` adilakshmi purana, - chitraloka.com | Kannada Movie News, Reviews | Image

adilakshmi purana,

  • 'Adilakshmi Purana' Audio Released

    adilakshmi purana audio released

    Radhika Pandith's comeback film after marriage, 'Adilakshmi Purana' is all set for release in July. Meanwhile, the songs of the film was released recently at Radio Mirchi office in Bangalore.

    'Adilakshmi Purana' is produced by Rockline Venkatesh and is written and directed by Priya, who had earlier worked for Maniratnam's films. This is her first film in Kannada. The songs of 'Adilakshmi Purana' has been composed by Anup Bhandari, who had earlier composed songs for 'Rangitaranga' and 'Rajaratha'.

    Nirup Bhandari plays the role of an investigative journalist in the film. The film stars Tara, Suchendra Prasad, Joe Simon, Yash Shetty and others in prominent roles.   

  • Aadi Lakshmi Puraana review: Chitraloka Rating 4 /5*

    adi lakshmi purana review

    One of sandalwood's finest actresses in recent times - Radhika Pandit, has one more reason to smile with Aadi Lakshmi Puraana, delivering on its assurance for a fun-filled entertainment.

    Further, it is also special for the reason that the sandalwood has witnessed back to back release of movies directed by women directors. This time, Priya, who has been groomed under legendary filmmaker such as Maniratnam, has worked on a romantic-comedy with a completely new approach to it.

    On the outset, the tale majorly rests on the two protagonists, Aaditya played by Nirup Bhandari and Lakshmi by Radhika Pandit. While Aadi, an investigating officer dealing with drug mafia crosses path with Lakshmi, who is living a simple life with mischievous attitude of playing harmless pranks and lies on others. Soon, the fun starts to flourish with web of lies taking over the romantic roller coaster.

    Unlike the usual drama, Aadi Lakshmi Puraana breathes freshness and doesn't deviate to good versus bad with rom-com as a booster. But, in fact the cute love story continues to be in focus and everything else is made to take the second fiddle. Preetha Jayaram has done a 'wonderful' job with the camera, which is another strength of the film apart from the love drama and the talented cast pulling it off with ease.

    While Radhika Pandit takes the centre stage for putting her best as Lakshmi, Nirup continues to impress with his acts. His elder brother Anup Bhandari gives the rom-com its perfect rhythm and number to swing along with the lovely tale. Watch the fun and mischievous tale which guarantees 100 per cent of cute, crisp and clean entertainment. Another feather in the cap for Rockline Venkatesh as producer.

     

     

     

     

  • ಅಮ್ಮ ತಾರಾಗೆ ಡಬಲ್ ಖುಷಿ

    thara shines in sinngs an in adi lakshmi purana

    ತಾರಾ ಅನುರಾಧಾಗೆ ಈ ವಾರ ಡಬಲ್ ಡಬಲ್ ಖುಷಿ. ಕಾರಣ ಇಷ್ಟೆ, ಅವರು ತಾಯಿಯಾಗಿ ನಟಿಸಿರುವ ಎರಡು ಚಿತ್ರಗಳು ಈ ವಾರ ರಿಲೀಸ್ ಆಗಿವೆ. ಎರಡೂ ಚಿತ್ರಗಳಲ್ಲಿ ಹೀರೋ, ಹೀರೋಯಿನ್ ಅವರಷ್ಟೇ ಹೈಲೈಟ್ ಆಗಿರುವುದು ತಾರಾ ಅವರ ಅಮ್ಮನ ಪಾತ್ರ.

    ಆದಿ ಲಕ್ಷ್ಮಿ ಪುರಾಣ ಚಿತ್ರದಲ್ಲಿ ನಾಯಕ ನಿರೂಪ್ ಭಂಡಾರಿಗೆ ತಾರಾ ಅಮ್ಮನಾಗಿ ನಟಿಸಿದ್ದಾರೆ. ತಾರಾ ಅವರ ನಟನೆಗೆ ಬಂದಿರುವ ವಿಮರ್ಶೆಗಳು ತಾರಾ ಅವರ ಖುಷಿ ಹೆಚ್ಚಿಸಿರುವುದು ಖರೆ.

    ಸಿಂಗ ಚಿತ್ರದಲ್ಲೂ ನಟ ಚಿರಂಜೀವಿ ಸರ್ಜಾಗೆ ತಾರಾ ಅಮ್ಮ. ಕ್ಲೈಮಾಕ್ಸ್ ಹೊತ್ತಿಗೆ ಇಡೀ ಚಿತ್ರವನ್ನು ತಾರಾ ಆವರಿಸಿಕೊಂಡು ಬಿಡುತ್ತಾರೆ.

    ವಿಶೇಷವೆಂದರೆ ಎರಡೂ ಕಮರ್ಷಿಯಲ್ ಚಿತ್ರಗಳೇ. ಆದರೂ.. ತಾರಾ ಮಿರಮಿರನೆ ಮಿಂಚಿದ್ದಾರೆ.  

  • ಆದಿಲಕ್ಷ್ಮಿ ಪುರಾಣ

    adi lakshmi purana highlights

    ಆದಿ ದಕ್ಷ, ಪ್ರಾಮಾಣಿಕ ಅಧಿಕಾರಿ. ಸುಳ್ಳು ಹೇಳುವವರನ್ನು ಕಂಡ್ರೆ ಆಗೋದಿಲ್ಲ... ಅದು ನಿರೂಪ್ ಭಂಡಾರಿ..

    ಅವನಿಗೆ ಮದುವೆಯಾಗಿಲ್ಲ. ಹುಡುಗಿ ಹುಡುಕುತ್ತಿದ್ದಾರೆ. ಇವನೇ ಯಾರಿಗೂ ಎಸ್ ಅಂತಿಲ್ಲ.. ಇವನಿಗೆ ಎಂತ ಹುಡುಗಿ ಬೇಕು ಅಂದ್ರೆ, ಅವಳನ್ನು ನೋಡಿದ ತಕ್ಷಣ ಮಿಂಚು ಹೊಡೀಬೇಕು. ಹಾರ್ಟಲ್ಲಿ ಸುನಾಮಿ ಎದ್ದೇಳಬೇಕು...

    ನಿರೂಪ್‍ಗೆ ಮಿಂಚು ಹೊಡೆಸಿ, ಸುನಾಮಿಯನ್ನೂ ಏಳುವಂತೆ ಮಾಡುವ ಚೆಲುವೆ ಸಿಂಡ್ರೆಲಾ ರಾಧಿಕಾ ಪಂಡಿತ್.

    ನಿಮ್ಮ ಹೆಸರು ನಂದಿನಿ ಅಲ್ಲ ತಾನೆ.. ಹಳೆಯ ಕಾಲದಿಂದಲೂ ಆ ಹೆಸರಿನ ಹುಡುಗೀರೇ ಹುಡುಗರಿಗೆ ಹುಚ್ಚು ಹಿಡಿಸಿರೋದು ಎನ್ನುವ ಡೈಲಾಗಿನಲ್ಲಿ ಬಂಧನ, ಮುಂಗಾರು ಮಳೆ ಚಿತ್ರಗಳನ್ನೆಲ್ಲ ನೆನಪಿಸಿಬಿಡ್ತಾರೆ.

    ಆದಿ ಲಕ್ಷ್ಮಿ ಲವ್ ಪುರಾಣದ ಕಥೆ ಇಷ್ಟರಲ್ಲೇ ಕುತೂಹಲ ಹುಟ್ಟಿಸಿಬಿಡುತ್ತೆ. ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನದ ಮೊದಲ ಚಿತ್ರವಿದು. 

    ಈಗ ಕುತೂಹಲವನ್ನು ಹಿಮಾಲಯದ ಎತ್ತರಕ್ಕೆ ಹೊತ್ತೊಯ್ಯುವ ಈ ಡೈಲಾಗ್ ಕೇಳಿಬಿಡಿ.

    ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಅಂತಾನೆ ನಾಯಕ. ಓಕೆ ಅನ್ನೋದನ್ನೇ ಕಾಯುತ್ತಿರುವ ನಾಯಕನ ಅಮ್ಮ ತಾರಾ, ಬಾ.. ಹೋಗಿ ಅವರ ಅಪ್ಪ ಅಮ್ಮನನ್ನ ಕೇಳಿಬಿಡೋಣ ಅಂತಾರೆ.

    ನಾವು ಹೆಣ್ಣು ಕೇಳೋದಾದ್ರೆ, ಅವಳ ಗಂಡನನ್ನೇ ಕೇಳಬೇಕು ಅಂತಾನೆ ನಾಯಕ.. ಮುಂದಿನದ್ದು.. ನಿಮ್ಮ ಊಹೆಗೆ ಬಿಟ್ಟಿದ್ದು. ಉತ್ತರ ಸಿಕ್ಕೋದು ಮುಂದಿನ ವಾರ.

  • ಆದಿಲಕ್ಷ್ಮೀ ಪುರಾಣದಲ್ಲಿ ಹೆಣ್ಮಕ್ಳದ್ದೇ ಸಾಮ್ರಾಜ್ಯ

    women power in adilakshmi purana

    ಆದಿಲಕ್ಷ್ಮೀ ಪುರಾಣ, ರಾಧಿಕಾ ಪಂಡಿತ್‍ರನ್ನು 3 ವರ್ಷಗಳ ನಂತರ ತೆರೆಗೆ ತರುತ್ತಿರುವ ಚಿತ್ರವಿದು. ರಾಜರಥ ನಂತರ ನಿರೂಪ್ ಭಂಡಾರಿ ನಟಿಸಿರುವ ಚಿತ್ರವೂ ಆದಿಲಕ್ಷ್ಮೀ ಪುರಾಣ. ಮದುವೆಯಾಗಿರುವ ಹುಡುಗಿಯನ್ ಲವ್ ಮಾಡೋ ಸ್ಟೋರಿ ಇರುವ ಆದಿಲಕ್ಷ್ಮೀಪುರಾಣದಲ್ಲಿ ಹೆಣ್ಮಕ್ಕಳದ್ದೇ ಸಾಮ್ರಾಜ್ಯ.

    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದರೆ, ಚಿತ್ರದ ನಿರ್ದೇಶಕಿ ಪ್ರಿಯಾ. ಆಕೆ ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಹುಡುಗಿ. ಅವರಷ್ಟೇ ಅಲ್ಲ, ಚಿತ್ರದ ಛಾಯಾಗ್ರಹಕಿಯೂ ಪ್ರೀತಾ ಅನ್ನೋ ಇನ್ನೊಬ್ಬ ಹುಡುಗಿ. ಸ್ಸೋ.. ಇಲ್ಲಿ ಚಿತ್ರತಂಡದವರನ್ನೆಲ್ಲ ಆಡಿಸಿರೋದು, ಕುಣಿಸಿರೋದು ಹೆಂಗಸರೇ. ಚಿತ್ರ ರಿಲೀಸ್‍ಗೆ ರೆಡಿಯಾಗಿ ನಿಂತಿದೆ. ಜಸ್ಟ್ ವೇಯ್ಟ್..

  • ಡುಮ್ಮಿ.. ಲಡ್ಡೂ.. ಸೋಡಾಬುಡ್ಡಿ.. ಲಕ್ಷ್ಮೀ.. ರಾಧಿಕಾ ಪಂಡಿತ್

    radhika is a sweet faced liar in adi lakshmi purana

    ಡುಮ್ಮಿ ಲಕ್ಷ್ಮೀ ಎಂದರೂ ಅವಳು ತಿರುಗಿ ನೋಡ್ತಾಳೆ.. ಸೋಡಾಬುಡ್ಡಿ ಅಂದ್ರೂ ಹಾ ಅಂತಾಳೆ.. ಲಡ್ಡೂ ಲಕ್ಷ್ಮಿ ಎಂದರೂ ಓ ಅಂತಾಳೆ.. ಅವಳು ಆದಿಲಕ್ಷ್ಮೀ ಪುರಾಣದ ಲಕ್ಷ್ಮಿ.. ಅರ್ಥಾತ್ ರಾಧಿಕಾ ಪಂಡಿತ್.

    ಇಂತಹ ಮಾತುಗಳನ್ನೇ ಕೇಳಿ ಬೆಳೆದ ಲಕ್ಷ್ಮಿ, ನಾನು ನೋಡೋಕೆ ಚೆನ್ನಾಗಿಲ್ಲ.. ಕುರೂಪಿ ಎನ್ನುವ ಭಾವನೆಯಲ್ಲೇ ಬೆಳೆದಿರುತ್ತಾಳೆ ಲಕ್ಷ್ಮಿ. ಯಾರಾದರೂ ನೀನು ಚೆನ್ನಾಗಿದ್ದೀಯ ಅಂದ್ರೂ ನಂಬೋಕೆ ರೆಡಿ ಇರಲ್ಲ. ಧೋನಿ ಅಂದ್ರೆ ಈ ಲಕ್ಷ್ಮೀಗೆ ಪಂಚಪ್ರಾಣ. ಇಂತಹ ಹುಡುಗಿಯನ್ನು  ಆದಿ ಅರ್ಥಾತ್ ನಿರೂಪ್ ಭಂಡಾರಿ ಲವ್ ಮಾಡ್ತಾರೆ. ಅಷ್ಟು ಹೊತ್ತಿಗೆ ಈ ಲಡ್ಡೂಗೆ ಮದುವೆಯಾಗಿ 7 ವರ್ಷದ ಮಗುವೂ ಇರುತ್ತಾ..? ಟ್ರೇಲರ್ ನೋಡೋವ್ರಿಗೆ ಕಾಡುವ ಕುತೂಹಲವಿದು.

    ನಿರ್ದೇಶಕಿ ಪ್ರಿಯಾ, ಸುಳ್ಳುಗಳಿಂದಲೇ ತುಂಬಿ ತುಳುಕುವ ಒಂದು ಮಜಾ ಸ್ಟೋರಿ ಹೇಳಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಆದಿ ಲಕ್ಷ್ಮೀ ಪುರಾಣ ಚಿತ್ರ ಈಗ ಥಿಯೇಟರುಗಳಲ್ಲಿದೆ. ನೋಡಿ.. ಮಜಾ ಮಾಡಿ..

  • ಮಂಡ್ಯ ಜನರಿಗೆ ರಾಕ್‍ಲೈನ್ ಕೃತಜ್ಞತೆ ಸಲ್ಲಿಸ್ತಿರೋದು ಹೀಗೆ.

    rockline venkatesh thanks mndya people

    ಮಂಡ್ಯ ಎಲೆಕ್ಷನ್, ಅದು ಇಡೀ ರಾಜ್ಯ ರಾಜಕೀಯಕ್ಕೆ ಅಂಟಿಸಿದ ಬಿಸಿ, ಏರಿಸಿದ ಬಿಪಿ, ಕೊಟ್ಟ ರಿಸಲ್ಟು ಎಲ್ಲವನ್ನೂ ಕಣ್ಣಾರೆ ನೋಡಿರುವವರಿಗೆ ರಾಕ್‍ಲೈನ್ ವೆಂಕಟೇಶ್ ಯಾರ ಪರ ಇದ್ದರು ಎನ್ನುವುದು ಗುಟ್ಟೇನಲ್ಲ. ಬಹಿರಂಗವಾಗಿಯೇ ಸುಮಲತಾ ಅಂಬರೀಷ್ ಪರ ಕಾಣಿಸಿಕೊಂಡಿದ್ದ ರಾಕ್‍ಲೈನ್ ವೆಂಕಟೇಶ್, ಸುಮಲತಾ ಗೆಲುವಿನ ನಂತರವಂತೂ ಮಂಡ್ಯ ಜನರನ್ನು, ಅಂಬಿ ಅಭಿಮಾನಿಗಳಿಗೆ ಏನೋ ಒಂದು ವಿಶೇಷ ಕೊಡುಗೆ ಕೊಡಬೇಕು ಎಂದು ನಿರ್ಧರಿಸಿಯೇಬಿಟ್ಟರು.

    ನೀವು ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಆದಿ ಲಕ್ಷ್ಮಿ ಪುರಾಣ ಚಿತ್ರದ ಟ್ರೇಲರ್ ನೋಡಿದ್ದೀರಲ್ಲ. ಆ ಟ್ರೇಲರ್‍ನಲ್ಲಿ `ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಆಶೀರ್ವಾದದೊಂದಿಗೆ.. ಎಂಬ ಸಾಲು, ನಡುವೆ ಅಂಬರೀಷ್ ಫೋಟೋ.. ಅಕ್ಕಪಕ್ಕದಲ್ಲಿ ಕಹಳೆಯೂದುತ್ತಿರುವ ರೈತ (ಸುಮಲತಾ ಅವರ ಚಿಹ್ನೆಯಾಗಿತ್ತು)ರ ಫೋಟೋ ಬರುತ್ತವೆ. ತಮ್ಮ ಪ್ರತಿ ಚಿತ್ರದಲ್ಲೂ ಈ ಸಾಲುಗಳ ಮೂಲಕವೇ ಮಂಡ್ಯ ಜನರನ್ನು ಸ್ಮರಿಸುತ್ತೇನೆ ಎಂದು ಘೋಷಿಸಿದ್ದಾರೆ ರಾಕ್‍ಲೈನ್ ವೆಂಕಟೇಶ್. ಆ ಘೋಷಣೆ ಆದ ಮೇಲೆ ರಿಲೀಸ್ ಆಗುತ್ತಿರುವ ರಾಕ್‍ಲೈನ್ ನಿರ್ಮಾಣದ ಮೊದಲ ಸಿನಿಮಾ ಆದಿಲಕ್ಷ್ಮೀ ಪುರಾಣ. 

    ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಚಿತ್ರಕ್ಕೆ ಮಣಿರತ್ನಂ ಅವರ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನವಿದೆ. ರಾಕ್‍ಲೈನ್ ವೆಂಕಟೇಶ್ ಭಾರತೀಯ ಚಿತ್ರರಂಗದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರು. ಹೀಗಾಗಿಯೇ ಆದಿಲಕ್ಷ್ಮೀ ಪುರಾಣ ಕುತೂಹಲ ಕೆರಳಿಸುತ್ತಿದೆ.

  • ರಾಧಿಕಾ ಪಂಡಿತ್ ಸಿನಿಮಾಗೆ ಯಶ್ ಪ್ರಮೋಷನ್

    adilakshmi purana trailer will release by yash

    ಆದಿ ಲಕ್ಷ್ಮೀ ಪುರಾಣ, ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಚಿತ್ರ. ಮುಂದಿನ ವಾರ ರಿಲೀಸ್ ಆಗುತ್ತಿರೋ ಈ ಚಿತ್ರದ ಪ್ರಮೋಷನ್‍ಗ ಈಗ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ. ಬೆಳ್ಳಿತೆರೆಗೆ ಬರುತ್ತಿರುವ ಪತ್ನಿಗೆ ಈಗ ಪತಿಯ ಬಲ.

    ನಾಳೆ ಅಂದರೆ ಜುಲೈ 12ರಂದು ಆದಿಲಕ್ಷ್ಮೀ ಪುರಾಣದ ಹೊಸದೊಂದು ಟ್ರೇಲರ್ ರಿಲೀಸ್ ಆಗುತ್ತಿದೆ. ಆ ಟ್ರೇಲರ್‍ನ್ನು ರಿಲೀಸ್ ಮಾಡುತ್ತಿರುವುದು ಯಶ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ನಿರೂಪ್ ಭಂಡಾರಿ ಹೀರೋ. ಪ್ರಿಯಾ ಎಂಬುವವರು ನಿರ್ದೇಶಿಸಿರುವ ಮೊದಲ ಚಿತ್ರ ಆದಿಲಕ್ಷ್ಮೀ ಪುರಾಣ.

  • ರಾಧಿಕಾ ಪಂಡಿತ್ ಸ್ವಾಗತಕ್ಕೆ ಸಿದ್ಧರಾಗಿ..

    adilakshmi purana coming soon

    ರಾಧಿಕಾ ಪಂಡಿತ್ ತೆರೆಯ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ 3 ವರ್ಷ. ಮದುವೆ.. ಬಾಣಂತನ, ಕಂದನ ಆರೈಕೆಗಳಲ್ಲೇ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ಮತ್ತೆ ಬರುತ್ತಿದ್ದಾರೆ. ಅಫ್‍ಕೋರ್ಸ್, ಇದು ಯಶ್ ಮದುವೆಯಾದ ಮೇಲೆ ಅವರು ನಟಿಸಿದ್ದ ಸಿನಿಮಾ. ಆದಿಲಕ್ಷ್ಮೀ ಪುರಾಣ.

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.

    ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ಚಿತ್ರದ ಬಿಡುಗಡೆಗೆ ವ್ಯವಸ್ಥೆಗಳಾಗುತ್ತಿದ್ದು, ಜೂನ್ 21ಕ್ಕೆ ಆದಿಲಕ್ಷ್ಮೀ ಪುರಾಣದ ಆಡಿಯೋ ರಿಲೀಸ್ ಆಗಲಿದೆ. ಜುಲೈನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.

  • ಸುಹಾಸಿನಿ ಮೆಚ್ಚಿದ ಕಥೆ, ರಾಕ್‍ಲೈನ್‍ಗೆ ತಲುಪಿದ ಹಾದಿಯೇ ರೋಚಕ

    adi lakshmi purana has interesting story

    ಆದಿ ಲಕ್ಷ್ಮೀ ಪುರಾಣ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ವಾರ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕಿ ಪ್ರಿಯಾ ಹಾಗೂ ಕ್ಯಾಮೆರಾಮನ್ ಪ್ರೀತಾ ಜಯರಾಮನ್ ಇಬ್ಬರೂ ಮಹಿಳೆಯರೇ. ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿರುವ ಮೊದಲ ಚಿತ್ರವೂ ಇದೇ.. ಹೀಗೆ ವಿಶೇಷಗಳ ಮೇಲೆ ವಿಶೇಷವಿರುವ ಚಿತ್ರದ ಮತ್ತೂ ಒಂದು ವಿಶೇಷವೆಂದರೆ ಚಿತ್ರದ ಕಥೆ.

    ಮಣಿರತ್ನಂ ಬಳಿ ಸಹಾಯಕಿಯಾಗಿದ್ದ ಪ್ರಿಯಾ, ತಮ್ಮ ಕಥೆಯನ್ನು ಸುಹಾಸಿನಿ ಅವರ ಬಳಿಯೂ ಹೇಳಿದ್ದರು. ಕಥೆ ಸುಹಾಸಿನಿಗೆ ಇಷ್ಟವಾಗಿತ್ತು. ಆ ಕಥೆಯನ್ನು ಅವರು ಯಶ್‍ಗೆ ಹೇಳಿದರು. ಹೀಗೆ ಸುಹಾಸಿನಿ ಇಷ್ಟ ಪಟ್ಟು ಶುರುವಾದ ಕಥೆ ಈಗ ಸಿನಿಮಾ ಆಗಿದೆ.

    ನಿರೂಪ್ ಭಂಡಾರಿ, ರಾಧಿಕಾ ಪಂಡಿತ್ ಪಾತ್ರಗಳು, ಆ ಪಾತ್ರಗಳು ಪರಸ್ಪರ ಹೇಳಿಕೊಳ್ಳುವ ಸುಳ್ಳುಗಳು, ಅವು ಸೃಷ್ಟಿಸುವ ಅವಾಂತರಗಳು.. ಅಬ್ಬಾ.. ತೆರೆಯ ಮೇಲೆ ಅದರಿಂದ ಸೃಷ್ಟಿಯಾಗುವ ಗೊಂದಲಗಳು ಮಜಾ ಕೊಡುತ್ತವೆ ಎನ್ನುತ್ತಾರೆ ರಾಕ್‍ಲೈನ್ ವೆಂಕಟೇಶ್.