ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರ ಬಂದು 20 ವರ್ಷ ಆಗಿ ಹೋಯ್ತಾ..? ಹೌದು ಎನ್ನುತ್ತಿದ್ದಾರೆ ಎಸ್.ನಾರಾಯಣ್. ವಿಷ್ಣು ವೃತ್ತಿ ಜೀವನದ ಬೊಂಬಾಟ್ ಹಿಟ್ ಚಿತ್ರಗಳಲ್ಲಿ ಸೂರ್ಯವಂಶ ಚಿತ್ರವೂ ಒಂದು. ಹೆಚ್.ಡಿ.ಕುಮಾರಸ್ವಾಮಿ ನಿರ್ಮಾಣದ ಚಿತ್ರ, ಶತದಿನೋತ್ಸವ ಆಚರಿಸಿತ್ತು. ವಿಷ್ಣು ದ್ವಿಪಾತ್ರದಲ್ಲಿ ನಟಿಸಿದ್ದರೆ, ಇಶಾ ಕೊಪ್ಪಿಕರ್ ನಾಯಕಿ. ವಿಜಯಲಕ್ಷ್ಮಿ, ಲಕ್ಷ್ಮಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಪೋಷಕ ನಟರಾಗಿ ಮಿಂಚಿದ್ದರು. ಸೇವಂತಿಯೇ.. ಸೇವಂತಿಯೇ.. ಹಾಡು ಇಂದಿಗೂ ಜನಪ್ರಿಯ.
ವಿಷ್ಣು ಅವರ ಸತ್ಯಮೂರ್ತಿ ಪಾತ್ರ ಡಾ.ರಾಜ್‍ಕುಮಾರ್ ಬಹಳ ಇಷ್ಟವಾಗಿತ್ತಂತೆ. ಸ್ವತಃ ವಿಷ್ಣುವರ್ಧನ್‍ಗೆ ಫೋನ್ ಮಾಡಿದ್ದ ರಾಜ್, ಸತ್ಯಮೂರ್ತಿ ಪಾತ್ರ ಬಹಳ ಚೆನ್ನಾಗಿದೆ. ಗಿರಿಜಾ ಮೀಸೆಯೂ ಚೆನ್ನಾಗಿ ಕೂತಿದೆ. ಎಲ್ಲರಿಗೂ ಮೀಸೆ ಸೂಟ್ ಆಗಲ್ಲ. ನಿಮ್ಮ ಪಾತ್ರ ಬಹಳ ಚೆನ್ನಾಗಿದೆ ಎಂದು ಅಭಿನಂದಿಸಿದ್ದನ್ನು ನಾರಾಯಣ್ ಸ್ಮರಿಸಿಕೊಳ್ತಾರೆ.