ಆಪರೇಷನ್ ಅಲಮೇಲಮ್ಮ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಕವಲುದಾರಿಯಲ್ಲಿ ಮನಸೂರೆಗೊಂಡ ನಟ ರಿಷಿ, ಈಗ ಮದುವೆಯ ಆಪರೇಷನ್‍ಗೆ ಒಳಗಾಗಿದ್ದಾರೆ. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಬಂದ ರಿಷಿಗೆ, ಪ್ರೇಮದ ಲೋಕ ಸೇರಿದ್ದು ಕೂಡಾ ರಂಗಭೂಮಿಯಲ್ಲಿದ್ದಾಗಲೇ ಎನ್ನುವುದು ವಿಶೇಷ. ರಿಷಿ ಮದುವೆಯಾಗುತ್ತಿರುವ ಹುಡುಗಿ ಸ್ವಾತಿ. ತಮಿಳಿನವರು.
ನನ್ನ ಅವರ ಪರಿಚಯ ಆಗಿದ್ದು ರಂಗಭೂಮಿಯಲ್ಲಿ. ನಾಟಕವೊಂದರ ರಿಹರ್ಸಲ್‍ನಲ್ಲಿ ಮೊದಲ ಬಾರಿಗೆ ಭೇಟಿಯಾದೆವು. 2 ವರ್ಷದ ಸ್ನೇಹ, ಒಂದ ವರ್ಷದ ಪ್ರೀತಿ ಎನ್ನುವ ರಿಷಿ, ಸ್ವಾತಿಗೆ ಕನ್ನಡವನ್ನೂ ಕಲಿಸಿಬಿಟ್ಟಿದ್ದಾರೆ.
ತಮಿಳುನಾಡು ಮೂಲದ ಸ್ವಾತಿ ಓದಿದ್ದು, ಬೆಳೆದಿದ್ದು ಜಪಾನ್‍ನಲ್ಲಿ. ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಸ್ವಾತಿ, ಕಂಪೆನಿಗಳಿಗೆ ಕಂಟೆಂಟ್ ರೈಟರ್ ಆಗಿದ್ದಾರೆ. ರಂಗಭೂಮಿ ನಂಟಿದ್ದರೂ, ಬರವಣಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದಾರೆ ಸ್ವಾತಿ. ಇಬ್ಬರ ಮದುವೆಗೆ ಹಿರಿಯರು ಓಕೆ ಎಂದಿದ್ದು, ನಿಶ್ಚಿತಾರ್ಥವೂ ಆಗಿದೆ.