ಪ್ರಮೋದ್ ಶೆಟ್ಟಿ. ವಿಲನ್ ಪಾತ್ರಗಳಿಗೆ ಇತ್ತೀಚೆಗೆ ಬೇರೆಯದ್ದೇ ಗತ್ತು ತಂದುಕೊಟ್ಟ ನಟ. ಹೀರೋ ಚಿತ್ರದಲ್ಲೂ ಇವರೇ ವಿಲನ್. ಇತ್ತೀಚೆಗೆ ಅವರು ಹಲವು ಚಿತ್ರಗಳಲ್ಲಿ ವಿಲನ್ ಆಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವನೇ ಶ್ರೀಮನ್ನಾರಾಯಣ.. ಹೀಗೆ ಹಲವು ಚಿತ್ರಗಳಲ್ಲಿ ಅವರು ವಿಲನ್ ಆದರೂ, ಅದರಲ್ಲೊಂದು ಕಾಮಿಡಿ ಶೇಡ್ ಇರುತ್ತಿತ್ತು. ಆದರೆ, ಹೀರೋನಲ್ಲಿ ಹಾಗಿಲ್ಲ.
ಹೀರೋ ಚಿತ್ರದ ಟ್ರೇಲರ್ ನೋಡಿದವPramod Shetty Grabs Attention In Villain Role
ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!
ಪ್ರಮೋದ್ ಶೆಟ್ಟಿ. ವಿಲನ್ ಪಾತ್ರಗಳಿಗೆ ಇತ್ತೀಚೆಗೆ ಬೇರೆಯದ್ದೇ ಗತ್ತು ತಂದುಕೊಟ್ಟ ನಟ. ಹೀರೋ ಚಿತ್ರದಲ್ಲೂ ಇವರೇ ವಿಲನ್. ಇತ್ತೀಚೆಗೆ ಅವರು ಹಲವು ಚಿತ್ರಗಳಲ್ಲಿ ವಿಲನ್ ಆಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವನೇ ಶ್ರೀಮನ್ನಾರಾಯಣ.. ಹೀಗೆ ಹಲವು ಚಿತ್ರಗಳಲ್ಲಿ ಅವರು ವಿಲನ್ ಆದರೂ, ಅದರಲ್ಲೊಂದು ಕಾಮಿಡಿ ಶೇಡ್ ಇರುತ್ತಿತ್ತು. ಆದರೆ, ಹೀರೋನಲ್ಲಿ ಹಾಗಿಲ್ಲ.
ಹೀರೋ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರಮೋದ್ ಶೆಟ್ಟಿ ಕಣ್ಣುಗಳು ಡಿಫರೆಂಟ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಈ ಪಾತ್ರದಲ್ಲಿ ನನ್ನ ಕಣ್ಣುಗಳೇ ಹೈಲೈಟ್. ಡೈರೆಕ್ಟರ್ ಹೇಳಿದಂತೆ ನಟಿಸಿದ್ದೇನೆ. ಕಣ್ಣುಗಳು ವಿಭಿನ್ನವಾಗಿ ಕಾಣಲೆಂದು ಲೆನ್ಸ್ ಬಳಸೋಕೆ ಹೇಳಿದ್ದರು. ಭರತ್ ರಾಜ್, ನನ್ನ ಇಡೀ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಮೋದ್ ಶೆಟ್ಟಿ.
ಟ್ರೇಲರ್ ನೋಡಿದರೆ ಪ್ರಮೋದ್ ಶೆಟ್ಟಿಯವರನ್ನು ಲಂಕಾಸುರನಿಗೆ ಹೋಲಿಸಲಾಗಿದೆ. ಲಂಕಾಸುರನನ್ನು ಮೀರಿಸುವ ಕ್ರೌರ್ಯವನ್ನು ಪ್ರಮೋದ್ ಶೆಟ್ಟಿಯ ಪಾತ್ರ ಮಾಡುತ್ತದೆಯಂತೆ. ಅಷ್ಟೊಂದು ಕ್ರೌರ್ಯ ಇರುವ ಪಾತ್ರವನ್ನು ಪ್ರಮೋದ್ ಶೆಟ್ಟಿ ಹೇಗೆ ನಿಭಾಯಿಸಿದ್ದಾರ ಅನ್ನೋದನ್ನ ನೋಡೋಕೆ ಕೆಲವು ದಿನ ಕಾಯಬೇಕು. ಏಕೆಂದರೆ ಚಿತ್ರದಲ್ಲಿ ಡೈಲಾಗುಗಳಿಗಿಂತ ಹಾವಭಾವದಲ್ಲೇ ನಟಿಸಿದ್ದಾರಂತೆ ಪ್ರಮೋದ್ ಶೆಟ್ರು.
ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿಯೇ ಪ್ರೊಡ್ಯೂಸರ್. ಕಥೆ ಬರೆಯುವ ಟೀಂನಲ್ಲೂ ಇದ್ದ ರಿಷಬ್ ಶೆಟ್ಟಿ, ತಮ್ಮದೇ ಟೀಂನ ಹುಡುಗ ಭರತ್ ರಾಜ್ ಅವರಿಗೆ ಡೈರೆಕ್ಟರ್ ಪಟ್ಟ ಕಟ್ಟಿದ್ದಾರೆ. ಒಂದು ಚೆಂದದ ಕಥೆಯ ಸಿನಿಮಾ ಮಾರ್ಚ್ 5ರಂದು ರಿಲೀಸ್ ಆಗುತ್ತಿದೆ.ರಿಗೆ ಪ್ರಮೋದ್ ಶೆಟ್ಟಿ ಕಣ್ಣುಗಳು ಡಿಫರೆಂಟ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಈ ಪಾತ್ರದಲ್ಲಿ ನನ್ನ ಕಣ್ಣುಗಳೇ ಹೈಲೈಟ್. ಡೈರೆಕ್ಟರ್ ಹೇಳಿದಂತೆ ನಟಿಸಿದ್ದೇನೆ. ಕಣ್ಣುಗಳು ವಿಭಿನ್ನವಾಗಿ ಕಾಣಲೆಂದು ಲೆನ್ಸ್ ಬಳಸೋಕೆ ಹೇಳಿದ್ದರು. ಭರತ್ ರಾಜ್, ನನ್ನ ಇಡೀ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಮೋದ್ ಶೆಟ್ಟಿ.
ಟ್ರೇಲರ್ ನೋಡಿದರೆ ಪ್ರಮೋದ್ ಶೆಟ್ಟಿಯವರನ್ನು ಲಂಕಾಸುರನಿಗೆ ಹೋಲಿಸಲಾಗಿದೆ. ಲಂಕಾಸುರನನ್ನು ಮೀರಿಸುವ ಕ್ರೌರ್ಯವನ್ನು ಪ್ರಮೋದ್ ಶೆಟ್ಟಿಯ ಪಾತ್ರ ಮಾಡುತ್ತದೆಯಂತೆ. ಅಷ್ಟೊಂದು ಕ್ರೌರ್ಯ ಇರುವ ಪಾತ್ರವನ್ನು ಪ್ರಮೋದ್ ಶೆಟ್ಟಿ ಹೇಗೆ ನಿಭಾಯಿಸಿದ್ದಾರ ಅನ್ನೋದನ್ನ ನೋಡೋಕೆ ಕೆಲವು ದಿನ ಕಾಯಬೇಕು. ಏಕೆಂದರೆ ಚಿತ್ರದಲ್ಲಿ ಡೈಲಾಗುಗಳಿಗಿಂತ ಹಾವಭಾವದಲ್ಲೇ ನಟಿಸಿದ್ದಾರಂತೆ ಪ್ರಮೋದ್ ಶೆಟ್ರು.
ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿಯೇ ಪ್ರೊಡ್ಯೂಸರ್. ಕಥೆ ಬರೆಯುವ ಟೀಂನಲ್ಲೂ ಇದ್ದ ರಿಷಬ್ ಶೆಟ್ಟಿ, ತಮ್ಮದೇ ಟೀಂನ ಹುಡುಗ ಭರತ್ ರಾಜ್ ಅವರಿಗೆ ಡೈರೆಕ್ಟರ್ ಪಟ್ಟ ಕಟ್ಟಿದ್ದಾರೆ. ಒಂದು ಚೆಂದದ ಕಥೆಯ ಸಿನಿಮಾ ಮಾರ್ಚ್ 5ರಂದು ರಿಲೀಸ್ ಆಗುತ್ತಿದೆ.