` asha bhat, - chitraloka.com | Kannada Movie News, Reviews | Image

asha bhat,

 • ರಾಬರ್ಟ್ ಚೆಲುವೆ ಆಶಾ ಭಟ್ : ಯಾರಿವಳು..?

  asha bhatt is the heroine for roberrt

  ದರ್ಶನ್ ಅಭಿನಯದ ರಾಬರ್ಟ್ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿರುವಾಗಲೇ ಚಿತ್ರದ ಹೀರೋಯಿನ್ ಯಾರು ಎಂಬ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ತರುಣ್ ಸುಧೀರ್. ಪೋಸ್ಟರ್‍ಗಳ ಮೂಲಕವೇ ಕುತೂಹಲ ಹುಟ್ಟಿಸಿರುವ ಚಿತ್ರವಿದು. ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ತಾರೆಯರು ನಾಯಕಿಯಾಗುತ್ತಾರೆ ಎಂಬ ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದ ತರುಣ್, ಅಪ್ಪಟ ಕನ್ನಡದ ಹುಡುಗಿಯನ್ನೇ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಆಶಾಭಟ್, ದರ್ಶನ್ ಎದುರು ನಟಿಸಲಿರುವ ನಾಯಕಿ.

  ಆಶಾಭಟ್, ಬಣ್ಣದ ಲೋಕಕ್ಕೆ ಹೊಸಬರೇನಲ್ಲ. ಹಿಂದಿಯಲ್ಲಿ ಜಂಗ್ಲಿ ಅನ್ನೋ ಸಿನಿಮಾಗೆ ನಾಯಕಿಯಾಗಿದ್ದವರು. ಇನ್ನು ಆಶಾಭಟ್, ಭದ್ರಾವತಿಯ ಹುಡುಗಿ. 2014ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಪಟ್ಟ ಗೆದ್ದಿದ್ದ ಚೆಲುವೆ. ಈ ಚಿತ್ರದ ಮೂಲಕ ಕನ್ನಡದ ಹುಡುಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ಚಿತ್ರದ ನಾಯಕಿ ಆಶಾ ಭಟ್‍ಗೆ ರಾಬರ್ಟ್ ಕುಟುಂಬಕ್ಕೆ ಸ್ವಾಗತ ಎಂದು ವೆಲ್‍ಕಂ ಹೇಳಿದ್ದಾರೆ ತರುಣ್ ಸುಧೀರ್. ಉಮಾಪತಿ ಚಿತ್ರದ ನಿರ್ಮಾಪಕ.

 • ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

  ರಾಬರ್ಟ್ ಟೀಂಗೆ ಆಶಾ ಭಟ್ ಬಂದಿದ್ದು ಹೇಗೆ..?

  ಆಶಾ ಭಟ್, ಮಿಸ್ ಸುಪ್ರಾ ಇಂಟರ್‍ನ್ಯಾಷನಲ್ ಅವಾರ್ಡ್ ವಿಜೇತೆ. ಅಪ್ಪಟ ಕನ್ನಡತಿಯೇ ಆದರೂ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದ ಮೇಲೆ ಮುಂಬೈನಲ್ಲೇ ಸೆಟಲ್ ಆಗಿದ್ದವರು. ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಆಶಾ ಭಟ್ ತರುಣ್ ಸುಧೀರ್ ಕಣ್ಣಿಗೆ ಬಿದ್ದಿದ್ದು ಹೇಗೆ..?

  ನಾನು ಮುಂಬೈನಲ್ಲೇ ಇದ್ದೆ. ಮಾಡೆಲಿಂಗ್ ಮಾಡುತ್ತಿದ್ದ ಕಾರಣ, ಬಾಲಿವುಡ್ ಆಫರ್‍ಗಳು ಬರೋಕೆ ಶುರುವಾಯ್ತು. ಆಗ ಸಿಕ್ಕ ಆಫರ್ ಹಿಂದಿಯ ಜಂಗ್ಲಿ ಸಿನಿಮಾ. ವಿದ್ಯುತ್ ಜಮ್ವಾಲ್ ಎದುರು ನಟಿಸಿದ್ದೆ. ಅದನ್ನು ನೋಡಿ ತರುಣ್ ಸುಧೀರ್ ನನ್ನನ್ನು ಕಾಂಟ್ಯಾಕ್ಟ್ ಮಾಡಿದರು. ನನಗೂ ಕ್ಯಾರೆಕ್ಟರ್, ಕಥೆ ಮತ್ತು ಟೀಂ ಇಷ್ಟವಾಯ್ತು. ಒಪ್ಪಿಕೊಂಡೆ ಎಂದಿದ್ದಾರೆ ಆಶಾ ಭಟ್.

  ಆಶಾ ಭಟ್, ಅವರ ಆಕ್ಟಿಂಗ್ ಸ್ಕಿಲ್ ಮತ್ತು ಕಾನ್ಫಿಡೆನ್ಸ್ ರಾಬರ್ಟ್ ಚಿತ್ರಕ್ಕೆ ಆಕೆಯನ್ನು ಓಕೆ ಮಾಡಲು ಕಾರಣವಂತೆ. ತರುಣ್ ಸುಧೀರ್‍ಗೂ ಇದು ದೊಡ್ಡ ಚಾಲೆಂಜ್. ದರ್ಶನ್, ವಿನೋದ್ ಪ್ರಭಾಕರ್, ದೇವರಾಜ್, ಜಗಪತಿ ಬಾಬು, ರವಿಶಂಕರ್‍ರಂತಹ ದಿಗ್ಗಜರನ್ನು ಹ್ಯಾಂಡಲ್ ಮಾಡೋದು ಸುಲಭದ ವಿಷಯ ಅಲ್ಲ. ನಿರ್ಮಾಪಕ ಉಮಾಪತಿಯವರಂತೂ ದೊಡ್ಡ ಚಾಲೆಂಜ್‍ನ್ನೇ ತೆಗೆದುಕೊಂಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಮಾರ್ಚ್ 11ರಂದು ಪ್ರೇಕ್ಷಕರ ರೆಸ್ಪಾನ್ಸ್‍ನಲ್ಲಿ ಬೆಲೆ ಸಿಗಲಿದೆ.

 • ರಾಬರ್ಟ್ ಟ್ರೇಲರ್ : ದಾಖಲೆಗಳಿಗೆಲ್ಲ ಬಾಸು

  ರಾಬರ್ಟ್ ಟ್ರೇಲರ್ : ದಾಖಲೆಗಳಿಗೆಲ್ಲ ಬಾಸು

  ಅದು ಅಭಿಮಾನಿಗಳೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಕ್ಷಣ. ಹೀಗಾಗಿಯೇ ದರ್ಶನ್ ಹುಟ್ಟುಹಬ್ಬಕ್ಕೆಂದು ರಿಲೀಸ್ ಆದ ರಾಬರ್ಟ್ ಟ್ರೇಲರ್ ಹವಾ ಎಬ್ಬಿಸಿದೆ. ಟ್ರೇಲರ್ನ ಒಂದೊಂದು ಡೈಲಾಗುಗಳೂ ಶಿಳ್ಳೆ ಹೊಡೆಸಿಕೊಳ್ಳುತ್ತಿವೆ.

  ಒಬ್ಬರ ಲೈಫ್ನಲ್ಲಿ ಹೀರೋ ಆಗಬೇಕು ಅಂದ್ರೆ, ಇನ್ನೊಬ್ಬರ ಲೈಫಿನಲ್ಲಿ ವಿಲನ್ ಆಗಲೇಬೇಕು..

  ನಾವು ನೋಡೋಕೆ ಮಾತ್ರ ಕ್ಲಾಸು. ವಾರ್ಗೆ ಇಳಿದ್ರೆ ಫುಲ್ ಮಾಸು..

  ಏ ತುಕಾಲಿ.. ನೀನು ಮಾಸ್ ಆದ್ರೆ, ನಾನು ಮಾಸ್ಗೇ ಬಾಸು..

  ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು. ರಾವಣನ ಎದುರು ಗೆಲ್ಲೋದೂ ಗೊತ್ತು..

  ಡೈಲಾಗುಗಳು ಅಭಿಮಾನಿಗಳ ಹೃದಯದಲ್ಲಿ ಅಕ್ಷರಶಃ ಕಿಚ್ಚೆಬ್ಬಿಸಿವೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ಆಶಾಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ಸೋನಲ್ ಮಂಥೆರೋ, ಅವಿನಾಶ್, ರವಿ ಕಿಶನ್.. ಹೀಗೆ ಭರ್ಜರಿ ತಾರಾಗಣ ಇರೋ ಚಿತ್ರದ ಟ್ರೇಲರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

 • ರಾಬರ್ಟ್ ಮೆಚ್ಚುಗೆ ಗಳಿಸಿದ ಆ ಹೀರೋಗಳು ಯಾರ್ ಗೊತ್ತಾ..?

  roberrt ream salutes real hero's

  ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹೀರೋಗಳ ಕಥೆ. ಅರೆ.. ಹೀರೋ ದರ್ಶನ್ ಅಲ್ಲವಾ ಅಂದ್ಕೋಬೇಡಿ. ಇಡೀ ಚಿತ್ರತಂಡ ಚಿತ್ರದ ಹೀರೋಗಳೆಂದು ಪರಿಗಣಿಸಿರೋದು ಚಿತ್ರಕ್ಕೆ ತೆರೆಯ ಹಿಂದೆ ದುಡಿದ ಕಾರ್ಮಿಕರನ್ನ.

  ಮೇ 01ರ ಕಾರ್ಮಿಕ ದಿನಾಚರಣೆ ವಿಶೇಷವಾಗಿ ಚಿತ್ರದ ಮೇಕಿಂಗ್ ವಿಡಿಯೋ ಹೊರಬಿಟ್ಟಿರುವ ರಾಬರ್ಟ್ ಟೀಂ, ಚಿತ್ರದ ಕಾರ್ಮಿಕರನ್ನು ಹೀರೋಗಳ ಪಟ್ಟಕ್ಕೇರಿಸಿ ಧನ್ಯವಾದ ಅರ್ಪಿಸಿದೆ.

  ನಮ್ಮ ಕನಸು ಸಾಕಾರಗೊಳಿಸುವ ನಿಜವಾದ ನಾಯಕರು ಬೆಳ್ಳಿ ಪರದೆ ಹಿಂದಿದ್ದಾರೆ. ರಾಬರ್ಟ್ ಟೀಂನಲ್ಲಿ ದುಡಿಯುತ್ತಿರುವ ತಾಂತ್ರಿಕ ವರ್ಗಕ್ಕೆ ಕಾರ್ಮಿಕ ದಿನಾಚರಣೆ ಶುಭಾಶಯಗಳು ಎಂದಿದೆ ರಾಬರ್ಟ್ ಟೀಂ.

  ಉಮಾಪತಿ ನಿರ್ಮಾಣದ ಚಿತ್ರ ರಾಬರ್ಟ್. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಇಷ್ಟು ಹೊತ್ತಿಗೆ ರಿಲೀಸ್ ಆಗಿ ಥಿಯೇಟರಿನಲ್ಲಿ ಹವಾ ಎಬ್ಬಿಸಬೇಕಿತ್ತು. ಲಾಕ್ ಡೌನ್ ಕಾರಣದಿಂದಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ. ಲಾಕ್ ಡೌನ್ ಮುಗಿದು ಥಿಯೇಟರುಗಳು ಓಪನ್ ಆದ ತಕ್ಷಣ ಸಿನಿಮಾ ರಿಲೀಸ್ ಆಗಬಹುದು.

 • ರಾಬರ್ಟ್ ಸೀಕ್ರೆಟ್ ಹಿಂದೆ ಉಪ್ಪಿ ಟೆಕ್ನಿಕ್..!

  uppi's trick in roberrt movie

  ರಾಬರ್ಟ್ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದಿದೆ. ಇದು ತರುಣ್ ಸುಧೀರ್ ನಿರ್ದೇಶನದ 2ನೇ ಸಿನಿಮಾ. ಚೌಕ ಚಿತ್ರದ ನಂತರ ತರುಣ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಅವರೇ ಹೀರೋ. ಮೊದಲ ಚಿತ್ರದಲ್ಲಿ ರಾಬರ್ಟ್ ಎಂಬ ಪಾತ್ರದ ಮೂಲಕವೇ ಅತಿಥಿ ನಟರಾಗಿದ್ದ ದರ್ಶನ್, ಈಗ ಅದೇ ಹೆಸರಿನ ಚಿತ್ರದಲ್ಲಿ ಹೀರೋ ಆಗಿರುವುದು ವಿಶೇಷ. ಆದರೆ, ಎಲ್ಲದಕ್ಕಿಂತ ಕುತೂಹಲ ಹುಟ್ಟಿಸಿರುವುದು ಚಿತ್ರದ ಕಥೆ ಏನಿರಬಹುದು ಅನ್ನೋದು.

  ಏಕೆಂದರೆ ಇದುವರೆಗೆ ತರುಣ್ ಹೊರಬಿಟ್ಟಿರೋದು ಎರಡೇ ಎರಡು ಪೋಸ್ಟರ್. ಕಳೆದ ದೀಪಾವಳಿಗೆ ಆಂಜನೇಯ ರಾಮಲಕ್ಷ್ಮಣರನ್ನು ಹೊತ್ತುಕೊಂಡು ಹೋಗುತ್ತಿದ್ದ ಪೋಸ್ಟರ್ ಇದ್ದರೆ, 2ನೇ ಪೋಸ್ಟರ್‍ನಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ದರ್ಶನ್ ಫೋಟೋ ಇತ್ತು. ಅಲ್ಲಿಯೂ ಅಷ್ಟೆ, ದರ್ಶನ್ ಮುಖ ದರ್ಶನ ಮಾಡಿಸಿಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ, ರಾಬರ್ಟ್‍ನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋದು ತಾಜಾ ತಾಜಾ ಸೀಕ್ರೆಟ್ ಆಗಿಯೇ ಇದೆ. ಇದರ ಹಿಂದಿರೋದು ಏನು ಎಂದರೆ ತರುಣ್ ಸುಧೀರ್ ಉಪೇಂದ್ರ ಸ್ಟೈಲ್ ನೆನಪಿಸಿಕೊಳ್ತಾರೆ.

  ಉಪೇಂದ್ರ ಚಿತ್ರಗಳಲ್ಲಿ ಟೈಟಲ್ ಮತ್ತು ಪೋಸ್ಟರ್‍ಗಳು ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದವು. ನಮಗೆ ಅದು ಕುತೂಹಲ ಹೆಚ್ಚಿಸುತ್ತಿತ್ತು. ಪೋಸ್ಟರ್ ನೋಡಿದ ಒಬ್ಬ ವ್ಯಕ್ತಿ, ಅ ಪೋಸ್ಟರ್ ಬಗ್ಗೆ 10 ಸೆಕೆಂಡ್ ತಲೆಕೆಡಿಸಿಕೊಂಡರೆ ಸಾಕು, ನಮ್ಮ ಶ್ರಮ ಮತ್ತು ಉದ್ದೇಶ ಸಾಥಕ ಎನ್ನುತ್ತಾರೆ ತರುಣ್.

  ಅಂದಹಾಗೆ.. ಉಪೇಂದ್ರ ಅವರ ಎ, ಉಪೇಂದ್ರ, ಸೂಪರ್, ಉಪ್ಪಿ 2 ಚಿತ್ರಗಳ ಪೋಸ್ಟರ್ ಅದೆಷ್ಟು ಕುತೂಹಲ ಹುಟ್ಟಿಸಿದ್ದವು ಎನ್ನುವುದು ಕನ್ನಡ ಚಿತ್ರರಸಿಕರಿಗೆ ಅರಿವಿದೆ. ಈಗ ಆ ಹಾದಿಯಲ್ಲಿ ರಾಬರ್ಟ್ ಮುನ್ನುಗ್ಗುತ್ತಿದೆ. ನಿಗೂಢಗಳ ಗಂಟುಮೂಟೆಗಳೊಂದಿಗೆ..

 • ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್

  ರಾಬರ್ಟ್‍ಗೆ ತೊಂದರೆ ಇಲ್ಲ ; ದ.ಭಾ. ಫಿಲಂ ಚೇಂಬರ್

  ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಮಾಡಬೇಕು. ಆದರೆ ಡೇಟ್ ಘೋಷಿಸಿದ ನಂತರ ತೆಲುಗು ಚಿತ್ರಗಳಿಗಾಗಿ ರಾಬರ್ಟ್ ಮುಂದೂಡಲು ಹೇಳುತ್ತಿದ್ದಾರೆ. ಕನ್ನಡದಲ್ಲಿ ರಿಲೀಸ್ ಆದ ಒಂದು ವಾರದ ನಂತರ ಅಂಧ್ರ, ತೆಲಂಗಾಣದಲ್ಲಿ ರಿಲೀಸ್ ಮಾಡಬೇಕು. ಇದು ರಾಬರ್ಟ್ ಚಿತ್ರಕ್ಕೆ ಆಗುತ್ತಿರುವ ಅನ್ಯಾಯ ಎಂದು ರಾಬರ್ಟ್ ಚಿತ್ರತಂಡ ಸಿಡಿದೆದ್ದಿತ್ತು.

  ಹೆಚ್ಚೂ ಕಡಿಮೆ ಒಂದು ದಶಕದ ನಂತರ ಚೇಂಬರ್`ಗೆ ಭೇಟಿ ಕೊಟ್ಟಿದ್ದ ದರ್ಶನ್, ರಾಬರ್ಟ್ ಬಿಡುಗಡೆ ವಿವಾದ ಇತ್ಯರ್ಥಕ್ಕೆ ಮನವಿ ಮಾಡಿದ್ದರು. ಭಾನುವಾರ ಚೆನ್ನೈನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿ ಸಮಿತಿ ಸಭೆ ಇತ್ತು. ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್  ಹಾಗೂ ಥಾಮಸ್ ಡಿಸೋಜಾ ವಿವಾದವನ್ನು ತೆಲುಗು ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದರು. ಮನವಿ ಸ್ವೀಕರಿಸಿದ ತೆಲುಗು ಚೇಂಬರ್ ಅಧ್ಯಕ್ಷ ಸಿ. ಕಲ್ಯಾಣ್ ರಾಬರ್ಟ್ ಚಿತ್ರಕ್ಕೆ ಯಾವುದೇ ತೊಂದರೆಯಾಗದಂತೆ ಬಿಡುಗಡೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

 • ವ್ಹಾರೆವ್ಹಾ.. ದರ್ಶನ್ ಸ್ಟೆಪ್ ಬೊಂಬಾಟ್

  ವ್ಹಾರೆವ್ಹಾ.. ದರ್ಶನ್ ಸ್ಟೆಪ್ ಬೊಂಬಾಟ್

  ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ.. ರಾಬರ್ಟ್ ಚಿತ್ರದ ಮೊದಲ ವಿಡಿಯೋ ಸಾಂಗ್ ಇದು. ಹಾಡು ರಿಲೀಸ್ ಆಗುತ್ತಿದ್ದಂತೆ, ಎಂದಿನಂತೆ ವ್ಯೂವ್ಸ್.. ಹಿಟ್ಸ್.. ದಾಖಲೆ.. ನಿರ್ಮಾಣವಾಗುತ್ತಿದೆ. ಆದರೆ.. ಅವೆಲ್ಲಕ್ಕಿಂತ ದರ್ಶನ್ ಫ್ಯಾನ್ಸ್ ಥ್ರಿಲ್ಲಾಗಿರೋದು ದರ್ಶನ್ ಹಾಕಿರೋ ಸ್ಟೆಪ್ಪುಗಳಿಗೆ. ಸಾಧಾರಣವಾಗಿ ದರ್ಶನ್ ಡ್ಯಾನ್ಸುಗಳಿಂದ ದೂರ. ನಾನು ಒಳ್ಳೆಯ ಡ್ಯಾನ್ಸರ್ ಅಲ್ಲ ಎಂದು ಓಪನ್ ಆಗಿಯೇ ಹೇಳಿಕೊಳ್ಳೋ ದರ್ಶನ್, ಸಿಂಪಲ್ ಡ್ಯಾನ್ಸ್ ಸ್ಟೆಪ್ಪುಗಳನ್ನಷ್ಟೇ ಹಾಕ್ತಾರೆ. ಆದರೆ.. ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ.. ಹಾಡಿನಲ್ಲಿ ಮಾತ್ರ ದರ್ಶನ್ ಮೈಚಳಿ ಬಿಟ್ಟು ಕುಣಿದಿದ್ದಾರೆ.

  ಬಾಲಿವುಡ್ ಗಾಯಕ ನಕಾಶ್ ಅಜೀಜ್ ಮತ್ತು ಐಶ್ವರ್ಯಾ ರಂಗರಾಜನ್  ಹಾಡಿರೋ ಹಾಡಿಗೆ ಸಾಹಿತ್ಯ ಭರ್ಜರಿ ಚೇತನ್ ಕುಮಾರ್ ಅವರದ್ದು. ಕೊರಿಯೋಗ್ರಫಿಯೂ ಸಖತ್ತಾಗಿದ್ದು, ಜನ್ಯ ಬೀಟ್ಸ್‍ಗಳಿಗೆ ಅಷ್ಟೇ ಸೂಪರ್ಬ್ ಆಗಿ ಕೈಜೋಡಿಸಿದ್ದಾರೆ ಕೊರಿಯೋಗ್ರಫರ್ ಭುವನ್. ತರುಣ್ ಸುಧೀರ್ ನಿರ್ದೇಶನದ ಸಿನಿಮಾ, ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ಸಿನಿಮಾಗೆ ರಿಲೀಸ್‍ಗೂ ಮೊದಲೇ ಸಿಗುತ್ತಿರೋ ರೆಸ್ಪಾನ್ಸ್‍ಗೆ ಫುಲ್ ಥ್ರಿಲ್ಲಾಗಿರೋದು ನಿರ್ಮಾಪಕ ಉಮಾಪತಿ.