` sindhu lokanath, - chitraloka.com | Kannada Movie News, Reviews | Image

sindhu lokanath,

  • ಕಾಣದಂತೆ ಮಾಯವಾಗಿದ್ದವ ಮತ್ತೆ ಬಂದ : ದಯವಿಟ್ಟು ಬನ್ನಿ.. ಸಿನಿಮಾ ನೋಡಿ..

    kanadanthe mayavadhano to re release

    ಕಾಣದಂತೆ ಮಾಯವಾಗಿದ್ದವನು ಚಿತ್ರವನ್ನು ಮತ್ತೆ ರಿಲೀಸ್ ಮಾಡಿದ್ದಾರೆ. ಕಳೆದ ತಿಂಗಳು ರಿಲೀಸ್ ಆಗಿ ವಿಭಿನ್ನ ಕಥೆ, ನಿರೂಪಣೆಯಿಂದ ಗಮನ ಸೆಳೆದಿದ್ದ ಕಾಣದಂತೆ ಮಾಯವಾದನು ಸಿನಿಮಾ, ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಚಿತ್ರವನ್ನು ನೋಡಿದ್ದವರೆಲ್ಲ ಸಿನಿಮಾ ಚೆನ್ನಾಗಿದೆ ಎಂದು ಹೊಗಳಿದ್ದರು. ಆದರೆ.. 2 ವಾರ ಕಳೆದರೂ ಚಿತ್ರಕ್ಕೆ ಕಾಡಿದ್ದು ಪ್ರೇಕ್ಷಕರ ಕೊರತೆ. ಹೀಗಾಗಿ ಎತ್ತಂಗಡಿಯಾಗಿದ್ದ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಿದೆ ಚಿತ್ರತಂಡ.

    ರಾಕ್‍ಲೈನ್ ಮಾಲ್ ಮತ್ತು ಕಾಮಾಕ್ಯ ಥಿಯೇಟರುಗಳಲ್ಲಿ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಿ, ಪ್ರೇಕ್ಷಕರು ಬಂದು ನೋಡಿ ಹರಸಬೇಕು ಎಂದು ಕೇಳಿಕೊಂಡಿದ್ದಾರೆ ನಟ ವಿಕಾಸ್.

    ಜಯಮ್ಮನ ಮಗ ಎಂಬ ಹಿಟ್ ಚಿತ್ರ ಕೊಟ್ಟಿದ್ದ ನಿರ್ದೇಶಕ ವಿಕಾಸ್, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಸಿಂಧು ಲೋಕನಾಥ್ ನಾಯಕಿ. ರಾಜ್ ಪತ್ತಿಪಾಟಿ ನಿರ್ದೇಶನದ ಸಿನಿಮಾಗೆ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಮತ್ತು ಪುಷ್ಪಾ ಸೋಮ್ ಸಿಂಗ್ ನಿರ್ಮಾಪಕರು. ಬುಕ್ ಮೈ ಶೋ ವಿರುದ್ಧವೂ ಆಕ್ರೋಶ ಹೊರಹಾಕಿರುವ ಚಿತ್ರತಂಡ, ಚಿತ್ರಕ್ಕೆ ಕಡಿಮೆ ರೇಟಿಂಗ್ ಕೊಟ್ಟು ಚಿತ್ರವನ್ನು ಹಾಳು ಮಾಡಿತು ಎಂದು ದೂರಿದ್ದಾರೆ.

    ಒಂದೊಳ್ಳೆಯ ಸಿನಿಮಾ ಮತ್ತೆ ರಿಲೀಸ್ ಆಗಿದೆ. ಗೆಲ್ಲಲಿ.

  • Ajay Rao's New Film Titled 'Krishna Talkies'

    ajai rao's new film titled krishna talkies

    Ajay Rao's fascination with the name Krishna is well known. The actor had earlier acted in films like 'Krishnan Love Story', 'Krishnan Marriage Story', 'Krishna Leela', 'Krishna Rukku' and 'Krishna S/O CM'. Now the actor is back with Krishna again and the new film of Ajay has been titled as 'Krishna Talkies'.

    'Krishna Talkies' is all set to be launched today and the film is written and directed by Anand Priya. This is his second film as a director after 'Olu Munswamy' and Anand has changed his name as Vijayanand,

    'Krishna Talkies' which has a caption called 'Balcony F-13' is being produced by Govindaraju under Gokul Entertainers banner. Sridhar Sambhram is the music director, while William David is the cinematographer. The film stars Chikkanna, Pramod Shetty, Yash Shetty and others in prominent roles. The film will be shot in Bangalore, Shimoga and other places.

  • Kanadante Mayavadanu review: Chitraloka Rating 3.5*/ 5

    kanadanthe mayavadhano movie review

    Looks like it's the season of dogs for sandalwood, and the man's best friend has started the industry on the successful path in 2020. After couple of ventures, it is the turn of Kanadante Mayavadanu directed by Raj Pathipati which is embedded with a lot of suspense and thrilling moments for two hours.

    This one marks the debut of another director, Vikas as hero in a haunted tale of revenge saga. Also, this has more than just the canine in action but filled with a lot of ghosts which leaves the audience haunted for a while in an emotional story of a man who sets out to avenge his death.

    Vikas as Rummy, a lawyer is killed by a rowdy in the opening scene of the movie, which sets the tone for two hours of suspense and horror. Soon, the audience is introduced to the spirit of Rummy and his new avatar in not only avenging his death but safeguarding his love interest played by Sindhu Lokanath.

    That apart, what makes the vanishing tale more interesting is the good humour in addition to the best performances across the cast. Each one of the characters does justice to the script right from Vikas, who tries his hand at action, suspense, romance and even taps his foot for a dance number. Sindhu makes an impressive comeback.

    Achyuth Kumar is one of the highlights along with the canine and the rest of action what Kanadante Mayavadanu offers with the required amount of commercial elements in it. It's a good watch for those who seek sensible entertainment, and a must for suspense lover along with dog and humour in the lead.

     

  • Puneeth, Vishal To Release Rakshasi Audio

    rakshasi image

    Actor Puneeth Rajakumar along with well known Tamil actors Vishal, Karthik and Arya are all set to release the audio of 'Rakshasi' being directed by Ashraf. The audio release and trailer launch is scheduled on 4th October at the Dr B R Ambedkar Stadium in Basaveshwaranagar. Apart from four well known heroes, South Indian Film Chamber of Commerce and Karnataka Film Chamber of Commerce presidents H D Gangaraju and Thomas D'Souza will attend the function as chief guests.

    'Rakshasi' stars Navarasan, Sindhu Lokanath, G K Reddy, Kuri Prathap, Ugram Manju and others.

  • Sindhu Lokananth Back With 'Krishna Talkies'

    si dhu lokanath back with krishna talkies

    Actor Sindhu Lokanath who was last seen in 'Heegondu Dina' which was released last year is back. This time the actress will be playing a prominent role in Ajay Rao's new film 'Krishna Talkies'.

    Sindhu entered into a wedlock with Shreyas and after that had not acted in any other film. Now after a small gap, Sindhu is making her come back and is paired opposite Ajay in the film. Ajay and Sindhu had earlier acted together in 'Jai Bhajarangabali'. Apart from Sindhu, Apoorva is also the heroine of the film.

    'Krishna Talkies' which has a caption called 'Balcony F-13' is being produced by Govindaraju and directed by Vijayanand (Anand Priya). Sridhar Sambhram is the music director, while William David is the cinematographer. The film stars Chikkanna, Pramod Shetty, Yash Shetty and others in prominent roles. The film will be shot in Bangalore, Shimoga and other places.

  • Sindhu Lokanath Guest Appearance in Krishna Leela - Exclusive

    sindhu lokanath image

    If sources are to be believed then actress Sindhu Lokanath has made a special yet guest appearance in Shashank's 'Krishna Leela' which stars Ajay Rao and Mayuri in lead roles. Though Shashank has not divulged any detail about what role Sindhu Lokanath will be playing in the film, sources say she makes a guest appearance in the film. This is not the first time that Sindhu is acting with Ajay Rao. Earlier, the duo had acted together in 'Jai Bhajarangabali'.

    'Krishna Leela' is all set to release on the eve of Ugadi. The film is the first film from Krishna Pictures headed by Ajay Rao. Shashank has based the story of the film from a real incident which occurred in 2010 in Bangalore. Sridhar V Sambhram has scored the music while, Shekhar Chandra is in charge of cinematography.

  • Sindhu Lokanath Returns Big Time

    sindhu lokanath returns big time

    Actress Sindhu Lokanath who has not been seen on screen since her last film Rakshasi in 2015 is back. After her marriage last year it was speculated that she will stop acting. But here is the surprise for her fans. As many as four of her films are releasing in the next few months. Strangely her return to screen is with Rakshashi. 

    The film is being re-released after three years. It will release this Friday again. In 2015 it was pulled out of theaters by the producer for some reason promising that it would be released in a bigger way shortly. But it has taken three years. Heegondu Dina is the next film of Sindhu. It would have released this Friday itself if there was no bandh called by the film industry. Two other films starring Sindhu are almost complete and readying for release. One is a Malayalam film and the other is Tulu film Ambar Caterers.

  • Sindhu Loknath In Court Against Producer

    sindhu loknath in court against producer

    Actress Sindhu Loknath has approached a court in Benagaluru against the producer of Heegondu Dina. She has complained that a cheque issued to her by the producer has bounced.

    The film is produced by Chandrasekhar under Smart Screen Productions and directed by Vikram Yoganand. Sindhu played the lead role in the experimental film which was released in March this year. The case has been filed in the XXIII ACMM Court.

  • ಒಂದು ದೆವ್ವದ ಪ್ರೇಮ ಕಥೆ : ಅವಳಿಗೆ ದೆವ್ವವೇ ಸೆಕ್ಯುರಿಟಿ..!

    kanadanthe mayavadhano is a ghost love story

    ಪ್ರೀತಿ ಸಿಗದೇ ಸತ್ತವರು, ಪ್ರೇಮ ವೈಫಲ್ಯ ಅನುಭವಿಸಿದವರು ದೆವ್ವಗಳಾಗೋದು ಕಾಮನ್. ಪ್ರೀತಿಸುತ್ತಿದ್ದರೂ.. ಪ್ರೀತಿಸಲಾಗದೆ.. ಇನ್ಯಾವುದೋ ಕಾರಣಕ್ಕೆ ಸತ್ತವರು ಕೂಡಾ ದೆವ್ವವಾಗ್ತಾರೆ. ಕಾಮನ್ ಅಂದ್ರೆ ಕಾಮನ್. ಏಕೆಂದರೆ ಇದು ಸಿನಿಮಾ ಸೂತ್ರ. ಆದರೆ.. ಪ್ರೀತಿಸಿದವಳನ್ನು ಕಾವಲು ಕಾಯಲು ಅವಳು ಪ್ರೀತಿಸಿದವನೇ ದೆವ್ವವಾಗಿ ಬಂದರೆ.. ಆಗ ಅದು ಕಾಣದಂತೆ ಮಾಯವಾದನು ಚಿತ್ರವಾಗುತ್ತೆ. ಏಕೆಂದರೆ ಇದು ಘೋಸ್ಟ್ ಲವ್ ಸ್ಟೋರಿ.

    ಕೇಳುವುದಕ್ಕೇ ವಿಭಿನ್ನವಾಗಿರುವ ಈ ಚಿತ್ರಕ್ಕೆ ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಹೀರೋ. ಸಿಂಧು ಲೋಕನಾಥ್ ಹೀರೋಯಿನ್. ಅಚ್ಯುತ್ ಕುಮಾರ್ ಕೂಡಾ ದೆವ್ವಾನೇ. ಆದರೆ ಕೈಯ್ಯಲ್ಲಿ ಬಂದೂಕಿರುತ್ತೆ. ಆರ್ಮಿ ಯೂನಿಫಾರ್ಮ್ ಇರುತ್ತೆ. ಚಿತ್ರದ ಇನ್ನೊಂದು ವಿಶೇಷ ಅಂದ್ರೆ ವಿಲನ್ ಆಗಿ ನಟಿಸಿರುವುದು ದಿ. ಉದಯ್. ಚಿತ್ರೀಕರಣದ ಅರ್ಧದಲ್ಲಿಯೇ ಅವರ ಮೃತಪಟ್ಟ ನಂತರ ಉದಯ್ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿರುವುದು ಭಜರಂಗಿ ಲೋಕಿ. ರಾಜ್ ಪತಿಪಾಟಿ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಮತ್ತು ಪುಷ್ಪಾ ಸೋಮ್ ಸಿಂಗ್ ಚಿತ್ರದ ನಿರ್ಮಾಪಕರು. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಕಾಣದಂತೆ ಮಾಯವಾದನು ಟ್ಯಾಗ್‍ಲೈನ್ ಸ್ಪರ್ಧೆ ಗೆದ್ದವರು ಯಾರು..?

    winner of kanadanthe mayavadanu tagline competition

    ಕಾಣದಂತೆ ಮಾಯವಾದನು ಚಿತ್ರತಂಡ ಒಂದು ವಿಶೇಷ ಸ್ಪರ್ಧೆ ಆಯೋಜಿಸಿತ್ತು. ಕಾಣದಂತೆ ಮಾಯವಾದನು ಚಿತ್ರಕ್ಕೆ ಒಂದು ಆಕರ್ಷಕ ಟ್ಯಾಗ್‍ಲೈನ್ ನೀಡಿ, 50 ಸಾವಿರ ರೂ. ಬಹುಮಾನ ಗೆಲ್ಲಿ ಎಂದು ಸ್ಪರ್ಧೆಯೊಡ್ಡಿತ್ತು. ಈಗ ಟ್ಯಾಗ್‍ಲೈನ್ ಸಿಕ್ಕಿದೆ. `ಗೋರಿ ಆದ್ಮೇಲ್ ಹುಟ್ಟಿದ್ ಕಥೆ' ಅನ್ನೋದು ಟ್ಯಾಗ್‍ಲೈನ್. ನರೇಂದ್ರ ಎಸ್.ಸಂಗೊಳ್ಳಿ ಎಂಬುವವರು ನೀಡಿರುವ ಟ್ಯಾಗ್‍ಲೈನ್ ಬಹುಮಾನ ಗೆದ್ದಿದೆ.

    ಜಯಮ್ಮನ ಮಗ ನಿರ್ದೇಶಕ ವಿಕಾಸ್, ಈ ಚಿತ್ರದ ಮೂಲಕ ನಾಯಕನಟರಾಗಿದ್ದಾರೆ. ಸಿಂಧು ಲೋಕನಾಥ್ ನಾಯಕಿ. ಚಂದ್ರಶೇಖರ್ ನಾಯ್ಡು, ಸೋಮ್‍ಸಿಂಗ್, ಪುಷ್ಪ ಸೋಮ್‍ಸಿಂಗ್ ನಿರ್ಮಾಪಕರು.

  • ಕಾಣದಂತೆ ಮಾಯವಾದವನಿಗೆ ಈಗಲೂ ಬರವಣಿಗೆಯೇ ಬೆಸ್ಟ್

    kanadanthe mayavadhano hero vikas's first preference is script writing

    ಕಾಣದಂತೆ ಮಾಯವಾದನು ಚಿತ್ರದ ಹೀರೋ ವಿಕಾಸ್, ಮೂಲತಃ ಕಥೆಗಾರ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಎತ್ತಿದ ಕೈ. ನಟನಾಗಿ, ಬರಹಗಾರನಾಗಿ, ಸಂಕಲನಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ವಿಕಾಸ್, ಈಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿದ್ದಾರೆ.

    ಅವರೇ ಹೇಳಿಕೊಳ್ಳೋ ಪ್ರಕಾರ ಈ ಚಿತ್ರದ ಕಥೆಯನ್ನು ರಾಜ್ ತಂದಾಗ ಕಥೆ ಇಷ್ಟವಾಗಿ ಅದನ್ನು ಡೆವಲಪ್ ಮಾಡಲು ಕುಳಿತುಕೊಂಡರಂತೆ. ಕೆಲವು ದಿನಗಳ ನಂತರ ರಾಜು ನೀವೇ ಹೀರೋ ಆಗಿ ಎಂದು ಹಠ ಹಿಡಿದಾಗ ಮೊದಲು ಒಪ್ಪಲಿಲ್ಲ. ಆದರೆ ನೀವು ಮಾಡದಿದ್ದರೆ ಕಥೆಯನ್ನು ಬೇರೆಯವರಿಗೆ ಕೊಡುತ್ತೇನೆ ಎಂದಾಗ ಒಪ್ಪಿಕೊಂಡೆ ಎನ್ನುವ ವಿಕಾಸ್‍ಗೆ ಈಗಲೂ ಬರವಣಿಗೆಯೇ ಇಷ್ಟ.

    ಬರಹಗಾರನಾಗುವುದಕ್ಕೂ ಮೊದಲು ಎಡಿಟರ್ ಆಗಿದ್ದೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದೆ. ಎಡಿಟರ್ ಆಗಿದ್ದಾಗ ಯೋಗರಾಜ್ ಭಟ್, ಸೂರಿ ಪರಿಚಯವಾದರು. ಜಾಕಿ ಚಿತ್ರದ ಡೈರೆಕ್ಷನ್ ಡಿಪಾರ್ಟ್‍ಮೆಂಟ್‍ನಲ್ಲಿ ಕೆಲಸ ಮಾಡಿದೆ. ಡ್ರಾಮಾಗೆ ಒನ್ ಲೈನ್ ಬರೆದೆ. ದೊಡ್ಮನೆ ಹುಡ್ಗ ಚಿತ್ರಕ್ಕೆ ಕಥೆ ಬರೆದೆ. ಸೂರಿ ಕ್ರೆಡಿಟ್ ಕೊಟ್ಟರು. ಅದಾದ ಮೇಲೆ ಜಯಮ್ಮನ ಮಗ ನಿರ್ದೇಶನ ಮಾಡಿದೆ. ಆದರೆ ಈಗಲೂ ನನಗೆ ಬರವಣಿಗೆಯೇ ಫೇವರಿಟ್ ಎನ್ನುತ್ತಾರೆ ವಿಕಾಸ್. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ಕೃಷ್ಣ ಟಾಕೀಸ್ ಸಸ್ಪೆನ್ಸ್.. ಥ್ರಿಲ್ಲರ್.. ಟೀಸರ್

    krishna talkie teaser holds suspense, thriller

    ಅಜೇಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಒಂದು ಟೀಸರ್ ಹೊರಬಿದ್ದಿದೆ. ಈ ಬಾರಿ ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ರಾವ್ ಹೇಳೋಕೆ ಹೊರಟಿರೋದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಯಾವುದೋ ಕೊಲೆ, ಇನ್ಯಾವುದೋ ನಿಗೂಢ ಜಗತ್ತಿನ ಬೆನ್ನು ಹತ್ತಿ ಹೋಗುವ ಕೃಷ್ಣ ಕೊನೆಗೆ ಎಲ್ಲಿಗೆ ಮುಟ್ತಾನೆ ಅನ್ನೋದೇ ಕಥೆ. ಟೀಸರ್ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ.

    ಅಜೇಯ್ ರಾವ್ ಜೊತೆ ಸಿಂಧು ಲೋಕನಾಥ್, ಅಪೂರ್ವ ನಟಿಸಿದ್ದಾರೆ. ವಿಜಯ್ ಆನಂದ್ ನಿರ್ದೇಶನದ ಚಿತ್ರಕ್ಕೆ ಗೋವಿಂದರಾಜು ಅಲೂರು ನಿರ್ಮಾಪಕ.

  • ದಿ ಏಜ್ 30 ಸಿಂಧು' ಲೋಕನಾಥ್

    sindhu lokanath's comeback with a web series

    ಸಿಂಧು ಲೋಕನಾಥ್... ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವಾಗಲೇ ದಿಢೀರನೆ ಮದುವೆಯಾದವರು. ಮದುವೆಯೇನೋ ಸಡನ್ ಆಗಿ ಆಯ್ತು. ಆದರೆ, ಹಾಗೆ ಆಗಿದ್ದೇ ಒಳ್ಳೆಯದಾಯ್ತು. ಚಿನ್ನದಂತಾ ಗಂಡ ಸಿಕ್ಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಸಿಂಧು. ಪತಿ ಶ್ರೇಯಸ್ ಸಿಂಧು ಅವರನ್ನು ತುಂಬಾ ಕೇರ್ ಮಾಡ್ತಾರಂತೆ. ಜೊತೆಗೆ ಸಿನಿಮಾದಲ್ಲಿ ಕಂಟಿನ್ಯೂ ಮಾಡೋಕೆ ಹೇಳಿದ್ದಾರಂತೆ. ಹೀಗಾಗಿ ಸಿಂಧು ತಾವೇ ನಿರ್ಮಾಪಕಿಯಾಗೋಕೆ ಮನಸ್ಸು ಮಾಡಿದ್ದಾರೆ.

    `@ ದಿ ಏಜ್ 30' ಅನ್ನೋ ವೆಬ್ ಸರಣಿ ಚಿತ್ರ ಮಾಡುತ್ತಿರುವ ಸಿಂಧು, ಆ ಚಿತ್ರಕ್ಕೆ ತಾವೇ ನಿರ್ಮಾಪಕಿ. ತಾವೇ ನಾಯಕಿ. ಇದು 17 ನಿಮಿಷದ ಕಿರುಚಿತ್ರ. ವಿಕಾಸ್ ಎಂಬುವವರು ನಿರ್ದೇಶಿಸಿರುವ ಈ ಚಿತ್ರಕ್ಕೆ ಕಥೆಯೂ ಸಿಂಧೂ ಅವರದ್ದೇ. ಕೇವಲ 1 ಲಕ್ಷ ರೂಪಾಯಿಯಲ್ಲಿ ನಿರ್ಮಿಸಿರುವ ಈ ಸಿನಿಮಾ ಆನ್‍ಲೈನ್ ಸಿಗುತ್ತೆ.

  • ದೆವ್ವದ ಜೊತೆ ಸಿಂಧು ಲೋಕನಾಥ್

    aindhu lokanath with ghost in kanadanthe mayabvadhano

    ಕಾಣದಂತೆ ಮಾಯವಾದನು ಚಿತ್ರ ಬಹಳ ಕುತೂಹಲ ಕೆರಳಿಸಿಬಿಟ್ಟಿದೆ. ಏಕೆಂದರೆ ಚಿತ್ರದಲ್ಲಿರೋದು ದೆವ್ವದ ಕಥೆ. ಲವ್ ಸ್ಟೋರಿ. ಕ್ರೈಂ ಥ್ರಿಲ್ಲರ್. ಆದರೆ, ಎಲ್ಲವೂ ಕಾಮಿಡಿ. ಹಾಗಾದರೆ, ಸ್ಟೋರಿ ಲೈನ್ ಏನಿರಬಹುದು..?

    ನಾನಿಲ್ಲಿ ಐಟಿ ಹುಡುಗಿ. ವಿಕಾಸ್‍ನನ್ನು ಲವ್ ಮಾಡುತ್ತೇನೆ. ಪ್ರೀತಿಯಲ್ಲಿರುವಾಗಲೇ ಅವನು ನಾಪತ್ತೆಯಾಗಿಬಿಡುತ್ತಾನೆ. ಅವನನ್ನು ಹುಡುಕುತ್ತಾ ಹೊರಡುತ್ತೇನೆ. ಆಗ ನನಗೊಂದು ಆತ್ಮ ಜೊತೆಯಾಗುತ್ತೆ. ಅದು ಶಕ್ತಿಯಿಲ್ಲದ ದೆವ್ವ. ಬದುಕಿದ್ದಾಗ ಬೇಕಾದಷ್ಟು ತಪ್ಪು ಮಾಡಿ, ಸತ್ತ ಮೇಲೆ ಮಾಡಿದ ತಪ್ಪುಗಳು ಅರಿವಾಗಿ ಪಶ್ಚಾತ್ತಾಪ ಪಡುವ ದೆವ್ವ. ಆ ದೆವ್ವ ಪ್ರವೇಶಿಸೋದು ಧರ್ಮಣ್ಣನ ಮೇಲೆ. ಧರ್ಮಣ್ಣಗೆ ದೆವ್ವ ಅಂದ್ರೆ ಭಯ. ಆದರೆ, ಧರ್ಮಣ್ಣನ ದೇಹದಲ್ಲಷ್ಟೇ ಆತ್ಮಕ್ಕೆ ಶಕ್ತಿ. ಹೀಗೆ ಕಥೆ ಸಖತ್ ಕಾಮಿಡಿಯಾಗಿ ಸಾಗುತ್ತೆ' ಎಂದು ಕಥೆಯ ಎಳೆಯನ್ನೇ ಬಿಚ್ಚಿಡ್ತಾರೆ ಸಿಂಧು ಲೋಕನಾಥ್.

    ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ತೆರೆಯ ಮೇಲೆ ದೆವ್ವ ಬರಲಿದೆ. ಥ್ರಿಲ್ ಕೊಡಲಿದೆ. ನಕ್ಕು ನಗಿಸಲಿದೆ. ಭಯವನ್ನೂ ಹುಟ್ಟಿಸಲಿದೆ. ಎಂಜಾಯ್....

  • ದೆವ್ವವಾದರು ಅಚ್ಯುತ್ ಕುಮಾರ್..!

    achyuth kumar is ghost in kanadanthe mayavadhano

    ಅಚ್ಯುತ್ ಕುಮಾರ್ ಕನ್ನಡ ಚಿತ್ರರಂಗದ ಸ್ಟಾರ್ ಪೋಷಕ ನಟ. ಅವರೀಗ ದೆವ್ವವಾಗಿದ್ದಾರೆ. ಅದೂ ಅಂತಿಂತ ದೆವ್ವವಲ್ಲ. ಸೈನಿಕ ದೆವ್ವ. ಅವರಿಗೆ ಈ ದೆವ್ವದ ವೇಷ ತೊಡಿಸಿರುವುದು ಕಾಣದಂತೆ ಮಾಯವಾದನು ಚಿತ್ರತಂಡ.

    ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕನ ಪಾತ್ರ ಅಚ್ಯುತ್ ಕುಮಾರ್ ಅವರದ್ದು. ಅವರು ಸತ್ತ ಮೇಲೂ ಅತ್ಮವಾಗಿ ಗುಹೆಯೊಂದರ ಕಾವಲಿಗೆ ನಿಲ್ಲುತ್ತಾರೆ. ಆ ಗುಹೆಯೊಳಗೆ ಇನ್ಯಾವುದೇ ಆತ್ಮ ಹೋಗದಂತೆ ಕಾಯುವುದು ಅವರ ಡ್ಯೂಟಿ. ಮೊದಲು ಕಥೆ ಮತ್ತು ಪಾತ್ರ ಹೇಳಿದಾಗ ನಕ್ಕಿದ್ದ ಅಚ್ಯುತ್ ಕುಮಾರ್, ಶೂಟಿಂಗ್ ಸೆಟ್‍ನಲ್ಲಿ ಇಷ್ಟಪಟ್ಟು ಪಾತ್ರ ಮಾಡಿದರು ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ನಿರ್ದೇಶಕ ರಾಜ್ ಪತ್ತಿಪಾಟಿ.

    ದೆವ್ವದ ಪಾತ್ರ ಮಾಡಿದ್ದು ಇದೇ ಮೊದಲು ಎನ್ನುವ ಅಚ್ಯುತ್ ಕುಮಾರ್, ಕಲ್ಪನೆಯ ಕ್ರೆಡಿಟ್ಟೆಲ್ಲ ನಿರ್ದೇಶಕರದ್ದು ಎನ್ನುತ್ತಾರೆ. ಜಯಮ್ಮನ ಮಗ ಚಿತ್ರ ನಿರ್ದೇಶಿಸಿದ್ದ ವಿಕಾಸ್, ಈ ಚಿತ್ರಕ್ಕೆ ಹೀರೋ. ಸಿಂಧು ಲೋಕನಾಥ್ ನಾಯಕಿ. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

  • ಸಿಂಧು ಲೋಕನಾಥ್ ರಹಸ್ಯ ಮದುವೆ..!

    sindhu loknath secret marriage

    ಚಿತ್ರನಟಿ ಸಿಂಧು ಲೋಕನಾಥ್ ಮದುವೆಯಾಗಿದ್ದಾರೆ. ಆದರೆ, ಅದನ್ನು ಬಹಿರಂಗಪಡಿಸದ ಕಾರಣಕ್ಕಷ್ಟೇ ಇದು ರಹಸ್ಯ ಮದುವೆ. ಪುಮಾ ಕಂಪೆನಿಯ ಉದ್ಯೋಗಿಯಾಗಿರುವ ಶ್ರೇಯಸ್ ಎಂಬುವರ ಜೊತೆ ಸಿಂಧು ಸಪ್ತಪದಿ ತುಳಿದಿದ್ದಾರೆ. ಶ್ರೇಯಸ್ ಮೂಲತಃ ಮಂಗಳೂರಿನವರು. ಇವರಿಬ್ಬರ ಮಧ್ಯೆ 2 ವರ್ಷದಿಂದ ಪ್ರೀತಿಯಿತ್ತು. ಈಗ ಮದುವೆಯಾಗಿದೆ.

    ಆಗಸ್ಟ್ 27ನೇ ತಾರೀಕು, ಮಡಿಕೇರಿಯ ಕಾವೇರಿ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆದ ತುಲಾ ಮುಹೂರ್ತದಲ್ಲಿ ಮದುವೆಯಾಗಿದೆ. ತಂದೆ ತಾಯಿಯೇ ನಿಂತು ಈ ಮದುವೆ ನೆರವೇರಿಸಿಕೊಟ್ಟಿದ್ದಾರೆ. 

    ಸಿಂಧು ಲೋಕನಾಥ್ ಮೂಲತಃ ಕೊಡಗಿನವರು. ಪರಿಚಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಿಂಧು, ರಾಕ್ಷಸಿ, ಯಾರೇ ಕೂಗಾಡಲಿ, ಡ್ರಾಮಾ, ಲವ್ ಇನ್ ಮಂಡ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ಕುರಿತು ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದರೆ, ಸದ್ಯಕ್ಕೆ ಸಿಂಧು ಫೋನ್ ಸ್ವಿಚ್​ ಆಫ್.