` nirup bhandari, - chitraloka.com | Kannada Movie News, Reviews | Image

nirup bhandari,

 • ಮೈ ರಾಜರಥ ಸೆಲ್ಫಿ ಚಾಲೆಂಜ್..!

  selfie challenge by rajaratha team

  ರಾಜರಥದ ರಾಜವಾಹನ ಬಸ್ಸು. ಅಂದಹಾಗೆ ನಿಮ್ಮ ರಾಜರಥ ಯಾವುದು..? ಸೈಕಲ್, ಬೈಕ್, ಕಾರ್.. ಹೀಗೆ ಯಾವುದೇ ಇರಲಿ.. ಅದು ನಿಮ್ಮ ರಾಜರಥ ತಾನೇ.. 

  ಈಗ ನೀವು ನಿಮ್ಮ ರಾಜರಥದ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಿ. ರಾಜರಥದ ಅಧಿಕೃತ ಟ್ವಿಟರ್ ಅಥವಾ ಫೇಸ್‍ಬುಕ್ ಖಾತೆಗೆ ಟ್ಯಾಗ್ ಮಾಡಿ. ಗೆದ್ದ 10 ಮಂದಿಗೆ ಬಹುಮಾನವೂ ಇದೆ. ಮೈ ರಾಜರಥ ಅನ್ನೋ ಹ್ಯಾಷ್‍ಟ್ಯಾಗ್ ಇದ್ದರೆ ಅಯ್ತು.

  ಈ ಸೆಲ್ಫಿ ಚಾಲೆಂಜ್ ಶುರು ಮಾಡಿರುವುದು ಸ್ವತಃ ಪುನೀತ್ ರಾಜ್‍ಕುಮಾರ್. ರಾಜರಥದಲ್ಲಿನ ರಾಜರಥವೇ ಪುನೀತ್. ಅವರು ತಮ್ಮ ಸೈಕಲ್ ಜೊತೆ ಸೆಲ್ಫಿ ತೆಗೆದುಕೊಂಡು ಅಪ್‍ಲೋಡ್ ಮಾಡಿದ್ದಾರೆ. ಇನ್ನು ಅಭಿಮಾನಿಗಳ ಸರದಿ. 

  ಈ ಮೈ ರಾಜರಥ ಸ್ಪರ್ಧೆಯಲ್ಲಿ ಚಿತ್ರರಂಗದ ಬೇರೆ ಬೇರೆ ಸ್ಟಾರ್‍ಗಳೂ ಪಾಲ್ಗೊಳ್ಳುತ್ತಿದ್ದಾರೆ. 

 • ಯಾರೀಕೆ ಆದಿಲಕ್ಷ್ಮಿಯ ಸೃಷ್ಟಿಕರ್ತೆ..?

  who is the director of adilakshmi purana

  ಆದಿಲಕ್ಷ್ಮಿ ಪುರಾಣ.. ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ನಟಿಸಿರುವ ಚಿತ್ರದ ನಿರ್ದೇಶಕಿ ಪ್ರಿಯಾ. ತಮಿಳುನಾಡಿನವರಾದ ಪ್ರಿಯಾ ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದವರು. ಮಣಿರತ್ನಂ ಅವರ ಪತ್ನಿ ಸುಹಾಸಿನಿ ಜೊತೆಯಲ್ಲೂ ಕೆಲಸ ಮಾಡಿದ್ದಾರೆ.

  ತಮಿಳಿನಲ್ಲಿ ಕಂಡನಾಳ್ ಮುದುಲ್, ಕಣ್ಣಾಮೂಚಿ ಏನಡ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಣಿರತ್ನಂ ದೃಶ್ಯಗಳನ್ನು ಸೃಷ್ಟಿಸುವ ಕಲೆ ಮತ್ತು ಸುಹಾಸಿನಿಯವರ ಬರವಣಿಗೆಯನ್ನು ಇಷ್ಟಪಡುವ ಪ್ರಿಯಾಗೆ ಕನ್ನಡದಲ್ಲಿದು ಮೊದಲ ಚಿತ್ರ.

  ಅಂದಹಾಗೆ ಚಿತ್ರಕ್ಕೆ ನಾಯಕ, ನಾಯಕಿಯ ಆಯ್ಕೆಯನ್ನು ರಾಕ್‍ಲೈನ್ ಅವರೇ ಮಾಡಿದ್ದರಂತೆ. ಹಾಗೆಂದು ಬೇಸರವೇನಿಲ್ಲ. ಅವರಿಬ್ಬರೂ ತಮ್ಮ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಒದಗಿಸಿದ್ದಾರೆ. ಈಗ ಅವರ ಜಾಗದಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ ಎನ್ನುತಾರೆ ಪ್ರಿಯಾ.

  ಪ್ರಿಯಾ ನಿರ್ದೇಶನದ ಮೊದಲ ಚಿತ್ರಕ್ಕೆ ಕ್ಯಾಮೆರಾಮನ್ ಆಗಿರುವುದು ಅವರ ಗೆಳತಿ ಪ್ರೀತಾ. ಕನ್ನಡದಲ್ಲಿ ಸಿನಿಮಾ ಯಶಸ್ವಿಯಾದರೆ ತಮಿಳಿನಲ್ಲೂ ರಿಲೀಸ್ ಮಾಡುವ ಆಲೋಚನೆ ಪ್ರಿಯಾ ಅವರಿಗೆ ಇದೆ.

 • ರಾಜರಥ ಅಸಲೀನಾ..ನಕಲೀನಾ..?

  which is original pspk? rajaratha

  ರಾಜರಥ... ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ. ಹಳೆಯ ಟೀಂ ಜೊತೆಯಾಗಿರುವ ಕಾರಣದಿಂದ, ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. 

  ಆದರೆ, ಈಗ ಗೊಂದಲ ಸೃಷ್ಟಿಸಿರೋದು ಈ ಪೋಸ್ಟರ್. ರಾಜರಥ ಸಿನಿಮಾದಲ್ಲಿ ತಮಿಳಿನ ಆರ್ಯ ನಟಿಸುತ್ತಿರುವದು ಗೊತ್ತೇ ಇದೆ. ಆರ್ಯ, ಕೆಂಪು ಬಣ್ಣದ ಜುಬ್ಬಾ ಧರಿಸಿಕೊಂಡು ಕೊಡೆ ಹಿಡಿದು ನಿಂತಿರುವ ಪೋಸ್ಟರ್ ಬಿಡುಗಡೆಯಾಗಿದೆ.

  ವಿಶೇಷ ಅಂದ್ರೆ, ಪವನ್ ಕಲ್ಯಾಣ್ ನಟಿಸುತ್ತಿರುವ ತ್ರಿವಿಕ್ರಮ್ ನಿರ್ದೇಶನದ ಪವನ್ ಕಲ್ಯಾಣ್ ಅಭಿನಯದ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಅದರಲ್ಲಿಯೂ ಅಷ್ಟೆ. ಪವನ್ ಕಲ್ಯಾಣ್ ಕೊಡೆ ಹಿಡಿದು ನಿಂತಿರುವ ಚಿತ್ರ. ಬಟ್ಟೆಯ ಕಲರ್ ಕೂಡಾ ಸೇಮ್ ಟು ಸೇಮ್.

  ರಾಜರಥದ ಪೋಸ್ಟರ್ ರಿಲೀಸ್ ಆಗಿದ್ದು ಅಕ್ಟೋಬರ್ 17ಕ್ಕೆ. ಪವನ್ ಕಲ್ಯಾಣ್ ಪೋಸ್ಟರ್ ಬಿಡುಗಡೆಯಾಗಿರೋದು ಅಕ್ಟೊಬರ್ 15ಕ್ಕೆ. ಇದು ಕಾಕತಾಳೀಯ ಇರಬಹುದೇನೋ.. ಆದರೆ, ಅಸಲಿ ಯಾವುದು.. ನಕಲಿ ಯಾವುದು ಅನ್ನೋ ಚರ್ಚೆಯನ್ನಂತೂ ಹುಟ್ಟುಹಾಕಿದೆ.

 • ರಾಜರಥ ಎಂದರೆ ಅಪ್ಪುನಾ..?

  rajaratha teaser creates hawa

  ರಾಜರಥ. ಅದು ರಂಗಿತರಂಗ ಟೀಂನ ಸಿನಿಮಾ. ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ ಮತ್ತೆ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಆರ್ಯ, ರವಿಶಂಕರ್ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಅಪ್ಪು ಕೂಡಾ ಇದ್ದಾರೆ.

  ಚಿತ್ರದ ಟ್ರೇಲರ್‍ನಲ್ಲಿ ಕೇಳಿಸಿರುವುದು ಪುನೀತ್ ರಾಜ್‍ಕುಮಾರ್ ಅವರ ವಾಯ್ಸ್. ಇಡೀ ಚಿತ್ರತಂಡವನ್ನು ಪರಿಚಯಿಸುವುದು ಪವರ್‍ಸ್ಟಾರ್. ಚಿತ್ರದ ಟ್ರೇಲರ್ ಸೃಷ್ಟಿಸಿರುವ ಕ್ರೇಜ್‍ನ ಜೊತೆಯಲ್ಲೇ ಟ್ರೇಲರ್‍ನ ಕೊನೆಯಲ್ಲಿ ಬರುವ ಒಂದು ಸಾಲು, ಕುತೂಹಲವನ್ನೂ ಹುಟ್ಟಿಸುತ್ತೆ.

  ರಾಜರಥ ಇನ್ & ಆ್ಯಂಡ್ ಪುನೀತ್ ರಾಜ್‍ಕುಮಾರ್ ಎನ್ನುತ್ತೆ ಆ ಸಾಲು. ಆ ಸಾಲಿನ ಅರ್ಥ ಏನು..? ಪುನೀತ್ ರಾಜ್‍ಕುಮಾರ್, ಚಿತ್ರದದಲ್ಲಿ ಕೇವಲ ನಿರೂಪಕರಾ..? ಅವರೂ ಒಂದು ಪಾತ್ರವಾಗಿದ್ದಾರಾ..? ಚಿತ್ರದ ಟೈಟಲ್ ರಾಜರಥ ಎಂದರೆ ಪುನೀತ್ ರಾಜ್‍ಕುಮಾರ್ ಅವರೇನಾ..? ಕುತೂಹಲ ಹುಟ್ಟಿಸಿರುವ ರಾಜರಥ, ಉತ್ತರಗಳನ್ನು ಸದ್ಯಕ್ಕೆ ಕೊಡುತ್ತಿಲ್ಲ. ಟ್ರೇಲರ್ ದೂಳೆಬ್ಬಿಸುತ್ತಿದೆ.

 • ರಾಜರಥ ಟೀಂನಿಂದ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ

  powerstar mix to app by rajaratha tema

  ರಾಜರಥ ಚಿತ್ರದ ಟೈಟಲ್ ರೋಲ್ ಯಾರು..? ಹೀರೋ ನಿರೂಪ್ ಭಂಡಾರಿ ಅಲ್ಲ. ಅದು ಒಂದು ಬಸ್ಸು. ಆ ಬಸ್ಸಿನ ಹೆಸರೇ ರಾಜರಥ. ಆ ರಾಜರಥದ ಧ್ವನಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಂದರೆ ರಿಯಲ್ ರಾಜರಥ ಪುನೀತ್ ಅವರೇ. ತಮ್ಮ ಚಿತ್ರಕ್ಕೆ ಧ್ವನಿ ನೀಡಿ ಸಹಕರಿಸಿದ ಪುನೀತ್‍ಗೆ ರಾಜರಥ ಚಿತ್ರತಂಡ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ ನೀಡಿದೆ.

  ಪುನೀತ್ ರಾಜ್‍ಕುಮಾರ್, ಬಾಲ್ಯದಲ್ಲೇ ನಟನಾಗಿ ಮಿಂಚಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದವರು. ಹೀರೋ ಆದ ಮೇಲೆ ಸೂಪರ್ ಸ್ಟಾರ್ ಆದವರು. ಆದರೆ, ತಾನೊಬ್ಬ ಸ್ಟಾರ್ ಎಂಬ ಯಾವ ಹಮ್ಮು ಬಿಮ್ಮೂ ಇಲ್ಲದೆ ಬೆರೆಯುವ ಪುನೀತ್‍ಗೆ ಚಿತ್ರತಂಡ ಕೊಟ್ಟ ಉಡುಗೊರೆಯೇ ಪವರ್‍ಸ್ಟಾರ್ ಮಿಕ್ಸ್. ಅದು ಹುಟ್ಟುಹಬ್ಬದ ಕೊಡುಗೆ.

  ಪುನೀತ್ ಅಭಿನಯದ ಎಲ್ಲ ಚಿತ್ರಗಳ ಹೆಸರು ಮತ್ತು ಆ ಚಿತ್ರದಲ್ಲಿನ ಪುನೀತ್ ಲುಕ್ ಇರುವ ಫೋಟೋ ಬಳಸಿ ಸೃಷ್ಟಿಸಲಾಗಿರುವ ಪುಟ್ಟ ವಿಡಿಯೋದಲ್ಲಿ ರಾಜರಥ ಚಿತ್ರದ ಬಸ್ ಡೈಲಾಗುಗಳಿವೆ. 

  ರಾಜರ ವಂಶ ನಮ್ದು.. ನನ್ ಹೆಸರೇ ರಾಜರಥ ಅನ್ನೋ ಡೈಲಾಗ್‍ನೊಂದಿಗೆ ಎಂಡ್ ಆಗುವ ಈ ಪುಟ್ಟ ವಿಡಿಯೋ ಆನ್‍ಲೈನ್‍ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಮೂರೇ ದಿನದಲ್ಲಿ ಲಕ್ಷಾಂತರ ಹಿಟ್ಸ್ ಗಿಟ್ಟಿಸಿರುವ ಪವರ್‍ಸ್ಟಾರ್ ಮಿಕ್ಸ್, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. 

  ರಾಜರಥದಲ್ಲಿ ನಟನಾಗಿ ಅಲ್ಲದೆ, ಧ್ವನಿಯಾಗಿ ನಟಿಸಿರುವ ಪುನೀತ್, ರಾಜರಥದ ಹೀರೋಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ. ರಾಜರಥ ಚಿತ್ರವನ್ನು ನೋಡೋಕೆ, ಅವರ ಅಭಿಮಾನಿಗಳೂ ಈಗ ತುದಿಗಾಲಲ್ಲಿ ಕಾಯುವಂತಾಗಿದೆ.

 • ರಾಜರಥದ ಪೋಸ್ಟರ್ ಕಾಪಿ ಮಾಡಿಲ್ಲ

  rajaratha poster and pspk

  ರಾಜರಥ ಚಿತ್ರದ ಆರ್ಯ ಅವರ ಪೋಸ್ಟರ್‍ಗೂ, ಪವನ್ ಕಲ್ಯಾಣ್ ಅಭಿನಯದ ಹೊಸ ಚಿತ್ರದ ಪೋಸ್ಟರ್‍ಗೂ ತಾಳಮೇಳ ಸರಿಯಾಗಿತ್ತು. ಎರಡೂ ಕೂಡಾ ಒಂದೇ ರೀತಿಯಲ್ಲಿದ್ದ ಕಾರಣ, ಅಸಲಿ ಯಾವುದು, ನಕಲಿ ಯಾವುದು ಎಂಬ ಪ್ರಶ್ನೆಗಳು ಎದ್ದಿದ್ದವು. ಅದರಲ್ಲೂ ಅನೂಪ್ ಭಂಡಾರಿ, ರಂಗಿತರಂಗ ಚಿತ್ರದ ನಿರ್ದೇಶಕ. ಹೀಗಾಗಿಯೇ ಇದು ಸಾಕಷ್ಟು ಸುದ್ದಿ ಮಾಡಿತ್ತು. ಈ ಕುರಿತ ಅನುಮಾನಕ್ಕೆ ಈಗ ಅನೂಪ್ ಭಂಡಾರಿ ಉತ್ತರಿಸಿದ್ದಾರೆ.

  ನಾನು ಯಾವುದನ್ನೂ ಕಾಪಿ ಮಾಡುವವನಲ್ಲ. ಕಾಪಿ ಮಾಡಿಲ್ಲ. ಅಕಸ್ಮಾತ್ ಎಲ್ಲಿಂದಲಾದರೂ ಸ್ಫೂರ್ತಿ ಪಡೆದಿದ್ದರೆ, ಅದನ್ನು ನಾನೇ ಹೇಳುತ್ತೇನೆ. ರಾಜರಥ ಚಿತ್ರದ ಪೋಸ್ಟರ್ ಕುರಿತು ಚರ್ಚೆಯಾಗುತ್ತಿದೆ. ಆದರೆ, ಈ ಪೋಸ್ಟರ್‍ನ ಫೋಟೋಶೂಟ್ ನಡೆದಿದ್ದು ಸೆಪ್ಟೆಂಬರ್‍ನಲ್ಲಿ. ಅದಕ್ಕೂ ಮೊದಲೇ ಪ್ಲಾನ್ ಮಾಡಿದ್ದೆವು. ನನಗೆ ಕಾಪಿ ಮಾಡುವ ಅವಶ್ಯಕತೆ ಅಥವಾ ಉದ್ದೇಶ ಎರಡೂ ಇಲ್ಲ ಎಂದಿದ್ದಾರೆ ಅನೂಪ್.

  Related Articles :-

  Rajaratha Poster Is Not Copied Says Anup Bhandari

  ರಾಜರಥ ಅಸಲೀನಾ..ನಕಲೀನಾ..?

   

 • ರಾಜರಥದ ಮೇಲೆ ಭಾರೀ ನಿರೀಕ್ಷೆ ಏಕೆ ಗೊತ್ತಾ..?

  lot of expectations over rajaratha

  ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿಗೆ ಇದು ಕೇವಲ 2ನೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿಗೂ ಇದು 2ನೇ ಸಿನಿಮಾ. ಹೀಗಿದ್ದರೂ ಚಿತ್ರದ ಬಗ್ಗೆ ನಿರೀಕ್ಷೆಗಳು ಮೌಂಟ್ ಎವರೆಸ್ಟ್ ರೇಂಜ್‍ನಲ್ಲಿರೋಕೆ ಕಾರಣಗಳಿವೆ. 

  ರಾಜರಥದಲ್ಲಿರೋದು ರಂಗಿತರಂಗ ಟೀಂ. ಬಾಹುಬಲಿಗೆ ಸಡ್ಡು ಹೊಡೆದು ಗೆದ್ದಿದ್ದ ಚಿತ್ರತಂಡವಾಗಿರೋ ಕಾರಣ, ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿಯೇ ಇದೆ.

  ಚಿತ್ರಕ್ಕೆ ಧ್ವನಿ ನೀಡಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ರಾಜರಥ ಎನ್ನುವ ಬಸ್‍ನ ಪಾತ್ರಕ್ಕೆ ಧ್ವನಿಯಾಗಿದ್ದಾರೆ ಪುನೀತ್. ಬಸ್‍ನ ಹೆಸರನ್ನೇ ಚಿತ್ರಕ್ಕಿಟ್ಟಿರುವ ಕಾರಣ, ಕುತೂಹಲ ಜಾಸ್ತಿಯೇ ಇದೆ.

  ಇದೇ ಮೊದಲ ಬಾರಿಗೆ ಚಿತ್ರದಲ್ಲಿ ತಮಿಳು ನಟ ಆರ್ಯ ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ಹೀಗಾಗಿ ಇದೂ ಕೂಡಾ ಚಿತ್ರವನ್ನು ನೋಡಲು ಪ್ರೇರೇಪಿಸುತ್ತಿದೆ.

  ರಾಜರಥ ಚಿತ್ರದಲ್ಲಿ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿ ರಾಜರಥಂ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಷೆಗೆ ಪ್ರತ್ಯೇಕವಾಗಿ ಶೂಟ್ ಮಾಡಲಾಗಿದೆ.

  ತೆಲುಗಿನಲ್ಲಿ ಬಸ್‍ಗೆ ಧ್ವನಿಯಾಗಿರೋದು ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ.

  ರಂಗಿತರಂಗ ಚಿತ್ರದ ಸಕ್ಸಸ್‍ನ್ನು ಮರೆತು, ಈ ಚಿತ್ರ ನಿರ್ಮಿಸಿದ್ದೇವೆ ಎನ್ನುತ್ತಿದೆ ಚಿತ್ರತಂಡ. ಹೊಸತನದ ಕಥೆ, ಹೊಸ ಲೊಕೇಷನ್‍ಗಳು, ಹೊಸ ಶೈಲಿಯ ಸಂಗೀತ... ಗಮನ ಸೆಳೆಯುತ್ತಿದೆ. ಒಂದು ಚಿತ್ರ ನೋಡಲು ಇನ್ನೇನು ಬೇಕು..?

 • ರಾಜರಥದ ಸ್ಪೆಷಾಲಿಟಿ.. - ವಿತರಕರು ಕಂಡಂತೆ..

  rajaratha distributor's special

  ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್‍ಗೆ ರೆಡಿಯಾದಾಗ ಚಿತ್ರದ ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ, ಪಾತ್ರಧಾರಿಗಳು, ಸಂಗೀತ ನಿರ್ದೇಶಕರು.. ಹೀಗೆ ಚಿತ್ರತಂಡದವರೆಲ್ಲ ಚಿತ್ರದ ವಿಶೇಷಗಳ ಬಗ್ಗೆ ಮಾತಾನಾಡ್ತಾರೆ. ಆದರೆ, ಈ ರಾಜರಥದ ಬಗ್ಗೆ ಚಿತ್ರತಂಡದವರಷ್ಟೇ ಪ್ರೀತಿಯಿಂದ ಮಾತನಾಡಿರುವುದು ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿರುವ ನಿರ್ಮಾಪಕ ಕಾರ್ತಿಕ್ ಗೌಡ.

  ಅನೂಪ್ ಅವರ ಜೊತೆ ನನ್ನ ಗೆಳೆತನ ಶುರುವಾಗಿದ್ದು ರಂಗಿತರಂಗದ ನಂತರ. ಅವರದ್ದು ಹೊಸತನದ ಮೇಕಿಂಗ್, ಹೊಸತನದ ಕಥೆಗಳು ಇಷ್ಟವಾದವು. ಇದು ರಾಜರಥ ಚಿತ್ರದ ವಿತರಣೆಯನ್ನು ತೆಗೆದುಕೊಳ್ಳಲು ಒಂದು ಕಾರಣ. ಇನ್ನೊಂದು ಚಿತ್ರದ ನಿರ್ಮಾಪಕರಾದ ಸತೀಶ್, ಅಜಯ್ ರೆಡ್ಡಿ ಕೂಡಾ ಸ್ನೇಹಿತರು. ಅಷ್ಟೇ ಅಲ್ಲ, ಕಾರ್ತಿಕ್ ಗೌಡ ಅವರ ರಾಜಕುಮಾರ ಹಾಗೂ ಮಾಸ್ಟರ್‍ಪೀಸ್ ಚಿತ್ರಗಳನ್ನು ವಿದೇಶದಲ್ಲಿ ರಿಲೀಸ್ ಮಾಡುವ ಹೊಣೆ ಹೊತ್ತಿದ್ದವರು ರಾಜರಥದ ನಿರ್ದೇಶಕ ಅನೂಪ್ ಭಂಡಾರಿ. ಹೀಗೆ ಚಿತ್ರದ ವಿತರಣೆಯ ಜೊತೆಗೆ ಸ್ನೇಹ ಹೇಗೆ ಕಾರಣವಾಯ್ತು ಎಂದು ಹೇಳಿಕೊಂಡಿದ್ದಾರೆ ಕಾರ್ತಿಕ್ ಗೌಡ.

  ರಾಜರಥ ಚಿತ್ರದಲ್ಲಿ ಪುನೀತ್ ಅವರ ಧ್ವನಿ ಬಳಸಿದ್ದು, ಒಂದು ಬಸ್ ಪ್ರೇಕ್ಷಕರ ಜೊತೆ ಮಾತನಾಡುವ ಕಲ್ಪನೆ.. ಕಾರ್ತಿಕ್ ಗೌಡ ಅವರಿಗೆ ಹಾಲಿವುಡ್ ಚಿತ್ರಗಳ ಸ್ಟೈಲ್ ನೆನಪಿಸಿದೆ. ಚಿತ್ರದಲ್ಲಿ ಬಳಸಿರುವ ಸೈಡ್ ಕಾರ್ ಇರುವ ಬೈಕ್‍ನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕಿಡಲಾಗುತ್ತಿದೆ. ಚಿತ್ರದ ಪ್ರೀಮಿಯರ್ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಮತ್ತು ಮೈಸೂರು ಹೊರತುಪಡಿಸಿ, ಇನ್ನೊಂದು ಪ್ರೀಮಿಯರ್ ಶೋ ಮಾಡುವ ಯೋಜನೆ ಸದ್ಯಕ್ಕಿಲ್ಲ. ಇನ್ನು ಆನ್‍ಲೈನ್ ಬುಕ್ಕಿಂಗ್ ಅಂತೂ 

  ಸೂಪರ್ ಸ್ಟಾರ್‍ಗಳ ಚಿತ್ರಕ್ಕೆ ಸಿಗುವಂತೆಯೇ ಆಗಿದೆ ಎಂದು ಖುಷಿಯಾಗಿದ್ದಾರೆ ಕಾರ್ತಿಕ್ ಗೌಡ.

 • ರಾಜರಥದ ಹೀರೋ ನಿಮ್ಮಲ್ಲೂ ಇರಬಹುದು..!

  interesting facts about rajaratha;s hero character

  ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ. ಅವರಿಗೆ ಇದು ಎರಡನೇ ಸಿನಿಮಾ. ಚಿತ್ರದ ಕಥೆ ಏನು ಎಂದರೆ, ಗುಟ್ಟು ಬಿಟ್ಟುಕೊಡದ ನಿರೂಪ್, ಹೀರೋ ವಿಶೇಷತೆಯೇನು ಎಂದಾಗ ಒಂದಿಷ್ಟು ಸ್ವಾರಸ್ಯಗಳನ್ನು ಬಿಟ್ಟುಕೊಟ್ಟಿದ್ದಾರೆ.

  ಚಿತ್ರದ ಹೀರೋ ಹೆಸರು ಅಭಿ. ಮೆಕ್ಯಾನಿಕಲ್ ಎಂಜಿನಿಯರ್ ಸ್ಟೂಡೆಂಟ್. ಕಾಲೇಜಿನಲ್ಲಿದ್ದಾಗ ಆವಂತಿಕಾ ಶೆಟ್ಟಿ ಜೊತೆ ಪ್ರೀತಿಗೆ ಬೀಳುವ ಪಾತ್ರ ಅದು. ಇನ್ನು ಆ ಪಾತ್ರ ಸ್ವಲ್ಪ ವಿಭಿನ್ನವಾಗಿದೆ. ಅಭಿಗೆ ಕವಿತೆ ಬರೆಯುವ ಹುಡುಗ. ಅಷ್ಟೇ ಅಲ್ಲ, ಗೆಳೆಯರ ಜೊತೆ ಮಾತನಾಡುವಾಗ ಹಳೆಯ ಸಿನಿಮಾಗಳ ಡೈಲಾಗ್‍ಗಳನ್ನು ಬಳಸಿಕೊಂಡೇ ಮಾತನಾಡುವ ಪಾತ್ರ. ಇದು ಸ್ವತಃ ನಿರೂಪ್ ಭಂಡಾರಿ ರಿಯಲ್ ಲೈಫ್‍ಗೆ ಹೋಲಿಕೆಯಾಗುತ್ತಿದೆ.

  ಸಿನಿಮಾ ನೋಡಿ. ಇಡೀ ಸಿನಿಮಾದ ಪ್ರತಿ ದೃಶ್ಯವೂ ಪೇಂಯ್ಟಿಂಗ್ ರೀತಿ ಬಂದಿದೆ. ಚಿತ್ರದ ಹಾಡು, ದೃಶ್ಯ ಶ್ರೀಮಂತಿಕೆಯಿಂದ ಕೂಡಿವೆ. ಡೋಂಟ್ ಮಿಸ್ ಎಂಬ ಪ್ರೀತಿಯ ಕರೆಯೋಲೆ ಕೊಟ್ಟಿದೆ ರಾಜರಥ ತಂಡ.

   

 • ರಾಧಿಕಾ ಪಂಡಿತ್ ಸ್ವಾಗತಕ್ಕೆ ಸಿದ್ಧರಾಗಿ..

  adilakshmi purana coming soon

  ರಾಧಿಕಾ ಪಂಡಿತ್ ತೆರೆಯ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ 3 ವರ್ಷ. ಮದುವೆ.. ಬಾಣಂತನ, ಕಂದನ ಆರೈಕೆಗಳಲ್ಲೇ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ಮತ್ತೆ ಬರುತ್ತಿದ್ದಾರೆ. ಅಫ್‍ಕೋರ್ಸ್, ಇದು ಯಶ್ ಮದುವೆಯಾದ ಮೇಲೆ ಅವರು ನಟಿಸಿದ್ದ ಸಿನಿಮಾ. ಆದಿಲಕ್ಷ್ಮೀ ಪುರಾಣ.

  ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.

  ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ಚಿತ್ರದ ಬಿಡುಗಡೆಗೆ ವ್ಯವಸ್ಥೆಗಳಾಗುತ್ತಿದ್ದು, ಜೂನ್ 21ಕ್ಕೆ ಆದಿಲಕ್ಷ್ಮೀ ಪುರಾಣದ ಆಡಿಯೋ ರಿಲೀಸ್ ಆಗಲಿದೆ. ಜುಲೈನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.

 • ರಾಧಿಕಾ-ನಿರೂಪ್ ಆದಿ ಲಕ್ಷ್ಮೀ ಪುರಾಣ

  radhika nirup's new movie title is aadi lakshmi purana

  ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಹೊಸ ಸಿನಿಮಾ ಟೈಟಲ್ ಕೊನೆಗೂ ಫಿಕ್ಸ್ ಆಗಿದೆ. ಶೂಟಿಂಗ್ ಮುಗಿಸಿ, ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಸಿನಿಮಾಗೆ ಟೈಟಲ್ ಇಟ್ಟಿರಲಿಲ್ಲ. ಈಗ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಟೈಟಲ್ ಫೈನಲ್ ಮಾಡಿದ್ದಾರೆ ನಿದೇಶಕಿ ಪ್ರಿಯಾ.

  ಯಶ್ ಜೊತೆ ಮದುವೆಯಾದ ನಂತರ ರಾಧಿಕಾ ಪಂಡಿತ್ ನಟಿಸಿರುವ ಸಿನಿಮಾ ಇದು. ರಂಗಿತರಂಗ, ರಾಜರಥ ನಂತರ, ಅಣ್ಣನನ್ನು ಬಿಟ್ಟು ಬೇರೆ ನಿರ್ದೇಶಕರ ಜೊತೆ ನಿರೂಪ್ ಭಂಡಾರಿ ನಟಿಸಿರುವ ಮೊದಲ ಸಿನಿಮಾ ಇದು. ಮಣಿರತ್ನಂ, ಸುಹಾಸಿನಿ ಜೊತೆ ಕೆಲಸ ಮಾಡಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  ಆದಿ ಅನ್ನೊದು ನಾಯಕನ ಹೆಸರು. ಲಕ್ಷ್ಮೀ ಅನ್ನೋದು ನಾಯಕಿ ಹೆಸರು. ಹೀಗಾಗಿ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಹೆಸರಿಟ್ಟಿದ್ದೇವೆ. ಶೀರ್ಷಿಕೆಗೆ ತಕ್ಕಂತೆ ಸಿನಿಮಾದಲ್ಲಿ ಮುದ್ದಾದ ವಿಭಿನ್ನವಾದ ಪ್ರೇಮ ಕಥೆ ಇದೆ ಎಂದು ಭರವಸೆ ಕೊಟ್ಟಿದ್ದಾರೆ ಪ್ರಿಯಾ.

 • ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

  ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

  ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ.

  ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ..

  ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ..

  ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ..

  ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್.

  ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ.

  ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ..

  ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ..

  ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ..

 • ವಿಕ್ರಾಂತ್ ರೋಣನ ಸಕ್ಸಸ್ ಸಂಭ್ರಮಿಸಿದ ರಾಜಮೌಳಿ

  ವಿಕ್ರಾಂತ್ ರೋಣನ ಸಕ್ಸಸ್ ಸಂಭ್ರಮಿಸಿದ ರಾಜಮೌಳಿ

  ಜುಲೈ 28ಕ್ಕೆ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಅಮಿತಾಭ್ ಬಚ್ಚನ್, ಮೋಹನ್`ಲಾಲ್ ಅಂತಹ ದಿಗ್ಗಜರು ಶುಭ ಹಾರೈಸಿದ್ದ ಸಿನಿಮಾ ವಿಕ್ರಾಂತ್ ರೋಣ. ಈಗ ಪ್ರೇಕ್ಷಕರು ದಿಬ್ಬಣದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾ ನೋಡುತ್ತೇನೆ ಎಂದು ಶುಭ ಹಾರೈಸಿದ್ದ ಭಾರತೀಯ ಚಿತ್ರರಂಗದ ದಿಗ್ಗಜ ರಾಜಮೌಳಿ ಸಿನಿಮಾ ನೋಡಿ ಮೆಚ್ಚಿದ್ದಾರೆ. ಜಕ್ಕಣ್ಣ ಏನು ಹೇಳಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಸುದೀಪ್ ಥ್ರಿಲ್ ಆಗಿದ್ದಾರೆ.

  ವಿಕ್ರಾಂತ್ ರೋಣದಂತಾ ಸಿನಿಮಾ ಮಾಡೋಕೆ ಧೈರ್ಯ ಬೇಕು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದ್ಸಲ ಸೀಕ್ರೆಟ್ ರಿವೀಲ್ ಆದರೆ ಪ್ರೇಕ್ಷಕರು ಕುತೂಹಲ, ಉತ್ಸಾಹ ಎರಡನ್ನೂ ಕಳೆದುಕೊಳ್ತಾರೆ.ಆದರೆ ಇಲ್ಲಿ ಮಾತ್ರ ಪ್ರೇಕ್ಷಕರು ರಿಪೀಟ್ ಆಗುತ್ತಿದ್ದಾರೆ. ಇದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದಿದ್ದಾರೆ ರಾಜಮೌಳಿ.

  ಕಿಚ್ಚ ಖುಷ್ ಹುವಾ.. ಅನೂಪ್ ಭಂಡಾರಿ ಡಬಲ್ ಖುಷ್ ಹುವಾ.. ರಾಜಮೌಳಿ ಶಹಬ್ಬಾಸ್`ಗಿರಿ ನಂತರ ತೆಲುಗಿನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ 40 ಪಟ್ಟು ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕ ಜಾಕ್ ಮಂಜು ಕೂಡಾ ಖುಷ್ ಹುವಾ.

  ಚಿತ್ರದ ಭಾಸ್ಕರ್ ಪಾತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ರಾಜಮೌಳಿ ಇಡೀ ವಿಕ್ರಾಂತ್ ರೋಣ ಚಿತ್ರಕ್ಕೆ ಖುಷಿ ಕೊಟ್ಟಿದ್ದಾರೆ.

 • ಶಿವಣ್ಣ ಕಂಡಂಗ್ ಕಾಣ್ತೀಯಾ ಅಂದಾಗ ಅಳು ನಿಲ್ಲಿಸಿದ್ದ ಹೀರೋ

  bhandari brothers of rajaratha movie

  ನೀನು ಬಿಡೋ... ಸಿನಿಮಾ ಹೀರೋ ಇದ್ದಂಗ್ ಇದೀಯಾ ಅಂದ್ರೆ, ಎಂತಹ ಹುಡುಗನೂ ಖುಷಿಯಾಗ್ತಾನೆ. ಆದರೆ ಇದು ಹೀರೋ ಕಥೆ ಕಣ್ರೀ. ಈ ಹೀರೋ ಬೇರ್ಯಾರೂ ಅಲ್ಲ. ನಿರೂಪ್ ಭಂಡಾರಿ. ರಂಗಿತರಂಗ ಹಾಗೂ ರಾಜರಥ ಚಿತ್ರಗಳ ಹೀರೋ ನಿರೂಪ್ ಭಂಡಾರಿ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಸೋದರರು. ಅಣ್ಣ-ತಮ್ಮಂದಿರು. ಇಬ್ಬರೂ ಚಿಕ್ಕವರಿದ್ದಾಗ ನಿರೂಪ್‍ಗೆ ಗಾಯವಾಗಿತ್ತಂತೆ.

  ನಿರೂಪ್ ಏನೋ ಮಾಡಲು ಹೋಗಿ, ಇನ್ನೇನೋ ಆಗಿತ್ತು. ಹಣೆಯಲ್ಲಿ ರಕ್ತ ಸುರಿಯುತ್ತಿತ್ತು. ಇನ್ನು ಮನೆಯವರಿಗೆ ಗೊತ್ತಾದರೆ ಬೈತಾರೆ ಅನ್ನಿಸಿದಾಗ, ಅನೂಪ್, ತಮ್ಮ ತಮ್ಮನಿಗೆ `ನೀನು ರಥಸಪ್ತಮಿ ಫಿಲ್ಮ್‍ನಲ್ಲಿ ಶಿಲೆಗಳು ಸಂಗೀತವಾ ಹಾಡಿವೆ ಹಾಡಿನಲ್ಲಿರೋ ಶಿವಣ್ಣನ ಥರಾ ಕಾಣ್ತಿದ್ದೀಯಾ' ಎಂದಿದ್ದರಂತೆ ನಿರೂಪ್.

  ವ್ಹಾವ್.. ನಾನು ಶಿವಣ್ಣ ಕಂಡಂಗ್ ಕಾಣ್ತಿದ್ದೀನಾ ಅನ್ನಿಸಿದ್ದೇ ತಡ, ನಿರೂಪ್ ಭಂಡಾರಿ ಹಣೆಯಲ್ಲಿ ಆಗಿದ್ದ ಗಾಯ ಮತ್ತು ಸುರಿಯುತ್ತಿದ್ದ ರಕ್ತವನ್ನು ಮರೆತು ಅಳು ನಿಲ್ಲಿಸಿದ್ದರಂತೆ.

  ಈ ಅಣ್ಣತಮ್ಮಂದಿರು ಎರಡನೇ ಬಾರಿ ಜೊತೆಯಾಗಿರುವ ರಾಜರಥ ಈ ವಾರ ತೆರೆಗೆ ಬರುತ್ತಿದೆ. ರಂಗಿತರಂಗದಲ್ಲಿ ಮೋಡಿ ಮಾಡಿದ್ದ ಸೋದರರು, ರಾಜರಥದಲ್ಲಿ ಅಬ್ಬರಿಸಲಿ ಎನ್ನುವುದು ಎಲ್ಲರ ಹಾರೈಕೆ. 

 • ಸುಹಾಸಿನಿ ಮೆಚ್ಚಿದ ಕಥೆ, ರಾಕ್‍ಲೈನ್‍ಗೆ ತಲುಪಿದ ಹಾದಿಯೇ ರೋಚಕ

  adi lakshmi purana has interesting story

  ಆದಿ ಲಕ್ಷ್ಮೀ ಪುರಾಣ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ವಾರ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕಿ ಪ್ರಿಯಾ ಹಾಗೂ ಕ್ಯಾಮೆರಾಮನ್ ಪ್ರೀತಾ ಜಯರಾಮನ್ ಇಬ್ಬರೂ ಮಹಿಳೆಯರೇ. ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿರುವ ಮೊದಲ ಚಿತ್ರವೂ ಇದೇ.. ಹೀಗೆ ವಿಶೇಷಗಳ ಮೇಲೆ ವಿಶೇಷವಿರುವ ಚಿತ್ರದ ಮತ್ತೂ ಒಂದು ವಿಶೇಷವೆಂದರೆ ಚಿತ್ರದ ಕಥೆ.

  ಮಣಿರತ್ನಂ ಬಳಿ ಸಹಾಯಕಿಯಾಗಿದ್ದ ಪ್ರಿಯಾ, ತಮ್ಮ ಕಥೆಯನ್ನು ಸುಹಾಸಿನಿ ಅವರ ಬಳಿಯೂ ಹೇಳಿದ್ದರು. ಕಥೆ ಸುಹಾಸಿನಿಗೆ ಇಷ್ಟವಾಗಿತ್ತು. ಆ ಕಥೆಯನ್ನು ಅವರು ಯಶ್‍ಗೆ ಹೇಳಿದರು. ಹೀಗೆ ಸುಹಾಸಿನಿ ಇಷ್ಟ ಪಟ್ಟು ಶುರುವಾದ ಕಥೆ ಈಗ ಸಿನಿಮಾ ಆಗಿದೆ.

  ನಿರೂಪ್ ಭಂಡಾರಿ, ರಾಧಿಕಾ ಪಂಡಿತ್ ಪಾತ್ರಗಳು, ಆ ಪಾತ್ರಗಳು ಪರಸ್ಪರ ಹೇಳಿಕೊಳ್ಳುವ ಸುಳ್ಳುಗಳು, ಅವು ಸೃಷ್ಟಿಸುವ ಅವಾಂತರಗಳು.. ಅಬ್ಬಾ.. ತೆರೆಯ ಮೇಲೆ ಅದರಿಂದ ಸೃಷ್ಟಿಯಾಗುವ ಗೊಂದಲಗಳು ಮಜಾ ಕೊಡುತ್ತವೆ ಎನ್ನುತ್ತಾರೆ ರಾಕ್‍ಲೈನ್ ವೆಂಕಟೇಶ್.

 • ಸ್ತ್ರೀ ಸಾಮ್ರಾಜ್ಯದಲ್ಲಿ ನಿರೂಪ್ ಭಂಡಾರಿ

  nirup's next movie is with rockline

  ರಂಗಿತರಂಗ.. ನಂತರ ರಾಜರಥ.. ಮುಂದೇನು..? ಇದು ಹೀರೋ ನಿರೂಪ್ ಭಂಡಾರಿಗೆ ಅಭಿಮಾನಿಗಳೇ ಕೇಳ್ತಿರೋ ಪ್ರಶ್ನೆ. ಸದ್ಯಕ್ಕೆ ನಿರೂಪ್ ಭಂಡಾರಿ ರಾಕ್‍ಲೈನ್ ಪ್ರೊಡಕ್ಷನ್ಸ್‍ನ ಹೊಸ ಸಿನಿಮಾದಲ್ಲಿ ಬ್ಯುಸಿ. ಆ ಚಿತ್ರದಲ್ಲಿ ನಿರೂಪ್ ಸಂಪೂರ್ಣ ಮಹಿಳೆಯರ ಸೈನ್ಯದಲ್ಲಿಯೇ ನಟಿಸುತ್ತಿರುವುದು ವಿಶೇಷ.

  ಆ ಚಿತ್ರದಲ್ಲಿ ನಿರೂಪ್‍ಗೆ ಜೋಡಿಯಾಗಿರೋದು ರಾಧಿಕಾ ಪಂಡಿತ್. ಇನ್ನು ನಿರ್ದೇಶಕಿ ಪ್ರಿಯಾ. ಅವರು ಮಣಿರತ್ನಂ ಜೊತೆ ಅಸಿಸ್ಟೆಂಟ್ ಆಗಿದ್ದವರು. ಇದು ಅವರಿಗೆ ಮೊದಲ ಸಿನಿಮಾ. ಚಿತ್ರದ ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಂ. 

  ಹೀಗೆ ಮಹಿಳಾ ಸೈನ್ಯದ ಜೊತೆಯಲ್ಲಿಯೇ ಕೆಲಸ ಮಾಡಿದ ನಿರೂಪ್‍ಗೆ ಕೆಲಸದ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲವಂತೆ. ತಂಡದಲ್ಲಿ ಕೆಲಸ ಮಾಡಿದವರೆಲ್ಲರೂ ಅನುಭವಿಗಳೇ. ಅವರಿಗೆ ಹೋಲಿಸಿದರೆ ನಾನೇ ಹೊಸಬ. ಅವರೆಲ್ಲರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ನಿರೂಪ್ ಭಂಡಾರಿ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.