ಒಬ್ಬೊಬ್ಬರಿಗೆ ಒಂದೊಂದು ಪದಗಳ ಮೇಲೆ ಅದೃಷ್ಟ, ನಂಬಿಕೆ ಇರುತ್ತದೆ. ಒಂದು ಕಾಲವಿತ್ತು. ಉಪೇಂದ್ರ ಅವರು ಒಂದಕ್ಷರದ ಹೆಸರಿಟ್ಟರೆ ಆ ಚಿತ್ರಗಳು ಸೂಪರ್ ಹಿಟ್ ಎನ್ನುವ ನಂಬಿಕೆ. ಅದಕ್ಕೆ ಶ್, ಓಂ, ಎ.. ಮೊದಲಾದ ಚಿತ್ರಗಳು ಹಿಟ್ಟೋ ಹಿಟ್ಟು. ಸೀರಿಯಲ್ಲುಗಳ ವಿಷಯಕ್ಕೆ ಬಂದರೆ ಸೀತಾರಾಂ ತಮ್ಮ ಧಾರಾವಾಹಿಗಳ ಟೈಟಲ್`ನ್ನು ಮ ಅಕ್ಷರದಲ್ಲೇ ಇರುವಂತೆ ನೋಡಿಕೊಳ್ಳುತ್ತಾರೆ. ಮನ್ವಂತರ, ಮುಕ್ತ, ಮಗಳು ಜಾನಕಿ, ಸಿನಿಮಾ ಆದ ಮತದಾನ.. ಹೀಗೆ.. ಇತ್ತೀಚೆಗೆ ಆ ನಂಬಿಕೆಯ ಟ್ರೆಂಡ್‍ಗೆ ಸಿಕ್ಕಿರುವ ಅಕ್ಷರ ಕ.
ಕಳೆದ ವರ್ಷಗಳಲ್ಲಿ ಹಿಟ್ ಆದ..ಸೂಪರ್ ಹಿಟ್ ಆದ ಚಿತ್ರಗಳಲ್ಲಿ ಬಹುತೇಕ ಚಿತ್ರಗಳು ಕ ಅಕ್ಷರದಿಂದ ಶುರುವಾದವು. ಎಲ್ಲರಿಗೂ ಗೊತ್ತಿರೋ ಹಾಗೆ ಕೆಜಿಎಫ್ ಚಾಪ್ಟರ್ ಮತ್ತು ಚಾಪ್ಟರ್ 2 ಎರಡೂ ಚಿತ್ರಗಳ ಮೊದಲ ಅಕ್ಷರ ಕ. ಕಾಂತಾರ ಚಿತ್ರವೂ ಅಷ್ಟೆ, ಕ ಅಕ್ಷರದಿಂದಲೇ ಶುರುವಾಗಿತ್ತು. ಈಗ ಆ ಅದೃಷ್ಟದ ಕಥೆ ಹೊರಬರುತ್ತಿರುವುದು ಕಬ್ಜ ಚಿತ್ರಕ್ಕೆ.
ಕಬ್ಜ ಚಿತ್ರ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಒಂದು ಕಡೆ ಅಪ್ಪು ಹುಟ್ಟುಹಬ್ಬವಿದ್ದರೆ, ಇನ್ನೊಂದೆಡೆ ಕಬ್ಜ ಚಿತ್ರದ ಹಬ್ಬ. ಆರ್.ಚಂದ್ರು ನಿರ್ಮಾಣ ಮಾಡಿ ನಿರ್ದೇಶಿಸಿರುವ ಕಬ್ಜ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶಿವಣ್ಣ, ಶ್ರೇಯಾ ಸರಣ್, ತಾನ್ಯಾ ಹೋಪ್ ಇದ್ದಾರೆ. ಅದೃಷ್ಟ ಕ ಅಕ್ಷರದಿಂದ ಬರುತ್ತೋ.. ಒಳ್ಳೆಯ ಕಂಟೆಂಟ್ ಇರುವ ಪ್ರೆಸೆಂಟೇಷನ್‍ನಿಂದ ಬರುತ್ತೋ.. ಕಬ್ಜ ಗೆದ್ದ ನಂತರ ಮಾತನಾಡಬಹುದು. ಸದ್ಯಕ್ಕಂತೂ ಇಡೀ ದೇಶದಲ್ಲಿ ಕಬ್ಜದ ಕ್ರೇಜ್ ಜೋರಾಗಿ ಕೇಳಿ ಬರುತ್ತಿದೆ.