ಟಿವಿ ಚಾನೆಲ್‍ಗಳಿಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಖಡಕ್ ಸಂದೇಶ ಕೊಟ್ಟಿದೆ. ಟಿವಿಗಳಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ಮಕ್ಕಳನ್ನು ಅಶ್ಲೀಲವಾಗಿ ತೋರಿಸಬಾರದು, ವಯಸ್ಕರ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡಿಸಬಾರದು ಎಂದು ಆದೇಶ ನೀಡಿದೆ. ಈ ಆದೇಶವನ್ನು ಉಲ್ಲಂಘಿಸಿದರೆ, ಟಿವಿ ಚಾನೆಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಅದು ಹೇಳಿದೆ.
ವಿಶೇಷವಾಗಿ 12 ವರ್ಷದ ಒಳಗಿನ ಮಕ್ಕಳಿಂದ ಅಶ್ಲೀಲ ನೃತ್ಯ ಮಾಡಿಸಬಾರದು. ಮಕ್ಕಳನ್ನು ಅಸಭ್ಯವಾಗಿ, ಅಶ್ಲೀಲವಾಗಿ ತೋರಿಸಬಾರದು. ಮಕ್ಕಳಿಂದ ಕೆಟ್ಟ ಕೆಟ್ಟ ರೀತಿಯ ಸಂಜ್ಞೆಗಳನ್ನು ಮಾಡಿಸಬಾರದು. ಡಬಲ್ ಮೀನಿಂಗ್ ಸೇರಿದಂತೆ ಅಶ್ಲೀಲ ಸಂಭಾಷಣೆಗಳನ್ನು ಆಡಿಸಬಾರದು ಎಂದೆಲ್ಲ ಸರ್ಕಾರ ಕಟ್ಟಳೆ ವಿಧಿಸಿದೆ.
ಕೇಂದ್ರದ ಸಭ್ಯತೆಯ ಸೂತ್ರಗಳನ್ನು ಹಲವು ರಿಯಾಲಿಟಿ ಶೋ ನಿರ್ಮಾಪಕರು, ನಿರೂಪಕರು, ಜಡ್ಜ್‍ಗಳು ಸ್ವಾಗತಿಸಿದ್ದಾರೆ.