` bhajarangi 2, - chitraloka.com | Kannada Movie News, Reviews | Image

bhajarangi 2,

  • 'Bhajarangi 2' Team To Give A Surprise Gift To Shivanna

    bhajarangi 2 team to give a surprise gift to shivanna

    Shivarajakumar's new film 'Bhajarangi 2' being directed by A Harsha was launched last year and the film is almost complete. If everything had gone according to plans, the film would have been released by now. But due to lockdown, the film 's release has been postponed indefinitely.

    Director A Harsha who is busy with the post-production of the film in the last few days has decided to give a surprise gift to Shivarajakumar on his birthday, the 12th of July. Harsha has not revealed anything about his plans, but fans are looking forward for the surprise gift.

    'Bhajarangi 2' is Shivarajakumar and Harsha's third film after 'Bhajarangi' and 'Vajrakaya'. The film is being produced by Jayanna and Bhogendra under the Jayanna Combines banner. Bhavana Menon is the heroine of the film.

  • 'Bhajarangi 2' Teaser Gets One Million Views In 24 Hours

    bhajarangi 2 teaser gets one million views in 24 hours

    The teaser of Shivarajakumar starrer 'Bhajarangi 2' was released on Sunday on account of the actor's birthday. The teaser has got one million views in 24 hours.

    Though director A Harsha has not revealed anything about the film, the sequel like its original is a fantasy with lot of horror and thriller elements in it. Apart from Shivarajakumar, Shruthi and others also garners attention of the viewers.

    The shooting for 'Bhajarangi 2' is almost complete except for a few days. The film would have been released by now, if not for lock down. The team plans to complete the rest of the shooting once everything comes to normalcy.

    'Bhajarangi 2' is written and directed by A Harsha. Jayanna and Bhogendra have produced the film under the Jayanna Films banner. Arjun Janya has composed the music while, Swamy Gowda is the cinematographer. 

  • 'Bhajarangi 2' Teaser On 12th July

    bhajarangi 2 teaser on 12th july

    Director A Harsha had announced that the team of 'Bhajarangi 2' is all set to give a surprise gift to actor Shivarajakumar on his birthday. Now the surprise has been revealed and the team will be releasing the official teaser of the film on the 12th of July.

    The official teaser will be released on the 12th of July at 11.30 AM in A2 music channel of Youtube. The team is busy with the final touches of the teaser and the teaser is expected to be final in a couple of days.

    'Bhajarangi 2' is Shivarajakumar and Harsha's third film after 'Bhajarangi' and 'Vajrakaya'. The film is being produced by Jayanna and Bhogendra under the Jayanna Combines banner. Bhavana Menon is the heroine of the film.

  • Bhajarangi 2 Movie Review; Chitraloka Rating 4/5

    Bhajarangi 2 Movie Review; Chitraloka Rating 4/5

    Film: Bhajarangi 2

    Director: A Harsha 

    Cast: Shiva Rajkumar, Bhavana Menon, Shruthi, Saurav Lokesh, Shivaraj KR Pete, Cheluvaraj

    Duration: 157 minutes

    Certificate: U/A 

    Stars:  4 

    A perfect family fantasy for the holidays 

    This sequel to the 2013 film took some time to arrive. The original however is still fresh in memory having created a fantasy world quite unlike the regular run-of-the-mill commercial films. There was superhero elements, a make-believe world fully of unworldly entities and intriguing characters. 

    The sequel takes things further into a world that is more spacatcular, fanciful and filled with outrageous characters. This is the best of the world of Chandamama brought to life. A fantasy world requires you to suspend all disbelief and junk your thinking cap. If you are game enough for that, Bhajarangi 2 is the film you should head to in the holidays. And don't forget the kids. 

    When I say take the kids, I say it with caution. Some of the bloodshed and gore was not necessary. Instead of the Disney approach, the director takes the Tollywood approach here. 

    The story has the elements that define a fantasy; an ancient secret, a reluctant hero, fables and sorcery, a timeless period and a wrong waiting to be avenged. Anji arrives at a remote place, which could be straight out of KGF. However, it is not just populated by bearded villains. It has superhuman and supernatural dwellers too. 

    In the first half, the premise is established and every character is given time and space to define themselves. Shivarajkumar deserves applause for allowing jokes to be made on his age and appearance. Shruti, Bhavana, Kuri Pratap become the filler elements to the unfolding bigger picture. 

    In the second half, despite a grand premise and an extravagant display, the goosebump do not make themselves apparent easily. However the grandeur and special effects do their business very well and the awe element kicks in. The second half is longer and packs in most of the plot twists. 

    An ancient tribe exploited for their traditional knowledge by an evil lord gets the 'Bhajarangi' treatment with a similar twist like in the original movie. But this one is bigger and more extravagant. 

    The looks of the characters play a major role in the presentation. They get stranger and more graphical than before. Some of the scenes and dialogues are bound to remind you of Puneeth Rajkumar. It is wholly unintended but the current situation makes the comparison inevitable. 

    Bhajarangi 2 is a fantasy you would enjoy with your family, especially with kids along. The holiday release has a reason.

  • Bhajarangi 2' From June 20th

    bhajarangi 2 from june 10th

    Shivarajakumar acting in a new film to be directed by A Harsha and the film being titled as 'Bhajarangi 2' is not a big or new news. The new news is that, the film is all set to be launched on the 20th of June.

    Shivarajakumar is currently busy shooting for his new film tentatively titled 'Anand' in Mangalore. After the completion of a major schedule of the film, Shivarajakumar is expected to be a part of 'Bhajarangi 2' from the 20th of June. The first schedule will span up to the 05th of June and the team intends to complete prominent scenes of the film.

    'Bhajarangi 2' is being directed by A Harsha, while Jayanna and Bhogendra are the producers. Bhavana Menon has been roped in as the heroine of the film. Shivarajakumar and Bhavana are paired once again after the success of 'Tagaru' 

  • Bhajarangi 2' Launched

    bhajarangi 2 launched

    Shivarajakumar's new film 'Bhajarangi 2' being directed by A Harsha was launched on Thursday morning in Bangalore. Shivarajakumar's wife Geetha Shivarajakumar sounded the clap for the first shot of the film. 

    This is Shivarajakumar and Harsha's third film after 'Bhajarangi' and 'Vajrakaya'. Though the film has been titled as 'Bhajarangi 2', the film has nothing to do with 'Bhajarangi', nor is a sequel to the hit film.

    'Bhajarangi 2' is being produced by Jayanna and Bhogendra under the Jayanna Combines banner. This is Jayanna's third film after 'Mufti' and 'Rustom'. Bhavana Menon is the heroine of the film.

  • Shivanna Back In Action

    shivanna back in action

    Karunada Chakravarthy Dr. Shivarajkumar who was missing in action for over a month since he was recovering post surgery on his shoulder, is set to return for shooting from September 10.

    Shivanna will start shooting for Harsha's third venture with him for 'Bhajarangi 2'. According to sources, the choreographer turned director, A Harsha has erected a grand set for the shooting of Bhajarangi 2 at a studio in Bengaluru, as Shivanna has given his green signal for the shooting from next Tuesday.

    Insofar as Shivanna's health is considered, the century star has recovered well post surgery, and was even seen dancing to his popular number from Tagaru at a public event recently.

    He underwent surgery in the month of July on his right shoulder in London. Sources close to the actor revealed that Shivanna recovered fast and was seen moving his right arm swiftly the very next day after the surgery. They further add that he is these undergoing physiotherapy and that apart he is back to routine exercises including weight lifts.

  • ಎಂತ ಎಂಥಾ ವೇಷಾನೋ ಭಜರಂಗಿ..?

    ಎಂತ ಎಂಥಾ ವೇಷಾನೋ ಭಜರಂಗಿ..?

    ಇಳಿಬಿಟ್ಟ ಕೂದಲು.. ಜಟೆ ಕಟ್ಟಿದಂತಾ ತಲೆ.. ಕೂದಲಿನಲ್ಲೇ ಮಾಡಿದ್ದಾರೇನೋ ಎನ್ನುವಂತಾ ಕಿರೀಟ.. ವಿಚಿತ್ರ ಮೀಸೆ.. ಶೃತಿಯಂತಾ ಶೃತಿ ಕೈಲೊಂದು ಚುಟ್ಟಾ.. ನಗುವಿಗೇ ಫೇಮಸ್ ಆಗಿರೋ ಜಾಕಿ ಭಾವನಾ ಕಣ್ಣಲ್ಲಿ ಕೆಂಡ ಕೆಂಡ.. ಒಂದಾ ಎರಡಾ.. ಒಬ್ಬೊಬ್ಬರದ್ದೂ ಒಂದೊಂದು ಅವತಾರ. ಅದನ್ನೆಲ್ಲ ನೋಡಿದಾಗ ನೆನಪಾಗುವುದೇ ಶಿವಣ್ಣ ಅಭಿನಯದ ಹಗಲುವೇಷ ಚಿತ್ರದ ಎಂತಾ ಎಂತಾ ವೇಷಾನೋ.. ಹಾಡು.

    ಸ್ಕ್ರಿಪ್ಟ್ ಮಾಡುವಾಗಲೇ ನನಗೆ ಪ್ರತಿಯೊಬ್ಬರ ಲುಕ್ ಬಗ್ಗೆ ಸ್ಪಷ್ಟತೆಯಿತ್ತು. ಹೇರ್ ಸ್ಟೈಲ್, ಕಣ್ಣಿನ ಕಲರ್ ಸೇರಿದಂತೆ ಸಣ್ಣ ಸಣ್ಣ ವಿಚಾರಗಳಲ್ಲೂ ಪರ್ಟಿಕ್ಯುಲರ್ ಆಗಿದ್ದೆ.  ಒಬ್ಬೊಬ್ಬ ವಿಲನ್ ಕೈಲೂ ಒಂದೊಂದು ಡಿಸೈನ್ ಆಯುಧ. ಆ ಆಯುಧಗಳೂ ಕೂಡಾ ಫ್ಯಾನ್ಸಿ ಅಲ್ಲ. ಆ ಆಯುಧಗಳಿಗೂ ಕಥೆ ಇದೆ. ರೀಸನ್ ಇದೆ. ಅವೆಲ್ಲವನ್ನೂ ಸಿದ್ಧ ಮಾಡಿಕೊಂಡ ನಂತರ ಸೃಷ್ಟಿಯಾಗಿದ್ದೇ ಭಜರಂಗಿ 2 ಎಂದು ಮಾಹಿತಿ ಕೊಟ್ಟಿದ್ದಾರೆ ಹರ್ಷ.

    ಎಲ್ಲ ಕಲ್ಪನೆಯನ್ನೂ ನಾನು ವಿವರಿಸಿದ್ದು ಆರ್ಟ್ ಡೈರೆಕ್ಟರ್ ರವಿ ಹಾಗೂ ಕಾಸ್ಟ್ಯೂಮ್ ಡಿಸೈನರ್ ಯೋಗಿಗೆ. ಅವರು ನಾನು ಹೇಳಿದ್ದೆಲ್ಲವನ್ನೂ ನಾನು ಹೇಳಿದ್ದಕ್ಕಿಂತ ಅದ್ಭುತವಾಗಿ ತೆರೆಯ ಮೇಲೆ ಬರುವಂತೆ ಮಾಡಿದರು. ಮೇಕಪ್‍ಗೇ ತುಂಬಾ ಸಮಯ ಹಿಡಿಯುತ್ತಿತ್ತು. ಒಂದೊಂದು ಕ್ಯಾರೆಕ್ಟರ್‍ಗೂ ಒಂದೊಂದು ಸ್ಟೈಲ್ ಮೇಕಪ್. ಅದನ್ನು ಹೇಗೆ ಮಾಡಬೇಕು ಎಂಬುದಕ್ಕೇ ಸಾಕಷ್ಟು ರಿಸರ್ಚ್ ಮಾಡಿದ್ದೇವೆ. ಪ್ರಕಾಶ್ ಅದನ್ನು ಅದ್ಭುತವಾಗಿ ನಿಭಾಯಿಸಿದರು ಎನ್ನುವ ಹರ್ಷ, ಹೀರೋ ಶಿವಣ್ಣ ಮೇಕಪ್‍ಗೆ ಎಷ್ಟು ಪ್ರಾಮುಖ್ಯತೆ ಇದೆಯೋ.. ಚಿತ್ರದಲ್ಲಿ ಬರೋ ಜೂನಿಯರ್ ಆರ್ಟಿಸ್ಟುಗಳಿಗೂ ಅಷ್ಟೇ ಇಂಪಾರ್ಟೆನ್ಸ್ ಇದೆ ಎಂದಿದ್ದಾರೆ.

    ಚಿತ್ರದ ಕೊರಿಯೋಗ್ರಾಫರ್ ಸ್ವತಃ ಹರ್ಷ. ಸಿನಿಮಾಟೋಗ್ರಫಿ ಸ್ವಾಮಿ ಅವರದ್ದು. ಚಿತ್ರದ ಬೆನ್ನೆಲುಬೇ ಅವರು ಎನ್ನುವ ಹರ್ಷ, ಚಿತ್ರದ ಮೇಕಿಂಗ್‍ನಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಅವರೀಗ ಕಾಯ್ತಿರೋದು ಚಿತ್ರ ನೋಡುವ ಪ್ರೇಕ್ಷಕರು ಕೊಡೋ ಜೈಕಾರಕ್ಕೆ.

  • ಒಟಿಟಿಯಲ್ಲಿ ಭಜರಂಗಿ 2 ಹೊಸ ದಾಖಲೆ

    ಒಟಿಟಿಯಲ್ಲಿ ಭಜರಂಗಿ 2 ಹೊಸ ದಾಖಲೆ

    ಭಜರಂಗಿ 2. ಸಿನಿಮಾ ರಿಲೀಸ್ ಆದ ದಿನ ಚಿತ್ರವನ್ನು ನೋಡಿದವರೆಲ್ಲ ಮೆಚ್ಚಿದ್ದರು. ಆದರೆ, ಆ ದಿನವೇ ಪುನೀತ್ ಅವರ ಅಗಲಿಕೆಯೊಂದಿಗೆ ಸಿನಿಮಾಗೆ ಹೊಡೆತ ಬಿದ್ದಿತ್ತು. ಒಂದು ಹಂತಕ್ಕೆ ಗೆದ್ದರೂ, ದೊಡ್ಡ ಮಟ್ಟದ ಗೆಲುವು ದೂರ ಸರಿದುಬಿಟ್ಟಿತು. ಆದರೆ ಒಟಿಟಿಯಲ್ಲಿ ಭಜರಂಗಿ 2 ದೊಡ್ಡ ಮಟ್ಟದ ದಾಖಲೆ ಬರೆಯುತ್ತಿದೆ.

    16+ ದಿನಗಳಲ್ಲಿ ಭಜರಂಗಿಯನ್ನು ಒಟಿಟಿಯಲ್ಲಿ ಜನ 10 ಕೋಟಿ ನಿಮಿಷ ನೋಡಿದ್ದಾರೆ. ಕನ್ನಡದ ಚಿತ್ರವೊಂದು ಒಟಿಟಿಯಲ್ಲಿ ಕಡಿಮೆ ಅವಧಿಯಲ್ಲಿ ಇಷ್ಟು ನಿಮಿಷಗಳ ವೀಕ್ಷಣೆ ಪಡೆದಿರುವುದೂ ಒಂದು ದಾಖಲೆ.

    ಶಿವಣ್ಣ, ಹರ್ಷ ಮತ್ತು ಜಯಣ್ಣ ಭೋಗೇಂದ್ರ ಕಾಂಬಿನೇಷನ್ನಿನ ಭಜರಂಗಿ 2 ಭರ್ಜರಿ ಗೆಲುವನ್ನೇ ಕಂಡಿದೆ.

  • ಕಣ್ಣಲ್ಲೇ ಕಿಚ್ಚು ಹಚ್ಚಿದ ಶಿವಣ್ಣ

    ಕಣ್ಣಲ್ಲೇ ಕಿಚ್ಚು ಹಚ್ಚಿದ ಶಿವಣ್ಣ

    ಶಿವರಾಜ್ ಕುಮಾರ್ ಕಣ್ಣಿನಲ್ಲಿ ಒಂದು ಆಕರ್ಷಣೆ ಎಂದು ಉಪೇಂದ್ರ ಹೇಳುತ್ತಿದ್ದರು. ಓಂನಲ್ಲಿ ಅದನ್ನು ಅದ್ಭುತವಾಗಿ ಬಳಸಿಕೊಂಡೂ ಇದ್ದರು. ಶಿವಣ್ಣ ಕಣ್ಣಿನಲ್ಲೇ ಆಟವಾಡಿ ಗೆಲ್ಲಿಸಿದ್ದ ಸಿನಿಮಾ ಮಫ್ತಿ. ಈಗ ಮತ್ತೊಮ್ಮೆ ಅವರ ಕಣ್ಣ ಮೇಲೆ ಕಣ್ಣಿಟ್ಟು ಕಿಚ್ಚು ಹಚ್ಚಿಸಿದ್ದಾರೆ ಎ.ಹರ್ಷ.

    ಜಯಣ್ಣ ನಿರ್ಮಾಣದ ಭಜರಂಗಿ 2 ಚಿತ್ರದ ಮೋಷನ್ ಪೋಸ್ಟರ್ನಲ್ಲಿ ಹರ್ಷ ತೋರಿಸೋದು ಶಿವಣ್ಣ ಅವರ ಕಣ್ಣು ಮಾತ್ರ. ಮೇ 14ಕ್ಕೆ ರಿಲೀಸ್ ಆಗಲಿರುವ ಭಜರಂಗಿ 2 ಚಿತ್ರದ ಮೋಷನ್ ಪೋಸ್ಟರ್ ವಿಭಿನ್ನವಾಗಿರುವುದಂತೂ ಸತ್ಯ. ಇದು ಯಾವ ರೀತಿಯ ಕಥೆ ಎಂಬ ಕುತೂಹಲ ಸೃಷ್ಟಿಸುವಲ್ಲಿ ಗೆದ್ದಿದೆ.

    ಶಿವಣ್ಣ ಎದುರು ಭಾವನಾ ಮೆನನ್ ನಾಯಕಿಯಾಗಿದ್ದರೆ, ಶ್ರುತಿ ಪ್ರಧಾನ ಪಾತ್ರದಲ್ಲಿದ್ದಾರೆ. ಭಜರಂಗಿ ಲೋಕಿ ಇನ್ನೊಮ್ಮೆ ಅಬ್ಬರಿಸುವ ಸುಳಿವು ಕೊಟ್ಟಿದ್ದಾರೆ.

  • ಗಣೇಶ ಹಬ್ಬಕ್ಕೆ ಬಂದೇ ಬರ್ತಾನೆ 2ನೇ ಭಜರಂಗಿ

    ಗಣೇಶ ಹಬ್ಬಕ್ಕೆ ಬಂದೇ ಬರ್ತಾನೆ 2ನೇ ಭಜರಂಗಿ

    ಕೊನೆಗೂ ನಿರೀಕ್ಷೆ ಈಡೇರುತ್ತಿದೆ. ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ಸ್ಟಾರ್ ಚಿತ್ರ ರಿಲೀಸ್ ಆಗುತ್ತಿದೆ. ಭಜರಂಗಿ 2 ಚಿತ್ರವನ್ನು ಗಣೇಶ ಹಬ್ಬಕ್ಕೇ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ ನಿರ್ಮಾಪಕ ಜಯಣ್ಣ. ಗಣೇಶನ ಹಬ್ಬಕ್ಕೆ ರಿಲೀಸ್ ಎಂದಿದ್ದರೂ, ಸರ್ಕಾರದ ಮೀನಾಮೇಷದ ಮಾತು, ಯು ಟರ್ನ್ ನಿರ್ಧಾರಗಳ ಭೀತಿಯಿಂದಾಗಿ ಕಾದು ನೋಡೋದಾಗಿ ಹೇಳಿದ್ದರು ಜಯಣ್ಣ. ಈಗ ಆದದ್ದಾಗಲೀ.. ನೋಡೇಬಿಡೋಣ ಎಂದು ಮುನ್ನುಗ್ಗಿದ್ದಾರೆ.

    ಶಿವರಾಜ್ ಕುಮಾರ್, ಎ.ಹರ್ಷ, ಶೃತಿ, ಜಾಕಿ ಭಾವನಾ, ಭಜರಂಗಿ ಲೋಕಿ ಕಾಂಬಿನೇಷನ್ ಇರೋ ಚಿತ್ರವಿದು. ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್, ಹಾಡುಗಳು ವ್ಹಾವ್ ಎನ್ನುವಂತೆ ಮೂಡಿಬಂದಿವೆ. ಪ್ರೇಕ್ಷಕರ ಮೆಚ್ಚುಗೆಯನ್ನೂ ಗಿಟ್ಟಿಸಿವೆ.

    ಸದ್ಯಕ್ಕೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಸರ್ಕಾರ ಅವಕಾಶನೀಡಿದೆ. ಶೇ.100ರಷ್ಟು ಅವಕಾಶಕ್ಕೆ ಕಾಯುತ್ತೇವೆ ಎಂದಿದ್ದ ಜಯಣ್ಣ, ಶೇ.50ರ ನಿಯಮದಲ್ಲೇ ಚಿತ್ರ ರಿಲೀಸ್ ಮಾಡುತ್ತಿದ್ದಾರೆ. ಅದೂ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ.

    ಮೊದಲ ಲಾಕ್ ಡೌನ್ ಮುಗಿದ ಮೇಲೆ ತಮಿಳಿನ ಮಾಸ್ಟರ್ ರಿಲೀಸ್ ಆಗಿತ್ತು. ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸಿದ್ದ ಚಿತ್ರ ಶೇ.50ರ ಅನುಮತಿಯಲ್ಲೇ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿತ್ತು ಎಂದು ನೆನಪಿಸಿರುವ ಜಯಣ್ಣ, ಚಿತ್ರದ ಕಥೆ ಮೇಲೆ ಭಾರಿ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದಾರೆ. ಗುಡ್ ಲಕ್.

  • ತಂತ್ರ.. ಮಂತ್ರ.. ಛೂಮಂತ್ರ.. ಬಂಭಂಬಂಭಂಬಬಮ್ ಭಜರಂಗಿ

    ತಂತ್ರ.. ಮಂತ್ರ.. ಛೂಮಂತ್ರ.. ಬಂಭಂಬಂಭಂಬಬಮ್ ಭಜರಂಗಿ

    ಅಕ್ಟೋಬರ್ 29ಕ್ಕೆ ರಿಲೀಸ್ ಆಗುತ್ತಿರೋ ಭಜರಂಗಿ 2 ಚಿತ್ರದ ಟ್ರೇಲರ್ ಬಂದಿದೆ. ಶಿವಣ್ಣ ಎಂಟ್ರಿ, ಮಾಂತ್ರಿಕರ ಅಟ್ಟಹಾಸ, ಭಾವನಾ, ಶ್ರುತಿಯವರ ಬೆರಗು ಹುಟ್ಟಿಸುವ ಲುಕ್ಕುಗಳು, ಲೋಕಿಯ ಭಯಂಕರ ವೇಷ.. ಒಂದಲ್ಲ..ಎರಡಲ್ಲ.. ಜೊತೆಗೆ ಇವೆಲ್ಲಕ್ಕೂ ಕಳಶವಿಟ್ಟಂತೆ ಇರುವ ಬ್ಯಾಕ್ ಗ್ರೌಂಡ್ ಮ್ಯೂಸಿಕ್.. ಒಂದಕ್ಕೊಂದು ಪೈಪೋಟಿಗೆ ಬಿದ್ದಂತಿರುವ ಟ್ರೇಲರ್‍ನಲ್ಲಿ ಗಮನ ಸೆಳೆಯುತ್ತಿರುವುದು ಚಿತ್ರದ ಮೇಕಿಂಗ್.

    ಹರ್ಷ ನಿರ್ದೇಶನದಲ್ಲಿ ಬಂದಿರುವ ಭಜರಂಗಿ 2, ದೀಪಾವಳಿ ಹಬ್ಬದ ರಂಗೇರಿಸುವ ಸೂಚನೆ ನೀಡಿದೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಸಿನಿಮಾಗೆ ಸೆನ್ಸಾರ್‍ನವರು ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಒಟ್ಟಾರೆ 2 ಗಂಟೆ 35 ನಿಮಿಷ 13 ಸೆಕೆಂಡುಗಳ ಚಿತ್ರ ಭಜರಂಗಿ 2. ಅಕ್ಟೋಬರ್ 29ರಂದು 350ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ಮಾಪಕ ಜಯಣ್ಣ.

  • ನಾಡಹಬ್ಬಕ್ಕೆ ಸಲಗ, ಕೋಟಿಗೊಬ್ಬ 3 : ಅ.29ಕ್ಕೆ ಭಜರಂಗಿ 2

    ನಾಡಹಬ್ಬಕ್ಕೆ ಸಲಗ, ಕೋಟಿಗೊಬ್ಬ 3 : ಅ.29ಕ್ಕೆ ಭಜರಂಗಿ 2

    ಕೊರೊನಾ ಭೀತಿ ದೂರವಾಗಿ, ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೊಟ್ಟ ಬೆನ್ನಲ್ಲೇ ಚಿತ್ರರಂಗ ಚುರುಕಾಗಿದೆ. ಅಕ್ಟೋಬರ್ 1ರಿಂದಲೇ 100% ಪ್ರೇಕ್ಷಕರಿಗೆ ಅವಕಾಶ ಸಿಕ್ಕರೂ, ಅಕ್ಟೋಬರ್ 14ರಿಂದ ಸ್ಟಾರ್ ಚಿತ್ರಗಳು ಎಂಟ್ರಿ ಕೊಡಲಿವೆ.

    ಅಕ್ಟೋಬರ್ 14ಕ್ಕೆ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಒಟ್ಟಿಗೇ ರಿಲೀಸ್ ಆಗಲಿವೆ. ಶಿವಣ್ಣ ಅಭಿನಯದ ಭಜರಂಗಿ 2, ತಿಂಗಳ ಕೊನೆಗೆ ಅಕ್ಟೋಬರ್ 29ಕ್ಕೆ ಬರಲಿದೆ. ಅಕ್ಟೋಬರ್ 8ಕ್ಕೆ ಧನ್ಯಾ ರಾಮ್‍ಕುಮಾರ್ ಅಭಿನಯದ ಮೊದಲ ಸಿನಿಮಾ ನಿನ್ನಾ ಸನಿಹಕೆ ರಿಲೀಸ್ ಆಗುತ್ತಿದೆ.

    ಸಲಗ ಮತ್ತು ಕೋಟಿಗೊಬ್ಬ 3 ಒಟ್ಟಿಗೇ ಬಂದರೆ ಸಮಸ್ಯೆಯಾಗುವುದಿಲ್ಲವೇ? ಥಿಯೇಟರ್ ಸಮಸ್ಯೆ ಎದುರಾಗುವುದಿಲ್ಲವೇ? ಸುದೀಪ್ ಮತ್ತು ದುನಿಯಾ ವಿಜಿ ಫ್ಯಾನ್ಸ್ ಮಧ್ಯೆ ಜಟಾಪಟಿ ಆಗುವುದಿಲ್ಲವೇ? ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ.

    ಸುದೀಪ್ ಮೊದಲಿನಿಂದಲೂ ನಮಗೆ ಸಪೋರ್ಟಿವ್ ಆಗಿದ್ದಾರೆ. ಮೊದಲು ನಮ್ಮ ಸಿನಿಮಾ ರಿಲೀಸ್ ಆಗಬೇಕಿತ್ತು. ಸೂರಪ್ಪ ಬಾಬು ಅದೇಕೆ ಪ್ಲಾನ್ ಬ್ರೇಕ್ ಮಾಡಿದರೋ ಗೊತ್ತಿಲ್ಲ. ನಾವಂತೂ ಅಕ್ಟೋಬರ್ 14ಕ್ಕೆ ಬರೋದು ಪಕ್ಕಾ ಎಂದಿದ್ದಾರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

    ಸುದೀಪ್ ದೊಡ್ಡ ವ್ಯಕ್ತಿ. ದೊಡ್ಡತನ ಇರುವವರು. ಒಂದೇ ದಿನ ಸಿನಿಮಾ ರಿಲೀಸ್ ಆದರೆ ಅದೇನೂ ದೊಡ್ಡ ಸಮಸ್ಯೆ ಅಲ್ಲ. ಸ್ಟಾರ್ ವಾರ್ ಬೇಡ. ಸುದೀಪ್ ಮೊದಲಿನಿಂದಲೂ ನಮಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದಾರೆ ಎಂದಿದ್ದಾರೆ ಸಲಗ ಚಿತ್ರದ ನಾಯಕ ಮತ್ತು ನಿರ್ದೇಶಕ ದುನಿಯಾ ವಿಜಿ.

    ಅತ್ತ ಕಿಚ್ಚ ಸುದೀಪ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

  • ಪ್ಯಾನ್ ಇಂಡಿಯಾ ಮಾರುಕಟ್ಟೆಗೆ ಭಜರಂಗಿ 2

    bhajarangi 2 to release in 5 languages

    ಕನ್ನಡದ ಚಿತ್ರಗಳಿಗೆ ಬೇರೆ ಭಾಷೆಗಳ, ರಾಜ್ಯದ ಮಾರುಕಟ್ಟೆ ನಿಧಾನವಾಗಿ ಓಪನ್ ಆಗುತ್ತಿದೆ. ಕೆಜಿಎಫ್ ಸದ್ದು ಮಾಡಿದ ನಂತರವಂತೂ ದೊಡ್ಡ ಮಟ್ಟದಲ್ಲಿಯೇ ಕನ್ನಡ ಚಿತ್ರಗಳು ಸದ್ದು ಮಾಡುತ್ತಿವೆ. ಈಗ ಕುರುಕ್ಷೇತ್ರವೂ ಭರ್ಜರಿಯಾಗಿಯೇ ಸದ್ದು ಮಾಡಿದೆ. ಮುಂದಿನ ವಾರ ಕಿಚ್ಚ ಸುದೀಪ್‍ರ ಪೈಲ್ವಾನ್ ತೆರೆ ಕಾಣುತ್ತಿದೆ. ಈಗ ಶಿವಣ್ಣ ಕೂಡಾ ಅದೇ ರೀತಿ ಹೆಜ್ಜೆಯಿಟ್ಟಿದ್ದಾರೆ.

    ಎ. ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡುವ ನಿಟ್ಟಿನಲ್ಲಿಯೇ ಪ್ಲಾನ್ ಮಾಡಲಾಗಿದೆ. ನಿರ್ಮಾಪಕ ಜಯಣ್ಣ ನಿರ್ಮಾಣದ ಭಜರಂಗಿ 2 ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು.. ಅದೇ ರೀತಿ ಕಥೆಯನ್ನು ಸಿದ್ಧಮಾಡಿಕೊಂಡೇ ಅಖಾಡಕ್ಕಿಳಿಯುತ್ತಿದ್ದಾರೆ ಹರ್ಷ. ಸೆಪ್ಟೆಂಬರ್ 9ರಿಂದ ಭಜರಂಗಿ 2 ಶೂಟಿಂಗ್ ಶುರುವಾಗಲಿದೆ.

  • ಭಜರಂಗಿ 2 ಗಣೇಶ ಹಬ್ಬಕ್ಕೆ ಇಲ್ಲ

    ಭಜರಂಗಿ 2 ಗಣೇಶ ಹಬ್ಬಕ್ಕೆ ಇಲ್ಲ

    ಗೌರಿ ಗಣೇಶ ಹಬ್ಬಕ್ಕೆ ಥಿಯೇಟರ್‍ಗೆ ಬರಬೇಕಿದ್ದ ಭಜರಂಗಿ 2 ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ. ಗಣೇಶ ಹಬ್ಬದ ಹೊತ್ತಿಗೆ ಎಲ್ಲವೂ ರಿಲ್ಯಾಕ್ಸ್ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಿರ್ಮಾಪಕರಿಗೆ, ಕೊರೊನಾ ಸಂಕಟ ಮುಗಿಯುತ್ತಲೇ ಇಲ್ಲ ಎನ್ನುವುದು ಟೆನ್ಷನ್ ಸೃಷ್ಟಿಸಿರುವುದಂತೂ ನಿಜ. ಹೀಗಾಗಿ ನಿರ್ಮಾಪಕ ಜಯಣ್ಣ, ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ.

    ಇಡೀ ರಾಜ್ಯದಾದ್ಯಂತ ನೈಟ್ ಕಫ್ರ್ಯೂ ಈಗಲೂ ಇದೆ. ಅಲ್ಲಿಗೆ ಪ್ರತಿದಿನದ 4 ಆಟಗಳಲ್ಲಿ ಒಂದು ಶೋ ಇರೋದೇ ಇಲ್ಲ. ಸೆಕೆಂಡ್ ಶೋಗೇ ಜನ ಬರೋದು ಹೆಚ್ಚು. ಅಲ್ಲದೆ ಈಗಲೂ ರಾಜ್ಯದ 4 ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂ ಇದೆ. ಅದರಲ್ಲೂ ಮೈಸೂರಿನಲ್ಲಿ. ಕನ್ನಡ ಚಿತ್ರಗಳ ದೊಡ್ಡ ಮಾರುಕಟ್ಟೆ ಅದು. ಇಷ್ಟೆಲ್ಲದರ ಜೊತೆಗೆ ಈಗಲೂ ಇರೋದು ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ. ಇಷ್ಟೆಲ್ಲ ನಿರ್ಬಂಧಗಳ ಮಧ್ಯೆ ಸಿನಿಮಾ ಬಿಡುಗಡೆ ಮಾಡಬೇಕೇ ಎಂಬ ಪ್ರಶ್ನೆ ಹಾಕಿಕೊಂಡಾಗ ಬೇಡ ಎಂಬ ಉತ್ತರ ಬಂದಿದೆ.

    ಹೀಗಾಗಿ ಈಗ ಚಿತ್ರ ಸೆಪ್ಟೆಂಬ್ 10ಕ್ಕೆ ರಿಲೀಸ್ ಆಗುತ್ತಿಲ್ಲ. ಯಾವಾಗ ಅನ್ನೋದನ್ನೂ ಇನ್ನೂ ಡಿಸೈಡ್ ಮಾಡಿಲ್ಲ. ಸ್ಸೋ.. ಶಿವಣ್ಣ, ಹರ್ಷ, ಶೃತಿ, ಜಾಕಿ ಭಾವನಾ ನಟಿಸಿರುವ, ಎ. ಹರ್ಷ ನಿರ್ದೇಶನದ ಸೆನ್ಸೇಷನಲ್ ಸಿನಿಮಾ ನೋಡುವ ಭಾಗ್ಯ ಸದ್ಯಕ್ಕಂತೂ ಇಲ್ಲ.

  • ಭಜರಂಗಿ 2 ಪ್ರದರ್ಶನ ಮತ್ತೆ ಶುರುವಾಗಿದೆ..

    ಭಜರಂಗಿ 2 ಪ್ರದರ್ಶನ ಮತ್ತೆ ಶುರುವಾಗಿದೆ..

    ಭಜರಂಗಿ 2 ರಿಲೀಸ್ ಆಗಿ ಮೊದಲ ಶೋ ಮುಗಿಯುವ ಮುನ್ನವೇ ಸಿಡಿಲಿನಂತೆ ಅಪ್ಪಳಿಸಿದ್ದ ಸುದ್ದಿ ಪುನೀತ್  ಸಾವು. ಹೀಗಾಗಿ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿತ್ತು ಚಿತ್ರತಂಡ. ಪುನೀತ್ ಅಂತ್ಯಕ್ರಿಯೆ ಮುಗಿದ ನಂತರ ಚಿತ್ರಮಂದಿರಗಳಲ್ಲಿ ಶೋಗಳು ಮತ್ತೆ ಶುರುವಾಗಿವೆ.

    ಪ್ರದರ್ಶನ ನಿಲ್ಲಿಸೋದು ಬೇಡ. ರಿಲೀಸ್ ಆಗಿದೆ. ಮುಂದುವರೆಸಿ ಎಂದು ಶಿವಣ್ಣ ಹೇಳಿದ ನಂತರವೇ ಪ್ರದರ್ಶನ ಆರಂಭಿಸಿದ್ದೇವೆ ಎಂದು ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನದಿಂದಲೇ ಕೆಲವು ಮಲ್ಟಿಪ್ಲೆಕ್ಸ್‍ಗಳಲ್ಲಿ ಚಿತ್ರ ಪ್ರದರ್ಶನ ಮತ್ತೆ ಆರಂಭವಾಗಿದೆ. ಸಿಂಗಲ್ ಸ್ಕ್ರೀನ್ ಸೇರಿದಂತೆ ಎಲ್ಲೆಡೆ ಇಂದಿನಿಂದ ಶೋಗಳು ಶುರುವಾಗುತ್ತಿವೆ.

    ಅಕ್ಟೋಬರ್ 29ರಂದು ರಿಲೀಸ್ ಆಗಿದ್ದ ಚಿತ್ರದ ಬಗ್ಗೆ ಅದ್ಭುತ ಎನ್ನಿಸುವಂತ ಪ್ರತಿಕ್ರಿಯೆಗಳು ಬಂದಿದ್ದವು. ಶಿವಣ್ಣ, ಶೃತಿ, ಭಾವನಾ, ಲೋಕಿ.. ಹೀಗೆ ಚಿತ್ರದ ಪ್ರತಿಯೊಬ್ಬರ ಪಾತ್ರ ನಿರ್ವಹಣೆ, ಕಥೆ, ಮೇಕಿಂಗ್.. ಎಲ್ಲದಕ್ಕೂ ಶಹಬ್ಬಾಸ್ ಎಂದಿದ್ದರು. ಶಿವಣ್ಣ ಕೆರಿಯರ್‍ನಲ್ಲಿ ಇನ್ನೊಂದು ಬ್ಲಾಕ್ ಬಸ್ಟರ್ ಎಂಬ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಭಜರಂಗಿ 2.

  • ಭಜರಂಗಿ 2 ರಿಲೀಸ್ ಖುಷಿಯಲ್ಲಿರೋ ಹರ್ಷಗೆ ಖುಷಿ ನೀಡೋ ಸುದ್ದಿ

    ಭಜರಂಗಿ 2 ರಿಲೀಸ್ ಖುಷಿಯಲ್ಲಿರೋ ಹರ್ಷಗೆ ಖುಷಿ ನೀಡೋ ಸುದ್ದಿ

    ಸದ್ಯಕ್ಕೆ ಎ. ಹರ್ಷ ಭಜರಂಗಿ 2 ರಿಲೀಸ್ ಟೆನ್ಷನ್ ಮತ್ತು ಖುಷಿಯಲ್ಲಿದ್ದಾರೆ. ಅವರಿಗೀಗ ಅವರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸೋ ಸುದ್ದಿ ಇದು. ಎ.ಹರ್ಷ ನಿರ್ದೇಶಿಸಿದ್ದ ಅಂಜನೀಪುತ್ರದ ಹಾಡಿನ ದಾಖಲೆಯ ಸುದ್ದಿ ಇದು.

    2017ರಲ್ಲಿ ರಿಲೀಸ್ ಆಗಿದ್ದ ಅಂಜನಿಪುತ್ರ ಚಿತ್ರದ ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡು ಯೂಟ್ಯೂಬ್‍ನಲ್ಲಿ ದಾಖಲೆ ಬರೆದಿದೆ. 100 ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. 100 ಮಿಲಿಯನ್ ವೀಕ್ಷಣೆ ಪಡೆದ ಕನ್ನಡದ 3ನೇ ಹಾಡು ಇದು. ಹಾಡಿನಲ್ಲಿ ಹಾಡಿ ಕುಣಿದಿದ್ದವರು ರಶ್ಮಿಕಾ ಮಂದಣ್ಣ.

    ಹಾಡಿನಲ್ಲಿ ಎಲ್ಲರ ಗಮನ ಸೆಳೆದಿದ್ದು ಹರ್ಷ ಅವರ ಕೊರಿಯೋಗ್ರಫಿ. ಆ ಚಿತ್ರದ ನಿರ್ದೇಶಕ ಕೂಡಾ ಹರ್ಷ ಅವರೇ. ಭಜರಂಗಿ 2 ರಿಲೀಸ್ ಮಾಡೋಕೆ ರೆಡಿಯಾಗಿರುವ ಹರ್ಷ ಅವರಿಗೆ ಇದು ಇನ್ನಷ್ಟು ಕಿಕ್ ನೀಡೋದಂತೂ ಸುಳ್ಳಲ್ಲ.

  • ಭಜರಂಗಿ 2 ವಿಲನ್ ಕಣ್ಣೀರಿಟ್ಟಿದ್ದೇಕೆ..?

    ಭಜರಂಗಿ 2 ವಿಲನ್ ಕಣ್ಣೀರಿಟ್ಟಿದ್ದೇಕೆ..?

    ಭಜರಂಗಿ 2. 2021ರ ಬಹುನಿರೀಕ್ಷಿತ ಸಿನಿಮಾ. ಓಪನಿಂಗ್ ಭರ್ಜರಿಯಾಗಿತ್ತು. ಸಿನಿಮಾ ರಿಲೀಸ್ ಆಗಿ ಫಸ್ಟ್ ಶೋ ಮುಗಿಯುವ ಹೊತ್ತಿಗೆ ಸಿಡಿಲಿನಂತೆ ಅಪ್ಪಳಿಸಿದ ಅಪ್ಪು ನಿಧನದ ಸುದ್ದಿ, ಸಿನಿಮಾಗೂ ಸಿಡಿಲು ಅಪ್ಪಳಿಸುವಂತೆ ಮಾಡಿದೆ. ಭಜರಂಗಿ 2 ಚಿತ್ರದಲ್ಲಿ ವಿಲನ್ ಆಗಿ ಗಮನ ಸೆಳೆದಿರೋ ನಟ ಚೆಲುವರಾಜು, ಈಗ ಕಣ್ಣೀರಿಟ್ಟಿದ್ದಾರೆ.

    ಅಪ್ಪು ಸಾವಿನೊಂದಿಗೆ ಭವಿಷ್ಯವೂ ಮುಗಿಯಿತು ಎನಿಸುತ್ತಿದೆ. ತಮ್ಮ 3 ವರ್ಷದ ಶ್ರಮಕ್ಕೆ ಪ್ರತಿಫಲ ಸಿಗುವ ನಿರೀಕ್ಷೆಯಿತ್ತು. ಎಲ್ಲವೂ ಮಣ್ಣಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

    ಅಪ್ಪು ನಿಧನದ ಬೆನ್ನಲ್ಲೇ ಭಜರಂಗಿ 2 ಶೋಗಳೆಲ್ಲ ರದ್ದಾಗಿದ್ದವು. ಅಪ್ಪು ಅಂತ್ಯ ಸಂಸ್ಕಾರದ ಬಳಿಕ ಸಿನಿಮಾ ಶುರುವಾಗಿದೆಯಾದರೂ.. ಜನ ಥಿಯೇಟರಿನತ್ತ ಬರುತ್ತಿಲ್ಲ. ಸಂಖ್ಯೆ ಕಡಿಮೆಯಿದೆ. ಹೀಗಾಗಿ ಚೆಲುವರಾಜು ನಿರಾಶರಾಗಿದ್ದಾರೆ.

    ಆದರೆ.. ಚಿತ್ರವನ್ನು ಮೊದಲ ದಿನ ನೋಡಿದವರೆಲ್ಲ ಸಿನಿಮಾಗೆ ಸೂಪರ್.. ಮಸ್ತ್ ಸಿನಿಮಾ.. ವಿಭಿನ್ನ ಅನುಭವ ಕೊಡುವ ಸಿನಿಮಾ.. ಅದ್ಭುತ ಫ್ಯಾಂಟಸಿ ಕಥೆ.. ಎಂದು ಹೊಗಳಿದ್ದಾರೆ. ಅದೆಲ್ಲವೂ ಈ ದೀಪಾವಳಿ ರಜೆಯಲ್ಲಿ ಕೆಲಸ ಮಾಡಿದರೆ.. ಸಿನಿಮಾ ಸೂಪರ್ ಹಿಟ್ ಆಗೋದ್ರಲ್ಲಿ ಸಂಶಯವಿಲ್ಲ.

  • ಭಜರಂಗಿ 2 ಶಿವಣ್ಣ ನಿಗೂಢ ಲುಕ್

    shivanna's mysterious look from bhajarangi 2 revealed

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಜರಂಗಿ 2 ಮೂಲಕ 2020ರಲ್ಲಿ ಮೊದಲ ದರ್ಶನ ಕೊಟ್ಟಿದ್ದಾರೆ. ಅದೂ ಅಂತಿಂತ ಲುಕ್ಕಲ್ಲ. ಅಲ್ಲೊಂದು ನಿಗೂಢತೆಯಿದೆ. ವಿಚಿತ್ರ ಕುತೂಹಲವಿದೆ.

    ಭಜರಂಗಿ 2ನಲ್ಲಿ ಶಿವಣ್ಣನ ಕಣ್ಣುಗಳನ್ನೇ ಹೈಲೈಟ್ ಮಾಡಿ ಪೋಸ್ಟರ್ ಡಿಸೈನ್ ಮಾಡಲಾಗಿದೆ. ಅವರ ಎದುರಲ್ಲಿ ಥೇಟು ಚಾಣಕ್ಯನ ಗೆಟಪ್ಪಿನಲ್ಲಿರೋ ವಿಲನ್. ಅವರಿಬ್ಬರ ಮುಖಾಮುಖಿಯೇ ಚಿತ್ರದ ಪೋಸ್ಟರ್.

    ಅದು ಚಾಣಕ್ಯ ಅಲ್ಲ, ಹೀರೋ ಮತ್ತು ವಿಲನ್ ಮುಖಾಮುಖಿ ಹಾಗೂ ಚಿತ್ರದ ಟ್ವಿಸ್ಟ್ ಎನ್ನುತ್ತಾರೆ ಹರ್ಷ. ಜಯಣ್ಣ ಭೋಗೇಂದ್ರ ಕಂಬೈನ್ಸ್‍ನಲ್ಲಿ ಬರುತ್ತಿರುವ ಚಿತ್ರದ ಬಹುಪಾಲು ಚಿತ್ರೀಕರಣ ಬಹುಪಾಲು ಮುಕ್ತಾಯವಾಗಿದೆ..

  • ಭಜರಂಗಿ 2 ಸೆಟ್ಟಿನಲ್ಲಿ ಬೆಂಕಿ. ಕಾಪಾಡಿದ್ದು ಗೋಣಿಚೀಲ..!

    Bhajarangi 2 image

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಶೂಟಿಂಗ್ ವೇಳೆ ಅಗ್ನಿ ಅನಾಹುತ ಸಂಭವಿಸಿದೆ. ನೆಲಮಂಗಲದ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಸಂಭವಿಸಿರೋ ದುರಂತದಲ್ಲಿ ಇಡೀ ಸೆಟ್ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.

    ಇಡೀ ಸೆಟ್ಟಿನಲ್ಲಿ ನೆಲಕ್ಕೆ ಗೋಣಿಚೀಲ ಬಳಸಿದ್ದೆವು. ಇದರಿಂದಾಗಿ ಬೆಂಕಿ ಹಬ್ಬಲು ಸಾಧ್ಯವಾಗಲಿಲ್ಲ. ಸೆಟ್ಟಿನಲ್ಲಿ ತಂತ್ರಜ್ಞರು ಹಾಗೂ ಸುಮಾರು 200 ಜ್ಯೂನಿಯರ್ ಆರ್ಟಿಸ್ಟುಗಳ ಜೊತೆ 20 ಕಲಾವಿದರಿದ್ದೆವು. ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ತಿಳಿಸಿದ್ದಾರೆ ಶಿವಣ್ಣ.

    ಶಿವಣ್ಣ ಕ್ಯಾರವಾನ್‍ನಲ್ಲಿದ್ದರು. ಅವರು ಸುರಕ್ಷಿತರಾಗಿದ್ದಾರೆ. ಸುಮಾರು 1 ಕೋಟಿ ಬೆಲೆ ಬಾಳುವ ಸೆಟ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಹರ್ಷ ನಿರ್ದೇಶನದ ಭಜರಂಗಿ 2ಗೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು.

    ಆಂಜನೇಯನೇ ನಮ್ಮನ್ನು ಕಾಪಾಡಿದ್ದಾನೆ ಎಂದು ಭಜರಂಗಿಗೇ ಧನ್ಯವಾದ ಅರ್ಪಿಸಿದ್ದಾರೆ ಶಿವರಾಜ್‍ಕುಮಾರ್.