` rudraprayag, - chitraloka.com | Kannada Movie News, Reviews | Image

rudraprayag,

 • Ananth Nag Is Hero In 'Rudraprayaga'

  ananth nag is hero in rudraprayag

  Rishab Shetty had earlier said that he won't be acting as a hero in his next film 'Rudraprayaga', but had not announced who will be playing the hero in the film. Now Ananth Nag has been roped in as the hero of Rishab Shetty's new directorial venture 'Rudraprayaga'.

  Recently, Rishab Shetty has narrated the story of 'Rudraprayaga' to Ananth Nag. The veteran actor was very much impressed and has given a go ahead to act in the film. The film revolves around only nine characters, out of which two are lead characters. There is a female lead for Ananth Nag and the selection is in process.

  The shooting for 'Rudraprayaga' will start from the month of December. The shooting will be held in Uttarkhand, Belgaum, Khanapur and other places for 55 days. More than 90 percent of the shooting will be held near Belgaum. The film is being produced by Jayanna and Bhogendra.

   

 • Rishab Shetty Not To Act In 'Rudraprayag'

  rishab shetty not to act in rudraprayag

  Rishab Shetty who had announced a new film called 'Rudraprayag' on his birthday, has said that he will be only directing the film and will not be acting it.

  Speaking regarding this, 'I am just a director of the film and is not acting in it. There are lot of other actors in this film and this is not a hero based film, but is a content based film' says Rishab. Rishab is planning to start the film in October or November and release it by 2020 Summer.

  Rudraprayag' is being produced by Jayanna and Bhogendra under Jayanna Films. The production company had earlier distributed Rishab's previous films and this time will be producing a film under Rishab's direction.

 • Rishab Shetty's Next Directorial Is 'Rudraprayag'

  rishab sheety's next directorial is rudraprayag

  Actor turned director Rishab Shetty had announced that he will be acting in a new film called 'Antagoni Shetty' to be directed by Samarth Kadkol. Even before that, Rishab will be directing another film called 'Rudraprayag'.

  Rishab himself has announced that he will be directing a new film called 'Rudraprayag' and the poster of the film has also been released. Rishab is not only the director, but also has scripted the film. The film is being produced by Jayanna and Bhogendra under Jayanna Films.

  Though much details about the film have not been divulged, Rishab has announced that the film will be released in Summer 2020.

 • ಇದು ಹರಿ ಕಥೆ ಅಲ್ಲ, ರಿಷಬ್ ಶೆಟ್ಟಿ ಕಥೆ..!

  rishib shetty image

  ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಅವನೇ ಶ್ರೀಮನ್ನಾರಾಯಣದಲ್ಲಿ ನಿಮಿಷಗಳ ಮಟ್ಟಿಗೆ ಕಾಣಿಸಿಕೊಂಡಿದ್ದು ಬಿಟ್ಟರೆ, ಕಂಪ್ಲೀಟ್ ರುದ್ರಪ್ರಯಾಗದಲ್ಲಿ ಮುಳುಗಿ ಹೋಗಿದ್ದರು. ಈಗ ನಟಿಸೋಕೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹರಿ ಕಥೆ ಅಲ್ಲ, ಗಿರಿ ಕಥೆ ಅನ್ನೋದು ಟೈಟಲ್ಲು.

  ಇದೊಂದು ಪಕ್ಕಾ ಕಾಮಿಡಿ ಸಬ್ಜೆಕ್ಟ್. ಹೀಗಾಗಿ ನನ್ನ ಜೊತೆ ಹಲವು ಕಲಾವಿದರು ಇರುತ್ತಾರೆ. ಪ್ರೀಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿದ್ದೇವೆ. ಲಾಕ್ ಡೌನ್ ಇಲ್ಲದೇ ಹೋಗಿದ್ದರೆ, ಇಷ್ಟು ಹೊತ್ತಿಗೆ ಶೂಟಿಂಗ್ ಟೇಕಾಫ್ ಆಗಿರುತ್ತಿತ್ತು ಎನ್ನುವ ರಿಷಬ್ ಶೆಟ್ಟಿ, ತಮ್ಮದೇ ಬ್ಯಾನರಿನಲ್ಲಿ ಚಿತ್ರವನ್ನು ಹೊರತರುತ್ತಿದ್ದಾರೆ.

  ರಿಷಬ್ ಶೆಟ್ಟಿ ಬಳಗದಲ್ಲೇ ಇದ್ದ ಗಿರೀಶ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. 

 • ಮಾರ್ಚ್ 1ರಿಂದ ರುದ್ರ ಪ್ರಯಾಗ ಶೂಟಿಂಗ್

  rudra prayag shooting from march 1st

  ಬೆಲ್‍ಬಾಟಂ ಹೀರೋ ಆಗಿ ಗೆದ್ದ ರಿಷಬ್ ಶೆಟ್ಟಿ, ಮತ್ತೊಮ್ಮೆ ನಿರ್ದೇಶನದತ್ತ ಹೊರಳಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದ ರುದ್ರಪ್ರಯಾಗ ಚಿತ್ರ ಅನೌನ್ಸ್ ಮಾಡಿದ್ದ ರಿಷಬ್ ಶೆಟ್ಟಿ, ಮಾರ್ಚ್ 1ರಿಂದ ಶೂಟಿಂಗ್ ಶುರು ಮಾಡುತ್ತಿದ್ದಾರೆ.

  ಪ್ರಿ ಪ್ರೊಡಕ್ಷನ್ ಕೆಲಸಗಳನ್ನು ಹೆಚ್ಚೂ ಕಡಿಮೆ ಮುಗಿಸಿಕೊಂಡೇ ಚಿತ್ರೀಕರಣಕ್ಕೆ ಕೈ ಹಾಕುತ್ತಿದ್ದಾರೆ ರಿಷಬ್. ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಬಹಳ ಸೂಕ್ಷ್ಮವಾಗಿದ್ದು, ಸೆಟ್, ಪ್ರಾಪರ್ಟಿ ಡಿಸೈನ್ ಮತ್ತು ರಿಹರ್ಸಲ್ ಮುಗಿಸಿಕೊಂಡೇ ಚಿತ್ರೀಕರಣಕ್ಕೆ ಹೊರಟಿದೆ ರುದ್ರಪ್ರಯಾಗ ಟೀಂ.

  ಬೆಳಗಾವಿ, ಉತ್ತರಾಖಂಡಗಳಲ್ಲಿ, ಮಂದಾಕಿನಿ, ಅಲಕನಂದಾ ನದಿಗಳ ಸಂಗಮದಲ್ಲಿ ಚಿತ್ರೀಕರಣ ನಡೆಯಲಿದೆ. ಜಯಣ್ಣ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದರೆ, ಅರವಿಂದ ಕಶ್ಯಪ್ ಕ್ಯಾಮೆರಾ ವರ್ಕ್ ಇದೆ.

 • ರಿಷಬ್ ರುದ್ರಪ್ರಯಾಗಕ್ಕೆ ಅನಂತ್ ನಾಗ್ ಹೀರೋ

  ananth nag roped in as hero for rudraprayag

  ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ರುದ್ರಪ್ರಯಾಗ. ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗ್ತಿರೋ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಚುರುಕಾಗಿನಡೆಯುತ್ತಿವೆ. ರಿಷಬ್ ನಿರ್ದೇಶನ ಇರುವ ಕಾರಣ ಕಥೆ ಫೈನಲ್ ಆದ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿತೀಡಿ ರೂಪಿಸಲಾಗಿದೆ. ಅದೆಲ್ಲವನ್ನೂ ಫೈನಲ್ ಮಾಡಿಕೊಂಡೇ ನಿರ್ದೇಶನಕ್ಕಿಳಿಯುವ ರಿಷಬ್, ತಮ್ಮ ಚಿತ್ರಕ್ಕೆ ಹೀರೋ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಅನಂತ್‍ನಾಗ್.

  ಸ.ಹಿ.ಪ್ರಾ.ಪಾ. ದಲ್ಲಿ ಕೂಡಾ ಅನಂತ್ ನಟಿಸಿದ್ದರು. ಒಂದು ಲೆಕ್ಕದಲ್ಲಿ ಆ ಚಿತ್ರಕ್ಕೂ ಅನಂತ್ ಅವರೇ ಹೀರೋ. ಈ ಚಿತ್ರಕ್ಕೂ ಅನಂತ್ ಅವರೇ ಹೀರೋ.

  ಇದು ಮುಖ್ಯಪಾತ್ರವಲ್ಲ. ಅವರೇ ಹೀರೋ ಎಂದು ಅಧಿಕೃತವಾಗಿಯೇ ಘೋಷಿಸಿದ್ದಾರೆ ರಿಷಬ್ ಶೆಟ್ಟಿ. ಈಗ ಅನಂತ್ ಅವರಿಗೆ ನಾಯಕಿಯನ್ನು ಹುಡುಕುತ್ತಿದ್ದಾರೆ ರಿಷಬ್.

  ಕಥೆ ಕೇಳಿ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅನಂತ್ ನಾಗ್. ಡಿಸೆಂಬರ್‍ನಲ್ಲಿ ರುದ್ರಪ್ರಯಾಗ ಶೂಟಿಂಗ್ ಶುರುವಾಗಲಿದೆ. 55 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಬೆಳಗಾವಿ, ಖಾನಾಪುರ, ಉತ್ತರಾಖಂಡಗಳಲ್ಲಿ ಶೂಟಿಂಗ್ ನಡೆಯಲಿದೆ.

 • ರಿಷಬ್ ರುದ್ರಪ್ರಯಾಗಕ್ಕೆ ಶ್ರದ್ಧಾ ಶ್ರೀನಾಥ್

  shraddha srinath is fmale lead in rudraprayag

  ರಿಷಬ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಅನಂತ್ ನಾಗ್ ಅವರನ್ನು ನಾಯಕರನ್ನಾಗಿಸಿರುವ ರಿಷಬ್, ಚಿತ್ರಕ್ಕೆ ಹೀರೋಯಿನ್ ಆಗಿ ಶ್ರದ್ಧಾ ಶ್ರೀನಾಥ್ ಅವರನ್ನು ಸೆಲೆಕ್ಟ್ ಮಾಡಿದ್ದಾರೆ. ಶ್ರದ್ಧಾ ಶ್ರೀನಾಥ್ ಕನ್ನಡದಿಂದ ಚಿತ್ರರಂಗಕ್ಕೆ ಬಂದವರಾದರೂ ಸದ್ಯಕ್ಕೆ ತಮಿಳು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ.

  ಅವರದ್ದು ರೆಗ್ಯುಲರ್ ಪಾತ್ರ ಅಲ್ಲ. ಚಿತ್ರದಲ್ಲಿ ಒಟ್ಟು 9 ಪಾತ್ರಗಳಿವೆ. ಆ 9 ಪಾತ್ರಗಳಲ್ಲಿ ಶ್ರದ್ಧಾ ಅವರದ್ದು ಪ್ರಮುಖ ಪಾತ್ರ. ತುಂಬಾ ವೈಶಿಷ್ಟ್ಯಪೂರ್ಣ ಪಾತ್ರ ಎಂದಿದ್ದಾರೆ ರಿಷಬ್.

  ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗುತ್ತಿರುವ ರುದ್ರಪ್ರಯಾಗ ಚಿತ್ರಕ್ಕೆ ಮುಂದಿನ ತಿಂಗಳು ಶೂಟಿಂಗ್ ಶುರುವಾಗಲಿದೆ.

 • ರುದ್ರಪ್ರಯಾಗ : ರಿಷಬ್ ಶೆಟ್ಟಿ ಹೇಳೋಕೆ ಹೊರಟಿರುವ ಕಥೆ ಏನು..?

  rudraprayag poster creates curiosty

  ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂತರ ರಿಷಬ್ ಶೆಟ್ಟಿ, ಬೆಲ್‍ಬಾಟಂನಲ್ಲಿ ಹೀರೋ ಆಗಿ ಮಿಂಚಿದ್ದರು. ಹೀರೋ ಆದ ಮೇಲೆ ಡೈರೆಕ್ಷನ್ ಮರೆತುಬಿಟ್ರಾ ಎಂಬ ಡೌಟ್ ಇದ್ದವರಿಗೆ ಮತ್ತೊಮ್ಮೆ ನಿರ್ದೇಶಕರ ಕ್ಯಾಪ್ ತೊಟ್ಟು ಖುಷಿ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ಚಿತ್ರದ ಹೆಸರು ರುದ್ರಪ್ರಯಾಗ.

  ಕಥೆ ಏನಿರಬಹುದು..? ಪೋಸ್ಟರ್‍ನಲ್ಲಿ ಚಿರತೆ, ಕಾಡು, ನದಿ, ವಿಧಾನಸೌಧ, ಚೆನ್ನಮ್ಮನ ಪ್ರತಿಮೆ ಎಲ್ಲ ಇದೆ. ಇದು ಪೊಲಿಟಿಕಲ್ ಡ್ರಾಮಾನಾ..? ನೋ ಐಡಿಯಾ..

  ರುದ್ರಪ್ರಯಾಗದ ನರಭಕ್ಷಕ ಅನ್ನೋದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ. ಇದು ಆ ಕಥೆನಾ..? ಗೊತ್ತಿಲ್ಲ.

  ರುದ್ರಪ್ರಯಾಗ.. ಉತ್ತರಾಖಂಡ ರಾಜ್ಯದಲ್ಲಿರೋ ಪ್ರದೇಶ. ಅಲಕನಂದಾ, ಮಂದಾಕಿನಿ ನದಿಗಳ ಪವಿತ್ರ ಸಂಗಮ ಸ್ಥಾನ. ಇದು ಜರ್ನಿ ಸ್ಟೋರಿನಾ.. 

  ಜಯಣ್ಣ, ಭೋಗೇಂದ್ರ ಬ್ಯಾನರ್‍ನಲ್ಲಿ ಬರುತ್ತಿರುವ ಚಿತ್ರದ ಬಗ್ಗೆ ಕುತೂಹಲಗಳೇನೇ ಇದ್ದರೂ, ಉತ್ತರ ಸದ್ಯಕ್ಕೆ ಗೊತ್ತಿರುವುದು ರಿಷಬ್ ಶೆಟ್ಟಿಗೆ ಮಾತ್ರ. ರಿಷಬ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಪೋಸ್ಟರ್ ಹೊರಬಿದ್ದಿದೆ.