` trisha, - chitraloka.com | Kannada Movie News, Reviews | Image

trisha,

 • ಚಾರ್ಮಿ ಜೊತೆ ಮದುವೆಗೆ ಓಕೆ ಎಂದ ತ್ರಿಶಾ ?

  charmi kaur to marry trisha ?

  ಒಬ್ಬರು ಚಾರ್ಮಿ ಕೌರ್. ಪಂಚಭಾಷಾ ನಟಿ. ತೆಲುಗು ಚಿತ್ರ ರಸಿಕರ ಹಾಟ್ ಫೇವರಿಟ್. ಮತ್ತೊಬ್ಬರು ತ್ರಿಶಾ ಕೃಷ್ಣನ್. ತೆಲುಗು, ತಮಿಳು ಚಿತ್ರರಸಿಕರ ಹಾರ್ಟ್ ಫೇವರಿಟ್. ಇವರಿಬ್ಬರೂ ಈಗ ಮದುವೆಗೆ ರೆಡಿಯಾಗಿದ್ದಾರೆ. 

  ಆಗಿರೋದು ಇಷ್ಟು..ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ತ್ರಿಶಾಗೆ, ಟ್ವಿಟರ್‍ನಲ್ಲಿಯೇ ಶುಭ ಕೋರಿರುವ ಚಾರ್ಮಿ, ಬೇಬಿ.. ನಾನು ಮೊಣಕಾಲ ಮೇಲೆ ಕುಳಿತು ನಿನ್ನ ಪ್ರೇಮ ಭಿಕ್ಷೆ ಬೇಡುತ್ತಿದ್ದೇನೆ, ಒಪ್ಪಿಕೋ ಎಂದಿದ್ದಾರೆ... ಅಷ್ಟೇ ಅಲ್ಲ, ಬ್ರಾಕೆಟ್‍ನಲ್ಲಿ ಈಗ ನಮ್ಮಿಬ್ಬರ ಮದುವೆಗೆ ಕಾನೂನಿನ ಅನುಮತಿಯಿದೆ ಎಂದೂ ಹೇಳಿದ್ದಾರೆ.

  ಚಾರ್ಮಿಯ ಪ್ರೇಮ ನಿವೇದನೆಗೆ ತ್ರಿಶಾ, `ನಾನು ಯಾವತ್ತೋ ನಿನ್ನ ಪ್ರೀತಿಗೆ ಓಕೆ ಎಂದು ಹೇಳಿ ಆಗಿದೆ' ಎಂದಿದ್ದಾರೆ.

  ಇವರಿಬ್ಬರ ಆನ್‍ಲೈನ್ ಪ್ರೀತಿ, ಪ್ರೇಮ, ನಿವೇದನೆ.. ನೂರಾರು ಅನುಮಾನ ಹುಟ್ಟುಹಾಕಿರೋದು ಸುಳ್ಳಲ್ಲ. ಹಾಗಾದರೆ..

Shivarjun Trailer Launch Gallery

Popcorn Monkey Tiger Movie Gallery