` billgates, - chitraloka.com | Kannada Movie News, Reviews | Image

billgates,

 • Darshan Releases The Teaser Of 'Bill Gates'

  darshan releases the teaser of bill gates

  Actor Darshan who is busy with the shooting of his latest film 'Robert' on Saturday released the teaser of Shishir starrer 'Bill Gates'.

  'Bill Gates' is a comic fantasy film starring Shishir and Chikkanna in prominent roles. While, Chikkanna plays the role of lord Yama, Shishir is seen in the role of Chitraguptha. Roja and Meghana Appaiah are the heroines.

  'Bill Gates' is written and directed by newcomer C Srinivas. The film is produced under Sri Panchajanya Cine Creations. Nobin Paul is the music composer.

 • ಆಗ ದೊಡ್ಡಣ್ಣ.. ಈಗ ಚಿಕ್ಕಣ್ಣ.. ಯಮಹೋ ಯಮಃ

  chikkanna in yamadharmaraya's role

  ಕನ್ನಡದಲ್ಲಿ ಯಮ ಎಂದರೆ ತಕ್ಷಣ ಕಣ್ಮುಂದೆ ಬರೋ ಹೆಸರು ದೊಡ್ಡಣ್ಣ. ಯಮಹೋ ಯಮಃ ಎಂಬ ದೊಡ್ಡಣ್ಣ ಸ್ಟೈಲ್ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಸದಾ ಹಸಿರು. ಈಗ ಅವರ ಸ್ಟೈಲಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಚಿಕ್ಕಣ್ಣ. ಸಾಕ್ಷಾತ್ ಯಮಧರ್ಮನಾಗಿದ್ದಾರೆ.

  ಬಿಲ್‍ಗೇಟ್ಸ್ ಚಿತ್ರದಲ್ಲಿ ಚಿಕ್ಕಣ್ಣ ಯಮಧರ್ಮನ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಶ್ರೀನಿವಾಸ್ ನಿರ್ದೇಶನದ ಬಿಲ್‍ಗೇಟ್ಸ್ ಚಿತ್ರದಲ್ಲಿ ನರಕಾಧಿಪತಿಯಾಗಿ ನಟಿಸಿರುವ ಚಿಕ್ಕಣ್ಣ, ಟೀಸರ್‍ನಲ್ಲಿ ಹೇಳಿರೋದು ಒಂದೇ ಒಂದು ಡೈಲಾಗ್. ಚಿತ್ರಗುಪ್ತರೇ ಸಭೆ ಪ್ರಾರಂಭವಾಗಲಿ ಎಂಬ ಪುಟ್ಟ ತುಣುಕು ಬಿಟ್ಟಿದೆ ಬಿಲ್‍ಗೇಟ್ಸ್ ಟೀಂ.

  ಚಿಕ್ಕಣ್ಣ ಜೊತೆ ಶಿಶಿರ, ರೋಜಾ, ಅಕ್ಷತಾ ರೆಡ್ಡಿ ನಟಿಸಿರುವ ಚಿತ್ರಕ್ಕೆ ವಸಂತ್ ಕುಮಾರ್ ಮತ್ತು ನಿರ್ದೇಶಕ ಶ್ರೀನಿವಾಸ್ ಅವರೇ ನಿರ್ಮಾಪಕರು. ಹೊಸ ಚಿತ್ರಕ್ಕೆ ಹೊಸ ಟೀಸರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದಾರೆ.

 • ಯಮಧರ್ಮರಾಯ ಚಿಕ್ಕಣ್ಣ

  chikkanna as yamadharmaraa in his next film bllgates

  ಕಾಮಿಡಿ ಸ್ಟಾರ್ ಚಿಕ್ಕಣ್ಣ ಯಮಧರ್ಮನಾಗುತ್ತಿದ್ದಾರೆ. ಛೆ.. ಛೆ.. ಹಿಂಗ್ಯಾಕಾಯ್ತು ಅಂದ್ಕೋಬೇಡಿ.. ಚಿಕ್ಕಣ್ಣ ಬಿಲ್‍ಗೇಟ್ಸ್ ಅನ್ನೋ ಹೆಸರಿನ ಚಿತ್ರಕ್ಕೆ ಹೀರೋ. ಈ ಚಿತ್ರದಲ್ಲಿ ಅವರು ಯಮಧರ್ಮರಾಯನ ಗೆಟಪ್ಪಿನಲ್ಲಿ ಕಂಗೊಳಿಸಿದ್ದಾರೆ.

  ಕನ್ನಡದಲ್ಲಿ ಯಮ ಅಂದಕೂಡ್ಲೇ ನೆನಪಾಗೋದು ದೊಡ್ಡಣ್ಣ.. ಮತ್ತವರ ಯಮಹೋ.. ಯಮಹ ಅನ್ನೋ ಡೈಲಾಗು. ಈಗ ಆ ಗೆಟಪ್ಪಿನಲ್ಲಿ ಬರ್ತಿರೋದು ಚಿಕ್ಕಣ್ಣ. ವಸಂತ್ ಕುಮಾರ್, ಶ್ರೀನಿವಾಸ್ ಎಂಬುವವರು ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಶ್ರೀನಿವಾಸ್ ನಿರ್ದೇಶಕ. ಚಿಕ್ಕಣ್ಣ ಜೊತೆ ಶಿಶಿರ, ರೋಜಾ, ಅಕ್ಷತ್ ರೆಡ್ಡಿ ನಟಿಸುತ್ತಿದ್ದಾರೆ.