` ek love ya, - chitraloka.com | Kannada Movie News, Reviews | Image

ek love ya,

 • Rakshitha's Special Appearance In 'Ek Love Ya'

  rakshitha's special appereance

  The shooting for Prem's new film 'Ek Love Ya' is near completion. Meanwhile, actress Rakshitha, will be making a special appearance in a song along with Rachita Ram.

  Rakshitha making a special appearance in 'Ek Love Ya' is expected from the beginning. The film is not only produced by her, but stars her brother Abhishek alias Rana as a hero. So, there have been speculations that Rakshitha will also be making a comeback in a special appearance. Now it has turned true with the actress ready to dance for a song.

  'Ek Love Ya' is written and directed by Prem. The film stars Rana, Reeshma, Rachita and others in prominent roles. Arjun Janya is the music composer, while Mahendra Simha is the cinematographer.

 • Reeshma Nanaiah Roped In For 'Ek Love Ya'

  reeshma nanaiah roped in for ek love ya

  The shooting for Prem's new film 'Ek Love Ya' is in full progress. Meanwhile, Prem has finalized the heroine for the film. This time, Prem is introducing a new actress called Reeshma Nanaiah as the heroine.

  Ek Love Ya' stars Prem's brother-in-law Abhishek alias Rana as a hero. From the beginning, Prem has been saying that he will be launching a new heroine opposite Rana. Now Reeshma Nanaiah who is basically from Coorg has been roped in as the heroine of the film. Apart from Rana and Reeshma, Rachita has been selected to play a prominent role in the film.

  'Ek Love Ya' is being produced by Rakshitha and the actress has launched a new production company called Rakshitha Film Factory and is producing the film under the banner. Arjun Janya is the music composer, while Mahendra Simha is the cinematographer.

 • Shooting For 'Ek Love Ya' From May 20th

  shooting for ek love ya from may 20th

  Prem's new film 'Ek Love Ya' which stars his brother-in-law Abhishek alias Rana is all set to start from the 20th of May. Film's producer and Prem's wife Rakshitha has confirmed the news through her twitter account.

  'First actual muhurath shot of 'Ek Love Ya' done today at Male Mahadeshwara temple. It was a very good day for the team. With all your love and support we start shoot from 20th of this month. The first schedule' tweeted Rakshitha.

  'Ek Love Ya' was launched on the 31st of March on occasion of Rakshitha's birthday. Rakshitha has launched a new production company called Rakshitha Film Factory and is producing the film under the banner. Arjun Janya is the music composer, while Mahendra Simha is the cinematographer.

 • ಏಕ್ ಲವ್ ಯಾ `ಹೇಳು ಯಾಕೆ..' ಹಾಡು ರಿಲೀಸ್

  ಏಕ್ ಲವ್ ಯಾ `ಹೇಳು ಯಾಕೆ..' ಹಾಡು ರಿಲೀಸ್

  ಜೋಗಿ ಪ್ರೇಮ್ ಚಿತ್ರ ಎಂದರೆ ಹಾಡುಗಳ ಮೇಲೆ ಭಾರಿ ನಿರೀಕ್ಷೆಗಳಿದ್ದೇ ಇರುತ್ತವೆ. ಅದು ಅವರೇ ಸೃಷ್ಟಿಸಿಕೊಂಡಿರೋ ಟ್ರೆಂಡ್. ಏಕ್ ಲವ್ ಯಾ ಕೂಡಾ ಅದಕ್ಕೆ ಹೊರತಾಗಿಲ್ಲ. ರಕ್ಷಿತಾ ಪ್ರೇಮ್ ಸೋದರ ರಾಣಾ ಹೀರೋ ಆಗಿ ನಟಿಸಿರೋ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಇದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಚಿತಾ ಪ್ರೇಮ್. ರೀಷ್ಮಾ ಜೊತೆ ರೊಮ್ಯಾನ್ಸ್, ರಚಿತಾ ಜೊತೆ ಕಿಸ್ಸಿಂಗ್ ಸೀನ್ ನೋಡಿರುವ ಪ್ರೇಕ್ಷಕರಿಗೆ ಚಿತ್ರದಲ್ಲಿರೋ ಕಥೆಯ ಬಗ್ಗೆ ಕುತೂಹಲ ಇದ್ದೇ ಇದೆ. ಇದರ ನಡುವೆಯೇ ಇನ್ನೊಂದು ಹಾಡು ಬಿಟ್ಟಿದ್ದಾರೆ ಪ್ರೇಮ್.

  ಮುಗ್ಧ ಪ್ರೇಮಿಯೊಬ್ಬನ ವಿರಹ, ಆಕ್ರೋಶ ಎರಡೂ ಇರೋ ಹೇಳು ಯಾಕೆ ಹಾಡು.. ವಿಷಾದ ಗೀತೆಯಂತೆ ಎನಿಸಿದ್ದರೆ ಕ್ರೆಡಿಟ್ಟು ಜೋಗಿ ಪ್ರೇಮ್ ಅವರಿಗೆ. ಎದೆಯೊಳಗಿನ ಪ್ರೀತಿಯನ್ನೆಲ್ಲ ಹೊರಗೆ ಹಾಕುವ ಹಾಡಿನಂತೆ ಕೇಳಿಸಿದ್ದರೆ, ಅದರ ಕ್ರೆಡಿಟ್ಟೂ ಪ್ರೇಮ್ ಅವರಿಗೇ. ಅರ್ಜುನ್ ಜನ್ಯ ಮ್ಯೂಸಿಕ್ಕಿನಲ್ಲಿರೋ ಹಾಡಿಗೆ ಸಾಹಿತ್ಯ ಬರೆದು ಹಾಡನ್ನು ಸ್ವತಃ ಹಾಡಿರುವುದು ಪ್ರೇಮ್.

  ಪ್ರೇಮಿಗಳ ದಿನಕ್ಕೆ ಯಾರೇ ಯಾರೇ.. ನೀನು ನಂಗೆ.. ಹಾಡು ರಿಲೀಸ್ ಮಾಡಿದ್ದ ಪ್ರೇಮ್, ಯುಗಾದಿಗೆ ಹೇಳು ಯಾಕೆ ಹಾಡು ಬಿಟ್ಟಿದ್ದಾರೆ.

 • ಏಕ್ ಲವ್ ಯಾ ಮ್ಯೂಸಿಕ್ ಸೋಲ್ಡ್ ಔಟ್ ದಾಖಲೆ

  ek love ya audio sold out for record hit

  ಹೊಸ ನಟನ ಚಿತ್ರವೊಂದರ ಆಡಿಯೋ ರೈಟ್ಸ್ ಎಷ್ಟಕ್ಕೆ ಹೋಗಬಹುದು. ತುಂಬಾ ದೊಡ್ಡ ಮೊತ್ತವಂತೂ ಸಿಗುವುದು ಕಷ್ಟ. ಆದರೆ, ಆ ಹೊಸಬರ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆಗಿದ್ದು, ಸಂಗೀತ ಅರ್ಜುನ್ ಜನ್ಯ ನೀಡಿದ್ದರೆ.. ಯೆಸ್. ಆಗ ಆ ಚಿತ್ರಕ್ಕೆ.. ಚಿತ್ರದ ಹಾಡುಗಳಿಗೆ ತಂತಾನೇ ಡಿಮ್ಯಾಂಡ್ ಸೃಷ್ಟಿಯಾಗುತ್ತೆ. ಏಕ್ ಲವ್ ಯಾ ಚಿತ್ರ ಆ ದಾಖಲೆ ಬರೆದಿದೆ.

  ಏಕ್ ಲವ್ ಯಾ ಚಿತ್ರದ ಆಡಿಯೋ ಹಕ್ಕನ್ನು ಎ2 ಸಂಸ್ಥೆ 81 ಲಕ್ಷಕ್ಕೆ ಖರೀದಿಸಿದೆ. ರಕ್ಷಿತಾ ಅವರ ತಮ್ಮ ರಾಣಾ ನಾಯಕರಾಗಿ ಎಂಟ್ರಿ ಕೊಡುತ್ತಿರುವ ಚಿತ್ರದಲ್ಲಿ ರಚಿತಾ ರಾಮ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೀಷ್ಮಾ ನಾಯಕಿ. ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ.

 • ಏಕ್ ಲವ್ ಯಾ ಸ್ವಚ್ಚ ಭಾರತ್ ಅಭಿಯಾನ

  ek love ya team's swaccha bharath abhiyaan

  ಜೋಗಿ ಪ್ರೇಮ್ ನಿರ್ದೇಶನದ ಹೊಸ ಸಿನಿಮಾ ಏಕ್ ಲವ್ ಯಾ. ದಿ ವಿಲನ್ ನಂತರ ಪತ್ನಿ ರಕ್ಷಿತಾ ಪ್ರೇಮ್ ಅವರ ಸೋದರ ರಾಣಾನನ್ನೇ ಹೀರೋ ಆಗಿ ಎಂಟ್ರಿ ಕೊಡಿಸುತ್ತಿದ್ದಾರೆ ಪ್ರೇಮ್. ಚಿತ್ರದ ಶೂಟಿಂಗಿಗಾಗಿ ಊಟಿಯಲ್ಲಿರೋ ತಂಡ, ಏಕ್ ಲವ್ ಯಾ ಚಿತ್ರೀಕರಣ ಜಾಗದಲ್ಲಿನ ಪ್ಲಾಸ್ಟಿಕ್ಕುಗಳನ್ನೆಲ್ಲ ಆಯ್ದು ಸ್ವಚ್ಚ ಭಾರತ್ ಅಭಿಯಾನ ಮಾಡಿದೆ.

  ದೇಶದ ಹಲವು ಪ್ರವಾಸಿ ತಾಣಗಳಂತೆ ಊಟಿ ಕೂಡಾ ಪ್ರವಾಸಿಗರಿಂದ ಕ್ರೌರ್ಯಕ್ಕೆ ಒಳಗಾಗುತ್ತಿದೆ.. ಹೀಗಾಗಿಯೇ ಏಕ್ ಲವ್ ಯಾ ಟೀಂ ಕೆಲಸಕ್ಕೆ ಭಾರಿ ಮೆಚ್ಚುಗೆ ಪ್ರಾಪ್ತವಾಗಿದೆ. ರಾಣಾ ಎದುರು ರೀಷ್ಮಾ ನಾಯಕಿಯಾಗಿದ್ದು, ರಚಿತಾ ರಾಮ್ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

 • ಜೋಗಿ ಪ್ರೇಮ್ ಚಿತ್ರಕ್ಕೂ ಕಣ್ಣು ಹೊಡ್ಯಾಕ್ ಬಂದ ಮಂಗ್ಲಿ..

  ಜೋಗಿ ಪ್ರೇಮ್ ಚಿತ್ರಕ್ಕೂ ಕಣ್ಣು ಹೊಡ್ಯಾಕ್ ಬಂದ ಮಂಗ್ಲಿ..

  ಕಣ್ಣೂ ಹೊಡಿಯಾಕ ಮೊನ್ನೀ ಕಲಿತ್ಯಾನಿ.. ಹಾಡನ್ನು ಕಣ್ಣೇ ಅದಿರಿಂದಿ.. ಎಂದು ತೆಲುಗಿನಲ್ಲಿ ಹಾಡಿ ಫೇಮಸ್ ಆದವರು ಮಂಗ್ಲಿ. ಅಪ್ಪಟ ರಾ ಲುಕ್.. ರಾ ವಾಯ್ಸ್ ಇರೋ ಮಂಗ್ಲಿ ಈಗ ಜೋಗಿ ಪ್ರೇಮ್ ಚಿತ್ರಕ್ಕೆ ಬಂದಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ಒಂದು ಹಾಡನ್ನೂ ಹಾಡಿದ್ದಾರೆ. ಅದು ಎಣ್ಣೆ ಹಾಡಂತೆ.

  ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಚಿತ್ರ ಏಕ್ ಲವ್ ಯಾ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ, ಇಬ್ಬರು ಹೀರೋಯಿನ್‍ಗಳು. ಈ ಎಣ್ಣೆ ಹಾಡಿನಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ.

  ಪ್ರೇಮ್ ಚಿತ್ರಗಳಲ್ಲಿ ಹಾಡುಗಳಂತೂ ಬೊಂಬಾಟ್ ಆಗಿರುತ್ತವೆ. ಪ್ರೇಮ್-ಜನ್ಯಾ ಕಾಂಬಿನೇಷನ್ ಈಗಾಗಲೇ ವಿಲನ್ ಚಿತ್ರದಲ್ಲಿ ವ್ಹಾವ್ ಎನ್ನಿಸಿಕೊಂಡಿದೆ. ಅಂತಾದ್ದರಲ್ಲಿ ಮಂಗ್ಲಿಯ ವಾಯ್ಸ್‍ನ ಕಿಕ್ಕೂ ಸೇರಿದರೆ.. ಹಾಡು ಇನ್ನೆಷ್ಟು ಕಿಕ್ಕೇರಿಸಲಿದೆಯೋ..

 • ಜೋಗಿ ಪ್ರೇಮ್ ಜೊತೆ ಡಿಂಪಲ್ ಕ್ವೀನ್

  rachita ram in ek love ya

  ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಮ್ಮೆ ಜೋಗಿ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಕ್ಷಿತಾ ಅವರ ತಮ್ಮನನ್ನು ಪರಿಚಯಿಸುತ್ತಿರುವ ಏಕ್ ಲವ್ ಯಾ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಹಾಗಂತ, ರಚಿತಾ ರಾಮ್ ಹೀರೋಯಿನ್ ಅಲ್ಲ, ಅರ್ಥಾತ್ ಹೀರೋನ ಪ್ರೇಯಸಿ ಅಲ್ಲ. ಆದರೆ, ಅತ್ಯಂತ ಪ್ರಮುಖವಾದ ಪಾತ್ರವಂತೆ.

  ವಿಲನ್ ಚಿತ್ರದ ಹಾಡೊಂದರಲ್ಲಿ ನಾನು ನಟಿಸಿದ್ದೆ. ಆದರೆ, ಪ್ರೇಮ್ ಅವರ ಡೆಡಿಕೇಷನ್ ಬಹಳ ಇಷ್ಟವಾಗಿತ್ತು. ಅವರು ಬಹಳ ಒಳ್ಳೆಯ ನಿರ್ದೇಶಕ. ಅವರು ನನ್ನನ್ನು ಸೆಟ್‍ನಲ್ಲಿ ಗೌಡ್ತಿ  ಅಂತಾ ಕರೀತಿದ್ರೆ, ನಾನು ಗೌಡಾ ಸರ್ ಅಂತ ಕೂಗ್ತಿದ್ದೆ. ಈ ಚಿತ್ರದಲ್ಲಿ ನನ್ನದು ಅತ್ಯಂತ ಮುಖ್ಯ ಪಾತ್ರ ಎಂದಿದ್ದಾರೆ ರಚಿತಾ ರಾಮ್.

  ರಕ್ಷಿತಾ ಪ್ರೇಮ್ ಅವರ ಸೋದರ ರಾಣಾ  ಏಕ್ ಲವ್ ಯಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಕ್ಷಿತಾ ಅವರೇ ಚಿತ್ರದ ನಿರ್ಮಾಪಕಿ.

 • ತಮ್ಮನಿಗಾಗಿ.. ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಟಪ್ಪಾಂಗುಚ್ಚಿ

  rakshitha to dance with rachita in ek love ya

  ರಕ್ಷಿತಾ ಪ್ರೇಮ್ ಮದುವೆಯ ನಂತರ ಬೆಳ್ಳಿತೆರೆಯಿಂದ ದೂರವೇ ಉಳಿದುಬಿಟ್ಟಿದ್ದಾರೆ. 2007ರಲ್ಲಿ ರಿಲೀಸ್ ಆದ ತಾಯಿಯ ಮಡಿಲು ಚಿತ್ರವೇ ಕೊನೆ. ಅದಾದ ನಂತರ ರಕ್ಷಿತಾ ಬಣ್ಣ ಹಚ್ಚಿಲ್ಲ. ಈಗ ಮತ್ತೆ ಬರುತ್ತಿದ್ದಾರೆ. ಅದೂ ಡಿಂಪಲ್ ಕ್ವೀನ್ ಜೊತೆ.

  ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಅವರ ಸೋದರ ರಾಣಾ ಹೀರೋ. ಆ ಚಿತ್ರದಲ್ಲಿ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ರಕ್ಷಿತಾ, ರಚಿತಾ ಜೊತೆ ಹೆಜ್ಜೆ ಹಾಕಲಿದ್ದಾರೆ.

  ಅಂದಹಾಗೆ ಇದು ಲವ್ ಫೇಲ್ಯೂರ್ ಸಾಂಗ್. ಅದೂ ಹುಡುಗರದ್ದಲ್ಲ. ಹುಡುಗೀರದ್ದು. ಹುಡುಗೀರು ಕುಡ್ಕೊಂಡ್ ಲವ್ ಫೇಲ್ಯೂರ್ ಸಾಂಗ್ ಹಾಡಿದ್ರೆ ಹೆಂಗಿರುತ್ತೆ.. ಅನ್ನೋ ಹುಳ ಬಿಟ್ಟೇ ಹಾಡಿಗೆ ರೆಡಿಯಾಗಿದ್ದಾರೆ ಪ್ರೇಮ್. ಗೆಟ್ ರೆಡಿ ಟು.. ಎಣ್ಣೆಗೂ.. ಹೆಣ್ಣಿಗೂ.. ಎಲ್ಲಿಂದ ಲಿಂಕಿದೆ ಭಗವಂತಾ..

 • ನಿಧಾನವಾಗಿ ಗುಂಗು ಹಿಡಿದ ಏಕ್ ಲವ್ ಯಾ ಹಾಡು

  ನಿಧಾನವಾಗಿ ಗುಂಗು ಹಿಡಿದ ಏಕ್ ಲವ್ ಯಾ ಹಾಡು

  ಪ್ರೇಮಿಗಳ ದಿನಕ್ಕೆಂದೇ ಕಾದು ರಿಲೀಸ್ ಮಾಡಿದ ಹಾಡು ಏಕ್ ಲವ್ ಯಾ ಚಿತ್ರದ ಯಾರೆ ಯಾರೇ ನೀನು ನಂಗೆ..

  ಚಿತ್ರದ ಸಿಗ್ನೇಚರ್ ಟ್ಯೂನ್ ಇರುವ ಹಾಡಿದು. ಹಾಡಿನಲ್ಲಿ ಕಾಣಿಸಿಕೊಂಡಿರೋದು ಹೀರೋ ರಾಣಾ ಮತ್ತು ನಾಯಕಿ ರೀಷ್ಮಾ ನಾಣಯ್ಯ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರವಾದ್ದದರಿಂದ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಅದರಲ್ಲೂ ಹಾಡುಗಳ ಮೇಲೆ ಸ್ವಲ್ಪ ಜಾಸ್ತಿನೇ ಇತ್ತು. ಈ ಬಾರಿಯೂ ಅದು ಮಿಸ್ ಆಗಿಲ್ಲ.

  ಅರ್ಜುನ್ ಜನ್ಯ ಸಂಗೀತ ಮತ್ತು ಅರ್ಮಾನ್ ಮಾಲಿಕ್ ಹಾಡುಗಾರಿಕೆ ಎರಡೂ ನೋಡುಗರಿಗೆ ಇಷ್ಟವಾಗಿವೆ. ಅಷ್ಟೇ ಅಲ್ಲ, ಹಾಡಿಗೆ ಪ್ರೇಮ್ ಅವರೇ ಸಾಹಿತ್ಯ ನೀಡಿದ್ದು, ಪದ ಪದಗಳೂ ಪ್ರೇಮಿಗಳ ಹೃದಯ ತಟ್ಟಿವೆ.

  ಯೂ ಟ್ಯೂಬ್ನಲ್ಲಿ ಹಾಡು ನಿಧಾನವಾಗಿಯೇ ಗುಂಗು ಹಿಡಿಸುತ್ತಿದ್ದು, ವ್ಯೂಸ್ ಸಂಖ್ಯೆ 2 ಮಿಲಿಯನ್ ದಾಟಿದೆ.

 • ಪ್ರೇಮಿಗಳ ದಿನಕ್ಕೆ ಪ್ರೇಮ್ ಕೊಡ್ತಾರೆ ಪ್ರೇಮ ಸಂದೇಶ

  Ek Love Ya Image

  ಅಮ್ಮಂದಿರ ದಿನಕ್ಕೆ ಅದ್ಭುತ ಹಾಡುಗಳನ್ನು ಕೊಟ್ಟಿರುವ ಪ್ರೇಮ್, ಈ ಬಾರಿ ಪ್ರೇಮಿಗಳ ದಿನಕ್ಕೆ ವಿಶಿಷ್ಟ ಹಾಡುಗಳನ್ನು ಕೊಡುವ ಮನಸ್ಸು ಮಾಡಿದ್ದಾರೆ. ಏಕ್ ಲವ್ ಯಾ ಚಿತ್ರದ ಟೀಸರ್, ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ರಿಲೀಸ್ ಆಗಲಿದೆ. ಪ್ರೇಮ್ ಅವರ ಬಾಮೈದ ಅರ್ಥಾತ್ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಹೀರೋ ಆಗಿರುವ ಚಿತ್ರವಿದು. ಅಭಿಷೇಕ್ ರಾವ್ ಅವರಿಗೆ ರಾಣಾ ಎಂದು ನಾಮಕರಣ ಮಾಡಿದ್ದಾರೆ ಪ್ರೇಮ್.

  ರಾಣಾ ಅಭಿನಯದ ಮೊದಲ ಚಿತ್ರದಲ್ಲಿ ರಚಿತಾ ರಾಮ್ ಕೂಡಾ ನಟಿಸಿದ್ದು, ರೀಷ್ಮಾ ನಾಣಯ್ಯ ರಾಣಾಗೆ ಜೋಡಿ.

 • ಮುತ್ತತ್ತಿಯಲ್ಲಿ ಏಕ್ ಲವ್ ಯಾ ಕುಂಭಳಕಾಯಿ

  ಮುತ್ತತ್ತಿಯಲ್ಲಿ ಏಕ್ ಲವ್ ಯಾ ಕುಂಭಳಕಾಯಿ

  ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಟ್ರ್ಯಾಕ್‍ಗಳು ಈಗಾಗಲೇ ಯುವ ಪ್ರೇಮಿಗಳ ಎದೆಯಲ್ಲಿ ಗುಂಯ್‍ಗುಡುತ್ತಿವೆ. ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ ಪ್ರೇಮ್. ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ. ಮುತ್ತತ್ತಿಯಲ್ಲಿ.

  ಚಿತ್ರಕ್ಕೆ ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿ. ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಾಯಕಿ. ರಾಣಾ ರಚಿತಾ ಕಿಸ್ಸಿಂಗ್ ಇದ್ದ ಟೀಸರ್ ಸೆನ್ಸೇಷನ್ ಸೃಷ್ಟಿಸಿತ್ತು. ಅರ್ಜುನ್ ಜನ್ಯಾ ಕಂಪೋಸಿಂಗ್ ಹಾಡುಗಳೂ ಮೋಡಿ ಮಾಡಿವೆ. ಶೂಟಿಂಗ್ ಮುಗಿದಿದ್ದು, ವರ್ಷದ ಕೊನೆಗೆ ಅಥವಾ 2021ರಲ್ಲಿ ಸಿನಿಮಾ ಪ್ರೇಕ್ಷಕರಿಗೆ ಸಿಗುವ ನಿರೀಕ್ಷೆ ಇದೆ.

 • ರಚಿತಾ ರಾಮ್ ಲವ್ ಫೇಲ್ಯೂರ್

  rachita ram ek love ya heart break song

  ಒಂದರ ಹಿಂದೊAದು ಚಿತ್ರಗಳಲ್ಲಿ ಸದಾ ಬ್ಯುಸಿಯಾಗಿರುವ ರಚಿತಾ ರಾಮ್ ಅವರಿಗೆ ಪ್ರೇಮ ಭಗ್ನವಾಗಿದೆ. ಅದೆಷ್ಟು ಹುಡುಗರ ಹೃದಯ ಭಗ್ನ ಮಾಡಿದ ಶಾಪ ತಟ್ಟಿತೋ ಏನೋ.. ಈಗ ಅವರ ಲವ್ವೇ ಫೇಲ್ಯೂರು. ಕೈ ಕೊಟ್ಟ ಹುಡುಗ ಯಾರಿರಬಹುದು ಅನ್ನೋ ಡೌಟಾ..? ಅದನ್ನು ಜೋಗಿ ಪ್ರೇಮ್ ಅವರೇ ಹೇಳಬೇಕು. ರಚಿತಾಗೆ ಲವ್ ಫೇಲ್ಯೂರ್ ಮಾಡಿಸಿರೋದೇ ಅವರು. ಎಣ್ಣೆ ಹೊಡೆಸ್ತಿರೋದೂ ಅವರೇನೇ..

  ಇದೆಲ್ಲ ಏಕ್ ಲವ್ ಯಾ ಚಿತ್ರಕ್ಕಾಗಿ ನಡೆದಿರೋ ಹಾಡಿನ ಶೂಟಿಂಗ್ ಕಥೆ. ಈ ಚಿತ್ರದಲ್ಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೋ ಭಗವಂತ ಅನ್ನೋ ಹಾಡಿದೆ. ಇಲ್ಲಿ ಪ್ಯಾಥೋ ಸಾಂಗ್ ಹಾಡೋದು ಹೀರೋ ಅಲ್ಲ, ರಚಿತಾ ರಾಮ್. ಹೀಗಾಗಿ ಈ ಹಾಡು ಲವ್ ಫೇಲ್ಯೂರ್ ಆಗಿರೋ ಎಲ್ಲ ಹೆಣ್ಮಕ್ಳಿಗೆ ಅರ್ಪಣೆ ಎಂದಿದ್ದಾರೆ ಪ್ರೇಮ್.

 • ರಚಿತಾ ರಾಮ್, ರಾಣಾ ಲವ್ ಕಥೆ ಅಲ್ಲ.. ಸತ್ಯ..!

  ek love ya is reality

  ಏಕ್ ಲವ್ ಯಾ ಟೀಸರ್ ಹೊರಬಿದ್ದ ಕ್ಷಣದಿಂದ ಎಲ್ಲೆಡೆ ಸೆನ್ಸೇಷನ್ ಸೃಷ್ಟಿಸಿದ್ದು ರಚಿತಾ ರಾಮ್ ಧಮ್ ಮತ್ತು ಕಿಸ್ ವಿಡಿಯೋ. ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾದಲ್ಲಿ ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಎದುರು ಹೀರೋ ಆಗಿರುವುದು ರಕ್ಷಿತಾ ಪ್ರೇಮ್ ತಮ್ಮ ರಾಣಾ. ರಾಣಾ ಎಂಟ್ರಿ ಕೊಡುತ್ತಿರುವ ಚಿತ್ರದಲ್ಲಿ ಇರೋದು ಕಾಲ್ಪನಿಕ ಕಥೆನಾ..? ಈ ಪ್ರಶ್ನೆಗೆ ಪ್ರೇಮ್ ಕೊಟ್ಟಿರುವ ಉತ್ತರ ನೋ.

  ಏಕ್ ಲವ್ ಯಾ ಚಿತ್ರದಲ್ಲಿರೋದು ನೈಜ ಕಥೆಯಂತೆ. ರಿಯಲ್ ಲೈಫಲ್ಲಿ ಅವರಿಬ್ಬರೂ ಮದುವೆಯಾಗಿದ್ದಾರೆ. ಖುಷಿಯಾಗಿದ್ದಾರೆ. ಆದರೆ.. ಆ ಮದುವೆಯವರೆಗೆ ಸಾಗಿ ಬಂದ ಅವರಿಬ್ಬರ ಪ್ರೀತಿ ರಣರೋಚಕವಾಗಿದೆ. ಅದನ್ನು ಪ್ರೇಮ್ ಇನ್ನೊಂದಿಷ್ಟು ರೋಚಕವಾಗಿ ತೆರೆಗೆ ತರುತ್ತಿದ್ದಾರೆ.

  ಎಂದಿನಂತೆ ಪ್ರೇಮ್ ನಿರ್ದೇಶನದ ಚಿತ್ರವಾದ್ದರಿಂದ ಮ್ಯೂಸಿಕ್ ಬೊಂಬಾಟ್. ಅರ್ಜುನ್ ಜನ್ಯಾ ಮತ್ತೊಮ್ಮೆ ಸೆನ್ಸೇಷನ್ ಸೃಷ್ಟಿಸುವ ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಆ ಪ್ರೇಮಿಗಳು ಯಾರು..? ಎಲ್ಲಿದ್ದಾರೆ..? ಈ ಯಾವ ವಿಷಯವನ್ನೂ ಪ್ರೇಮ್ ಹೇಳಿಲ್ಲ. ವೇಯ್ಟ್ ಮಾಡಬೇಕು. ನೋಡಬೇಕು. ಅಷ್ಟೆ.

 • ಲಿಪ್ ಲಾಕ್.. ಸ್ಮೋಕಿಂಗ್.. ಏಕ್ ಲವ್ ಯಾ ಟೀಸರ್ ಸೆನ್ಸೇಷನ್

  ek love ya teaser sensation

  ಚಿತ್ರರಸಿಕರು ಕಾಯುತ್ತಿದ್ದ ಜೋಗಿ ಪ್ರೇಮ್ ಅವರ ಏಕ್ ಲವ್ ಯಾ ಟೀಸರ್, ನಿರೀಕ್ಷೆಯಂತೆಯೇ ಸಂಚಲನ ಸೃಷ್ಟಿಸಿದೆ. ಟೀಸರ್ ಶುರುವಾಗುವುದೇ ಹೀರೋ ರಾಣಾ ಜೊತೆ ರಚಿತಾ ರಾಮ್ ಸಿಗರೇಟ್ ಹಚ್ಚಿಕೊಳ್ಳೋದ್ರಿಂದ. ಮೊದಲ ಫ್ರೇಮ್ನಲ್ಲೇ ಬೆಚ್ಚಿ ಬೀಳಿಸೋ ಪ್ರೇಮ್, ಭಗ್ನ ಪ್ರೇಮಿಯೊಬ್ಬನ ಹತಾಶೆಯನ್ನು ಹೇಳಿಸುತ್ತಾರೆ.

  ಮೇಲ್ನೋಟಕ್ಕೆ ಇದೊಂದು ತ್ರಿಕೋನ ಪ್ರೇಮ ಕಥೆ ಇರಬಹುದು ಎನ್ನಿಸಿದರೂ.. ಪ್ರೇಮ್ ಮತ್ತೇನೋ ಇದೆ ಎನ್ನುವ ಕುತೂಹಲವನ್ನಂತೂ ಸೃಷ್ಟಿಸುತ್ತಾರೆ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಹೇಳುತ್ತಿರುವ ಫಸ್ಟ್ ಲವ್ ಸ್ಟೋರಿ ಇದು.

  ರಕ್ಷಿತಾ ಅವರ ಸೋದರ ರಾಣಾ ಆರಂಗ್ರೇಟಂ ಚಿತ್ರ ಏಕ್ ಲವ್ ಯಾ. ರಕ್ಷಿತಾ ಪ್ರೇಮ್ ಅವರೇ ನಿರ್ಮಾಪಕಿ. ರಾಣಾ ಜೊತೆ ರೀಷ್ಮಾ ಮತ್ತು ರಚಿತಾ ಇಬ್ಬರೂ ಇದ್ದಾರೆ. ಕೊನೆಯಲ್ಲಿ ಲಿಪ್ ಲಾಕ್ ತೋರಿಸಿ ಮೈ ಬೆಚ್ಚಗಾಗಿಸ್ತಾರೆ ಪ್ರೇಮ್. ಅರ್ಜುನ್ ಜನ್ಯಾ ಮತ್ತೊಂದು ಮ್ಯೂಸಿಕಲ್ ಹಿಟ್ ಕೊಡುವ ಸಿಗ್ನಲ್ ಕೊಟ್ಟಿದ್ದಾರೆ.

 • ವ್ಯಾಲೆಂಟೈನ್ ಡೇ ಪ್ರೇಮದ ಕಾಣಿಕೆ

  ವ್ಯಾಲೆಂಟೈನ್ ಡೇ ಪ್ರೇಮದ ಕಾಣಿಕೆ

  ಪ್ರೇಮಿಗಳ ದಿನವನ್ನು ಪ್ರೇಮಿಗಳಷ್ಟೇ ಅಲ್ಲ, ಚಿತ್ರರಂಗದವರೂ ಕಾಯುತ್ತಾರೆ. ಈ ಬಾರಿಯೂ ಅಷ್ಟೆ, ಪ್ರೇಮಿಗಳ ದಿನಕ್ಕಾಗಿ ವಿಶೇಷ ಉಡುಗೊರೆಗಳನ್ನು ಕೊಟ್ಟಿದೆ ಸ್ಯಾಂಡಲ್‍ವುಡ್.

  ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ರಕ್ಷಿತಾ ಪ್ರೇಮ್ ಸೋದರ ರಾಣಾ ನಟಿಸಿರುವ ಮೊದಲ ಚಿತ್ರದ ಹಾಡು. ಪ್ರೇಮ್ ಮತ್ತು ಅರ್ಜುನ್ ಜನ್ಯಾ ಮೋಡಿ ಹಾಡಿನ ಪದಪದದಲ್ಲೂ ಇಣುಕುತ್ತಿದೆ. ಸಿಗ್ನೇಚರ್ ಟ್ಯೂನ್ ಮತ್ತೆ ಮತ್ತೆ ಕೇಳುವಂತಿದೆ. ಯಾರೇ ಯಾರೇ.. ಹಾಡು ಪುನೀತ್ ಆದಿಯಾಗಿ ಚಿತ್ರರಂಗದ ಎಲ್ಲರನ್ನೂ ಮೋಡಿ ಮಾಡಿಬಿಟ್ಟಿದೆ.

  ಪವನ್ ಒಡೆಯರ್ ರೆಮೋ ಜೋಡಿಯ ಝಲಕ್ ಕೊಟ್ಟಿದ್ದಾರೆ. ನೆನಪಿರಲಿ ಪ್ರೇಮ್ ಅವರ ಪ್ರೇಮಂ ಪೂಜ್ಯಂ ಚಿತ್ರದ ಟೀಸರ್ ಹೊರಬಿದ್ದಿದೆ. ಲವ್ ಮಾಕ್‍ಟೇಲ್ 2 ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಶೋಕಿಲಾಲ, ರೈಡರ್, ಪದವಿಪೂರ್ವ, ಶುಗರ್ ಫ್ಯಾಕ್ಟರಿ ಚಿತ್ರತಂಡಗಳು ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿವೆ.

 • ಸಂಕ್ರಾಂತಿಗೆ ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ

  ಸಂಕ್ರಾಂತಿಗೆ ರಕ್ಷಿತಾ ಪ್ರೇಮ್ ತಮ್ಮನ ಸಿನಿಮಾ

  ಜೋಗಿ ಪ್ರೇಮ್ ನಿರ್ದೇಶನದ ಹೊಸ ಲವ್ ಸ್ಟೋರಿ ಏಕ್ ಲವ್ ಯಾ. ಇದು ರಕ್ಷಿತಾ ಪ್ರೇಮ್ ಸೋದರ ರಾಣಾ ಅಭಿನಯದ ಮೊದಲ ಸಿನಿಮಾ. ಎಕ್ಸ್ ಕ್ಯೂಸ್ ಮಿ ನಂತರ ಪ್ರೇಮ್ ಡೈರೆಕ್ಟ್ ಮಾಡಿರೋ ಅಪ್ಪಟ ಲವ್ ಸ್ಟೋರಿ. ರಕ್ಷಿತಾ ಪ್ರೇಮ್ ತಮ್ಮನ ಚಿತ್ರದ ಹಾಡುಗಳು ಈಗಾಗಲೇ ಪ್ರೇಮಿಗಳ ಎದೆಯಲ್ಲಿ ಗುಂಯ್ಗುಟ್ಟುತ್ತಿವೆ. ಚಿತ್ರಕ್ಕೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸಂಕ್ರಾಂತಿಗೆ ಅರ್ಥಾತ್ ಜನವರಿ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  ರಾಣಾ ಎದುರು ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ನಾಯಕಿಯರು. ರಚಿತಾ ರಾಮ್ ಇದೇ ಮೊದಲ ಬಾರಿಗೆ ಲಿಪ್ ಲಾಕ್ ಮಾಡಿರೋ ಚಿತ್ರದಲ್ಲಿ ರಕ್ಷಿತಾ ಕೂಡಾ ಹೆಜ್ಜೆ ಹಾಕಿದ್ದಾರೆ. ಒಟ್ಟಿನಲ್ಲಿ ಸಲಗ, ಕೋಟಿಗೊಬ್ಬ-3ಯಿಂದ ಶುರುವಾದ ಸಿನಿಮಾ ಹಬ್ಬ.. ಸಂಕ್ರಾಂತಿಗೆ ಇನ್ನೊಂದು ಮಜಲು ತಲುಪಲಿದೆ.

 • ಸರಿಗಮಪ ಹನುಮಂತ ಏಕ್ ಲವ್ ಯಾ ಎಂದಾಗ..

  ಸರಿಗಮಪ ಹನುಮಂತ ಏಕ್ ಲವ್ ಯಾ ಎಂದಾಗ..

  ಜೋಗಿ ಪ್ರೇಮ್ ತಮ್ಮ ಚಿತ್ರಗಳನ್ನು ಸ್ಪೆಷಲ್ ಆಗಿ ಪ್ರಮೋಟ್ ಮಾಡೋದ್ರಲ್ಲಿ ಸಖತ್ ಡಿಫರೆಂಟ್. ಪ್ರತಿ ಬಾರಿಯೂ ವ್ಹಾವ್ ಎನ್ನಿಸುವ ತಂತ್ರಗಳನ್ನು ಅದ್ಭುತವಾಗಿ ಬಳಸುವ ಪ್ರೇಮ್, ಈ ಬಾರಿ ಏಕ್ ಲವ್ ಯಾ ಚಿತ್ರಕ್ಕೆ ಸರಿಗಮಪ ಹನುಮಂತನನ್ನು ಕರೆ ತಂದಿದಾರೆ. ಏಕ್ ಲವ್ ಯಾ ಚಿತ್ರದ ಹಾಡೊಂದನ್ನು ಹನುಮ ಹಾಡಲಿದ್ದಾರೆ.

  ಈಗಾಗಲೇ ಹೊರಬಿದ್ದಿರುವ ಏಕ್ ಲವ್ ಯಾದ ಟ್ರ್ಯಾಕ್ಸ್, ಕೇಳುಗರ ಕಿವಿಯಲ್ಲಿ ಗುಂಯ್‍ಗುಟ್ಟುತ್ತಿವೆ. ರಕ್ಷಿತಾ ಪ್ರೇಮ್ ಸೋದರ ರಾಣಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗ ಮತ್ತೊಂದು ಹಾಡು.. ಅದೂ 2019ರಲ್ಲಿ ಕಿರುತೆರೆಯ ಸೆನ್ಸೇಷನ್ ಆಗಿದ್ದ ಹನುಮಂತನ  ಧ್ವನಿಯಲ್ಲಿ. ಲಮಾಣಿ ಜಾನಪದ ಗೀತೆಗಳನ್ನು ಜವಾರಿ ಶೈಲಿಯಲ್ಲಿ ಹಾಡಿ ಕನ್ನಡಿಗರ ಮನಸ್ಸು ಗೆದ್ದ ಹನುಮಂತನ ಮೇಲೆ ಪ್ರೇಮ್ ಕಣ್ಣು ಬಿದ್ದಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery