` badava rascal, - chitraloka.com | Kannada Movie News, Reviews | Image

badava rascal,

  • 'Badava Rascal' Shooting Complete

    badava rascal shooting completed

    The shooting for Dhananjay's debut film as a producer, 'Badava Rascal' got completed with the completion of a fight and few scenes in Bangalore.

    'Badava Rascal' was launched by Puneeth Rajakumar at the Bandi Mahakali Temple in Gavipuram in Bangalore, after which the shooting started. However, with more than 75 percent complete, the shooting was stalled due to lockdown. Now, the film has finally been completed and to mark the successful completion of the film, Dhananjay distributed home appliances to all workers and technicians, who have worked for the film.

    'Badava Rascal's is directed by debutante Shankar, who is a protégé of director Guruprasad. Amrutha Iyengar is the heroine. Vasuki Vaibhav is the music director, while Preetha is the cinematographer.

  • Badava Rascal Movie Review, Chitraloka Rating 4/5

    Badava Rascal Movie Review, Chitraloka Rating 4/5

    Film: Badava Rascal

    Director: Shankar Guru 

    Cast: Dhananjaya, Amrutha Iyengar, Tara Anuradha, Rangayana Raghu, Sparsha Rekha, Nagabhushana NS 

    Duration: 133 minutes 

    Chitraloka Rating 4/5

    Entertainment Guaranteed 

    Director Shankar Guru picks up a simple story for his debut, but manages to give the film an entertaining touch with a fresh narrative and loads of praiseworthy sequences. Badava Rascal combines family drama, romance and friendly duels into an interesting symphony of character-driven narrative. 

    Shankar, who tries to help an elderly couple from local rowdies is bundled off by them for his impudence to interfere. In their custody, he and Nag, his close friend, turns the table on their kidnappers by simply narrating Shankar's story. Every incident of his life he tells his captors endears him to them and in the end, they are ready to help him in any way.

    So instead of a straight leniar narrative, the director employs a different approach of getting the hero to narrate samples of his life. Each of this flashback is an interesting incident about his family life, consisting of his parents and his love affair with the daughter of a rich and powerful woman in power.   

    Even though it is the often heard "poor boy meets rich girl" story, the incidents in the form of anecdotes makes for an interesting watch. Each scene therefore is good in itself. The different pieces are held together by the central characters played by Dhananjaya, Nagabhushana, Tara, Rangayana Raghu, Amrutha and Rekha. While all these actors top their game, there is superlative performances from Tara and Dhananjaya. 

    Technically, the film is a nice package with visuals made for the big screen, music enhancing the experience and editing removing the rough edges. Badava Rascal is a neatly made commercial film that won't disappoint the regular crowd to the theatres. This is what would fit the definition of a bang for your buck film.

    -Review By S Shyam Prasad

  • Badava Rascal Song Has No Connection To Daali's Badava Rascal!

    badava rascal sonh has no connection to daali's badava rascal movie

    The popular filmmaker and actor Rishab Shetty, is these days making all the noise for his other talent - playback singer!

    His song 'Yeno Badava Rascal Ninge Kannada Baralva', for which he has sung for the movie '9 Sullu Kathegalu', has ran into controversy after some of the fans of Daali Dhananjay, who has also turned producer for upcoming venture 'Badava Rascal', has expressed displeasure for the words used in the lyrics similar to the title of Dhananjay's movie.

    While the song has been trending, the actor turned producer Daali Dhananjay responded saying that the song sung by Rishab Shetty has no connection whatsoever to his movie 'Badava Rascal' and thanked the team for promoting his movie!

    Soon, Rishab Shetty replied saying that it was an old composition done for the movie '9 Sullu Kathegalu' while wishing Dhananjay's debut production. 

  • Dhananjay Turns Producer With 'Badava Rascal'

    dhananjay turns producer with badava rascal

    Actor Dhananjay's new film is all set to launch on his birthday on the 23rd of August. One of the highlights of the film is, Dhananjay will be turning producer with this film.

    Puneeth Rajkumar will be launching 'Badava Rascal' at the Bandi Mahakali Temple in Gavipuram in Bangalore. The photo shoot of the film is already completed and the first look posters were released recently by Puneeth.

    'Badava Rascal's is being directed by debutante Shankar. the director is a protege of director Guruprasad and has worked for films like 'Eradane Sala' and 'Directors Special'. Shankar has written the story and screenplay for this commercial entertainer. Gujjal Purushottam who co-produced 'Tagaru' is co-producing the film. Amrutha Iyengar is the heroine. Vasuki Vaibhav is the music director, while Preetha is the cinematographer

  • Puneeth Rajakumar To Launch 'Badava Rascal'

    puneeth to launch dhananjay's badava rascal

    Actor Dhananjay is on a signing spree these days. The actors is currently busy with projects like 'Yuvaratna', 'Daali', 'Totapuri', 'Salaga' and others. Now the actor has signed yet another film called 'Badava Rascal' being directed by debutante Shankar.

    'Badava Rascal' is all set to be launched on the 23rd of August at the Bandi Mahakali Temple in Gavipuram in Bangalore. Dhananjay along with the producer recently met Puneeth Rajakumar and invited him to launch the film. Puneeth will be coming over to the launch off 'Badava Rascal' and will be sounding the clap for the film.

    Shankar is a protege of director Guruprasad and has worked for films like 'Eradane Sala' and 'Directors Special'. Shankar has written the story and screenplay for this commercial entertainer. Gujjal Purushottam who co-produced 'Tagaru' is producing the film. Amrutha Iyengar is the heroine.dhan

  • ಅರ್ಧಶತಕದ ಜೊತೆಯಲ್ಲೇ ತೆಲುಗಿನಲ್ಲಿ ಬಡವ ರಾಸ್ಕಲ್

    ಅರ್ಧಶತಕದ ಜೊತೆಯಲ್ಲೇ ತೆಲುಗಿನಲ್ಲಿ ಬಡವ ರಾಸ್ಕಲ್

    ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಯಶಸ್ಸು ಕಂಡ ಡಾಲಿ ಧನಂಜಯ್ ಈಗ ಚಿತ್ರವನ್ನು ತೆಲುಗಿಗೂ ಕೊಂಡೊಯ್ಯುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಕನ್ನಡದಲ್ಲಿ 50 ದಿನ ಪೂರೈಸಿರುವ ಸಂಭ್ರಮದ ನಡುವೆ ಅಲ್ಲಿಗೆ ಹೋಗುತ್ತಿದೆ ಬಡವ ರಾಸ್ಕಲ್. ತೆಲುಗಿನಲ್ಲೂ ಇದೇ ಟೈಟಲ್. ಬಡವ ರಾಸ್ಕಲ್.

    ಡಾಲಿ ತೆಲುಗರಿಗೆ ಹೊಸಬರೇನಲ್ಲ. ಈ ಹಿಂದೆ ವರ್ಮಾ ಜೊತೆ ಭೈರವ ಗೀತ ಸಿನಿಮಾ ಮಾಡಿದ್ದರು. ಇತ್ತೀಚೆಗೆ ಪುಷ್ಪದಲ್ಲೂ ಮಿಂಚಿದ್ದಾರೆ. ಅದೇ ಪ್ರೀತಿಗಾಗಿ ರಾಮ್ ಗೋಪಾಲ್ ವರ್ಮ, ಡಾಲಿ ಜೊತೆ ನಿಂತು ಬಡವ ರಾಸ್ಕಲ್ ಪ್ರಚಾರ ಮಾಡಿದ್ದಾರೆ.

    ಬಡವ ರಾಸ್ಕಲ್ ಅನ್ನೋ ಬೈಗುಳ ಅಣ್ಣಾವ್ರ ಬಾಯಲ್ಲಿ ಕೇಳೋದೋ ಸೊಗಸಾಗಿತ್ತು. ಹೀಗಾಗಿ ಅದನ್ನೇ ಟೈಟಲ್ ಆಗಿಟ್ಟೆವು. ಅದೊಂದು ಮುದ್ದಾದ ಬೈಗುಳ. ತೆಲುಗಿನಲ್ಲೂ ಅದೇ ಅರ್ಥ. ತಮಿಳಿನಲ್ಲೂ ಅದೇ ಅರ್ಥ. ಕ್ಯಾರೆಕ್ಟರ್‍ನಲ್ಲಿ ನೆಗೆಟಿವ್ ಅಂಶಗಳಿರೋವಾಗ ಒಳ್ಳೆ ಹುಡುಗ ಅನ್ನೋ ಟೈಟಲ್ ಇಡೋಕಾಗುತ್ತಾ ಎಂದಿರೋ ಧನಂಜಯ್ ಈಗ ತೆಲುಗಿನಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

  • ಇದು ಶ್ರೀಮಂತ ರಾಸ್ಕಲ್ ಡಾಲಿ ವಾರ

    ಇದು ಶ್ರೀಮಂತ ರಾಸ್ಕಲ್ ಡಾಲಿ ವಾರ

    ಬಡವ ರಾಸ್ಕಲ್ ಈ ವರ್ಷದ ಕೊನೆಯ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ. ಚಿತ್ರ 2ನೇ ವಾರಕ್ಕೆ ಕಾಲಿಟ್ಟಿದ್ದು, ಈಗಲೂ ತುಂಬಿದ ಪ್ರದರ್ಶನಗಳ ಶೋ ನಡೆಯುತ್ತಿವೆ. ಬಡವ ರಾಸ್ಕಲ್ ಡಾಲಿ ಪಿಕ್ಚರ್ಸ್‍ನ ಮೊದಲ ಸಿನಿಮಾ. ಒಟಿಟಿಯಲ್ಲಿ ರತ್ನನ್ ಪ್ರಪಂಚ ಚಿತ್ರದ ಮೂಲಕ ಗೆದ್ದಿದ್ದ ಡಾಲಿ ಧನಂಜಯ್, ಥಿಯೇಟರುಗಳಲ್ಲಿ ಬಡವ ರಾಸ್ಕಲ್ ಮೂಲಕ ಗೆದ್ದಿದ್ದಾರೆ. ಹೀರೋ ಆಗಿ.. ಪ್ರೊಡ್ಯೂಸರ್ ಆಗಿ.. ಎರಡರಲ್ಲೂ ಗೆದ್ದಿದ್ದಾರೆ.

    ಇದರ ನಡುವೆ ಇದನ್ನು ಡಾಲಿ ವಾರ ಅನ್ನೋಕೂ ಕಾರಣ ಇದೆ. ಬಡವ ರಾಸ್ಕಲ್ ರಿಲೀಸ್ ಆಗುವ ಒಂದು ವಾರ ಮುಂಚೆ ತೆಲುಗಿನಲ್ಲಿ ಪುಷ್ಪ ರಿಲೀಸ್ ಆಗಿತ್ತು. ಅದೂ ಗೆದ್ದಾಗಿದೆ. ಅಲ್ಲಿಯೂ ಡಾಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಒಟ್ಟಿನಲ್ಲಿ 2021 ಡಾಲಿ ಪಾಲಿಗೆ ಅದೃಷ್ಟದ ವರ್ಷವಾಗಿದೆ.

    ಬಡವ ರಾಸ್ಕಲ್ ಗೆಲ್ಲುವುದರೊಂದಿಗೆ ನಿರ್ದೇಶಕರಾಗಿ ಶಂಕರ್ ಗುರು, ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಸೇರಿದಂತೆ ಧನಂಜಯ್ ಅವರ ಗೆಳೆಯರ ಬಳಗವೂ ಗೆದ್ದಿದೆ.

  • ಎಲ್ಲಿ ನೋಡಲಲ್ಲಲ್ಲಿ.. ಬಡವ ರ್ಯಾಸ್ಕಲ್..

    ಎಲ್ಲಿ ನೋಡಲಲ್ಲಲ್ಲಿ.. ಬಡವ ರ್ಯಾಸ್ಕಲ್..

    ಪಾರ್ಲೆಜಿ ಬಿಸ್ಕೆಟ್ ಪ್ಯಾಕು.. ದಿನಸಿ ಅಂಗಡಿ.. ತರಕಾರಿ ಅಂಗಡಿ.. ಮಟನ್ ಅಂಗಡಿ.. ಗ್ಯಾರೇಜು.. ಆಟೋ.. ಎಳನೀರು ಗಾಡಿ.. ಸ್ಕೂಲ್ ಮಕ್ಕಳ ಬ್ಯಾಗು, ಸ್ಲೇಟು.. ಎಲ್ಲ.. ಎಲ್ಲ ಬಡವ ರ್ಯಾಸ್ಕಲ್ ಮಯ.

    ಡಾಲಿ ಧನಂಜಯ್ ಅಭಿನಯದ ಹೊಸ ಸಿನಿಮಾ ಬಡವ ರ್ಯಾಸ್ಕಲ್. ರಿಲೀಸ್ ಆಗೋಕೆ ರೆಡಿಯಾಗಿರೋ ಚಿತ್ರಕ್ಕೆ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಾಪಕಿ. ಶಂಕರ್ ಗುರು ನಿರ್ದೇಶನದ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ನಾಯಕಿ. ರಂಗಾಯಣ ರಘು, ಸ್ಪರ್ಶ ರೇಖಾ, ತಾರಾ ಮೊದಲಾದವರು ನಟಿಸಿರೋ ಬಡವ ರ್ಯಾಸ್ಕಲ್ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ರತ್ನನ್ ಪ್ರಪಂಚ ಚಿತ್ರದ ಮೂಲಕ ಒಟಿಟಿಯಲ್ಲಿ ಹೆಸರು ಮಾಡಿದ್ದ ಧನಂಜಯ್, ಈ ಬಾರಿ ಥಿಯೇಟರಿಗೇ ಬರುತ್ತಿದ್ದಾರೆ.

  • ಒಟಿಟಿಗೆ ಬಡವ ರಾಸ್ಕಲ್. ಜ.26ಕ್ಕೆ

    ಒಟಿಟಿಗೆ ಬಡವ ರಾಸ್ಕಲ್. ಜ.26ಕ್ಕೆ

    ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಭರ್ಜರಿಯಾಗಿ ಹಿಟ್ ಆದ ಸಿನಿಮಾ ಬಡವ ರಾಸ್ಕಲ್. ಥಿಯೇಟರುಗಳಲ್ಲಿ ಅಬ್ಬರ ಮುಗಿಯುವ ಹೊತ್ತಿಗೆ ಒಟಿಟಿಗೆ ಬರುತ್ತಿದೆ. ಇದೇ ಗಣರಾಜ್ಯೋತ್ಸವಕ್ಕೆ ಬಡವ ರಾಸ್ಕಲ್ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ವೂಟ್ ಸೆಲೆಕ್ಟ್‍ನಲ್ಲಿ..

    ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್, ಧನಂಜಯ್ ಅವರ ನಿರ್ಮಾಣದ ಮೊದಲ ಸಿನಿಮಾ ಆಗಿತ್ತು. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಪ್ರೇಕ್ಷಕರಂತೂ ಬಡವ ರಾಸ್ಕಲ್‍ನನ್ನು ಅಪ್ಪಿ ಮುದ್ದಿಸಿದ್ದರು. ಈಗ ಮನೆ ಮನೆಗೆ... ಮೊಬೈಲ್ ಮೊಬೈಲ್‍ಗೆ ಬರುತ್ತಿದೆ.. ಜನವರಿ 26ಕ್ಕೆ.

  • ಒಂದೇ ದಿನ ಬಡವ ರಾಸ್ಕಲ್, ರೈಡರ್ :ಡಾಲಿಗೆ ಫೋನ್ ಮಾಡಿದ ನಿಖಿಲ್ ಹೇಳಿದ್ದೇನು?

    ಒಂದೇ ದಿನ ಬಡವ ರಾಸ್ಕಲ್, ರೈಡರ್ :ಡಾಲಿಗೆ ಫೋನ್ ಮಾಡಿದ ನಿಖಿಲ್ ಹೇಳಿದ್ದೇನು?

    ಇದೇ ಕ್ರಿಸ್‍ಮಸ್`ಗೆ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಮತ್ತು ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಎರಡೂ ಸಿನಿಮಾ ರಿಲೀಸ್ ಆಗುತ್ತಿವೆ. ಈ ತಿಂಗಳಲ್ಲಿ ಡಾಲಿಗೆ ಇದು ಸೆಕೆಂಡ್ ರಿಲೀಸ್. ಕಳೆದ ವಾರ ಪುಷ್ಪ ಬಂದಿತ್ತು. ಈಗ ಅವರದ್ದೇ ನಿರ್ಮಾಣದ ಬಡವ ರಾಸ್ಕಲ್. ನಿಖಿಲ್‍ಗೆ ಹೆಚ್ಚು ಕಮ್ಮಿ 2 ವರ್ಷಗಳ ನಂತರ ರೈಡರ್ ಸಿನಿಮಾ. ಇಂತಹಾ ಹೊತ್ತಿನಲ್ಲಿ ಎರಡೂ ಚಿತ್ರಗಳ ಹೀರೋಗಳು ಪರಸ್ಪರ ಮಾತನಾಡಿಕೊಂಡರೆ ಹೇಗಿರುತ್ತೆ?

    ಬಡವ ರಾಸ್ಕಲ್ ಸಿನಿಮಾ ಟ್ರೇಲರ್ ನೋಡಿದೆ. ಖುಷಿಯಾಯ್ತು. ತುಂಬಾ ಚೆನ್ನಾಗಿದೆ. ನಮ್ಮ ಚಿತ್ರ ಬಿಡುಗಡೆ ದಿನವೇ ಬಡವ ರಾಸ್ಕಲ್ ಕೂಡಾ ರಿಲೀಸ್ ಆಗುತ್ತಿದೆ. ಆ ಚಿತ್ರವೂ ಗೆಲ್ಲಲಿ. ನಮ್ಮ ಚಿತ್ರವೂ ಗೆಲ್ಲಲಿ. ಎರಡೂ ಸಿನಿಮಾ ಗೆಲ್ಲಬೇಕು ಎಂದು ಧನಂಜಯ್‍ಗೆ ಫೋನ್ ಮಾಡಿ ಹೇಳಿದೆ. ಅವರೂ ಅದೇ ಮಾತು ಹೇಳಿದರು. ನಮ್ಮ ಮಾರ್ಕೆಟ್ ದೊಡ್ಡದಿದೆ. ಎರಡು ಚಿತ್ರಗಳು ಒಂದೇ ದಿನ ಬಂದರೆ ದೊಡ್ಡ ಪ್ರಾಬ್ಲಂ ಏನೂ ಆಗಲ್ಲ ಎಂದಿದ್ದಾರೆ ನಿಖಿಲ್.

    ಅಂದಹಾಗೆ ನಿಖಿಲ್ ಇಷ್ಟೆಲ್ಲ ಹೇಳಿದ್ದು ಅವರದ್ದೇ ನಟನೆಯ ರೈಡರ್ ಚಿತ್ರದ ಪ್ರೆಸ್‍ಮೀಟ್‍ನಲ್ಲಿ..

  • ಕೊರಿಯರ್ ಬಾಯ್ ಹುಡುಗ ಕಟ್ಟಿದ ಬಡವ ರಾಸ್ಕಲ್ ಕಥೆ

    ಕೊರಿಯರ್ ಬಾಯ್ ಹುಡುಗ ಕಟ್ಟಿದ ಬಡವ ರಾಸ್ಕಲ್ ಕಥೆ

    ಬಡವ ರಾಸ್ಕಲ್. ಟ್ರೇಲರ್ ನೋಡಿದವರಿಗೆ ಇದು ಫ್ರೆಂಡ್‍ಶಿಪ್ ಸ್ಟೋರಿನಾ? ಲವ್ ಸ್ಟೋರಿನಾ? ಫ್ಯಾಮಿಲಿ ಸ್ಟೋರಿನಾ? ನಮ್ಮ ಮನೆ ಅಕ್ಕಪಕ್ಕದಲ್ಲೇ ನಡೆಯೋ ನಾವು ದಿನವೂ ನೋಡುವ ಜೀವನದ ಕಥೆನಾ? ಹೀಗೆ ಬೆರಗು ಹುಟ್ಟಿಸುತ್ತಲೇ ಬದುಕು ತೋರಿಸುತ್ತಿದ್ದೇವೆ ಎಂದು ಹೇಳುತ್ತಿರೋದು ಬಡವ ರಾಸ್ಕಲ್ ಟ್ರೇಲರ್. ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಡಾಲಿ ಧನಂಜಯ್ ಅವರೇ ಪ್ರೊಡ್ಯೂಸರ್. ಅವರೇ ಹೀರೋ.

    ಅಫ್‍ಕೋರ್ಸ್.. ಯಾವುದೇ ಚಿತ್ರಕ್ಕೆ ಹೀರೋ ಆಗೋದು ಮೊದಲು ಕಥೆ.. ನಂತರ ಡೈರೆಕ್ಟರ್. ಈ ಚಿತ್ರದ ಡೈರೆಕ್ಟರ್ ಶಂಕರ್ ಗುರು. ವಿಚಿತ್ರವೆಂದರೆ ಈ ಶಂಕರ್ ಗುರು ಒಂದು ಕಾಲದಲ್ಲಿ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆಯಿಂದ ಸಂಜೆವರೆಗೆ ಕೊರಿಯರ್ ಬಾಯ್, ಸಂಜೆಯ ಮೇಲೆ ನೈಟ್ ಕಾಲೇಜ್. ಹೀಗೆ ಓದುತ್ತಲೇ ಸೇರಿದ್ದು ಗುರುಪ್ರಸಾದ್ ಮಠಕ್ಕೆ. ಅವರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿರುವಾಗ ಹೊಳೆದಿದ್ದೇ ಬಡವ ರಾಸ್ಕಲ್ ಸ್ಟೋರಿ.

    ಇದು ನಾವು ನೀವು ನೋಡಿರೊ ಮಧ್ಯಮ ವರ್ಗದ ಜನರ ಕಥೆ. ಮನೆಗಳಲ್ಲಿ ಗಂಡ, ಹೆಂಡತಿ, ಮಕ್ಕಳು ಒಟ್ಟಿಗೇ ಇರುತ್ತಾರೆ. ಜಗಳ ಆಡ್ತಾರೆ. ಜಗಳದಲ್ಲೇ ಪ್ರೀತಿ ಮಾಡ್ತಾರೆ. ಕಿತ್ತಾಡ್ತಾರೆ. ಒಂದಾಗ್ತಾರೆ. ಅಂತಹ ಮನೆಯಲ್ಲೊಬ್ಬ ವಿದ್ಯಾವಂತ ಯುವಕ. ಇವಿಷ್ಟನ್ನೂ ಇಟ್ಟುಕೊಂಡು ಕಥೆ ಮಾಡಿದ್ದೇವೆ. ಇದು ಧನಂಜಯ್ ಅವರ ಬ್ಯಾನರ್‍ನ ಮೊದಲ ಸಿನಿಮಾ ಎನ್ನುವುದೂ ವಿಶೇಷ. ಕಥೆಯಂತೂ ನಿಮಗೆ ಬೇರೆಯದೇ ಫೀಲ್ ಕೊಡುತ್ತೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ಶಂಕರ್ ಗುರು.

    ಧನಂಜಯ್ ಅವರಿಗೆ ಇಲ್ಲಿ ಅಮೃತಾ ಅಯ್ಯಂಗಾರ್ ನಾಯಕಿ. ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ಗುರು ಪ್ರಸಾದ್ ಸೇರಿದಂತೆ ಬೃಹತ್ ತಾರಾಗಣವೂ ಇದೆ. 

  • ಕ್ರಿಸ್‍ಮಸ್`ಗೆ ಡಬಲ್ ಧಮಾಕಾ : ಬಡವ ರಾಸ್ಕಲ್ & ರೈಡರ್

    ಕ್ರಿಸ್‍ಮಸ್`ಗೆ ಡಬಲ್ ಧಮಾಕಾ : ಬಡವ ರಾಸ್ಕಲ್ & ರೈಡರ್

    ಡಿಸೆಂಬರ್ 24ರಂದ ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾಗಳ ದೊಡ್ಡ ಹಬ್ಬವೇ ಇದೆ. ಆ ದಿನ ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗುತ್ತಿವೆ.

    ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ರಿಲೀಸ್ ಆಗುತ್ತಿದ್ದು, ಆಲ್‍ಮೋಸ್ಟ್ 2 ವರ್ಷಗಳ ನಂತರ ತೆರೆಯ ಮೇಲೆ ನಿಖಿಲ್ ಕಾಣಿಸುತ್ತಿದ್ದಾರೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರ, ಲವ್ ಸ್ಟೋರಿ, ಅಪ್ಪನ ಪ್ರೀತಿ.. ಎಲ್ಲವೂ ಇದೆ. ಕಾಶ್ಮೀರ ಪರದೇಸಿ ನಾಯಕಿ.

    ಇನ್ನೊಂದೆಡೆ ವಿಭಿನ್ನವಾಗಿ ಟ್ರೆಂಡ್ ಸೃಷ್ಟಿಸಿರೋ ಬಡವ ರಾಸ್ಕಲ್. ಡಾಲಿ ಧನಂಜಯ್ ಬ್ಯಾನರಿನ ಮೊದಲ ಸಿನಿಮಾ. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದರೆ, ರಂಗಾಯಣ ರಘು, ತಾರಾ ಮೊದಲಾದ ಸೀನಿಯರ್ ಕಲಾವಿದರು ನಟನೆಯಲ್ಲಿ ಫೈಟ್ ಕೊಟ್ಟಿದ್ದಾರೆ. ಮಿಡ್ಲ್ ಕ್ಲಾಸ್ ಲೈಫಿನ ರಾ ಸ್ಟೋರಿಯಂತೆ ಕಾಣಿಸೋ ಚಿತ್ರ ಮಿಡ್ಲ್ ಕ್ಲಾಸ್ ಹುಡುಗ, ಹುಡುಗಿಯರನ್ನು ಆಗಲೇ ಸೆಳೆಯುತ್ತಿದೆ. ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್ ಕೂಡಾ ಕ್ರಿಸ್‍ಮಸ್‍ಗೇ ಬರುತ್ತಿದೆ. ಜಸ್ಟ್ ಎಂಜಾಯ್..

  • ನಿಖಿಲ್ ರೈಡರ್`ಗೆ ದಿವ್ಯ ಸ್ಪಂದನ ಶುಭ ಹಾರೈಕೆ

    ನಿಖಿಲ್ ರೈಡರ್`ಗೆ ದಿವ್ಯ ಸ್ಪಂದನ ಶುಭ ಹಾರೈಕೆ

    ರೈಡರ್ ನಾಳೆ ರಿಲೀಸ್ ಆಗುತ್ತಿದೆ. ನಿಖಿಲ್ ಕುಮಾರಸ್ವಾಮಿ ಸುದೀರ್ಘ ಗ್ಯಾಪ್ ನಂತರ ತೆರೆಗೆ ಬರುತ್ತಿರೋ ಚಿತ್ರವಿದು. ಲಹರಿಯವರು ಬಹಳ ಕಾಲದ ನಂತರ ನಿರ್ಮಾಣಕ್ಕೆ ಕೈ ಹಾಕಿರೋ ಚಿತ್ರವೂ ರೈಡರ್. ಈಗಾಗಲೇ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದ್ದು, ಈಗ ನಟಿ ಹಾಗೂ ರಾಜಕಾರಣಿ ರಮ್ಯಾ ಅರ್ಥಾತ್ ದಿವ್ಯಸ್ಪಂದನ ಕೂಡಾ ನಿಖಿಲ್ ರೈಡರ್‍ಗೆ ಶುಭ ಕೋರಿದ್ದಾರೆ.

    ಈ ತಿಂಗಳು ಒಳ್ಳೊಳ್ಳೆ ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿವೆ. ಆಯ್ಕೆಗೆ ಸೀಮಿತರಾಗಬೇಡಿ. ಎಲ್ಲ ಚಿತ್ರಗಳನ್ನೂ ನೋಡಿ. ಬೆಸ್ಟ್ ವಿಷಸ್ ಟು ನಿಖಿಲ್ ಕುಮಾರ್ ಎಂದಿದ್ದಾರೆ ರಮ್ಯಾ. ಬಡವ ರಾಸ್ಕಲ್ ಚಿತ್ರಕ್ಕೂ ರಮ್ಯಾ ಶುಭ ಕೋರಿದ್ದಾರೆ. ಆದರೆ ನಿಖಿಲ್ ಅವರಿಗೆ ಶುಭ ಕೋರಿರುವುದಕ್ಕೆ ವಿಶೇಷ ಅರ್ಥವನ್ನು ಅವರ ರಾಜಕಾರಣದಲ್ಲಿ ಹುಡುಕಬೇಕು.. ಹಾಗಾಗಿಯೇ ಈ ಹಾರೈಕೆಗೆ ವಿಶೇಷ ಅರ್ಥ.

    ನಿಖಿಲ್ ಅವರ ಎದುರು ರೈಡರ್‍ನಲ್ಲಿ ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು ವಿಜಯ್ ಕುಮಾರ್ ಕೊಂಡ ನಿರ್ದೇಶಕ.

  • ಫ್ರೆಂಡ್`ಶಿಪ್ಪು.. ಲವ್ವು.. ಫ್ಯಾಮಿಲಿ.. ಪ್ರೇಯಸಿ ಮಧ್ಯೆ ಡಾಲಿ

    ಫ್ರೆಂಡ್`ಶಿಪ್ಪು.. ಲವ್ವು.. ಫ್ಯಾಮಿಲಿ.. ಪ್ರೇಯಸಿ ಮಧ್ಯೆ ಡಾಲಿ

    ಅವನಿಗೆ ಫ್ರೆಂಡ್ಸು ಮತ್ತು ಡ್ರಿಂಕ್ಸು ಎರಡೇ ವೀಕ್‍ನೆಸ್ಸು. ಕುಡಿಯುವ ಮೊದಲು ಅಮಾಯಕ. ಕುಡಿದ ಮೇಲೆ ಅಮ್ಮ ಅಕ್ಕ.. ಅವನಿಗೊಬ್ಬಳು ಪ್ರೇಯಸಿ. ಆದರೆ, ಅವನ ಫ್ರೆಂಡ್ಸ್ ಅಂದ್ರೆ ಅವಳಿಗೆ ಅಲರ್ಜಿ.

    ಮಧ್ಯೆ ಅಪ್ಪ ಅಮ್ಮ ಪದೇ ಪದೇ ಜವಾಬ್ದಾರಿ ಬಗ್ಗೆ ಪಾಠ ಮಾಡುತ್ತಾರೆ. ಅದರೊಳಗೆ ಒಂದಷ್ಟು ನಡುರೋಡಿನ ಫೈಟುಗಳಿವೆ.ಸಣ್ಣ ಸಣ್ಣ ದೃಶ್ಯಗಳಲ್ಲೇ ಕಚಗುಳಿಯಿಡುತ್ತಾ.. ಸಂಕಟವನ್ನೂ ಹುಟ್ಟಿಸುತ್ತಾ.. ಭಾವುಕರನ್ನಾಗಿಸುತ್ತಾ ಹೋಗುವ ಟ್ರೇಲರ್ ಸ್ಟೋರಿ ಇದು. ಬಡವ ರ್ಯಾಸ್ಕಲ್.

    ಇದೇ ಕ್ರಿಸ್‍ಮಸ್ಸಿಗೆ ರಿಲೀಸ್ ಆಗುತ್ತಿರೋ ಬಡವ ರಾ'್ಯಸ್ಕಲ್ ಸಿನಿಮಾದ ಟ್ರೇಲರ್ ಡಾಲಿ ಧನಂಜಯ್ ಅವರನ್ನು ಹೊಸ ಅವತಾರದಲ್ಲಿ ತೋರಿಸುವ ಪ್ರಯತ್ನ ಮಾಡಿದೆ. ಗೆಲ್ಲುವ ಸುಳಿವನ್ನೂ ಕೊಟ್ಟಿದೆ.

    ಕಥೆ.. ಚಿತ್ರಕಥೆ.. ಸಂಭಾಷಣೆ.. ಮತ್ತು ನಿರ್ದೇಶನ ಎಲ್ಲವನ್ನೂ ಹೊತ್ತುಕೊಂಡಿರೋ ಶಂಕರ್ ಗುರು ಟ್ರೇಲರ್‍ನ್ನು ಸಖತ್ತಾಗಿಯೇ ಮಾಡಿದ್ದಾರೆ. ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು ಮತ್ತು ತಾರಾ ಜೋಡಿ ಕೆಮಿಸ್ಟ್ರಿಯೂ ಚೆನ್ನಾಗಿದೆ. ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಾಣದ ಚಿತ್ರ ಡಿಸೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ.

  • ಬಡವ ರಾಸ್ಕಲ್ ``ಅಕ್ಷರ'' ಮಹಾತ್ಮೆ..

    ಬಡವ ರಾಸ್ಕಲ್ ``ಅಕ್ಷರ'' ಮಹಾತ್ಮೆ..

    ಒಂದು ಸಿನಿಮಾವನ್ನು ಜನರಿಗೆ ತಲುಪಿಸೋಕೆ ಯಾವ್ಯಾವ ರೀತಿ ಕ್ರಿಯೇಟಿವ್ ಆಗಿ ಯೋಚಿಸಬೇಕು ಅನ್ನೋಕೆ ಬಡವ ರಾಸ್ಕಲ್`ಗಿಂತ ಉದಾಹರಣೆ ಬೇಕಿಲ್ಲ. ಬಡವ ರಾಸ್ಕಲ್ ಚಿತ್ರದ ಪ್ರಚಾರ ಶುರುವಾಗಿದ್ದೇ ಫುಟ್‍ಪಾತುಗಳಿಂದ. ಇದೂವರೆಗೆ ಯಾರೂ ಟಚ್ ಕೂಡಾ ಮಾಡದೇ ಇದ್ದ ತಳ್ಳುವ ಗಾಡಿ, ಫುಟ್‍ಪಾತ್ ಹೋಟೆಲು, ಎಳನೀರು ಅಂಗಡಿ, ದಿನಸಿ ಅಂಗಡಿ.. ಹೀಗೆ ಬಡವ ಮತ್ತು ಮಧ್ಯಮ ವರ್ಗದವರು ಹೆಚ್ಚು ಹೆಚ್ಚು ಹೋಗುವ ಜಾಗಗಳಲ್ಲಿ ಚಿತ್ರದ ಪ್ರಚಾರ ಮಾಡಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಬಡವ ರಾಸ್ಕಲ್ಸ್.

    ಇಂತಹ ಅಂಗಡಿಗಳಿಗೆ ಪ್ರತಿನಿತ್ಯ ಹೋಗಿ ಬರುವ ಅಜ್ಜಿ ಬಡವ ರಾಸ್ಕಲ್ ಮತ್ತು ರಿಲೀಸ್ ಡೇಟ್ ಬರೆಯೋದನ್ನೇ ಕಲಿತು ಬಿಟ್ಟ ಕಥೆಯನ್ನು ಸ್ವಲ್ಪ ತಮಾಷೆಯಾಗಿ ಮಾಡಿ ವಿಡಿಯೋ ಬಿಟ್ಟಿದ್ದಾರೆ ಬಡವ ರಾಸ್ಕಲ್ಸ್. ಅ ಎಂಬುದೇ ಬರೆಯುವುದಕ್ಕೆ ಆಗದ ಅಜ್ಜಿ ಬಡವ ರಾಸ್ಕಲ್ ಬರೆದಿದ್ದು ಹೇಗೆ ಅನ್ನೋದನ್ನ ತಿಳ್ಕೋಬೇಕು ಅಂದ್ರೆ ಡಿ.24ಕ್ಕೆ ಥಿಯೇಟರಿಗೆ ಹೋಗಿ ನೋಡಬೇಕು.

    ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್, ತಾರಾ, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ಶಂಕರ್ ಗುರು ಡೈರೆಕ್ಟರ್. ಡಾಲಿ ಬ್ಯಾನರ್‍ನ ಮೊದ ಚಿತ್ರವಿದು. ಆರಂಭದಿಂದಲೂ ಕ್ರಿಯೇಟಿವ್ ಆಗಿಯೇ ಪ್ರೇಕ್ಷಕರನ್ನು ರೀಚ್ ಆಗುತ್ತಿರೋ ಚಿತ್ರತಂಡ ಸಖತ್ತಾಗಿಯೇ ಸಿನಿಮಾ ಪ್ರಮೋಷನ್ ಮಾಡುತ್ತಿದೆ.

  • ಬಡವ ರಾಸ್ಕಲ್ : ಫ್ರೆಂಡ್ಸ್‍ಗಳಿಂದ.. ಫ್ರೆಂಡ್ಸ್‍ಗಳಿಗಾಗಿ.. ಫ್ರೆಂಡ್ಸ್‍ಗಳಿಗೋಸ್ಕರ.. ಕೇಳಿದ್ರಾ..

    ಬಡವ ರಾಸ್ಕಲ್ : ಫ್ರೆಂಡ್ಸ್‍ಗಳಿಂದ.. ಫ್ರೆಂಡ್ಸ್‍ಗಳಿಗಾಗಿ.. ಫ್ರೆಂಡ್ಸ್‍ಗಳಿಗೋಸ್ಕರ.. ಕೇಳಿದ್ರಾ..

    ಟ್ರೇಲರಿನಲ್ಲೊಂದು ಕೊನೆ ಡೈಲಾಗ್ ಇದೆ. ಸಿನಿಮಾ ಬೇಡ.. ಪಾರ್ಕೂ ಬೇಡ ಅನ್ನೋ ಫ್ರೆಂಡ್, ಬಾರ್‍ಗೆ ಹೋಗೋಣ ಎಂದಾಗ.. ನಾನ್ ನಿನ್ನ ಮಾತನ್ನ ಯಾವತ್ತಾದ್ರೂ ಮೀರಿದ್ದೀನಾ ಅನ್ನೋ ಡೈಲಾಗ್ ಹೊಡೆಯುವ ಸೀನ್.. ಫನ್ನಿಯಾಗಿರೋ ಸೀನ್ ಫ್ರೆಂಡ್ಸುಗಳಿಗೆ ಇಷ್ಟವಾಗಿ ವೈರಲ್ಲೂ ಆಗ್ತಿರೋವಾಗ ಬಡವ ರಾಸ್ಕಲ್ ಟೈಟಲ್ ಟ್ರ್ಯಾಕ್ ಹೊರಬಿದ್ದಿದೆ.

    ಇದು ಫ್ರೆಂಡ್ಸ್‍ಗಳ ಆ್ಯಂಥಮ್ ಅರ್ಥಾತ್ ರಾಷ್ಟ್ರಗೀತೆ ಅನ್ನೋ ಅರ್ಥದಲ್ಲಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಜೀವಕ್ಕೆ ಜೀವ ಕೊಡೋ.. ಕಷ್ಟಕ್ಕೆ ಹೆಗಲು ಕೊಡೋ.. ನೊಂದಾಗ ಹೆಗಲು ಕೊಟ್ಟು ಸಾಂತ್ವನ ಹೇಳೋ.. ಫ್ರೆಂಡ್ ಬಗ್ಗೆ ವರ್ಣನೆ ಮಾಡಿರೋ ಹಾಡಿದು. ಭರ್ಜರಿ ಚೇತನ್ ಕುಮಾರ್ ಬರೆದಿರೋ ಸಾಹಿತ್ಯಕ್ಕೆ ಅಷ್ಟೇ ಚೆಂದದ ಮಾಸ್ ಮ್ಯೂಸಿಕ್ ಕೊಟ್ಟಿರೋದು ವಾಸುಕಿ ವೈಭವ್.

    ಈಗಾಗಲೇ ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲು ಮತ್ತು ಆಗಾಗ ನೆನಪಾಗುತ್ತಾಳೆ ಹಾಡುಗಳು ಹಿಟ್ ಆಗಿದ್ದು, ಹಿಟ್ ಸಾಲಿಗೆ ಹೊಸ ಸೇರ್ಪಡೆ ಬಡವ ರಾಸ್ಕಲ್ ಟೈಟಲ್ ಟ್ರ್ಯಾಕ್.

  • ಬಡವ ರಾಸ್ಕಲ್ ಕಲೆಕ್ಷನ್ ಎಷ್ಟು?

    ಬಡವ ರಾಸ್ಕಲ್ ಕಲೆಕ್ಷನ್ ಎಷ್ಟು?

    ವರ್ಷದ ಕೊನೆಯಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿನಿಮಾ ಬಡವ ರಾಸ್ಕಲ್. ಧನಂಜಯ್ ನಿರ್ಮಾಣದ ಮೊದಲ ಸಿನಿಮಾ ಥಿಯೇಟರುಗಳಲ್ಲಿ ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಾಗಾದರೆ ಚಿತ್ರದ ಕಲೆಕ್ಷನ್ ಎಷ್ಟು? 15 ಕೋಟಿ ದಾಟಿದೆಯಾ?

    ಸಿನಿಮಾ ಗೆದ್ದಿದೆ. ಲಾಭವೂ ಬಂದಿದೆ. ಸೇಫ್ ಆಗಿದ್ದೇವೆ. ಆದರೆ 15 ಕೋಟಿ ಲಾಭ ಅನ್ನೋದೆಲ್ಲ ಸುಳ್ಳು. ಅಷ್ಟೆಲ್ಲ ಲಾಭ ಬಂದಿದ್ದರೆ ಹೆಲಿಕಾಪ್ಟರಿನಲ್ಲಿ ಬಂದು ಥ್ಯಾಂಕ್ಸ್ ಹೇಳುತ್ತಿದೆ. ವಿತರಕರ ಜೊತೆ ಮಾತನಾಡಿ ಎಲ್ಲ ವಿವರ ಪಡೆದುಕೊಂಡು ಮಾಹಿತಿ ನೀಡುತ್ತೇನೆ ಎಂದಿದ್ದಾರೆ ಧನಂಜಯ್.

    ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ನಾಗಭೂಷಣ್ ಮೊದಲಾದವರು ನಟಿಸಿದ್ದಾರೆ. ಚಿತ್ರ ಯಶಸ್ವಿಯಾಗಿರುವ ಬೆನ್ನಲ್ಲೆ ವೀಕೆಂಡ್ ಕಫ್ರ್ಯೂ ಬಗ್ಗೆ ಮರುಪರಿಶೀಲಿಸಿ ಎಂದು ಧನಂಜಯ್ ಮನವಿ ಮಾಡಿದ್ದಾರೆ.

  • ಬಡವ ರಾಸ್ಕಲ್ ವಿಜಯಯಾತ್ರೆ..

    ಬಡವ ರಾಸ್ಕಲ್ ವಿಜಯಯಾತ್ರೆ..

    ಬಡವ ರಾಸ್ಕಲ್ ರಿಲೀಸ್ ದಿನವೇ ಸೂಪರ್ ಹಿಟ್ ಅನ್ನೋದು ಗೊತ್ತಾಗಿತ್ತು. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ಹೊರ ಬರುವಾಗ ಕೊಟ್ಟ ರಿಯಾಕ್ಷನ್ಸ್ ಹಾಗಿತ್ತು. ಕ್ರಿಯೇಟಿವ್ ಪ್ರೊಮೋಷನ್ ಮೂಲಕ ಚಿತ್ರವನ್ನು ಜನರಿಗೆ ಪರಿಚಯಿಸಿದ್ದವರು ಬಡವ ರಾಸ್ಕಲ್ಸ್. ಆದರೆ, ಚಿತ್ರ ನೋಡಿ ಬಂದವರು ಚಿತ್ರದ ಬಗ್ಗೆ ಸ್ವತಃ ಪ್ರಚಾರಕ್ಕಿಳಿದರು. ಡಾಲಿ ಗೆದ್ದಿದ್ದು ಅಲ್ಲಿ. ಹೀಗಾಗಿ ಚಿತ್ರತಂಡ ವಿಜಯ ಯಾತ್ರೆ ಮಾಡಿದೆ.

    ಬೆಂಗಳೂರು, ಚನ್ನಪಟ್ಟಣ, ಹಾಸನ, ಅರಸೀಕೆರೆ,  ಮಳವಳ್ಳಿ, ಮಂಡ್ಯ, ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ.. ಹೀಗೆ ಸದ್ಯಕ್ಕೊಂದು ಪುಟ್ಟ ವಿಜಯಯಾತ್ರೆ ಮಾಡಿಕೊಂಡು ಬಂದಿದೆ ಬಡವ ರಾಸ್ಕಲ್ ಟೀಂ. ಅಫ್‍ಕೋರ್ಸ್.. ಇದು ಒಂದು ದಿನದ ಯಾತ್ರೆಯಷ್ಟೇ.. ಯಾತ್ರೆ ಇನ್ನೂ ಹಲವು ಕಡೆ ಹೋಗೋದು ಬಾಕಿ ಇದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಡಾಲಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ್ದಾರೆ.

    ಅಂದಹಾಗೆ ಈ ಸಿನಿಮಾ ಗುಜ್ಜಲ್ ಪ್ರೊಡಕ್ಷನ್ಸ್ ಜೊತೆ ಜಂಟಿ ನಿರ್ಮಾಣದಲ್ಲಿ ಶುರುವಾಗಿತ್ತು. ನಂತರ ಗುಜ್ಜಲ್ ಪ್ರೊಡಕ್ಷನ್ಸ್ ಹಿಂದೆ ಸರಿದಿತ್ತು. ಧನಂಜಯ್ ಇಡೀ ಚಿತ್ರವನ್ನು ಹೆಗಲಿಗೇರಿಸಿಕೊಂಡಿದ್ದರು. ಈಗ ಸಿಂಗಲ್ ಆಗಿಯೇ ಗೆದ್ದಿದ್ದಾರೆ.

  • ಬಡವ ರಾಸ್ಕಲ್ ವಿಜಯಯಾತ್ರೆ..

    ಬಡವ ರಾಸ್ಕಲ್ ವಿಜಯಯಾತ್ರೆ..

    ವರ್ಷದ ಕೊನೆಯ ಬ್ಲಾಕ್ ಬಸ್ಟರ್ ಬಡವ ರಾಸ್ಕಲ್. ಸಿನಿಮಾ ಚೆನ್ನಾಗಿದ್ದರೆ ಜನ ಥಿಯೇಟರಿಗೆ ಬಂದೇ ಬರುತ್ತಾರೆ ಎನ್ನುವುದನ್ನು ಸಾಬೀತು ಮಾಡಿ ಗೆದ್ದ ಸಿನಿಮಾ. ಡಾಲಿ ಧನಂಜಯ್ ನಿರ್ಮಾಣದ ಮೊದಲ ಸಿನಿಮಾ. ಚಿತ್ರತಂಡದ ವಿಜಯಯಾತ್ರೆ ಮುಂದುವರೆಯುತ್ತಿದೆ.

    ರಾಮನಗರ, ಚೆನ್ನಪಟ್ಟಣ, ಅರಸೀಕೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಇಳಕಲ್, ಗದಗ, ಹುಬ್ಬಳ್ಳಿ.. ಹೀಗೆ ಎಲ್ಲೆಡೆ ಇಡೀ ಚಿತ್ರತಂಡ ವಿಜಯಯಾತ್ರೆ ಮಾಡಿದೆ. ಹೋದ ಕಡೆಯಲ್ಲೆಲ್ಲ ಅಪ್ಪುಗೆಯ ಅಭಿಮಾನ.

    ಒಂದು ಮೂಲದ ಪ್ರಕಾರ ಚಿತ್ರದ ಕಲೆಕ್ಷನ್ 15 ಕೋಟಿಯನ್ನೂ ದಾಟಿದೆ. ಚಿತ್ರದ ಹೀರೋ ಧನಂಜಯ್, ಹೀರೋಯಿನ್ ಅಮೃತಾ ಅಯ್ಯಂಗಾರ್, ಡೈರೆಕ್ಟರ್ ಶಂಕರ್ ಗುರು ಎಲ್ಲರಿಗೂ ಚಿತ್ರರಂಗದ ಸೀನಿಯರ್ಸ್ ಕಂಗ್ರಾಟ್ಸ್ ಹೇಳುತ್ತಿದ್ದಾರೆ.

  • ಬಡವ ರಾಸ್ಕಲ್`ಗೆ ತೆಲುಗು, ತಮಿಳಿನಲ್ಲಿ ಡಿಮ್ಯಾಂಡ್

    ಬಡವ ರಾಸ್ಕಲ್`ಗೆ ತೆಲುಗು, ತಮಿಳಿನಲ್ಲಿ ಡಿಮ್ಯಾಂಡ್

    ಬಡವ ರಾಸ್ಕಲ್, 2021ರ ಸೂಪರ್ ಹಿಟ್ ಸಿನಿಮಾ. ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗುವ ಒಂದು ವಾರ ಮುನ್ನ ಪುಷ್ಪ ರಿಲೀಸ್ ಆಗಿತ್ತು. ತೆಲುಗಿನಲ್ಲಷ್ಟೇ ಅಲ್ಲ, ಎಲ್ಲ ಭಾಷೆಗಳಲ್ಲೂ ಹಿಟ್ ಆದ ಸಿನಿಮಾ ಪುಷ್ಪ. ಆ ಚಿತ್ರದಲ್ಲಿ ಜಾಲಿ ರೆಡ್ಡಿಯಾಗಿ ಬೆಂಕಿ ಹಚ್ಚಿದ್ದವರು ನಮ್ಮ ಡಾಲಿ ಧನಂಜಯ್. ಅತ್ತ ಪುಷ್ಪ ಹಿಟ್ ಆಗುತ್ತಿದ್ದಂತೆಯೇ ಕನ್ನಡದಲ್ಲೂ ಹಿಟ್ ಆಗಿರುವ ಬಡವ ರಾಸ್ಕಲ್‍ಗೆ ಫುಲ್ ಡಿಮ್ಯಾಂಡ್ ಬಂದಿದೆ.

    ಒಳ್ಳೆಯ ರೇಟ್‍ಗೆ ಬಡವ ರಾಸ್ಕಲ್‍ನ ತೆಲುಗು ಡಬ್ಬಿಂಗ್ ರೈಟ್ಸ್ ಸೇಲ್ ಆಗಿವೆ

    ಎನ್ನಲಾಗಿದೆ. ಅಮೌಂಟ್ ಎಷ್ಟು ಅನ್ನೋದು ಅಧಿಕೃತವಾಗಿ ಗೊತ್ತಾಗಿಲ್ಲ. ಡಬ್ಬಿಂಗ್ ಕೂಡಾ ಶುರುವಾಗಿದೆ. ತಮಿಳಿನಲ್ಲಿ ಬಡವ ರಾಸ್ಕಲ್ ಡೈರೆಕ್ಟ್ ಓಟಿಟಿಗೇ ಬರುತ್ತಿದೆ. ಅಲ್ಲಿಯೂ ಡಬ್ಬಿಂಗ್ ಕೆಲಸ ನಡೆಯುತ್ತಿದೆ.

    ಶಂಕರ್ ಗುರು ನಿರ್ದೇಸನದ ಬಡವ ರಾಸ್ಕಲ್, ಧನಂಜಯ್, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ನಟಿಸಿರೋ ಸಿನಿಮಾ. ಧನಂಜಯ್ ಕೂಡಾ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.