` pranitha subash, - chitraloka.com | Kannada Movie News, Reviews | Image

pranitha subash,

  • ಅಜಯ್ ದೇವಗನ್ ಜೋಡಿಯಾಗಿ ಪ್ರಣೀತಾ ಸುಭಾಷ್

    prantha subash to act with ajay devagan

    ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಪ್ರಣೀತಾ ಸುಭಾಷ್, ಬಾಲಿವುಡ್ಡಿಗೆ ಅಧಿಕೃತ ಎಂಟ್ರಿ ಕೊಡುತ್ತಿದ್ದಾರೆ. ಅದೂ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಚಿತ್ರದ ಮೂಲಕ. ಭುಜ್-ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ಅಜಯ್ ದೇವಗನ್ ಹೀರೋ. ಅವರಿಗೆ ಪತ್ನಿಯಾಗಿ ನಟಿಸುತ್ತಿದ್ದಾರೆ ಪ್ರಣೀತಾ ಸುಭಾಶ್.

    1971ರಲ್ಲಿ ಇಂಡಿಯಾ-ಪಾಕಿಸ್ತಾನ್ ಯುದ್ಧದ ಕಥೆ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ಪರಿಣೀತಿ ಚೋಪ್ರಾ, ರಾಣಾ ದಗ್ಗುಬಾಟಿ ಕೂಡಾ ನಟಿಸಿದ್ದಾರೆ. 2020ರ ಆಗಸ್ಟ್ 14ರಂದು ಈ ಚಿತ್ರ ರಿಲೀಸ್ ಆಗಲಿದೆ.

  • ಅಯೋಧ್ಯೆ ರಾಮನಿಗೆ ನಟಿ ಪ್ರಣೀತಾ 1 ಲಕ್ಷ ದೇಣಿಗೆ

    ಅಯೋಧ್ಯೆ ರಾಮನಿಗೆ ನಟಿ ಪ್ರಣೀತಾ 1 ಲಕ್ಷ ದೇಣಿಗೆ

    ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎನ್ನುವುದು ದೇಶದ ಕೋಟ್ಯಂತರ ಹಿಂದೂಗಳ ಶತಶತಮಾನಗಳ ಕನಸು. ಆ ಕನಸು ಈಗ ಈಡೇರುತ್ತಿದೆ. ಮಂದಿರ ಕಟ್ಟುವ ಕುರಿತು ಇದ್ದ ಎಲ್ಲ ಕಾನೂನು ವಿವಾದಗಳನ್ನೂ ಬಗೆಹರಿಸಿಕೊಂಡ ಮೇಲೆ ರಾಮಮಂದಿರ ಕಟ್ಟುವ ಕೆಲಸ ಶುರುವಾಗಿದೆ. ಈ ಮಂದಿರಕ್ಕೆ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸುವುದಾಗಿ ಸಂಘಟಕರು ಘೋಷಿಸಿದ್ದಾರೆ. ದೇಣಿಗೆ ನೀಡುವಂತೆ ಭಕ್ತರಿಗೆ ಮನವಿ ಮಾಡಿದ್ದಾರೆ.

    ಕನ್ನಡದಲ್ಲಿ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿರುವುದು ನಟಿ ಪ್ರಣೀತಾ ಸುಭಾಷ್. ಸ್ವತಃ 1 ಲಕ್ಷ ರೂ. ದೇಣಿಗೆ ನೀಡಿ, ಎಲ್ಲರಿಗೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ ಪ್ರಣೀತಾ. ಜೈ ಶ್ರೀರಾಮ್.

  • ಪ್ರಣೀತಾ ಹೆಸರು ಹೇಳಿ 13.5 ಲಕ್ಷ ಚೀಟಿಂಗ್

    meet the prime suspect behind bangalore drug mafia

    ಪ್ರಣೀತಾ ಸುಭಾಷ್, ದಕ್ಷಿಣ ಭಾರತ ಚಿತ್ರರಂಗದ ಪರಿಚಿತ ಮುಖ. ಕನ್ನಡದ ಪೊರ್ಕಿ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರಣೀತಾ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇವರ ಹೆಸರಿನಲ್ಲೊಬ್ಬ ಮೋಸ ಮಾಡಿರೋದು ಬೆಳಕಿಗೆ ಬಂದಿದೆ.

    ಆಗಿರುವುದು ಇಷ್ಟು.

    ಎಸ್.ವಿ.ಗ್ರೂಪ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಕಂಪೆನಿಯವರಿಗೆ ತಮ್ಮ ಸಂಸ್ಥೆಗೆ ಪ್ರಣೀತಾ ರಾಯಭಾರಿಯಾದರೆ ಚೆಂದ ಎನಿಸಿತು. ಈ ಕಂಪೆನಿಯ ಎಂಡಿ ಅಮರನಾಥ್ ರೆಡ್ಡಿಗೆ ಚೆನ್ನೈ ಮೂಲದ ಮೊಹಮ್ಮದ್ ಜುನಾಯತ್ ಎಂಬುವವರ ಪರಿಚಯವಾಯ್ತು. ಜುನಾಯತ್, ನಿಮಗೆ ಪ್ರಣೀತಾ ಅವರ ಮ್ಯಾನೇಜರ್ ಅವರನ್ನು ಪರಿಚಯಿಸಿಕೊಡ್ತೇನೆ ಎಂದು ವರ್ಷಾ ಅವರನ್ನು ಪರಿಚಯಿಸಿದರು. ಆ ವರ್ಷಾ, ತನ್ನನ್ನು ತಾನು ಪ್ರಣೀತಾ ಅವರ ಮ್ಯಾನೇಜರ್ ಎಂದು ಪರಿಚಯಿಸಿಕೊಂಡರು. ನೀವು ಹಣ ಕೊಟ್ಟರೆ 20 ನಿಮಿಷದಲ್ಲಿ ಅಗ್ರಿಮೆಂಟ್ ಪೇಪರ್ ರೆಡಿ ಮಾಡಿಕೊಡ್ತೇನೆ ಎಂದರು. ಅಮರನಾಥ್ ತಕ್ಷಣವೇ ಜುನಾಯತ್ ಅವರಿಗೆ 13.5 ಲಕ್ಷ ರೂ. ಹಣವನ್ನೂ ಕೊಟ್ಟುಬಿಟ್ಟರು. ಇದೆಲ್ಲವೂ ನಡೆದದ್ದು ಫೈವ್ ಸ್ಟಾರ್ ಹೋಟೆಲೊಂದರಲ್ಲಿ. ಅಕ್ಟೋಬರ್ 6ನೇ ತಾರೀಕು, ಮಧ್ಯಾಹ್ನ 1 ಗಂಟೆ ಸುಮಾರಿಗೆ.

    ಹಣ ಪಡೆದ ನಂತರ ಸ್ವಲ್ಪ ಟೈಂ ಕೊಡಿ, ರೂಂಗೆ ಹೋಗಿ ಎಲ್ಲವನ್ನೂ ರೆಡಿ ಮಾಡಿಕೊಂಡು ಬರುತ್ತೇವೆ ಎಂದು ಹೋಟೆಲ್‍ನಲ್ಲಿದ್ದ ಕೊಠಡಿಗೆ ಹೋದರು. ಅದಾದ ನಂತರ ನಾಪತ್ತೆಯಾಗಿಬಿಟ್ಟರು. ಸುಮಾರು 1 ಗಂಟೆ ನಂತರ ಇವರೆಲ್ಲಿ ಹೋದರು ಎಂದು ಹುಡುಕಿಕೊಂಡು ಹೋದಾಗಲೇ ಆ ಕಂಪೆನಿಯವರಿಗೆ ಅರಿವಾಗಿದ್ದು, ತಾವು ಮೋಸ ಹೋಗಿದ್ದೇವೆ ಎನ್ನುವ ಸತ್ಯ.

    ಸದ್ಯಕ್ಕೀಗ ಪ್ರಕರಣ ಹೈಗ್ರೌಂಡ್ಸ್ ಪೊಲೀಸರ ಕೈಲಿದೆ. ಆರೋಪಿಗಳಿನ್ನೂ ಸಿಕ್ಕಿಲ್ಲ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery