಸ್ಟಾರ್ ಶಕ್ತಿಯಂತೂ ಇದೆ. ಖರ್ಚು ಕೂಡಾ ಹಾಗೆಯೇ ಆಗಿದೆ. ನಿರ್ದೇಶಕ ಆರ್.ಚಂದ್ರು ಈ ಚಿತ್ರಕ್ಕೆ ನಿರ್ಮಾಪಕರೂ ಹೌದು. ತಮ್ಮ ಕನಸಿನ ಚಿತ್ರಕ್ಕೆ ಅಷ್ಟೇ ಅದ್ಧೂರಿಯಾಗಿ ಖರ್ಚೂ ಮಾಡಿರುವ ಚಂದ್ರು ಚಿತ್ರದ ಸೆಟ್‍ಗಳಿಗಾಗಿಯೇ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.

  ಕಬ್ಜದಲ್ಲಿ ಗಮನ ಸೆಳೆದಿದ್ದು ದುಬಾರಿ ಸೆಟ್ಗಳು. ಈ ಸೆಟ್ಟುಗಳನ್ನು ಹಾಕುವುದಕ್ಕೆ ಇಡೀ ತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದೆ. ಯಾಕಂದ್ರೆ, 40ರ ದಶಕದ ಕಥೆಗಳನ್ನು ತೆರೆಮೇಲೆ ತರುವಾಗ ಇಂತಹ ಸೆಟ್ಗಳು ಬೇಕೇ ಬೇಕು. ಕಬ್ಜ ಸಿನಿಮಾದ ಹೈಲೈಟ್ಗಳೇ ಸೆಟ್ಗಳು.ಹೀಗಾಗಿ ಟ್ರೈಲರ್ನಲ್ಲಿ ಸೆಟ್ಗಳು ಗಮನ ಸೆಳೆಯುತ್ತಿವೆ. ನಿರ್ದೇಶಕ ಆರ್.ಚಂದ್ರು ಕಲ್ಪನೆಯಲ್ಲಿ ಮೂಡಿ ಬಂದಿರೋ ಈ ಸಿನಿಮಾದ ದೃಶ್ಯಗಳು ಶ್ರೀಮಂತವಾಗಿ ಕಾಣಿಸುವುದಕ್ಕೆ ಸೆಟ್ಗಳೇ ಕಾರಣ. ಈ ದುಬಾರಿ ಸೆಟ್ಗಳ ಹಿಂದಿನ ನಿರ್ದೇಶಕ ಶಿವಕುಮಾರ್. ಕೆಜಿಎಫ್ ಗೂ ಇವರೇ ಸೆಟ್ ಹಾಕಿದ್ದರು.

  ಆರ್ಟ್ ಡೈರೆಕ್ಟರ್ ಶಿವಕುಮಾರ್ 'ಕಬ್ಜ' ಕೋಟೆ ಕಟ್ಟುವುದಕ್ಕೆ ಸುಮಾರು 150 ಮಂದಿ ಹಗಲ ರಾತ್ರಿ ಕೆಲಸ ಮಾಡಿದ್ದಾರೆ. 1945 ರಿಂದ 1987ರ ಕಾಲಘಟ್ಟದವರೆಗೂ ನಡೆಯುವ ಕಥೆಯಾಗಿರುವುದರಿಂದ ಮೇಜರ್ ಪೋಷನ್ ಅನ್ನು ಸೆಟ್ಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.

  ಈ ಸಿನಿಮಾದಲ್ಲಿ ಸುಮಾರು 30 ಮೇಜರ್ ಸೆಟ್ಗಳಿವೆ. ಹಾಗೇ 15 ಸಬ್ ಸೆಟ್ಗಳನ್ನು ಹಾಕಲಾಗಿದೆಯಂತೆ. ಇಲ್ಲಿ ಮಾರ್ಕೆಟ್ ಸೆಟ್ನಿಂದ ಹಿಡಿದು, ಅರಮನೆ, ಆಗಿನ ಕಾಲದ ರಸ್ತೆ, ಪೋಸ್ಟರುಗಳು, ಆಯುಧಗಳು ಜೈಲು, ಮನೆ.. ಎಲ್ಲವನ್ನೂ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಎರಡೂ ಕಾಲದ ಸೆಟ್ ಬೇಕು. ಅಂದಹಾಗೆ ಕೇವಲ ಈ ಸೆಟ್‍ಗಳ ನಿರ್ಮಾಣಕ್ಕಾಗಿಯೇ ಚಿತ್ರತಂಡ 20 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆಯಂತೆ. ಅಂದಹಾಗೆ ಈಗಾಗಲೇ ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ 100 ಕೋಟಿ ಬ್ಯುಸಿನೆಸ್ ಮಾಡಿದೆ.

 • ಕಬ್ಜಕ್ಕೆ ಚೈನೀಸ್ ಬ್ರೇಕ್

  kabza movie shooting halts due to corona virus outbreak

  ಆರ್.ಚಂದ್ರು ನಿರ್ದೇಶನ ಎಂದಮೇಲೆ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತೆ. ಅಷ್ಟೇ ಅದ್ಧೂರಿಯಾಗಿ ಶುರುವಾಗಿರುವ ಉಪೇಂದ್ರ ಅಭಿನಯದ ಕಬ್ಜ ಚಿತ್ರಕ್ಕೀಗ ಚೈನೀಸ್ ವೈರಸ್ ಬ್ರೇಕ್ ಹಾಕಿದೆ. ಮಲ್ಟಿ ಲಾಂಗ್ವೇಜ್‍ನಲ್ಲಿ ರೆಡಿಯಾಗುತ್ತಿರುವ ಕಬ್ಜ ಸಿನಿಮಾವನ್ನು ``ಹೇಗಿತ್ತೋ ಹಾಗೆ'' ಸ್ಥಿತಿಯಲ್ಲಿ ನಿಲ್ಲಿಸಿದ್ದಾರೆ ಚಂದ್ರು.

  ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆ ಆರ್.ಚಂದ್ರು ಶೂಟಿಂಗ್ ಸ್ಥಗಿತಗೊಳಿಸಿದ್ದಾರೆ. ಚಿತ್ರಕ್ಕೆ ಮಿನರ್ವ ಮಿಲ್ಸ್‍ನಲ್ಲಿ ದೊಡ್ಡ ಸೆಟ್ ಹಾಕಲಾಗಿತ್ತು. ಶೂಟಿಂಗ್ ಮಾಡಬೇಕು ಎಂದರೆ ದಿನಕ್ಕೆ ಮಿನಿಮಮ್ 500 ಜನ ಇರಬೇಕಿತ್ತು. ಅಷ್ಟು ಜನ ಸೇರುವುದಕ್ಕೆ ನಿರ್ಬಂಧ ಇರುವಾಗ ಏನು ಮಾಡೋದು..? ಹಾಗಾಗಿ ಸಿನಿಮಾಗೆ ಬ್ರೇಕ್.

 • ಕಬ್ಜದ ನಮಾಮಿಗೆ ಪ್ರೇಕ್ಷಕರು ವಿಸ್ಮಯ

  ಕಬ್ಜದ ನಮಾಮಿಗೆ ಪ್ರೇಕ್ಷಕರು ವಿಸ್ಮಯ

  ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜೊತೆಯಲ್ಲಿರೋ ಕಬ್ಜ ಮುಂದಿನ ತಿಂಗಳು ಪುನೀತ್ ಹುಟ್ಟುಹಬ್ಬದ ದಿನ ದೇಶದಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಚಿತ್ರದ ಹಾಡು, ವೈಭವ, ನೃತ್ಯಕ್ಕೆ ಪ್ರೇಕ್ಷಕರು ವಿಸ್ಮಯಗೊಂಡಿದ್ದಾರೆ. ತುಂಬಾ ಅದ್ದೂರಿಯಾಗಿ ‘ನಮಾಮಿ..’ ಹಾಡು ಮೂಡಿಬಂದಿದೆ. ಟ್ರೆಡಿಷನಲ್ ಆದಂತಹ ಲುಕ್ನಲ್ಲಿ ಶ್ರೀಯಾ ಶರಣ್ ಅವರು ಮಿಂಚಿದ್ದಾರೆ. ಬೃಹತ್ ಸೆಟ್ಗಳು ಕಣ್ಮನ ಸೆಳೆಯುವಂತಿವೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಹಾಡು ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಇಡೀ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿಬಂದಿರಬಹುದು ಎಂಬುದಕ್ಕೆ ‘ನಮಾಮಿ..’ ಹಾಡಿನಲ್ಲಿ ಝಲಕ್ ಕಾಣಿಸಿದೆ.

  ಪೋಸ್ಟರ್, ಟೀಸರ್‍ಗಳಿಂದಲೇ ವಿಜೃಂಭಿಸುತ್ತಿರುವ ಕಬ್ಜದ ಹಾಡೂ ಅಷ್ಟೇ ಅದ್ಧೂರಿ..ಸುಂದರ..ಶ್ರೇಯಾ ಸರಣ್ ಅವರಂತೂ ಮಹಾರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಕಾಸ್ಟ್ಯೂಮ್, ಸೆಟ್ ಅಷ್ಟೇ ಅಲ್ಲ, ಐಶ್ವರ್ಯಾ ರಂಗರಾಜನ್ ಧ್ವನಿಯೂ ಅಷ್ಟೇ ಮಧುರಾತಿಮಧುರವಾಗಿದೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದ ನಮಾಮಿ ಹಾಡಿಗೆ ಸಾಹಿತ್ಯ ನೀಡಿರುವುದು ಕಿನ್ನಾಲ್ ರಾಜ್.

   ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಆಡಿಯೋ ರಿಲೀಸ್ ಆಗಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ‘ಕಬ್ಜ’ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿದೇಶದ ಪ್ರೇಕ್ಷಕರು ಕೂಡ ಸಜ್ಜಾಗಿದ್ದಾರೆ. ನಾರ್ತ್ ಅಮೆರಿಕದಲ್ಲಿ ಈ ಸಿನಿಮಾ ಭಾರಿ ಓಪನಿಂಗ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್ಟೇನ್ಮೆಂಟ್’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಿದೆ.

 • ಕಬ್ಜದ ಹಾಡಿಗೆ ಬಸಣ್ಣಿ ಕಿಕ್

  ಕಬ್ಜದ ಹಾಡಿಗೆ ಬಸಣ್ಣಿ ಕಿಕ್

  ಬಸಣ್ಣಿ ಬಾ..  ಹಾಡು ಕಿವಿಗೆ ಬಿದ್ರೆ, ಕಣ್ಣಿಗೆ ಬಿದ್ರೆ.. ಇವತ್ತಿಗೂ ಪಡ್ಡೆ ಹುಡುಗರ ಪಂಚೇಂದ್ರಿಯಗಳೂ ಪವರ್ ಪಡೆದುಕೊಳ್ಳುತ್ತವೆ. ಭಟ್ಟರ ಲಿರಿಕ್ಸಿಗೆ ತಕ್ಕಂತೆ ಹೆಜ್ಜೆ ಹಾಕಿ ಮೋಡಿ ಮಾಡಿದ್ದರು ತಾನ್ಯಾ ಹೋಪ್. ಆ ತಾನ್ಯ ಹೋಪ್ ಇದೀಗ ಕಬ್ಜ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾರ್ಚ್ 17ರಂದು ರಿಲೀಸ್ ಆಗಲಿರುವ ಕಬ್ಜ ಚಿತ್ರದ ಒಂದು ಹಾಡಿನ ಶೂಟಿಂಗ್ ಇನ್ನೂ ಬಾಕಿ ಇದೆ. ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಅದು ಮುಗಿದರೆ ಕಬ್ಜ ಉಳಿದ ಪ್ರಮೋಷನ್ ಕೆಲಸದತ್ತ ತೊಡಗಿಸಿಕೊಳ್ಳಲಿದೆ.

  ಹಾಡಿನಲ್ಲಿ ಬಾಲಿವುಡ್ನ ಜಾಕ್ವೆಲಿನ್ ಫರ್ನಾಂಡಿಸ್ ಅಥವಾ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್ ಆರಂಭದಿಂದಲೂ ಇತ್ತು. ಇದೀಗ ಆ ಜಾಗಕ್ಕೆ ತಾನ್ಯಾ ಹೋಪ್ ಅವರ ಹೆಸರು ಅಂತಿಮಗೊಂಡಿದೆ. ಮುಂದಿನ ವಾರ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಉಪೇಂದ್ರ, ತಾನ್ಯಾ ಹೋಪ್ ಹಾಗೂ ನೂರಾರು ಡ್ಯಾನ್ಸರ್ಸ್ ಈ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ. ತೆಲುಗು ಸಿನಿಮಾಗಳ ಮೂಲಕ ಫೇಮಸ್ ಆಗಿದ್ದ ತಾನ್ಯಾ ಹೋಪ್, 'ಯಜಮಾನ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾದಲ್ಲಿ 'ಬಸಣ್ಣಿ ಬಾ ಬಸಣ್ಣಿ ಬಾ..' ಹಾಡಿನಲ್ಲಿ ಕಾಣಿಸಿಕೊಂಡು, ಸಖತ್ ಫೇಮಸ್ ಆಗಿದ್ದರು.

  ಈ ಹಾಡಿಗೂ ಜಾನಿ ಮಾಸ್ಟರ್ ಅವರೇ ಕೊರಿಯೋಗ್ರಫಿ ಮಾಡಲಿದ್ದಾರೆ. ಈ ಹಾಡಿಗಾಗಿಯೇ ಅದ್ಧೂರಿ ಸೆಟ್ ಹಾಕಲಾಗಿದ್ದು, ರಿಹರ್ಸಲ್ ನಡೆಯುತ್ತಿದೆ. ಉಪೇಂದ್ರ ಜೊತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸಿದ್ದ ತಾನ್ಯಾ ಹೋಪ್, ಇದೀಗ ಸ್ಪೆಷಲ್ ಸಾಂಗ್`ನಲ್ಲಿ ಕುಣಿದು ಕುಪ್ಪಳಿಸಲಿದ್ದಾರೆ.

 • ಕಬ್ಜದಲ್ಲಿ ಶಿವಣ್ಣ ಇದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದೇಕೆ ಆರ್.ಚಂದ್ರು..?

  ಕಬ್ಜದಲ್ಲಿ ಶಿವಣ್ಣ ಇದ್ದಾರೆ ಎನ್ನುವುದನ್ನು ರಿವೀಲ್ ಮಾಡಿದ್ದೇಕೆ ಆರ್.ಚಂದ್ರು..?

  ಕಬ್ಜದಲ್ಲಿ ಶಿವಣ್ಣ ಕೂಡಾ ಇದ್ದಾರೆ ಎನ್ನುವುದು ಶಿವರಾಜ್ ಕುಮಾರ್ ಫ್ಯಾನ್ಸ್‍ಗೆ ಖುಷಿ ಕೊಟ್ಟಿರುವುದೇನೋ ನಿಜ. ಆದರೆ ಶಿವಣ್ಣ ಪಾತ್ರವನ್ನು ರಿವೀಲ್ ಮಾಡಿದ ಆರ್.ಚಂದ್ರು ಅವರ ಸೋಷಿಯಲ್ ಮೀಡಿಯಾ ಪೇಜಿಗೆ ಹೋಗಿ ಕಮೆಂಟ್ಸ್ ನೋಡಬೇಕು. ಬಹುತೇಕ ಜನ ಶಿವಣ್ಣ ಪಾತ್ರ ರಿವೀಲ್ ಮಾಡಿದ್ದನ್ನು ಒಪ್ಪಿಲ್ಲ. ಹಾಗಂತ ಅವರೇನೂ ಶಿವಣ್ಣ ವಿರೋಧಿಗಳೂ ಅಲ್ಲ. ಎಲ್ಲರೂ ಶಿವಣ್ಣ ಫ್ಯಾನ್ಸ್. ಹೀಗಿದ್ದರೂ ಅವರು ಶಿವಣ್ಣ ಪಾತ್ರ ರಿವೀಲ್ ಆಗಿದ್ದನ್ನು ಬೇಡ ಎಂದಿದ್ದೇಕೆ ಎಂದರೆ ಕಾರಣವೂ ಇತ್ತು.

  ಇತ್ತೀಚೆಗೆ ತಮಿಳಿನಲ್ಲಿ ಬಂದ ವಿಕ್ರಂ ಚಿತ್ರದಲ್ಲಿ ಸೂರ್ಯ ಪಾತ್ರ ಆ ರೀತಿ ಸರ್‍ಪ್ರೈಸ್ ಕೊಡುತ್ತೆ. ಸೂರ್ಯ ಪಾತ್ರ ತೆರೆಯ ಮೇಲೆ ಬಂದಾಗ ಕೊಡುವ ಥ್ರಿಲ್ಲೇ ಬೇರೆ. ಆ ರೀತಿಯಲ್ಲಿಯೇ ಚಿತ್ರ ರಿಲೀಸ್ ಆಗುವವರೆಗೆ ಶಿವಣ್ಣ ಪಾತ್ರ ಸಸ್ಪೆನ್ಸ್ ಆಗಿಯೇ ಇರಬೇಕಿತ್ತು. ನೀವು ನಮಗೆ ಥಿಯೇಟರ್ ಥ್ರಿಲ್ ಮಿಸ್ ಮಾಡಿದ್ರಿ ಎಂದಿದ್ದರು ಬಹುತೇಕ ಅಭಿಮಾನಿಗಳು.

  ಶಿವಣ್ಣನ ಪಾತ್ರ  ಸರ್‍ಪ್ರೈಸ್ ನಿಜ. ಆದ್ರೆ, ಚಿತ್ರ ನೋಡಿಕೊಂಡು ಬಂದ ಅಭಿಮಾನಿಗಳು ಶಿವಣ್ಣನ ಕಟೌಟ್ ಯಾಕೆ ಹಾಕಿಲ್ಲ ಎಂದು ಗಲಾಟೆ ಮಾಡ್ಬಿಟ್ರೆ? ಅಷ್ಟಕ್ಕೂ ಎಲ್ಲಿ ತನಕ ಸರ್ಪ್ರೈಸ್ ಇಡೋಕೆ ಸಾಧ್ಯ? ಮೊದಲನೇ ಶೋ ತನಕ ಮಾತ್ರ. ಥಿಯೇಟರ್ನಿಂದ ಹೊರಗೆ ಬಂದ ಪ್ರೇಕ್ಷಕ, 'ಚಿತ್ರದ ಕೊನೆಯಲ್ಲಿ ಶಿವಣ್ಣ ಬರ್ತಾರೆ' ಅಂದ್ಬಿಟ್ರೆ ಆಯ್ತಲ್ಲ? ಅದಕ್ಕೆ, ರಿಸ್ಕ್ ಯಾಕೆ ಅಂತ ಚಂದ್ರು ಮೊದ್ಲೇ ರಿವೀಲ್ ಮಾಡ್ಬಿಟ್ರು

  ಇದನ್ನು ವೇದಿಕೆಯಲ್ಲಿಯೇ ಖುದ್ದು ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಬೆಂಗಳೂರಿನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಮಾತನಾಡಿರೋ ಉಪೇಂದ್ರ ಎಲ್ಲ ಭಾರವನ್ನೂ ಆರ್.ಚಂದ್ರು ಹೆಗಲಿಗೇ ಹೊತ್ತು ಹಾಕಿದ್ರು. ಮಾರ್ಚ್ 17ರಂದು ಕಬ್ಜ ರಿಲೀಸ್ ಆಗುತ್ತಿದ್ದು, ಒಂದು ಕಡೆ ಅಪ್ಪು ಜಯಂತಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕಬ್ಜ ಉತ್ಸವ ನೆರವೇರಲಿದೆ.

  ಚಿತ್ರದ ಮೇಕಿಂಗ್, ಸ್ಟಿಲ್ಸ್ ಎಲ್ಲವನ್ನೂ ನೋಡಿದ್ದ ಪುನೀತ್, ಈ ಚಿತ್ರದ ಪ್ರತಿ ಪ್ರಚಾರದಲ್ಲೂ ನಾನಿರುತ್ತೇನೆ ಎಂದು ಆರ್.ಚಂದ್ರುಗೆ ಹೇಳಿದ್ದರಂತೆ. ಅವರ ಪ್ರೀತಿ ಮತ್ತು ಅಭಿಮಾನಕ್ಕಾಗಿ ಅದೇ ದಿನ ಕಬ್ಜ ರಿಲೀಸ್ ಮಾಡುತ್ತಿದ್ದೇವೆ ಎಂದು ಪುನರುಚ್ಚರಿಸಿದ್ದಾರೆ ಆರ್.ಚಂದ್ರು.

 • ಕಬ್ಜಾ ಕೋಟೆಯಲ್ಲಿ ಒಬ್ಬನೇ ಉಪ್ಪಿ.. ೭ ಭಾಷೆ ೭ ವಿಲನ್ಸ್..

  uppi's kabza special

  ಐ ಲವ್ ಯು ಚಿತ್ರದ ನಂತರ ಉಪೇಂದ್ರ ಮತ್ತು ಆರ್.ಚಂದ್ರು ಮತ್ತೆ ಜೊತೆಯಾಗಿದ್ದಾರೆ. ಅದು ಕಬ್ಜಾ ಚಿತ್ರಕ್ಕಾಗಿ. ನವೆಂಬರ್ ೧೫ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ೮೦ರ ದಶಕದ ರಿಯಲ್ ರೌಡಿಯೊಬ್ಬನ ರಿಯಲ್ ಸ್ಟೋರಿಗೆ ಸಿನಿಮಾಟಿಕ್ ಟಚ್ ಕೊಡಲಾಗಿದೆ. ಚಿತ್ರದ ಇನ್ನೊಂದು ವಿಶೇಷ ಎಂದರೆ ಚಿತ್ರದಲ್ಲಿ ೭ ಜನ ವಿಲನ್ಸ್ ಇದ್ದಾರೆ.

  ಹಿಂದಿಯಿAದ ನಾನಾ ಪಾಟೇಕರ್, ತೆಲುಗಿನಿಂದ ಜಗಪತಿ ಬಾಬು, ಪ್ರಕಾಶ್ ರೈ, ಸಮುದ್ರಕಿಣಿ, ಜಯಪ್ರಕಾಶ್ ರೆಡ್ಡಿ, ಮನೋಜ್ ಬಾಜಪೇಯಿ, ಪ್ರದೀಪ್ ರಾವತ್ ಖಳನಾಯಕರು. ಒಬ್ಬರಿಗಿಂತ ಒಬ್ಬರು ಅಭಿನಯ ರಾಕ್ಷಸರು. ಇವೆರೆಲ್ಲರ ಜೊತೆ ಹೊಡೆದಾಡೋದು ಒನ್ & ಓನ್ಲಿ ಉಪೇಂದ್ರ.

 • ಕಬ್ಬ ಸೆಟ್ಟಲ್ಲೇ ಸಂಪೂರ್ಣ ಸಿನಿಮಾ

  kabza movie specialty

  ಒಂದಾನೊಂದು ಕಾಲವಿತ್ತು, ಸ್ಟುಡಿಯೋಗಳಲ್ಲಿ ಸೆಟ್ಟುಗಳಲ್ಲಿಯೇ ಇಡೀ ಚಿತ್ರ ಮುಗಿದುಹೋಗುತ್ತಿತ್ತು. ಅದಾದ ಮೇಲೆ ಹೊರಾಂಗಣ ಬಂತು, ಫಾರಿನ್ ಬಂತು. ಈಗ ಮತ್ತೊಮ್ಮೆ ಹಳೆಯದನ್ನು ನೆನಪಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ ಆರ್.ಚಂದ್ರು ಮತ್ತು ಉಪೇಂದ್ರ ಜೋಡಿ. ಐ ಲವ್ ಯು ನಂತರ ಮತ್ತೆ ಒಟ್ಟಿಗೇ ಸಿನಿಮಾ ಮಾಡುತ್ತಿರುವ ಜೋಡಿಯ ಹೊಸ ಸಿನಿಮಾ ಕಬ್ಜಾ.

  ಈ ಚಿತ್ರದಲ್ಲಿ 1947ರಿಂದ 1980ರವರೆಗಿನ ರೌಡಿಸಂ ಕಥೆಯಿದೆ. ಆ ಕಾಲವನ್ನು ಎಲ್ಲಿಂದ ಹುಡುಕಿಕೊಂಡು ಹೋಗೋಣ. ಹಾಗಾಗಿ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಒಂದು ಸೆಟ್, ಬೆಂಗಳೂರಿನ ಮಿನರ್ವ ಹಾಲ್ ಮತ್ತು ದೇವನಹಳ್ಳಿಯಲ್ಲಿ ಸೆಟ್ ಹಾಕಲಾಗಿದೆ. ಚಿತ್ರದ ಪ್ರತಿ ದೃಶ್ಯವೂ ಸೆಟ್‍ನಲ್ಲೇ ಚಿತ್ರೀಕರಣವಾಗಲಿದೆ ಎಂದಿದ್ದಾರೆ ಚಂದ್ರು.

  ಜನವರಿ 2ರಂದು ತೆಲುಗಿನಲ್ಲಿ ಕಬ್ಜ ಚಿತ್ರದ ಮುಹೂರ್ತ ನಡೆಯಲಿದ್ದು, ಸಿನಿಮಾ ಒಟ್ಟು 7 ಭಾಷೆಗಳಲ್ಲಿ ನಿರ್ಮಾಣವಾಗಲಿದೆ.

 • ಕಬ್ಬ ಹಬ್ಬಕ್ಕೆ ರಾಣಾ..ಶಿವಣ್ಣ

  ಕಬ್ಬ ಹಬ್ಬಕ್ಕೆ ರಾಣಾ..ಶಿವಣ್ಣ

  ನಾಳೆ ಉಪ್ಪಿ ಹಬ್ಬ. ಅದಕ್ಕೆ ಮುನ್ನ ಹಬ್ಬಕ್ಕೆ ಉಡುಗೊರೆಯಾಗಿ ಬರುತ್ತಿರುವುದು ಕಬ್ಜ ಟೀಸರ್. ಟೀಸರ್ ಬಿಡುಗಡೆಯನ್ನೇ ಹಬ್ಬದಂತೆ ಮಾಡುತ್ತಿದ್ದಾರೆ ಆರ್.ಚಂದ್ರು. ಕಬ್ಜ ಚಿತ್ರಕ್ಕೆ ನಿರ್ದೇಶಕರೂ ಅವರೇ. ನಿರ್ಮಾಪಕರೂ ಅವರೇ. ಉಪೇಂದ್ರ-ಸುದೀಪ್ ಕಾಂಬಿನೇಷನ್ ಸಿನಿಮಾ ಎಂದ ಮೇಲೆ ಚಿತ್ರದ ಪ್ರತಿಯೊಂದು ಸುದ್ದಿಯೂ ಹಬ್ಬವೇ ಸೈ.

  ಕಬ್ಬ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಶಿವರಾಜಕುಮಾರ್ ಮತ್ತು ರಾಣಾ ದಗ್ಗುಬಾಟಿ ಮುಖ್ಯ ಅತಿಥಿಗಳು. ಕಬ್ಬ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಎಲ್ಲ ಭಾಷೆಗಳ ಪತ್ರಕರ್ತರೂ ಬರಲಿದ್ದಾರೆ.

  ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಸರಣ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. 

 • ಕೆಜಿಎಫ್ ಚಿತ್ರವೇ ಕಬ್ಜ ಚಿತ್ರಕ್ಕೆ ಸ್ಪೂರ್ತಿ..!

  kgf is an inspiration for kabza to release an india

  ರಿಯಲ್ ಸ್ಟಾರ್ ಉಪೇಂದ್ರ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದ ನಟ, ನಿರ್ದೇಶಕ. ಈಗ ಅವರ ಚಿತ್ರಕ್ಕೇ ಕನ್ನಡ ಚಿತ್ರವೊಂದು ಸ್ಫೂರ್ತಿ ನೀಡಿದೆ ಎಂದರೆ.. ಹೌದು, ಈ ಮಾತನ್ನು ಹೇಳಿಕೊಂಡಿರೋದು ನಿರ್ದೇಶಕ ಆರ್.ಚಂದ್ರು.

  ಉಪೇಂದ್ರ ಜೊತೆ ಕಬ್ಜ ಚಿತ್ರವನ್ನು ಶುರು ಮಾಡಿರುವ ಚಂದ್ರು, ಇದನ್ನು 7 ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಮುಹೂರ್ತ ನೆರವೇರಿದ್ದು, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕ್ಲಾಪ್ ಮಾಡಿದ್ದಾರೆ. ಇದೇ ವೇಳೆ ಕೆಜಿಎಫ್ ಚಿತ್ರಕ್ಕೆ ಪ್ಯಾನ್ ಇಂಡಿಯಾದಲ್ಲಿ ಸಿಕ್ಕ ಪ್ರೋತ್ಸಾಹ ಮತ್ತು ಯಶಸ್ಸು, ಈ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣಕ್ಕೆ ಧೈರ್ಯ ನೀಡಿತು ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದಾರೆ ಆರ್.ಚಂದ್ರು.

  80ರ ದಶಕದ ರೌಡಿಸಂ ಕಥಾಹಂದರ ಇರುವ ಚಿತ್ರಕ್ಕೆ ಕಾಜಲ್ ಅಗರ್ವಾಲ್ ನಾಯಕಿ ಎಂಬ ಸುದ್ದಿಯಿದೆ. ಇನ್ನೂ ಕನ್ಫರ್ಮ್ ಆಗಿಲ್ಲ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಕಬ್ಜಾ ಮುಹೂರ್ತಕ್ಕೆ ಆಗಮಿಸಿದ್ದ ಆನಂದ್ ಗುರೂಜಿ ಮತ್ತು ಮಾಜಿ ಸಚಿವ ಯು.ಟಿ.ಖಾದರ್, ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

 • ಕೆಂಪೇಗೌಡ ಅಲ್ಲ.. ಭಾರ್ಗವ್ ಭಕ್ಷಿ..!

  ಕೆಂಪೇಗೌಡ ಅಲ್ಲ.. ಭಾರ್ಗವ್ ಭಕ್ಷಿ..!

  ಕಬ್ಜ ಚಿತ್ರದ ಸೆಟ್ಟಿಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಷ್ಟೇ ಅಲ್ಲ.. ಸುದೀಪ್ ಲುಕ್ ಕೂಡಾ ರಿವೀಲ್ ಆಗಿದೆ. 80ರ ದಶಕದ ಅಂಡರ್‍ವಲ್ರ್ಡ್ ಸ್ಟೋರಿ ಇರೋ ಕಬ್ಜದಲ್ಲಿ ಉಪ್ಪಿ ಮತ್ತು ಸುದೀಪ್ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆರ್. ಚಂದ್ರು ನಿರ್ದೇಶನದ ಕಬ್ಜ ಚಿತ್ರದಲ್ಲಿ, ಸುದೀಪ್ ಲುಕ್ ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲಕ್ಕೀಗ ಬ್ರೇಕ್ ಬಿದ್ದಿದೆ.

  ಕೆಂಪೇಗೌಡ ಚಿತ್ರದಲ್ಲಿ ಗಿರಿಜಾ ಮೀಸೆ ಬಿಟ್ಟು ಮೆರೆದಿದ್ದ ಸುದೀಪ್ ಅವರಿಂದ, ಇಲ್ಲಿಯೂ ಡೈರೆಕ್ಟರ್ ಮತ್ತೊಮ್ಮೆ ಅದೇ ಟ್ರಯಲ್ ಮಾಡಿಸಿದ್ದಾರೆ. ಆದರೆ.. ಆ ಕೆಂಪೇಗೌಡನಿಗೂ.. ಈ ಭಾರ್ಗವ್ ಭಕ್ಷಿಗೂ ಒಂದು ವ್ಯತ್ಯಾಸ ಇದೆ. ಆ ಕೆಂಪೇಗೌಡನ ಕಣ್ಣಲ್ಲಿ ಕೊತಕೊತ ಕುದಿಯುವ ಕೋಪವಿತ್ತು. ಈ ಕೆಂಪೇಗೌಡನ ಕಣ್ಣುಗಳು ಕೂಲ್ ಕೂಲ್. ಹಾಗಂತ ಚಿತ್ರದುದ್ದಕ್ಕೂ ಕಿಚ್ಚ ಕೂಲ್ ಆಗಿ ಇರಲ್ಲ ಅನ್ನೋದಂತೂ ಗ್ಯಾರಂಟಿ. ಮೊದಲೇ ಡಾನ್ ಪಾತ್ರ..

  ಇಡೀ ಚಿತ್ರದ ಕಥೆ, ಸುದೀಪ್ ಪಾತ್ರ ಎಂಟ್ರಿ ಕೊಟ್ಟ ಮೇಲೆ ಟರ್ನ್ ಆಗುತ್ತೆ. ಭಾರ್ಗವ್ ಭಕ್ಷಿ ಕ್ಯಾರೆಕ್ಟರ್ ಸಿಕ್ಕಾಪಟ್ಟೆ ಸ್ಪೆಷಲ್ ಎಂದಿದ್ದಾರೆ ಆರ್.ಚಂದ್ರು.

 • ಚಂದ್ರು, ಉಪ್ಪಿಯ ಕಬ್ಜಕ್ಕೆ ಎಂಟಿಬಿ ನಾಗರಾಜ್ ನಿರ್ಮಾಪಕ

  mtb nagaraj is now producer for kabza

  2019ರ ರಾಜಕೀಯ ಸೆನ್ಸೇಷನ್ ಎಂಟಿಬಿ ನಾಗರಾಜ್. ಅನರ್ಹ ಶಾಸಕರ ಕ್ಷೇತ್ರದ ಚುನಾವಣೆ, ರಾಜಕೀಯದಲ್ಲಿ ಅತೀ ಹೆಚ್ಚು ಚರ್ಚೆಯಾದ ನಾಯಕ ಎಂಟಿಬಿ ನಾಗರಾಜ್. ಅಷ್ಟೇ ಅಲ್ಲ, ದೇಶದ ನಂ.1 ಶ್ರೀಮಂತ ಎಂಎಲ್‍ಎ ಆಗಿದ್ದ ಎಂಟಿಬಿ ನಾಗರಾಜ್, ಈಗ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಿನ ಕಬ್ಜ ಚಿತ್ರಕ್ಕೆ ಎಂಟಿಬಿ ನಾಗರಾಜ್ ನಿರ್ಮಾಪಕರಾಗಿದ್ದಾರೆ.

  ಕಬ್ಜ ಚಿತ್ರ ಒಟ್ಟು 7 ಭಾಷೆಯಲ್ಲಿ ತಯಾರಾಗುತ್ತಿದೆ. ಚಿತ್ರಕ್ಕಾಗಿಯೇ ಒಂದೂವರೆ ಕೋಟಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದ ಚಿತ್ರಕ್ಕೆ ಎಂಟಿಬಿ ನಾಗರಾಜ್ ಶಕ್ತಿಯೂ ಸಿಕ್ಕಿರೋದ್ರಿಂದ ಕಬ್ಜ ಚಿತ್ರದ ಅದ್ಧೂರಿತನ ಇನ್ನಷ್ಟು ಹೆಚ್ಚಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

  Related Articles :-

  ಸಾವಿರ ಕೋಟಿ ಸರದಾರ ಶಾಸಕ ಚಿತ್ರರಂಗಕ್ಕೆ.

  India's Richest MLA MTB to Produce Kannada Film - EXCLUSIVE

 • ಜಾನಿ ಮಾಸ್ಟರ್`ಗೇ ಸ್ಟೆಪ್ಸ್ ಕಲಿಸಿದ ಉಪೇಂದ್ರ..!

  ಜಾನಿ ಮಾಸ್ಟರ್`ಗೇ ಸ್ಟೆಪ್ಸ್ ಕಲಿಸಿದ ಉಪೇಂದ್ರ..!

  ಕಬ್ಜ ಚಿತ್ರದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರೋ ವಿಡಿಯೋ. ಹಲವು ಸಹನೃತ್ಯಗಾರರ ಜೊತೆ ಜಾನಿ ಮಾಸ್ಟರ್ ಉಪೇಂದ್ರಗೆ ಸ್ಟೆಪ್ಸ್ ಹೇಳಿಕೊಡುತ್ತಿರುವ ವಿಡಿಯೋ ಅದು. ತಾನ್ಯಾ ಹೋಪ್ ಮತ್ತು ಉಪೇಂದ್ರ ಒಟ್ಟಿಗೇ ಹೆಜ್ಜೆ ಹಾಕಬೇಕಿರುವ ಹಾಡಿನ ಸ್ಟೆಪ್ಸ್ ಇದು. ರವಿ ಬಸ್ರೂರು ಟ್ಯೂನ್`ಗೆ ತಕ್ಕಂತೆ ಜಾನಿ ಮಾಸ್ಟರ್ ಹೆಜ್ಜೆ ಹಾಕುತ್ತಾ ಉಪೇಂದ್ರಗೆ ಸ್ಟೆಪ್ಸ್ ಹೇಳಿಕೊಡುತ್ತಿರುವ ವಿಡಿಯೋ. ಆದರೆ ವಿಡಿಯೋ ಕೊನೆಯಲ್ಲಿ ಆಗುವುದೇ ಬೇರೆ.

  ಉಪೇಂದ್ರ ಸಿಗ್ನೇಚರ್ ಸ್ಟೆಪ್ಸ್ ಗೊತ್ತಿದೆಯಲ್ಲ.. ಅದೇ ನಟರಾಜ ಸ್ಟೈಲ್‍ನಲ್ಲಿ ಆ ಕಡೆ ಒಂದು ಕಾಲು.. ಈ ಕಡೆ ಒಂದು ಕಾಲು ಹಾಕುತ್ತಾ ಕುಣಿಯುವುದು. ಉಪೇಂದ್ರ ಚಿತ್ರದಲ್ಲಿ ಬರಿವೋಳು.. ಹಾಡಿನಿಂದ ಫೇಮಸ್ ಆದ ಆ ಸ್ಟೆಪ್ಸ್‍ನ್ನ ಉಪ್ಪಿ ಇವತ್ತಿಗೂ ಬಿಟ್ಟಿಲ್ಲ. ಕಾರಣ ಇಷ್ಟೆ, ಉಪ್ಪಿ ಪ್ರೊಫೆಷನಲ್ ಡ್ಯಾನ್ಸರ್ ಅಲ್ಲ. ಹೀಗಾಗಿ ತಮಗೆ ಸೂಟ್ ಆಗುವ, ಅಡ್ಜಸ್ಟ್ ಆಗುವ ಸ್ಟೆಪ್ಸ್ ಹಾಕ್ತಾರೆ. ಅಂತಹ ಹಲವು ಸ್ಟೆಪ್ಸ್‍ಗಳಲ್ಲಿ ನಟರಾಜ ಸ್ಟೈಲ್ ಕೂಡಾ ಒಂದು. ಅವುಗಳನ್ನೇ ಸ್ವಲ್ಪ ಬದಲಿಸಿ ನೃತ್ಯ ಮಾಡುವುದು ಉಪೇಂದ್ರ ಸ್ಟೈಲ್. ಈ ವಿಡಿಯೋದಲ್ಲಿ ಏನಾಗಿದೆಯಯೆಂದರೆ.. ಡ್ಯಾನ್ಸ್ ಹೇಳಿಕೊಡುತ್ತಿರುವ ಜಾನಿ ಮಾಸ್ಟರ್`ಗೆ ಕೊನೆಗೆ ತಮ್ಮ ಸ್ಟೆಪ್ಸ್ ಹೇಳಿಕೊಡುತ್ತಾರೆ ಉಪ್ಪಿ. ಅದನ್ನು ಜಾನಿ ಮಾಸ್ಟರ್ ಅಷ್ಟೇ ಖುಷಿಯಿಂದ ಎಂಜಾಯ್ ಮಾಡುತ್ತಾ ತಮ್ಮದೇ ಸ್ಟೈಲ್`ನಲ್ಲಿ ಸ್ಪೆಪ್ ಹಾಕುತ್ತಾರೆ. ವೈರಲ್ ಆಗಿರುವ ವಿಡಿಯೋ ಇದೆ.

  ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ಕಬ್ಜ ಚಿತ್ರದ ಆಡಿಯೋ ಲಾಂಚ್ ಇಟ್ಟುಕೊಂಡಿದ್ದಾರೆ ಆರ್.ಚಂದ್ರು. ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಸರಣ್ ಪ್ರಧಾನ ಪಾತ್ರದಲ್ಲಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ. ಮಾರ್ಚ್ 17ಕ್ಕೆ ಕಬ್ಜ ರಿಲೀಸ್ ಆಗುತ್ತಿದ್ದು, ಪೋಸ್ಟ್ ಪ್ರೊಡಕ್ಷನ್ ಹಾಗೂ ಪ್ಯಾಚ್ ವರ್ಕ್ ರಭಸದಿಂದ ನಡೆಯುತ್ತಿದೆ.

 • ನಾನು ಆರಾಮ್ ಇದ್ದೇನೆ. ಡೋಂಟ್ ವರಿ : ಉಪೇಂದ್ರ

  ನಾನು ಆರಾಮ್ ಇದ್ದೇನೆ. ಡೋಂಟ್ ವರಿ : ಉಪೇಂದ್ರ

  ಉಪೇಂದ್ರ ಅಭಿನಯದ ಆರ್.ಚಂದ್ರು ನಿರ್ದೇಶನ, ನಿರ್ಮಾಣದ ಕಬ್ಜ ಚಿತ್ರದ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಪೆಟ್ಟಾಗಿದೆ. ಌಕ್ಷನ್ ಸೀನ್ ಚಿತ್ರೀಕರಣದ ವೇಳೆ ಅಕಸ್ಮಾತ್ ಆಗಿ ಉಪೇಂದ್ರ ಅವರ ತಲೆಗೆ ಬಿದ್ದ ಕಬ್ಬಿಣದ ರಾಡ್ನಿಂದಾಗಿ ಪೆಟ್ಟಾಗಿತ್ತು. ವಿಷಯ ಗೊತ್ತಾಗುವುದರೊಳಗೆ ವಿಡಿಯೋ ಕೂಡಾ ವೈರಲ್ ಆದ ಕಾರಣ, ಅಭಿಮಾನಿಗಳು ಆತಂಕಗೊಂಡರು.

  ಈ ಕುರಿತು ಸ್ವತಃ ಉಪೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿರುವ ಉಪ್ಪಿ, ಈಗಿನ ಫೋಟೋವನ್ನೂ ಹಾಕಿದ್ಧಾರೆ. ಉಪ್ಪಿ ಸೇಫ್. ಡೋಂಟ್ ವರಿ.

 • ಪುನೀತ್ ಹುಟ್ಟಹಬ್ಬಕ್ಕೆ ಕಬ್ಜ ರಿಲೀಸ್

  ಪುನೀತ್ ಹುಟ್ಟಹಬ್ಬಕ್ಕೆ ಕಬ್ಜ ರಿಲೀಸ್

  ಈ ವರ್ಷದ.. ಕನ್ನಡದಿಂದ ತಯಾರಾಗಿರುವ ಪ್ಯಾನ್ ಇಂಡಿಯಾ ಮೂವಿಗಳಲ್ಲಿ ನಂ.1 ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್, ಶ್ರಿಯಾ ಸರಣ್ ನಟಿಸಿರೋ ಚಿತ್ರ ಒಟ್ಟಾರೆ 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದೀಗ ಕಬ್ಜ ರಿಲೀಸ್ ಮಾರ್ಚ್ 17ಕ್ಕೆ ಎಂದು ಘೋಷಿಸಿಬಿಟ್ಟಿದ್ದಾರೆ. ಮಾರ್ಚ್ 17, ಪುನೀತ್ ರಾಜಕುಮಾರ್ ಜಯಂತಿ.

  ಕಬ್ಬ ಚಿತ್ರದ ಬಗ್ಗೆ ಪುನೀತ್ ಅವರಿಗೆ ಭಾರಿ ಕುತೂಹಲವಿತ್ತು. ಆಗಾಗ್ಗೆ ಶೂಟಿಂಗ್`ಗೆ ಬಂದು ಹೋಗುತ್ತಿದ್ದರು. ಅವರಿಂದಲೇ ಟೀಸರ್, ಟ್ರೇಲರ್ ರಿಲೀಸ್ ಮಾಡಿಸುವ ಪ್ಲಾನ್ ಕೂಡಾ ಇತ್ತು. ಈಗ ಅವರ ಹುಟ್ಟುಹಬ್ಬದ ದಿನವೇ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಆರ್.ಚಂದ್ರು.

  ಆ ವೇಳೆಗೆ ಯುಗಾದಿಯೂ ಬರಲಿದೆ. ಹೊಸ ವರ್ಷದ ಆರಂಭಕ್ಕೆ ಕಬ್ಜ ಕೊಡುಗೆಯಾಗಲಿದೆ ಎಂದಿದ್ದಾರೆ ಆರ್.ಚಂದ್ರು. ಒಟ್ಟಾರೆ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಕಬ್ಜ ರಿಲೀಸ್ ಆಗಲಿದೆ. ಕಬ್ಜದಲ್ಲಿ 1940ರ ಕಾಲದ ಭೂಗತ ಲೋಕದ ಕಥೆಯಿದೆ. ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. 2022ರಲ್ಲಿ ಕನ್ನಡ ಚಿತ್ರರಂಗ ಇಂಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದವು. ಇದೀಗ ಕಬ್ಜ. ಜೊತೆಗೆ ಪುನೀತ್ ಜಯಂತಿ. ಕಬ್ಬ ಹಬ್ಬವಾಗಲಿದೆ.

 • ಬಸ್ರೂರು ಗ್ಯಾಂಗ್ ಹವಾ : ಹೇಗಿದೆ ಕಬ್ಜ ಟೈಟಲ್ ಟ್ರ್ಯಾಕ್?

  ಬಸ್ರೂರು ಗ್ಯಾಂಗ್ ಹವಾ : ಹೇಗಿದೆ ಕಬ್ಜ ಟೈಟಲ್ ಟ್ರ್ಯಾಕ್?

  ಕಬ್ಜ. ಈ ವರ್ಷದ ಬಹುನಿರೀಕ್ಷಿತ ಚಿತ್ರ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ರವಿ ಬಸ್ರೂರು ಸಂಗೀತ ಮತ್ತು ಸಾಹಿತ್ಯದಲ್ಲಿ ಧಮ್ ಇದೆ. ಕಬ್ಜ.. ಹೇ ಕಬ್ಜ.. ದುನಿಯಾನೇ ಮಾಡ್ಕೋ ಕಬ್ಜ.. ಎಂದು ಶುರುವಾಗುವ ಹಾಡು, ಚಿತ್ರದ ಹೀರೋ ಭೂಗತಲೋಕವನ್ನು ಆಳುವುದಕ್ಕೆ ಹೊರಟಾಗ ಬರುವ ಗೀತೆ ಇರಬೇಕು.

  ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಗ ಭೂಗತ ದೊರೆಯಾಗುವ ಕಥೆ ಚಿತ್ರದಲ್ಲಿದೆ. ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಪೊಲೀಸ್ ಆಫೀಸ್ ಪಾತ್ರದಲ್ಲಿ ಕಿಚ್ಚನ ಕರಾಮತ್ತಿದೆ. ಶ್ರೇಯಾ ಸರಣ್ ನಾಯಕಿ. ಆರ್.ಚಂದ್ರ, ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಕಬ್ಜ ಇದೇ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿದೆ. ಟೈಟಲ್ ಟ್ರ್ಯಾಕ್ ಹಾಡಿರುವುದು ಒಬ್ಬರಲ್ಲ. ಇದು ಗ್ರೂಪ್ ಸಾಂಗ್. ಹಲವರು ಹೇಳುವ ರೀತಿ ಇರುವ ಗ್ರೂಪ್ ಸಾಂಗಿನಲ್ಲಿ ಬಸ್ರೂರು ಗ್ಯಾಂಗ್ ಇದೆ ಎನ್ನುವುದು ವಿಶೇಷ.

  ಸಂಗೀತ, ಸಾಹಿತ್ಯವಷ್ಟೇ ಅಲ್ಲ, ಹಾಡಿನಲ್ಲೂ ಬಸ್ರೂರು ಇದ್ದಾರೆ. ರವಿ ಬಸ್ರೂರು, ವಿಜಯ್ ಬಸ್ರೂರು, ಕೃಷ್ಣ ಬಸ್ರೂರು, ಕೃಷ್ಣಮೂರ್ತಿ ಬಸ್ರೂರು, ರಾಮಕೃಷ್ಣ ಬಸ್ರೂರು, ಭಾರ್ಗವ್ ಬಸ್ರೂರು, ಪೂರ್ಣಚಂದ್ರ ಬಸ್ರೂರು, ನಿಖ್ಲಿ ಬಸ್ರೂರು... ಹೀಗೆ ಬಸ್ರೂರು ಗ್ಯಾಂಗ್ ಜೊತೆ ಚೇತನ್ ಹಂದಟ್ಟು, ನಾಗಪ್ರಕಾಶ್ ಕೋಟಾ, ಉಮೇಶ್ ಕಾರ್ಕಡ, ನಂದು ಜೆಕೆಎಲ್‍ಎಫ್, ಡಿಜೆ ರಾಜು ಕೂಡಾ ಹಾಡಿದ್ದಾರೆ. ಅವರೆಲ್ಲರ ಟೋಟಲ್ ಸಾಂಗ್ ಕಬ್ಜ ಟ್ರ್ಯಾಕ್.

 • ಬಾಲಿವುಡ್ ಕಣ್ಣೀಗ ಕಬ್ಜ ಮೇಲೆ..

  ಬಾಲಿವುಡ್ ಕಣ್ಣೀಗ ಕಬ್ಜ ಮೇಲೆ..

  ಕೆಜಿಎಫ್. ವಿಕ್ರಾಂತ್ ರೋಣ. 777 ಚಾರ್ಲಿ. ಈಗ ಕಾಂತಾರ. ಬೆನ್ನು ಬೆನ್ನಿಗೇ ಕನ್ನಡದ ಚಿತ್ರಗಳು ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಕಣ್ಣೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಬಿದ್ದಿದೆ. ಬಾಲಿವುಡ್ನ ಕಣ್ಣು ಬಿದ್ದಿರೋ ಚಿತ್ರ ಕಬ್ಜ. ಆರ್. ಚಂದ್ರು ನಿರ್ದೇಶನದ ಕಬ್ಜ ಕೇವಲ ಕನ್ನಡದಲ್ಲಿ ಅಲ್ಲ, 8 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಟೀಸರ್ ಕೂಡಾ ಬಂದಿದ್ದು ಸಂಚಲನವನ್ನೇ ಸೃಷ್ಟಿಸಿದೆ.

  ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಸರಣ್ ಸೇರಿದಂತೆ ಸ್ಟಾರ್ ನಟ ನಟಿಯರೇ ನಟಿಸಿದ್ದಾರೆ. ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲ, ಬೇರೆ ಚಿತ್ರರಂಗಗಳು ಸಹ ಈ ಚಿತ್ರವನ್ನು ಎದುರು ನೋಡುತ್ತಿದ್ದು, ಇತ್ತೀಚೆಗೆ ಇದೇ ವಿಚಾರವಾಗಿ ಬಾಲಿವುಡ್ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಬಿಡುಗಡೆ ದಿನಾಂಕಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಚಿತ್ರತಂಡದವರು ಇನ್ನಷ್ಟೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

  ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. ಕೆಜಿಎಫ್ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

 • ಭಾರ್ಗವ್ ಭಕ್ಷಿ ಸುದೀಪ್

  ಭಾರ್ಗವ್ ಭಕ್ಷಿ ಸುದೀಪ್

  ಪಾತ್ರ ಚೆನ್ನಾಗಿದೆ, ಅಭಿನಯಕ್ಕೆ ಸ್ಕೋಪ್ ಇದೆ, ಎಕ್ಸ್‍ಪೆರಿಮೆಂಟ್ ಮಾಡೋಕೆ ಅವಕಾಶವಿದೆ.. ಎನಿಸಿದರೆ ಹೀರೋನಾ..? ವಿಲನ್ನಾ..? ಪೋಷಕ ಪಾತ್ರನಾ ಅನ್ನೋದನ್ನೂ ನೋಡದೆ ಯೆಸ್ ಎನ್ನುವ ಕಿಚ್ಚ ಸುದೀಪ್, ಈ ಬಾರಿ ಭಾರ್ಗವ್ ಭಕ್ಷಿ ಆಗುತ್ತಿದ್ದಾರೆ. ಅದು ಕಬ್ಜ ಚಿತ್ರದಲ್ಲಿ. ಈ ಚಿತ್ರಕ್ಕೆ ಹೀರೋ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು. ಒಟ್ಟು 7 ಭಾಷೆಗಳಲ್ಲಿ ಬರುತ್ತಿರುವ ಸಿನಿಮಾಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

  ಸುದೀಪ್ ಪಾತ್ರ ಏನು..? ಹೀರೋನಾ..? ವಿಲನ್ನಾ..? ಹೇಗಿರುತ್ತೆ ಪಾತ್ರ ಅನ್ನೋದನ್ನು ತೆರೆಯ ಮೇಲೇ ನೋಡಿ ಎಂದಿದ್ದಾರೆ ಚಂದ್ರು.

  ಆರ್.ಚಂದ್ರು ಅವರ ಕಥೆ, ತಮ್ಮ ಪಾತ್ರದ ನರೇಷನ್ ಹಾಗೂ ಚಂದ್ರು ಅವರ ಕಬ್ಜ ಮೇಕಿಂಗ್ ನೋಡಿಯೇ ಪಾತ್ರಕ್ಕೆ ಓಕೆ ಎಂದಿದ್ದಾರಂತೆ ಸುದೀಪ್.

 • ಮಿನರ್ವ ಮಿಲ್ ಈಗ ಕಂಪ್ಲೀಟ್ ಕಬ್ಜಾ

  ಮಿನರ್ವ ಮಿಲ್ ಈಗ ಕಂಪ್ಲೀಟ್ ಕಬ್ಜಾ

  ಅಲ್ಲಿ ನೋಡಿದರೆ ಮುಂಬೈ ಗಲ್ಲಿ.. ಇಲ್ಲಿ ನೋಡಿದರೆ ಅದ್ಯಾವುದೋ ಬೀದಿ.. ಅತ್ತ ಕಡೆ ಜೈಲು.. ಇತ್ತ ಕಡೆ ಸೆಲ್ಲು.. ಮಧ್ಯದಲ್ಲೊಂದು ಮೈದಾನ.. ಅಲ್ಲೆಲ್ಲೋ ಒಂದು ದೇವಸ್ಥಾನ.. 80ರ ದಶಕದ ಡಿಸೈನ್ ಡಿಸೈನ್ ಕಾರುಗಳು... ಬಿಡುವೇ ಇಲ್ಲದೆ ದುಡಿಯುತ್ತಿರೋ 300ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರು...

  ಇದೆಲ್ಲವೂ ಕಾಣ್ತಿರೋದು ಮಿನರ್ವ ಮಿಲ್‍ನಲ್ಲಿ. ಉಪೇಂದ್ರ, ಸುದೀಪ್ ಒಟ್ಟಿಗೇ ನಟಿಸುತ್ತಿರುವ ಈ ಚಿತ್ರಕ್ಕೀಗ ಆರ್.ಚಂದ್ರು 40ಕ್ಕೂ ಹೆಚ್ಚು ಸೆಟ್‍ಗಳನ್ನ ಹಾಕಿಸ್ತಿದ್ದಾರೆ.

  ಕೆಜಿಎಫ್ ಸಿನಿಮಾಗೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ್ದ ಶಿವಕುಮಾರ್, ಇಲ್ಲಿ ಅದಕ್ಕಿಂತ ಭಿನ್ನವಾಗಿ ಕಲರ್ ಫುಲ್ ಸೆಟ್ ಹಾಕಿದ್ದಾರೆ.

  ಪ್ಯಾನ್ ಇಂಡಿಯಾ ಸಿನಿಮಾಗೆ ಇಷ್ಟು ದೊಡ್ಡ ಬಜೆಟ್, ಅದ್ಧೂರಿತನ ಬೇಕೇ ಬೇಕು. ಇಲ್ಲಿಯೇ ಸುಮಾರು 80 ದಿನ ಶೂಟಿಂಗ್ ನಡೆಯುತ್ತೆ. ಒಟ್ಟಾರೆ 40 ಸೆಟ್ ಹಾಕಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು.