ಸಿನಿಮಾಗಳಲ್ಲಿ ವಿಲನ್‍ಗಳನ್ನು ಚಚ್ಚಿ ಬಿಸಾಡುವ ರಾಕಿಂಗ್ ಸ್ಟಾರ್ ಯಶ್, ಕಣ್ಣೀರಿಟ್ಟಿದ್ದಾರೆ. ಯಶ್ ಕಣ್ಣೀರು ಕಂಡು ರಾಧಿಕಾ ಪಂಡಿತ್ ಕರಗಿ ಹೋಗಿದ್ದಾರೆ. ಇಷ್ಟಕ್ಕೂ ಯಶ್ ಕಣ್ಣೀರಿಗೆ ಕಾರಣ, ಮಗಳು ಐರಾ.
ಐರಾಗೆ ಕಿವಿ ಚುಚ್ಚಿಸಲಾಗಿದೆ. ಈ ಕಿವಿ ಚುಚ್ಚಿಸುವ ವೇಳೆ ಯಶ್ ಕಣ್ಣೀರಿಟ್ಟುಬಿಟ್ಟರಂತೆ. ಇದೇ ಮೊದಲ ಬಾರಿ ಯಶ್ ಕಣ್ಣೀರು ಹಾಕುವುದನ್ನು ನೋಡಿದೆ. ಈ ಬಂಧನ ಎಷ್ಟು ಬೆಲೆ ಬಾಳುವುದು ಎಂಬುದು ಮತ್ತೊಮ್ಮೆ ಭಾಸವಾಯ್ತು ಎಂದಿರುವ ರಾಧಿಕಾ ಪಂಡಿತ್, ಹೆತ್ತವರ ಅತ್ಯಂತ ಕಷ್ಟದ ದಿನಗಳಲ್ಲಿ ಇದೂ ಒಂದು ಎಂದಿದ್ದಾರೆ.
ಅಭಿಮಾನಿಗಳೇ ಡೋಂಟ್‍ವರಿ.. ಯಶ್ ಮತ್ತು ಐರಾ ಇಬ್ಬರೂ ಕ್ಷೇಮ ಎಂದಿದ್ದಾರೆ ರಾಧಿಕಾ ಪಂಡಿತ್.