` 100, - chitraloka.com | Kannada Movie News, Reviews | Image

100,

  • 100 + ಗರುಡ ಗಮನ ವೃಷಭ ವಾಹನ + ಮುಗಿಲ್ ಪೇಟೆ

    100 + ಗರುಡ ಗಮನ ವೃಷಭ ವಾಹನ + ಮುಗಿಲ್ ಪೇಟೆ

    ಒಂದು ಫ್ಯಾಮಿಲಿ ಥ್ರಿಲ್ಲರ್. ಇನ್ನೊಂದು ಅಂಡರ್‍ವಲ್ರ್ಡ್ ಥ್ರಿಲ್ಲರ್. ಮತ್ತೊಂದು ಲವ್ಲೀ ಥ್ರಿಲ್ಲರ್. ಈ ವಾರದ ಸ್ಪೆಷಲ್ ಸಿನಿಮಾಗಳಿವು.

    100 ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನವಿದೆ. ಅವರೇ ಹೀರೋ. ರಚಿತಾ ರಾಮ್ ಮತ್ತು ಪೂರ್ಣ ನಾಯಕಿಯಾಗಿರೋ ಚಿತ್ರದಲ್ಲಿ ಸೈಬರ್ ಕ್ರೈಂ ಸ್ಟೋರಿ ಇದೆ. ಇದು ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿಯೇ ಜಗತ್ತು ನೋಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ನೋಡಬೇಕಾದ ಸಿನಿಮಾ.

    ಗರುಡ ಗಮನ ವೃಷಭ ವಾಹನ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ.ಶೆಟ್ಟಿ ಒಟ್ಟಿಗೇ ನಟಿಸಿರೋ ಸಿನಿಮಾ. ಮೊಟ್ಟೆ ನಂತರ ರಾಜ್ ಬಿ.ಶೆಟ್ಟಿ ನಿರ್ದೇಶನವನ್ನೂ ಮಾಡಿರುವ ಸಿನಿಮಾ. ಕರಾವಳಿ ಭೂಗತ ಜಗತ್ತನ್ನು ಬೇರೆಯದೇ ಶೇಡ್‍ನಲ್ಲಿ ತೋರಿಸಿರೋ ಚಿತ್ರದಲ್ಲಿ ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್, ಹಾಡು ಗಮನ ಸೆಳೆದಿವೆ.

    ಇದೇ ವಾರ ರಿಲೀಸ್ ಆಗುತ್ತಿರೋ ಯೂಥ್ ಲವ್ ಸ್ಟೋರಿ ಮುಗಿಲ್ ಪೇಟೆ. ಮನುರಂಜನ್ ರವಿಚಂದ್ರನ್, ಕಯಾದು ನಟಿಸಿರೋ ಚಿತ್ರದಲ್ಲಿ ಲವ್ ಫೀಲಿಂಗ್ ಸಖತ್ತಾಗಿಯೇ ಇದೆ. ಭರತ್ ಎಸ್.ನಾವುಂದ ನಿರ್ದೇಶನದ ಚಿತ್ರ ಪ್ರೇಮಿಗಳಿಗೆ ಪ್ರೀತಿಯ ಪರಾಕಾಷ್ಠೆ ತೋರಿಸೋ ನಿರೀಕ್ಷೆಯಂತೂ ಇದೆ. 

  • 100 Movie Review, Chitraloka Rating 4/5

    100 Movie Review, Chitraloka Rating 4/5

    Film: 100

    Director: Ramesh Aravind 

    Cast: Ramesh Aravind, Rachita Ram, Purna, Vishwa Karna, Prakash Belawadi, Shobraj 

    Duration: 116 minutes 

    Stars: 4 

    A family's tech challenge 

    Entrapment as a movie theme needs a watertight script and a convincing narrative. This movie makes it happen. 

    An edge-of-the-seat thriller from one of the most family-oriented film stars bodes something special. And 100 is special. The contemporary technological concern about social media becomes an interesting story  narrated in a gripping manner. 

    A cop on a secret enterprise gets a nasty surprise when he finds his family trapped by a dangerous conman. That is just the cop's story. The audience get to watch surprising twists and shocking turns every second scene. 

    The first few scenes are used for a soft launch of the story in the old style including a song. But once the actual plot gets going, there is no looking back. The cat and mouse between the cop and cheat keeps you hooked. What is not a fight between the good and bad must be a fight between legal and illegal. 

    Ramesh Aravind's execution of the story is clinical. It is measured and shuns melodrama. Not going overboard is what makes 100 a perfect family film. There are some impressive performances too. Prakash Belawadi and Shobraj, even in their small roles make a lasting impression. 

    Ramesh Aravind is a perfectionist as ever while Rachita Ram sparkles in the character. Vishwa Karna as the antagonist is a charming menace. Satya Hegde's clearly defined shots and Ravi Basrur's music compliment the film well. 

    This perfectly balanced film has a message for the masses which is convincingly put across.

     

    -Movie Review By S Shyam Prasad

  • 100 ನೋಡಿ : ಗೃಹ ಸಚಿವರಿಗೆ ರಮೇಶ್ ಆಹ್ವಾನ

    100 ನೋಡಿ : ಗೃಹ ಸಚಿವರಿಗೆ ರಮೇಶ್ ಆಹ್ವಾನ

    ಒಂದು ಸಿನಿಮಾವನ್ನು ನೋಡೋಕೆ ರಾಜಕಾರಣಿಗಳಿಗೆ ಕರೆಯೋಕೆ ಬೇರೆಯದೇ ಕಾರಣಗಳಿರುತ್ತವೆ. ಸಿನಿಮಾದಲ್ಲಿರೋ ಸಾಮಾಜಿಕ ಸಂದೇಶವೋ.. ಕಥೆಯೋ.. ಯಾವುದಾದರೊಂದು ರೀತಿಯಲ್ಲಿ ಅದು ರಾಜಕಾರಣಿಗಳಿಗೆ ಕನೆಕ್ಟ್ ಆಗಬೇಕು. ಈಗ  100 ಸಿನಿಮಾವನ್ನು ನೋಡಿ ಬನ್ನಿ ಎಂದು ನಟ, ನಿರ್ದೇಶಕ ರಮೇಶ್ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.

    100ನಲ್ಲಿರೋದು ಫ್ಯಾಮಿಲಿ ಥ್ರಿಲ್ಲರ್ ಸ್ಟೋರಿ. ಸೈಬರ್ ಕ್ರೈಂ ಮಿಸ್ಟರಿ. ಕುತೂಹಲಕ್ಕೋ.. ಥ್ರಿಲ್‍ಗೋಸ್ಕರವೋ.. ತರಲೆಗಾಗಿಯೋ.. ಮೊಬೈಲ್‍ನಲ್ಲಿ ಕಾಣಿಸಿದ ಅಪರಿಚಿತರಿಗೆ ಎಂಟ್ರಿ ಕೊಟ್ಟರೆ... ಆತ ಕ್ರಿಮಿನಲ್ ಆಗಿದ್ದರೆ.. ಏನೇನೆಲ್ಲ ಅನಾಹುತ ಎದುರಿಸಬೇಕಾಗಬಹುದು.. ಅದರಿಂದ ಹೊರಬರೋಕೆ ಏನೇನೆಲ್ಲ ಮಾಡಬೇಕಾಗಬಹುದು.. ಅನ್ನೋ ಕಥೆಯನ್ನ ಥ್ರಿಲ್ಲಿಂಗಾಗಿ ಹೇಳಿದ್ದಾರಂತೆ ರಮೇಶ್ ಅರವಿಂದ್.

    ಹೀಗಾಗಿಯೇ ಈ ಸಿನಿಮಾ ನೋಡಿ ಬನ್ನಿ ಎಂದು ಗೃಹ ಸಚಿವರಿಗೆ ಕರೆದಿರೋದು. ಬಿಡುವು ಮಾಡಿಕೊಂಡು ಖಂಡಿತಾ ಸಿನಿಮಾ ನೋಡೋದಾಗಿ ಹೇಳಿದ್ದಾರಂತೆ ಹೋಮ್ ಮಿನಿಸ್ಟರ್. 

     

  • 100ನಲ್ಲಿ ರಮೇಶ್ ಅರವಿಂದ್ ಸಖತ್ ಡಿಶುಂ ಡಿಶುಂ

    100ನಲ್ಲಿ ರಮೇಶ್ ಅರವಿಂದ್ ಸಖತ್ ಡಿಶುಂ ಡಿಶುಂ

    ರಮೇಶ್ ಚಿತ್ರಗಳೆಂದರೆ ಫ್ಯಾಮಿಲಿ ಓರಿಯಂಟೆಡ್, ಕಾಮಿಡಿ ಅಥವಾ ಲವ್ ಸ್ಟೋರಿ ಎಂದುಕೊಳ್ಳುವವರಿಗೆ ರಮೇಶ್ 100 ಚಿತ್ರದ ಮೂಲಕ ಥ್ರಿಲ್ ಕೊಡಲು ಬರುತ್ತಿದ್ದಾರೆ. ಅದೂ.. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್‍ಗಳ ಮೂಲಕ. ಯೆಸ್, 100ನಲ್ಲಿ 4 ಸಖತ್ ಫೈಟಿಂಗ್ ಇವೆ. ಎಲ್ಲವೂ ಟೆಕ್ನಿಕಲಿ ವ್ಹಾವ್ ಎನ್ನುವಂತಿರೋದು ವಿಶೇಷ.

    ನನ್ನ ಸಿನಿಮಾದಲ್ಲಿ ಫೈಟ್ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ, ನನಗೆ ಸಾಹಸ ದೃಶ್ಯಗಳನ್ನು ತುರುಕಲು ಇಷ್ಟವಿಲ್ಲ. ಅವು ಕಥೆಗೆ ಪೂರಕವಾಗಿಯೇ ಇರಬೇಕು. ಹೀರೋ ವಿಲನ್‍ಗೆ ಹೊಡೆಯುತ್ತಾನೆ ಎಂದರೆ ಅದಕ್ಕೊಂದು ಬಲವಾದ ಕಾರಣವಿರಬೇಕು. 100ನಲ್ಲಿ ಆ ರೀತಿಯ ಸೀಕ್ವೆನ್ಸ್ ಬೇಕಿತ್ತು. ಅದಕ್ಕೆಂದೇ ಫೈಟ್ಸ್ ಇವೆ ಎಂದಿದ್ದಾರೆ.

    ನಾಲ್ಕು ಫೈಟುಗಳಲ್ಲಿ ಎರಡನ್ನು ರವಿವರ್ಮ ಡೈರೆಕ್ಟ್ ಮಾಡಿದ್ದರೆ, ಇನ್ನೆರಡು ಫೈಟ್‍ಗಳನ್ನು ಜಾಲಿ ಬಾಸ್ಟಿನ್ ಮಾಡಿದ್ದಾರೆ. ಒಂದು ಚೇಸಿಂಗ್‍ನಲ್ಲಿ 100-150 ಕಾರುಗಳನ್ನು ಬಳಸಲಾಗಿದೆ. ಒಂದಿಡೀ ರಸ್ತೆಯನ್ನೇ ಬಾಡಿಗೆಗೆ ತೆಗೆದುಕೊಂಡು ಸಾಹಸ ದೃಶ್ಯ ಚಿತ್ರೀಕರಿಸಲಾಗಿದೆ ಎಂದು ಸಾಹಸ ದೃಶ್ಯಗಳ ಬಗ್ಗೆ ಹೇಳುತ್ತಲೇ ಥ್ರಿಲ್ಲಾಗುತ್ತಾರೆ ರಮೇಶ್. ಏಕೆಂದರೆ ಈ ಚಿತ್ರಕ್ಕೆ ತೆರೆಯ ಮೇಲಿನ ಮತ್ತು ತೆರೆಯ ಹಿಂದಿನ ಹೀರೋ ಅವರೇ. ಡೈರೆಕ್ಟರ್ ಕಮ್ ಹೀರೋ ರಮೇಶ್.

    ರಮೇಶ್ ಅವರಿಗೆ ರಚಿತಾ ರಾಮ್ ತಂಗಿಯಾಗಿದ್ದರೆ, ಪೂರ್ಣ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಮೇಶ್ ಇನ್ಸ್‍ಪೆಕ್ಟರ್. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಇದೇ ನವೆಂಬರ್ 12ರಂದು ರಿಲೀಸ್ ಆಗುತ್ತಿದೆ.

  • 100ನೇ ಚಿತ್ರದಲ್ಲಿ ಮಗಳು.. 100ನಲ್ಲಿ ತಂಗಿ.. ಮುಂದಾ..?

    100ನೇ ಚಿತ್ರದಲ್ಲಿ ಮಗಳು.. 100ನಲ್ಲಿ ತಂಗಿ.. ಮುಂದಾ..?

    ರಮೇಶ್ ನಟಿಸಿರುವ 100 ರಿಲೀಸ್ ಆಗುತ್ತಿದೆ. ಈ ವೇಳೆಯಲ್ಲೇ ರಚಿತಾ ರಾಮ್ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಸಿನಿಮಾದ ಬಗ್ಗೆ ಥ್ರಿಲ್ಲಿಂಗ್ ಆಗಿ ಕೆಲವೊಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ನಾನು ನೋಡಿರೋ ಡೈರೆಕ್ಟರುಗಳಲ್ಲೇ ಶಾಂತಮೂರ್ತಿ ನಿರ್ದೇಶಕರೆಂದರೆ ಅದು ರಮೇಶ್ ಸರ್. ಒಂದು ಬಾರಿಯೂ.. ಅದೇನೇ ಎಡವಟ್ಟುಗಳಾದರೂ.. ಸಿಟ್ಟು ಮಾಡಿಕೊಂಡವರಲ್ಲ. ನಾನು ಅವರ 100ನೇ ಸಿನಿಮಾ ಪುಷ್ಪಕವಿಮಾನದಲ್ಲಿ ಮಗಳ ಪಾತ್ರದಲ್ಲಿ ನಟಿಸಿದ್ದೆ. ಈಗ 100ನಲ್ಲಿ ಅವರಿಗೆ ತಂಗಿ ಎಂದಿದ್ದಾರೆ ರಚಿತಾ ರಾಮ್.

    ಇದು ಸೈಬರ್ ಕ್ರೈಂ ಬ್ಯಾಕ್‍ಗ್ರೌಂಡ್ ಸ್ಟೋರಿ. ಸಿನಿಮಾದಲ್ಲಿ ನಿರ್ದೇಶಕ ಕಂ ಹೀರೋ ರಮೇಶ್ ಅವರಿಂದ ಹಿಡಿದು ಎಲ್ಲರೂ ಸಿನಿಮಾ ಪ್ಯಾಷನೇಟ್ ಇರೋ ವ್ಯಕ್ತಿಗಳೇ ಇದ್ದರು. ಜೊತೆಗೆ ಪ್ರೊಡ್ಯೂಸರ್ ರಮೇಶ್ ರೆಡ್ಡಿ. ಅವರಿಗೆ ಸಿನಿಮಾ ಅನ್ನೋದು ಬಿಸಿನೆಸ್ ಅನ್ನೋದಕ್ಕಿಂತ ಹೆಚ್ಚಾಗಿ ಪ್ಯಾಷನ್. ಅದು ಚಿತ್ರದ ಔಟ್‍ಪುಟ್‍ನಲ್ಲಿಯೂ ಕಾಣಿಸುತ್ತೆ. ಒಂದೇ ಒಂದು ಸಣ್ಣ ಅಡ್ಡಿ ಆತಂಕಗಳಿಲ್ಲದೆ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಎಲ್ಲ ಕ್ರೆಡಿಟ್ಟನ್ನೂ ನಿರ್ಮಾಪಕರಿಗೇ ನೀಡಿದ್ದಾರೆ ರಚಿತಾ ರಾಮ್.

  • Akash Srivatsa Turns Editor With '100'

    aksha srivatsav turns editor with 100

    Director Akash Srivatsa who is currently busy with the post production of his latest film 'Shivaji Suratkal' has turned editor with Ramesh Aravind's new film '100'.

    Akash Srivatsa is Ramesh Aravind's protege and had worked for his films a few years back. Later, Akash went on to become director with a short film called 'Sulle Satya', after which he directed Dhananjay starrer 'Badmash'. Akash later went on to direct his mentor Ramesh in 'Shivaji Suratkal'. Seeing Akash's sense of editing, Ramesh has given him an opportunity to edit his latest film.

    '100' will be Akash's debut film as an editor.

  • Dimple Queen Plays Sister To Ramesh Arvind in 100

    dimple queen plays sister to ramesh aravind in 100

    Dimple Queen as she is fondly referred to as by her fans, will be seen playing the role of a sister to the multi-talented actor-director Ramesh Arvind in his next venture titled '100'.

    Actress Rachitha Ram was last seen portraying the role of a daughter alongside Ramesh Arvind in the film 'Pushpaka Vimana.

    In the latest, 100 directed by Ramesh Arvind, it is now revealed that Rachitha Ram will be playing a sibling to Ramesh Arvind, to which the director explains that sequences between the two siblings are webbed around with a lot of suspense.

    The film team has recently wrapped up the shooting of 100 and are gearing up for post production process before the century venture hits the screen.

  • ರಚಿತಾ ರಾಮ್`ರ 100 ಅತ್ತಿಗೆ ಯಾರು ಗೊತ್ತಾ..? ಘೋಸ್ಟ್ ಕ್ವೀನ್

    ರಚಿತಾ ರಾಮ್`ರ 100 ಅತ್ತಿಗೆ ಯಾರು ಗೊತ್ತಾ..? ಘೋಸ್ಟ್ ಕ್ವೀನ್

    100. ಇದೇ ವಾರ ರಿಲೀಸ್ ಆಗುತ್ತಿರೋ ರಮೇಶ್ ನಟಿಸಿ ನಿರ್ದೇಶಿಸಿರುವ ಸಿನಿಮಾ. ಈ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ ಇದೆ. ಫ್ಯಾಮಿಲಿ ಥ್ರಿಲ್ಲರ್ ಸ್ಟೋರಿ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ತಂಗಿಯಾಗಿರೋದು ರಚಿತಾ ರಾಮ್. ಪುಷ್ಪಕವಿಮಾನದಲ್ಲಿ ಮಗಳಾಗಿದ್ದ ರಚಿತಾ, ಈಗ ತಂಗಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಅವರಿಗೆ ಅತ್ತಿಗೆಯಾಗಿ ಬಂದಿರೋದು ಪೂರ್ಣ.

    ಈ ಪೂರ್ಣ ಮೂಲತಃ ಕೇರಳದವರು. ವೊರಿಜಿನಲ್ ಹೆಸರು ಶಮ್ನಾ ಕಾಸಿಮ್. ಹೆಚ್ಚು ಪ್ಯಾಪುಲರ್ ಆಗಿದ್ದು ತೆಲುಗಿನಲ್ಲಿ. ಅಲ್ಲಿ ಪೂರ್ಣ ಅವರನ್ನು ಘೋಸ್ಟ್ ಕ್ವೀನ್ ಎಂದೇ ಬ್ರಾಂಡ್ ಮಾಡಿದ್ದರು. ಕೆಲವು ದೆವ್ವದ ಚಿತ್ರಗಳಲ್ಲಿ ನಟಿಸಿ, ಅವೆಲ್ಲವೂ ಹಿಟ್ ಆದ ಕಾರಣ ಪೂರ್ಣ ಘೋಸ್ಟ್ ಕ್ವೀನ್ ಆಗಿದ್ದರು. ಕನ್ನಡದಲ್ಲಿ ಜೋಶ್ ಮತ್ತು ರಾಧನ್ ಗಂಡ ಚಿತ್ರದಲ್ಲಿ ನಟಿಸಿ ಹೋಗಿದ್ದವರು. ಈಗ 100 ಮೂಲಕ ಮತ್ತೆ ಬಂದಿದ್ದಾರೆ.

    ಚಿತ್ರದಲ್ಲಿ ನನ್ನದು ಗೃಹಿಣಿಯ ಪಾತ್ರ. ರಮೇಶ್ ಅವರಿಗೆ ಪತ್ನಿ. ಹಳ್ಳಿ ಬ್ಯಾಕ್‍ಗ್ರೌಂಡ್‍ನಿಂದ ಬಂದಿರೋ ಮುಗ್ಧೆ. ಗಂಡನಿಗಿಂತ ಹೆಚ್ಚು ನಾದಿನಿ ರಚಿತಾ ರಾಮ್ ಜೊತೆ ಒಳ್ಳೆ ಬಾಂಧವ್ಯ ಇರೋ ಅತ್ತಿಗೆಯ ಪಾತ್ರ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿದೆ. ಥ್ರಿಲ್ ಆಗಿದ್ದೇನೆ ಎನ್ನುವ ಪೂರ್ಣ, ಅವಕಾಶ ಕೊಟ್ಟ ರಮೇಶ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ 100 ಇದೇ ವಾರ ರಿಲೀಸ್ ಆಗುತ್ತಿದೆ.

  • ರಮೇಶ್ ರಚಿತಾ 100 ನ.19ಕ್ಕೆ

    ರಮೇಶ್ ರಚಿತಾ 100 ನ.19ಕ್ಕೆ

    ರಮೇಶ್ ಅರವಿಂದ್, ರಚಿತಾ ರಾಮ್ ಮತ್ತೊಮ್ಮೆ ಜೊತೆಯಾಗಿರೋ ಸಿನಿಮಾ 100. ಇದು ಸೈಬರ್ ಕ್ರೈಂ ಕಥೆ ಇರೋ ಸಿನಿಮಾ. ಸೋಷಿಯಲ್ ಮೀಡಿಯಾ, ಸೈಬರ್ ಅಪರಾಧ, ಕೌಟುಂಬಿಕ ಸಂಬಂಧಗಳ ಸುತ್ತ ಇರೋ ಸಿನಿಮಾದ ನಿರ್ದೇಶಕ ಸ್ವತಃ ರಮೇಶ್ ಅರವಿಂದ್.

    ರಮೇಶ್, ರಚಿತಾ ರಾಮ್ ಜೊತೆ ನಟಿಸಿರುವ ಇನ್ನೊಬ್ಬ ನಟಿ ಪೂರ್ಣಿಮಾ. ಗಾಳಿಪಟ 2 ಚಿತ್ರ ನಿರ್ಮಾಪಕರೂ ಆಗಿರೋ ರಮೇಶ್ ರೆಡ್ಡಿ, ಈ ಚಿತ್ರಕ್ಕೂ ನಿರ್ಮಾಪಕರು. ನಮ್ಮ ಸೂರಜ್ ಪ್ರೊಡಕ್ಷನ್ಸ್‍ನ ದೊಡ್ಡ ಚಿತ್ರವಿದು. ಪ್ರತಿಯೊಬ್ಬರೂ ನೋಡಬೇಕಾದ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ 100. ರಮೇಶ್ ಅರವಿಂದ್ ಪೊಲೀಸ್ ಪಾತ್ರ, ರಚಿತಾ, ಪೂರ್ಣಿಮಾ ಕಾಂಬಿನೇಷನ್ ಚಿತ್ರದ ಹೈಲೈಟ್ ಎನ್ನುತ್ತಾರೆ ರಮೇಶ್ ರೆಡ್ಡಿ. ಚಿತ್ರ ನವೆಂಬರ್ 19ಕ್ಕೆ ರಿಲೀಸ್.

  • ಶಿವಣ್ಣನ ಫ್ಯಾನ್ ಆಗಿ ಬಂದಿದ್ದೇನೆ : ಯಶ್

    ಶಿವಣ್ಣನ ಫ್ಯಾನ್ ಆಗಿ ಬಂದಿದ್ದೇನೆ : ಯಶ್

    ಭಜರಂಗಿ 2 ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಯಶ್ ಹೇಳಿದ ಮಾತುಗಳಿವು. ನನಗೆ ಶಿವಣ್ಣ ಇಷ್ಟ. ಭಜರಂಗಿ ನೋಡೋಕೆ ತ್ರಿವೇಣಿ ಥಿಯೇಟರಿಗೆ ಹೋಗಿದ್ದೆ. ಫ್ಯಾನ್ ಆಗಿ ಹೋಗಿದ್ದೆ. ಇವತ್ತು ಭಜರಂಗಿ 2 ರಿಲೀಸ್‍ಗೆ ಬಂದಿದ್ದೇನೆ. ಈಗಲೂ ಫ್ಯಾನ್ ಆಗಿಯೇ ಬಂದಿದ್ದೇನೆ ಎಂದ ಯಶ್, ಶಿವಣ್ಣ ನಾನು ಹುಟ್ಟೋಕೆ ಮೊದಲಿನಿಂದಲೂ ಸಿನಿಮಾ ಮಾಡ್ತಾ ಬಂದಿದ್ದಾರೆ.

    ಇವರ ನಡವಳಿಕೆಗಳನ್ನ ನೋಡಿ ನಾವೆಲ್ಲ ಕಲೀಬೇಕು. ಅಮ್ಮನಿಗೆ ಡಾ.ರಾಜ್‍ಕುಮಾರ್ ಅಂದ್ರೆ ತುಂಬಾ ಇಷ್ಟ. ನನಗೆ ಅಪ್ಪು ತರಾ ಡ್ಯಾನ್ಸ್, ಫೈಟ್ ಮಾಡೋಕೆ ಇಷ್ಟ. ಅದಕ್ಕಾಗಿಯೇ ಇಂಡಸ್ಟ್ರಿಗೆ ಬಂದೆ ಎಂದ ಯಶ್ ಭಜರಂಗಿ 2 ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.