` kabza, - chitraloka.com | Kannada Movie News, Reviews | Image

kabza,

 • ಉಪ್ಪಿ ಕಬ್ಜಕ್ಕೆ ಆರ್‌ಎಫ್‌ಸಿಯಲ್ಲಿ ಸೆಟ್ ರೆಡಿ

  elaborate set for kabza

  ಉಪೇಂದ್ರ ನಟಿಸುತ್ತಿರುವ ಕಬ್ಜ ಸಿನಿಮಾಗೆ ನಿರ್ದೇಶಕ ಆರ್.ಚಂದ್ರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರ್ಜರಿ ಸೆಟ್ ಹಾಕಿಸುತ್ತಿದ್ದಾರೆ. ಭೂಗತ ಜಗತ್ತಿನ ಚಟುವಟಿಕೆಗಳು ನಡೆಯುವಂತಹ ತಾಣದ ಸೆಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಚಂದ್ರು. ಉಪೇಂದ್ರ ೭ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದೇ ತೆಲುಗಿನಲ್ಲಿ ಭಾರಿ ಸುದ್ದಿಯಾಗಿದೆಯಂತೆ.

  ಉಪೇAದ್ರ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಅವರು ವಾಪಸ್ ಬಂದ ಕೂಡಲೇ ಚಿತ್ರೀಕರಣ ಶುರುವಾಗಲಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಫೈನಲ್ ಹಂತದಲ್ಲಿದೆ ಎಂದಿರುವ ಚಂದ್ರು, ಖುದ್ದು ಹೈದರಾಬಾದ್‌ನಲ್ಲಿಯೇ ಇದ್ದುಕೊಂಡು ಸೆಟ್ ನಿರ್ಮಾಣದಲ್ಲಿ ಮುಳುಗಿದ್ದಾರೆ.

 • ಉಪ್ಪಿ ಕೈಯಲ್ಲಿ ಅಣ್ಣಾವ್ರ ಗನ್

  upendra gets dr rajkumar and amitab bachchan;s gun

  ರಿಯಲ್ ಸ್ಟಾರ್ ಉಪೇಂದ್ರ ಅಭಿನದಯ ಕಬ್ಜಾ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಆರ್.ಚಂದ್ರು ನಿರ್ದೇಶನದ ಕಬ್ಜಾದಲ್ಲಿ ಸ್ವತಃ ಉಪ್ಪಿಯೇ ಥ್ರಿಲ್ಲಾಗುವಂತಾ ಘಟನೆ ನಡೆದಿದೆ. ಏಕೆಂದರೆ ಅವರಿಗೆ ಅಲ್ಲಿ ಅಣ್ಣಾವ್ರು ಬಳಸಿದ್ದ ಗನ್ ಸಿಕ್ಕಿದೆ.

  1973ರಲ್ಲಿ ಡಾ.ರಾಜ್ ನಟಿಸಿದ್ದ ಗಂಧದ ಗುಡಿಯಲ್ಲಿ ಇದೇ ಪಿಸ್ತೂಲ್ ಬಳಸಲಾಗಿತ್ತಂತೆ. 1975ರ ಶೋಲೆಯಲ್ಲೂ ಇಂಥದ್ದೇ ಗನ್ ಬಳಸಿದ್ದರಂತೆ. ಈಗ ಅಂತಹ ಗನ್ ಉಪ್ಪಿ ಕೈಗೆ ಸಿಕ್ಕಿದೆ.

  ಅದೊಂದು ರೋಮಾಂಚನ ಎಂದು ಥ್ರಿಲ್ಲಾಗಿದ್ದಾರೆ ಉಪೇಂದ್ರ.

 • ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಹಬ್ಬ

  ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಹಬ್ಬ

  ಉಪೇಂದ್ರ ನಟಿಸುತ್ತಿರುವ ಬಹುಭಾಷಾ ಸಿನಿಮಾ ಕಬ್ಜ. ಉಪೇಂದ್ರ ಜೊತೆ ಸುದೀಪ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ಶ್ರಿಯಾ ಸರಣ್ ನಾಯಕಿಯಾಗಿರೋ ಚಿತ್ರದಲ್ಲಿ ಡ್ಯಾನಿಷ್ ಅಖ್ತರ್ ಸೈಫಿ, ನವಾಬ್ ಷಾ, ಕಬೀರ್ ಸಿಂಗ್ ದುಲ್ಹಾನ್, ಪೊಸಾನಿ ಮುರಳಿ ಕೃಷ್ಣ, ಮುರಳೀಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಈ ಚಿತ್ರದ ಟೀಸರ್ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಸೆಪ್ಟೆಂಬರ್ 18ರಂದು ಉಪ್ಪಿ ಹುಟ್ಟುಹಬ್ಬ. ಅದಕ್ಕೆ ಮುನ್ನ ಸೆ.17ರಂದು ಕಬ್ಜ ಟೀಸರ್ ಬಿಡುಗಡೆಯಾಗಲಿದೆ.

  ಕೆಜಿಎಫ್ ಯಶಸ್ಸು ಸಿನಿಮಾ ಮೇಕರ್‍ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಸಿನಿಮಾದ ಬಜೆಟ್ ಮತ್ತು ಕ್ಯಾನ್ವಾಸ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಆರ್.ಚಂದ್ರು. ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಚಿತ್ರಕ್ಕೆ ಆರ್.ಚಂದ್ರು ಅವರೇ ನಿರ್ಮಾಪಕ.

 • ಉಪ್ಪಿ-ಚಂದ್ರು ಕಾಂಬಿನೇಷನ್ ಕಬ್ಜಾ 7 ಭಾಷೆಯಲ್ಲಿ ರಿಲೀಸ್

  upendra r chandru's movie in 7 languages

  ಐ ಲವ್ ಯು ಚಿತ್ರದ ಭರ್ಜರಿ ಸಕ್ಸಸ್ ನಂತರ ಆರ್.ಚಂದ್ರು ಮತ್ತು ಉಪೇಂದ್ರ ಮತ್ತೊಮ್ಮೆ ಒಂದಾಗಿದ್ದಾರೆ. ಹೊಸ ಚಿತ್ರದ ಟೈಟಲ್ ಕಬ್ಜಾ. ಅನುಮಾನವೇ ಇಲ್ಲ, ಇದೊಂದು ರೌಡಿಸಂ ಸ್ಟೋರಿ. ಚಂದ್ರು ಅವರ ಬ್ಯಾನರಿನಲ್ಲೇ ಕಬ್ಜಾ ನಿರ್ಮಾಣವಾಗಲಿದೆ.

  `ಇದು ರೌಡಿಸಂ ಚಿತ್ರವಾದರೂ ಎಲ್ಲ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಸ್ಟೋರಿ ಇದೆ. ಉಪೇಂದ್ರ ಬೇರೆಯದೇ ರೀತಿಯಲ್ಲಿ ಮಿಂಚಲಿದ್ದಾರೆ' ಎಂದು ಭರವಸೆ ಕೊಟ್ಟಿದ್ದಾರೆ ಚಂದ್ರು.

  ವಿಶೇಷವೆಂದರೆ ಐ ಲವ್ ಯು ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಮಾಡಿದ್ದ ಚಂದ್ರು, ಕಬ್ಜಾ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ. ಹಿಂದಿ, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ಅಂದರೆ ಒಟ್ಟು 7 ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದಾರೆ. 

 • ಉಪ್ಪಿಯ ಕಬ್ಜಕ್ಕೊಂದು ವೆಬ್‍ಸೈಟ್

  uppi's kabza gets a website

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಕಬ್ಜ ಚಿತ್ರಕ್ಕೆ ಪ್ರತ್ಯೇಕ ವೆಬ್‍ಸೈಟ್ ಲಾಂಚ್ ಮಾಡಲಾಗಿದೆ. ಈ ವೆಬ್‍ಸೈಟ್‍ನ್ನು ಉಪ್ಪಿ ಅವರ ಆಪ್ತಮಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಉದ್ಘಾಟಿಸಿದ್ದು ವಿಶೇಷ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ನಂತರ ತಮಿಳು, ಮಲಯಾಳಂ, ಮರಾಠಿ, ಹಿಂದಿ ಮತ್ತು ಒರಿಯಾ ಭಾಷೆಗಳಲ್ಲಿ ಡಬ್ ಆಗಲಿದೆ. ಒಟ್ಟು 7 ಭಾಷೆಗಳಲ್ಲಿ ಬರುತ್ತಿರೋ ಚಿತ್ರವಿದು.

  ಶಾಸಕ ಎಂಟಿಬಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಕಾಶ್ ರೈ, ಜಗಪತಿ ಬಾಬು, ಕೋಟಾ ಶ್ರೀನಿವಾಸ ರಾವ್, ಬೊಮನ್ ಇರಾನಿ, ಕಬೀರ್ ಸಿಂಗ್ ದುಹಾನ್ ಮೊದಲಾದವರು ನಟಿಸಿರುವ ಚಿತ್ರವಿದು.

 • ಉಪ್ಪಿಯ ಬಲಗೈ ಬಂಟ ಯಾರು ಗೊತ್ತಾ?

  ಉಪ್ಪಿಯ ಬಲಗೈ ಬಂಟ ಯಾರು ಗೊತ್ತಾ?

  ಕಬ್ಜ ಇನ್ನೇನು ರಿಲೀಸ್ ಆಗುತ್ತಿದೆ. ಅದು ತ್ರಿಮೂರ್ತಿಗಳ ಸಿನಿಮಾ. ಉಪೇಂದ್ರ, ಸುದೀಪ್ ಮತ್ತು ಶಿವಣ್ಣ ಮೂವರೂ ನಟಿಸಿರೋ ಚಿತ್ರದಲ್ಲಿ ಇನ್ನೂ ಒಬ್ಬ ನಾಯಕ ಇದ್ದಾರೆ. ಅನೂಪ್ ರೇವಣ್ಣ. 2016ರಲ್ಲಿ ಲಕ್ಷ್ಮಣ ಅನ್ನೋ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರೇವಣ್ಣ, ಮೊದಲ ಚಿತ್ರದಲ್ಲಿಯೇ ಭರವಸೆ ಹುಟ್ಟಿಸಿದ್ದರು. ಅದಾದ ಮೇಲೆ ನಾ ಪಂಟ ಕಣೋ.. ಅನ್ನೋ ಇನ್ನೊಂದು ಚಿತ್ರದಲ್ಲೂ ನಟಿಸಿದ್ದ ಅನೂಪ್ ರೇವಣ್ಣ ಇದೀಗ ಕಬ್ಜದಲ್ಲೂ ನಟಿಸಿದ್ದಾರೆ. ಅಂದಹಾಗೆ ಅನೂಪ್ ರೇವಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಸ್ವತಃ ಆರ್.ಚಂದ್ರು ಅನ್ನೋದು ಇನ್ನೊಂದು ವಿಶೇಷ.

  ಈ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರ. ಮಾತು ಕಡಿಮೆ. ಆಕ್ಷನ್ ಜಾಸ್ತಿ. ಕೈ ಮುಂದು ಮಾಡುವುದೇ ನನ್ನ ಕೆಲಸ. ನನ್ನ ಪಾತ್ರದ ಹೆಸರು ಟಾರ್ಗೆಟ್. ಉಪ್ಪಿ ಪಾತ್ರಕ್ಕೆ ಬಲಗೈ ಬಂಟನಂತಿರುವ ಪಾತ್ರ ನನ್ನದು.. ಎಂದು ಹೇಳ್ತಾರೆ ಅನೂಪ್ ರೇವಣ್ಣ. ಉಳಿದಂತೆ ಚಿತ್ರ ಮತ್ತು ಪಾತ್ರದ ಬಗ್ಗೆ ಏನು ಹೇಳಬೇಕೆಂದರೂ ನೀವು ಚಂದ್ರು ಸರ್ ಅವರನ್ನೇ ಕೇಳಬೇಕು ಅನ್ನೋ ಅನೂಪ್ ರೇವಣ್ಣ ಕಬ್ಜ ಚಿತ್ರದ ಖುಷಿಯಾಗಿದ್ದಾರೆ. ಕಬ್ಜ, ಚಂದ್ರು ಅವರ ದೊಡ್ಡ ಕನಸು. ಅದ್ಭುತವಾಗಿ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿಯೇ ಅದನ್ನು ನೋಡುತ್ತೀರಿ. ನಾನೂ ಪ್ರೇಕ್ಷಕರ ಜೊತೆ ಸಿನಿಮಾ ನೋಡೋಕೆ ಕಾಯುತ್ತಿದ್ದೇನೆ ಎನ್ನುವುದು ಅನೂಪ್ ರೇವಣ್ಣ ಅವರ ಮಾತು.

 • ಎಲ್ಲ 7 ಭಾಷೆಗಳಲ್ಲಿ ಕಬ್ಜ ಡಬ್ಬಿಂಗ್ ಶುರು : ಇನ್ನೆರಡು ಭಾಷೆಗೂ ರೆಡಿ

  ಎಲ್ಲ 7 ಭಾಷೆಗಳಲ್ಲಿ ಕಬ್ಜ ಡಬ್ಬಿಂಗ್ ಶುರು : ಇನ್ನೆರಡು ಭಾಷೆಗೂ ರೆಡಿ

  ಕಬ್ಜ. ಉಪೇಂದ್ರ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ ಬಹುಭಾಷಾ ಚಿತ್ರ. ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ಸಿದ್ಧವಾಗುತ್ತಿರೋದು ಐದಲ್ಲ, 7 ಭಾಷೆಗಳಲ್ಲಿ. ರೆಗ್ಯುಲರ್ ಆಗಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯ ಜೊತೆಗೆ ಒಡಿಯಾ ಹಾಗೂ ಬೆಂಗಾಳಿ ಭಾಷೆಗೂ ಸಿನಿಮಾ ಡಬ್ ಆಗುತ್ತಿದೆ. ಆರ್.ಚಂದ್ರು ನಿರ್ದೇಶನದ ಕಬ್ಜ ಚಿತ್ರದ ವಿಶೇಷಗಳು ಇಷ್ಟಕ್ಕೇ ನಿಲ್ಲೋದಿಲ್ಲ.

  ಚಂದ್ರು ತಮ್ಮ ಚಿತ್ರದ ಡಬ್ಬಿಂಗ್ ನಿರ್ವಹಣೆ ಹೊಣೆಯನ್ನು ಚಿಕ್ಕಬಳ್ಳಾಪುರ ವರದರಾಜ್ ಅವರಿಗೆ ವಹಿಸಿದ್ದಾರೆ. ಮಗಧೀರ, ಆರ್.ಆರ್.ಆರ್. ಪುಷ್ಪ, ಬೀಸ್ಟ್, ಮಾಸ್ಟರ್, ವಿಕ್ರಂ.. ಹೀಗೆ ಹಲವು ಚಿತ್ರಗಳ ಡಬ್ಬಿಂಗ್‍ನ್ನು ಯಶಸ್ವಿಯಾಗಿ ನಿರ್ವಹಿಸಿರುವ ವ್ಯಕ್ತಿ ವರದರಾಜ್.

  ಈ ಚಾಲೆಂಜಿಂಗ್ ರೋಲ್‍ನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಸುಮಾರು 300 ಡಬ್ಬಿಂಗ್ ಆರ್ಟಿಸ್ಟ್‍ಗಳು ಡಬ್ಬಿಂಗ್ ಮಾಡುತ್ತಿದ್ದಾರೆ. ಎಲ್ಲ ಮುಗಿಯೋಕೆ 2 ತಿಂಗಳಾದರೂ ಬೇಕು ಎಂದಿದ್ದಾರೆ ವರದರಾಜ್. ಅಂದಹಾಗೆ ಈ 7 ಭಾಷೆಗಳಲ್ಲದೆ ಚೈನೀಸ್ ಹಾಗೂ ಜಪಾನಿಸ್ ಭಾಷೆಗಳಲ್ಲೂ ಸಿನಿಮಾ ಡಬ್ ಮಾಡುತ್ತಿದ್ದಾರಂತೆ. ಅವುಗಳಿಗೆ ಡೈಲಾಗ್ ರೆಡಿಯಾಗಿದೆ. ಅದೂ ಕೂಡಾ ಶೀಘ್ರದಲ್ಲೇ ಶುರುವಾಗಲಿದೆ.

  ಆರ್.ಚಂದ್ರು ನಿರ್ದೇಶನದ ಚಿತ್ರದಲ್ಲಿ ಉಪ್ಪಿ, ಕಿಚ್ಚನ ಜೊತೆಗೆ  ಶ್ರೇಯಾ ಸರಣ್, ಜಗಪತಿ ಬಾಬು, ರಾಹುಲ್ ದೇವ್, ಅನೂಪ್ ರೇವಣ್ಣ, ಕಬೀರ್ ದುರ್ಹಾನ್ ಸಿಂಗ್, ಜಯಪ್ರಕಾಶ್.. ಹೀಗೆ ಬೃಹತ್ ತಾರಾಗಣವೇ ಇದೆ.

 • ಐಎಂಡಿಬಿ 2023ರ ಬಹುನಿರೀಕ್ಷಿತ ಸಿನಿಮಾ : ಕನ್ನಡಕ್ಕೆ ಒಂದೇ ಸಿನಿಮಾ

  ಐಎಂಡಿಬಿ 2023ರ ಬಹುನಿರೀಕ್ಷಿತ ಸಿನಿಮಾ : ಕನ್ನಡಕ್ಕೆ ಒಂದೇ ಸಿನಿಮಾ

  ಐಎಂಡಿಬಿ ರೇಟಿಂಗ್‍ನಲ್ಲಿ ಕಳೆದ ವರ್ಷ ಟಾಪ್ 10ನಲ್ಲಿ ಕನ್ನಡದ್ದೇ ಮೂರು ಚಿತ್ರಗಳಿದ್ದವು. ಕೆಜಿಎಫ್, ಕಾಂತಾರ  ಹಾಗೂ 777 ಚಾರ್ಲಿ ಚಿತ್ರಗಳು ಐಎಂಡಿಬಿ ಟಾಪ್ ರೇಟಿಂಗ್‍ನಲ್ಲಿದ್ದವು. ಐಎಂಡಿಬಿ ಈ ವರ್ಷದ ಟಾಪ್ ನಿರೀಕ್ಷಿತ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆ ಲಿಸ್ಟಿನಲ್ಲಿ ಸ್ಥಾನ ಪಡೆದಿರುವ ಚಿತ್ರಗಳಲ್ಲಿ ಕನ್ನಡದ್ದು ಎಂದು ಇರುವುದು ಒಂದೇ ಒಂದು ಸಿನಿಮಾ.

  ಮೊದಲ ಸ್ಥಾನದಲ್ಲಿರೋದು ಇದೇ ತಿಂಗಳು ರಿಲೀಸ್ ಆಗುತ್ತಿರುವ ಶಾರೂಕ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್.

  2ನೇ ಸ್ಥಾನದಲ್ಲಿ ತೆಲುಗಿನ ಚಿತ್ರ ಪುಷ್ಪ 2 ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ.

  3ನೇ ಸ್ಥಾನದಲ್ಲಿ ಜವಾನ್, 4ನೇ ಸ್ಥಾನದಲ್ಲಿ ಆದಿಪುರುಷ್ ಇದ್ದರೆ, 5ನೇ ಸ್ಥಾನದಲ್ಲಿ ಪ್ರಶಾಂತ್ ನೀಲ್-ಪ್ರಭಾಸ್-ಹೊಂಬಾಳೆ ಜೋಡಿಯ ಸಲಾರ್ ಇದೆ. ಇದೇ ವಾರ ರಿಲೀಸ್ ಆಗುತ್ತಿರುವ ವಾರಿಸು, ದಳಪತಿ 67, ದಿ ಆರ್ಚಿಸ್, ಡಂಕಿ, ಟೈಗರ್ 3, ಕಿಸಿ ಕಾ ಭಾಯ್ ಕಿಸೀ ಕಾ ಜಾನ್, ಅನಿಮಲ್ ಏಜೆಂಟ್, ಇಂಡಿಯನ್ 2, ಶೆಹಜಾದೆ, ಬಡೇ ಮಿಯಾ ಚೋಟೇ ಮಿಯಾ ಹಾಗೂ ಭೋಲಾ ಚಿತ್ರಗಳಿವೆ.

  ಈ ಲಿಸ್ಟಿನಲ್ಲಿ 7ನೇ ಸ್ಥಾನದಲ್ಲಿರೋ ಚಿತ್ರ ಆರ್.ಚಂದ್ರು ನಿರ್ದೇಶನದ ಉಪೇಂದ್ರ-ಸುದೀಪ್ ಕಾಂಬಿನೇಷನ್ನಿನ ಕಬ್ಜ.

  ಲಿಸ್ಟಿನಲ್ಲಿ ಶಾರೂಕ್`ರ 3 ಸಿನಿಮಾ ಪಠಾಣ್, ಜವಾನ್ ಮತ್ತು ಡಂಕಿ ಹಾಗೂ ಶಾರೂಕ್ ಮಗಳು ಸುಹಾನಾ ಖಾನ್ ನಟಿಸಿರುವ ದಿ ಆರ್ಚಿಸ್ ಚಿತ್ರಗಳಿವೆ. ಸಲ್ಮಾನ್ ಖಾನ್`ರ 2 ಚಿತ್ರಗಳಿವೆ. ಕಾರ್ತಿಕ್ ಆರ್ಯನ್`ರ ಶೆಹಜಾದೆ, ತೆಲುಗಿನ ಅಲಾ ವೈಕುಂಠಪುರಂಲೋ ಚಿತ್ರದ ರೀಮೇಕ್. ಭೋಲಾ ಚಿತ್ರಕ್ಕೆ ಅಜಯ್ ದೇವಗನ್ ಹೀರೋ. ಅದು ತಮಿಳಿನ ಖೈದಿ ಚಿತ್ರದ ರೀಮೇಕ್.

  ಕಳೆದ ವರ್ಷವೂ ಕೂಡಾ ಕನ್ನಡದ ಚಿತ್ರಗಳು ಲಿಸ್ಟಿನಲ್ಲಿರಲಿಲ್ಲ. ಕೆಜಿಎಫ್ ಹಾಗೂ ಆರ್.ಆರ್.ಆರ್. ಬಿಟ್ಟರೆ ದಕ್ಷಿಣದ ಚಿತ್ರಗಳನ್ನು ಲಿಸ್ಟಿನಲ್ಲೇ ಇಟ್ಟಿರಲಿಲ್ಲ ಐಎಂಡಿಬಿ. ಬಾಲಿವುಡ್ ಚಿತ್ರಗಳೇ ಮೇಲುಗೈ ಸಾಧಿಸಿದ್ದವು. ವರ್ಷದ ಕೊನೆಗೆ ಐಎಂಡಿಬಿ ಲಿಸ್ಟಿನಲ್ಲಿಯೂ ಇದ್ದು, ಪ್ರೇಕ್ಷಕರನ್ನೂ ಆಕರ್ಷಿಸಿದ ಚಿತ್ರಗಳು ಕೆಜಿಎಫ್ ಮತ್ತು ಆರ್.ಆರ್.ಆರ್. ಮಾತ್ರ. ಈ  ವರ್ಷವೂ ದಕ್ಷಿಣದ ಚಿತ್ರಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗದ್ದು.

 • ಕನ್ನಡಕ್ಕಿಂತ ಮೊದಲೇ ಹೈದರಾಬಾದ್`ನಲ್ಲಿ ಕಬ್ಜ ಹವಾ

  ಕನ್ನಡಕ್ಕಿಂತ ಮೊದಲೇ ಹೈದರಾಬಾದ್`ನಲ್ಲಿ ಕಬ್ಜ ಹವಾ

  ಕಬ್ಜ. ಚಿತ್ರದಲ್ಲಿರೋ ಮೂವರು ಸ್ಟಾರ್ಸ್ ಕನ್ನಡಿಗರ ಹೃದಯ ಸಾಮ್ರಾಟರು. ಸುದೀಪ್, ಉಪೇಂದ್ರ ಹಾಗೂ ಶಿವಣ್ಣ ಮೂವರೂ ಕರ್ನಾಟಕದ ಸೂಪರ್ ಸ್ಟಾರ್ಸ್. ಸುದೀಪ್ ಮತ್ತು ಉಪೇಂದ್ರ ತೆಲುಗು, ತಮಿಳಿನಲ್ಲಿಯೂ ಗೊತ್ತಿದೆಯಾದರೂ, ಕರ್ನಾಟಕದ ಪ್ರೀತಿಯ ಖದರೇ ಬೇರೆ. ಚಿತ್ರದಲ್ಲಿ ಬೇರೆ ಬೇರೆ ಭಾಷೆಯ ಖ್ಯಾತ ನಟ ನಟಿಯರು ನಟಿಸಿದ್ದಾರೆ. ಹಲವು ಭಾಷೆಗಳಲ್ಲಿ ರಿಲೀಸ ಆಗುತ್ತಿರೋ ಕಬ್ಜ ಚಿತ್ರದ ಮೂಲ ಕರ್ನಾಟಕ. ಆದರೆ ಕಬ್ಜ ಚಿತ್ರದ ಮೊದಲ ಹವಾ ಏಳುತ್ತಿರೋದು ಕರ್ನಾಟಕದಲ್ಲಿ ಅಲ್ಲ.

  ಮಾರ್ಚ್ 17 ರಂದು ಬಿಡುಗಡೆ ಆಗಲಿರುವ ಕಬ್ಜ ಸಿನಿಮಾದ ಆನ್ಲೈನ್ ಟಿಕೆಟ್ ಬುಕಿಂಗ್ ಏಳು ದಿನಗಳ ಮುಂಚೆಯೇ ಆರಂಭವಾಗಿದೆಯಾದರೂ, ಅಭಿಮಾನಿಗಳು ಸಹ ಮೊದಲ ದಿನ, ಮೊದಲ ಶೋ ನೋಡಲು ಕಾತರರಾಗಿದ್ದರೂ ಅದು ಸಾಧ್ಯವಾಗಿರುವುದು ಬೆಂಗಳೂರಿನಲ್ಲ. ಈಗಾಗಲೇ ಟಿಕೆಟ್ ಆನ್ಲೈನ್ ಬುಕಿಂಗ್ ಆರಂಭವಾಗಿದೆ ಆದರೆ ಬೆಂಗಳೂರಿಗರು ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಇನ್ನೂ ತುಸು ಕಾಯಬೇಕಾಗಿದೆ. ಬೆಂಗಳೂರಿಗಿಂತಲೂ ಮೊದಲು ಹೈದರಾಬಾದ್ನಲ್ಲಿ ಕಬ್ಜ ಸಿನಿಮಾಕ್ಕೆ ಆನ್ಲೈನ್ ಟಿಕೆಟ್ ಬುಕಿಂಗ್ ತೆರೆಯಲಾಗಿದೆ.

  ಹೈದರಾಬಾದ್ನ ಕುಕಟ್ಪಲ್ಲಿ ಏರಿಯಾದ ವಿಶ್ವನಾಥ ಹೆಸರಿನ ಚಿತ್ರಮಂದಿರದಲ್ಲಿ ಕಬ್ಜ ಸಿನಿಮಾದ ಆನ್ಲೈನ್ ಬುಕಿಂಗ್ ತೆರೆಯಲಾಗಿದೆ. ಸದ್ಯಕ್ಕೆ ಹೈದರಾಬಾದ್ನ ಈ ಒಂದು ಚಿತ್ರಮಂದಿರದಲ್ಲಿ ಮಾತ್ರವೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇನ್ನೆರಡು ದಿನಗಳಲ್ಲಿ ಆನ್ಲೈನ್ ಟಿಕೆಟ್ ಬುಕಿಂಗ್ ಓಪನ್ ಆಗುವ ನಿರೀಕ್ಷೆ ಇದೆ.

  ತೆಲುಗಿನಲ್ಲಿ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ಕಬ್ಜ ಸಿನಿಮಾದ ತೆಲುಗು ಆವೃತ್ತಿಯನ್ನು ರಿಲೀಸ್ ಮಾಡುತ್ತಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಉಪೇಂದ್ರ ಹಾಗೂ ಸುದೀಪ್ ಅವರಿಗೆ ದೊಡ್ಡ ಫ್ಯಾನ್ಸ್ ಬೇಸ್ ಇದೆ. ಶ್ರೇಯಾ ಬಗ್ಗೆ ಕ್ರೇಜ್ ಇದೆ. ಹಾಗಾಗಿ ಕಬ್ಜ ಸಿನಿಮಾ ತೆಲುಗು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

  ತಮಿಳುನಾಡಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ, ಕನ್ನಡದ ಕಬ್ಜ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಆರ್ಆರ್ಆರ್, ಪುಷ್ಪ, ಸೀತಾ ರಾಮಂ  ಸಿನಿಮಾಗಳನ್ನು ವಿತರಣೆ ಮಾಡಿರುವ ಜೊತೆಗೆ, ರಜನೀಕಾಂತ್, ವಿಕ್ರಂ, ಸೂರ್ಯ, ಚಿರಂಜೀವಿ, ಧನುಶ್, ವಿಜಯ್, ಅಕ್ಷಯ್ ಕುಮಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹಿರಿಮೆ ಈ ಸಂಸ್ಥೆಗಿದೆ.

  ಹಿಂದಿಯಲ್ಲಿ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ಅವರು ಸಿನಿಮಾದ ವಿತರಣೆ ಮಾಡಲಿದ್ದಾರೆ. ಮುಂಬೈನಲ್ಲಿ ಚಿತ್ರತಂಡದ ಜೊತೆ ಸತತವಾಗಿ ಪ್ರಚಾರ ಮಾಡಿದ್ದಾರೆ ಆನಂದ್ ಪಂಡಿತ್.

  ಕೇರಳದಲ್ಲಿ ಎಲ್ಜಿಎಫ್ ಹೆಸರಿನ ವಿತರಣಾ ಸಂಸ್ಥೆ ಕಬ್ಜ ಸಿನಿಮಾ ವಿತರಿಸುತ್ತಿದೆ. ಈ ಹಿಂದೆ ಕೆಜಿಎಫ್ 2, 777 ಚಾರ್ಲಿ, ಕಾಂತಾರ ಸಿನಿಮಾಗಳು ಕೇರಳದಲ್ಲಿ ಚೆನ್ನಾಗಿ ಪ್ರದರ್ಶನ ಕಂಡಿದ್ದವಾದ್ದರಿಂದ ಈ ಸಿನಿಮಾ ಸಹ ಚೆನ್ನಾಗಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ.

 • ಕಬ್ಜ : ರಿಲೀಸ್`ಗೂ ಮುನ್ನವೇ ಭರ್ಜರಿ ಬ್ಯುಸಿನೆಸ್

  ಕಬ್ಜ : ರಿಲೀಸ್`ಗೂ ಮುನ್ನವೇ ಭರ್ಜರಿ ಬ್ಯುಸಿನೆಸ್

  ಕಬ್ಜ ಕ್ರೇಜ್ ಸಖತ್ತಾಗಿಯೇ ಇದೆ. ಮೂರ್ ಮೂರು ಸೂಪರ್ ಸ್ಟಾರ್‍ಗಳಿದ್ದ ಮೇಲೆ ಕ್ರೇಜ್ ಸೃಷ್ಟಿಯಾಗೋದು ಸಹಜ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಸೆಂಚುರಿ ಸ್ಟಾರ್ ಶಿವಣ್ಣ, ಈ ಮೂವರ ಜೊತೆ ಶ್ರೇಯಾ ಸರಣ್. ಜೊತೆಗೆ ಅದ್ಭುತ ಮೇಕಿಂಗ್.. ಟ್ರೆಂಡ್ ಸೃಷ್ಟಿಸೋ ಸಾಂಗುಗಳು.. ಇವೆಲ್ಲವೂ ಇದ್ದ ಕಾರಣಕ್ಕೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗೆ ಸಿಕ್ಕಿದ್ದು ಪ್ರೇಕ್ಷಕರು ಮತ್ತು ಸೆಲಬ್ರಿಟಿಗಳ ಅದ್ಭುತ ಪ್ರತಿಕ್ರಿಯೆ.  ಕಬ್ಜ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ರಾಕೇಶ್ ರೋಷನ್, ನಟ ಮನೋಜ್ ಬಾಜಪೇಯಿ, ನಟ ಶ್ರೇಯಸ್ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್, ನಿರ್ದೇಶಕ ಮಧುರ್ ಭಂಡಾರ್ಕರ್, ಮೀರಾ ಚೋಪ್ರಾ, ಕುನಾಲ್ ಕೋಹ್ಲಿ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ 'ಕಬ್ಜ' ಟ್ರೇಲರ್ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಕಬ್ಜ' ಚಿತ್ರವನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವುದಾಗಿ ತಾರೆಯರು ತಿಳಿಸಿದ್ದಾರೆ.

  ಕಬ್ಜ ಸಿನಿಮಾ ಬಿಡುಗಡೆಗೂ ಮೊದಲೇ ಭರ್ಜರಿ ಬ್ಯುಸಿನೆಸ್ ಮಾಡಿದೆ. ಅಂದಾಜು ಪ್ರಕಾರ ಈಗಾಗಲೇ ಚಿತ್ರದ ಕಲೆಕ್ಷನ್ 100 ಕೋಟಿ ದಾಟಿ ಆಗಿದೆ.  ಸಿನಿಮಾ ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಅಡಿಯಲ್ಲಿ ಆರ್. ಚಂದ್ರು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಆನಂದ್ ಮೋಷನ್ ಪಿಕ್ಚರ್ಸ್, ಇನ್ವೀನಿಯೋ ಆರಿಜಿನ್, ರುಚಿರಾ ಎಂಟರ್ಟೈನ್ಮೆಂಟ್ಸ್ ಅಂಡ್ ಸಿನಿಮಾಸ್ ಸಂಸ್ಥೆಗಳು 'ಕಬ್ಜ' ನಿರ್ಮಾಣದಲ್ಲಿ ಕೈ ಜೋಡಿಸಿವೆ. ತಮಿಳುನಾಡಿನಾದ್ಯಂತ 'ಕಬ್ಜ' ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ಜವಾಬ್ದಾರಿಯನ್ನ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಹೊತ್ತುಕೊಂಡಿದೆ.

  ಕಬ್ಜ ಸಿನಿಮಾವನ್ನು ಒಟಿಟಿಗೆ ಅಮೇಜಾನ್ ಪ್ರೈಂ ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್ ಖರೀದಿ ಮಾಡಿರುವುದು ಕಲರ್ಸ್ ಕನ್ನಡ. ಹಿಂದಿ, ತಮಿಳು, ಮಲಯಾಳಂ, ತೆಲುಗು ರೈಟ್ಸ್‍ಗಳಿಗೂ ಸಖತ್ ಡಿಮ್ಯಾಂಡ ಇದೆ. ಈಗಾಗಲೇ ಸೇಲ್ ಆಗಿರುವ ಲೆಕ್ಕವನ್ನೇ ನೋಡೋದಾದ್ರೆ 65 ಕೋಟಿ ಕಲೆಕ್ಷನ್ ಆಗಿದೆ. ಇನ್ನೂ ಬರಬೇಕಿದೆ. ಬರಬೇಕಿರುವ ಲೆಕ್ಕವನ್ನೂ ಸೇರಿಸಿದರೆ 100 ಕೋಟಿಯ ಬಾರ್ಡರ್ ದಾಟಿ ಆಗಿದೆ. ಅಂದಹಾಗೆ ಈ ಲೆಕ್ಕದಲ್ಲಿ ಥಿಯೇಟರ್ ಶೇರ್ಸ್ ಲೆಕ್ಕಾಚಾರ ಇಲ್ಲ. ಈಗಾಗಲೇ ತಮಿಳು, ಹಿಂದಿಯ ಥಿಯೇಟರ್ ರೈಟ್ಸ್‍ನ್ನೂ ಮಾರಾಟ ಮಾಡಲಾಗಿದ್ದು, ಆ ಲೆಕ್ಕವನ್ನು ಇಲ್ಲಿ ಸೇರಿಸಿಲ್ಲ. ಕನ್ನಡದಲ್ಲಂತೂ ವಿತರಕರು ನಾ ಮುಂದು ತಾ ಮುಂದು ಎಂದು ಕಬ್ಜ ಖರೀದಿಗೆ ಮುಗಿಬಿದ್ದಿದ್ದಾರೆ.

 • ಕಬ್ಜ ಕೋಟೆಗೆ ಭಾರ್ಗವ್ ಭಕ್ಷಿ

  ಕಬ್ಜ ಕೋಟೆಗೆ ಭಾರ್ಗವ್ ಭಕ್ಷಿ

  2022ರ ಮೆಗಾ ಸಿನಿಮಾ ಆಗಲಿರುವ ಕಬ್ಜ ಚಿತ್ರದ ಚಿತ್ರೀಕರಣ ಜಬರ್‍ದಸ್ತಾಗಿ ನಡೆಯುತ್ತಿದೆ. ಆರ್. ಚಂದ್ರು, ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‍ನಲ್ಲಿ ಬರುತ್ತಿರೋ ಕಬ್ಜ ಚಿತ್ರದ ಚಿತ್ರೀಕರಣಕ್ಕೀಗ ಭಾರ್ಗವ್ ಭಕ್ಷಿ ಎಂಟ್ರಿ ಕೊಟ್ಟಿದ್ದಾರೆ.

  ಅಂಡರ್‍ವಲ್ರ್ಡ್ ಕಥೆಯಿರೋ ಕಬ್ಜದಲ್ಲಿ ಸುದೀಪ್, ಭಾರ್ಗವ್ ಭಕ್ಷಿ ಪಾತ್ರ ಮಾಡುತ್ತಿದ್ದಾರೆ. ಭಾರ್ಗವ್ ಭಕ್ಷಿ ಕೂಡಾ ಭೂಗತ ದೊರೆ. ಅತ್ತ ಉಪ್ಪಿಯದ್ದೂ ಭೂಗತ ದೊರೆಯ ಪಾತ್ರ. ಹಾಗಾದರೆ ಕಥೆಯಲ್ಲಿ ಉಪ್ಪಿ ಮತ್ತು ಕಿಚ್ಚನ ಪಾತ್ರಗಳು ಮುಖಾಮುಖಿಯಾಗುತ್ತವಾ? ಆ ಕುತೂಹಲವನ್ನು ಚಿತ್ರ ಬಿಡುಗಡೆಯವರೆಗೂ ಹಾಗೆಯೇ ಉಳಿಸಿಕೊಳ್ಳಲಿದ್ದಾರೆ ಆರ್.ಚಂದ್ರು.

  ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಆರ್.ಚಂದ್ರು ಅವರೇ ನಿರ್ಮಾಪಕರು. ರವಿ ಬಸ್ರೂರು ಮ್ಯೂಸಿಕ್ ಇದ್ದು, ರವಿವರ್ಮ, ವಿಕ್ರಂಮೋರ್, ವಿಜಯ್ ಮತ್ತು ಪೀಟರ್‍ಹೆನ್ ಅಂತಹಾ ಘಟಾನುಘಟಿಗಳ ಸಾಹಸ ನಿರ್ದೇಶನವಿದೆ. ಸುದೀಪ್, ಉಪ್ಪಿ ಅಷ್ಟೇ ಅಲ್ಲದೆ ಚಿತ್ರದಲ್ಲಿ ಜಗಪತಿ ಬಾಬು, ನವಾಬ್ ಶಾ, ರಾಹುಲ್ ದೇವ್, ಪ್ರಮೋದ್ ಶೆಟ್ಟಿ, ಲಕ್ಕಿ ಲಕ್ಷ್ಮಣ್, ಕೋಟ ಶ್ರೀನಿವಾಸ್, ಜಯಪ್ರಕಾಶ್.. ಹೀಗೆ ಘಟಾನುಘಟಿ ಕಲಾವಿದರೇ ಚಿತ್ರವನ್ನು ತುಂಬಿಕೊಂಡಿದ್ದಾರೆ.

 • ಕಬ್ಜ ಕೋಟೆಗೆ ಮಧುಮತಿ

  ಕಬ್ಜ ಕೋಟೆಗೆ ಮಧುಮತಿ

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ನಟಿಸುತ್ತಿರುವ ಕಬ್ಜ ಚಿತ್ರಕ್ಕೆ ಹೀರೋಯಿನ್ ಬಂದಿದ್ದಾರೆ. ಗಾಸಿಪ್ಪುಗಳಿಗೆ ಫುಲ್ ಸ್ಟಾಪ್ ಬಿದ್ದಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ಬಂದಿರೋದು ಶ್ರೇಯಾ ಸರಣ್.

  ಈ ಸಿನಿಮಾಕ್ಕೆ ದಕ್ಷಿಣ ಭಾರತದ ಪ್ರಮುಖ ನಾಯಕಿಯರನ್ನೇ ಕರೆತರುತ್ತೇನೆ ಎಂದಿದ್ದ ನಿರ್ದೇಶಕ ಮತ್ತು ನಿರ್ಮಾಪಕ ಆರ್‌.ಚಂದ್ರು, ಹೇಳಿದಂತೆಯೇ ಶ್ರೇಯಾ ಅವರನ್ನು ಕರೆ ತಂದಿದ್ದಾರೆ.

  ಉಪ್ಪಿ ಜೊತೆಗೆ ಶ್ರೇಯಾಗಿದು ಮೊದಲ ಸಿನಿಮಾ. ಶೂಟಿಂಗ್‌ ಕೂಡಾ ಶುರುವಾಗಿದೆ. ಇನ್ನೊಬ್ಬ ನಾಯಕಿ ಯಾರು ಅನ್ನೋದು ಈಗಲೂ ಗುಟ್ಟಾಗಿಯೇ ಇದೆ. ಶ್ರೇಯಾ ಚಂದ್ರ  ಸಿನಿಮಾದಲ್ಲಿ ಪ್ರೇಮ್ ಎದುರು ನಟಿಸಿದ್ದರು. ಈಗ 9 ವರ್ಷಗಳ ನಂತರ ಮತ್ತೊಮ್ಮೆ ಕನ್ನಡಕ್ಕೆ ಬಂದಿದ್ದಾರೆ.ಮಧುಮತಿ ಪಾತ್ರದಲ್ಲಿ..

 • ಕಬ್ಜ ಕ್ರೇಜ್ : ಆಡಿಯೋಗೆ ಸಿಕ್ಕಿದ್ದು ಎಷ್ಟು ಕೋಟಿ?

  ಕಬ್ಜ ಕ್ರೇಜ್ : ಆಡಿಯೋಗೆ ಸಿಕ್ಕಿದ್ದು ಎಷ್ಟು ಕೋಟಿ?

  ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜೊತೆಗೆ ಆರ್.ಚಂದ್ರು ಕಬ್ಜ ಸಿನಿಮಾ ಘೋಷಿಸುತ್ತಿದ್ದಂತೆಯೇ ಶುರುವಾದ ಕ್ರೇಜ್ ಈಗ ರಿಲೀಸ್ ಹಂತಕ್ಕೆ ಬಂದು ನಿಂತಿದೆ. ಆರ್.ಚಂದ್ರು ನಿರ್ದೇಶನದ ಕಬ್ಜಕ್ಕೆ ರವಿ ಬಸ್ರೂರು ಸಂಗೀತ. ಫೆಬ್ರವರಿ 4ಕ್ಕೆ ಹೈದರಾಬಾದ್`ನಲ್ಲಿ ಆಡಿಯೋ ರಿಲೀಸ್ ಈವೆಂಟ್. ಫೆಬ್ರವರಿ 4ರಂದು ರಿಲೀಸ್ ಆಗಲಿರುವುದು ಮೊದಲ ಹಾಡು ಮಾತ್ರ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಒಂದೊಂದು ಹಾಡಿಗೂ ಒಂದೊಂದು ರಾಜ್ಯ ಆಯ್ಕೆ ಮಾಡಿಕೊಳ್ಳೋ ಪ್ಲಾನ್ ಚಂದ್ರು ಅವರ ತಲೆಯಲ್ಲಿದೆ. ಏನೇ ಮಾಡಿದರೂ ಅದ್ಧೂರಿಯಾಗಿ ಮಾಡುವ ಚಂದ್ರು ಹಾಡಿನ್ನೇ ಹಬ್ಬವಾಗಿಸಲಿದ್ದಾರೆ.

  ಚಿತ್ರ ರಿಲೀಸ್ ಆಗುವುದು ಮಾರ್ಚ್ 17ಕ್ಕೆ. ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆಗಲಿರುವ ಚಿತ್ರದ ಹವಾ ಎಲ್ಲೆಲ್ಲೂ ಕೇಳಬೇಕು ಎನ್ನುವುದೇ ಚಂದ್ರು ಗುರಿ. ಹೈದರಾಬಾದ್`ನಲ್ಲಿ ಈ ಈವೆಂಟ್`ಗಾಗಿಯೇ ಭರ್ಜರಿ ಸೆಟ್ ರೆಡಿಯಾಗುತ್ತಿದೆ. ಅಂದಹಾಗೆ ಕಬ್ಜ ಆಡಿಯೋ ಲಹರಿ ಪಾಲಾಗಿದೆ. ಚಿತ್ರದ ಆಡಿಯೋ ರೈಟ್ಸ್‍ನ್ನು 3 ಕೋಟಿಗೂ ಹೆಚ್ಚು ಕೊಟ್ಟು ಖರೀದಿಸಿದ್ದಾರಂತೆ. ಕೆಜಿಎಫ್ ನಂತರ ಇಷ್ಟು ದೊಡ್ಡ ಮಟ್ಟಕ್ಕೆ ಸೇಲ್ ಆಗಿರುವುದೂ ಒಂದು ದಾಖಲೆ.

  ಹಿಂದಿಯಲ್ಲಿ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಆನಂದ್ ಪಂಡಿತ್ ಈಗಾಗಲೇ 'ಕಬ್ಜ' ಸಿನಿಮಾದ ಹಿಂದಿ ವಿತರಣೆ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಅವರು ಹಿಂದಿ ವಿತರಣೆ ಹಕ್ಕುಗಳನ್ನು ತುಂಬ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಇದೀಗ 'ಕಬ್ಜ' ತೆಲುಗು ವರ್ಷನ್ನ ವಿತರಣೆ ಹಕ್ಕುಗಳನ್ನು ನಟ ನಿತಿನ್ ಅವರ ತಂದೆ ಸುಧಾಕರ್ ರೆಡ್ಡಿ ಖರೀದಿ ಮಾಡಿದ್ದಾರೆ. ಕಮಲ್ ಹಾಸನ್ ಅವರ 'ವಿಕ್ರಮ್' ಸಿನಿಮಾವನ್ನು ವಿತರಣೆ ಮಾಡಿ, ದೊಡ್ಡಮಟ್ಟದ ಗೆಲುವು ಕಂಡಿದ್ದರು. ಈಗ 'ಕಬ್ಜ' ಚಿತ್ರ ತೆಲುಗು ವಿತರಣೆ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ.

  ನಟ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಭಾರ್ಗವ್ ಭಕ್ಷಿ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ 'ಕಿಚ್ಚ' ಸುದೀಪ್ ಇದ್ದಾರೆ. ಬಾಲಿವುಡ್ನ ಡ್ಯಾನಿಶ್ ಅಖ್ತರ್ ಸೈಫಿ, ನವಾಬ್ ಶಾ, ಕಬೀರ್ ಸಿಂಗ್ ದುಹಾನ್ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ತೆಲುಗಿನ ಪೊಸಾನಿ ಮುರಳಿ ಕೃಷ್ಣ, ಮುರಳಿ ಶರ್ಮಾ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿದ್ದಾರೆ.

 • ಕಬ್ಜ ಕ್ರೇಜ್ : ಕಿಚ್ಚ, ಉಪ್ಪಿ ಜೊತೆ ಶಿವಣ್ಣ

  ಕಬ್ಜ ಕ್ರೇಜ್ : ಕಿಚ್ಚ, ಉಪ್ಪಿ ಜೊತೆ ಶಿವಣ್ಣ

  ಇದು ಒಂದು ರೀತಿಯಲ್ಲಿ ಚಕ್ರವರ್ತಿಗಳ ಸಮಾಗಮ. ಒಬ್ಬರು ಅಭಿನಯ ಚಕ್ರವರ್ತಿ. ಮತ್ತೊಬ್ಬರು ಸೆನ್ಸೇಷನ್‍ಗೆ ಬಾಸ್. ಇದೀಗ ಅವರಿಬ್ಬರ ಜೊತೆ ಕರುನಾಡ ಚಕ್ರವರ್ತಿ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಶಿವ ರಾಜ್ ಕುಮಾರ್. ಕಬ್ಜ' ಚಿತ್ರದಲ್ಲಿ 'ನಾಟ್ಯಸಾರ್ವಭೌಮ' ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ಉಪೇಂದ್ರ, ಸುದೀಪ್ ಹಾಗೂ ಶಿವರಾಜ್ ಕುಮಾರ್.. ಕನ್ನಡ ಚಿತ್ರರಂಗದ ಈ ಮೂವರು ಸ್ಟಾರ್ಗಳು 'ಕಬ್ಜ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಮೂವರು ಸ್ಟಾರ್ಗಳನ್ನ ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಲಭಿಸಿದೆ. ಶಿವಣ್ಣ ಪಾತ್ರ ಏನಿರಬಹುದು..? ಅದು ಸಸ್ಪೆನ್ಸ್. ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರವೇನು ಎಂಬುದು ಬಹಿರಂಗವಾಗಿಲ್ಲ.

  'ಕಬ್ಜ' ಚಿತ್ರದ ಹಾಡೊಂದನ್ನು ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭಾಗವಹಿಸಿದ್ದು ವಿಶೇಷವಾಗಿತ್ತು. ಇಂದು 'ಕಬ್ಜ' ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

  ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ.. ಅಂದ್ರೆ ಮಾರ್ಚ್ 17 ರಂದು 'ಕಬ್ಜ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಪುನೀತ್ ರಾಜ್ಕುಮಾರ್ ಅವರ ಸವಿನೆನಪಿನಲ್ಲಿ 'ಕಬ್ಜ' ಸಿನಿಮಾ ತೆರೆಗೆ ಬರಲಿದೆ.

  ಆರ್.ಚಂದ್ರು ಅವರು ಕಬ್ಜ ಚಿತ್ರವನ್ನು ಲೇಟ್ ಮಾಡುತ್ತಿದ್ದಾರೆ ಎಂದು ಶಿವಣ್ಣ ವೇದಿಕೆಯೊಂದರಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಶಿವಣ್ಣ ಅವರಿಗೆ ನನಗೆ ಬುದ್ದಿ ಹೇಳೋ ಎಲ್ಲ ಅಧಿಕಾರ ಇದೆ ಎಂದು ಉತ್ತರ ಕೊಟ್ಟಿದ್ದರು ಆರ್.ಚಂದ್ರು. ಈ ಹಿಂದೆ ಆರ್.ಚಂದ್ರು ಅವರ ಜೊತೆ ಮೈಲಾರಿ ಚಿತ್ರ ಮಾಡಿದ್ದರು ಚಂದ್ರು. 13 ವರ್ಷಗಳ ನಂತರ ಮತ್ತೊಮ್ಮೆ ಚಂದ್ರು ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ. ಉಪೇಂದ್ರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಶಿವಣ್ಣ, ಕಿಚ್ಚ ಸುದೀಪ್ ಜೊತೆಯಲ್ಲೂ 2ನೇ ಸಿನಿಮಾ ಮಾಡುತ್ತಿದ್ದಾರೆ. ಮಲ್ಟಿಸ್ಟಾರ್ ಸಿನಿಮಾ ಸಾಕಪ್ಪಾ ಸಾಕು ಎಂದಿದ್ದ ಸುದೀಪ್, ಉಪ್ಪಿ-ಶಿವಣ್ಣ ಜೊತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಉಪೇಂದ್ರ ಜೊತೆ ಸುದೀಪ್ ಅವರಿಗೂ ಇದು 2ನೇ ಸಿನಿಮಾ.

 • ಕಬ್ಜ ಟೀಸರ್ ಸಕ್ಸಸ್ : ಥ್ರಿಲ್ಲಾದ ಚಂದ್ರು

  ಕಬ್ಜ ಟೀಸರ್ ಸಕ್ಸಸ್ : ಥ್ರಿಲ್ಲಾದ ಚಂದ್ರು

  ಕಬ್ಜ ಚಿತ್ರದ ಟೀಸರ್ ಹಿಟ್ ಆಗಿದೆ. ಎರಡೂವರೆ ಕೋಟಿಗೂ ಹೆಚ್ಚು ಜನ ಟೀಸರ್ ನೋಡಿದ್ದಾರೆ. ಮೆಚ್ಚಿದ್ದಾರೆ. ತೆಲುಗಿನಲ್ಲಂತೂ 50ಕ್ಕೂ ಹೆಚ್ಚು ಫೋನ್ ಬಂದಿದ್ದು ಮಾರ್ಕೆಟಿಂಗ್ ಬಗ್ಗೆ ಮಾತನಾಡುತ್ತಿದ್ದಾರಂತೆ. ಬಿಸಿನೆಸ್ ಶುರುವಾಗಿದೆಯಂತೆ. ವಿದೇಶದಿಂದಲೂ ಚಿತ್ರದ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಇದೆ ಎಂದು ಶ್ರೀಕಾಂತ್ ಹೇಳುತ್ತಿದ್ದರೆ.. ನಿರ್ದೇಶಕ ಆರ್.ಚಂದ್ರು ಮುಖದಲ್ಲಿ ಗೆಲುವಿನ ಹುಮ್ಮಸ್ಸಿತ್ತು.

  ಈ ಚಿತ್ರಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಯುಐ ಚಿತ್ರದ ಮೇಕಿಂಗ್‍ನ್ನು ಯೋಚಿಸುವಂತೆ ಮಾಡಿದೆ  ಎಂದ ಉಪ್ಪಿ ಒಂದು ಕಥೆ ಹೇಳಿದರು.  ಒಂದೂರಲ್ಲಿ ಒಬ್ಬ ಆರ್ಟಿಸ್ಟ್ ಇದ್ದ. ಅವನ ಕಲಾಕೃತಿಯನ್ನು ನೋಡಿದವನೊಬ್ಬ ಮೆಚ್ಚಿಕೊಂಡು ಈ ಕಲಾಕೃತಿ ಯಾವಾಗ ಮುಗಿಯುತ್ತೆ ಎಂದು ಕೇಳಿದ. ಇದು ಮುಗಿಯೋದಿಲ್ಲ. ಇವತ್ತೇ ತೆಗೆದುಕೊಂಡುಹೋಗಬಹುದು ಎಂದ ಕಲಾವಿದರ. ಆರ್.ಚಂದ್ರು ಕೂಡಾ ಹಾಗೆಯೇ. ಅವರ ಕೆಲಸ ಮುಗಿಯೋದಿಲ್ಲ. ಆದರೆ ಅಂದುಕೊಂಡಿದ್ದನ್ನು ಮಾಡಿ ತೋರಿಸುತ್ತಾರೆ ಎಂದು ಮೆಚ್ಚಿದರು.

  ಕೆಜಿಎಫ್ ಚಿತ್ರವನ್ನು ನೋಡಿದ ನಂತರ ವ್ಹಾವ್.. ಅದ್ಭುತ ಸಿನಿಮಾ ಎನ್ನಿಸಿತು. ಮಾಡಿದರೆ ಕೆಜಿಎಫ್ ರೀತಿ ಸಿನಿಮಾ ಮಾಡಬೇಕು ಎನ್ನಿಸಿತು. ಕಬ್ಬ ಮಾಡಿದ್ದೇನೆ. ದಯವಿಟ್ಟು ಕಬ್ಜವನ್ನು ಕೆಜಿಎಫ್ ಜೊತೆ ಹೋಲಿಕೆ ಮಾಡಬೇಡಿ. ಮೊದಲು ಚಿತ್ರವನ್ನು ನೋಡಿ ಡಿಸೈಡ್ ಮಾಡಿ ಎಂದು ಮನವಿ ಮಾಡಿದರು ಆರ್.ಚಂದ್ರು.

 • ಕಬ್ಜ ಟೈಮ್ 2 ಗಂಟೆ..16 ನಿಮಿಷ : ಕಬ್ಜ 2 ಬರುತ್ತಾ?

  ಕಬ್ಜ ಟೈಮ್ 2 ಗಂಟೆ..16 ನಿಮಿಷ : ಕಬ್ಜ 2 ಬರುತ್ತಾ?

  ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೇಯಾ.. ಮುರಳಿ ಕೃಷ್ಣ, ಪೋಸಾನಿ ಕೃಷ್ಣ ಮುರಳಿ, ಅನೂಪ್ ರೇವಣ್ಣ, ಕಬೀರ್ ದುಲ್ಹಾನ್ ಸಿಂಗ್, ದೇವ್‍ಗಿಲ್, ಕಾಮರಾಜನ್, ನವಾಬ್ ಷಾ, ಜಾನ್ ಕೊಕೆನ್, ಡ್ಯಾನಿಷ್ ಅಖ್ತರ್.. ಹೀಗೆ.. ಚಿತ್ರದ ಪ್ರತಿ ಪಾತ್ರಗಳಲ್ಲೂ ಸ್ಟಾರ್ ನಟರೇ ಇದ್ದಾರೆ. ನಿರ್ದೇಶಕ ಆರ್.ಚಂದ್ರು ಕಬ್ಜ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ದೊಡ್ಡದಾಗಿರುತ್ತೆ ಎನ್ನುವವರಿಗೆಲ್ಲ ಕಬ್ಜ ಬೇರೆಯದೇ ಉತ್ತರ ಕೊಟ್ಟಿದೆ.

  ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಇತ್ತೀಚೆಗೆ ಸೆನ್ಸಾರ್ ಆಗಿದೆ. ಈ ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ, 'ಕಬ್ಜ' ಸಿನಿಮಾದ ಉದ್ದ ಸುಮಾರು 136 ನಿಮಿಷ. ಅಂದರೆ, ಇಡೀ ಸಿನಿಮಾ 2 ಗಂಟೆ 16 ನಿಮಿಷದಲ್ಲಿ ಮುಗಿದು ಹೋಗುತ್ತೆ. ಪ್ಯಾನ್ ಇಂಡಿಯಾ ಸಿನಿಮಾಗಳ ರನ್ಟೈಮ್ ಸಹಜವಾಗಿ 150 ರಿಂದ 170 ನಿಮಿಷ ಇರಬೇಕು ಅನ್ನೋ ವಾದವಿದೆ.

  ಹೀಗಾಗಿ ಸ್ಕ್ರೀನ್ ಪ್ಲೇ ಚುರುಕಾಗಿರುತ್ತೆ. ಕಥೆ ಚಿರತೆಯಂತೆ ಓಡುತ್ತೆ. ಚಕಚಕನೆ ಸರಿದು ಹೋಗುತ್ತೆ ಎನ್ನುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ಉಪೇಂದ್ರ ಕಬ್ಜ 2 ಕೂಡಾ ಬರಲಿದೆ ಎಂಬ ಸುಳಿವು ನೀಡಿದ್ದಾರೆ. ಬಂದರೂ ಬರಬಹುದು. ಟಿಕೆಟ್ ಬುಕ್ಕಿಂಗ್ ಅಂತೂ ಭರ್ಜರಿಯಾಗಿ ನಡೆಯುತ್ತಿದೆ.

 • ಕಬ್ಜ ತೆಲುಗು ಶೂಟಿಂಗ್ ಶುರು

  telugu shooting of kabza has begu

  ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್ನಿನ ಕಬ್ಜ ಚಿತ್ರದ ತೆಲುಗು ವರ್ಷನ್ ಶೂಟಿಂಗ್ ಶುರುವಾಗಿದೆ. ಅದೂ ಅಂತಿಂಥಾ ಆರಂಭವಲ್ಲ. ಅದ್ದೂರಿ.. ಭರ್ಜರಿ ಆರಂಭ. ಕಾರಣ ಇಷ್ಟೆ, ಕಬ್ಜ ಚಿತ್ರದ ಮೊದಲ ದೃಶ್ಯಕ್ಕೆ ಪ್ರಸಾದ್ ಲ್ಯಾಬ್ಸ್‍ನ ರಮೇಶ್ ಪ್ರಸಾದ್ ಕ್ಲಾಪ್ ಮಾಡಿದ್ರೆ, ಸಮರಸಿಂಹ ರೆಡ್ಡಿಯ ಸೃಷ್ಟಿಕರ್ತ ಬಿ.ಗೋಪಾಲ್ ಮೊದಲ ದೃಶ್ಯಕ್ಕೆ ಡೈರೆಕ್ಷನ್ ಹೇಳಿದ್ದಾರೆ. ಲಗಡಪಾಟಿ ಶ್ರೀಧರ್ ಸ್ವಿಚ್ ಆನ್ ಮಾಡಿದ್ದಾರೆ.

  ರಾಮಾನಾಯ್ಡು ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿದ್ದು, ಅದ್ಧೂರಿಯಾಗಿ ನೆರವೇರಿದೆ. ತೆಲುಗು ವರ್ಷನ್ ತೆಲುಗಿನಲ್ಲಿಯೇ ಶೂಟಿಂಗ್ ಆಗುತ್ತಿದೆ. ಡಬ್ಬಿಂಗ್ ಅಲ್ಲ. ತೆಲುಗಿನಲ್ಲಿ ಕಬ್ಜ ಚಿತ್ರದ ಮೋಷನ್ ಪೋಸ್ಟರ್ ಕೂಡಾ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. ಕಬ್ಜ ಚಿತ್ರ ಕನ್ನಡ, ತೆಲುಗು ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

 • ಕಬ್ಜ ನೋಡಿ ಮೆಚ್ಚಿದ ಪವರ್ ಸ್ಟಾರ್

  ಕಬ್ಜ ನೋಡಿ ಮೆಚ್ಚಿದ ಪವರ್ ಸ್ಟಾರ್

  ಕಬ್ಜ. ಇದೀಗ ದೇಶದಲ್ಲೆಡೆ ಸೌಂಡ್ ಮಾಡುತ್ತಿದೆ. ಕನ್ನಡದ ಸ್ಟಾರ್‍ಗಳು ನಟಿಸಿರುವ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದರ ನಡುವೆಯೇ ಆರ್.ಚಂದ್ರುಗೆ ತೆಲುಗು ಚಿತ್ರರಂಗದಿಂದ ಗುಡ್ ನ್ಯೂಸ್ ಬಂದಿದೆ. ಕಬ್ಜ ಸಿನಿಮಾ ನೋಡಿ ಟಾಲಿವುಡ್ ಪವರ್ ಸ್ಟಾರ್ ಮೆಚ್ಚಿಕೊಂಡಿದ್ದಾರೆ. ಮಧ್ಯರಾತ್ರಿ ಆರ್. ಚಂದ್ರು ಪವನ್ ಕಲ್ಯಾಣ್ಗೆ ಸಿನಿಮಾ ತೋರಿಸಿದ್ದಾರೆ. ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಸಿನಿಮಾ ಎಂದು ಪವನ್ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರಂತೆ. ಸಿನಿಮಾ ನೋಡಿ ಚಂದ್ರುನ ಹಾಡಿ ಹೊಗಳಿದ್ದಲ್ಲದೇ ಮೇಕಿಂಗ್, ಕಥೆ, ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಬಗ್ಗೆ ಕೊಂಡಾಡಿದ್ದಾರೆ.

  ಇದಾದ ನಂತರ ಶುರುವಾಗಿರುವುದೇ ಆರ್.ಚಂದ್ರು ಜೊತೆ ಪವನ್ ಕಲ್ಯಾಣ್ ಸಿನಿಮಾ ಮಾಡ್ತಾರೆ ಅನ್ನೋ ಗುಸುಗುಸು. ತೆಲುಗಿನಲ್ಲಿ ಕನ್ನಡದವರು ಚಿತ್ರ ಮಾಡುವುದು ಹೊಸದೇನಲ್ಲ. ಒಂದು ಕಾಲದಲ್ಲಿ ನಡೆದು ನಿಂತೇ ಹೋಗಿದ್ದ ಸಂಪ್ರದಾಯ ಇದೀಗ ಮತ್ತೆ ಶುರುವಾಗಿದೆ. ಪ್ರಶಾಂತ್ ನೀಲ್ ಪ್ರಭಾಸ್ ಹಾಗೂ ಎನ್‍ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದರೆ, ಎ.ಹರ್ಷ ಗೋಪಿಚಂದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಖುದ್ದು ಉಪೇಂದ್ರ ನಿರ್ದೇಶನದ ಚಿತ್ರಗಳಿಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಚಂದ್ರು ಅವರು ಕೂಡಾ ಕನ್ನಡದ ಚಿತ್ರಗಳನ್ನು ಈಗಾಗಲೇ ತೆಲುಗಿಗೆ ವರ್ಗಾಯಿಸಿ ಗೆಲುವನ್ನೂ ಕಂಡಿದ್ದಾರೆ. ಹೀಗಿರುವಾಗ ಕಬ್ಜ ಜೋಶ್`ನಲ್ಲಿ ತೇಲುತ್ತಿರುವ ಚಂದ್ರುಗೆ ಇನ್ನಷ್ಟು ಖುಷಿ ಕೊಡೋ ಸುದ್ದಿ ಇದೆ ಅನ್ನೋದು ಟಾಲಿವುಡ್ ಅಂಗಳದ ಸುದ್ದಿ.

  ಶಿವಣ್ಣ ಮತ್ತು ಸುದೀಪ್ ಇಬ್ಬರೂ ಇರುವ ಚಿತ್ರದಲ್ಲಿ ಉಪೇಂದ್ರ ಹೀರೋ. ಆದರೆ ಮೊದಲೇ ಹೇಳಿದ್ದಂತೆ ಚಿತ್ರದ ನಿಜವಾದ ಹೀರೋಗಳು ಟೆಕ್ನಿಷಿಯನ್ಸ್. ಹೀಗಾಗಿಯೇ ಚಿತ್ರದ ಮೇಕಿಂಗ್, ಕಥೆ, ಚಿತ್ರಕಥೆ, ಚಕಚಕನೆ ಕಥೆ ಸಾಗುವ ವೇಗ.. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

 • ಕಬ್ಜ ಬುಕ್ಕಿಂಗ್ ಓಪನ್ : ನೀವು ಬುಕ್ ಮಾಡಿದ್ರಾ..

  ಕಬ್ಜ ಬುಕ್ಕಿಂಗ್ ಓಪನ್ : ನೀವು ಬುಕ್ ಮಾಡಿದ್ರಾ..

  ಕಬ್ಜ. ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್, ಶ್ರೇಯಾ ಸರಣ್ ಅಭಿನಯದ ಈ ಸಿನಿಮಾ ಈ ವರ್ಷದ ಅತೀ ನಿರೀಕ್ಷಿತ ಸಿನಿಮಾ. ಐಎಂಡಿಬಿ ರೇಟಿಂಗ್‍ನಲ್ಲೂ ನಂ.1 ಸ್ಥಾನ ಗಿಟ್ಟಿಸಿರುವ ಈ ಕಬ್ಜ ಚಿತ್ರದ ಹವಾ ಈಗ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿದೆ. ಆರ್.ಚಂದ್ರು ನಿರ್ದೇಶನದ ಸಿನಿಮಾದ ಹಾಡುಗಳೂ ಸಂಚಲನ ಮೂಡಿಸಿವೆ. ಮೇಕಿಂಗ್ ಅಂತೂ ಚಿತ್ರೋದ್ಯಮದ ಗಣ್ಯಾತಿಗಣ್ಯರಿಂದ ಹೊಗಳಿಸಿಕೊಂಡಿದೆ. ಈ ಚಿತ್ರದ ಬುಕ್ಕಿಂಗ್ ಇವತ್ತಷ್ಟೇ ಓಪನ್ ಆಗಿದೆ. ಎಲ್ಲ ಕಡೆ ಬುಕ್ಕಿಂಗ್ ಓಪನ್ ಆದ ಕೆಲವೇ ಕ್ಷಣಗಳಲ್ಲಿ ಹವಾ ಎಬ್ಬಿಸಿದೆ.

  ಬೆಳಗ್ಗೆ 6 ಗಂಟೆ 1 ನಿಮಿಷಕ್ಕೆ ಓಪನ್ ಆದ ಬುಕ್ಕಿಂಗ್‍ಗೆ ಕಾಯುತ್ತಿದ್ದವಂತೆ ಹಲವು ಶೋಗಳು ಥಟ್ಟಂತ ಬುಕ್ಕಿಂಗ್ ಆಗಿವೆ. ಬೆಂಗಳೂರಿನ ರಾಜ್ಕುಮಾರ್ ರಸ್ತೆ ಒರಾಯಿನ್ ಮಾಲ್ನ ಪಿವಿಆರ್ನ ಎರಡು ಸ್ಕ್ರೀನ್ನಲ್ಲಿ 10 ಶೋಗಳಿಗೆ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಮಾರ್ಚ್ 17ರ ಎಲ್ಲ ಹತ್ತು ಶೋಗಳಿಗೆ ಈಗಾಗಲೇ ಬಹುತೇಕ ಸಂಪೂರ್ಣ ಬುಕಿಂಗ್ ಆಗಿ ಹೋಗಿದೆ. ಇದೇ ಮಲ್ಟಿಪ್ಲೆಕ್ಸ್ನ ಮಾರ್ಚ್ 18 ರ ಶೋಗೆ ಸಹ ಬುಕಿಂಗ್ ಜಾರಿಯಲ್ಲಿದೆ. ಇನ್ನು ಮೈಸೂರಿನ ಹಬಿಟಾಟ್ ಮಾಲ್ನ ಡಿಸಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಸಹ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಅಲ್ಲಿ ಮೊದಲ ದಿನವೇ 14 ಶೋ ನೀಡಲಾಗಿದ್ದು ಎರಡು ಶೋಗಳಿಗೆ ಬಹುತೇಕ ಎಲ್ಲ ಸೀಟುಗಳು ಬುಕ್ ಆಗಿದ್ದರೆ, ಉಳಿದ ಶೋಗಳಿಗೆ ಬೇಗ-ಬೇಗನೆ ಬುಕಿಂಗ್ ನಡೆಯುತ್ತಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆ ಆಗುತ್ತಿದೆ.

  ಸದ್ಯಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ಗಳಲ್ಲಿ ಮಾತ್ರವೇ ಆನ್ಲೈನ್ ಬುಕಿಂಗ್ ಓಪನ್ ಆಗಿದೆ. ಹೈದರಾಬಾದ್ನಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ ಮಾತ್ರವೇ ಬುಕಿಂಗ್ ಓಪನ್ ಆಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಚಿತ್ರಮಂದಿರಗಳು ಹಾಗೂ ಶೋಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

  ಕಬ್ಜ ಸಿನಿಮಾದ ತೆಲುಗು ಆವೃತ್ತಿಯನ್ನು ತೆಲುಗು ಚಿತ್ರರಂಗದ ಜನಪ್ರಿಯ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ಅರುಗಳು ವಿತರಣೆ ಮಾಡುತ್ತಿದ್ದಾರೆ. ಇನ್ನು ಕೇರಳ ರಾಜ್ಯದಲ್ಲಿ ಕಬ್ಜ ಸಿನಿಮಾವನ್ನು ಎಲ್ಜಿಎಫ್ ಹೆಸರಿನ ವಿತರಣಾ ಸಂಸ್ಥೆ ವಿತರಿಸುತ್ತಿದೆ. ತಮಿಳುನಾಡಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ, ಕನ್ನಡದ ಕಬ್ಜ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಇನ್ನು ಹಿಂದಿಯಲ್ಲಿ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ಅವರು ಸಿನಿಮಾದ ವಿತರಣೆ ಮಾಡಲಿದ್ದಾರೆ.

  ಅಂದಾಜು 100 ಕೋಟಿ ಬಜೆಟ್ನಲ್ಲಿ 'ಕಬ್ಜ' ಸಿನಿಮಾ ನಿರ್ಮಾಣ ಆಗಿರುವುದಾಗಿ ಹೇಳಲಾಗ್ತಿದೆ. ಚಿತ್ರದಲ್ಲಿ ಶ್ರಿಯಾ ಶರಣ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೋಸಾನಿ ಕೃಷ್ಣ ಮುರಳಿ, ಕಬೀರ್ ದುಹಾನ್ ಸಿಂಗ್, ಸುನಿಲ್ ಪುರಾನಿಕ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 40ರ ದಶಕದಿಂದ ಶುರುವಾಗುವ ಕಾಲ್ಪನಿಕ ಗ್ಯಾಂಗ್ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಉಪ್ಪಿ ಗ್ಯಾಂಗ್ಸ್ಟರ್ ಅರ್ಕೇಶ್ವರ ಆಗಿ ಕಾಣಿಸಿಕೊಂಡಿದ್ದಾರೆ.

 • ಕಬ್ಜ ರಿಲೀಸ್ ಡೇಟ್ 24ಕ್ಕೆ ಅನೌನ್ಸ್

  ಕಬ್ಜ ರಿಲೀಸ್ ಡೇಟ್ 24ಕ್ಕೆ ಅನೌನ್ಸ್

  ಜನವರಿ 24ನ್ನು ಇಡೀ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ವರ್ಷದ ಇಂಡಿಯಾದ ಟಾಪ್ ನಿರೀಕ್ಷಿತ ಚಿತ್ರಗಳಲ್ಲಿ ಕಬ್ಜಾ ಕೂಡಾ ಒಂದು. ಕರ್ನಾಟಕದ ಟಾಪ್ 1 ಬಹುನಿರೀಕ್ಷಿತ ಸಿನಿಮಾ. ಏಕೆಂದರೆ ಚಿತ್ರದಲ್ಲಿ ಇರೋದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್. ಸಹಜವಾಗಿಯೇ ಕುತೂಹಲ ಜಾಸ್ತಿ. ಆ ಕುತೂಹಲ ಹೆಚ್ಚಿಸಲೆಂದೇ ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದ್ದಾರೆ. ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತೇವೆ ಎಂದು ಒಂದು ದಿನಾಂಕ ಘೋಷಿಸುವುದು ಹೊಸತು. ಅಂತಹ ಯೋಜನೆ ಸಿದ್ಧ ಮಾಡಿರುವ ಚಂದ್ರು, ಯಾವಾಗ ರಿಲೀಸ್ ಅನ್ನೋದನ್ನ ಜನವರಿ 24ರಂದು ಘೋಷಣೆ ಮಾಡ್ತಾರಂತೆ.

  ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಐದಲ್ಲ, ಒಟ್ಟಾರೆ 8 ಬಾಷೆಗಳಲ್ಲಿ ಬರುತ್ತಿರೋ ಚಿತ್ರ ಕಬ್ಜ. ಕಳೆದ ವರ್ಷವಿಡೀ ಕನ್ನಡ ಚಿತ್ರಗಳ ಅಬ್ಬರ ಇಡೀ ಇಂಡಿಯಾದಲ್ಲಿ ಕೇಳಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಭರ್ಜರಿ ಭರ್ಜರಿ ಭರ್ಜರಿ ಸದ್ದು ಮಾಡಿದ್ದವು. ಬಾಕ್ಸಾಫೀಸ್ ಕೊಳ್ಳೆ ಹೊಡೆಯೋದರ ಜೊತೆಗೆ ಇಂಡಿಯನ್ ಪ್ರೇಕ್ಷಕರ ಹೃದಯವನ್ನು ಕೊಳ್ಳೆ ಹೊಡೆದಿದ್ದವು. ಇದೀಗ ಕಬ್ ಚಿತ್ರದ ರಿಲೀಸ್ ಡೇಟ್ ಜನವರಿ 24ರಂದು ಘೋಷಣೆಯಾಗುತ್ತಿದೆ.