ರೇಖಾದಾಸ್, ಕನ್ನಡದ ಜನಪ್ರಿಯ ಹಾಸ್ಯನಟಿಯರಲ್ಲಿ ಒಬ್ಬರು. ಮೂಲತಃ ನೇಪಾಳಿ. ಆದರೆ, ಕನ್ನಡ ಕಲಿತು, ನಾಟಕಗಳಲ್ಲಿಯೂ ನಟಿಸಿ, ಕನ್ನಡತಿಯೇ ಆಗಿಹೋಗಿದ್ದಾರೆ ರೇಖಾದಾಸ್. ಕನ್ನಡದಲ್ಲಿ 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ರೇಖಾದಾಸ್ಗೆ ಯುನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ತಮಿಳುನಾಡಿನ ವಲ್ರ್ಡ್ ತಮಿಳು ಕ್ಲಾಸಿಕಲ್ ಯುನಿವರ್ಸಿಟಿ, ರೇಖಾದಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.