ಕನ್ನಡದಲ್ಲಷ್ಟೇ ಅಲ್ಲ, ಎಲ್ಲ ಭಾಷೆಯ ಚಿತ್ರರಂಗಗಳಲ್ಲೂ ರೈತರ ಬದುಕಿನ ಕಥೆಗಳು ಮರೆತೇ ಹೋಗಿವೆಯೇನೋ ಎಂಬಷ್ಟು ಮರೆಯಾಗಿ ಹೋಗಿವೆ. ಇನ್ನು ಬರುವ ಕೆಲ ಚಿತ್ರಗಳಲ್ಲೂ ಹೀರೋನ ಅತಿಯಾದ ವೈಭವೀಕರಣವೋ.. ಅಥವಾ ಸಮಸ್ಯೆಗಳ ಕುರಿತ ವೈಭವೀಕರಣವೋ ಇರುತ್ತೆ. ಇವುಗಳಿಗೆ ಫುಲ್ ಸ್ಟಾಪ್ ಇಡಲೇನೋ ಎಂಬಂತೆ ಕನ್ನಡದಲ್ಲಿ ಒಂದು ಸಿನಿಮಾ ಬರುತ್ತಿದೆ... ಆ್ಯಕ್ಟ್ 1978 ಎಂಬ ಸಿನಿಮಾದ ಪೋಸ್ಟರ್ ಭರವಸೆ ಹುಟ್ಟಿಸುತ್ತಿದೆ.
ನಾತಿಚರಾಮಿ, ಹರಿವು ಚಿತ್ರಗಳ ಮೂಲಕ ಗಮನ ಸೆಳೆದ ನಿರ್ದೇಶಕ ಮಂಸೋರೆ ಈ ಚಿತ್ರಕ್ಕೆ ಡೈರೆಕ್ಟರ್. ಯಜ್ಞಾಶೆಟ್ಟಿ ನಾಯಕಿ.
ಪ್ರಮೋದ್ ಶೆಟ್ಟಿ, ಶೃತಿ, ದತ್ತಣ್ಣ, ಅವಿನಾಶ್, ಬಿ.ಕೆ.ಸುರೇಶ್, ಶೋಭರಾಜ್ ಸೇರಿದಂತೆ ಸೀನಿಯರ್ ಕಲಾವಿದರೇ ಇರುವ ಚಿತ್ರವಿದು. ಗರ್ಭಿಣಿ ವೇಷದಲ್ಲಿ ಹೊಟ್ಟೆಗೆ ಬಾಂಬ್ ಕಟ್ಟಿಕೊಂಡು ಬರೋ ಯಜ್ಞಾ ಶೆಟ್ಟಿ, ಕೈಲಿ ಗನ್ ಹಿಡಿದು ಕೊಳ್ತಾರೆ. ಟ್ರೇಲರ್ ಕೊನೆಯಲ್ಲಿ ಬರೋ ಎಲ್ಲಕ್ಕಿಂತ ಮೊದಲು ನನಗೆ ಗೌರವ ಬೇಕು ಅನ್ನೋ ಡೈಲಾಗ್ನಲ್ಲಿ ಇಡೀ ಚಿತ್ರದ ಜೀವಾಳ ಇರುವಂತಿದೆ. ಇಷ್ಟೆಲ್ಲದರ ಜೊತೆಗೆ ಮಂಸೋರೆ, ಏನು ಕಥೆ ಹೇಳಿದ್ದಾರೆ ಅನ್ನೋ ಕುತೂಹಲವೂ ಇದೆ. ಸಿನಿಮಾ ರೆಡಿಯಾಗಿದ್ದು, ಇದೇ ತಿಂಗಳು ರಿಲೀಸ್ ಮಾಡೋ ಪ್ಲಾನ್ನಲ್ಲಿದ್ದಾರೆ ಮಂಸೋರೆ. ಡಿ ಕ್ರಿಯೇಷನ್ಸ್ ನಿರ್ಮಾಣದ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ. ಅಷ್ಟೇ ಅಲ್ಲ, ಚಿತ್ರಕ್ಕೆ ಬೆಂಬಲವಾಗಿ ನಿಂತಿರೋ ಪುನೀತ್, ಚಿತ್ರದ ಆಡಿಯೋ ರಿಲೀಸ್ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ