ಶ್ರೀಮುರಳಿ, ಭರ್ಜರಿ ಚೇತನ್ ಇದೇ ಮೊದಲ ಬಾರಿಗೆ ಜೋಡಿಯಾಗಿರೋ ಚಿತ್ರ ಭರಾಟೆ. ಇತ್ತೀಚೆಗೆ ಡಾರ್ಕ್ ಶೇಡ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಶ್ರೀಮುರಳಿ, ಇಲ್ಲಿ ಕಲರ್‍ಫುಲ್ ಆಗಿ ಮಿಂಚಿದ್ದಾರೆ. ಶ್ರೀಮುರಳಿಗೆ ಇಲ್ಲಿ ಶ್ರೀಲೀಲಾ ಜೋಡಿ. ನೀನೇ ಮೊದಲು ನೀನೇ ಕೊನೆ.. ಎಂದು ಪ್ರೇಕ್ಷಕರ ಎದೆಗೇ ಕಿಸ್ ಕೊಟ್ಟ ಚೆಲುವೆ, ಇಲ್ಲಿ ರಾಧಾ ಆಗಿದ್ದಾರೆ.
ಮೊದಲ ಬಾರಿಗೆ ಶ್ರೀಮುರಳಿ ಜೊತೆ ನಟಿಸಬೇಕು ಎಂದಾಗ ನರ್ವಸ್ ಆಗಿದ್ದೆ. ಆಗ ನನ್ನ ಮೊದಲ ಚಿತ್ರವೇ ಇನ್ನೂ ಪೂರ್ತಿ ಆಗಿರಲಿಲ್ಲ. ಆದರೆ, ಚೇತನ್ ಅವರೇ ಧೈರ್ಯ ತುಂಬಿದ್ರು. ಆದರೆ, ಶ್ರೀಮುರಳಿಯವರ ಜೊತೆ ನಟಿಸುವಾಗ ಅವರ ಸಿಂಪ್ಲಿಸಿಟಿ ಮತ್ತು ತಾಳ್ಮೆ ಬಹಳ ಇಷ್ಟವಾಯ್ತು ಎನ್ನುವ ಶ್ರೀಲೀಲಾಗೆ, ಶ್ರೀಮುರಳಿಯವರ ಶಿಸ್ತು ಪಾಠವನ್ನೇ ಕಲಿಸಿದೆ.
ಅವರು ಪಾತ್ರ ಮತ್ತು ಸನ್ನಿವೇಶಕ್ಕೆ ಎಷ್ಟು ಶ್ರಮ ಹಾಕ್ತಾರೆ ಅಂದ್ರೆ, ನಿರ್ದೇಶಕರು ಓಕೆ ಎನ್ನುವವರೆಗೂ ಬೇಸರ ಮಾಡಿಕೊಳ್ಳಲ್ಲ. ತಾಳ್ಮೆ ಕಳೆದುಕೊಳ್ಳಲ್ಲ. ಶಿಸ್ತು ತಪ್ಪಲ್ಲ. ನಿರ್ದೇಶಕರೇ ಫೈನಲ್. ಅವರ ಆ ಶಿಸ್ತು, ತಾಳ್ಮೆಯಿಂದ ನಮ್ಮಂತ ಹೊಸಬರು ಕಲಿತುಕೊಳ್ಳೋದು ತುಂಬಾ ಇದೆ ಎನ್ನುತ್ತಾರೆ ಶ್ರೀಲೀಲಾ.
ಸುಪ್ರೀತ್ ನಿರ್ಮಾಣದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಸುತ್ತಮುತ್ತ ಹಬ್ಬದ ಭರಾಟೆ ಇದೆ.