` shivaji suratkal, - chitraloka.com | Kannada Movie News, Reviews | Image

shivaji suratkal,

  • Shivaji Surathkal Review: Chitraloka 3.5 /5*

    shivaji surathkal movie review

    The ongoing trend of good content oriented films continues with Shivaji Surathkal, starring the multi-talented Ramesh Aravind in a brand new avatar as an investigating officer or as a detective on the line of world's most popular fictional detective - Sherlock Holmes.

     

    Ramesh Aravind reaches another milestone in his long drawn acting career, as this one marks his 101th film as an actor in a leading role. As the title itself suggests that the suspense thriller revolves around Ranagiri, a fictional place in the movie and the mystery surrounding it. 

     

    Inspired by the works of Agatha Christie and the creator of Sherlock Holmes's character, director Akash Srivatsa has knitted his own version of a popular detective novel. In here, the murder mystery is set in a real estate where the son of an influential home minister is found dead, and later declared murdered.

     

    In a first of its kind role for Ramesh Aravind, as detective, the mystery gets murkier with multiple suspects and another plot around his past which keeps haunting the officer even as he investigates the murder.

     

    At his usual best, it is a treat to watch the brilliance of Ramesh Aravind on display. In addition to the gripping suspense, it is Judah Sandy's background score which elevates the experience of horror murder suspense. 

     

    Radhika Chetan though in a limited role has a stronger presence and so is the multiple characters which falls into its place in accordance to the script and the tale, the essence of any successful whodunit thrillers.

     

    Will the real killer be found or is the work of unnatural elements? Watch Ramesh Aravind at his finest as a detective, which guarantees for a thrilling experience.

  • 'Shivaji Suratkal' Teaser On Ramesh's Birthday

    shivaji suratkal teaser on ramesh's birthday

    The first teaser of Ramesh Aravind starrer 'Shivaji Surtkal' is all set to be released on the actor's birthday on the 10th of September.

    'Shivaji Suratkal - The Case of Ratnagiri Rahasya' is a thriller and tells the adventures of a police inspector called Shivaji Suratkal. The shooting for the film is complete and the dubbing is also in the final stage. Meanwhile, the team is planning to release the teaser on Ramesh's birthday.

    'Shivaji Suratkal' is written and directed by Akash Srivatsa and is produced by Rekha K N and Anup Gowda under Anjanadri Cine Creations. Judah Sandy is the music director, while M G Gururprasad is the cinematographer. The film stars Ramesh Aravind, Radhika Narayan, Aarohi Narayan and others in prominent roles.

  • 'Shivaji Suratkal' Teaser Released

    shivaji suratkal teaser released

    Actor-director Ramesh Aravind is celebrating his 55th birthday on Tuesday. Meanwhile, the first teaser of his latest film 'Shivaji Suratkal' has been released in You Tube today morning.

    The team of  'Shivaji Suratkal - The Case of Ratnagiri Rahasya' had announced that the team will be gifting a teaser on Ramesh's birthday. Likewise, the teaser is released and is getting good response all over. 'Shivaji Surathkal' is a thriller and tells the adventures of a police inspector called Shivaji Suratkal.

    'Shivaji Suratkal' is written and directed by Akash Srivatsa and is produced by Rekha K N and Anup Gowda under Anjanadri Cine Creations. Judah Sandy is the music director, while M G Gururprasad is the cinematographer. The film stars Ramesh Aravind, Radhika Narayan, Aarohi Narayan and others in prominent roles. The post-production of the film is in progress and is expected to complete soon.

  • Film Screening Starts Post Lockdown; Three Films Released On Thursday

    Film Screening Starts Post Lockdown; Three Films Released On Thursday

    With the Central Government giving a green signal for screening of films from the 15th of October, three Kannada films including 'Love Mocktail', 'Kaanadante Mayavadanu' and 'Shivaji Suratkal' have been released in a few theaters in Karnataka.

    Though the Karnataka Film Exhibitors Association has also decided to start the screening according to the Government guidelines, not many theaters across Karnataka are willing to start the screening immediately due to various reasons. 

    Primarily, there is still a fear about the Covid-19 and theater owners are not willing to take the risk as theaters might become the hubs in spreading Corona in the coming days. The second reason however is the theaters are facing a lot of problems, which they want the Government to address. But as the Government is yet to hear their problems, not many are willing to start the screening as it might become a problem in the future. So, though the permission has been given, the theater owners have come to a decision to wait and see. 

    Meanwhile, four films including 'Shivarjuna', 'Third Class', '5 Adi 7 Angula' and 'Maya Bazaar 2016' are all set to re release today again.

     

     

     

     

     

     

  • Many Films Lineup For Re-Release

    Many Films Lineup For Re-Release

    With the Central Government giving a green signal for screening of films from the 15th of October, the Karnataka Film Exhibitors Association has also decided to start the screening according to the Government guidelines.

    Though there are no direct releases scheduled to release on the 15th of October, there are many films re-releases ready in queue for re-release once again. Films like 'Love Mocktail', 'Dia', 'Shivaji Suratkal', 'Damayanthi', 'Gentleman', 'Shivarjuna' and others were released earlier this year. Due to lockdown, the screening was stopped.

    Now all these films are all set for re-release. While some of them are eyeing for a release on the 16th of October, some are planning for Dasara. Except for 'Ranam' no other new films have been announced for the Dasara season and it has to be seen whether, 'Ranam' will release on the announced date or not.  

     

  • Shivaji Suratkal World Premiere on August 15th

    Shivaji Suratkal Image

    Ramesh Aravind starrer 'Shivaji Suratkal - The Case of Ranagiri Rahasya', is all set for a satellite release in Zee Kannada on the 15th of August on account of Independence Day.

    Earlier, the film had a digital release on the 07th of August in Zee 5. The team had announced that the film have a digital release followed by a satellite release. Likewise, 'Shivajji Suratkal' will be the first new film in the last four months to have a world premiere in television. 

    you_tube_chitraloka1.gif

    'Shivaji Suratkal' stars Ramesh Aravind, Radhika Narayan, Aarohi Narayan and others in prominent roles. The film is written and directed by Akash Srivatsa and is produced by Rekha K N and Anup Gowda under Anjanadri Cine Creations. Judah Sandy is the music director.

  • Shivaji Suratkal' Digital Release On August 7th in Zee 5

    shivaji suratkal digital release on august 7th

    Ramesh Aravind's hit film 'Shivaji Suratkal - The Case of Ranagiri Rahasya' which was released earlier this year is all set to stream online on the 07th of August in Zee 5.

    The team of  'Shivaji Suratkal - The Case of Ranagiri Rahasya' had announced that the team will be re-releasing the film after the corona cases subsides and once everything comes to normalcy in Karnataka. However, as the corona cases are rising day by day, the film will be first premiered digitally followed by a satellite release in Zee Kannada in August.

    'Shivaji Suratkal' stars Ramesh Aravind, Radhika Narayan, Aarohi Narayan and others in prominent roles. The film is written and directed by Akash Srivatsa and is produced by Rekha K N and Anup Gowda under Anjanadri Cine Creations. Judah Sandy is the music director.

     

  • ಈ ಶಿವಾಜಿಯ ವ್ಯಕ್ತಿತ್ವವೇ ಬೇರೆ..

    shivaji is completely different compared to ramesh aravind

    ರಮೇಶ್ ಅರವಿಂದ್ ಮಿಸ್ಟರ್ ಕೂಲ್ ಗೈ. ಆದರೆ ಶಿವಾಜಿ ಹಾಗಲ್ಲ. ಆತನಿಗೆ ಸದಾ ಟೆನ್ಷನ್. ರಮೇಶ್ ಮುಖದಲ್ಲಿ ಸದಾ ನಗುವಿದ್ದರೆ, ಶಿವಾಜಿ ಫೇಸಲ್ಲಿ ಏನೋ ಒಂದು ತಲ್ಲಣ. ಈ ರಮೇಶ್‍ಗೆ ಕೋಪ ಬರೋದು ಅಪರೂಪ. ಆದರೆ ಆ  ಶಿವಾಜಿಗೆ ಮೂಗಿನ ತುದಿಯಲ್ಲೇ ಕೋಪ. ರಮೇಶ್‍ಗೆ ಹಾಸಿಗೆ ಮುಟ್ಟಿದ ತಕ್ಷಣ ಕಣ್ಣು ಮುಚ್ಚಿಕೊಂಡರೆ.. ಆ ಶಿವಾಜಿಗೆ ರಾತ್ರಿ ಹೊತ್ತಲ್ಲಿ ನಿದ್ರೆಯೇ ಬರಲ್ಲ.

    ಇದು ಶಿವಾಜಿ ಸುರತ್ಕಲ್ ಕಥೆ. ಕರ್ನಾಟಕದ ಶರ್ಲಾಕ್ ಹೋಮ್ಸ್ ಎದುರಿಸುವ 101ನೇ ಕೇಸ್ ರಣಗಿರಿ ರಹಸ್ಯ. ಅಲ್ಲಿ ನಡೆಯೋ ಒಂದು ಕೊಲೆ.. ಆ ಕೊಲೆಯ ಸುತ್ತ ಬಿಚ್ಚಿಕೊಳ್ಳುವ ವಿಚಿತ್ರ ಕಥೆಗಳು, ರಹಸ್ಯಗಳೇ ಚಿತ್ರದ ಕಥಾವಸ್ತು. ಚಿತ್ರದ ಸೌಂಡಿಂಗ್ ಹಾಲಿವುಡ್ ಸ್ಟೈಲ್ ಚಿತ್ರಗಳನ್ನು ನೆನಪಿಸಿದ್ರೆ, ಅದರ ಕ್ರೆಡಿಟ್ಟು ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೇ ಹೋಗಬೇಕು.

    ಈ ಚಿತ್ರದ ಕಥೆಯನ್ನು 8 ತಿಂಗಳು ಪಟ್ಟಾಗಿ ಕುಳಿತು ಬರೆದಿದ್ದಾರೆ ಆಕಾಶ್ ಶ್ರೀವತ್ಸ ಮತ್ತು ಅಭಿಷೇಕ್. ಜೊತೆಗೆ ರಮೇಶ್ ಅರವಿಂದ್ ಕೂಡಾ ಕೈ ಜೋಡಿಸಿದ್ದಾರೆ. ಇದೇ ಶಿವರಾತ್ರಿಗೆ ಥಿಯೇಟರಿಗೆ ಬರುತ್ತಿರುವ ಶಿವಾಜಿ ಸುರತ್ಕಲ್ ಥ್ರಿಲ್ಲಿಂಗ್ ಕೊಡೋದ್ರಲ್ಲಿ ನೋ ಡೌಟ್.

  • ದಾಖಲೆಯಲ್ಲೇ ಇಲ್ಲದ ರಣಗಿರಿಯಲ್ಲಿ ಏನದು ರಹಸ್ಯ..?

    no evidence left but ranagairi rahasya continues

    ಶಿವಾಜಿ ಸುರತ್ಕಲ್ ದಿ ಕೇಸ್‌ ಆಫ್‌ ರಣಗಿರಿ ರಹಸ್ಯ. ಇದು ರಮೇಶ್ ಅಭಿನಯದ ಹೊಸ ಸಿನಿಮಾ. ಟ್ರೇಲರ್ ಥ್ರಿಲ್ ಕೊಟ್ಟಿದೆ. ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಆದರೆ.. ಎಲ್ಲಿದೆ ರಣಗಿರಿ ಎಂದು ಹುಡುಕಹೊರಟರೆ.. ಅದು ಗೂಗಲ್ ಮ್ಯಾಪ್ನಲ್ಲೂ ಸಿಕ್ಕಲ್ಲ.

    ನಿರ್ದೇಶಕ ಆಕಾಶ್‌ ಶ್ರೀವತ್ಸ. ಅವರೇ ಹೇಳೋ ಹಾಗೆ ‘ಗೂಗಲ್‌ ಮ್ಯಾಪ್‌ನಲ್ಲಿಯೂ ಸಿಗದ ಹೊರಜಗತ್ತಿನ ಜೊತೆ ಸಂಪರ್ಕವೇ ಇಲ್ಲದ ಕಾಡಿನೊಳಗೆ ಇರುವ ಊರು ರಣಗಿರಿ. ನಿಗೂಢತೆಯನ್ನೇ ಹಾಸಿ ಹೊದ್ದು ಉಸಿರಾಡುವ ರಣಗಿರಿಯಲ್ಲಿ ನಡೆಯುವ ಹೈ ಪ್ರೊಫೈಲ್‌ ಕೊಲೆ. ಆ ಕೊಲೆ ಕೇಸ್ನ್ನು  ಕೇವಲ 48 ಗಂಟೆಗಳಲ್ಲಿ ಭೇದಿಸುವ ಸವಾಲು ಹೊತ್ತು ಹೊರಡುವ ಪತ್ತೇದಾರ ಶಿವಾಜಿ ಸುರತ್ಕಲ್.  ಆಗ ಎದುರಿಸುವ ಟೆನ್ಷನ್, ಪರ್ಸನಲ್ ಪ್ರಾಬ್ಲಂ, ಕನ್ಫ್ಯೂಷನ್ನುಗಳೇ ಚಿತ್ರದ ಕಥೆ’.

    ಕಥೆಯಷ್ಟೇ ಅಲ್ಲ, ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಭಾವಾಭಿನಯ, ವಿಭಿನ್ನವಾದ ಸೌಂಡ್ ಎಫೆಕ್ಟ್ ಎಲ್ಲವೂ ಪ್ರೇಕ್ಷಕರಿಗೆ ಬೇರೆಯದೇ ಫೀಲ್ ಕೊಡುತ್ತವೆ ಎನ್ನುತ್ತಾರೆ ಶ್ರೀವತ್ಸ. ರೇಖಾ ಕೆಎನ್‌ ಹಾಗೂ ಅನೂಪ್‌ ಗೌಡ ನಿರ್ಮಿಸಿರುವ ಚಿತ್ರದಲ್ಲಿ ರಮೇಶ್‌ ಜೊತೆ ರಾಧಿಕಾ ನಾರಾಯಣ್‌, ಅರೋಹಿ ನಾರಾಯಣ್‌ ಪ್ರಧಾನ ಪಾತ್ರಗಳಲ್ಲಿದ್ದಾರೆ.

  • ದೆವ್ವದ ಥ್ರಿಲ್ಲರ್ ಶಿವಾಜಿ ಸುರತ್ಕಲ್

    ghost thriller is shivaji suratkal

    ಇದೇ ಮೊದಲ ಬಾರಿಗೆ ನಿಗೂಢ ರಹಸ್ಯ ಭೇದಿಸುವ ಅಧಿಕಾರಿಯಾಗಿ ಥ್ರಿಲ್ ಕೊಟ್ಟಿದ್ದಾಋಎ ರಮೇಶ್ ಅರವಿಂದ್. ರಣಗಿರಿ ಅನ್ನೋ ಸ್ಥಳ, ಅಲ್ಲಿ ನಡೆಯೋ ನಿಗೂಢ ಕೊಲೆ, ಹುಣ್ಣಿಮೆಯ ದಿನ ಸತ್ತುಬೀಳೋ ಪಾರಿವಾಳ, ಕೊಲೆ ಆಗಿದೆಯೋ.. ಇಲ್ಲವೋ.. ಅನ್ನೋದೇ ಸಸ್ಪೆನ್ಸ್ ಎಂಬಷ್ಟು ಕುತೂಹಲ ಹುಟ್ಟಿಸಿದೆ ಶಿವಾಜಿ ಸುರತ್ಕಲ್ ಸಿನಿಮಾ.

    ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್ ಮೊದಲಾದ ದೊಡ್ಡ ತಾರಾಬಳಗವೇ ಇರುವ ಚಿತ್ರದ ಟ್ರೇಲರ್ ಭರ್ಜರಿ ಸದ್ದು ಮಾಡುತ್ತಿದೆ. ಕೊಲೆಯ ತನಿಖೆ ಮಾಡುತ್ತಾ.. ಮಾಡುತ್ತಾ.. ನಿಜವೋ.. ಭ್ರಮೆಯೋ.. ಎಂಬ ಸಂದಿಗ್ಧಕ್ಕೆ ಸಿಲುಕುವ ಶಿವಾಜಿ ಸುರತ್ಕಲ್ ಪಾತ್ರ, ಹೌದು.. ದೆವ್ವ ಭೂತ ಇರೋದು ನಿಜ ಎಂದು ಕೂಗುತ್ತೆ.

    ಆಕಾಶ್ ಶ್ರೀವತ್ಸ ನಿರ್ದೇಶನದ ಸಿನಿಮಾಗೆ, ಕೆ.ಎನ್.ರೇಖಾ, ಅನೂಪ್ ಗೌಡ ನಿರ್ಮಾಪಕರು. ಟ್ರೇಲರ್ನಲ್ಲಿ ಬೆರಗು ಹುಟ್ಟಿಸುವುದು ಜ್ಯೂಡಾ ಸ್ಯಾಂಡಿ ಮ್ಯೂಸಿಕ್.

  • ಫೆಬ್ರವರಿ 21ಕ್ಕೆ ರಮೇಶ್ ಅರವಿಂದ್ 101

    case no 10.. ramesh's 101 movie

    ರಮೇಶ್ ಅರವಿಂದ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಶಾಂತಿ ಕ್ರಾಂತಿ ಚಿತ್ರವೊಂದೇ ಧಡ್ ಅಂತಾ ಕಣ್ಣ ಮುಂದೆ ಬರೋ ಸಿನಿಮಾ. ಅವರೀಗ ಡಿಟೆಕ್ಟಿವ್ ಆಗಿದ್ದಾರೆ. ಅವರು ಮೊದಲ ಬಾರಿ ಪತ್ತೇದಾರನಾಗಿ ಕಾಣಿಸಿಕೊಂಡಿರುವ ‘ಶಿವಾಜಿ ಸುರತ್ಕಲ್’ ಫೆಬ್ರವರಿ 21ರಂದು ರಿಲೀಸ್ ಆಗ್ತಾ ಇದೆ.

    ‘ಶಿವಾಜಿ ಸುರತ್ಕಲ್’ ರಮೇಶ್ ಅಭಿನಯದ 101ನೇ ಸಿನಿಮಾ. ಈಗಾಗಲೇ ಚಿತ್ರ ಟೀಸರ್ ಹಾಗೂ ಟ್ರೇಲರುಗಳ ಮೂಲಕ ನಿರೀಕ್ಷೆ ಹುಟ್ಟಿಸಿದೆ.

    ರಮೇಶ್ ಎದುರು ರಾಧಿಕಾ ನಾರಾಯಣ್, ಆರೋಹಿ ನಟಿಸಿದ್ದು, ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

    ರಣಗಿರಿ ಅನ್ನೋ ನಿಗೂಢ ಸ್ಥಳದಲ್ಲಿ ನಡೆಯೋ ಸಾವಿನ ಬೆನ್ನು ಹತ್ತುವ ಕಥೆ, ಸೈಕಲಾಜಿಕಲ್ ಥ್ರಿಲ್ಲರ್ನಂತಿದೆ. ದೆವ್ವವೂ ಜೊತೆಗಿದೆಯಾ..? ಸಿನಿಮಾ ನೋಡಿಯೇ ಹೇಳಬೇಕು. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ನಿರ್ಮಾಣದ ಚಿತ್ರಕ್ಕೆ ಅಕಾಶ್ ಶ್ರೀವತ್ಸ ನಿರ್ದೇಶಕ.

     

  • ರಣಗಿರಿ ರಹಸ್ಯದಲ್ಲಿ ನಿಮಿಷಕ್ಕೊಂದು ಟ್ವಿಸ್ಟ್.. ಪ್ರೇಕ್ಷಕನೇ ಡಿಟೆಕ್ಟಿವ್..

    ranagiri rahasya ill hook audience till the end

    ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯದ ಕಥೆ ಏನು ಎಂದರೆ.. ಅದೊಂದು ಕೊಲೆ ಮತ್ತು ನಿಗೂಢ ಊರಿನ ಚರಿತ್ರೆ ಬಿಚ್ಚಿಕೊಳ್ಳುತ್ತೆ. ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ರಮೇಶ್ ಅಭಿನಯವೇ ಹೈಲೈಟ್. ಜೊತೆಗೆ ಹಿನ್ನೆಲೆ ಸಂಗೀತ ಚಿತ್ರದ ಅತಿದೊಡ್ಡ ಪ್ಲಸ್ ಎನ್ನುವ ನಿರ್ದೇಶಕ ಶ್ರೀವತ್ಸ, ಈ ಚಿತ್ರದಲ್ಲಿ ಸೌಂಡ್ ಎಫೆಕ್ಟ್ಗೆ ವಿಶೇಷ ಪ್ರಾಧಾನ್ಯತೆ ಕೊಟ್ಟಿದ್ದಾರೆ.

    ಇಲ್ಲಿಯವರೆಗೂ ಕೇಳದ ಕೆಲವು ಬಗೆಯ ಸದ್ದುಗಳನ್ನು ಚಿತ್ರದಲ್ಲಿ ಬಳಸಿದ್ದೇವೆ. ಪಿಲ್ಲೊ ಕವರ್‌, ಪೆನ್‌, ಪೆನ್ಸಿಲ್‌, ಕಾಡುಗಳಲ್ಲಿಕೇಳಿ ಬರುವ ಪ್ರಾಣಿಪಕ್ಷಿ, ಮಂಜಿನ ವಾತಾವರಣ ಹೀಗೆ ಸಣ್ಣ ಸಣ್ಣ ಸಂಗತಿಯೂ ಅನುಭವಕ್ಕೆ ಬರುವಂತೆ ಸೌಂಡ್‌ ಡಿಸೈನ್‌ ಮಾಡಿದ್ದೇವೆ. ರಮೇಶ್‌ ಅರವಿಂದ್ ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ರಾಧಿಕಾ ನಾರಾಯಣ್ ಮತ್ತು ಆರೋಹಿ ನಾರಾಯಣ್. ಆದರೆ.. ಚಿತ್ರದ ಇನ್ನೊಂದು ವಿಶೇಷವೆಮದರೆ, ಪ್ರೇಕ್ಷಕನೂ ಪತ್ತೇದಾರನಾಗುತ್ತಾನೆ.

    ಪ್ರತಿ ನಿಮಿಷಕ್ಕೊಂದು ಸಾಕ್ಷಿ, ಕುತೂಹಲ ಇರುವ ಸಿನಿಮಾ ನೋಡುತ್ತಿರುವಾಗ ಪ್ರೇಕ್ಷಕನೂ ಡಿಟೆಕ್ಟಿವ್ ರೀತಿಯಲ್ಲೇ ಫೀಲ್ ಆಗ್ತಾನೆ. ಸಿನಿಮಾ ನೊಡುತ್ತಲೇ..  ಕೊಲೆ ರಹಸ್ಯ ಭೇದಿಸುವ ಅನುಭವ ಪ್ರೇಕ್ಷಕನಿಗೆ ಸಿಗಲಿದೆ ಎನ್ನುತ್ತಾರೆ ಶ್ರೀತ್ವಸ.

    ಈ ಸಿನಿಮಾವನ್ನು ಆಕಾಶ್‌ ಶ್ರೀವತ್ಸ ನಿರ್ದೇಶಿಸಿದ್ದರೆ, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ . ರೇಖಾ ಕೆಎನ್‌ ಹಾಗೂ ಅನೂಪ್‌ ಗೌಡ ನಿರ್ಮಾಪಕರು. ರಮೇಶ್ ಅರವಿಂದ್ ಮೇಕ್ ಓವರ್ ಅಚ್ಚರಿ ಹುಟ್ಟಿಸುವಂತಿದೆ.

     

  • ಶಿವಾಜಿ ದಿಗ್ವಿಜಯ : ಸಕ್ಸಸ್ ಸ್ಟೋರಿ

    shivaji suratkal running successfully

    ರಮೇಶ್ ಅರವಿಂದ್ ನಟಿಸಿರುವ 101ನೇ ಸಿನಿಮಾ ಶಿವಾಜಿ ಸುರತ್ಕಲ್. ಕನ್ನಡದ ಶೆರ್ಲಾಕ್ ಹೋಮ್ಸ್ ಅವತಾರದಲ್ಲಿ ಬಂದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ. ಅದು ಸಾಬೀತಾಗಿರುವುದು ಥಿಯೇಟರು ಮತ್ತು ಶೋಗಳ ಸಂಖ್ಯೆಯಲ್ಲಿ. ಬೆಂಗಳೂರಿನಲ್ಲಿ ರಿಲೀಸ್ ದಿನ ಕೇವಲ 90+ ಶೋಗಳಷ್ಟೇ ಇದ್ದ ಸಿನಿಮಾ, 2ನೇ ದಿನ.. 3ನೇ ದಿನ.. ಶೋಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಶೋಗಳ ಸಂಖ್ಯೆ ಹೆಚ್ಚೂ ಕಡಿಮೆ 150ನ್ನು ಸಮೀಪಿಸಿದೆ. ಕಾರಣ ಇಷ್ಟೆ.. ಶಿವಾಜಿ ಸುರತ್ಕಲ್ ನೋಡುವವರ, ನೋಡಲು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.

    ಈಗ ಗೆದ್ದಿರುವುದು ನಿರ್ದೇಶಕ ಆಕಾಶ್ ಶ್ರೀವತ್ಸ್ ಮತ್ತು ರಮೇಶ್ ಅರವಿಂದ್. ಕಾಸು ಕೊಟ್ಟು ಥಿಯೇಟರಿಗೆ ಬರುವ ಪ್ರೇಕ್ಷಕ, ಸಿನಿಮಾ ಶುರುವಾದಾಗಿನಿಂದ ಮುಗಿಯುವವರೆಗೆ ಸೀಟಿನ ತುದಿಯಲ್ಲಿಯೇ ಕುಳಿತಿರುತ್ತಾನೆ ಎನ್ನುವುದು ನಿರ್ದೇಶಕರು ಮತ್ತು ಚಿತ್ರಕಥೆಗೆ ಸಿಗುತ್ತಿರೋ ಬಹುಮಾನ. ಅಫ್‍ಕೋರ್ಸ್... ಇದು ಬಾಕ್ಸಾಫೀಸ್‍ನಲ್ಲೂ ವಂಡರ್ ತೋರಿಸಿದೆ.

  • ಶಿವಾಜಿ ಫುಲ್ ಹ್ಯಾಪಿ

    ramesh aravind ha[[y over shivaji suratkal's success

    ಶಿವಾಜಿ ಸುರತ್ಕಲ್ ಗೆದ್ದಿದೆ. ಇದು ರಮೇಶ್ ಅರವಿಂದ್ ಅವರಿಗೆ ಸಖತ್ ಖುಷಿ ಕೊಟ್ಟಿದೆ. ರಮೇಶ್ ಅರವಿಂದ್ ಅದನ್ನು ತಮ್ಮದೇ ಸ್ಟೈಲ್‍ನಲ್ಲಿ ಬಣ್ಣಿಸಿರೋದು ಹೀಗೆ.. `ನಾವು ಇಷ್ಟಪಟ್ಟ ಕೆಲಸವನ್ನು, ನಾವು ಇಷ್ಟಪಡುವ ಜನರ ಜೊತೆ, ಇಷ್ಟಪಡುವ ಜಾಗದಲ್ಲಿ, ಇಷ್ಟಪಟ್ಟು ಮಾಡುವುದೇ ಯಶಸ್ಸು. ನಾವು ಇಷ್ಟಪಟ್ಟು ಮಾಡಿದ ಕೆಲಸವನ್ನು ಜನರೂ ಇಷ್ಟಪಟ್ಟರೆ.. ಅದು ಅತಿ ದೊಡ್ಡ ಯಶಸ್ಸು'.

    ಥಿಯೇಟರುಗಳಿಗೆ ಭೇಟಿ ಕೊಟ್ಟಾಗ ಪ್ರೇಕ್ಷಕರು ನೀಡಿರುವ ಪ್ರತಿಕ್ರಿಯೆ, ಟಿಕ್‍ಟಾಕ್‍ನಲ್ಲಿ ಬರುತ್ತಿರುವ ರಿಯಾಕ್ಷನ್ಸ್ ಹಾಗೂ ರಾಹುಲ್ ದ್ರಾವಿಡ್ ಸಿನಿಮಾ ನೋಡಿ ಮೆಚ್ಚಿದ್ದು ಖುಷಿ ಕೊಟ್ಟಿದೆ ಎನ್ನುತ್ತಾರೆ ರಮೇಶ್.

    ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗಂತೂ ಚಿತ್ರದ ರೀಮೇಕ್‍ಗೆ ಬರುತ್ತಿರುವ ಡಿಮ್ಯಾಂಡ್ ನೋಡಿಯೇ ಖುಷಿಯಾಗಿದೆ. ಬಾಲಿವುಡ್, ತಮಿಳು ಹಾಗೂ ತೆಲುಗಿನಲ್ಲಿ ಡಿಮ್ಯಾಂಡ್ ಇದೆ ಎಂದಿದ್ದಾರೆ ಶ್ರೀವತ್ಸ. ನಿರ್ಮಾಪಕ ಅನೂಪ್ ಗೌಡ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಮನವಿ ಮಾಡಿದ್ದಾರೆ.

  • ಶಿವಾಜಿ ಸುರತ್ಕಲ್ ಚಿತ್ರ ವೀಕ್ಷಿಸಿದ ರಾಹುಲ್ ದ್ರಾವಿಡ್

    crickter rahul dravid watches shivaji suratkal movie

    ಶಿವಾಜಿ ಸುರತ್ಕಲ್ ಚಿತ್ರತಂಡ ಇಂದು ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಾದ  ರಾಹುಲ್ ದ್ರಾವಿಡ್ ಅವರಿಗೊಂದು ವಿಶೇಷ ಪ್ರದರ್ಶನ ಏರ್ಪಡಿಸಿತ್ತು.  ದ್ರಾವಿಡ್ ರವರು  ಅದಕ್ಕೆ ಒಪ್ಪಿಕೊಂಡು ಚಿತ್ರದ ಮೊದಲ ಪ್ರೆಕ್ಷಕರಾದದ್ದಕ್ಕೆ, ಚಿತ್ರತಂಡದ ಎಲ್ಲರಿಗೂ ಸಂತೋಷವಾಯಿತು.

    ಪ್ರದರ್ಶನದ ನಂತರ ಚಿತ್ರದ ನಾಯಕರಾದ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಅವರೊಂದಿಗೆ ಮಾತನಾಡಿದ ದ್ರಾವಿಡ್, ಮೆಚ್ಚುಗೆಯನ್ನು ಹಂಚಿಕೊಂಡರು. ರಮೇಶ್ ಅರವಿಂದ್ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಚಿತ್ರ ಅದ್ಭುತವಾಗಿದೆ ಎಂದರು. ಚಿತ್ರದ  climax  ತನ್ನನ್ನು ಬೆರಗುಗೊಳಿಸಿತು  ಎಂದರು.

    ವೀಕ್ಷಕರೆಲ್ಲರನ್ನೂ ಅದು ಆಶ್ಚರ್ಯ ಪಡಿಸುವುದು ಖಚಿತ ಎಂದು ಅಭಿಪ್ರಾಯ ಪಟ್ಟರು. ನಿರ್ದೇಶಕ ಆಕಾಶ್ ಅವರನ್ನು ಅಭಿನಂದಿಸುತ್ತಾ, ಚಿತ್ರವು ಖಂಡಿತ ಯಶಸ್ವಿಯಾಗುವುದು ಎಂದು ಹಾರೈಸಿದರು.

  • ಶಿವಾಜಿ ಸುರತ್ಕಲ್ ಟೀಂಗೆ ಸಂಗೀತಾ ಶೃಂಗೇರಿ

    ಶಿವಾಜಿ ಸುರತ್ಕಲ್ ಟೀಂಗೆ ಸಂಗೀತಾ ಶೃಂಗೇರಿ

    ರಮೇಶ್ ಅರವಿಂದ್ ಅಭಿನಯದ ಸೀಕ್ವೆಲ್ ಶಿವಾಜಿ ಸುರತ್ಕಲ್. ಕೊರೊನಾ ಅವಧಿಯಲ್ಲೂ ಸೂಪರ್ ಹಿಟ್ ಆಗಿದ್ದ ಸಿನಿಮಾದ ಸೀಕ್ವೆಲ್ ಸಿದ್ಧವಾಗುತ್ತಿದೆ. ಈ ಚಿತ್ರಕ್ಕಾಗಿ ಒಂದು ಸ್ಪೆಷಲ್ ಸಾಂಗ್ ಸಿದ್ಧ ಮಾಡಿರುವ ಜುಡಾ ಸ್ಯಾಂಡಿ ಮತ್ತು ಆಕಾಶ್ ಶ್ರೀವತ್ಸ, ಆ ಹಾಡಿಗಾಗಿಯೇ ಸ್ಪೆಷಲ್ ನಟಿಯೊಬ್ಬರನ್ನು ಹುಡುಕಿದ್ದಾರೆ. ಚಾರ್ಲಿ ಚಿತ್ರದ ಖ್ಯಾತಿಯ ಸಂಗೀತಾ ಶೃಂಗೇರಿ ಈ ಸ್ಪೆಷಲ್ ಸಾಂಗ್ ಮೂಲಕ ಶಿವಾಜಿ ಸುರತ್ಕಲ್ ಟೀಂಗೆ ಎಂಟ್ರಿ ಕೊಡುತ್ತಿದ್ದಾರೆ.

    ಅದೇನೋ ಗೊತ್ತಿಲ್ಲ. ಆಕಾಶ್ ಶ್ರೀವತ್ಸ ಅವರು ಕೇಳುತ್ತಿದ್ದಂತೆಯೇ ಯೆಸ್ ಎಂದುಬಿಟ್ಟೆ ಎಂದಿದ್ದಾರೆ ಸಂಗೀತಾ. ಈ ಹಾಡು ಐಟಂ ಸಾಂಗ್ ಅಲ್ಲ ಎನ್ನುವ ಆಕಾಶ್ ಶ್ರೀವತ್ಸ, ಅಣ್ಣಾವ್ರ ಬಾಂಡ್ ಚಿತ್ರಗಳ ವಿಶೇಷ ಹಾಡಿನಂತಿರುತ್ತದೆ. ಟ್ವಿಂಕಲ್ ಟ್ವಿಂಕಲ್ ಸ್ಟಾರ್.. ಎಂದು ಸಾಹಿತ್ಯವಿದೆ. ಸಂಗೀತಾ ಶೃಂಗೇರಿ ಅವರು ಆ ಸಾಹಿತ್ಯಕ್ಕೆ ಸೂಟ್ ಆಗುವಂತಿದ್ದಾರೆ ಎಂದಿದ್ದಾರೆ ಆಕಾಶ್ ಶ್ರೀವತ್ಸ.

    ರಮೇಶ್ ಅರವಿಂದ್ ಹೀರೋ ಆಗಿರುವ ಚಿತ್ರದಲ್ಲಿ ಸೀಕ್ವೆಲ್ ಮತ್ತು ಪ್ರೀಕ್ವೆಲ್ ಕಥೆಗಳೆರಡೂ ಇವೆ. ರಮೇಶ್ ಎದುರು ಮೇಘನಾ ಗಾಂವ್ಕರ್, ಐಪಿಎಸ್ ದೀಪಾ ಕಾಮತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಧಿಕಾ ನಾರಾಯಣ್ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದು, ಇದೀಗ ಸಂಗೀತಾ ಶೃಂಗೇರಿ ಎಂಟ್ರಿಯ ಮೂಲಕ ತಾರಾಗಣದ ನಕ್ಷತ್ರಗಳ ಸಂಖ್ಯೆ ಇನ್ನಷ್ಟು ದೊಡ್ಡದಾಗಿದೆ. ಸೃಷ್ಟಿ ಶೆಟ್ಟಿ ಹಾಗೂ ಮಧುರ ಗೌಡ ಎಂಬ ಎರಡು ಹೊಸ ಪ್ರತಿಭೆಗಳು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿವೆ. ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಾಣದ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

  • ಶಿವಾಜಿಗೆ ಫಾರಿನ್ ಪ್ರೇಕ್ಷಕರಿಂದಲೂ ಅದ್ಭುತ ರೆಸ್ಪಾನ್ಸ್

    doreign audience appraciates shivaji suratkal

    ಶಿವರಾತ್ರಿಗೆ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿರುವ ಚಿತ್ರ ಶಿವಾಜಿ ಸುರತ್ಕಲ್. ರಮೇಶ್ ಅರವಿಂದ್ ಅವರ ವಿಭಿನ್ನ ಅವತಾರ, ಸ್ಪೆಷಲ್ ಎನ್ನಿಸುವ ಕಥೆ, ಥ್ರಿಲ್ ಕೊಡುವ ನಿರೂಪಣೆ, ಚಿತ್ರಕಥೆ ಕನ್ನಡದ ಪ್ರೇಕ್ಷಕರಿಗೆ ಹಿಡಿಸಿ, ಚಿತ್ರವನ್ನು ಗೆಲ್ಲಿಸಿದ್ದಾರೆ. ಈಗ ಇದೇ ಸಿನಿಮಾ ವಿದೇಶದಲ್ಲೂ ಭರ್ಜರಿ ಸದ್ದು ಮಾಡ್ತಿದೆ.

    ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ ಎನ್ನುವ ನಂಬಿಕೆಯಂತೂ ಇತ್ತು. ಆದರೆ ವಿದೇಶದಲ್ಲಿ ಕರ್ನಾಟಟಕದಲ್ಲಿ ಸಿಕ್ಕ ರೀತಿಯದ್ದೇ ರಿಯಾಕ್ಷನ್ ಸಿಕ್ಕಿದ್ದು ವಿಶೇಷ. ಇಲ್ಲಿಯೂ ಅಷ್ಟೆ.. ಮೊದಲ ದಿನ ಸಾಧಾರಣವಾದ ರಿಯಾಕ್ಷನ್ ಇತ್ತು. ನಂತರ 2ನೇ ದಿನಕ್ಕೆ.. 3ನೇ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿತ್ತು. ಅಲ್ಲಿಯೂ ಹಾಗೆಯೇ ಆಯ್ತು. ಅಮೆರಿಕದಲ್ಲಿ ಮೊದಲು 4 ಸೆಂಟರ್‍ಗಳಲ್ಲಿ ರಿಲೀಸ್ ಮಾಡಿದ್ದೆವು. ನಂತರ ಅದು 8 ಸೆಂಟರ್‍ಗೆ ಏರಿತು. ಆಸ್ಟ್ರೇಲಿಯಾದಲ್ಲೂ ಇದೇ ರೀತಿಯ ರೆಸ್ಪಾನ್ಸ್ ಸಿಕ್ಕಿದೆ. ಬ್ರಿಟನ್ನಿನಲ್ಲೂ ಚಿತ್ರಕ್ಕೆ ಪ್ರೇಕ್ಷಕರು ಧಾವಿಸಿ ಬರುತ್ತಿದ್ದಾರೆ. ಐ ಆ್ಯಮ್ ಹ್ಯಾಪಿ ಎನ್ನುತ್ತಾರೆ ರಮೇಶ್ ಅರವಿಂದ್.

    ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಶಿವಾಜಿ ಸುರತ್ಕಲ್ ಸೀಕ್ವೆಲ್ ಪ್ಲಾನ್ ಮಾಡುತ್ತಿದ್ದಾರೆ. ಸದ್ಯಕ್ಕೆ ರಮೇಶ್ ಅರವಿಂದ್ ಮತ್ತು ಆಕಾಶ್ ಶ್ರೀವತ್ಸ ಲಂಡನ್‍ಗೆ ಪ್ರೀಮಿಯರ್ ಶೋಗೆ ಹೊರಟಿದ್ದಾರೆ.

  • ಶೆರ್ಲಾಕ್ ಹೋಮ್ಸ್ ಶಿವಾಜಿ ಸುರತ್ಕಲ್

    shivaji suratkal has sherlock holmes touch

    ನೀವು ಇಂಗ್ಲಿಷ್ ಡಿಟೆಕ್ಟಿವ್ ಕಥೆ, ಕಾದಂಬರಿ ಓದಿರುವವರಾದರೆ... ಅಥವಾ ಕನ್ನಡದಲ್ಲಿಯೇ ಪತ್ತೇದಾರಿ ಸಾಹಿತ್ಯ ಗೊತ್ತಿರುವುವರಾದರೆ.. ನಿಮಗೆ ಶೆರ್ಲಾಕ್ ಹೋಮ್ಸ್ ಗೊತ್ತಿರುತ್ತೆ. ಪ್ರಚಂಡ ಬುದ್ದಿಶಕ್ತಿ ಇರುವ ಪತ್ತೇದಾರ ಶೆರ್ಲಾಕ್ ಹೋಮ್ಸ್. ಈಗ ಅದೇ ರೀತಿಯ ಡಿಟೆಕ್ಟಿವ್ ಆಗಿ ತೆರೆ ಮೇಲೆ ಬರುತ್ತಿದ್ದಾರೆ ಶಿವಾಜಿ ಸುರತ್ಕಲ್ ಅಲಿಯಾಸ್ ರಮೇಶ್ ಅರವಿಂದ್.

    ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರದಲ್ಲಿ ಶಿವಾಜಿ ಪಾತ್ರವೇ ಹಾಗಿದೆಯಂತೆ. ಆಕಾಶ್ ಅವರಿಗೆ ಇದು ಅವರ ಗೆಳೆಯ ಅಭಿನಂದನ್ ಹೇಳಿದ ಕಥೆ. ಕಥೆಯ ಒನ್ ಲೈನ್ ಕೇಳಿ ಇಷ್ಟವಾಗಿ ಅದನ್ನು ರಮೇಶ್ ಅವರಿಗೆ ತಲುಪಿಸಿದರಂತೆ ಆಕಾಶ್. ನಂತರ ರಮೇಶ್ ಅವರಿಗೂ ಕಥೆ ಇಷ್ಟವಾಯ್ತು. ಅದಾದ ಮೇಲೆ ಆಕಾಶ್ ಮತ್ತು ಅಭಿನಂದನ್ ಇಬ್ಬರೂ ಒಟ್ಟಿಗೇ ಸೇರಿ 1 ವರ್ಷ ಚಿತ್ರಕಥೆ ಬರೆದರಂತೆ. ಮಧ್ಯೆ ರಮೇಶ್ ಅರವಿಂದ್ ಕೂಡಾ ಇನ್‍ಪುಟ್ಸ್ ಕೊಟ್ಟಿದ್ದಾರೆ. ರಮೇಶ್ ಅವರ ಫಿಲ್ಮೀ ಜರ್ನಿಯ 101ನೇ ಚಿತ್ರವಾಗಿ ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ ರಿಲೀಸ್ ಆಗುತ್ತಿದೆ. 

  • ಸರ್ ಅರ್ಥರ್ ಕಾನನ್ ಡಾಯ್ಲ್ ಅವನು.. ಅಕಾಶ್ ಶ್ರೀವತ್ಸ ಇವನು..!

    shivaji suratkal specialty

    ಸರ್ ಆರ್ಥರ್‌ ಕೊನಾನ್ ಡಾಯ್ಲ್, ಇಂಗ್ಲಿಷ್ ಕಾದಂಬರಿ ಲೋಕದ ವಿಶಿಷ್ಟ ಹೆಸರು. ಶೆರ್ಲಾಕ್ ಹೋಮ್ಸ್ ಪಾತ್ರದ ಸೃಷ್ಟಿಕರ್ತ. ಪತ್ತೇದಾರನಾದವನು ಹೀಗೆಯೇ ಇರಬೇಕು ಎಂಬ ಕಲ್ಪನೆಗೆ ಕಸುವು ತುಂಬಿದ ಕಥೆಗಾರ. ಕನ್ನಡದಲ್ಲಿ ಶೆರ್ಲಾಕ್ ಹೋಮ್ಸ್ ಮಾದರಿಯ ಹಲವು ಕಥೆಗಾರರು ಬಂದಿದ್ದಾರೆ. ಆದರೆ.. ಅದೇಕೋ ಏನೋ.. ಆ ಮಾದರಿಯ ಪಾತ್ರವನ್ನಿಟ್ಟುಕೊಂಡು ಸಿನಿಮಾ ಮಾಡಿದವರಿರಲಿಲ್ಲ. ಅಂಥಾದ್ದೊಂದು ಕಥೆಯ ಬರಕ್ಕೆ ಫುಲ್ ಸ್ಟಾಪ್ ಇಟ್ಟಿರುವುದು ಆಕಾಶ್ ಶ್ರೀವತ್ಸ.

    ಶಿವಾಜಿ ಸುರತ್ಕಲ್ ಸಿನಮಾದ ನಿರ್ದೇಶಕ ಇವರೇ. ಗೆಳೆಯ ಅಭಿಷೇಕ್ ಜೊತೆಗೂಡಿ ರಚಿಸಿದ ಕಥೆಗೆ ಶಕ್ತಿ ತುಂಬಿರುವುದು ರಮೇಶ್ ಅರವಿಂದ್. ಒಂದರ್ಥದಲ್ಲಿ ರಮೇಶ್, ಕನ್ನಡದ ಶೆರ್ಲಾಕ್ ಹೋಮ್ಸ್ ಎನ್ನಬಹುದು. 100 ಕೇಸುಗಳನ್ನು ಯಶಸ್ವಿಯಾಗಿ ಪೂರೈಸಿರುವ ಶಿವಾಜಿಗೆ ಸಿಗುವ 101ನೇ ಕೇಸ್ ಕಥೆಯೇ ಈ ಸಿನಿಮಾ.

    ಈ ಚಿತ್ರದ ಸ್ಪೆಷಾಲಿಟಿ ಎಂದರೆ, ಸಿನಿಮಾ ನೋಡುವ ಪ್ರೇಕ್ಷಕ ಕಣ್ಣು, ಕಿವಿಯ ಜೊತೆ ಮೆದುಳಿಗೂ ಕೆಲಸ ಕೊಡಬೇಕು. ಸಿನಿಮಾ ನೋಡುತ್ತಾ ನೋಡುತ್ತಾ ಸ್ವತಃ ಪತ್ತೇದಾರನಾಗಬೇಕು. ಕೊಲೆಯ ರಹಸ್ಯ ಭೇದಿಸುವುದು ಕೇವಲ ಹೀರೋ ಕೆಲಸ ಅಲ್ಲ, ಪ್ರೇಕ್ಷಕನ ಕೆಲಸವೂ ಹೌದು. ಅಷ್ಟರಮಟ್ಟಿಗೆ ಪ್ರೇಕ್ಷಕರನ್ನು ಇನ್ವಾಲ್ವ್ ಮಾಡಿಕೊಳ್ಳುತ್ತೆ ಈ ಸಿನಿಮಾ ಎನ್ನುತ್ತಾರೆ ರಮೇಶ್ ಅರವಿಂದ್. ಸಿನಿಮಾ ಈಗಾಗಲೇ ಥಿಯೇಟರಿನಲ್ಲಿದೆ. ಥ್ರಿಲ್ ಬೇಕು ಎನ್ನುವವರಿಗೆ ಖಂಡಿತಾ ಈ ಸಿನಿಮಾ ಡಬ್ಬಲ್.. ತ್ರಿಬ್ಬಲ್.. ಥ್ರಿಲ್ ಕೊಡಲಿದೆ.