` dhanya ramkumar, - chitraloka.com | Kannada Movie News, Reviews | Image

dhanya ramkumar,

 • Dhanya's Debut Film Titled 'Ninna Sanihake'

  dhanya's debut film titled ninna sanohake

  Dr Rajakumar's grand daughter Dhanya making a debut as an actress in Sandalwood is not a new news. The pre-production of the film had already started and the team was getting ready to go on floors. 

  Now the team has found a suitable title for the film and it's none other than 'Ninna Sanihake'. The name itself suggests that its an out and out love story and Suraj Gowda and Dhanya plays lovers in this film.

  'Ninna Sanihake' is written by actor Suraj Gowda, while Suman Jadugar is the director. The film is being produced by White and Grey Media. Raghu Deekshith is the music director. The film is expected to be shot in Bangalore, Chickmagalur and other places.

 • Ninna Sanihake' Launched By Puneeth

  ninna sanihake launched by puneeth

  Dr Rajakumar's grand daughter Dhanya's debut film 'Ninna Sanihake' was launched on Monday and actor Puneetj Rajkumar flagged off the film and wished the team a huge success.

  The launch of 'Ninna Sanihake' was held at Dodda Ganapathi Temple in Basavanagudi and Puneeth came over as the chief guest. Puneeth sounded the clap for the first shot, while Dinakar Thoohudeepa switched on the camera.

  'Ninna Sanihake' is written by actor Suraj Gowda, while Suman Jadugar is the director. The film stars Suraj and Dhanya in lead roles and is produced by White and Grey Media. Raghu Deekshith is the music director.

 • ಅಕ್ಕನ ಮಗಳ ಚಿತ್ರಕ್ಕೆ ಅಪ್ಪು ಕ್ಲಾಪ್

  puneeth launched his niece's movie

  ನಿನ್ನ ಸನಿಹಕೆ.. ಇದು ರಾಮ್‍ಕುಮಾರ್-ಮಂಗಳಾ ದಂಪತಿಯ ಮಗಳು ಧನ್ಯಾ ರಾಮ್‍ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ. ರಾಜ್ ಫ್ಯಾಮಿಲಿಯಿಂದ ಇದೇ ಮೊದಲ ಬಾರಿಗೆ ನಾಯಕಿಯೊಬ್ಬರು ಬರುತ್ತಿದ್ದಾರೆ. ಈ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ಕ್ಲಾಪ್ ಮಾಡಿದ್ದಾರೆ.

  ಧನ್ಯಾ, ಅಪ್ಪುಗೆ ಅಕ್ಕನ ಮಗಳು. ಬೆಂಗಳೂರಿನಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಇಬ್ಬರೂ ಬಂದು ಶುಭ ಹಾರೈಸಿದ್ರು. ಸೂರಜ್ ಗೌಡ ನಾಯಕನಾಗಿರುವ ಚಿತ್ರಕ್ಕೆ ಸುಮನ್ ಜಾದೂಗಾರ್ ನಿರ್ದೇಶಕ.

   

 • ಅದೊಂದು ಅವಕಾಶಕ್ಕಾಗಿ ಹಠ ಹಿಡಿದ ಕಾದ ನಟಿ

  dhanya ramkumar was awiting for that roleSarvajanikarige Suvarnavakasha Movie Image

  ಧನ್ಯಾ ಬಾಲಕೃಷ್ಣ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ನಾಯಕಿ. ವಿಶೇಷ ಅಂದ್ರೆ, ಧನ್ಯಾ ನಟಿಸಿರುವ ಬೇರೆ ಭಾಷೆಯ ಚಿತ್ರಗಳ ಸಂಖ್ಯೆ 25ರ ಗಡಿ ದಾಟಿದೆ. ದೊಡ್ಡ ದೊಡ್ಡ ನಿರ್ದೇಶಕರ ಚಿತ್ರಗಳಲ್ಲಿ, ಸ್ಟಾರ್ ನಟರ ಹಿಟ್ ಚಿತ್ರಗಳಲ್ಲೇ ನಟಿಸಿರುವ ಧನ್ಯಾಗೆ ಸಿಕ್ಕಿದ್ದೆಲ್ಲ ಪೋಷಕ ನಟಿಯ ಪಾತ್ರಗಳೇ.

  ಒಂದು ಹಂತದವರೆಗೂ ಅದನ್ನು ಎಂಜಾಯ್ ಮಾಡಿದ ಧನ್ಯಾಗೆ, ಕ್ರಮೇಣ ಬೋರ್ ಹೊಡೆಯೋಕೆ ಶುರುವಾಯ್ತು. ಸ್ವತಃ ಒಂದು ಉದ್ಯೋಗ ಆರಂಭಿಸಿದ ಧನ್ಯಾ, ಪೋಷಕ ಪಾತ್ರಗಳನ್ನೆಲ್ಲ ತಿರಸ್ಕರಿಸುತ್ತಾ ಹೊರಟರು. ಒನ್ಸ್ ಎಗೇಯ್ನ್ ಸ್ಟಾರ್ ನಟರ ಚಿತ್ರಗಳೇ. ಒಳ್ಳೆಯ ಸಂಭಾವನೆಯನ್ನೂ ದೂರ ತಳ್ಳಿದ ಧನ್ಯಾ ಒಂದು ವರ್ಷ ಮನೆಯಲ್ಲೇ ಕುಳಿತುಬಿಟ್ಟರು.

  ಆಗ ಸಿಕ್ಕ ಅವಕಾಶವೇ `ಸಾರ್ವಜನಿಕರಿಗೆ ಸುವರ್ಣಾವಕಾಶ'. ಈ ಚಿತ್ರದಲ್ಲಿ ಧನ್ಯಾ ಆರೋಗ್ಯ ಮತ್ತು ಹಣಕಾಸು ಎರಡೂ ಸಮಸ್ಯೆಯಿಂದ ಬಳಲುವ ಯುವತಿಯಾಗಿ ನಟಿಸಿದ್ದಾರೆ.

  `ನಾವೇನೇ ನಟಿಸಿದ್ದರೂ ಸ್ಕಿçಪ್ಟ್ ಫೈನಲ್. ಅದು ಚೆನ್ನಾಗಿದ್ದರಷ್ಟೇ ನಮ್ಮ ನಟನೆ, ಪಾತ್ರಕ್ಕೆ ಮಹತ್ವ'' ಎನ್ನುವ ವಾಸ್ತವ ಗೊತ್ತಿರುವ ಕಲಾವಿದೆ ಧನ್ಯಾ.

  ರಿಷಿ ಎದುರು ನಾಯಕಿಯಾಗಿ ನಟಿಸಿರುವ ಧನ್ಯಾ, ಅನೂಪ್ ಅವರ ನಿರ್ದೇಶನದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ. ಗುಳ್ಟು ಟೀಂ ಮತ್ತೊಮ್ಮೆ ಜೊತೆಯಾಗಿ ನಿರ್ಮಿಸಿರುವ ಚಿತ್ರವಿದು. ಹೀಗಾಗಿಯೇ ಇಡೀ ಚಿತ್ರರಂಗ ಈ ಚಿತ್ರದತ್ತ ಕುತೂಹಲದ ಕಣ್ಣು ನೆಟ್ಟಿದೆ.

 • ಅಪ್ಪನ ಸಾಲ ತೀರಿಸಲೊಂದು ಸುವರ್ಣಾವಕಾಶ ಸಿಕ್ಕಾಗ.

  sarvajanikarige suvarnavakaha is a story of responsible son

  ಅಪ್ಪನಿಗೋ ಮೈತುಂಬಾ ಸಾಲ. ಎಂಬಿಎ ಪದವೀಧರನಾಗಿದ್ದರೂ, ಅಪ್ಪನ ಸಾಲ ಕಾಡುತ್ತಲೇ ಇದೆ. ಆಗ ಸಿಗುತ್ತೆ ಒಂದು ಬಂಪರ್ ಆಫರ್. ಆ ಆಫರ್ ಹಿಂದೆ ಹೊರಡುತ್ತಾರೆ ರಿಷಿ. ಅಲ್ಲಿಂದ ಶುರು.. ಕಾಮಿಡಿಯ ಮೆರವಣಿಗೆ. ಇದು ಸಾರ್ವಜನಿಕರಿಗೊಂದು ಸುವರ್ಣಾವಕಾಶ ಚಿತ್ರದ ಒನ್ ಲೈನ್ ಸ್ಟೋರಿ.

  ಕವಲುದಾರಿ ನಂತರ ರಿಷಿ ನಟಿಸಿರುವ ಚಿತ್ರವಿದು. ಮದುವೆಯಾದ ಮೇಲೆ ರಿಲೀಸ್ ಆಗುತ್ತಿರುವ ರಿಷಿಯ ಮೊದಲ ಚಿತ್ರವೂ ಇದೇ. ರಿಷಿ ಎದುರು ಧನ್ಯಾ ರಾಮಕೃಷ್ಣ ನಾಯಕಿಯಾಗಿ ನಟಿಸಿದ್ದರೆ, ದತ್ತಣ್ಣ, ರಂಗಾಯಣ ರಘು, ಶಾಲಿನಿ, ಮಿತ್ರ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

  ಅಂದಹಾಗೆ ಈ ಚಿತ್ರಕ್ಕೆ ಕಥೆ ಜನಾರ್ದನ್ ಚಿಕ್ಕಣ್ಣ ಮತ್ತು ಹರಿಕೃಷ್ಣ ಅವರದ್ದು. ಅದೇ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ. ನೆನಪಿದೆ ತಾನೆ. ಅನೂಪ್ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು. ಅರ್ಧಕ್ಕರ್ಧ ಗುಳ್ಟು ಟೀಂ ಚಿತ್ರದಲ್ಲಿದೆ. ಡಿಸೆಂಬರ್ 20ರಂದು ಚಿತ್ರ ರಿಲೀಸ್ ಆಗುತ್ತಿದೆ.

 • ನಕ್ಕು ನಕ್ಕು ಸುಸ್ತಾಗಬೇಕಾ.. ಡಿ.20ಕ್ಕೆ ಸುವರ್ಣಾಕಾಶ..

  a laughter bomb ready to explode on dec 20th

  ನಾಯಕನ ತಂದೆಯಾಗಿ ದತ್ತಣ್ಣ. ನಾಯಕಿಯ ತಾಯಿ ಶಾಲಿನಿ. ಪಕ್ಕಾ ಜಿಪುಣಿ. ಆಟೋ ಚಾಲಕನಾಗಿ ನಗಿಸೋಕೆ ಮಿತ್ರ. ರಂಗಯಣ ರಘು ಅವರು ಇನ್ನೊಂದು ಕಡೆ. ಅಪ್ಪನದ್ದೋ ಮೈತುಂಬಾ ಸಾಲ. ನಾಯಕನೋ ಎಂಬಿಎ ಪದವೀಧರ. ಇದರ ನಡುವೆ ನಾಯಕಿಯ ತಾಪತ್ರಯವೇ ಇನ್ನೊಂದು.. ಇವೆಲ್ಲವೂ ಒಟ್ಟಿಗೇ ಸೇರಿಕೊಂಡು ಕೊಲಾಜ್ ಆದಾಗ ಸೃಷ್ಟಿಯಾದ ನಗೆಬಾಂಬು ಸಾರ್ವಜನಿಕರಿಗೆ ಸುವರ್ಣಾವಕಾಶ.

  ನಾಯಕನಾಗಿ ರಿಷಿ ಇದ್ದಾರೆ. ಕವಲುದಾರಿಯಲ್ಲಿ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಗೆದ್ದಿದ್ದ ರಿಷಿಗೆ, ಇಲ್ಲಿ ನಗಿಸುವ ಕಾಯಕ. ನಾಯಕಿಯಾಗಿ ನಟಿಸಿರುವುದು ಧನ್ಯಾ ರಾಮಕೃಷ್ಣ. ಕನ್ನಡತಿಯೇ ಆದರೂ, ಬೇರೆ ಭಾಷೆಗಳಲ್ಲಿ ನಟಿಸಿದ ಮೇಲೆ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ.

  ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಟ್ರೇಲರ್ ಮಜಾ ಕೊಡುತ್ತಿದೆ.  ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಎಲ್ಲವೂ ಈ ಚಿತ್ರದಲ್ಲಿದೆ.  ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣದ ಚಿತ್ರ ಡಿಸೆಂಬರ್ 20ಕ್ಕೆ ತೆರೆ ಮೇಲೆ ಬರುತ್ತಿದೆ. ನಗಬೇಕಾ.. ಡಿ.20ಕ್ಕೆ ರೆಡಿಯಾಗಿ.

 • ನಗುವವರಿಗೆ.. ನಗಿಸುವವರಿಗೆ ಸುವರ್ಣಾವಕಾಶ..

  sarvajanikarige suvaranavakasha specialty

  ಸಾರ್ವಜನಿಕರಿಗೆ ಸುವರ್ಣಾವಕಾಶ, ಇದು ಆಪರೇಷನ್ ಅಲಮೇಲಮ್ಮ, ಕವಲುದಾರಿ ಖ್ಯಾತಿಯ ರಿಷಿ ಅಭಿನಯದ ಹೊಸ ಚಿತ್ರ. ಅನೂಪ್ ರಾಮಸ್ವಾಮಿ ನಿರ್ದೇಶನದ ಟ್ರೇಲರ್, ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರಿನಲ್ಲಿ ಸಣ್ಣ ಸಣ್ಣ ತುಂಟಾಟಗಳು ನೋಡುವವರಿಗೆ ಇಷ್ಟವಾಗುತ್ತಿವೆ.

  ರಿಷಿ ಎದುರು ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ದತ್ತಣ್ಣ, ರಂಗಾಯಣ ರಘು, ಪೋಷಕ ಪಾತ್ರದಲ್ಲಿದ್ದಾರೆ.

  ಚಿತ್ರದಲ್ಲಿ ಫಿಟ್ಸ್ ಬರುವ ನಾಯಕಿ, ಪ್ರೀತಿ, ಪ್ರೇಮ, ಮಧ್ಯೆಯೆಲ್ಲೋ ಒಂದು ವಿಚಿತ್ರವಾದ ಸಸ್ಪೆನ್ಸು ಎಲ್ಲವೂ ಇರುವ ಟ್ರೇಲರ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

   

 • ರಾಮ್‍ಕುಮಾರ್ ಮಗಳು ಹೀರೋಯಿನ್..!

  dhanya ramkumar to enter films

  ಒಂದು ಕಡೆ ಮಗ ಧಿರೇನ್ ಕುಮಾರ್‍ರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿರುವಾಗಲೇ, ರಾಮ್‍ಕುಮಾರ್ ಮಗಳೂ ಕೂಡಾ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದಾರೆ. ರಾಮ್ ಕುಮಾರ್ ಮಗಳು ಧನ್ಯಾ, ಸೂರಜ್ ಗೌಡಗೆ ಹೀರೋಯಿನ್ ಆಗಿದ್ದಾರೆ. ಮದುವೆಯ ಮಮತೆಯ ಕರೆಯೋಲೆ, ಕಹಿ, ಸಿಲಿಕಾನ್ ಸಿಟಿ ಚಿತ್ರಗಳ ನಂತರ ಸೂರಜ್ ನಟಿಸುತ್ತಿರುವ ಸಿನಿಮಾ ಇದು.

  ಹೊಸ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಕಥೆ ಸೂರಜ್ ಗೌಡ ಅವರದ್ದೇ. ಸುಮನ್ ಜಾದೂಗಾರ್ ಎಂಬ ಹೊಸ ಪ್ರತಿಭೆ ಚಿತ್ರದ ನಿರ್ದೇಶಕ. ರಘು ದೀಕ್ಷಿತ್ ಸಂಗೀತ ನೀಡುತ್ತಿದ್ದು, ಜುಲೈನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ.

 • ಶಿವಣ್ಣ, ಧ್ರುವ ಲಿಸ್ಟಿಗೆ ಸೇರ್ತಾರಾ ರಿಷಿ..?

  rishi expecting a hat trick woth sarvajanikarige suvarnavakasha

  ಒಂದು.. ಮತ್ತೊಂದು.. ಮಗದೊಂದು.. ಆರಂಭದಲ್ಲೇ ಹೀಗೆ ಸತತ ಹಿಟ್ ಸಿಕ್ಕರೆ, ಅದು ಕೊಡೊ ಕಿಕ್ಕೇ ಬೇರೆ. ಆಪರೇಷನ್ ಅಲಮೇಲಮ್ಮ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾದ ರಿಷಿ, ಈಗ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.

  ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಮತ್ತು ಪುನೀತ್ ನಿರ್ಮಾಣದ ಕವಲುದಾರಿ. ಎರಡೂ ಹಿಟ್ ಚಿತ್ರಗಳು. ಈ ವಾರ ಸಾರ್ವಜನಿಕರಿಗೆ ಸುವರ್ಣಾವಕಾಶ ರಿಲೀಸ್ ಆಗುತ್ತಿದೆ. ಈ ಬಾರಿಯೂ ಅವರಿಗೆ ಹಿಟ್ ಪ್ರೊಡ್ಯೂಸರ್, ಕಥೆಗಾರರು ಸಿಕ್ಕಿದ್ದಾರೆ.

  ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಬ್ಯಾನರಿಗೆ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಗುಳ್ಟುನಲ್ಲಿ ಸಾಫ್ಟ್ವೇರ್ ವಂಚಕರ ಕಥೆಯನ್ನು ಅಷ್ಟೇ ಸೀರಿಯಸ್ಸಾಗಿ ಹೇಳಿದ್ದವರು ಈಗ ಕಾಮಿಡಿ ಅಸ್ತ್ರ ಎತ್ತಿಕೊಂಡಿದ್ದಾರೆ. ಇದು 100% ವೊರಿಜಿಲನಲ್ ಕಥೆ ಎನ್ನುವುದು ನಿರ್ದೇಶಕ ಅನೂಪರ್ ಅವರ ಕಾನ್ಫಿಡೆನ್ಸು. ಚಿತ್ರ ನೋಡಿ ನೀವು ನಕ್ಕರೆ.. ನಿರ್ಮಾಪಕರೂ ನಗುತ್ತಾರೆ. ಗೆಟ್ ರೆಡಿ..

Shivarjun Movie Gallery

KFCC 75Years Celebrations and Logo Launch Gallery