` mid night shows - chitraloka.com | Kannada Movie News, Reviews | Image

mid night shows

 • ಪೈಲ್ವಾನ್ ಮಿಡ್ ನೈಟ್ ಶೋ ಇಲ್ಲ - ಪೈಲ್ವಾನ್ ಸುದೀಪ್

  pailwaana image

  ಪೈಲ್ವಾನ್ ಚಿತ್ರವನ್ನು ಅರ್ಧರಾತ್ರಿಯಲ್ಲೇ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸಣ್ಣ ಶಾಕ್ ಕೊಟ್ಟಿದ್ದಾರೆ. ಕೆಲವು ಕಡೆ ಮಧ್ಯರಾತ್ರಿಯೇ ಶೋ ನಡೆಯಲಿದೆ ಎಂಬ ಸುದ್ದಿಗಳನ್ನು ನಿರಾಕರಿಸಿದ್ದಾರೆ. ಗುರುವಾರ ರಿಲೀಸ್ ಆಗುತ್ತಿರುವ ಪೈಲ್ವಾನ್ ಚಿತ್ರದ ಮಧ್ಯರಾತ್ರಿ ಶೋ ಇರಲ್ಲ.

  ‘12ಗಂಟೆ ನಂತರ ದಿ ವಿಲನ್ ಮತ್ತು ಹೆಬ್ಬುಲಿ ರಿಲೀಸ್ ಆಗಿದ್ದವು. ಆದರೆ ಪೈಲ್ವಾನ್  ಮಧ್ಯರಾತ್ರಿ ರಿಲೀಸ್ ಆಗಲ್ಲ. ಮಧ್ಯರಾತ್ರಿ ರಿಲೀಸ್ ಮಾಡೋದು ಸೇಫ್ ಅಲ್ಲ. ಅದರಲ್ಲೂ ಕೊನೆಯ ಕ್ಷಣದಲ್ಲಿ ಸಿನಿಮಾ ಅಪ್‌ಲೋಡ್ ಮಾಡೋದು ಕಷ್ಟ. ಕಳೆದ ಬಾರಿ ಇದರಿಂದಾಗಿಯೇ ಕೆಲವೆಡೆ ಥಿಯೇಟರ್ ಪ್ಲಾನ್ ಬ್ಯಾಲೆನ್ಸ್ ತಪ್ಪಿತ್ತು. ಹೀಗಾಗಿ ಪೈಲ್ವಾನ್ ಮಧ್ಯರಾತ್ರಿ ಶೋ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಸುದೀಪ್.

  12 ಗಂಟೆಗೆ ರಿಲೀಸ್ ಮಾಡಿ ಆಗಿ ದೊಡ್ಡ ಸಾಧನೆ ಮಾಡುವ ಆತುರವಿಲ್ಲ. ಅದು ಸುಪಿರಿಯಾರಿಟಿ ಅಥವಾ ತಾಕತ್ತಿನ ಪ್ರಶ್ನೆ ಅಲ್ಲ ಎಂದಿರುವ ಸುದೀಪ್, ಕಾಯುತ್ತಿರುವ ಅಭಿಮಾನಿಗಳನ್ನು ಕಂಪ್ಲೀಟ್ ನಿರಾಸೆಗೂ ದೂಡಿಲ್ಲ. 

  ಪೈಲ್ವಾನ್ ಮೊದಲ ಶೋ ಮಧ್ಯರಾತ್ರಿ ಅಲ್ಲದೇ ಹೋದರೂ,  ಬೆಳಗ್ಗೆ 5.30ಕ್ಕೆ ಮೊದಲ ಶೋ ಇರುತ್ತೆ. 

  ಇದೇ ಮೊದಲ ಬಾರಿ ಬೆಂಗಳೂರಿನ ಸಂತೋಷ್ ಟಾಕೀಸ್ನಲ್ಲಿ 6.30ಕ್ಕೆ ಶೋ ಇದೆ. ನಾನೂ ಕೂಡಾ ಮೊದಲ ದಿನದ ಮೊದಲ ಶೋ ನೋಡ್ತೀನಿ ಎಂದಿದ್ದಾರೆ ಸುದೀಪ್.

  ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗ್ತಿದೆ. ಸ್ವಪ್ನಾ ಕೃಷ್ಣ ನಿರ್ಮಾಪಕಿ. ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಈಗಾಗಲೇ ಅಭಿಮಾನಿಗಳ ಹೃದಯ ಕದ್ದಿವೆ.

  ಬೆಂಗಳೂರಿನಲ್ಲಿ ವೀರೇಶ್, ಮಹದೇಶ್ವರ, ಚಂದ್ರೋದಯ, ಶ್ರೀನಿವಾಸ, ಸಿದ್ದಲಿಂಗೇಶ್ವರ, ಲಕ್ಷ್ಮಿ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಬೆಳಗ್ಗೆ 5.30ಕ್ಕೇ ಶುರುವಾಗಲಿದೆ.