ಸಲ್ಮಾನ್, ಸುದೀಪ್, ಸೋನಾಕ್ಷಿ ಸಿನ್ಹಾ ಅಭಿನಯದ ಪ್ರಭುದೇವ ನಿರ್ದೇಶನದ ದಬಾಂಗ್ 3 ಕನ್ನಡದಲ್ಲೂ ಬರುತ್ತಿದೆ. ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಹಿಂದಿಯಲ್ಲಿ ನಿರ್ಮಾಣವಾಗಿ ಕನ್ನಡಕ್ಕೆ ಡಬ್ ಆಗಿ ಬರುತ್ತಿರುವ ದೊಡ್ಡ ಬ್ಯಾನರ್ ಸಿನಿಮಾ ಇದು.
ಈ ಚಿತ್ರದಲ್ಲಿ ಸೋನಾಕ್ಷಿ ಪಾತ್ರಕ್ಕೆ ಧ್ವನಿ ನೀಡಿರುವುದು ಜಿಂಕೆಮರಿ ಶ್ವೇತಾ. ಕನ್ನಡ ಅಷ್ಟೇ ಅಲ್ಲ, ದಕ್ಷಿಣದ ಎಲ್ಲ ಭಾಷೆಗಳಿಗೂ ಶ್ವೇತಾ ಅವರೇ ಸೋನಾಕ್ಷಿಗೆ ಡಬ್ ಮಾಡಿದ್ದಾರೆ.
ರವಿಶಂಕರ್ ಗೌಡ, ಕೆ.ಆರ್.ಪೇಟೆ ಶಿವರಾಜು, ಸುಂದರ್, ವೀಣಾ ಸುಂದರ್, ಧರ್ಮ, ಚಂದ್ರಕಲಾ, ಗೋವಿಂದೇಗೌಡ.. ಹೀಗೆ ಹಲವರು ಧ್ವನಿ ಕೊಟ್ಟಿದ್ದಾರೆ. ಸಲ್ಮಾನ್ ಖಾನ್‌ಗೆ ಧ್ವನಿ ಯಾರದು..? ಜಸ್ಟ್ ವೇಯ್ಟ್..