` gifting dog - chitraloka.com | Kannada Movie News, Reviews | Image

gifting dog

 • ದಚ್ಚುಗೆ ನಾಯಿಯ ಉಡುಗೊರೆ

  Sinnga actor Chiru Sarja Gifts Darshan image

  ಪ್ರಾಣಿ ಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪುಟ್ಟದೊಂದು ನಾಯಿಮರಿ ಉಡುಗೊರೆಯಾಗಿ ಸಿಕ್ಕಿದೆ. ದರ್ಶನ್ ಅವರಿಗೆ ಈ ಪ್ರೀತಿಯ ಕಾಣಿಕೆ ನೀಡಿರುವುದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿ. ಸಿಂಗ ಚಿತ್ರದಲ್ಲಿ ವ್ಹಾಟ್ ಎ ಬ್ಯುಟಿಫುಲ್ ಹುಡುಗಿ ಹಾಡನ್ನು ದರ್ಶನ್ ರಿಲೀಸ್ ಮಾಡಿದ್ದರು. ಈ ಹಾಡಲ್ಲಿ ಫಿಮೇಲ್ ವರ್ಷನ್ ಗಾಯಕಿ ಮೇಘನಾ ರಾಜ್.

  ಬ್ಯೂಟಿಫುಲ್ ಹುಡುಗಿ ಹಾಡು ಹಿಟ್ ಆಗಿದೆ. ಚಿರು,ಮೇಘನಾ ಚಿತ್ರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ದರ್ಶನ್‍ಗೆ ಪುಟ್ಟದೊಂದು ಉಡುಗೊರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ದರ್ಶನ್‍ರ ಪತ್ನಿ ಭಾನುಮತಿಯಾಗಿ ನಟಿಸಿರುವುದು ಕೂಡಾ ಮೇಘನಾ ಅವರೇ. 

  ಉದಯ್ ಮೆಹ್ತಾ ನಿರ್ಮಾಣದ ಸಿಂಗ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶನವಿದೆ. ಆದಿತಿ ಪ್ರಭುದೇವ ನಾಯಕಿ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

   

Matthe Udbhava Trailer Launch Gallery

Maya Bazaar Pressmeet Gallery