` vijay kirangadur, - chitraloka.com | Kannada Movie News, Reviews | Image

vijay kirangadur,

 • K.G.F. & R.R.R.  ಡಬ್ಬಾ ಎಂದ ಕಮಲ್ ಆರ್. ಖಾನ್ ಯಾರು..?

  K.G.F. & R.R.R.  ಡಬ್ಬಾ ಎಂದ ಕಮಲ್ ಆರ್. ಖಾನ್ ಯಾರು..?

  ಕೆಜಿಎಫ್ ಚಾಪ್ಟರ್ 2 ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ಕರ್ನಾಟಕದ ರಾಕಿಂಗ್ ಸ್ಟಾರ್ ಅಲ್ಲ. ಇಂಡಿಯನ್ ಸ್ಟಾರ್. ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಹೆಸರು ಈಗ ಇಂಡಿಯಾದೆಲ್ಲೆಡೆ ಚರ್ಚೆಯಾಗುತ್ತಿರೋ ಹೆಸರು. ಇದಕ್ಕೂ ಮುನ್ನ ದೇಶದೆಲ್ಲೆಡೆ ಇಂತಹುದೇ ಸಂಚಲನ ಸೃಷ್ಟಿಸಿದ್ದು ರಾಜಮೌಳಿಯ ಆರ್.ಆರ್.ಆರ್. ರಾಜಮೌಳಿಯ ಸಕ್ಸಸ್ ಹಿಸ್ಟರಿಯೂ ದೊಡ್ಡದು. ಅದಕ್ಕೂ ಮೊದಲು ಸಂಚಲನ ಸೃಷ್ಟಿಸಿದ್ದ ಸಿನಿಮಾ ಪುಷ್ಪ. ಈ ಮೂರೂ ಸಿನಿಮಾಗಳು ಬಾಲಿವುಡ್‍ನದ್ದಲ್ಲ. ಎರಡು ತೆಲುಗಿನ ಚಿತ್ರಗಳಾದರೆ, ಕೆಜಿಎಫ್ ಕನ್ನಡಿಗರದ್ದು. ಬಾಲಿವುಡ್ ಮಂದಿಯೂ ಹೊಗಳುತ್ತಿರೋ ಈ ಸಿನಿಮಾಗಳನ್ನು ಬಾಲಿವುಡ್‍ನ ಕೆಲವರು ಡಬ್ಬಾ, ಟಾರ್ಚರ್ ಎನ್ನುತ್ತಿದ್ದಾರೆ. ಆ ಲಿಸ್ಟಿನಲ್ಲಿ ಕಮಲ್ ಆರ್.ಖಾನ್ ಹೆಸರು ದೊಡ್ಡದು.

  ಕೆಜಿಎಫ್, ಆರ್.ಆರ್.ಆರ್. ಚಿತ್ರಗಳು ಟಾರ್ಚರ್. ಲದ್ದಿ ಸಿನಿಮಾ. ಥೂ.. ಥೂ.. ಎಂದೆಲ್ಲ ಉಗಿದಿರೋ ಕಮಲ್ ಆರ್.ಖಾನ್ ಯಾರು?

  ದೊಡ್ಡ ಹೆಸರೇನಲ್ಲ. ಮಾಡಿರೋದು ಮೂರು ಮತ್ತೊಂದು ಸಿನಿಮಾ. ಅದರಲ್ಲಿ ದೇಶದ್ರೋಹಿ ಅನ್ನೋ ಹಿಂದಿ ಸಿನಿಮಾವನ್ನು ಈಗ ಸ್ವತಃ ನಿರ್ಮಾಣ ಮಾಡಿ ನಟಿಸಿದ್ದ. ಅದು ಹೇಳಹೆಸರಿಲ್ಲದೆ ಮಕಾಡೆ ಮಲಗಿತ್ತು. ಮಿಕ್ಕಂತೆ ಆತ ಮಾಡಿರೋದು ಭೋಜ್‍ಪುರಿ ಸಿನಿಮಾವನ್ನು ಮಾತ್ರ. ಆ ಚಿತ್ರವೂ ರಿಲೀಸ್ ಆದಷ್ಟೇ ವೇಗವಾಗಿ ಓಡಿ ಹೋಗಿತ್ತು. ಇಂಡಿಯಾವನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂಬ ಆರೋಪದ ಮೇಲೆ ಆ ಚಿತ್ರವನ್ನು ಮಹಾರಾಷ್ಟ್ರ ಬ್ಯಾನ್ ಮಾಡಿತ್ತು. ಬಾಲಿವುಡ್‍ನ ದರಿದ್ರ ಚಿತ್ರಗಳಲ್ಲಿ ಈತನ ಚಿತ್ರಗಳು ಟಾಪ್ ಲಿಸ್ಟಿನಲ್ಲಿವೆ. ಸುಳ್ಳು ಸುದ್ದಿಗಳನ್ನು ಹಬ್ಬಿಸೋದ್ರಲ್ಲಿ, ಕೆಟ್ಟ ಕೆಟ್ಟ ಕಮೆಂಟ್ ಮಾಡೋದ್ರಲ್ಲಿ, ಸೆಲಬ್ರಿಟಿಗಳ ಬಗ್ಗೆ ಅಸಹ್ಯ ಸುದ್ದಿಗಳನ್ನು ಬಿತ್ತೋ ಕೇಸುಗಳಲ್ಲಿ ಈತನ ಹೆಸರು ಹಲವು ಬಾರಿ ಕೇಳಿ ಬಂದಿದೆ.

  ಇವನ ವೊರಿಜಿನಲ್ ಹೆಸರು ರಷೀದ್ ಖಾನ್. ಈತನ ಕಾಟಕ್ಕೆ ಬೇಸತ್ತವರ ಲಿಸ್ಟು ದೊಡ್ಡದು. ಶಾರೂಕ್, ಸಲ್ಮಾನ್, ಆಸಿನ್, ಸಾರಾ ಖಾನ್, ಸ್ಮಿತಾ ಕಮಲ್.. ಹೀಗೆ ಹಲವರು. ಈಗ ಕೆಜಿಎಫ್ ಬಗ್ಗೆ ಟೀಕೆ ಮಾಡಿದ ಮೇಲೆ ಉಗಿಯುವವರ ಸಂಖ್ಯೆ ದೊಡ್ಡದಾಗಿದೆ. ಕೆಜಿಎಫ್ ನಾಗಾಲೋಟ ಮುಂದುವರೆಯುತ್ತಿದೆ.

 • KGF 2' Teaser To Be Released On Yash's Birthday

  KGF 2' Teaser To Be Released On Yash's Birthday

  The shooting for Yash starrer 'KGF 2' is almost completed except for a day's of patchwork. Meanwhile, director Prashanth Neel has announced the teaser of the film will be released on Yash's birthday on the 08th of January.

  Recently, a major schedule of the film was completed in Hyderabad. The climax portions of the film were shot this time and Yash, Sanjay Dutt and others participated in the shooting of the film. The climax shoot was started with well known action director duo Anbariv composing action sequences for the film. After continuous shooting for more than 10 days, the remaining portions of the film were completed.

  'KGF 2'  is written and directed by Prashanth Neel and produced by Vijay Kiragandur under Hombale Films. The film stars Yash. Srinidhi Shetty, Sanjay Dutt, Raveena Tandon and others in prominent roles.

 • ಕೆಜಿಎಫ್ 2 ಟ್ರೇಲರ್ ಹಬ್ಬದ ಕಂಪ್ಲೀಟ್ ಹೈಲೈಟ್ಸ್

  ಕೆಜಿಎಫ್ 2 ಟ್ರೇಲರ್ ಹಬ್ಬದ ಕಂಪ್ಲೀಟ್ ಹೈಲೈಟ್ಸ್

  ಕೆಜಿಎಫ್ 2 ಟ್ರೇಲರ್ ರಿಲೀಸ್ ಆಯ್ತು. ಅದು ಹಬ್ಬವೇ ಸರಿ. ಕನ್ನಡದ ಒಂದು ಸಿನಿಮಾ ಈ ಮಟ್ಟಿಗೆ ಸಂಚಲನ ಸೃಷ್ಟಿಸಬೇಕು ಅನ್ನೋ ಕನಸು ನನಸಾದ ಕ್ಷಣವದು. ಆ ಒಟ್ಟಾರೆ ಸಂಚಲನವನ್ನು ಕಣ್ಣಲ್ಲಿ ನೋಡೋಕೂ ಹಬ್ಬ. ಕಿವಿಯಲ್ಲಿ ಕೇಳೋಕೆ ಆನಂದ. ಆ ಸಂಭ್ರಮದ ಹೈಲೈಟ್ಸ್ ಇಲ್ಲಿವೆ.

  ಸ್ಟಾರ್ ಆ್ಯಂಕರಿಂಗ್ :

  ಕೆಜಿಎಫ್ ಚಾಪ್ಟರ್ 2 ಕನ್ನಡದ ಸಿನಿಮಾ. ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್, ಪ್ರೊಡ್ಯೂಸರ್ ಕರಣ್ ಜೋಹರ್. ಅನುಶ್ರೀ ಕನ್ನಡ ನಿರೂಪಕಿಯಾಗಿದ್ದರು.

  ಭಾಷೆಗೊಬ್ಬ ರಾಯಭಾರಿ :

  ಕನ್ನಡಕ್ಕೆ ಶಿವಣ್ಣ, ತೆಲುಗಿಗೆ ರಾಮ್ ಚರಣ್ ತೇಜ, ತಮಿಳಿಗೆ ಸೂರ್ಯ, ಮಲಯಾಳಂಗೆ ಪೃಥ್ವಿರಾಜ್ ಹಾಗೂ ಹಿಂದಿ ಟ್ರೇಲರ್ ಬಿಡುಗಡೆಗೆ ಇದ್ದವರು ಫರ್ಹಾನ್ ಅಖ್ತರ್.

  ಮೀಡಿಯಾದವರ ಕಣ್ಣೆಲ್ಲ..

  ದೇಶದ ಬಹುತೇಕ ಪ್ರಮುಖ ಪತ್ರಿಕೆ, ಟಿವಿ ಚಾನೆಲ್ಲುಗಳು ಅಲ್ಲಿದ್ದವು. ಅವುಗಳ ಸಂಖ್ಯೆಯೇ 200ಕ್ಕೂ ಹೆಚ್ಚು.

  ಪುನೀತ್ ನೆನಪು..

  ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಯೊಬ್ಬರೂ ನೆನಪಿಸಿಕೊಂಡಿದ್ದು ಪುನೀತ್ ರಾಜಕುಮಾರ್ ಅವರನ್ನು. ನಾನು ಪುನೀತ್ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನಮ್ಮ ಜೊತೆ ಸದಾ ಇರುತ್ತಾರೆ ಎಂದವರು ಯಶ್. ಸಂಜಯ್ ದತ್ ಟ್ರೇಲರ್ ಬಿಡುಗಡೆಗೂ ಮುನ್ನ ಅಶ್ವಿನಿ ಪುನೀತ್ ಮನೆಗೆ ಹೋಗಿ ಬಂದರು. ಈ ಚಿತ್ರ ಅಪ್ಪುಗೆ ಅರ್ಪಣೆ ಎಂದರು ಪ್ರಶಾಂತ್ ನೀಲ್. ಶಿವಣ್ಣ ಭಾವುಕರಾದರು. ಯಶ್ ನನ್ನ ತಮ್ಮನಿದ್ದಂತೆ ಎಂದರು. ನೀವು ಹಾಗೆಲ್ಲ ಮಾಡಬೇಡಿ ಶಿವಣ್ಣ. ನೀವು ಅತ್ತರೆ ನೋಡೋಕಾಗಲ್ಲ ಎಂದರು ಯಶ್.

  ಕನ್ನಡ ಸಿನಿಮಾ ಎಲ್ಲರ ಹೆಮ್ಮೆ.. :

  ಕನ್ನಡದ ಚಿತ್ರವೊಂದನ್ನು ವಿತರಣೆಗೆ ಪಡೆದಿದ್ದೇ ಭಾಗ್ಯ ಎಂಬಂತೆ ಮಾತನಾಡಿದ್ದು ವಿತರಕರು. ವೇದಿಕೆಯಲ್ಲಿದ್ದ ತಮಿಳು ವಿತರಕ ಎಸ್.ಆರ್. ಪ್ರಭು, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್, ಹಿಂದಿಯ ಫರಾನ್ ಅಖ್ತರ್.. ಎಲ್ಲರೂ ಈ ಚಿತ್ರದ ಡಿಸ್ಟ್ರಿಬ್ಯೂಷನ್ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಂಡರು.

  ವೇದಿಕೆಯಲ್ಲಿದ್ದವರೆಲ್ಲ ಸ್ಟಾರ್ಸ್..:

  ಟ್ರೇಲರ್ ರಿಲೀಸ್ ಮಾಡುವಾಗ ಇಡೀ ವೇದಿಕೆಯಲ್ಲಿದ್ದವರು ಸ್ಟಾರ್ಸ್. ಆ ಪಟ್ಟಿಯೇ ಇಷ್ಟುದ್ದ. ಅಷ್ಟೊಂದು ಸ್ಟಾರ್‍ಗಳು ಒಂದೆಡೆ ಸೇರಿ ಮಾತನಾಡಿದ್ದು ಕೆಜಿಎಫ್ ಚಾಪ್ಟರ್ 2 ಟ್ರೇಲರ್ ರಿಲೀಸ್ ಬಗ್ಗೆ. ಸಿನಿಮಾ ಸೃಷ್ಟಿಸುವ ಹೊಸ ಹೊಸ ದಾಖಲೆಗಳ ಬಗ್ಗೆ..

  ಆರ್.ಆರ್.ಆರ್. ಮೀರಿಸಿದ ಶರವೇಗದ ಹಿಟ್ಸ್:

  ಆರ್.ಆರ್.ಆರ್.. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಪ್ಯಾನ್ ಇಂಡಿಯಾ ಸಿನಿಮಾ. ಸೂಪರ್ ಹಿಟ್. ಆದರೆ ಆ ಚಿತ್ರವನ್ನೂ ಮೀರಿಸಿದ್ದು ಕೆಜಿಎಫ್. ಆರ್.ಆರ್.ಆರ್. ಟ್ರೇಲರ್ ಬಂದಾಗ ಒಂದು ಮಿಲಿಯನ್ ವೀಕ್ಷಣೆ ಪಡೆಯೋಕೆ 45 ನಿಮಿಷ ಪಡೆದುಕೊಂಡಿತ್ತು. ಅದನ್ನೂ ಮೀರಿಸಿದ ಕೆಜಿಎಫ್ ಟ್ರೇಲರ್ ಕೇವಲ 30 ನಿಮಿಷದಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆಯಿತು.

  ರವೀನಾ ಟಂಡನ್ ಮಕ್ಕಳಿಗೂ ಯಶ್ ಇಷ್ಟ..

  ಇದನ್ನು ವೇದಿಕೆಯಲ್ಲೇ ಹೆಮ್ಮೆಯಿಂದ ಹೇಳಿಕೊಂಡವರು ರವೀನಾ ಟಂಡನ್. ಕನ್ನಡದ ಒಬ್ಬ ನಟರ ಬಗ್ಗೆ ಹಿಂದಿ ಚಿತ್ರರಂಗದವರು ಓಪನ್ ವೇದಿಕೆಯಲ್ಲಿ ಮೆಚ್ಚಿ ಮಾತನಾಡಿದ್ದರೆ ಡಾ.ರಾಜ್ ನಂತರ ಯಶ್ ಬಗ್ಗೆಯೇ ಇರಬೇಕು.

  ದೇವರಿಗೆ ಪೂಜೆ.. ಈಡುಗಾಯಿ..

  ರಾಜ್ಯದ ಹಲವೆಡೆ ಯಶ್ ಫ್ಯಾನ್ಸ್ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದರು. ದೀಢ ನಮಸ್ಕಾರ ಹಾಕಿದರು. ಸಿಹಿ ಹಂಚಿದರು. ಒಂದು ಸಿನಿಮಾ ಟ್ರೇಲರ್ ಈ ಮಟ್ಟಿಗೆ ಸಂಚಲನ ಸೃಷ್ಟಿಸಿದ್ದು ಇದೇ ಮೊದಲು.

  ನಿರ್ಮಾಪಕ, ನಿರ್ದೇಶಕರೇ ಹೀರೋ :

  ಒಂದು ಚಿತ್ರದ ಬಗ್ಗೆ 8 ವರ್ಷ ಕನಸು ಕಂಡ ಪ್ರಶಾಂತ್ ನೀಲ್, ಆ ಅದ್ಧೂರಿತನ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು ಅವರು ರಿಯಲ್ ಹೀರೋಗಳು. ಈ ಮಾತನ್ನು ಯಶ್ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲರೂ ಹೇಳಿದರು. ಒಂದು ಚಿತ್ರಕ್ಕೆ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಎಷ್ಟು ಮುಖ್ಯ ಅನ್ನೋದನ್ನು ಅದು ಪದೇ ಪದೇ ಸಾರಿ ಸಾರಿ ಹೇಳುತ್ತಿತ್ತು.

 • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ ಅಲ್ಲ..!

  news about kgf chapter 2 telugu remake rights is false

  ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ರೈಟ್ಸ್ 40 ಕೋಟಿಗೆ ಸೇಲ್ ಆಗುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಭ್ರಮ ಸೃಷ್ಟಿಸಿತ್ತು. ಚಿತ್ರಲೋಕದಲ್ಲೂ ಈ ವರದಿ ನೋಡಿದ್ದೀರಿ. ಆದರೆ.. ಅದು ಸುಳ್ಳು ಎಂದಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೊಂಬಾಳೆ ಫಿಲಂಸ್ನ ಪ್ರಮುಖರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, 40 ಕೋಟಿಯ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.

  ಆದರೆ.. ಕೆಜಿಎಫ್ ಚಿತ್ರಕ್ಕೆ ತೆಲುಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಇರುವುದಂತೂ ನಿಜ. ಏಕೆಂದರೆ, ಕೆಜಿಎಫ್ ನಂತರ ಅಲ್ಲೀಗ ಯಶ್ ಫ್ಯಾನ್ಸ್ ಕ್ಲಬ್ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ಚಿತ್ರ ಸೃಷ್ಟಿಸಿದ್ದ ಸಂಚಲನ, ಚಾಪ್ಟರ್ 2ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬುದರಲ್ಲಿ ಡೌಟೇ ಇಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರ್ಪಡೆಗೊಂಡಿದ್ದಾರೆ. ಕೆಜಿಎಫ್ 2 ಮಾರ್ಕೆಟ್ ವ್ಯಾಲ್ಯೂ ತಿಳಿಯೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

 • ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ..!!!

  kgf chapter 2 telugu rights goes up for 40 crores

  ಕೆಜಿಎಫ್ ಚಾಪ್ಟರ್ 2 ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಆದರೆ ಚಿತ್ರಕ್ಕೆ ಸೃಷ್ಟಿಯಾಗಿರುವ ಡಿಮ್ಯಾಂಡ್ ಮಾತ್ರ ಆಕಾಶಕ್ಕೇರಿದೆ. ಕೆಜಿಎಫ್ ಚಾಪ್ಟರ್ 2 ತೆಲುಗು ವರ್ಷನ್‍ಗೆ 40 ಕೋಟಿ ಡಿಮ್ಯಾಂಡ್ ಮಾಡಲಾಗುತ್ತಿದೆ. ಈ ಬಿಸಿನೆಸ್ ಫೈನಲ್ ಸ್ಟೇಜ್‍ನಲ್ಲಿದೆ.

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ ರಿಲೀಸ್ ಆಗಲಿದ್ದು, ವಿತರಕರು 30 ಕೋಟಿಯ ಆಫರ್ ಕೊಟ್ಟರಂತೆ. ಅಫ್‍ಕೋರ್ಸ್.. ಕನ್ನಡದ ಮಟ್ಟಿಗೆ ಅದೂ ಕೂಡಾ ದಾಖಲೆಯೇ. ಈಗ 40 ಕೋಟಿಯ ಆಸುಪಾಸು ವ್ಯವಹಾರ ಕುದುರಿದೆ ಎನ್ನಲಾಗಿದೆ.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸೃಷ್ಟಿಸಿದ ಹವಾ ಎಫೆಕ್ಟ್, ಚಾಪ್ಟರ್ 2ಗೆ ಡಿಮ್ಯಾಂಡ್ ಬಂದಿದೆ. ಸಿನಿಮಾ ಡಿಸೆಂಬರ್‍ನಲ್ಲಿ ರಿಲೀಸ್ ಆಗುವ ಚಾನ್ಸ್ ಇದೆ.

 • ಕೆಜಿಎಫ್-2 : ಯಶ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ..!!

  saran shakthi joins kgf chapter 2

  ಕೆಜಿಎಫ್-2ನಲ್ಲಿ ಯಶ್ ಪಾತ್ರಕ್ಕೆ ಅದೂ ರಾಕಿ ಭಾಯ್ ಪಾತ್ರಕ್ಕೆ ತಮಿಳು ನಟ ಸರಣ್ ಶಕ್ತಿ ಎಂಟ್ರಿಯಾಗಿದ್ದಾರೆ. ಕನ್‍ಫ್ಯೂಸ್ ಬಿಟ್ಹಾಕಿ. ಮೂಲಗಳ ಪ್ರಕಾರ ಸರಣ್ ಶಕ್ತಿ, ಹದಿಹರೆಯದ ರಾಕಿಭಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರತಂಡದಿಂದ ಹೊರಬಿದ್ದಿರೋ ಸೀಕ್ರೆಟ್ ಮಾಹಿತಿ.

  ವಡಾ ಚೆನ್ನೈ, ಸಗಾ ಚಿತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ಸರಣ್ ಶಕ್ತಿ, ಕೆಜಿಎಫ್-2 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದನ್ನು ಖುಷಿಯಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಈ ವರ್ಷದ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು.

 • ಮೊದಲ ದಿನವೇ 100 ಕೋಟಿ ಕ್ಲಬ್`ಗೆ ಕೆಜಿಎಫ್ : ಬಾಕ್ಸಾಫೀಸ್ ಎಲ್ಲಿಂದ ಎಷ್ಟೆಷ್ಟು..?

  ಮೊದಲ ದಿನವೇ 100 ಕೋಟಿ ಕ್ಲಬ್`ಗೆ ಕೆಜಿಎಫ್ : ಬಾಕ್ಸಾಫೀಸ್ ಎಲ್ಲಿಂದ ಎಷ್ಟೆಷ್ಟು..?

  134 ಕೋಟಿ. ಇದು ಹೊಂಬಾಳೆಯವರೇ ಹೊರಗೆ ಬಿಟ್ಟ ಅಧಿಕೃತ ಲೆಕ್ಕಾಚಾರ. ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಕೆಜಿಎಫ್ ಚಾಪ್ಟರ್ 2. ರಾಕಿಂಗ್ ಸ್ಟಾರ್ ಯಶ್ ಫುಲ್ ರಾಕಿಂಗ್. ಪ್ರಶಾಂತ್ ನೀಲ್ ಅವರ ಝೀಲ್ ಡಬಲ್ ಆಗಿದ್ದರೆ, ಫುಲ್ ಖುಷಿಯಾಗಿರೋದು ವಿಜಯ್ ಕಿರಗಂದೂರು. 134 ಕೋಟಿಯನ್ನು ಮೊದಲ ದಿನವೇ ಗಳಿಸಿದ ಕೆಜಿಎಫ್‍ನ ಮೊದಲ 4 ದಿನದ ಎಲ್ಲ ಶೋಗಳೂ ಬುಕ್ ಆಗಿರುವುದು ವಿಶೇಷ. ಅಲ್ಲಿಗೆ ಭಾನುವಾರದವರೆಗೆ ಕೆಜಿಎಫ್‍ಗೆ ಎದುರಾಳಿಗಳೇ ಇಲ್ಲ. ಈ 134 ಕೋಟಿಯಲ್ಲಿ ವಿದೇಶದ ಎಲ್ಲ 75 ದೇಶಗಳ ಬಾಕ್ಸಾಫೀಸ್ ಲೆಕ್ಕಾಚಾರ ಸಿಕ್ಕಿಲ್ಲ. ಈಗ ಬರುತ್ತಿರೋ ವರದಿಗಳ ಪ್ರಕಾರ ವಿಶ್ವದಾದ್ಯಂತ ಮೊದಲ ದಿನದ ಗಳಿಕೆ 165 ಕೋಟಿ ದಾಟಿದೆ. ಈ ಹಾದಿಯಲ್ಲಿ ಕೆಜಿಎಫ್ ಸೃಷ್ಟಿಸಿದ ದಾಖಲೆಗಳನ್ನೊಮ್ಮೆ ನೋಡೋಣ.

  ಕರ್ನಾಟಕದಲ್ಲೀಗ ಮೊದಲ ದಿನವೇ ಅತೀ ಹೆಚ್ಚು ದುಡಿದ ದಾಖಲೆ ಈಗ ಕೆಜಿಎಫ್ ಚಾಪ್ಟರ್ 2ನದ್ದು.

  ವಿಶ್ವದಾದ್ಯಂತ ಮೊದಲ ದಿನವೇ ದೊಡ್ಡ ಗಳಿಕೆ ಮಾಡಿದ ಚಿತ್ರಗಳ ಸಾಲಿನಲ್ಲಿ  ಕೆಜಿಎಫ್‍ನದ್ದು 3ನೇ ಸ್ಥಾನ. ಮೊದಲ 2 ಸ್ಥಾನದಲ್ಲಿರೋದು ಬಾಹುಬಲಿ ಮತ್ತು ಆರ್.ಆರ್.ಆರ್.

  ಆಂಧ್ರ ಮತ್ತು ತೆಲಂಗಾಣದಲ್ಲಿ ಆರ್.ಆರ್.ಆರ್. ದಾಖಲೆಯ ಸಮೀಪಕ್ಕೆ ಹೋಗಿದೆ. ಕರ್ನಾಟಕಕ್ಕಿಂತ ಹೆಚ್ಚು ಜನ ಅಲ್ಲಿ ಸಿನಿಮಾ ನೋಡಿದ್ದರೂ, ಗಳಿಕೆ ಕರ್ನಾಟಕಕ್ಕಿಂತ ಕಡಿಮೆ. ಕಾರಣ ಇಷ್ಟೆ. ಅಲ್ಲಿನ ಜಗನ್ ಸರ್ಕಾರ ಟಿಕೆಟ್ ದರವನ್ನು ಇಲ್ಲಿನಂತೆ ಏರಿಸೋಕೆ ಅವಕಾಶ ಕೊಟ್ಟಿಲ್ಲ. ಗರಿಷ್ಠ 250 ರೂ. ಅಷ್ಟೆ.

  ಕೇರಳದಲ್ಲಿ ಬೀಸ್ಟ್ ಸ್ಕ್ರೀನ್‍ಗಳ ಸಂಖ್ಯೆ ಡೌನ್ ಆಗಿದ್ದರೆ, ಕೆಜಿಎಫ್ ಸ್ಕ್ರೀನ್ ಸಂಖ್ಯೆ ತ್ರಿಬಲ್ ಆಗಿದೆ.

  ತಮಿಳುನಾಡಿನಲ್ಲಿ 2 ಮತ್ತು 3ನೇ ದಿನವೂ ಮಧ್ಯರಾತ್ರಿ ಶೋ ನಡೆಯುತ್ತಿವೆ. ವಿಶೇಷವೆಂದರೆ ಅಲ್ಲಿಯೂ ಬೀಸ್ಟ್ ಸ್ಕ್ರೀನ್ ಕಡಿಮೆಯಾಗಿದ್ದು, ಕೆಜಿಎಫ್ ಶೋಗಳ ಸಂಖ್ಯೆ ಹೆಚ್ಚಾಗಿದೆ.

  ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಶೋಗಳೂ ಹೌಸ್‍ಫುಲ್.

  ಹಿಂದಿಯಲ್ಲಿ ಮೊದಲ ದಿನವೇ 50 ಕೋಟಿ ದಾಟಿರೋ ಕೆಜಿಎಫ್, ಚಾಪ್ಟರ್ 1ನ ಲೈಫ್‍ಟೈಂ ಗಳಿಕೆಯನ್ನು ಮೊದಲ ದಿನವೇ ದಾಟಿಬಿಟ್ಟಿದೆ. ಚಾಪ್ಟರ್ 1, ಹಿಂದಿಯಲ್ಲಿ ಒಟ್ಟಾರೆ 44 ಕೋಟಿ ಬಿಸಿನೆಸ್ ಮಾಡಿತ್ತು. ಈಗ ಮೊದಲ ದಿನವೇ 54 ಕೋಟಿ ಬಿಸಿನೆಸ್ ಮಾಡಿದೆ.

  ಹಿಂದಿಯಲ್ಲಿ 54 ಕೋಟಿ, ಕನ್ನಡದಲ್ಲಿ 35 ಕೋಟಿ, ತೆಲುಗಿನಲ್ಲಿ 30 ಕೋಟಿ, ತಮಿಳಿನಲ್ಲಿ 9 ಕೋಟಿ ಹಾಗೂ ಮಲಯಾಳಂನಲ್ಲಿ 8 ಕೋಟಿ ಫಸ್ಟ್ ಡೇ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅಮೆರಿಕದಲ್ಲಿಯೂ ದಾಖಲೆ ಬರೆದಿರೋ ಕೆಜಿಎಫ್‍ನ ಒಟ್ಟಾರೆ ಫಾರಿನ್ ಬಾಕ್ಸಾಫೀಸ್ ಲೆಕ್ಕ 30 ಕೋಟಿಗೂ ಹೆಚ್ಚು.

 • ವಿಜಯ್ ಕಿರಗಂದೂರು ಕೆಜಿಎಫ್-3 ಬಗ್ಗೆ ಹೇಳಿದ್ದಾದರೂ ಏನು?

  ವಿಜಯ್ ಕಿರಗಂದೂರು ಕೆಜಿಎಫ್-3 ಬಗ್ಗೆ ಹೇಳಿದ್ದಾದರೂ ಏನು?

  ಎಲ್ಲ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವಂತೆ ಹೊಂಬಾಳೆ ಫಿಲಮ್ಸ್ ಕೆಜಿಎಫ್ ಚಾಪ್ಟರ್ 3 ಶುರು ಮಾಡಲಿದೆ. ಆಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ಪ್ರಶಾಂತ್ ನೀಲ್ ಈ ಬಗ್ಗೆ ವರ್ಕ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ನಿಜಕ್ಕೂ ವಿಜಯ್ ಕಿರಗಂದೂರು ಹೀಗೆ ಹೇಳಿದ್ದಾರಾ?

  ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ವಿಜಯ್ ಕಿರಗಂದೂರು ಅವರಿಗೆ ಈ ಪ್ರಶ್ನೆ ಕೇಳಲಾಗಿದೆ. ನೀವು ಕಾಂತಾರ 2 ಹಾಗೂ ಕೆಜಿಎಫ್ 3 ಬಗ್ಗೆ ಪ್ಲಾನ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸ್ಪಷ್ಟವಾಗಿ ಉತ್ತರ ನೀಡಿರುವ ವಿಜಯ್ ಕಿರಗಂದೂರು ಕೆಜಿಎಫ್ 3 ಮಾಡಬಾರದು ಎಂದೇನೂ ಇಲ್ಲ. ಆದರೆ ಸದ್ಯಕ್ಕೆ ಆ ಯೋಚನೆ, ಯೋಜನೆ ಇಲ್ಲ. ಯಶ್ ಬೇರೆ ಪ್ರಾಜೆಕ್ಟ್‍ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಕೂಡಾ ಸಲಾರ್ ಬ್ಯುಸಿಯಲ್ಲಿದ್ದಾರೆ. ಅದಾದ ನಂತರ ಪ್ರಶಾಂತ್ ನೀಲ್ ಅವರದ್ದೇ ಇನ್ನೊಂದು ಪ್ರಾಜೆಕ್ಟ್ ಇದೆ. ಇದು ಮುಗಿದ ಮೇಲೆಯೇ ಶುರು ಮಾಡಬೇಕು. ಪ್ರಶಾಂತ್ ನೀಲ್ ಕಥೆ ಸಿದ್ಧ ಮಾಡಬೇಕು. ಎಲ್ಲವೂ ಆದರೆ ಕೆಜಿಎಫ್ 3 ಮಾಡುತ್ತೇವೆ. ಸದ್ಯಕ್ಕಿಲ್ಲ ಎಂದಿದ್ದಾರೆ ವಿಜಯ್ ಕಿರಗಂದೂರು.

  ಕಾಂತಾರ 2 ಬಗ್ಗೆ ಕೂಡಾ ಇದೇ ಮಾತು ಹೇಳಿದ್ದಾರೆ. ಕಾಂತಾರ 2 ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ರಿಷಬ್ ಶೆಟ್ಟಿ ಬಿಡುವು ಮಾಡಿಕೊಂಡು ಕಥೆ ಸಿದ್ಧ ಮಾಡಿದ ತಕ್ಷಣ ಕಾಂತಾರ 2 ಶುರು ಮಾಡುತ್ತೇವೆ. ರಿಷಬ್ ಶೆಟ್ಟಿ ಬಿಡುವಾಗುವುದನ್ನು ಕಾಯುತ್ತಿದ್ದೇವೆ ಎಂದಿದ್ದಾರೆ ವಿಜಯ್ ಕಿರಗಂದೂರು.

 • ಸೈಮಾ ಅವಾರ್ಡ್ 2019 : ಇವರೇ ದಿ ಬೆಸ್ಟ್...

  kgf steals show at siima

  ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಕತಾರ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಾರೆಯರು ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ. ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ ನೋಡಿ. ಅತೀ ಹೆಚ್ಚು ಪ್ರಶಸ್ತಿ ಪಡೆದಿರುವುದು ಕೆಜಿಎಫ್. ಅಯೋಗ್ಯ 2ನೇ ಸ್ಥಾನದಲ್ಲಿದೆ.

  ಅತ್ಯುತ್ತಮ ನಾಯಕ ನಟ - ಯಶ್: ಕೆಜಿಎಫ್ ಚಾಪ್ಟರ್ 1

  ಅತ್ಯುತ್ತಮ ನಾಯಕ ನಟಿ - ರಚಿತಾ ರಾಮ್ : ಅಯೋಗ್ಯ

  ಅತ್ಯುತ್ತಮ ನಿರ್ದೇಶಕ - ಪ್ರಶಾಂತ್ ನೀಲ್ : ಕೆಜಿಎಫ್ ಚಾಪ್ಟರ್ 1

  ಅತ್ಯುತ್ತಮ ಹೊಸ ನಿರ್ದೇಶಕ - ಮಹೇಶ್ ಕುಮಾರ್ : ಅಯೋಗ್ಯ

  ಅತ್ಯುತ್ತಮ ಹೊಸ ನಟ - ಡ್ಯಾನಿಷ್ ಸೇಠ್ : ಹಂಬಲ್ ಪೊಲಿಟಿಷಿಯನ್ ನೊಗ್ರಾಜ್

  ಅತ್ಯುತ್ತಮ ಹೊಸ ನಟಿ - ಅನುಪಮಾ ಗೌಡ : ಆ ಕರಾಳ ರಾತ್ರಿ

  ಅತ್ಯುತ್ತಮ ಹಾಸ್ಯ ನಟ - ಪ್ರಕಾಶ್ ತುಮಿನಾಡು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ

  ಅತ್ಯುತ್ತಮ ಪೋಷಕ ನಟ - ಅಚ್ಯುತ್ ಕುಮಾರ್ 

  ಅತ್ಯುತ್ತಮ ಪೋಷಕ ನಟಿ - ಅರ್ಚನಾ : ಕೆಜಿಎಫ್ ಚಾಪ್ಟರ್ 1

  ಅತ್ಯುತ್ತಮ ಖಳನಟ - ಧನಂಜಯ್ : ಟಗರು

  ವಿಮರ್ಶಕರ ಪ್ರಶಸ್ತಿ- ಮಾನ್ವಿತಾ ಹರೀಶ್ : ಟಗರು

  ಅತ್ಯುತ್ತಮ ಗೀತ ರಚನೆ - ಚೇತನ್ ಕುಮಾರ್ : ಅಯೋಗ್ಯ (ಏನಮ್ಮಿ.. ಏನಮ್ಮಿ..)

  ಅತ್ಯುತ್ತಮ ಗಾಯಕಿ - ಅನನ್ಯಾ ಭಟ್ : ಟಗರು (ಹೋಲ್ಡನ್ ಹೋಲ್ಡಾನ್..)

  ಅತ್ಯುತ್ತಮ ಛಾಯಾಗ್ರಹಣ - ಭುವನ್ ಗೌಡ : ಕೆಜಿಎಫ್ ಚಾಪ್ಟರ್ 1

  ಅತ್ಯುತ್ತಮ ಸಂಗೀತ ನಿರ್ದೇಶನ - ರವಿ ಬಸ್ರೂರ್ : ಕೆಜಿಎಫ್ ಚಾಪ್ಟರ್ 1

 • ಹೈದರಾಬಾದ್ ಮುಗೀತು.. ಮಿಕ್ಕಿದ್ದೆಲ್ಲ ಕರ್ನಾಟಕದಲ್ಲಿ.. ಕೆಜಿಎಪ್ ಚಾಪ್ಟರ್ 2 UPDATE

  kgf hyderabad shooting complete

  ಹೈದರಾಬಾದ್ ಮುಗೀತು.. ಮಿಕ್ಕಿದ್ದೆಲ್ಲ ಕರ್ನಾಟಕದಲ್ಲಿ.. ಕೆಜಿಎಪ್ ಚಾಪ್ಟರ್ 2 UPDATE

  ಕೆಜಿಎಫ್‌ ಚಾಪ್ಟರ್‌-2 ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ ಕೊಡ್ತಿಲ್ಲ. ಒಂದೇ ಒಂದು ಟೀಸರ್ ತೋರಿಸಿಲ್ಲ. ಫಸ್ಟ್ ಲುಕ್ ಹೊರಬಿದ್ದಿಲ್ಲ. ಏನಾಗ್ತಿದೆ ಕೆಜಿಎಪ್ ಚಾಪ್ಟರ್ 2..? ಇದು ಅಭಿಮಾನಿಗಳು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ನವರನ್ನು ಕೇಳ್ತಿರೋ ಪ್ರಶ್ನೆ. ಆ ಪ್ರಶ್ನೆಗೆ ಸಂಪೂರ್ಣ ಉತ್ತರ ಅಲ್ಲದೇ ಹೋದರೂ, ಒಂದು ಅಪ್ಡೇಟ್ ಇದು.

  ಕೆಜಿಎಫ್ ಚಾಪ್ಟರ್ 2 ಟೀಂ, ಹೈದರಾಬಾದ್ನ ಶೂಟಿಂಗ್ ಮುಗಿಸಿದೆ. ಇದು ಅತ್ಯಂತ ದೀರ್ಘವಾದ ಶೂಟಿಂಗ್ ಶೆಡ್ಯೂಲ್ ಎಂದು ಸ್ವತಃ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಮುಂದಿನ ಭಾಗದ ಚಿತ್ರೀಕರಣ ಕರ್ನಾಟಕ ಕೆಜಿಎಫ್ ಹಾಗೂ ಸೆಟ್ನಲ್ಲಿ ನಡೆಯಲಿದೆ. ಹೈದರಾಬಾದ್ನಲ್ಲಿ ಪ್ರಮುಖವಾಗಿ ಸಂಜಯ್ ದತ್ ಅವರ ಅಧೀರ ಪಾತ್ರದ ಪೋರ್ಷನ್ ಶೂಟಿಂಗ್ ಆಗಿದೆ.