ಓವರ್ ಆ್ಯಕ್ಟಿಂಗ್ ಅನಿಲ : ಶರಣ್
ಓವರ್ ಆಕ್ಟಿಂಗ್ ಮಾಡೋದೇ ಇವನಿಗೆ ಮುಳುವಾಗಬಹುದಾ..? ಶರಣ್ ಪಾತ್ರದಲ್ಲಿ ನಟಿಸಿದ್ದಾರೆ ಅನ್ನೋದಕ್ಕಿಂತ ಜೀವಿಸಿದ್ದಾರೆ. 100ನೇ ಸಿನಿಮಾದಲ್ಲಿ ಹೀರೋ ಆಗಿ ಗೆದ್ದ ಶರಣ್‍ಗೆ ಈ ಪಾತ್ರ ತಮ್ಮ ಆರಂಭದ ದಿನಗಳನ್ನು ನೆನಪಿಸಿದೆಯಂತೆ.
ಸಿರಿ : ಅಶಿಕಾ ರಂಗನಾಥ್
ಅನಿಲನನ್ನು ಕರ್ಣ ಎಂದು ಹೇಳ್ಕೊಂಡು ಕರೆದುಕೊಂಡು ಬರೋ ಚೆಲುವೆ. ಬೇಕಿತ್ತಾ ಇದೆಲ್ಲ ಅನ್ನೋವಾಗ್ಲೇ ಲವ್ವಾಗುತ್ತೆ.. ಮುಂದಿರೋದೇ ಚುಟು ಚುಟು..
ರಾಮಾ ಜೋಯಿಸ್ : ಸಾಯಿಕುಮಾರ್
ಸಕಲ ವಿದ್ಯಾಪಾರಂಗತರು.
ಸುಶೀಲಾ : ಭವ್ಯ
ಇವರು ಹುಡುಕುತ್ತಿರುವ ಮಗನೇ ಕರ್ಣ. ಆತ ಅನಿಲ್ ಅರ್ಥಾತ್ ಶರಣ್ ಅಲ್ಲ. ರಿಯಲ್ ಕರ್ಣ ಸಿಗ್ತಾನಾ..?
ಯಶೋಧಾ : ಸುಧಾರಾಣಿ
ತವರು ಮನೆಯ ಪ್ರೀತಿಗಾಗಿ ಕಾಯುತ್ತಿರೋ ಮಗಳು. ಇವರಿಗಾಗಿಯೇ ಸಿರಿ ಅನಿಲನನ್ನು ಕರ್ಣನನ್ನಾಗಿ ತೋರಿಸುವ ಸಾಹಸಕ್ಕೆ ಕೈ ಹಾಕೋದು.
ಗಣಪ : ಸಾಧುಕೋಕಿಲ
ಕಾಮಿಡಿಗಾಗಿಯೇ ಹುಟ್ಟಿದ ಅರ್ಧಂಬರ್ಧ ತಿಳಿದುಕೊಂಡಿರೋ ಗಾಂಪ
ಇನ್ನು ಭೋಜರಾಜ, ಕಂಠೀ ಜೋಯಿಸ, ಬ್ರಹ್ಮ ಜೋಯಿಸ, ಹಿನ್ನುಡಿ.. ಹೀಗೆ ಹಲವು ಪಾತ್ರಗಳು ಬರುತ್ತವೆ. ಶಾಕ್ ಕೊಡಲೆಂದೇ ಬರುವವನು ಕುಮಾರ.
ಕುಮಾರ : ಶ್ರೀನಗರ ಕಿಟ್ಟಿ
ಈತನಿಗೆ ನಿಲುಕದ.. ಸಿಲುಕದ ಶಕ್ತಿಗಳೇ ಇಲ್ಲ..
ಇವರನ್ನೆಲ್ಲ ಇಟ್ಟುಕೊಂಡೇ ಅವತಾರ ಪುರುಷನಿಗೆ ಅಷ್ಟದಿಗ್ಬಂಧನ ಮಂಡಲಕ ಹಾಕಿಸಿದ್ದಾರೆ ಸುನಿ. ಸೇಫ್ ಝೋನ್‍ನಿಂದ ಆಚೆ ಹೋಗಿ ಸೃಷ್ಟಿಸಿರೋ ಹೊಸತನದ ಕತೆ ಅವತಾರ ಪುರುಷ. ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ನಿರೀಕ್ಷೆ ದೊಡ್ಡದು.