` gubbi mele bramhastra, - chitraloka.com | Kannada Movie News, Reviews | Image

gubbi mele bramhastra,

  • 'Gubbi Mele Bramhastra' postponed to August 15th

    gubbin mele bramhastra postponed to august 15th

    With 'Kurukshetra' releasing on the same date, the makers of Raj B Shetty's 'Gubbi Mele Bramhastra' has decided to postpone the film and now the film will be releasing on the 15th of August.

    Earlier, 'Gubbi Mele Bramhastra', was scheduled on the 09th of August along with Ganesh's 'Gimmick'. Now the film has been postponed so that there won't be any theater problem.

    'Gubbi Mele Bramhastra' is written and directed by actor Sujay Shastry. This is his debut film as a director. Kavitha Gowda who was seen in 'Srinivasa Kalayana' and other films is the heroine. Manikanth Kadri is the music composer. The film is produced by T R Chandrashekhar under Crystal Park Cinemas.

  • Gubbi Mele Brahmastra Review: Chitraloka Rating 3.5 /5*

    gubbi mele bramhastra mvoie image

    Feeling bored and lazy with no plans for this weekend? Well, then simply head towards a theater near you and buy yourself a ticket for the movie 'Gubbi Mele Brahmastra'. Director Sujay Shastry's funny tale of a serious kind guarantees entertainment, making one laugh their heart out for over two and a half hours. Watching it along with family and friends can double the fun as well.

    The sole agenda here is to make the audience laugh for no reason. Or even if there is a reason, the reason has no connection. Confused? Don't be as Gubbi Mele Brahmastra is churned out from several such rib tickling sequences which is bound to make the audience forget their personal worries after watch Venkata Krishna Gubbi, the protagonist played by the talented Raj B Shetty. He is on a hunt for his dream girl.

    As the title suggests, it is all about how the protagonist deals with the difficult situations in his life. Here, it is about his marriage. Mr Gubbi is a well settled software engineer, and his parents are hell bent upon getting him married while his desire is to marry only after falling in love. 

    After purposefully rejecting series of girls chosen by his parents, Mr. Gubbi eventually finds a lovely partner on a matrimonial site. When everything seemed perfect with even engagement being fixed, there comes a twist which will unsettle his plans for a trouble free 'love marriage'. Raj B Shetty is seriously funny combined with Pramod Shetty's performance.

    It is the honest take on delivering nothing but a  pure comedy which make Gubbi Mele Brahmastra, a laughing stock, for the ones seeking nothing but comedy with nothing serious attached to it.

  • Gubbi Mele Bramhastra Telugu and Malayalam remake rights sold

    gubbi mele bramhastra telugu and malayalam remkae rights sold

    Raj B Shetty's new film 'Gubbi Mele Bramhastra' is all set to release on the 15th of August. Meanwhile, the Telugu and Malayalam remake rights of the film is sold and is likely to be remade in both the languages.

    The trailer 'Gubbi Mele Bramhastra' was released recently. After seeing the trailer, a  production company company has come forward and has acquired the remake rights for a good price. Producer T R Chandrashekhar has confirmed this and has said the remake rights has been sold for a good price.

    'Gubbi Mele Bramhastra' is written and directed by actor Sujay Shastry. This is his debut film as a director. Raj B Shetty, Kavitha Gowda, Pramod Shetty and others play prominent roles in the film. Manikanth Kadri is the music composer.

  • Gubbi Mele Bramhastra To Release Outside Karnataka

    Gubbi Mele Bramhastra

    Raj B Shetty's new film 'Gubbi Mele Bramhastra' has finally hit the screens today across Karnataka. The film will be releasing outside Karnataka on the 23rd of August.

    'Gubbi Merle Bramhastra' will be releasing in Chennai, Coimbatore, Hyderabad, Pune, Mumbai, Delhi, Ahmedabad and other places on the 23rd of August. The film will be releasing mainly in multiplexes.

    'Gubbi Mele Bramhastra' is written and directed by actor Sujay Shastry. This is his debut film as a director. Raj B Shetty, Kavitha Gowda, Pramod Shetty and others play prominent roles in the film. Manikanth Kadri is the music composer.

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ 3 ಭಾಷೆಗೆ ರೀಮೇಕ್

    gubbi mele bramhastra remake rights sold

    ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮತ್ತೊಮ್ಮೆ ನಿರ್ಮಾಪಕರ ಮುಖದಲ್ಲಿ ನಗು ಅರಳಿಸಿದೆ. ಅಯೋಗ್ಯ, ಚಮಕ್, ಬೀರ್‍ಬಲ್ ಚಿತ್ರಗಳಲ್ಲಿಯೂ ಗೆದ್ದಿದ್ದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತೊಮ್ಮೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟೂ ಗೆದ್ದಿದ್ದಾರೆ. ಏಕೆಂದರೆ ಚಿತ್ರದ ರೀಮೇಕ್ ರೈಟ್ಸ್ ಒಳ್ಳೆಯ ಬೆಲೆಗೆ ಸೇಲ್ ಆಗಿದೆ. ಡಿಜಿಟಲ್ ರೈಟ್ಸ್‍ಗೆ ಒಳ್ಳೆಯ ರೇಟು ಬಂದಿದೆ.

    ತಮಿಳು, ತೆಲುಗು ಹಾಗೂ ಮಲಯಾಳಂನ ರಿಮೇಕ್ ಹಕ್ಕುಗಳಿಂದಲೇ ನಿರ್ಮಾಪಕರು ಬಂಡವಾಳದ 3 ಪಟ್ಟು ಲಾಭ ಮಾಡಿದ್ದಾರಂತೆ. ಟಿವಿ ಹಕ್ಕುಗಳಿಗೆ 3 ಚಾನೆಲ್‍ಗಳಿಂದ ಬೇಡಿಕೆ ಬಂದಿದೆ.

    ಸುಜಯ್ ಶಾಸ್ತ್ರಿ ನಿರ್ದೇಶನದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ನಾಯಕರಾಗಿ ನಟಿಸಿದ್ದರು. ಕವಿತಾ ಗೌಡ ನಾಯಕಿಯಾಗಿದ್ದರು. ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ.

     

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡ್ತಿರೋದು ಸಗಣಿ ಪಿಂಟೋ.

    sujay shahthry is the director of gubbin mele bramhastra

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹೀರೋ ರಾಜ್ ಬಿ.ಶೆಟ್ಟಿ ಮೊಟ್ಟೆ ಸ್ಟಾರ್ ಎಂದೇ ಫೇಮಸ್. ಅದು ಒಂದು ಮೊಟ್ಟೆಯ ಕಥೆ ಎಫೆಕ್ಟು. ಕವಿತಾ ಗೌಡ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದೆ. ವಿದ್ಯಾ ವಿನಾಯಕ ಧಾರಾವಾಹಿಯಿಂದ ಫೇಮಸ್ ಆಗಿದ್ದವರು.

    ಇನ್ನು ಚಿತ್ರದ ನಿರ್ಮಾಪಕ ಚಂದ್ರಶೇಖರ್, ಗೋಲ್ಡನ್ ಹ್ಯಾಂಡು. ಅವರು ಮುಟ್ಟಿದ್ದೆಲ್ಲ ಚಿನ್ನವಾಗ್ತಿರೋ ಕಾಲವಿದು. ಚಮಕ್, ಅಯೋಗ್ಯ, ಬೀರ್‍ಬಲ್ ಚಿತ್ರಗಳೇ ಸಾಕ್ಷಿ.

    ಆದರೆ, ಈ ಸುಜಯ್ ಶಾಸ್ತ್ರಿ ಯಾರು..? ಅವರು ಚಿತ್ರರಂಗದಲ್ಲಿ ಪರಿಚಿತ ಮುಖವೇ ಆದರೂ, ಪ್ರೇಕ್ಷಕರಿಗೆ ಸ್ವಲ್ಪ ಅಪರಿಚಿತ ಮುಖವೇ. ಆದರೆ ನಿಮಗೆ ಸಗಣಿ ಪಿಂಟೋ ನೆನಪಿದ್ದರೆ.. ಅವರೇ ಈ ಸುಜಯ್ ಶಾಸ್ತ್ರಿ.

    ಬೆಲ್‍ಬಾಟಂ ಚಿತ್ರದಲ್ಲಿ ನಿದ್ರೆಯನ್ನೇ ಮಾಡದೆ ಕನಸು ಕಾಣುವ, ಸಿನಿಮಾ ರೀಲುಗಳನ್ನು ನೋಡುತ್ತಲೇ ಕಲ್ಪನಾ ಲೋಕದಲ್ಲಿ ವಿಹರಿಸುವ, ಕಳ್ಳತನ ಮಾಡಿ ಕದ್ದಿದ್ದನ್ನು ವಾಪಸ್ ಕೊಟ್ಟು ಹುಷಾರು ಎನ್ನುವ.. ಮಾತಿನ ಮೋಡಿಗಾರ ಸಗಣಿ ಪಿಂಟೋನೇ.. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿರುವ ಸುಜಯ್ ಶಾಸ್ತ್ರಿ. ನಿರ್ದೇಶಕ.

    ಒಂದು ಮಜವಾದ ಕಥೆಯೊಂದಿಗೆ ಕಾಮಿಡಿಯನ್ನೇ ತುಂಬಿ ಪ್ರೇಕ್ಷಕರ ಎದುರು ಆಗಸ್ಟ್ 15ಕ್ಕೆ ಬರುತ್ತಿದ್ದಾರೆ ಸುಜಯ್ ಶಾಸ್ತ್ರಿ. ಎಂಜಾಯ್..

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಕಾಮಿಡಿಯ ಅಟ್ಟಹಾಸ..!

    celebrate this varamahalakshmi festival with gubbi mele bramhastra

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಇದು ರಾಜ್ ಬಿ.ಶೆಟ್ಟಿ ನಟಿಸಿರುವ ಸಿನಿಮಾ. ಆಗಸ್ಟ್ ಮೊದಲನೇ ವಾರ, ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿರುವ ಈ ಚಿತ್ರದಲ್ಲಿ ಕಾಮಿಡಿಯ ಅಟ್ಟಹಾಸವೇ ಇದೆ. ಪ್ರೇಕ್ಷಕರನ್ನು ನಕ್ಕು ನಲಿಸಿಯೇ ಗೆಲ್ಲಲು ಹೊರಟಿದ್ದಾರೆ ನಿದೇಶಕ ಸುಜಾ ಶಾಸ್ತ್ರಿ ಮತ್ತು ನಿರ್ಮಾಪಕ ಟಿ.ಆರ್.ಚಂದ್ರಶೇಖರ್.

    ಕನ್ನಡದಲ್ಲಿ ಇತ್ತೀಚೆಗೆ ಟಿ.ಆರ್.ಚಂದ್ರಶೇಖರ್ ಮೈದಾಸನೆಂದೇ ಖ್ಯಾತರಾಗುತ್ತಿದ್ದಾರೆ. ಅವರ ಚಿತ್ರಗಳು ಒಂದರ ಹಿಂದೊಂದು ಗೆಲ್ಲುತ್ತಿರುವುದೇ ಇದಕ್ಕೆ ಉದಾಹರಣೆ. ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ.

    ಸ್ವಾಗತ ಕೃಷ್ಣಾ ಎಂಬ ಹಾಡು ಈಗಾಗಲೇ ನೋಡುಗರ ಮುದಲ್ಲಿ ನಗೆಯ ಅಲೆ ಎಬ್ಬಿಸಿದೆ. ಕವಿತಾ ಗೌಡ ನಾಯಕಿಯಾಗಿರುವ ಚಿತ್ರದಲ್ಲಿ ಕಾಮಿಡಿಯ ಅಟ್ಟಹಾಸವೇ ಇದೆಯಂತೆ. ಸೆನ್ಸಾರ್ ಮಂಡಳಿ ಸದಸ್ಯರು ಚಿತ್ರವನ್ನು ನೋಡುತ್ತಲೇ ನಕ್ಕೂ ನಕ್ಕು ಸುಸ್ತಾದರಂತೆ. ಹೀಗೆ ಶಹಬ್ಬಾಸ್‍ಗಿರಿ ಪಡೆದೇ ಎಂಟ್ರಿ ಕೊಡುತ್ತಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಗುಬ್ಬಿ ಯಾರು.. ಬ್ರಹ್ಮಾಸ್ತ್ರ ಏನು ಅನ್ನೋದನ್ನು ತಿಳಿದುಕೊಳ್ಳೋಕೆ ವರಮಹಾಲಕ್ಷ್ಮಿ ಹಬ್ಬದವರೆಗೆ ಕಾಯಬೇಕು.

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಹೊಟ್ಟೆ ತುಂಬಾ ನಕ್ಕ ಪ್ರೇಕ್ಷಕ

    gubbi mele bramhastra image

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗಿದೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆ, ಸುಜಯ್ ಶಾಸ್ತ್ರಿ ನಿರ್ದೇಶನ ಪ್ರೇಕ್ಷಕರಿಗೂ ಇಷ್ಟವಾಗಿದೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತೊಮ್ಮೆ ಹ್ಯಾಪಿ. ಚಿತ್ರ ಇಷ್ಟವಾಗಿರೋದಕ್ಕೆ ಕಾರಣಗಳಿವೆ.

    ಈ ಸಿನಿಮಾ ಹೀರೋಗೆ ಅವನು ಹೀರೋ ಅಲ್ಲ ಗೊತ್ತಿದೆ. ಆದರೆ ಅವನು ಸಿನಿಮೀಯ ಘಟನೆಗಳಲ್ಲಿ ಸಿಕ್ಕಿಕೊಳ್ತಾ ಹೋಗ್ತಾನೆ. ಒಂದೂವರೆ ಲಕ್ಷ ಸಂಬಳ ಪಡೆಯೋ ಸಾಫ್ಟ್‍ವೇರ್ ಉದ್ಯೋಗಿ, ಲವ್ ಮಾಡಿಯೇ ಮದುವೆಯಾಗಬೇಕು ಎನ್ನುವ ಹಠ, ಲಾಜಿಕ್ಕುಗಳತ್ತ ಕಣ್ಣೆತ್ತಿಯೂ ನೋಡದಂತೆ ಮಾಡಿರುವ ಸಂಕಲನ, ಯಾವುದೇ ಸಂದೇಶ ನೀಡದೆ ಕೇವಲ ಮನರಂಜನೆ ನೀಡುವುದಷ್ಟೇ ನನ್ನ ಉದ್ದೇಶ ಎನ್ನುವಂತೆ ಚಿತ್ರವನ್ನು ಕಟ್ಟಿಕೊಟ್ಟಿರುವ ಸುಜಯ್ ಶಾಸ್ತ್ರಿ, ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಜೋಡಿ ಗೆದ್ದಿದೆ.

     

  • ಗುಬ್ಬಿ ಮೇಲೆ ರಾಬಿನ್ ಹುಡ್ ಬ್ರಹ್ಮಾಸ್ತ್ರ

    there is robin hood in gubbi  mele brmahastramovie

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರವೇ ಒಂದು ಕಾಮಿಡಿ ಕಥಾಹಂದರ. ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಹುಡುಗಿಗಾಗಿ ಹುಡುಕಾಡುವ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿದ್ದರೆ, ಕವಿತಾ ಗೌಡ ಪರ್ಪಲ್ ಪ್ರಿಯಾ ಆಗಿ ಕಂಗೊಳಿಸಿದ್ದಾರೆ. ಆದರೆ, ಇವರಿಗಿಂತ ಡಿಫರೆಂಟ್ ಪಾತ್ರದಲ್ಲಿರೋದು ಪ್ರಮೋದ್ ಶೆಟ್ಟಿ.

    ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಬೆಲ್‍ಬಾಟಂ ಚಿತ್ರಗಳಲ್ಲಿ ನಟಿಸಿದ್ದ ಪ್ರಮೋದ್ ಶೆಟ್ಟಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಾಬಿನ್ ಹುಡ್ ಪಾತ್ರಧಾರಿ. ಆದರೆ, ನಿರ್ದೇಶಕ ಸುಜಯ್ ಶಾಸ್ತ್ರಿ ಈ ಪಾತ್ರವನ್ನು ಭಲೇ ಮಜವಾಗಿ ಕಟ್ಟಿಕೊಟ್ಟಿದ್ದಾರೆ.

    ರಾಬಿನ್ ಹುಡ್ ಎಂದರೆ, ಶ್ರೀಮಂತರನ್ನು ದೋಚಿ, ಬಡವರಿಗೆ ಹಂಚುವವನು. ಆದರೆ, ಈ ರಾಬಿನ್ ಹುಡ್, ದೋಚಿದ್ದೆಲ್ಲವನ್ನೂ ತನ್ನಲ್ಲಿಯೇ ಇಟ್ಟುಕೊಂಡು ಖುಷಿ ಪಡುವವನು. 

    ಹೇಗೆ.. ಯಾಕೆ.. ಅಂತೆಲ್ಲ ಪ್ರಶ್ನೆ ಮಾಡ್ತಾ ಕೂರಬೇಡಿ. ಆಗಸ್ಟ್ 15ಕ್ಕೆ ಥಿಯೇಟರ್‍ಗೆ ಹೋಗಿ.. ನಕ್ಕು ನಲಿಯಿರಿ.

  • ಟೆರರ್ ಬ್ರಹ್ಮಾಸ್ತ್ರಕ್ಕೂ ಬೆದರಲಿಲ್ಲ ಗುಬ್ಬಿ ಪ್ರೇಕ್ಷಕ

    gubbi mele bramhastra attracts audience amidst terror alter in the city

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಥಿಯೇಟರುಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರ ರಿಲೀಸ್ ಆದ ಮರುದಿನವೇ ಚಿತ್ರತಂಡಕ್ಕೊಂದು ಶಾಕ್ ಕಾದಿತ್ತು. ಕರ್ನಾಟಕದಾದ್ಯಂತ ಭಯೋತ್ಪಾದಕ ದಾಳಿ ಭೀತಿ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಯ್ತು. ಮಾಲ್‍ಗಳಲ್ಲಿ, ತಿಯೇಟರುಗಳಲ್ಲಿ ಭದ್ರತೆ, ತಪಾಸಣೆ ಹೆಚ್ಚಾಯ್ತು. ಈಗ ಥಿಯೇಟರು, ಮಾಲ್‍ಗಳಲ್ಲಿ ಪ್ರತಿದಿನ ಎರಡು ಬಾರಿ ಸಂಪೂರ್ಣ ತಪಾಸಣೆ ನಡೆಯುತ್ತಿದೆ.

    ಆದರೆ, ಇದೆಲ್ಲದರ ನಡುವೆಯೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿದ್ದಾರೆ. ತಪಾಸಣೆ ಎದುರಿಸಿಕೊಂಡೇ ಬಂದು ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಖುಷಿಗೊಂಡಿದ್ದಾರೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್.

    ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಪ್ರಧಾನ ಪಾತ್ರದಲ್ಲಿದ್ದಾರೆ.

  • ಟ್ರೇಲರ್‍ಗೇ ಬಂತು ಬಾಲಿವುಡ್ ಡಿಮ್ಯಾಂಡು

    gubbi mele bramhastra trailer gets demand in bollywood

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ರಿಲೀಸ್‍ಗೆ ರೆಡಿಯಾಗಿ ಟ್ರೇಲರ್ ಬಿಟ್ಟಿದ್ದೇ ತಡ, ಚಿತ್ರದ ರೀಮೇಕ್‍ಗೆ ಡಿಮ್ಯಾಂಡ್ ಶುರುವಾಗಿದೆ. ಅದರಲ್ಲೂ ವಿಶೇಷವಾಗಿ ಬಾಲಿವುಡ್‍ನಿಂದ. ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ. ಸಗಣಿ ಪಿಂಟೋ ಪಾತ್ರದಿಂದ ಗಮನ ಸೆಳೆದಿರುವ ಸುಜಯ್ ಶಾಸ್ತ್ರಿ, ಕಮೆಂಟೇಟರ್ ಕೂಡಾ ಹೌದು. ಫುಟ್‍ಬಾಲ್, ಕಬಡ್ಡಿ ಟೂರ್ನಮೆಂಟುಗಳಿಗೆ ಆಗಾಗ್ಗೆ ಮುಂಬೈಗೆ ಹೋಗುತ್ತಲೇ ಇರುತ್ತಾರೆ.

    ಹೀಗಾಗಿ ನನಗೆ ಅಲ್ಲಿನ ಕೆಲ ಬಾಲಿವುಡ್ ಮಂದಿ ಪರಿಚಯವಿದೆ. ಚಿತ್ರದ ಟ್ರೇಲರ್ ನೋಡಿ ಇಷ್ಟಪಟ್ಟಿರುವ ಕೆಲವರು ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಉತ್ಸುಕತೆ ತೋರುತ್ತಿದ್ದಾರೆ. ಮಾತುಕತೆಗಳು ಜಾರಿಯಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

    ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟಿಸಿರುವ ಚಿತ್ರದಲ್ಲಿ ಶುಭಾ ಪೂಂಜಾ, ಕಾರುಣ್ಯ ರಾಮ್, ಶೋಭರಾಜ್, ಪ್ರಮೋದ್ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಅಯೋಗ್ಯ, ಚಮಕ್ ಖ್ಯಾತಿಯ ಟಿ.ಆರ್. ಚಂದ್ರಶೇಖರ್ ಚಿತ್ರದ ನಿರ್ಮಾಪಕ.

  • ಪ್ರೇಕ್ಷಕ ಗುಬ್ಬಿ ಮೇಲೆ ಕಾಮಿಡಿ ಬ್ರಹ್ಮಾಸ್ತ್ರ

    gubbi mele bramhastra trailer released

    ನೀನೇನ್ ಶಾರೂಕ್ ಖಾನ್ ಥರಾನಾ ಇದ್ಯಾ..? ಬ್ಯಾಂಕ್ ಜನಾರ್ದನ್ ಕೊನೆ ತಮ್ಮನ್ ಥರಾ ಇದ್ಯಾ.. ಅವ್ನು ಡಾನ್.. ಅಯ್ಯೋ ಬಿಡಿ ಸಾರ್.. ಅವ್ರವ್ರು ಹೊಟ್ಟೆಪಾಡಿಗೆ ಏನೇನೋ ಮಾಡ್ಕೋತಾರೆ.. ನಂಗೆ ನೋ ಪ್ರಾಬ್ಲಂ..

    ಸಾರ್.. ನಾನು ನಿಮ್ ಹೆಂಡ್ತೀನ್ ಕಿಡ್ನಾಪ್ ಮಾಡಿದ್ದೀನಿ.. (ಹೀರೋ ಸುತ್ತ ರಿವಾಲ್ವರು ಪ್ರತ್ಯಕ್ಷ) ತಪ್ಪಾಗೋಯ್ತು ಸಾರ್, ನಿಮ್ ತಂಗೀನ್ ಕಿಡ್ನಾಪ್ ಮಾಡಬೇಕಿತ್ತು.. (ಮತ್ತೆ ಹೀರೋ ಸುತ್ತ ರಿವಾಲ್ವರು ಪ್ರತ್ಯಕ್ಷ)

    ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಟ್ರೇಲರ್‍ನ ಸ್ಯಾಂಪಲ್ಲುಗಳಷ್ಟೆ. ಟ್ರೇಲರಿನಲ್ಲೇ ನಗೆಯ ಬುಗ್ಗೆ ಉಕ್ಕಿಸಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆಯ ಸಿನಿಮಾಗೆ ಪ್ರಸನ್ನ ಕಚಗುಳಿಯ ಸಂಭಾಷಣೆ ಕೊಟ್ಟಿದ್ದಾರೆ.

    ಅಯೋಗ್ಯ, ಚಮಕ್, ಬೀರ್‍ಬಲ್ ನಂತರ ಮತ್ತೊಮ್ಮೆ ಟಿ.ಆರ್.ಚಂದ್ರಶೇಖರ್ ಗೆಲುವಿನ ನಗು ಕಾಣುತ್ತಿದ್ದಾರೆ.

  • ರಾಜ್ ಬಿ.ಶೆಟ್ಟಿ ಕನಸಿನಲ್ಲಿ ಶುಭಾ ಪೂಂಜಾ, ಕಾರುಣ್ಯ ರಾಮ್

    who are raj b shetty's dream girls

    ಸ್ವಾಗತಂ ಕೃಷ್ಣಾ.. ಶರಣಾಗತಂ ಕೃಷ್ಣಾ.. ಎಂದು ಕಾರುಣ್ಯ ರಾಮ್, ರಚನಾ ದರ್ಶನ್, ಶುಭಾ ಪೂಂಜಾ ಹಾಡುತ್ತಿದ್ದರೆ.. ನಾಚಿಕೊಳ್ಳುತ್ತಲೇ ರೋಮಾಂಚನಗೊಳ್ಳುತ್ತಾರೆ ರಾಜ್ ಬಿ.ಶೆಟ್ಟಿ. ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹಾಡು.. ಕನಸಿನ ಹಾಡು. ಆ ಕನಸಿನ ಹಾಡಿನಲ್ಲಿ ರಾಜ್ ಬಿ.ಶೆಟ್ಟಿಯ ಮನಸ್ಸು, ಹೃದಯಕ್ಕೆ ಲಗ್ಗೆ ಹಾಕುವುದು ಕಾರುಣ್ಯ ರಾಮ್, ರಚನಾ ದರ್ಶನ್, ಶುಭಾ ಪೂಂಜಾ.

    ಇಲ್ಲಿಯೂ ಮೊಟ್ಟೆ ಶೆಟ್ಟರಿಗೆ ಒಳ್ಳೆಯ ಸಂಬಳ ಬರುವ ಕೆಲಸವಿದ್ದರೂ ಹುಡುಗಿ ಸಿಕ್ಕಿರೋದಿಲ್ಲ. ಹಾಗೆ ಹುಡುಗಿಯರೆ ಸಿಗದ ಬರಗಾಲದಲ್ಲಿರುವ ರಾಜ್ ಬಿ.ಶೆಟ್ಟಿ ಕನಸಿನಲ್ಲಿ ಇವರೆಲ್ಲ ಬಂದು ಡಿಸೈನ್ ಡಿಸೈನಾಗಿ ಸ್ವಾಗತ ಗೀತೆ ಹಾಡುತ್ತಾರೆ.

    ನಿರ್ದೇಶಕ ಸುಜಯ್ ಶಾಸ್ತ್ರಿಯವರೇ ಹಾಡು ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತವಿದೆ. ಮೈತ್ರಿ ಅಯ್ಯರ್ ಹಾಡಿರುವ ಹಾಡಿನಲ್ಲಿ ಯುವಕರ ಕನಸುಗಳೇ ತುಂಬಿವೆ. 

    ಆ ಕನಸುಗಳ ಚಿತ್ರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗುವುದು ಮುಂದಿನ ವಾರ. ರಾಜ್ ಬಿ.ಶೆಟ್ಟಿಗೆ ಇಲ್ಲಿ ಕವಿತಾ ಗೌಡ ನಾಯಕಿ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರವಿದು.

  • ರಿಲೀಸಿಗೂ ಮೊದಲೇ ಗುಬ್ಬಿ ರೀಮೇಕ್

    gubbi mele bramhastra remkae rights sold

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ, ತನ್ನ ಟ್ರೇಲರ್, ಕಚಗುಳಿಯಿಡೋ ಸಂಭಾಷಣೆಗಳಿಂದಲೇ ಕುತೂಹಲ ಹುಟ್ಟಿಸಿರೋ ಸಿನಿಮಾ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟಿಸಿರುವ ಚಿತ್ರಕ್ಕೆ ಸುಜಯ್ ಶಾಸ್ತ್ರಿ ನಿರ್ದೇಶನವಿದೆ. ಸ್ವಾತಂತ್ರ್ಯೋತ್ಸವಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗೆ ಬಿಡುಗಡೆಗೆ ಮೊದಲೇ ಖುಷಿ ಸುದ್ದಿ ಸಿಕ್ಕಿದೆ.

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ರೀಮೇಕ್ ಹಕ್ಕುಗಳು ಮಾರಾಟವಾಗಿವೆಯಂತೆ. ಎರಡು ಭಾಷೆಯ ರೀಮೇಕ್ ಹಕ್ಕು ಮಾರಾಟವಾಗಿದೆ. ತೆಲುಗಿನ ಪ್ರತಿಷ್ಠಿತ ಸಂಸ್ಥೆಯೊಂದು ರೀಮೇಕ್ ರೈಟ್ಸ್ ಖರೀದಿಸಿದೆ ಎಂದಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ.

    ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಅವರಂತೂ ಫುಲ್ ಹ್ಯಾಪಿ. ಈ ಹಿಂದೆ ಅವರ ಅಯೋಗ್ಯ ಹಾಗೂ ಬೀರ್‍ಬಲ್ ಚಿತ್ರಗಳೂ ಇದೇ ರೀತಿ ದಾಖಲೆ ಬರೆದಿದ್ದವು. ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಅದರಲ್ಲೂ ಅವರ ಪಾಲಿಗೆ ಅದೃಷ್ಟದ ದಿನವೆಂದೇ ನಂಬಲಾಗಿರುವ ಆಗಸ್ಟ್ 15ಕ್ಕೆ ಸಿನಿಮಾ ಬರುತ್ತಿದೆ. ಆಗಸ್ಟ್ 15ರಂದೇ ಅಯೋಗ್ಯ ರಿಲೀಸ್ ಆಗಿತ್ತು. ಸೂಪರ್ ಹಿಟ್ ಆಗಿತ್ತು

  • ಸಗಣಿ ಸ್ಟಾರ್ ಕಥೆ ಹೇಳಿದ ಸ್ಟೈಲಿಗೆ ಮೊಟ್ಟೆ ಸ್ಟಾರ್ ಓಕೆ ಅಂದ್ರಂತೆ..!

    gubbi mele bramhastra

    ಇದೊಂಥರಾ ಸ್ಯಾಂಡಲ್‍ವುಡ್ ವಿಚಿತ್ರ. ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಸ್ಟಾರ್ ಆದ ರಾಜ್ ಬಿ.ಶೆಟ್ಟಿ, ಈಗ ಮೊಟ್ಟೆ ಸ್ಟಾರ್ ಆದರೆ, ಬೆಲ್‍ಬಾಟಂನ ಸಗಣಿ ಪಿಂಟೋ ಪಾತ್ರದ ಮೂಲಕ ಚಿರಪರಿಚಿತರಾಗ ಸುಜಯ್ ಶಾಸ್ತ್ರಿ, ಸಗಣಿ ಸ್ಟಾರ್. ಅಫ್‍ಕೋರ್ಸ್.. ಅದು ಅವರ ಅಭಿನಯ ಪ್ರತಿಭೆಗೆ ಸಿಕ್ಕಿದ ಮನ್ನಣೆಯೂ ಹೌದು.

    ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ, ನಿರ್ದೇಶಕರಾಗಿರುವ ಮೊದಲ ಸಿನಿಮಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್‍ಗೆ ರೆಡಿಯಾಗಿ ನಿಂತಿದೆ. ಈ ಕಥೆಯನ್ನು ರಾಜ್ ಬಿ.ಶೆಟ್ಟಿ ಒಪ್ಪಿಕೊಳ್ಳೋಕೆ ಕಾರಣ, ಸುಜಯ್ ಕಥೆ ಹೇಳಿದ ಸ್ಟೈಲ್ ಅಂತೆ.

    ಒಂದು ಮೊಟ್ಟೆಯ ಕಥೆಯಲ್ಲಿ ಇದ್ದದ್ದು ರಿಯಲೆಸ್ಟಿಕ್ ಕಾಮಿಡಿ. ಇಲ್ಲಿ ಸ್ಪೂಫ್ ಕಾಮಿಡಿ ಇದೆ. ಚಿತ್ರದಲ್ಲಿ ಪಾತ್ರಗಳನ್ನೇ ಲೇವಡಿ ಮಾಡುವ ಸ್ಟೈಲ್ ಹೊಸದು ಎನ್ನುತ್ತಾರೆ ರಾಜ್ ಬಿ.ಶೆಟ್ಟಿ.

    ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ಹೊರಗೆ ಹೋಗುವಾಗ ಖಂಡಿತಾ ನಗು ನಗುತ್ತಾ ಹೋಗುತ್ತಾನೆ ಎನ್ನುವ ಭರವಸೆ ಶೆಟ್ಟರದ್ದು. ಚಂದ್ರಶೇಖರ್ ನಿರ್ಮಾಣದ ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗುತ್ತಿದೆ.

  • ಸಾಫ್ಟ್‍ವೇರ್ ಕ್ರಿಶ್.. ಪರ್ಪಲ್ ಪ್ರಿಯಾ ಲವ್ ಸ್ಟೋರಿ

    lovestory between software krish and purple pria

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹೀರೋ ರಾಜ್ ಬಿ.ಶೆಟ್ಟಿ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನು ಗೊತ್ತಾ.. ವೆಂಕಟ್ ಕೃಷ್ಣ ಗುಬ್ಬಿ. ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಗುಬ್ಬಿಗೆ ಪರ್ಪಲ್ ಪ್ರಿಯಾ ಅಲಿಯಾಸ್ ಕವಿತಾ ಗೌಡ ಪ್ರೇಯಸಿ.

    ರಾಜ್ ಶೆಟ್ಟರು ಒನ್ಸ್ ಎಗೇಯ್ನ್ ಪಾಪದ ಹುಡುಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸ್ಲ್ಯಾಪ್ ಸ್ಟಿಕ್ ಕಾಮಿಡಿ ಇದೆ. ಅಂದ್ರೆ ತೆರೆಯ ಮೇಲೆ ಪಾತ್ರಗಳು ಸೀರಿಯಸ್ ಆಗಿದ್ರೂ, ಪ್ರೇಕ್ಷಕ ಮಾತ್ರ ನಗ್ತಾನೇ ಇರ್ತಾನೆ. ಸನ್ನಿವೇಶಗಳೇ Áಗಿರುತ್ತವೆ.

    ಸುಜಯ್ ಶಾಸ್ತ್ರಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸತತ 3 ಚಿತ್ರಗಳಲ್ಲಿ ಸಕ್ಸಸ್ ಕಂಡಿರುವ ಹ್ಯಾಟ್ರಿಕ್ ಪ್ರೊಡ್ಯೂಸರ್ ಟಿ.ಆರ್.ಚಂದ್ರಶೇಖರ್ ಮತ್ತೊಂದು ಗೆಲುವು ಎದುರು ನೋಡುತ್ತಿದ್ದಾರೆ.