` nirup bhandari, - chitraloka.com | Kannada Movie News, Reviews | Image

nirup bhandari,

  • Renowned Technicians Work For Rajaratha

    renowned technicians for rajaratha

    'Rangitaranga' fame Nirup Bhandari's new film 'Rajaratha' is all set to be released on the 25th of this month. The team which is in the last leg of post-production is gearing up for release on 25th.

    One of the highlights of the film is, many well known technicians across India has worked for the film. Particularly, well known art director Rajath Poddar who has worked for films like 'Jagga Jasoos', 'Barfie' and othes has done art direction for this film. Apart from that choreographers Johnny Master and Bosco-Caesar has choreographed for this film. Apart from that, Shivakumar who has done the color grading for films like 'Bahubali - The Beginning', 'Bahubali - The Conclusion' has worked for this film.

    'Rajaratha' stars Nirup Bhandari and Avanthika Shetty in lead roles. One of the highlights of the film is, well known Kollywood actor Arya who is known for his performance in 'Naan Kaduval' has made his debut in Kannada through 'Rajaratha'. Shruthi Hariharan also plays a prominent role in the film. Ajaneesh Lokanath has also composed five songs for the film.

  • RJ Rapid Rashmi Apologises

    rj rapid rashmi apologises in kfcc

    Radio Jockey Rapid Rashmi on Wednesday apologized in front of Karnataka Film Chamber of Commerce president Sa Ra Govindu for provoking Anup Bhandari and Nirup Bhandari hereby hurting the sentiments of Kannadigas.

    Anup Bhandari's latest film 'Rajaratha' starring his brother Nirup Bhandari was released two weeks back and before the release, the Bhandari brothers had participated in a interview with RJ Rapid Rashmi. During the interview, when asked about what will the brothers do if the audience does not watch the film, the brothers had said derogatory remarks. The interview had become viral and the brothers had apologized in social media. Sa Ra Govindu had urged the producers not to attend Rashmi's show.

    On Wednesday afternoon, the RJ came over to KFCC and apologized. Rapid Rashmi said she had no intention of hurting anybody's sentiments and if anybody was hurt she would apologies.

    Related Articles :-

    ಕನ್ನಡಿಗರ ಕ್ಷಮೆ ಕೇಳಿದ ರಾಜರಥ

    Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ

    Bhandari Brothers Apologises For Their Remarks

     

  • Will 'Phantom' Title Change?

    Will 'Phantom' Title Change?

    Actor Sudeep recently announced that there is a major announcement coming from the team on the 21st of January. With just a day left, fans of the actor are speculating about what the mighty announcement would be?

    If rumours are to be believed then the title of the film is all set to be changed. The film was earlier titled as 'Phantom' with a caption Vikram Rona. With some major problems surfacing regarding the title, the makers have decided to change it to 'Vikranth Rona - The World of Phantom'. 

    This is said to be the major announcement and in the future the film will be identified as 'Vikranth Rona - The World of Phantom' and not 'Phantom' alone. The announcement will be made on the evening of January 21st.

    'Phantom' stars Sudeep, Nirup Bhandari, Neetha Ashok and others in prominent roles. The film is written and directed by Anup Bhandari, while Jack Manju has produced the film under his Shalini Arts Productions banner.

  • ಅಬ್ಬಬ್ಬಾ..ರಾಜರಥ ಅನೂಪ್ ಟೆನ್ಷನ್ನೇ ಬೇರೆ..!

    rajaratha team had a challenge

    ರಾಜರಥ, ರಂಗಿತರಂಗದ ನಂತರ.. ಅದೇ ಚಿತ್ರತಂಡದಿಂದ  ಬರುತ್ತಿರುವ 2ನೇ ಸಿನಿಮಾ. ಚಿತ್ರದ ಟ್ರೇಲರ್ ಅದ್ಭುತವಾಗಿದೆ. ಪ್ರೇಕ್ಷಕರಿಂದಲೂ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಚಿತ್ರತಂಡದ, ಅದರಲ್ಲೂ ನಿರ್ದೇಶಕ ಅನೂಪ್ ಅವರ ಟೆನ್ಷನ್ನೇ ಬೇರೆ. ಅವರ ಈ ಟೆನ್ಷನ್‍ಗೆ ಕಾರಣ, ರಂಗಿತರಂಗ.

    ಸುಮಾರು 3 ವರ್ಷಗಳ ಹಿಂದೆ ತೆರೆಕಂಡಿದ್ದಾಗ, ಇಡೀ ಚಿತ್ರತಂಡವೇ ಚಿತ್ರರಂಗಕ್ಕೆ ಹೊಸದು. ಆಗ ಅವರೂ ಹತ್ತರಲ್ಲಿ ಒಬ್ಬರು. ಆದರೆ, ರಂಗಿತರಂಗದ ಮ್ಯಾಜಿಕ್, ಅವರನ್ನು ಹತ್ತರಲ್ಲಿ ಹನ್ನೊಂದಾಗಿಸಿತು. ಈಗ 2ನೇ ಸಿನಿಮಾ. 

    ರಂಗಿತರಂಗ ಚಿತ್ರದ ಸಕ್ಸಸ್ ಆಕಸ್ಮಿಕ ಅಲ್ಲ ಅನ್ನೋದನ್ನು ಪ್ರೂವ್ ಮಾಡಬೇಕಾದ ಹೊಣೆ, ಈಗ ಅನೂಪ್ ಅವರ ಮೇಲಿದೆ. ಚಿತ್ರದ ಬಗ್ಗೆ ಅನೂಪ್ ಅವರಿಗೆ ಆತ್ಮವಿಶ್ವಾಸ ಇದೆ.

    ಚಿತ್ರದ ಹೀರೋ ನಿರೂಪ್ ಅವರಲ್ಲಿ ನಿಮ್ಮನ್ನು ನೀವೇ ನೋಡಿಕೊಳ್ತೀರಿ. ಆತನದ್ದು ಹೆದರುವವರನ್ನು ಹೆದರಿಸುವ, ಹೆದರಿಸುವವರ್ನು ಕಂಡರೆ ತಾನೇ ಹೆದರಿಕೊಳ್ಳುವ ಪಾತ್ರ. ಇನ್ನು ಬಸ್‍ವೊಂದು ಕಥೆ ಹೇಳುವ ಶೈಲಿಯೇ ಹೊಸದು. ಚಿತ್ರದ ಫಸ್ಟ್‍ಹಾಫ್‍ನಲ್ಲಿ ಬರುವ ದೃಶ್ಯಗಳಿಗೆ ಲಿಂಕ್ ಸಿಗುವುದು ದ್ವಿತೀಯಾರ್ಧದಲ್ಲಿ. ಚಿತ್ರದ ಚಿತ್ರೀಕರಣ ನೋಡಿದರೆ, ಅದೊಂದು ಟೂರ್‍ಗೆ ಹೋಗಿ ಬಂದ ಅನುಭವ. ವಿಭಿನ್ನವಾದ ಸಿನಿಮಾ ಇಷ್ಟವಾಗೋದು ಗ್ಯಾರಂಟಿ ಅಂತಾರೆ ಅನೂಪ್.

    ಪ್ರೇಕ್ಷಕರಲ್ಲೂ ಅಂಥದ್ದೇ ಕುತೂಹಲ ಹಾಗೂ ರಾಜರಥ ಟೀಂ ಚೆನ್ನಾಗಿ ಸಿನಿಮಾ ಮಾಡಿರುತ್ತೆ ಅನ್ನೋ ವಿಶ್ವಾಸ ಇದೆ. ಇನ್ನೇನು ಕೆಲವೇ ಗಂಟೆ... ರಾಜರಥದ ಮ್ಯಾಜಿಕ್ ಪ್ರೇಕ್ಷಕರ ಎದುರು ಅನಾವರಣಗೊಳ್ಳಲಿದೆ.

  • ಅವಳ ಮದುವೆಗೆ ಒಪ್ಪಿಗೆ ಕೊಡ್ತಾನಾ ಗಂಡ..? ಆದಿಲಕ್ಷ್ಮೀ ಪುರಾಣ

    adi lakshmi purana traile released

    ಮದುವೆಯಾಗು.. ಹುಡುಗಿ ನೋಡು.. ಎನ್ನುತ್ತಿದ್ದ ತಾಯಿಗೆ ಹುಡುಗಿಯನ್ನು ನೋಡಿಕೊಂಡು ಬಂದ ಮಗ ಹೇಳ್ತಾನೆ. ``ನಾನೊಂದು ಹುಡುಗಿಯನ್ನ ಇಷ್ಟಪಟ್ಟಿದ್ದೀನಿ. ಅವಳನ್ನೇ ಮದುವೆಯಾಗ್ತೀನಿ' ತಾಯಿ ಹೇಳ್ತಾಳೆ `ಕೇಳೋಣ ಬಿಡು' ಆದರೆ ಮಗನ ಮುಂದಿನ ರಿಯಾಕ್ಷನ್ ನೋಡಿ.. ಕೇಳೋದಾದ್ರೆ, ಅವಳ ಗಂಡನ್ನೇ ಕೇಳಬೇಕು..

    ಇಂತಹ ಸಣ್ಣದೊಂದು ಪಂಚ್ ಕೊಟ್ಟೇ ಟ್ರೇಲರ್ ಬಿಟ್ಟಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದಿಲಕ್ಷ್ಮೀ ಪುರಾಣದ ಟ್ರೇಲರ್‍ನ ಝಲಕ್ ಇದು. ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಸಿನಿಮಾಗೆ ಪ್ರಿಯಾ ನಿರ್ದೇಶಕಿ.

    2016ರಲ್ಲಿ ಯಶ್ ಜೊತೆ ನಟಿಸಿದ್ದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಂತರ ರಾಧಿಕಾ ಪಂಡಿತ್ ಅವರು ನಟಿಸಿರುವ ಚಿತ್ರವಿದು. ಯಶ್ ಅವರನ್ನು ಮದುವೆಯಾದ ಮೇಲೆ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿರೋ ಮೊದಲ ಚಿತ್ರ. 

  • ಆಗ ಅಕ್ಕ..ಪಕ್ಕ.. ಈಗ ಗಂಡಕ.. ರವಿಶಂಕರ್ ಗಾಯಕ..!

    rajaratha's gandakka song goes viral

    ಅಕ್ಕ ಪಕ್ಕ ಸಿಕ್ಕಿ ನಕ್ಕ.. ಹಕ್ಕಿ ಪುಕ್ಕ ಹೆಕ್ಕಿ ಮುಕ್ಕ.. ರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ.. ಒಂದ್ಸಲ ಈ ಹಾಡನ್ನು ಯಾವುದೇ ಗ್ಯಾಪ್ ಇಲ್ಲದೆ, ತಡವರಿಸದ ಹೇಳಿ ಬಿಡಿ.. ಕಷ್ಟವಾಗುತ್ತೆ ಅಲ್ವಾ..? ರಂಗಿತರಂಗದಲ್ಲಿ ಇಂಥಾದ್ದೊಂದು ಟಂಗ್ ಟ್ವಿಸ್ಟರ್ ಹಾಡನ್ನಿಟ್ಟು ಪ್ರೇಕ್ಷಕರನ್ನು ಆಕರ್ಷಿಸಿದ್ದ ಅನೂಪ್ ಭಂಡಾರಿ, ರಾಜರಥದಲ್ಲೂ ಅಂಥದ್ದೆ ಮ್ಯಾಜಿಕ್ ಮಾಡೋಕೆ ಹೊರಟಿದ್ದಾರೆ. ಗಂಡಕ ಹಾಡಿನ ಮೂಲಕ ಅಂಥದ್ದೇ ಮ್ಯಾಜಿಕ್ ಸೃಷ್ಟಿಸಿದ್ದಾರೆ.

    ಅಂದಹಾಗೆ ನಿಮಗೆ ಗೊತ್ತಿರಲಿ.. ಗಂಡಕ ಎಂದರೆ ಬೇರೇನೋ ಅಲ್ಲ. ಅದು ಘೇಂಡಾಮೃಗಕ್ಕೆ ಕನ್ನಡದಲ್ಲಿಯೇ ಇರುವ ಪದ. ಹೀಗೆ ಮರೆಯಾಗುತ್ತಿರುವ ಕನ್ನಡದ ಪದವನ್ನು ಹಾಡಿನಲ್ಲಿ ತಂದು ಹೇಳುವ ಸಾಹಸ ಮಾಡಿದೆ ರಾಜರಥ ಚಿತ್ರತಂಡ. ಪ್ರಾಸಕ್ಕೇ ಹೆಚ್ಚು ಒತ್ತು ನೀಡಿರುವ ಹಾಡಿನಲ್ಲಿ ಇಂತಹ ಅಪರೂಪದ ಪದಗಳು ಬರುತ್ತವೆ. ಕನ್ನಡ ಎಷ್ಟು ಸೊಗಸಾಗಿದೆ ಎಂದು ಥ್ರಿಲ್ಲಾಗುವಂತಿದೆ ಎನ್ನುತ್ತಿದ್ದಾರೆ ಅನೂಪ್.

    ಈ ಹಾಡು ಹಾಡಿರುವುದು ರವಿಶಂಕರ್. ಬಹುತೇಕರಿಗೆ ಗೊತ್ತಿರೋ ಹಾಗೆ ರವಿಶಂಕರ್‍ಗೆ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ. ಹೀಗಾಗಿಯೇ ಈ ಹಾಡನ್ನು ಸರಾಗವಾಗಿ ಹಾಡಲು ಸಾಧ್ಯವಾಗಿದೆ. ಸ್ವತಃ ರವಿಶಂಕರ್ ಥ್ರಿಲ್ಲಾಗಿದ್ದಾರೆ. ಆ ಥ್ರಿಲ್ ಪ್ರೇಕ್ಷಕರಿಗೆ ಮಾರ್ಚ್ 23ನೇ ತಾರೀಕು ಸಿಗಲಿದೆ. ಅದು ರಾಜರಥ ಚಿತ್ರಮಂದಿರಕ್ಕೆ ಬರುವ ದಿನ. 

  • ಏಪ್ರಿಲ್ 7ರಿಂದ ಯೂರೋಪ್‍ನಲ್ಲಿ ರಾಜರಥ 

    rajaratha to show in europe

    ರಾಜರಥ. ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ ಅಭಿನಯದ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಮರ್ಶೆಗಳು ವಿಭಿನ್ನವಾಗಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಅನೂಪ್. ಚಿತ್ರ ಇದೇ ಏಪ್ರಿಲ್ 7ನೇ ತಾರೀಕು ಯೂರೋಪ್‍ನಲ್ಲಿ ಬಿಡುಗಡೆಯಾಗುತ್ತಿದೆ. ಅಮೆರಿಕದಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಗಿಟ್ಟಿಸಿದೆ ರಾಜರಥ.

    ಇನ್ನು ಚಿತ್ರಕ್ಕೆ ಇನ್ನಷ್ಟು ಪ್ರಚಾರ ಬೇಕಿದೆ ಎಂದು ನಿರ್ಧರಿಸಿರುವ ಚಿತ್ರತಂಡ, ಈ ವಾರದಿಂದಲೇ ರಥಯಾತ್ರೆ ಶುರು ಮಾಡುತ್ತಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ.. ಹೀಗೆ ಎಲ್ಲ ಕಡೆ ರಾಜರಥದ ಯಾತ್ರೆ ಶುರುವಾಗಲಿದೆ.

    ಅಷ್ಟೇ ಅಲ್ಲ, ಚಿತ್ರದಲ್ಲಿ ಬಳಸಿರುವ ಬೈಕ್‍ನ್ನು ಅದೃಷ್ಟಶಾಲಿ ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ನೀವು ಸಿನಿಮಾ ನೋಡಿ ಬರುವಾಗ ಚಿತ್ರದ ಟಿಕೆಟ್ ಮೇಲೆ ನಿಮ್ಮ ಹೆಸರು, ನಂಬರ್ ಬರೆದು ಚಿತ್ರತಂಡ ಇಟ್ಟಿರುವ ಬಾಕ್ಸ್‍ನಲ್ಲಿ ಹಾಕಿ ಬನ್ನಿ. ಅದೃಷ್ಟ ಅದ್ಭುತವಾಗಿದ್ದರೆ, ನಿಮಗೆ ಆ ಬೈಕ್ ಸಿಗುತ್ತೆ. 

  • ಕನ್ನಡದಲ್ಲಿ ಅಭಿನಯ ಖುಷಿ ತಂದಿದೆ - ಆರ್ಯ

    arya in rajaratha

    ನಾನ್ ಕಡುವಳ್ ಖ್ಯಾತಿಯ ಆರ್ಯ, ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರೀಗ ಕನ್ನಡದ ರಾಜರಥ ಚಿತ್ರದಲ್ಲಿ ನಟಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲಿ ಆರ್ಯ ಅವರಿಗೆ ಪುಟ್ಟ ಆದರೆ, ಪ್ರಮುಖವಾದ ಪಾತ್ರವಿದೆ.

    ನಿರ್ದೇಶಕರು ಆರ್ಯ ಅವರಿಗೆ ಫೋನ್ ಮಾಡಿ ಚಿತ್ರದ ಕಥೆಯ ಒನ್ ಲೈನ್ ಹಾಗೂ ಅವರ ಪಾತ್ರದ ಬಗ್ಗೆ ಮರುಮಾತನಾಡದೆ ಒಪ್ಪಿಕೊಂಡರಂತೆ ಆರ್ಯ. ಕನ್ನಡದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಿದೆ. ಭಂಡಾರಿ ಕಥೆ ಹೇಳಿದ ರೀತಿ ಹಾಗೂ ಮೇಕಿಂಗ್ ತುಂಬಾನೇ ಹಿಡಿಸಿದೆ ಎಂದಿದ್ದಾರೆ ಆರ್ಯ.

    ಒಂದು ವಿಭಿನ್ನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇನೆ. ಕನ್ನಡಿಗರು ಇಷ್ಟಪಡುತ್ತಾರೆ ಎಂಬ ಭರವಸೆಯಿದೆ ಎಂದಿದ್ದಾರೆ ಆರ್ಯ.

    Related Articles :-

    Kollywood Actor Arya Acts In Rajaratha

  • ಕನ್ನಡಿಗರ ಕ್ಷಮೆ ಕೇಳಿದ ರಾಜರಥ

    bhandari brothers apologises

    ಭಂಡಾರಿ ಬ್ರದೡೞ ತಂಡದ ರಾಜರಥ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ವಿವಾದಾತ್ಮಕವಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕನ್ನಡಗಿರ ಕ್ಷಮೆ ಕೇಳಿದೆ.

    ಆರ್‌.ಜೆ ರಶ್ಮಿ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ 'ರಾಜರಥ ನೋಡಿಲ್ಲ ಅಂದ್ರೆ ಅಂತಹ ಆ ಪ್ರೇಕ್ಷಕನನ್ನು ಡ್ಯಾಶ್ ಅನ್ನುತ್ತೀರಾ ಎಂಬ ಪ್ರಶ್ನೆಗೆ , ನಿರ್ದೇಶಕ ಅನೂಪ್‌ ಮತ್ತು ನಟ ನಿರೂಪ್‌ ಇಬ್ಬರು 'ಕಚಡ ನನ್‌ ಮಗ', 'ಕಚಡ ಲೋಫರ್‌ ನನ್‌ ಮಕ್ಳು' ಅಂತ ಹೇಳುತ್ತಾರೆ. ಆ ಹೇಳಿಕೆಯಿರುವ ವಿಡಿಯೋ  ವೈರಲ್ ಆಗಿತ್ತು. ಕನ್ನಡಿಗರು ರಾಜರಥ ತಂಡದವರನ್ನು ತರಾಟೆಗೆ ತೆಗೆದುಕೊಂಡಿದ್ದರು.  ಈ ಕುರಿತು ಚಿತ್ರತಂಡ ಈಗ ಕನ್ನಡಿಗರ ಕ್ಷಮೆ ಕೇಳಿದೆ. 

    'ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರ ಅದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತಲ್ಲ' ಎಂದಿದ್ದಾರೆ ಅನೂಪ್ ಭಂಡಾರಿ. 

    ನಿರೂಪ್ ಭಂಡಾರಿ ಸಹ ಈ ಕುರಿತು ಕ್ಷಮೆಯಾಚಿಸಿದ್ದಾರೆ. ಫೇಸ್‌ಬುಕ್ ಲೈವ್ ಶೋನಲ್ಲಿ ನಮ್ಮ ಕಾಮೆಂಟ್‌ನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ಇದು ಉದ್ದೇಶಪೂರ್ವಕ ಅಲ್ಲ. ಪ್ರೇಕ್ಷಕರ ಬಗ್ಗೆ ನಮಗೆ ತುಂಬಾ ಕಾಳಜಿ ಇದೆ. ಎಲ್ಲಾ ಸಂದರ್ಶನಗಳಲ್ಲೂ ನಾವು ಇದನ್ನು ಒತ್ತಿ ಹೇಳಿದ್ದೇವೆ. ಇಂದು ನಾವು ಈ ಸ್ಥಿತಿಯಲ್ಲಿದ್ದೇವೆ ಎಂದರೆ ಅದಕ್ಕೆ ಪ್ರೇಕ್ಷಕರೇ ಕಾರಣ ಎಂದಿದ್ದಾರೆ.

    ಬಹುಶಃ ಪೂರ್ತಿ ಸಂದರ್ಶನವನ್ನು ನೋಡಿದ್ದರೆ, ಇದೊಂದು ಹಾಸ್ಯಮಯ ಎಂದು ಅರಿವಾಗುತ್ತಿತ್ತೇನೋ.. ಆದರೆ, ಸಂದರ್ಶನದ ಅಷ್ಟು ಭಾಗವನ್ನಷ್ಟೇ ಎಡಿಟ್ ಮಾಡಿ, ಅದು ವೈರಲ್ ಆದ ಕಾರಣ, ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ. 

    Related Articles :-

    Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ

    Bhandari Brothers Apologises For Their Remarks

  • ಕಮಲ್‍ಹಾಸನ್‍ರ ಮುಂದೆ ಬನ್ನಿ.. ರಾಜರಥದಲ್ಲಿ..

    rajaratha's munde banni song is hit

    ಬೆಂಕಿಯಲ್ಲಿ ಅರಳಿದ ಹೂವು, 1983ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಕೆ. ಬಾಲಚಂದರ್ ನಿರ್ದೇಶನದ ಆ ಸಿನಿಮಾದಲ್ಲಿ  ಸುಹಾಸಿನಿಯೇ ನಾಯಕಿ ಹಾಗೂ ನಾಯಕ. ಆ ಚಿತ್ರದಲ್ಲಿ ಸುಹಾಸಿನಿ ಅವರ ಸೋದರ ಕಮಲ್‍ಹಾಸನ್ ಒಂದು ಹಾಡಿನಲ್ಲಿ ಬಂದು ಹೋಗ್ತಾರೆ. ಬಸ್ ಕಂಡಕ್ಟರ್ ಆಗಿ ಬರೋ ಕಮಲ್‍ಹಾಸನ್ ಹಾಡುವ ಮುಂದೆ ಬನ್ನಿ.. ಮುಂದೆ ಬನ್ನಿ.. ಹಾಡು ಇಂದಿಗೂ ಜನಪ್ರಿಯ. ಆ ಹಾಡು ಮರುಸೃಷ್ಟಿಯಾಗಿದೆ. 

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ರಾಜರಥದಲ್ಲಿ ಈ ಹಾಡನ್ನು ಮರುಸೃಷ್ಟಿ ಮಾಡಲಾಗಿದೆ. ಈ ಹಾಡಿಗೆ ಧ್ವನಿ ನೀಡಿರುವುದು ಸ್ವತಃ ಅನೂಪ್ ಭಂಡಾರಿ. ಆ ಹಾಡನ್ನು ಬಿಡುಗಡೆ ಮಾಡಿರುವುದು ರಾಕಿಂಗ್ ಸ್ಟಾರ್ ಯಶ್.

    ಆ ಹಾಡಿನಲ್ಲಿ ಬರುವ ``ಕನ್ನಡ ನಾಡಲಿ ನೀನು ಕನ್ನಡ ಮಾತಾಡು.. ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು'' ಲೈನ್ ತುಂಬಾ ಇಷ್ಟ ಎಂದಿರುವ ರಾಕಿಂಗ್ ಸ್ಟಾರ್‍ಗೆ ತುಂಬಾ ಇಷ್ಟವಾಗಿದ್ದು ಚಿತ್ರದ ಹಾಡಿನ ಮೇಕಿಂಗ್. ಚಿತ್ರದ ಮೇಕಿಂಗ್ ಇಂಟರ್‍ನ್ಯಾಷನಲ್ ಲೆವೆಲ್ಲಿನಲ್ಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಯಶ್.

    ಇಷ್ಟೆಲ್ಲ ಇರುವ ಇರುವ ಹಿಟ್ ಆಗದೇ ಇರುತ್ತಾ..? ಸೂಪರ್ ಹಿಟ್ ಆಗಿಬಿಟ್ಟಿದೆ. ಆನ್‍ಲೈನ್‍ನಲ್ಲಿ ಟ್ರೆಂಡ್ ಕೂಡಾ ಆಗಿದೆ. ಅಷ್ಟೇ ಅಲ್ಲ, ಈ ಹಾಡು ಚಿತ್ರದ ಕುರಿತ ನಿರೀಕ್ಷೆಗಳನ್ನೂ ಹೆಚ್ಚಿಸಿದೆ. 

    ಮೂಲ ಚಿತ್ರದಲ್ಲಿ ಅಂದರೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಸಂಗೀತ ನೀಡಿದ್ದವರು ಎಲ್.ವೈದ್ಯನಾಥನ್. ಸಾಹಿತ್ಯ ಒದಗಿಸಿದ್ದವರು ಚಿ.ಉದಯಶಂಕರ್. ರಾಜರಥ ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಭಂಡಾರಿ. ಗಾಯಕರೂ ಅವರೇ. ಆ ಚಿತ್ರದ ಈ ಹಾಡಿನ ಸೃಷ್ಟಿಕರ್ತರಿಗೆ ಕ್ರೆಡಿಟ್‍ನ್ನೂ ನೀಡಿರುವ ರಾಜರಥ ಟೀಂ, ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧವಾಗಿದೆ.

  • ಗುಮ್ಮ ಬಂದೇಬಿಟ್ಟ..

    ಗುಮ್ಮ ಬಂದೇಬಿಟ್ಟ..

    ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ.

    ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ.

    ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು.

    ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ...

  • ಗೊತ್ತಿಲ್ಲದೆ ಆದ ತಪ್ಪಿಗೆ ಕ್ಷಮೆ ಇರಲಿ - ಆವಂತಿಕಾ ಶೆಟ್ಟಿ

    avantika shetty apologises to kannadadigas

    ರಾಜರಥ ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ ರಾಜರಥ ಚಿತ್ರದ `ಕ.....ಕ್ಳು' ವಿವಾದದ ಬಗ್ಗೆ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನನಗೆ ಅದು ಅಷ್ಟು ಕೆಟ್ಟ ಪದ ಎಂಬುದು ಗೊತ್ತಿರಲಿಲ್ಲ. ನಾನು ಇನ್ನೂ ಈಗ ಕನ್ನಡ ಕಲಿಯುತ್ತಿದ್ದೇನೆ. ಗೊತ್ತಿಲ್ಲದೇ ಆದ ತಪ್ಪಿಗೆ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾರೆ.

    ಆವಂತಿಕಾ ಶೆಟ್ಟಿ ಮೂಲತಃ ಕನ್ನಡದವರೇ ಆದರೂ, ಹುಟ್ಟಿ ಬೆಳೆದಿರುವುದು ಮುಂಬೈನಲ್ಲಿ. ಹೀಗಾಗಿ ಈಗ ಕನ್ನಡ ಕಲಿಯುತ್ತಿರುವ ಆವಂತಿಕಾ ಶೆಟ್ಟಿ, `ಕ.....ಕ್ಳು' ಡೈಲಾಗ್‍ಗೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ವಿವಾದಗಳು ಆಗುವುದಿಲ್ಲ. ಗೊತ್ತಿಲ್ಲದೆ ಆದ ತಪ್ಪನ್ನು ಮನ್ನಿಸಿಬಿಡಿ. ಇದೀಗ ತಾನೆ ಬೆಳೆಯುತ್ತಿರುವ ನಮ್ಮನ್ನು ಹರಸಿ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.

     

  • ಚಡ್ಡಿ ತೊಟ್ಟ ನಾಯಕನ ಕಟೌಟ್ - ರಾಜರಥ ಸ್ಪೆಷಲ್

    rajaratha's cut out is also different

    ಹೊಸ ಸಿನಿಮಾವೊಂದು ರಿಲೀಸ್ ಆಗುವಾಗ ಚಿತ್ರದ ಹೀರೋ ಕಟೌಟ್ ನಿಲ್ಲಿಸೋದು ಸಾಮಾನ್ಯ. ಕೆಲವೊಮ್ಮೆ ನಿರ್ದೇಶಕರ ಕಟೌಟ್‍ನ್ನೂ ಹಾಕ್ತಾರೆ. ನಾಯಕರ ಕಟೌಟ್‍ನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಮಾಡಿಸಿ, ಎತ್ತರದ ಕಟೌಟ್ ಮಾಡಿಸಿ ಪ್ರಮುಖ ಥಿಯೇಟರ್‍ಗಳ ಎದುರು ನಿಲ್ಲಿಸೊದು ಹೊಸದನೇನಲ್ಲ. ಆದರೆ, ಇಲ್ಲಿಯೂ ರಾಜರಥ ಚಿತ್ರತಂಡ ವಿಭಿನ್ನತೆ ಮೆರೆದಿದೆ.

    ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ ಕಟೌಟ್‍ನ್ನು ಥಿಯೇಟರ್‍ಗಳ ಮುಂದೆ ಹಾಕಲಾಗಿದೆ. ಆದರೆ, ಹೀರೋ ಇರೋದು ಸೂಪರ್‍ಮ್ಯಾನ್ ಶೈಲಿಯಲ್ಲಿ. ಆದರೆ, ಚಡ್ಡಿಯಲ್ಲಿ. ಬಹುಶಃ, ಚಡ್ಡಿಯಲ್ಲಿ ನಿಂತ ನಾಯಕನ ಕಟೌಟ್ ಹಾಕಿರೋದು ಇದೇ ಮೊದಲಿರಬೇಕು. 

    ಕಟೌಟ್‍ನಲ್ಲಿ ಪುನೀತ್ ಅವರೂ ಇದ್ದಾರೆ. ಅಂದಹಾಗೆ ಚಿತ್ರದಲ್ಲಿ ರಾಜರಥ ಎಂದರೆ, ಪುನೀತ್ ಅವರೇ. ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದ್ದು, ರಾಜರಥದ ಜೋರು ಕಾಣುತ್ತಿದೆ.

     

  • ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಗರಗರಗರಗರ ಗಗ್ಗರ ಜರ್ಬ.. ಪಿರನಲ್ಕುರಿ ನೆತ್ತರ ಪರ್ಬ..

    ರಾ.. ರಾ.. ರಕ್ಕಮ್ಮ.. ರಾ.. ರಾ.. ರಕ್ಕಮ್ಮ.. ಯಕ್ಕಸಕ್ಕ ಯಕ್ಕಸಕ್ಕ..

    ಗುಮ್ಮ ಬಂದ ಗುಮ್ಮ..

    ಹೀಗೆ ಹಲವು ಸೆನ್ಸೇಷನ್ ಹುಟ್ಟುಹಾಕಿದ್ದ ವಿಕ್ರಾಂತ್ ರೋಣ ಸುದೀಪ್ ಅವರ ಇದುವರೆಗಿನ ಎಲ್ಲ ಚಿತ್ರಗಳ ದಾಖಲೆಯನ್ನೂ ಮೀರಿ ಅದ್ಧೂರಿ ಬಿಡುಗಡೆ ಕಂಡಿತ್ತು. ಮೊದಲ ದಿನ ನಡೆದದ್ದು ಒಂಭತ್ತೂವರೆ ಸಾವಿರಕ್ಕೂ ಹೆಚ್ಚು ಶೋಗಳು. ರಾಜ್ಯದಲ್ಲಿಯೇ ಎರಡೂವರೆ ಸಾವಿರ ಶೋಗಳು. ಅದ್ಧೂರಿ.. ಅಬ್ಬರ..

    ಊರ್ವಶಿ ಚಿತ್ರಮಂದಿರಕ್ಕೆ ಖುದ್ದು ಪತ್ನಿ ಪ್ರಿಯಾ ಸುದೀಪ್ ಮತ್ತು ಕಿಚ್ಚನ ರಾಜಕುಮಾರಿ ಮಗಳು ಸಾನ್ವಿ ಸುದೀಪ್ ಬಂದಿದ್ದರು. ಪ್ರಿಯಾ ಅವರೊಂದಿಗೆ ನಿರೂಪ್ ಭಂಡಾರಿ ಕೂಡಾ ಚಿತ್ರಮಂದಿರದಲ್ಲೇ ಕೂತು ಸಿನಿಮಾ ನೋಡಿದರು. ಸುದೀಪ್ ಅವರ ಆರೋಗ್ಯ ಕೈಕೊಟ್ಟಿರುವ ಕಾರಣ ಸಾನ್ವಿ ಮಧ್ಯಾಹ್ನದ ಶೋಗೆ ಬಂದರು.

    ಊರ್ವಶಿ ಚಿತ್ರಮಂದಿರವೊಂದರ ಕಲೆಕ್ಷನ್ನೇ 25 ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ. ಎಲ್ಲ ಶೋಗಳೂ ಹೌಸ್‍ಫುಲ್. ಇನ್ನೊಂದು ಪ್ರಮುಖ ಚಿತ್ರಮಂದಿರ ವೀರೇಶ್‍ನಲ್ಲಿ ಎರಡು ಸ್ಕ್ರೀನ್ ಇವೆ. 2ಡಿ ಮತ್ತು 3ಡಿ ಎರಡರಲ್ಲೂ ನೋಡಬಹುದು. ಎರಡೂ ಸೇರಿ ಮೊದಲ ದಿನ ನಡೆದದ್ದು ಒಟ್ಟು 12 ಶೋಗಳು. ಎಲ್ಲ ಶೋಗಳೂ ಹೌಸ್‍ಫುಲ್. ರಾಜ್ಯದ ವಿವಿಧೆಡೆ ಕೂಡಾ ಅದ್ಭುತ ಪ್ರದರ್ಶನ ಕಂಡಿವೆ. ಎಲ್ಲೆಡೆ ಹೌಸ್‍ಫುಲ್ ಶೋಗಳು. ಇನ್ನು 2ನೇ ದಿನದ ಶೋಗಳೂ ಆಗಲೇ ಹೌಸ್‍ಫುಲ್ ಆಗುತ್ತಿವೆ. ವಿಮರ್ಶಕರಷ್ಟೇ ಅಲ್ಲ, ಚಿತ್ರ ನೋಡಿ ಬಂದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಹೊಗಳುತ್ತಿದ್ದಾರೆ. ತೆಲಂಗಾಣ, ಆಂಧ್ರದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

    ಮೊದಲ ದಿನವೇ 55ರಿಂದ 60 ಕೋಟಿ ಕಲೆಕ್ಷನ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಕರ್ನಾಟಕದಲ್ಲಿ 15ರಿಂದ 20 ಕೋಟಿ ಕಲೆಕ್ಷನ್ ಎನ್ನಲಾಗಿದೆ.

    ಇದೆಲ್ಲದರಿಂದ ಖುಷಿಯಾಗಿರೋದು ಜಾಕ್ ಮಂಜು. 

  • ಟಿವಿ 9 ಆ್ಯಂಕರ್ ಸೀಟ್ ಟು ವಿಂಡೋ ಸೀಟ್ ಡೈರೆಕ್ಷನ್

    ಟಿವಿ 9 ಆ್ಯಂಕರ್ ಸೀಟ್ ಟು ವಿಂಡೋ ಸೀಟ್ ಡೈರೆಕ್ಷನ್

    ಹಲೋ.. ನಮಸ್ಕಾರ.. ನಾನು ನಿಮ್ಮ ಶೀತಲ್ ಶೆಟ್ಟಿ.. ಕನ್ನಡಿಗರಿಗೆ ಹೆಚ್ಚು ಹೆಚ್ಚು ಪರಿಚಯವಾಗಿದ್ದೇ ಟಿವಿ 9 ಆಂಕರ್ ಆಗಿ. ನಂತರ ಕೆರಿಯರ್ ಚೇಂಜ್ ಮಾಡಬೇಕು ಎನ್ನುವ ಹಠಕ್ಕೆ ಬಿದ್ದು ಚಿತ್ರರಂಗಕ್ಕೆ ಬಂದ ಶೀತಲ್ ಶೆಟ್ಟಿ, ಮೊದಲು ನಟಿಸಿದ ಸಿನಿಮಾ ಉಳಿದವರು ಕಂಡಂತೆ. ಆ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರವನ್ನೇ ಮಾಡಿದ್ದ ಶೀತಲ್ ಈಗ ನಿರ್ದೇಶಕಿಯೂ ಆಗಿದ್ದಾರೆ. ಅವರೇ ನಿರ್ದೇಶನ ಮಾಡಿರುವ ಸಿನಿಮಾ ವಿಂಡೋಸೀಟ್.

    ಕೆಂಡಸಂಪಿಗೆ, ಪ್ರೇಮ ಗೀಮ ಜಾನೆ ದೋ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶೀತಲ್ ಶೆಟ್ಟಿ, ಗಡಿಯಾರ, ಪತಿ ಬೇಕು.ಕಾಮ್ ಚಿತ್ರಗಳಲ್ಲಿ ಲೀಡ್ ರೋಲ್‍ಗಳಲ್ಲೇ ಕಾಣಿಸಿಕೊಂಡರು. ಈಗ ನಿರ್ದೇಶಕಿಯಾಗಿ ವಿಂಡೋ ಸೀಟ್ ಚಿತ್ರವನ್ನ ರಿಲೀಸ್ ಮಾಡುತ್ತಿದ್ದಾರೆ. ಜುಲೈ 1ಕ್ಕೆ ರಿಲೀಸ್.

    ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ಕಿಚ್ಚ ಸುದೀಪ್. ಚಿತ್ರಕ್ಕೆ ಶುಭ ಕೋರಲೆಂದು ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಖುದ್ದು ಬಂದಿದ್ದರು.

    ಚಿತ್ರದ ಹೀರೋ ರಂಗಿತರಂಗ ನಿರೂಪ್ ಭಂಡಾರಿ. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಕನ್ನಡಕ್ಕೆ ಹೊಸದು ಎನ್ನಬಹುದಾದ ರೊಮ್ಯಾಂಟಿಕ್ ಥ್ರಿಲ್ಲರ್ ಸ್ಟೋರಿ.

  • ಡೈರೆಕ್ಟರ್‍ಗೂ ನಟಿಸೋ ಆಸೆ. ಆದರೆ.. ಆಕೆಯದ್ದೇ ಭಯ..!

    anup bhandari fears to act because of her

    ರಂಗಿತರಂಗ ಚಿತ್ರ ನೋಡಿದ್ದರೆ, ಆ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಕಾಣಿಸಿಕೊಂಡಿದ್ದರು. ರಾಜರಥ ಚಿತ್ರದಲ್ಲೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ಅನೂಪ್. ಆದರೆ, ನೀವು ಗುರುತಿಸೋಕೆ ಸಾಧ್ಯವಿಲ್ಲ. ಅಕಸ್ಮಾತ್ ಗುರುತಿಸಿದರೆ, ನಿಮಗೆ ಒಂದು ಅವಾರ್ಡ್ ಕೊಡ್ತೇನೆ ಎಂದು ಚಾಲೆಂಜ್ ಹಾಕ್ತಾರೆ ಅನೂಪ್.

    ಅನೂಪ್ ನಿರ್ದೇಶಕರೇ ಇರಬಹುದು, ನೋಡೋಕೆ ಸ್ಮಾರ್ಟ್ ಆಗಿಯೇ ಇದ್ದಾರೆ. ಹೀಗಿರುವಾಗ ಹೀರೋ ಆಗುವ ಚಾನ್ಸ್ ಬರಲಿಲ್ವಾ ಎಂದರೆ, ಬಂತು ಅಂತಾರೆ ಅನೂಪ್. ಯಾಕೆ ಒಪ್ಪಿಕೊಳ್ಳಲಿಲ್ಲ ಅಂದಾಗ ಗೊತ್ತಾಗಿದ್ದೇ ಅವರಿಗೆ ಆಕೆಯ ಭಯ ಇದೆ ಅನ್ನೋದು. 

    ಆಕೆ ಎಂದರೆ ಬೇರಾರೋ ಅಲ್ಲ. ಅವರ ಪತ್ನಿ. ಸಿನಿಮಾದಲ್ಲಿ ನಟಿಸೋದು ಎಂದರೆ ಒಂದಿಷ್ಟು ರೊಮ್ಯಾನ್ಸ್ ದೃಶ್ಯಗಳು ಇದ್ದೇ ಇರುತ್ತವೆ. ನಾಯಕಿಯ ಜೊತೆ ಹತ್ತಿರದಲ್ಲಿರುವ ದೃಶ್ಯಗಳಲ್ಲಿ ನಟಿಸಲೇಬೇಕಾಗುತ್ತೆ. ಹಾಗೇನಾದರೂ ನಾನು ನಟಿಸಿದರ ನನ್ನ ಪತ್ನಿ ನನ್ನನ್ನು ಮನೆಯಿಂದ ಹೊರಗೆ ಹಾಕ್ತಾಳೆ ಎಂದು ನಗ್ತಾರೆ ಅನೂಪ್. 

    ಆದರೆ, ನಿರ್ದೇಶನದಲ್ಲಿ ಬ್ಯುಸಿ ಇರುವುದು ಹಾಗೂ ನಟನೆಯಲ್ಲಿ ಅಷ್ಟು ಆಸಕ್ತಿ ಇಲ್ಲದೇ ಇರುವುದು ನಿಜವಾದ ಕಾರಣ.

     

  • ತಮಿಳು ಸ್ಟಾರ್ ಆರ್ಯ, ಕನ್ನಡದ ಮೊದಲ ಅನುಭವ

    rajaratha movie image

    ಆರ್ಯ. ತಮಿಳು ಚಿತ್ರರಂಗದ ಸ್ಟಾರ್ ನಟ. ಇವರು ಕನ್ನಡದಲ್ಲಿ ನಟಿಸಿರುವ ಮೊದಲ ಸಿನಿಮಾ ರಾಜರಥ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ರಾಜರಥ ಚಿತ್ರದಲ್ಲಿ ಆರ್ಯ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದ ಅನುಭವವನ್ನೂ ಖುಷಿಯಿಂದ ಹೇಳಿಕೊಂಡಿದ್ದಾರೆ ಆರ್ಯ.

    ರಂಗಿತರಂಗ ನೋಡಿದಾಗ ಇಷ್ಟವಾಯ್ತು. ನಂತರ ಅನೂಪ್ ಅವರ ತಂದೆಯ ಸ್ನೇಹಿತರೊಬ್ಬರ ಮೂಲಕ ಚಿತ್ರದ ಬಗ್ಗೆ ನನ್ನ ಮೆಚ್ಚುಗೆ ತಿಳಿಸಿದೆ. ಅದಾದ ಮೇಲೆ ಅನೂಪ್ ನನಗೆ ಫೋನ್ ಮಾಡಿ, ನನ್ನ ಚಿತ್ರದಲ್ಲಿ ನೀವು ನಟಿಸಬೇಕು ಎಂದಾಗ ನಿಜಕ್ಕೂ ಥ್ರಿಲ್ ಆಗಿಬಿಟ್ಟೆ. ಓಕೆ, ಬ್ರದರ್. ಡನ್ ಎಂದಷ್ಟೇ ಹೇಳಿದ್ದೆ ಎಂದು ನೆನಪಿಸಿಕೊಳ್ತಾರೆ ಆರ್ಯ.

    ಚಿತ್ರದಲ್ಲಿ ನಟಿಸುವಾಗ ನಾನು ಒಬ್ಬ ಹೊಸಬ ಎಂದೇ ಫೀಲ್ ಆಯ್ತು. ಕನ್ನಡದಲ್ಲಿಯೂ ನಟಿಸಬೇಕು ಎನ್ನುವ ಕನಸು, ಈ ಚಿತ್ರದ ಮೂಲಕ ಈಡೇರಿದೆ. ಅನೂಪ್ ಅವರಲ್ಲಿ ಒಂದಿಷ್ಟು ಹೊಸತನವಿದೆ. ವಿಭಿನ್ನತೆಯಿದೆ. ಚಿತ್ರದಲ್ಲಿ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ ಎಂದಿದ್ದಾರೆ ಆರ್ಯ.

    ಏನು ನಿಮ್ಮ ಪಾತ್ರ ಎಂದರೆ, ನಿರ್ದೇಶಕರು ಇದರ ಬಗ್ಗೆ ಬಾಯಿಬಿಡಬೇಡಿ ಎಂದಿದ್ದಾರೆ. ಹಾಗಾಗಿ ನಾನು ಬಾಯಿ ಹೊಲಿದುಕೊಂಡಿದ್ದೇನೆ ಅಂತಾರೆ ಆರ್ಯ.

    ತಮಿಳು ಹಾಗೂ ಕನ್ನಡದ ಮಧ್ಯೆ ಬಹಳಷ್ಟು ಹೋಲಿಕೆಗಳಿವೆ. ಇದು ಕನ್ನಡ ಗೊತ್ತಿಲ್ಲದೇ ಇದ್ದರೂ, ನನಗೆ ಡೈಲಾಗ್ ಹೇಳೋಕೆ ಸಹಾಯ ಮಾಡ್ತು ಎಂದು ಡೈಲಾಗ್ ಡೆಲಿವರಿ ಕಷ್ಟ ಹೇಳಿಕೊಂಡಿದ್ದಾರೆ ಆರ್ಯ. ಆರ್ಯ ಅವರಷ್ಟೇ ಅಲ್ಲ, ಇಡೀ ಚಿತ್ರತಂಡ ಎದುರು ನೋಡುತ್ತಿರುವುದು ಅಭಿಮಾನಿಗಳನ್ನ. ಶುಕ್ರವಾರ ರಿಲೀಸ್ ಆಗುವ ಸಿನಿಮಾ, ಜನರಿಗೆ ಇಷ್ಟವಾಗಿಬಿಟ್ಟರೆ, ರಾಜರಥದವರ ಖುಷಿಗೆ ನೋ ಲಿಮಿಟ್ಸ್.

  • ನಾನು ಮೇಘಾ, ಆವಂತಿಕಾ ಅಲ್ಲ - ಆವಂತಿಕಾ ಶೆಟ್ಟಿ

    avantika still in rajaratha character mood

    ನನಗೆ ಕನ್ನಡ ಬರುತ್ತದೆಯಾದರೂ, ಸ್ಪಷ್ಟವಾಗಿ, ಸರಾಗವಾಗಿ ಮಾತನಾಡುವುದು ಕಷ್ಟ. ನಟ ನಿರೂಪ್ ಭಂಡಾರಿ, ಚಿತ್ರದುದ್ದಕ್ಕೂ ನನ್ನನ್ನು ರೇಗಿಸುತ್ತಲೇ ಇದ್ದರು. ಆದರೆ, ಇದೇ ರಾಜರಥ ತೆಲುಗಿನಲ್ಲೂ ಪ್ರತ್ಯೇಕವಾಗಿ ಶೂಟ್ ಆಗಿದೆ. ಆಗ ನಿರೂಪ್ ಭಂಡಾರಿಗೆ ನಾನು ಅನುಭವಿಸಿದ ಕಷ್ಟ ಅರ್ಥವಾಯಿತು. ಏಕೆಂದರೆ, ತೆಲುಗು ಅವರಿಗೆ ಬರುತ್ತಿರಲಿಲ್ಲ. ಇಂಥಾದ್ದೊಂದು ಅನುಭವ ಹೇಳಿಕೊಳ್ಳುವ ಆವಂತಿಕಾ ಶೆಟ್ಟಿ, ಈಗಲೂ ರಾಜರಥದ ಮೇಘಾ ಪಾತ್ರದ ಗುಂಗಿನಿಂದ ಹೊರಬಂದಿಲ್ಲ.

    ನಾನು ಪಾತ್ರದೊಳಗೆ ಯಾವ ಮಟ್ಟಕ್ಕೆ ಇನ್‍ವಾಲ್ವ್ ಆಗಿದ್ದೆ ಎಂದರೆ, ನನಗೆ ಈಗಲೂ ಮೇಘಾ ಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಮೇಘನಾ.. ಅಲ್ಲಲ್ಲ.. ಆವಂತಿಕಾ ಶೆಟ್ಟಿ.

    ರಂಗಿತರಂಗದಲ್ಲೂ ಹೀಗೆಯೇ ಆಗಿತ್ತು. ಸಂಧ್ಯಾ ಪಾತ್ರದ ಗುಂಗು ಹಲವಾರು ತಿಂಗಳು ಉಳಿದುಕೊಂಡಿತ್ತು. ಈಗ ರಾಜರಥದಲ್ಲೂ ಹಾಗೆಯೇ ಆಗುತ್ತಿದೆ. ಆದರೆ, ರಂಗಿತರಂಗಕ್ಕಿಂತ ರಾಜರಥ ಸವಾಲು. ಆ ಚಿತ್ರದಲ್ಲಿ ಎಲ್ಲರೂ ಹೊಸಬರೇ. ಆದರೆ, ಈಗ ಎಲ್ಲರ ಮೇಲೂ ನಿರೀಕ್ಷೆ ಇದೆ. ಆ ನಿರೀಕ್ಷೆಗಳನ್ನು ಮುಟ್ಟಿದ್ದೇವೆ ಎಂಬ ನಂಬಿಕೆಯೂ ಇದೆ ಅಂತಾರೆ ಆವಂತಿಕಾ ಶೆಟ್ಟಿ.

    ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರವನ್ನು ಜೀವಿಸಿದ್ದಾರೆ. ನಾಯಕ ನಟ ನಿರೂಪ್ ಭಂಡಾರಿ ಪಾತ್ರವೇ ತಾವಾಗಿ ಹೋಗಿದ್ದಾರೆ. ನನಗೂ ಇದೊಂದು ಕಂಫರ್ಟಬಲ್ ತಂಡ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಆವಂತಿಕಾ. ಆವಂತಿಕಾರ ಸಕಲ ನಿರೀಕ್ಷೆಗಳಿಗೂ ಉತ್ತರ ಸಿಗುವುದು ಬರುವ ಶುಕ್ರವಾರ.

  • ನಿರ್ಮಾಪಕರಿಗೇ ಗೊತ್ತಿಲ್ಲದೆ ರಂಗಿತರಂಗ ರೀಮೇಕ್ ರೈಟ್ಸ್ ಖರೀದಿಸಿದ್ದು ಯಾರು?

    ನಿರ್ಮಾಪಕರಿಗೇ ಗೊತ್ತಿಲ್ಲದೆ ರಂಗಿತರಂಗ ರೀಮೇಕ್ ರೈಟ್ಸ್ ಖರೀದಿಸಿದ್ದು ಯಾರು?

    ರಂಗಿತರಂಗ. 2015ರಲ್ಲಿ ರಿಲೀಸ್ ಆಗಿ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ. ಆ ಚಿತ್ರದ ರೀಮೇಕ್ ರೈಟ್ಸ್ಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಇತ್ತೀಚೆಗೆ ಬಾಲಿವುಡ್ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಕೋಮಲ್ ಉನ್ನಾವೆ ರಂಗಿತರಂಗ ರೀಮೇಕ್ ಮಾಡುತ್ತಿದ್ದೇವೆ ಎಂದಿದ್ದರು. ರೀಮೇಕ್ ಹಕ್ಕು ಖರೀದಿಸಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡಾ ಶುರು ಎಂದಿದ್ದರು. ಆಕೆಯೇನೂ ಸಾಮಾನ್ಯರಲ್ಲ. ಒನ್ ವೇ ಟಿಕೆಟ್ ಹಾಗೂ ಬೈಸಿಕಲ್ ಬಾಯ್ಸ್ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕಿ. ವಿಚಿತ್ರವೆಂದರೆ ಇದು ಚಿತ್ರದ ನಿರ್ಮಾಪಕರಿಗೇ ಗೊತ್ತಿಲ್ಲ.

    ರಂಗಿತರಂಗದ ಹಿಂದಿ ರಿಮೇಕ್ ಹಕ್ಕುಗಳನ್ನು ಪಡೆದಿರುವುದಾಗಿ ಪ್ರೊಡಕ್ಷನ್ ಹೌಸ್ ಒಂದು ಹೇಳುತ್ತಿದೆ. ಆದರೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕುಗಳೂ ರಂಗಿತರಂಗ ಸಿನಿಮಾದ ಸಹ ನಿರ್ಮಾಪಕ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಸುಧಾಕರ್ ಭಂಡಾರಿ ಸಾಜ ಅವರ ಬಳಿಯೇ ಇದೆ. ನಮ್ಮ ಅನುಮತಿ ಇಲ್ಲದೇ ಯಾರಾದರೂ ರಂಗಿತರಂಗ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡುವುದಾಗಲೀ ಖರೀದಿ ಮಾಡುವುದಾಗಿ ಅಥವಾ ರೀಮೇಕ್ ಮಾಡುವುದಾಗಲೀ ಮಾಡಿದರೆ ಅದು ಕಾನೂನು ಉಲ್ಲಂಘನೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

    ಹೆಚ್.ಕೆ. ಪ್ರಕಾಶ್ ನಿರ್ಮಿಸಿದ್ದ ರಂಗಿತರಂಗ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದರು. ನಿರೂಪ್ ಭಂಡಾರಿ, ಸಾಯಿ ಕುಮಾರ್, ರಾಧಿಕಾ ನಾರಾಯಣ್ ಹಾಗೂ ಆವಂತಿಕಾ ಶೆಟ್ಟಿ ನಟಿಸಿದ್ದ ಚಿತ್ರ, ಬಾಹುಬಲಿ ಎದುರು ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು.

  • ಬಂದಾ.. ಬಂದ.. ಫಕೀರ ಬಂದ..

    ಬಂದಾ.. ಬಂದ.. ಫಕೀರ ಬಂದ..

    ರಾ..ರಾ.. ರಕ್ಕಮ್ಮ ಸದ್ದು ದೇಶದಾದ್ಯಂತ ಜೋರಾಗಿದೆ. ರಕ್ಕಮ್ಮ ಎಕ್ಕ..ಸಕ್ಕ.. ಕುಣಿಸುತ್ತಿದ್ದರೆ.. ರಾಜಕುಮಾರಿಯ ಜೋಗುಳ ಬೇರೆಯದೇ ರೀತಿ ಗುನುಗುವಂತಿದೆ. ಈಗ ಮತ್ತೊಂದು ಹಾಡು.. ಫಕೀರನ ಹಾಡು.

    ಈ ಹಾಡು ಸೃಷ್ಟಿಯಾಗಿರುವುದು ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿ ಅವರ ಮೇಲೆ. ಹಳ್ಳಿಗೆ ಬರೋ ಹುಡುಗನ ಮೇಲಿರೋ ಹಾಡಿದು. ಸ್ವಲ್ಪ ತಮಾಷೆಯಾಗಿ, ರೆಟ್ರೋ ಶೈಲಿಯಲ್ಲಿದೆ.

    ನಿರೂಪ್ ಭಂಡಾರಿ ಚಿತ್ರದಲ್ಲಿ ಸಂಜೀವ್ ಗಂಭೀರ್ ಅನ್ನೋ ಪಾತ್ರದಲ್ಲಿ ನಟಿಸಿದ್ದು, ಸುದೀಪ್ ಎದುರು ನಿರೂಪ್ ಪಾತ್ರ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ರಿಲೀಸ್ ಆಗುವುದು ಜುಲೈ ಅಂತ್ಯಕ್ಕೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರೋ ಚಿತ್ರ.. ದಿನ ದಿನಕ್ಕೂ ಸೆನ್ಸೇಷನ್ ಆಗುತ್ತಿದೆ.