` avatara purusha, - chitraloka.com | Kannada Movie News, Reviews | Image

avatara purusha,

 • ಪುರುಷೋತ್ತಮನ ಟ್ರೇಲರ್ ನೋಡೋಕೆ ಸಿದ್ಧರಾಗಿ..

  ಪುರುಷೋತ್ತಮನ ಟ್ರೇಲರ್ ನೋಡೋಕೆ ಸಿದ್ಧರಾಗಿ..

  ಜಿಮ್ ರವಿ ಇದೇ ಮೊದಲ ಬಾರಿಗೆ ಹೀರೋ ಆಗಿರುವ ಸಿನಿಮಾ ಪುರುಷೋತ್ತಮ. ಸೆನ್ಸಾರ್ ಮುಗಿಸಿರುವ ಪುರುಷೋತ್ತಮ ಯು/ಎ ಪ್ರಮಾಣ ಪತ್ರವನ್ನೂ ಪಡೆದುಕೊಂಡಿದೆ. ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ, ಪ್ರಚಾರದ ಕೆಲಸಗಳಿಗೆ ಚುರುಕು ಮುಟ್ಟಿಸೋ ಪ್ಲಾನ್‍ನಲ್ಲಿದ್ದಾರೆ ರವಿ.

  ಶೋಷಣೆಗೊಳಗಾದ ಹೆಣ್ಣನ್ನು ಕಾಪಾಡುವ ಗಂಡನಾಗಿ ನಟಿಸಿದ್ದಾರೆ ರವಿ. ನಾಯಕಿಯಾಗಿರೋದು ಅಪೂರ್ವ. ಚಿತ್ರಕ್ಕೆ ನಿರ್ಮಾಪಕರೂ ಅವರೇ. ನಿರ್ದೇಶನದ ಹೊಣೆ ಹೊತ್ತಿರೋದು ದಿಲ್ದಾರ, ನಾನು ನಮ್ಮುಡ್ಗಿ ಖರ್ಚ್‍ಗೊಂದು ಮಾಫಿಯಾ ಚಿತ್ರಗಳನ್ನು ನಿರ್ದೇಶಿಸಿದ್ದ ಅಮರನಾಥ್. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿ, ಗೌರವಗಳನ್ನು ಪಡೆದಿರುವ ಜಿಮ್ ರವಿ, ಹಲವು ಸಿನಿಮಾಗಳಲ್ಲಿ ಸ್ಟಂಟ್ ಕಲಾವಿದನಾಗಿ, ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಈಗ ಹೀರೋ ಕಮ್ ನಿರ್ಮಾಪಕರಾಗಿದ್ದಾರೆ.

 • ಭವ್ಯ ಸುಶೀಲಾವತಾರ

  senior sctress bhavya as susheelamma in avatara purushara

  ಭವ್ಯ, ಈಗ ಕನ್ನಡ ಚಿತ್ರರಂಗದ ಹಿರಿಯ ನಟಿ. ಅವರೀಗ ಸುಶೀಲಾವತಾರ ಎತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರದಲ್ಲಿ ಭವ್ಯ ಅವರ ಪಾತ್ರದ ಹೆಸರು ಸುಶೀಲ. ಅವರ ಹುಟ್ಟುಹಬ್ಬಕ್ಕೆಂದೇ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಸುಶೀಲಾ ಪಾತ್ರದ ಹಿನ್ನೆಲೆ ತುಂಬಾ ವಿಭಿನ್ನವಾಗಿದೆ. ಅದೇನು ಎನ್ನುವ ಕುತೂಹಲ ಹಾಗೆಯೇ ಇರಲಿ, ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ ಸುನಿ.

  ಶರಣ್, ಅಶಿಕಾ ರಂಗನಾಥ್ ಮತ್ತೊಮ್ಮೆ ಜೋಡಿಯಾಗಿರುವ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.

   

 • ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

  ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

  ಮಾಟ, ಮಂತ್ರ, ತಂತ್ರಗಳ ಬಗ್ಗೆ ಒಂದಷ್ಟು ಜನ ಭಯ ಪಡುವುದು ಸತ್ಯವಾದರೂ, ಬಹಳಷ್ಟು ಜನ ಕೇರ್ ಮಾಡೋದಿಲ್ಲ. ಆದರೆ, ಅಂತಹ ಸಿನಿಮಾಗಳಿಗೆ ಒಂದಷ್ಟು ಖಾಯಂ ಪ್ರೇಕ್ಷಕರಿದ್ದೇ ಇರುತ್ತಾರೆ. ಅವತಾರ್ ಪುರುಷ ಇದೇ ಜಾನರ್‍ನ ಸಿನಿಮಾ.

  ಶರಣ್, ಶ್ರೀನಗರ ಕಟ್ಟಿ, ಅಶಿಕಾ ರಂಗನಾಥ್, ಸುಧಾರಾಣಿ, ಸಾಯಿ ಕುಮಾರ್, ಭವ್ಯಾ ಮೊದಲಾದ ಘಟಾನುಘಟಿ ಕಲಾವಿದರೇ ನಟಿಸಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣಕ್ಕೆ ಕುಂಭಳಕಾಯಿ ಬಿದ್ದಿದೆ.

  ವಿಶೇಷವೆಂದರೆ ಇದನ್ನು ವೆಬ್ ಸಿರೀಸ್‍ಗಾಗಿ ಮಾಡಲಾಗಿತ್ತಂತೆ. ಆದರೆ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿಯವರನ್ನು ಒಪ್ಪಿಸಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಅವತಾರ್ ಪುರುಷ, 2 ಭಾಗಗಳಲ್ಲಿ ಬರಲಿದೆ.

  ಅವತಾರ್ ಪುರುಷ ಭಾಗ 1ಕ್ಕೆ ಅಷ್ಟದಿಗ್ಬಂಧನ ಮಂಡಲಕ ಅನ್ನೋ ಟ್ಯಾಗ್‍ಲೈನ್ ಕೊಟ್ಟಿದ್ದರೆ, 2ನೇ ಭಾಗಕ್ಕೆ ತ್ರಿಶಂಕು ಅನ್ನೋ ಟೈಟಲ್ ಕೊಡಲಾಗಿದೆ. ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದೆ ಅವತಾರ್ ಟೀಂ. ಎರಡೂ ಭಾಗಗಳನ್ನು ಒಟ್ಟಿಗೇ ತರುವ ಯೋಜನೆ ಚಿತ್ರತಂಡಕ್ಕಿದೆ.

  ಹೀಗಾಗಿಯೇ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಾಟ, ಮಂತ್ರ ಅಂದ್ರೆ ಯಾರ್ಗೂ ನಂಬಿಕೆ, ಭಯ ಇಲ್ಲ. ಅಲ್ವಾ..? ಗೆಟ್ ರೆಡಿ ಫಾರ್ ದಿ ಸ್ಕೇರಿ ಡ್ರೈವ್ ಎಂದು ಟ್ವೀಟ್ ಮಾಡಿದ್ದಾರೆ.

 • ಮೇ 28ಕ್ಕಿಲ್ಲ ಅವತಾರ ಪುರುಷ

  ಮೇ 28ಕ್ಕಿಲ್ಲ ಅವತಾರ ಪುರುಷ

  ಕೊರೊನಾ ಹಾವಳಿ, ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಚಿತ್ರಗಳ ಬಿಡಗಡೆ ಮುಂದಕ್ಕೆ ಹೋಗಿದೆ. ಶರಣ್-ಸಿಂಪಲ್ ಸುನಿ-ಅಶಿಕಾ ರಂಗನಾಥ್-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್‍ನ ಅವತಾರ ಪುರುಷ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗುತ್ತಿದೆ. ಅಫ್‍ಕೋರ್ಸ್, ಅಧಿಕೃತವಾಗಿ ಇನ್ನೂ ಘೋಷಣೆಯಾಗಿಲ್ಲವಾದರೂ ಚಿತ್ರದ ಬಿಡಗಡೆ ಮುಂದಕ್ಕೆ ಹಾಕೋಕೆ ಚಿತ್ರತಂಡ ನಿರ್ಧರಿಸಿರುವುದು ಸತ್ಯ.

  ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಅದೇ ಡೇಟ್‍ಗೆ ರಿಲೀಸ್ ಮಾಡೋ ಪ್ಲಾನ್ ಹಾಗೆಯೇ ಇದೆ. ಆದರೆ ಕೊರೊನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡೋಕೆ ಆಗುತ್ತಿಲ್ಲ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  ಎಲ್ಲವೂ ಸಿದ್ಧವಾಗಿದ್ದರೂ ಚಿತ್ರದ ಬಿಡುಗಡೆ ಮೇ 28ಕ್ಕಿಲ್ಲ. ಅವತಾರ ಪುರುಷ 2 ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಮೇ 28ಕ್ಕೆ ಬರಬೇಕಿತ್ತು. ಈಗಾಗಲೇ ಚಿತ್ರದ ಟ್ರೇಲರ್ ಸಂಚಲನ ಸೃಷ್ಟಿಸಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ, ಕೊರೊನಾ ಕಪಿಮುಷ್ಠಿಯಿಂದ ದೇಶ ಬಿಡುಗಡೆಯಾಗದ ಹೊರತು ಅವತಾರ ಪುರುಷನ ದರ್ಶನ ಭಾಗ್ಯ ಕಷ್ಟ.

 • ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಮೇ 28ಕ್ಕೆ ಶರಣ್ ಅಷ್ಟಮಂಡಲಕ ದಿಗ್ಬಂಧನ

  ಫೆ.19ರಿಂದ ಶುರುವಾಗುತ್ತಿರೋ ಕನ್ನಡದ ಸ್ಟಾರ್ ನಟರ ಚಿತ್ರಗಳ ಜಾತ್ರೆ ಕಂಟಿನ್ಯೂ ಆಗಲಿದೆ. ಸರಾಸರಿ ಪ್ರತಿ 15 ದಿನಕ್ಕೊಂದು ಸ್ಟಾರ್ ಸಿನಿಮಾ ಆಗುತ್ತಿದೆ. ಮೇ 14ಕ್ಕೆ ಭಜರಂಗಿ 2 ಇದ್ದು, ಅದಾದ ನಂತರ ಮೇ 28ಕ್ಕೆ ಶರಣ್ ಎಂಟ್ರಿ ಕೊಡುತ್ತಿದ್ದಾರೆ.

  ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ನಟಿಸಿರುವ ಅವತಾರ ಪುರುಷ ಅಷ್ಟಮಂಡಲಕ ದಿಗ್ಬಂಧನ ಮೇ 28ಕ್ಕೆ ರಿಲೀಸ್ ಆಗುತ್ತಿದೆ. ಕಾಮಿಡಿ ಲವ್ ಸ್ಟೋರಿಗಳಿಗೆ ಫೇಮಸ್ ಆಗಿರೋ ಸಿಂಪಲ್ ಸುನಿ, ಈ ಬಾರಿ ಸಿಂಪಲ್ಲಾಗ್ ಒಂದಿಷ್ಟು ಹಾರರ್ ಮಿಕ್ಸ್ ಮಾಡಿದ್ದಾರೆ. ಅದೂ 2 ಭಾಗಗಳಲ್ಲಿ. ಅವತಾರ ಪುರುಷ ಚಿತ್ರದ ಭಾಗ 1 ಮೇ 28ಕ್ಕೆ ರಿಲೀಸ್ ಆದರೆ, 2ನೇ ಭಾಗ ಅದಾದ 2 ತಿಂಗಳ ನಂತರ ಥಿಯೇಟರ್‍ಗೆ ಬರಲಿದೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಸಿಂಪಲ್ ಸುನಿ ನಿರ್ದೇಶನ ಮತ್ತು ಶರಣ್ ನಟನೆ. ಎಲ್ಲವೂ ಹೊಚ್ಚ ಹೊಸ ಕಾಂಬಿನೇಷನ್ ಎನ್ನುವುದು ವಿಶೇಷ.

 • ಶರಣ್ ಅವತಾರಗಳಿಗೆ ಪ್ರೇಕ್ಷಕರ ಪ್ರೇಮ ದಿಗ್ಬಂಧನ

  ಶರಣ್ ಅವತಾರಗಳಿಗೆ ಪ್ರೇಕ್ಷಕರ ಪ್ರೇಮ ದಿಗ್ಬಂಧನ

  ತಮ್ಮ ರೆಗ್ಯುಲರ್ ಜಾನರ್ ಬಿಟ್ಟು ಬಂದ ಸಿಂಪಲ್ ಸುನಿ, ಅವತಾರ ಪುರುಷ ಅಷ್ಟದಿಗ್ಬಂಧನ ಮಂಡಲಕ ಸಿನಿಮ ಮೂಲಕವೂ ಗೆದ್ದಿದ್ದಾರೆ. ಸುನಿ ಶರಣ್ ಅವರನ್ನಿಟ್ಟುಕೊಂಡು ನಾನಾ ಬಗೆಯ ಅವತಾರ ಮಾಡಿಸಿ ನಕ್ಕು ನಲಿಸಿ, ಕುತೂಹಲ ಹುಟ್ಟಿಸಿ ಭಯಾನಕತೆ ಸೃಷ್ಟಿಸಿ ಪ್ರೇಕ್ಷಕರ ಹೃದಯ ಕದ್ದಿದ್ದಾರೆ.

  ಚಿಕ್ಕಂದಿನಲ್ಲಿ ತಪ್ಪಿಸಿಕೊಂಡು ಹೋದ ಮಗನ ಅವತಾರದಲ್ಲಿ ಬರುವ ಓವರ್ ಆಕ್ಟಿಂಗ್ ಸುನಿಲ ಕರ್ಣನಾಗುತ್ತಾನೆ. 500 ರುಪಾಯ್ ಕೊಟ್ರೆ ಮಗನಾಗ್ತಾನೆ. 1000 ರುಪಾಯ್ ಕೊಟ್ರೆ ಕಳ್‍ನನ್ ಮಗನೂ ಆಗ್ತಾನೆ ಎಂದು ಪರಿಚಯ ಮಾಡಿಸಿದಾಗ ಇವನೇ ಬೇಕು ಎಂದು ಖುಷಿಯಾಗುವ ಅಶಿಕಾ ರಂಗನಾಥ್ ನಗೆಯ ಲಡ್ಡುವನ್ನು ಬಾಯಲ್ಲೇ ಇಡ್ತಾರೆ. ಶರಣ್ ಪಾತ್ರದ ಟ್ವಿಸ್ಟು ಮತ್ತು ಶ್ರೀನಗರ ಕಿಟ್ಟಿಯ ಸಸ್ಪೆನ್ಸ್ ಎಂಟ್ರಿಯೊಂದಿಗೆ ಅಷ್ಟಮಂಡಲ ದಿಗ್ಬಂದನ ಮಂಡಲಕ ಮುಗಿದಿದೆ. ಪ್ರೇಕ್ಷಕರು ಖುಷ್ ಹುವಾ..

 • ಶರಣ್ ಪುತ್ರಿ ಚಿನಕುರುಳಿ ಪುಣ್ಯ ಸಿನಿಮಾ ಎಂಟ್ರಿ

  sharan's daughter enters film industry

  ಕಾಮಿಡಿ ಸ್ಟಾರ್ ಶರಣ್ ಪುತ್ರಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶರಣ್ ಅಭಿನಯದ ಅವತಾರ್ ಪುರುಷ ಚಿತ್ರದಲ್ಲಿ ಶರಣ್ ಪುತ್ರಿ ಪುಣ್ಯ ಕೂಡಾ ನಟಿಸುತ್ತಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮುದ್ದು ಮುದ್ದಾಗಿರುವ ಪುಣ್ಯಳ ಎಂಟ್ರಿಯನ್ನು ಅವತಾರ್ ಪುರುಷ ಚಿತ್ರತಂಡ, ಪುಣ್ಯ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿಯೇ ಘೋಷಿಸಿದೆ. 

  ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರಕ್ಕೆ ಶರಣ್ ಹೀರೋ. ಅಶಿಕಾ ರಂಗನಾಥ್ ಹೀರೋಯಿನ್. ಪುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

  ಚಮಕ್ ಚಿತ್ರದಲ್ಲಿ ಗಣೇಶ್ ಮಗಳನ್ನು ಬೆಳ್ಳಿತೆರೆಗೆ ತಂದಿದ್ದ ಸುನಿ, ಈ ಚಿತ್ರದಲ್ಲಿ ಶರಣ್ ಪುತ್ರಿಯನ್ನು ಪರಿಚಯಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

 • ಸಾಯಿಕುಮಾರ್ ಅಣ್ಣ, ಸುಧಾರಾಣಿ ತಂಗಿ.!!

  25 years later sai kumar and sudharani come together

  ಕನ್ನಡದಲ್ಲಿ ಸಾಯಿಕುಮಾರ್ ಹೀರೋ ಆಗಿ ನಟಿಸಿದ ಮೊದಲ ಚಿತ್ರ ಕುಂಕುಮ ಭಾಗ್ಯ. ಆ ಚಿತ್ರದಲ್ಲಿ ಸುಧಾರಾಣಿ, ಸಾಯಿಕುಮಾರ್‍ಗೆ ನಾಯಕಿ. ಈಗ ಸಾಯಿಕುಮಾರ್‍ಗೆ ಸುಧಾರಾಣಿ ತಂಗಿಯಾಗಿದ್ದಾರೆ. ಅವತಾರ್ ಪುರುಷ ಚಿತ್ರದಲ್ಲಿ.

  ಅವತಾರ್ ಪುರುಷ ಸಿನಿಮಾದಲ್ಲಿ ಸಾಯಿಕುಮಾರ್ ಅವರದ್ದು ರಾಮಾ ಜೋಯಿಸ್ ಎನ್ನುವ ಆಯುರ್ವೇದಿಕ್ ಪಂಡಿತನ ಪಾತ್ರ. ಅವರಿಗೆ ತಂಗಿಯಾಗಿರುವುದು ಸುಧಾರಾಣಿ. ಸಾಯಿಕುಮಾರ್‍ಗೆ ಭವ್ಯ ಜೋಡಿ.

  ರಂಗಿತರಂಗ ನಂತರ ಒಂದೊಳ್ಳೆ ವಿಶೇಷ ಪಾತ್ರ ಸಿಕ್ಕಿದೆ ಎನ್ನುವ ಖುಷಿಯಲ್ಲಿರುವ ಸಾಯಿಕುಮಾರ್‍ಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಭಲೇ ಇಷ್ಟವಾಗಿದ್ದಾರೆ. ಕಾರಣ ಇಷ್ಟೆ..

  ಚಿತ್ರದ ಪೋಷಕ ನಟನ ಪಾತ್ರಕ್ಕೂ ಲಾಂಚಿಂಗ್ ಸಂಭ್ರಮ ಮಾಡುತ್ತಿರುವ ಸಂಭ್ರಮ. ಸಾಯಿಕುಮಾರ್ ಹುಟ್ಟುಹಬ್ಬಕ್ಕೆ ಪುಷ್ಕರ್ ನೀಡಿದ ಸ್ಪೆಷಲ್ ಕಾಣಿಕೆ. ಅಫ್‍ಕೋರ್ಸ್, ಅದು ಪುಷ್ಕರ್ ಅವರ ಪ್ಯಾಷನ್.

  ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಶರಣ್ ನಾಯಕ, ಅಶಿಕಾ ರಂಗನಾಥ್ ನಾಯಕಿ.

  ಅಂದಹಾಗೆ ಶರಣ್ ಚಿತ್ರಗಳಲ್ಲಿ ಸಾಯಿಕುಮಾರ್ ತಮ್ಮ ರವಿಶಂಕರ್ ಭಲೇ ಜೋಡಿ. ಅಣ್ಣನೊಂದಿಗೆ ಶರಣ್ ನಟಿಸ್ತಿರೋದು ಇದೇ ಫಸ್ಟ್ ಟೈಮು.

 • ಸಿಂಪಲ್ ಸುನಿ ಆಫರ್ ಕೊಟ್ಟರೂ ಕೊಹ್ಲಿ ಉಳಿಸಿಕೊಳ್ಳಲಿಲ್ಲ..!

  ಸಿಂಪಲ್ ಸುನಿ ಆಫರ್ ಕೊಟ್ಟರೂ ಕೊಹ್ಲಿ ಉಳಿಸಿಕೊಳ್ಳಲಿಲ್ಲ..!

  ಸಿಂಪಲ್ ಸುನಿ. ಸಿನಿಮಾ ನಿರ್ದೇಶಕರಷ್ಟೇ ಅಲ್ಲ, ಅಪ್ಪಟ ಕ್ರಿಕೆಟ್ ಪ್ರೇಮಿ. ರಣಜಿ ಕ್ರಿಕೆಟ್‍ನ್ನೂ ಬಿಡದೆ ಫಾಲೋ ಮಾಡುವ ಅಪ್ಪಟ ಕ್ರಿಕೆಟ್ ಅಭಿಮಾನಿ. ಸಹಜವಾಗಿಯೇ ಆರ್.ಸಿ.ಬಿ. ಫ್ಯಾನು. ವಿರಾಟ್ ಕೊಹ್ಲಿಗೆ ಕಟ್ಟರ್ ಫ್ಯಾನು. ಹೀಗಾಗಿ ಅವರು ಬುಧವಾರ ಒಂದು ಆಫರ್ ಬಿಟ್ಟಿದ್ದರು. ಚೆನ್ನೈ ಮತ್ತು ಆರ್‍ಸಿಬಿ ಮ್ಯಾಚ್‍ನಲ್ಲಿ ಕೊಹ್ಲಿ ಸೆಂಚುರಿ ಹೊಡೆದರೆ.. ಅವರ ಟ್ವೀಟ್‍ನ್ನು ರೀ ಟ್ವೀಟ್ ಮಾಡಿದವರಿಗೆಲ್ಲ ಅವತಾರ ಪುರುಷ ಟಿಕೆಟ್ ಫ್ರೀ ಎಂದಿದ್ದರು ಸುನಿ.

  ಸುನಿ ನಿರ್ದೇಶನದ ಅವತಾರ ಪುರುಷ ಇದೇ ವಾರ ರಿಲೀಸ್. ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಕಾಮಿಡಿ ಹಾರರ್ ಸಬ್ಜೆಕ್ಟ್ ಇದೆ. ಸುನಿಯವರ ಆಸೆ ಮತ್ತು ಆಫರ್‍ಗೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಸಪೋರ್ಟೂ ಇತ್ತು. ಆದರೆ.. ಫೈನಲಿ..

  ಆರ್.ಸಿ.ಬಿ. ಮ್ಯಾಚ್ ಗೆಲ್ತು. ಇದೇ ಟೂರ್ನಿಯಲ್ಲಿ ಆಗಿದ್ದ ಸೋಲಿನ ಸೇಡು ತೀರಿಸಿಕೊಳ್ತು. ಆದರೆ ಕೊಹ್ಲಿ ಆಟ 30 ರನ್ನಿಗೇ ಮುಗಿದು ಹೋಯ್ತು. ಸೆಂಚುರಿಗೆ ಜಸ್ಟ್ 70 ರನ್ ಕಡಿಮೆ.

  ಆದರೆ.. ಸುನಿ & ಆರ್.ಸಿಬಿ. ಅಭಿಮಾನಿಗಳು ಮಾತ್ರ..  ಐಪಿಎಲ್ ಅತ್ಲಾಗಿರಲಿ.. ಸಿನಿಮಾ ಸೂಪರ್ ಆಗಿ ಗೆಲ್ಲಲಿ ಎನ್ನುತ್ತಿದ್ದಾರೆ.

 • ಸಿಂಪಲ್ ಸುನಿ ಡಬಲ್ ಪಟಾಕಿ

  ಸಿಂಪಲ್ ಸುನಿ ಡಬಲ್ ಪಟಾಕಿ

  ನವೆಂಬರ್ 26ಕ್ಕೆ ಗಣೇಶ್, ನಿಶ್ವಿಕಾ ನಾಯ್ಡು ನಟಿಸಿರೋ ಸಖತ್ ರಿಲೀಸ್.

  ಡಿಸೆಂಬರ್ 10ಕ್ಕೆ ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಅವತಾರ್ ಪುರುಷ ರಿಲೀಸ್.

  ಎರಡೂ ಚಿತ್ರಗಳ ಡೈರೆಕ್ಟರ್ ಒಬ್ಬರೇ. ಸಿಂಪಲ್ ಸುನಿ. ಹಾಗಾಗಿಯೇ ಇದು ಡಬಲ್ ಪಟಾಕಿ.

  ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಸೋಳಂಕಿ, ಸುಪ್ರೀತ್ ನಿರ್ಮಾಪಕರಾದರೆ, ಅವತಾರ್ ಪುರುಷ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

  ಸುನಿ ಕೈಚಳಕ ಇದ್ದ ಮೇಲೆ ನಗುವಿಗೆ ಬರವಿರಲ್ಲ. ಜೊತೆಗೆ ಸಖತ್ ಚಿತ್ರದಲ್ಲಿ ಗಣೇಶ್ ಹೀರೋ ಆದರೆ, ಅವತಾರ್ ಪುರುಷನಾಗಿರೋದು ಶರಣ್. ಅಲ್ಲಿಗೆ ನಗುವೂ ಡಬಲ್ ಪಟಾಕಿಯಂತೆ ಸಿಡಿಯಲಿದೆ.