ಕಿಸ್ ಚಿತ್ರದಲ್ಲಿ ನಟಿಸಿರುವವರಲ್ಲಿ ವಿರಾಟ್ ಮತ್ತು ಶ್ರೀಲೀಲಾ ಇಬ್ಬರೂ ಹೊಸಬರೇ. ವಿಶೇಷವೇನು ಗೊತ್ತೇ.. ಚಿತ್ರತಂಡಕ್ಕೆ ಸ್ಟಾರ್ ನಟರ ಅದ್ಭುತ ಬೆಂಬಲ ಸಿಕ್ಕಿರುವುದು.
ಕಿಸ್ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರುವುದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ತಮ್ಮನ್ನು ಚಿತ್ರರಂಗಕ್ಕೆ ಅದ್ಧೂರಿಯಾಗಿ ಪರಿಚಯಿಸಿದ ಎ.ಪಿ.ಅರ್ಜುನ್ ಮೇಲಿನ ಪ್ರೀತಿಗಾಗಿ ಚಿತ್ರಕ್ಕೆ ಬ್ಯಾಕ್ ಗ್ರೌಂಡ್ ವಾಯ್ಸ್ ಕೊಟ್ಟಿದ್ದಾರೆ.
ಇನ್ನು ಹೀರೋ ವಿರಾಟ್ ಅವರಿಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಟ್ಟು ಸಹಕರಿಸಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅದೂ ಕೇವಲ ಹೊಸಬರ ಮೇಲಿನ ಪ್ರೀತಿಗಾಗಿ.
ನಟಿ ಶ್ರೀಲೀಲಾ ಪಾಲಿಗೆ ರಾಧಿಕಾ ಪಂಡಿತ್ ಅಕ್ಕನಂತೆ ನಿಂತು ಮಾರ್ಗದರ್ಶನ ಮಾಡಿದ್ದಾರೆ. ಅಫ್‍ಕೋರ್ಸ್, ರಾಧಿಕಾ ಪಂಡಿತ್ ಅವರ ಡಾಕ್ಟರ್ ಶ್ರೀಲೀಲಾ ತಾಯಿ ಸ್ವರ್ಣಲತಾ.
ಕಿಸ್ ಮುಗಿಯುವ ಮೊದಲೇ ಶ್ರೀಲೀಲಾ ಅವರ ಅಭಿನಯ ಮೆಚ್ಚಿಕೊಂಡು ಭರಾಟೆಯಲ್ಲಿ ಚಾನ್ಸ್ ಕೊಟ್ಟಿದ್ದು ಭರ್ಜರಿ ಚೇತನ್. ಅದೂ ಶ್ರೀಮುರಳಿ ಎದುರು ನಾಯಕಿಯಾಗಿ.
ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಅದ್ಬುತ ಹಾಡು ಕೊಟ್ಟಿದ್ದರೆ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಕಣ್ಣು ಕುಕ್ಕುವಂತಿದೆ. ಅರ್ಜುನ್ ಶೆಟ್ಟಿ ಕ್ಯಾಮೆರಾ, ಸಾನ್ಯಾ ಅವರ ಕಾಸ್ಟ್ಯೂಮ್ ಕೂಡಾ ಕಿಸ್‍ನಲ್ಲಿ ಗಮನ ಸೆಳೆಯುತ್ತಿದೆ.