` ramya, - chitraloka.com | Kannada Movie News, Reviews | Image

ramya,

  • ರಮ್ಯಾ ಬರೋದು ಪಕ್ಕಾ : ನಿರ್ಮಾಪಕಿ ಆಗ್ತಾರಾ? ಹೀರೋಯಿನ್ ಆಗ್ತಾರಾ..?

    ರಮ್ಯಾ ಬರೋದು ಪಕ್ಕಾ : ನಿರ್ಮಾಪಕಿ ಆಗ್ತಾರಾ? ಹೀರೋಯಿನ್ ಆಗ್ತಾರಾ..?

    ಮೋಹಕ ತಾರೆ ರಮ್ಯಾ ನಟಿಸಿದ್ದ ಕೊನೆಯ ಸಿನಿಮಾ ಆರ್ಯನ್. ಕೊನೆಯದಾಗಿ ತೆರೆ ಮೇಲೆ ಕಾಣಿಸಿದ್ದು ನಾಗರಹಾವು ಚಿತ್ರದಲ್ಲಿ. ಅದಕ್ಕೂ ಸುಮಾರು 2 ವರ್ಷ ಮೊದಲೇ ಸಿನಿಮಾದಿಂದ ವಿಮುಖರಾಗುತ್ತಿದ್ದ ರಮ್ಯಾ 2014ರ ನಂತರ ನಟಿಸಿಲ್ಲ. ನಾಗರಹಾವು ರಿಲೀಸ್ ಆಗಿದ್ದು 2016ರಲ್ಲಾದರೂ ರಮ್ಯಾ ಆ ಚಿತ್ರದಲ್ಲಿ ನಟಿಸಿ ಯಾವುದೋ ಕಾಲವಾಗಿತ್ತು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗಿ, ಮಂಡ್ಯದ ಸಂಸದೆಯಾಗಿ, ಕಾಂಗ್ರೆಸ್ ವಕ್ತಾರರಾಗಿ ದೇಶದಾದ್ಯಂತ ಸದ್ದು ಮಾಡಿದ್ದ ರಮ್ಯಾ ಈಗ ಮತ್ತೆ ಬರುತ್ತಿದ್ದಾರೆ.

    ನಾನು ಒಂದಷ್ಟು ಕಥೆ ಕೇಳುತ್ತಿದ್ದೇನೆ. ಶೀಘ್ರದಲ್ಲಿಯೇ ನಾನೇ ಅಧಿಕೃತವಾಗಿ ಹೇಳುತ್ತೇನೆ. ಅಲ್ಲಿಯವರೆಗೂ ಬರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದಿದ್ದಾರೆ ರಮ್ಯಾ. ಅಲ್ಲಿಗೆ ರಮ್ಯಾ ಚಿತ್ರರಂಗಕ್ಕೆ ಬರೋದು ಪಕ್ಕಾ ಆಗಿದೆ. ನಿರ್ಮಾಪಕಿಯಾಗಿ ಬರುತ್ತಾರೋ.. ನಾಯಕಿಯಾಗಿ ಬರುತ್ತಾರೋ ಅನ್ನೋ ಕುತೂಹಲವಿದೆ ಅಷ್ಟೆ.

    ಒಂದು ಮೂಲದ ಪ್ರಕಾರ ಈಗ ದೇಶದ ಪ್ರತಿಷ್ಠಿತ ಬ್ಯಾನರ್‍ಗಳಲ್ಲಿ ಒಂದಾಗಿರುವ ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರೋ ಹೊಸ ಚಿತ್ರದಲ್ಲಿ ರಮ್ಯಾ ನಟಿಸಲು ಒಪ್ಪಿದ್ದಾರೆ. ಮಾಚ್ ಮಧ್ಯಂತರ ಅಥವಾ ಏಪ್ರಿಲ್`ನಲ್ಲಿ ಅದು ಅಧಿಕೃತವಾಗಲಿದೆ.

  • ರಮ್ಯಾ ಮತ್ತೆ ಕಟ್ಟಿದರು ಬಣ್ಣದ ಗೆಜ್ಜೆ

    ರಮ್ಯಾ ಮತ್ತೆ ಕಟ್ಟಿದರು ಬಣ್ಣದ ಗೆಜ್ಜೆ

    ಬಣ್ಣದ ಗೆಜ್ಜೆ. 1990ರಲ್ಲಿ ಬಂದಿದ್ದ ಸಿನಿಮಾ. ರವಿಚಂದ್ರನ್, ಅಮಲಾ ನಾಗಾರ್ಜುನ್, ಭಾರತಿ ವಿಷ್ಣುವರ್ಧನ್, ಕಲ್ಯಾಣ್ ಕುಮಾರ್, ದೇವರಾಜ್, ಸುರೇಶ್ ಹೆಬ್ಳೀಕರ್ ಮೊದಲಾದವರು ನಟಿಸಿದ್ದ ಸಿನಿಮಾ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಕ. ಆಗಿನ ಕಾಲಕ್ಕೆ ಅದು ಸೂಪರ್ ಡ್ಯೂಪರ್ ಹಿಟ್. ಹಂಸಲೇಖ ನಿರ್ದೇಶನದ ಹಾಡುಗಳೆಲ್ಲ ಸೂಪರ್ ಹಿಟ್. ಅದರಲ್ಲೂ ಸ್ವಾತಿ ಮುತ್ತಿನ ಮಳೆ ಹನಿಯೇ.. ಇವತ್ತಿಗೂ ಪ್ರೇಮಿಗಳ ಹಾರ್ಟ್ ಫೇವರಿಟ್. ಈಗ ಅದೇ ಸಾಲನ್ನು ಚಿತ್ರದ ಟೈಟಲ್ ಮಾಡಿ ಸಿನಿಮಾ ಮಾಡುತ್ತಿದ್ದಾರೆ ರಮ್ಯಾ. ಜೊತೆಯಾಗಿರೋದು ರಾಜ್ ಬಿ.ಶೆಟ್ಟಿ.

    ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಅಧಿಕೃತವಾಗಿ ವಾಪಸ್ ಬಂದಿದ್ದಾರೆ. ರಾಜ್ ಬಿ.ಶೆಟ್ಟಿ ಜೊತೆಗೆ ರಮ್ಯಾ ಸಿನಿಮಾ ಮಾಡುತ್ತಾರೆ ಎಂಬ ವದಂತಿಗಳು ಈಗ ವದಂತಿಗಳಲ್ಲ. ಗಾಳಿಸುದ್ದಿಗಳಲ್ಲ. ಈಗ ಅಧಿಕೃತ. ದಸರಾಗೆ ಒಂದು ಶುಭ ಸುದ್ದಿ ಕೊಡುತ್ತೇನೆ ಎಂದಿದ್ದರು ರಮ್ಯಾ. ಅದೀಗ ಸ್ವಾತಿ ಮುತ್ತಿನ ಮಳೆ ಹನಿಯಾಗಿದೆ.

    ರಮ್ಯ ಮತ್ತು ರಾಜ್ ಬಿ.ಶೆಟ್ಟಿ ಜೊತೆ ಎಂದಿನಂತೆ ಅವರ ಟೀಮಿನ ಸದಸ್ಯರಾದ ಮಿಥುನ್ ಮುಕುಂದನ್,  ಪ್ರವೀಣ್ ಇರುತ್ತಾರೆ. ನಿರ್ದೇಶನ ರಾಜ್ ಬಿ.ಶೆಟ್ಟರದ್ದು. ನಾಯಕರೂ ಅವರೇ. ನಿರ್ಮಾಣ ರಮ್ಯಾ ಅವರದ್ದೇ. ಜೊತೆಯಲ್ಲಿ ಕಾರ್ತಿಕ್ ಗೌಡ ಸಾಥ್ ನೀಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

  • ರಮ್ಯಾ ಮತ್ತೆ ರಾಜಕೀಯಕ್ಕೆ ಬರ್ತಾರಾ? ದಿವ್ಯಸ್ಪಂದನ ಕೊಟ್ಟ ಉತ್ತರವಿದು

    ರಮ್ಯಾ ಮತ್ತೆ ರಾಜಕೀಯಕ್ಕೆ ಬರ್ತಾರಾ? ದಿವ್ಯಸ್ಪಂದನ ಕೊಟ್ಟ ಉತ್ತರವಿದು

    ದಿವ್ಯಸ್ಪಂದನ ರಮ್ಯಾ ಮತ್ತೆ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದ ಪ್ರಭಾವಿ ನಾಯಕಿಯಾಗಿದ್ದ ರಮ್ಯಾ ಈಗ ರಾಜಕೀಯಕ್ಕೆ ಗುಡ್ ಬೈ ಹೇಳಿದಂತಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ರಾಜಕೀಯ ಹೇಳಿಕೆ ಕೊಡುವುದು ಬಿಟ್ಟರೆ ರಮ್ಯಾ ರಾಜಕೀಯ ಫುಲ್ ಸೈಲೆಂಟ್. ಒಮ್ಮೆ ಸಂಸದೆಯೂ ಆಗಿದ್ದ ರಮ್ಯಾ ಮತ್ತೆ ರಾಜಕೀಯಕ್ಕೆ ಬರ್ತಾರಾ?

    ಇತ್ತೀಚೆಗಷ್ಟೇ ಆಪಲ್ ಬಾಕ್ಸ್ ಮೂಲಕ ಎರಡು ಸಿನಿಮಾ ನಿರ್ಮಿಸುವ ಘೋಷಣೆ ಮಾಡಿದ್ದ ರಮ್ಯಾ ಆ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದರ ಜೊತೆಯಲ್ಲಿ ರಕ್ಷಿತ್ ಶೆಟ್ಟಿ ಅಥವಾ ರಾಜ್ ಬಿ.ಶೆಟ್ಟಿ ಚಿತ್ರದಲ್ಲಿ ನಟಿಸುವ ಸುಳಿವನ್ನೂ ಕೊಟ್ಟಿದ್ದಾರೆ. ಯಾರೋ ಒಬ್ಬ ಶೆಟ್ಟರ ಚಿತ್ರದಲ್ಲಿ ನಟಿಸುವುದು ಪಕ್ಕಾ ಎಂದಿರೋ ರಮ್ಯಾ ಅದು ಯಾವ ಶೆಟ್ಟಿ ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸ್ಕ್ರಿಪ್ಟ್ ಇಷ್ಟವಾಗಿದೆಯಂತೆ.

    ಇದರ ಜೊತೆಗೆ ಹೊಸಬರಿಗೂ ಅವಕಾಶವಿದೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಮನಸ್ಸಿದೆ ಎಂದಿರುವ ರಮ್ಯಾಗೆ ಎದುರಾಗಿರುವ ಇನ್ನೊಂದು ಪ್ರಶ್ನೆ ರಾಜಕೀಯದ್ದು. ನೀವು ರಾಜಕೀಯಕ್ಕೆ ಮತ್ತೆ ವಾಪಸ್ ಬರ್ತೀರಾ ಎಂಬ ಪ್ರಶ್ನೆಗೆ ರಮ್ಯಾ ಕೊಟ್ಟಿರುವ ಉತ್ತರ ಇಷ್ಟು.

    ಖಂಡಿತಾ. ಮರೆಯದೆ ವೋಟು ಹಾಕುತ್ತೇನೆ. ಮತ ಹಾಕುವುದನ್ನು ಮಾತ್ರ ತಪ್ಪಿಸಿಕೊಳ್ಳಲ್ಲ. ಆ ಮೂಲಕ ರಾಜಕೀಯದಲ್ಲಿರುತ್ತೇನೆ ಎಂದು ನಕ್ಕಿದ್ದಾರೆ.  ಈ ಉತ್ತರ ಮತ್ತು ನಗುವಿನ ಅರ್ಥ ಇಷ್ಟೆ.

    ರಮ್ಯಾ ಇನ್ನು ಮುಂದೆ ಸ್ಪರ್ಧಾ ರಾಜಕೀಯಕ್ಕೆ ಬರಲ್ಲ. ಆದರೆ ಕಾಂಗ್ರೆಸ್ ಜೊತೆ ಬಾಂಧವ್ಯ ಇಟ್ಟುಕೊಳ್ಳಬಹುದು. ಅಥವಾ ದೂರವಾಗಲೂಬಹುದು. ಇದರ ನಡುವೆ ರಾಜಕೀಯ ಪಡಸಾಲೆಯಲ್ಲಿ ಏಳುವ ಕಥೆಗಳೆಲ್ಲ ಅಂತೆ..ಕಂತೆ..ಗಳ ಊಹಾಪೋಹಗಳಷ್ಟೆ.

  • ರಮ್ಯಾ ಮದುವೆ ಯಾವಾಗ..? - ರಮ್ಯಾ ಅಮ್ಮ ಹೇಳಿದ್ದೇನು..?

    ramya's mother speaks

    ನಟಿ ರಮ್ಯಾ, ತಮ್ಮ ಸ್ಯಾಂಡಲ್‍ವುಡ್ ಕ್ವೀನ್ ಪಟ್ಟ ಕಳಚಿಟ್ಟು, ಅಪ್ಪಟ ರಾಜಕಾರಣಿಯಾಗಿದ್ದಾರೆ. ವಯಸ್ಸು ಆಗಲೇ 37 ವರ್ಷ. ಚಿತ್ರರಂಗದಲ್ಲಿದ್ದಾಗ ರಮ್ಯಾ ಅವರಿಗೆ ಇಂಥಾದ್ದೊಂದು ಪ್ರಶ್ನೆ ಆಗಾಗ್ಗೆ ಎದುರಾಗುತ್ತಿತ್ತು. ಇದರ ಮಧ್ಯೆ ಬ್ಯುಸಿನೆಸ್‍ಮನ್ ಒಬ್ಬರ ಜೊತೆ ಮದುವೆಯ ಸುಳಿವನ್ನೂ ಕೊಟ್ಟಿದ್ದರು ರಮ್ಯಾ. ಆದರೆ, ಅದೇಕೋ ಏನೋ.. ಅದು ಅಷ್ಟಕ್ಕೇ ನಿಂತು ಹೋಯ್ತು. ಈಗ ರಮ್ಯಾ ಮದುವೆ ಸುದ್ದಿ ಎತ್ತಿರುವುದು ರಮ್ಯಾ ಅವರ ತಾಯಿ ರಂಜಿತಾ.

    ಮಗಳನ್ನು ಮದುವೆಯಾಗು ಎಂದು ಒತ್ತಾಯಿಸುತ್ತಲೇ ಇದ್ದೇನೆ. ಅವಳಿಗೆ ತಾನು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕು ಎಂಬ ಕನಸುಗಳಿವೆ. ಆದರೆ, ನನಗೆ ಹುಡುಗ ವಿದ್ಯಾವಂತನಾಗಿದ್ದು, ನೋಡೋಕೂ ಚೆನ್ನಾಗಿದ್ದು, ಒಳ್ಳೆಯವನಾಗಿದ್ದರೆ ಸಾಕು. ಇನ್ನು ರಮ್ಯಾಗೆ ರಾಜಕೀಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠವಿದೆ. ಅದುವರೆಗೂ ಸುಮ್ಮನಿರು ಅಂತಾಳೆ. ಆದರೆ ಮದುವೆಯಾಗಿಯೇ ಸಾಧನೆ ಮಾಡು ಅಂತಾ ನಾನು ಹೇಳ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರಂಜಿತಾ.

    ರಮ್ಯಾ ತಮ್ಮ ತಾಯಿಯ ಮದುವೆಯ ಡಿಮ್ಯಾಂಡ್‍ಗೆ ಸದ್ಯಕ್ಕಂತೂ ನೋ ಎಂದಿದ್ದಾರೆ. ರಾಜಕೀಯದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಪಣ ತೊಟ್ಟು ಹೊರಟಿದ್ದಾರೆ.

  • ರಮ್ಯಾ ಮನೆ ಎದುರು ಹಾಸ್ಟೆಲ್ ಹುಡುಗರ ಹುಚ್ಚಾಟ

    ramya image

    ಮೋಹಕತಾರೆ ವಾಪಸ್ ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಹುಡುಗರ ಎದೆಯಲ್ಲಿ ಏನೇನೋ ಸಂಚಲನ. ಅದರ ಎಫೆಕ್ಟು ಈಗ ಅವರ ಮನೆಯೆದರೇ ಆಗಿದೆ. ಇತ್ತೀಚೆಗಷ್ಟೇ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟು ಝಲಕ್  ತೋರಿಸಿದ್ದ ರಮ್ಯಾ, ಸ್ವಾತಿ ಮುತ್ತಿನ ಮಳೆ ಹನಿಯಲ್ಲಿ ನಟಿಸುವ ಆಸೆಪೀಸೆ ಮಾಡಿದ್ದರು. ಈಗ ಡಾಲಿ ಧನಂಜಯ್ ಜೊತೆ ನಟಿಸುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಇದರ ಮಧ್ಯೆ ಹಾಸ್ಟೆಲ್ ಹುಡುಗರು ರಮ್ಯಾ ಮನೆಯೆದುರು ಅವಾಂತರವನ್ನೇ ಸೃಷ್ಟಿಸಿದ್ದಾರೆ.

    ರಮ್ಯಾ ಮನೆ ಮುಂದೆ ರಣಭೀಕರ ಪ್ರತಿಭಟನೆ ನಡೆಸುತ್ತಾರೆ ಹಾಸ್ಟೆಲ್ ಹುಡುಗರು. ರಕ್ತದ ಹನಿಹನಿಯನ್ನೂ ದಾನ ಮಾಡೋಕೆ ಬರೋ ಫ್ಯಾನು, ರಮ್ಯಾ  ವಿಗ್ರಹಕ್ಕೆ ಅರ್ಚನೆ, ಪೂಜೆ ಮಾಡುತ್ತಿರುವ ಅಭಿಮಾನಿ, ಕೈ, ತಲೆ ಕತ್ತರಿಸಿಕೊಳ್ಳೋ ಅಭಿಮಾನಿ, ಮೈತುಂಬಾ ಚಿನ್ನದ ಸರ ಹೇರಿಕೊಂಡು ಬರೋ ಪ್ರೊಡ್ಯೂಸರ್.. ಅವರೆಲ್ಲರ ಡಿಮ್ಯಾಂಡ್ ಒಂದೇ. ನ್ಯೂಸ್ ಚಾನೆಲ್ಲುಗಳಲ್ಲಿ ಗುಲ್ಲೆಬ್ಬಿಸೋ ಬ್ರೇಕಿಂಗ್ ನ್ಯೂಸ್. ರಮ್ಯಾ ಅವರ ಚಿತ್ರದಲ್ಲಿ ನಟಿಸಬೇಕು ಅನ್ನೋದು. ರಮ್ಯಾ ನಟಿಸುತ್ತಾರೆ. ಸಂಭಾವನೆಯನ್ನು ಕೂಡಾ ಕೊಡ್ತಾರೆ. ಮುಂದಾ..

    ರಿಯಲ್ ಅಲ್ಲಲ್ಲಲ್ಲ.. ಹಾಸ್ಟೆಲ್ ಹುಡುಗರು ಚಿತ್ರದ ಕ್ವಾಟ್ಲೆ ಪ್ರೋಮೋಗಾಗಿ ಮಾಡಿರೋ ಪ್ರಚಾರದ ಸ್ಟಂಟು.

    ನಿತಿನ್ ಕೃಷ್ಣಮೂರ್ತಿ ನಿರ್ದೇಶದನ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ವರುಣ್ ಗೌಡ, ಪ್ರಜ್ವಲ್ ಗೌಡ.. ಮೊದಲಾದವರ ಚಿತ್ರವಿದು. ಗೆಳೆಯರೆಲ್ಲ ಒಟ್ಟುಗೂಡಿ ಮಾಡಿರೋ ಸಿನಿಮಾದಲ್ಲಿ ರಮ್ಯಾ ಒಬ್ಬರೇ ಅಲ್ಲ, ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ ಕೂಡಾ ಇದ್ದಾರೆ. ಪುನೀತ್ ರಾಜಕುಮಾರ್ ಅವರಿಗೂ ಇಂತಹುದ್ದೇ ಚಮಕ್ ಕೊಟ್ಟು ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಈಗ ರಮ್ಯಾಗೆ ಸಂಭಾವನೆ ಕೊಡದೆ ಚಮಕ್ ಕೊಟ್ಟಿದೆ.

     

  • ರಮ್ಯಾ ರಿಟನ್ರ್ಸ್ : ಜೊತೆಯಲ್ಲಿರುವುದು ಯಾರ್ ಯಾರು?

    ರಮ್ಯಾ ರಿಟನ್ರ್ಸ್ : ಜೊತೆಯಲ್ಲಿರುವುದು ಯಾರ್ ಯಾರು?

    ಹೆಚ್ಚೂ ಕಡಿಮೆ ದಶಕವೇ ಆಗಿ ಹೋಗಿತ್ತು. ರಮ್ಯಾ ಚಿತ್ರರಂಗದಲ್ಲಿ ಅದರಲ್ಲೂ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡು. 2016ರಲ್ಲಿ ರಿಲೀಸ್ ಆದ ನಾಗರಹಾವು ಚಿತ್ರವೇ ಕೊನೆ. ಆದರೆ ಆ ಚಿತ್ರವೂ ಕೂಡಾ ನಾಲ್ಕೈದು ವರ್ಷ ಬಾಕ್ಸಿನಲ್ಲೇ ಉಳಿದು ರಿಲೀಸ್ ಆಗಿದ್ದ ಸಿನಿಮಾ. ಅಧಿಕೃತವಾಗಿ 2014ರಲ್ಲಿ ಶಿವಣ್ಣ ಜೊತೆ ನಟಿಸಿದ್ದ ಆರ್ಯನ್ ಚಿತ್ರವನ್ನೇ ಲಾಸ್ಟ್ ಎನ್ನಬಹುದು. ಅದಾದ ಮೇಲೆ ರಮ್ಯಾ ರಾಜಕೀಯಕ್ಕೆ ಹೋಗಿ, ಮಂಡ್ಯ ಉಪಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಇತಿಹಾಸವನ್ನೇ ಬರೆದರು.

    2014ರ ಎಲೆಕ್ಷನ್‍ನಲ್ಲಿ ಸೋತ ನಂತರ ರಾಷ್ಟ್ರ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ರಮ್ಯಾ ಹೆಚ್ಚೂ ಕಡಿಮೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಈಗ ವಾಪಸ್ ಬಂದಿದ್ದಾರೆ. ರಮ್ಯಾಗೀಗ 40 ವರ್ಷ. ನಾಯಕಿಯಾಗಿ ನಟಿಸಲು ಇರಬೇಕಾದ ಚಾರ್ಮ್ ಇವತ್ತಿಗೂ ಹಾಗೆಯೇ ಇದೆ ಹಾಗೂ ಅಭಿಮಾನಿಗಳ  ಮಧ್ಯೆ ಕ್ರೇಜ್ ಕೂಡಾ ಇವಿತ್ತಿಗೂ ಹಾಗೆಯೇ ಇದೆ ಅನ್ನೋದು ರಮ್ಯಾ ಹೆಗ್ಗಳಿಕೆ.

    ಹಾಗೆ ನೋಡಿದರೆ ದ್ವಿತ್ವ ಚಿತ್ರದಲ್ಲಿ ಪುನೀತ್ ಜೊತೆಯಲ್ಲಿ ನಟಿಸುವ ಮೂಲಕ ವಾಪಸ್ ಬರಬೇಕಿದ್ದ ರಮ್ಯಾ ಪುನೀತ್ ನಿಧನದೊಂದಿಗೆ ಮತ್ತೆ ರೀ-ಎಂಟ್ರಿಯನ್ನು ಮುಂದಕ್ಕೆ ಹಾಕಿಕೊಂಡಿದ್ದರು. ಈಗ ಬರುತ್ತಿದ್ದಾರೆ.. ನಾಯಕಿಯಾಗಿ ಅಲ್ಲ. ನಿರ್ಮಾಪಕಿಯಾಗಿ.

    ಆಪಲ್ ಬಾಕ್ಸ್. ಇದು ರಮ್ಯಾ ಸ್ಥಾಪಿಸಿರೋ ಸಂಸ್ಥೆ. ಆಪಲ್ ಬಾಕ್ಸ್ ಅನ್ನೋದು ಸಾಮಾನ್ಯವಾಗಿ ನಟಿಯರು ಎತ್ತರ ಕಡಿಮೆ ಇದ್ದಾಗ ಬಳಸುವ ಟೂಲ್ ಕಿಟ್. ಈ ಸಂಸ್ಥೆಯ ಮೂಲಕ ಎರಡು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ರಮ್ಯಾ. ಆ ಎರಡೂ ಚಿತ್ರಗಳಿಗೆ ಕೈಜೋಡಿಸಿರುವು ಕಾರ್ತಿಕ್ ಗೌಡ ಅವರ ಕೆ.ಆರ್.ಜಿ.ಸ್ಟುಡಿಯೋಸ್. ಇವರ ಜೊತೆಗೆ ವಿಜಯ್ ಕಿರಗಂದೂರು, ಯೋಗಿ ಬಿ.ರಾಜ್, ಜಯಣ್ಣ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ ರಮ್ಯಾ.

    ರಮ್ಯಾ ಅವರ ಹೊಸ ಕನಸಿಗೆ ಹೊಸ ಹೆಜ್ಜೆಗೆ ಇಡೀ ಚಿತ್ರರಂಗ ಶುಭ ಕೋರಿದೆ. ಆದರೆ ಆ ಎರಡು ಚಿತ್ರಗಳು ಯಾವುವು? ನಿರ್ದೇಶಕರು ಯಾರು? ನಟನಟಿಯರು ಯಾರ್ ಯಾರು? ಎಲ್ಲವೂ ಸದ್ಯಕ್ಕೆ ಆಪಲ್ ಬಾಕ್ಸಿನಲ್ಲೇ ಸೀಕ್ರೆಟ್ ಆಗಿದೆ.

  • ರಮ್ಯಾ ಸ್ವಾತಿ ಮುತ್ತಿನ ಮಳೆ ಕಥೆ ಏನು? ವಿವಾದವೇನು?

    ರಮ್ಯಾ ಸ್ವಾತಿ ಮುತ್ತಿನ ಮಳೆ ಕಥೆ ಏನು? ವಿವಾದವೇನು?

    ಹಿರಿಯ ನಟಿ ದಿವ್ಯ ಸ್ಪಂದನ/ರಮ್ಯಾ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಮ್ಯಾ ಈ ಚಿತ್ರಕ್ಕೆ ನಾಯಕಿ ಅಲ್ಲ. ನಿರ್ಮಾಪಕಿಯೆಷ್ಟೇ. ಸಿರಿ ರವಿಕುಮಾರ್ ನಾಯಕಿ. ಈಗ ಪೋಸ್ಟ್ ಪ್ರೊಡಕ್ಷನ್‍ನಲ್ಲಿರುವ ಚಿತ್ರದ ಟೈಟಲ್ ನನ್ನದು ಎಂದು ವಿವಾದ ಎತ್ತಿದ್ದಾರೆ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು.

    ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪ್ರಕಾರ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ಅವರದ್ದು. ಬಣ್ಣದ ಗೆಜ್ಜೆ ಚಿತ್ರದ ಹಿಟ್ ಹಾಡೊಂದರ ಮೊದಲ ಸಾಲು ಸ್ವಾತಿ ಮುತ್ತಿನ ಮಳೆ ಹನಿಯೇ. ಆ ಚಿತ್ರಕ್ಕೆ ಸಿಂಗ್ ಬಾಬು ನಿರ್ದೇಶಕರು. ಅಷ್ಟೇ ಅಲ್ಲ, ಆ ಟೈಟಲ್‍ನಲ್ಲಿ ನಾವು ಈಗಾಗಲೇ ಫಿಲ್ಮ್ ಚೇಂಬರಿನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಅದೇ ಟೈಟಲ್‍ನ್ನು ಇನ್ನೊಬ್ಬರಿಗೆ ಕೊಡುವುದು ಕಾಪಿರೈಟ್ ಉಲ್ಲಂಘನೆ. ಅಲ್ಲದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಚಿತ್ರೀಕರಣ ನಡೆಸಿದ್ದು ಶೇ.80ರಷ್ಟು ಶೂಟಿಂಗ್ ಕೂಡಾ ಮುಗಿದಿದೆ. ಅಂಬಿ ನಿಧನದ ಹಿನ್ನೆಲೆಯಲ್ಲಿ ಸಿನಿಮಾ ನಿಂತಿದೆ ಎಂದಿದ್ದಾರೆ. ಹಾಡನ್ನಾಗಲೀ, ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್‍ನ್ನಾಗಲೀ ಬಳಸಿಕೊಳ್ಳಕೂಡದು ಎಂದು ಚೇಂಬರಿಗೆ ನೋಟಿಸ್ ನೀಡಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ವಕೀಲ ಶ್ರೀನಿವಾಸ ಮೂರ್ತಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಪರ ವಕೀಲರು.

    ಫಿಲಂ ಚೇಂಬರ್ ಪ್ರಕಾರ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಇರುವುದು ಬಿ.ಕೆ.ಗಂಗಾಧರ್ ಹೆಸರಿನಲ್ಲಿ. ಪೊಗರು ಚಿತ್ರದ ನಿರ್ಮಾಪಕ ಬಿ.ಕೆ.ಗಂಗಾಧರ್ ಈಗಾಗಲೇ ಟೈಟಲ್‍ನ್ನು ರಮ್ಯಾ ಅವರಿಗೆ ನೀಡಿದ್ದಾರೆ. ಆ ಪತ್ರವನ್ನೂ ಚೇಂಬರಿಗೆ ಕೊಟ್ಟಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ  ಭಾ.ಮಾ.ಹರೀಶ್.

  • ರಮ್ಯಾಗೆ ನುಗ್ಗೆಕಾಯಿ ಇಷ್ಟನಾ? ಬದನೆಕಾಯಿನಾ?

    ರಮ್ಯಾಗೆ ನುಗ್ಗೆಕಾಯಿ ಇಷ್ಟನಾ? ಬದನೆಕಾಯಿನಾ?

    ರಮ್ಯಾ ಅಂದ್ರೆ ಕನ್ನಡಿಗರಿಗೆ ವಿಶೇಷ ಪ್ರೀತಿ. ಹೀಗಾಗಿಯೇ ಇತ್ತೀಚೆಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಲೈವ್‍ಗೆ ಬಂದಾಗ ಮುತ್ತಿಕೊಂಡು ಬಿಟ್ಟರು. ಏನೋ ಸ್ಪೆಷಲ್ ಸುದ್ದಿ ಹೇಳ್ತಾರೆ ಎಂದುಕೊಂಡಿದ್ದವರಿಗೆ ರಮ್ಯಾ ಇದು ರೊಟೀನ್ ಎಂದಾಗ ನಿರಾಸೆಯಾಗಿದ್ದು ಹೌದಾದರೂ, ರಮ್ಯಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡ್ತಾನೇ ಹೋದರು.

    ಅಭಿಮಾನಿಗಳ ಪ್ರಶ್ನೆ ಊಟ ಮತ್ತು ಡಯಟ್‍ಗೆ ಸಂಬಂಧಿಸಿತ್ತು. ನಿಮಗೆ ಯಾವ ರೀತಿಯ ಊಟ ಇಷ್ಟ ಎಂದಾಗ ರಮ್ಯಾ ಹೇಳಿದ್ದೇ ಬದನೆಕಾಯಿ, ನುಗ್ಗೆಕಾಯಿ ಕಥೆ. ರಮ್ಯಾಗೆ ನುಗ್ಗೆಕಾಯಿ ಇಷ್ಟ ಆಗಲ್ವಂತೆ. ಹಾಲೂ ಇಷ್ಟವಿಲ್ಲವಂತೆ. ಇಡ್ಲಿಯನ್ನ ಚಟ್ನಿ ಜೊತೆ ತಿನ್ನೋಕೆ ಇಷ್ಟ ಪಡೋ ರಮ್ಯಾಗೆ, ಸಾಂಬಾರ್ ಇಡ್ಲಿ ಇಷ್ಟವಾಗೋದಿಲ್ವಂತೆ. ಇದೆಲ್ಲದರ ಜೊತೆ ರಮ್ಯಾಗೆ ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಎಣ್ಣೆಗಾಯಿ ಸಖತ್ ಇಷ್ಟ. ಪ್ರಾಣ ಎಂದು ಹೇಳಿಕೊಂಡಿದ್ದಾರೆ ರಮ್ಯಾ.

    ಕಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಲೈವ್‍ಗೆ ಬಂದಿದ್ದ ರಮ್ಯಾಗೆ ಮದುವೆ ಪ್ರಶ್ನೆ ಎಂದಿನಂತೆ ಎದುರಾಯ್ತು. ನೋ ಎಂದು ಖಂಡತುಂಡವಾಗಿ ಹೇಳಿದ ರಮ್ಯಾ, ಗೆಳೆಯರು, ಬಂಧುಗಳ ಮದುವೆಗೂ ಹೋಗಲ್ವಂತೆ.

  • ರಮ್ಯಾಗೆ ರಾಹುಲ್ ಗಾಂಧಿ ಶುಭ ಕೋರಿದ್ದು ಸುಳ್ಳಾ..?

    ramya birthday wish confusion

    ರಮ್ಯಾ, ನೀವು ಭಾರತದ ಆಸ್ತಿ, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಆಸ್ತಿ. ಆ ದೇವರು ನಿಮಗೆ ಶುಭವನ್ನುಂಟು ಮಾಡಲಿ. ಹುಟ್ಟುಹಬ್ಬದ ಶುಭಾಶಯಗಳು. 

    ಇಂಥಾದ್ದೊಂದು ಶುಭಾಶಯ ಕೋರಿರುವುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಕಾಂಗ್ರೆಸ್‍ನ ಯುವರಾಜ, ನಟಿ ರಮ್ಯಾ ಅವರಿಗೆ ಶುಭ ಕೋರಿರುವುದು ಸೆನ್ಸೇಷನ್ ಸೃಷ್ಟಿಸಿದೆ.

    ಇಂದು ರಮ್ಯಾ ಅವರ 34ನೇ ಹುಟ್ಟುಹಬ್ಬ. ಹೀಗಾಗಿ ಪಕ್ಷದ ಸೋಷಿಯಲ್ ಮೀಡಿಯಾ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ರಮ್ಯಾ ಅವರಿಗೆ ರಾಹುಲ್ ಗಾಂಧಿ ಶುಭ ಹಾರೈಸಿದ್ದರೂ ಇರಬಹುದು ಎಂದುಕೊಂಡರೆ, ಅದು ಇನ್ನೊಂದು ಗೊಂದಲ ಶುರು ಮಾಡುತ್ತೆ.

    ಏಕೆಂದರೆ, ರಮ್ಯಾ ಅವರ ಅಧಿಕೃತ ಟ್ವಿಟರ್‍ನಲ್ಲಾಗಲಿ ಅಥವಾ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಾಗಲೀ, ಇಂಥಾದ್ದೊಂದು ಶುಭ ಹಾರೈಕೆಯ ಯಾವುದೇ ಟ್ವೀಟ್ ಇಲ್ಲ. ಹಾಗಾದರೆ, ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವುದು ಏನು..? 

    ಏನೇ ಇರಲಿ, ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು.

  • ರಾಜೇಶ್ ಬಿ.ಶೆಟ್ಟಿ ಜೊತೆ ರಮ್ಯಾ ಸಿನಿಮಾ : ಸುದ್ದಿ ನಿಜಾನಾ?

    ರಾಜೇಶ್ ಬಿ.ಶೆಟ್ಟಿ ಜೊತೆ ರಮ್ಯಾ ಸಿನಿಮಾ : ಸುದ್ದಿ ನಿಜಾನಾ?

    ರಮ್ಯ ಮತ್ತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿ ಫ್ಯಾನ್ಸ್‍ಗೆ ಕೊಟ್ಟಿರೋ ಥ್ರಿಲ್ಲೇ ಬೇರೆ. ಹೀಗಾಗಿಯೇ.. ಗಾಂಧಿನಗರದಲ್ಲಿ ದಿನಕ್ಕೊಂದು ಸುದ್ದಿ ಹಬ್ಬುತ್ತಲೇ ಇದೆ. ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋ ಸುದ್ದಿ ಮೊದಲು ಬಂತು. ನಂತರ ಡಾಲಿ ಧನಂಜಯ್ ಸಿನಿಮಾನಂತೆ ಅನ್ನೋದು ಸುದ್ದಿಯಾಯ್ತು. ಅದಾದ ಮೇಲೆ ಹೊಂಬಾಳೆಯವರ ಜೊತೆ ರಮ್ಯಾ ಕಮ್ ಬ್ಯಾಕ್ ಪಕ್ಕಾ ಎಂದರು. ದ್ವಿತ್ವ ಚಿತ್ರಕ್ಕೆ ರಮ್ಯಾ ಯೆಸ್ ಎಂದಿದ್ದರೂ ಕೂಡಾ. ಈಗಲೂ ಕೂಡಾ ರಮ್ಯಾ, ಯುವ ರಾಜಕುಮಾರ್ ಪ್ರಥಮ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೊ ಸುದ್ದಿ ಇದೆ. ಇದೆಲ್ಲದರ ಮಧ್ಯೆ ಉದ್ಭವವಾದ ಮತ್ತೊಂದು ಸುದ್ದಿ, ರಾಜೇಶ್ ಬಿ.ಶೆಟ್ಟಿ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋದು.

    ರಮ್ಯಾ ಕಥೆ ಕೇಳಿದ್ದಾರಂತೆ. ಇಷ್ಟವಾಗಿದೆಯಂತೆ. ನಟಿಸೋದಷ್ಟೇ ಅಲ್ಲ, ಅವರೇ ಪ್ರೊಡ್ಯೂಸ್ ಕೂಡಾ ಮಾಡ್ತಾರಂತೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿ ಸುತ್ತಿ ಮೀಡಿಯಾ ಮನೆಗಳಿಗೆ ಕಾಲಿಟ್ಟಿತ್ತು. ಈಗ ರಾಜೇಶ್ ಬಿ.ಶೆಟ್ಟಿಯವರಿಂದಲೇ ಉತ್ತರ ಸಿಕ್ಕಿದೆ.

    ಇಲ್ಲ. ರಮ್ಯಾ ಅವರಿಗ ನಾನು ಕಥೆ ಹೇಳಿಲ್ಲ. ಅವರು ಕೇಳಿಲ್ಲ. ಎಲ್ಲವೂ ಗಾಸಿಪ್ ಎಂದಿದ್ದಾರೆ ರಾಜೇಶ್ ಬಿ.ಶೆಟ್ಟಿ.

     

  • ವೈಯಕ್ತಿಕ ನಿಂದನೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ

    ವೈಯಕ್ತಿಕ ನಿಂದನೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ

    ದಿವ್ಯ ಸ್ಪಂದನಾ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ರಮ್ಯಾ ತಮ್ಮನ್ನು ಟೀಕಿಸುವವರನ್ನು ಯಾವತ್ತೂ ಸುಮ್ಮನೆ ಬಿಡುವವರಲ್ಲ. ಕೆಣಕಿದವರಿಗೆ ಉತ್ತರ ಕೊಟ್ಟೇ ಮುಂದೆ ಹೋಗುವ ಜಾಯಮಾನ ಅವರದ್ದು. ಘಟಾನುಘಟಿ ನಾಯಕರನ್ನೂ ಬಿಟ್ಟವರಲ್ಲ. ಅಂತಾದ್ದರಲ್ಲಿ ವ್ಯಕ್ತಿಯೊಬ್ಬ ರಮ್ಯಾ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾನೆ.

    ಇನ್‍ಸ್ಟಾಗ್ರಾಮ್ ಪೇಜಿನಲ್ಲಿ ರಮ್ಯಾ ಇತ್ತೀಚೆಗೆ ರಕ್ಷಿತ್ ಶೆಟ್ಟಿಯವರ 777 ಚಾರ್ಲಿ ಚಿತ್ರದ ಹೊಗಳಿ ವಿಡಿಯೋ ಹಾಕಿದ್ದರು. ಆ ವಿಡಿಯೋದ ಕಮೆಂಟ್ ಬಾಕ್ಸ್‍ಗೆ ಬಂದ ವ್ಯಕ್ತಿಯೊಬ್ಬ ರಮ್ಯಾ ಅವರ ವೈಯಕ್ತಿಕ ನಿಂದನೆ ಮಾಡಿದ್ದಾನೆ. ಈ ಕುರಿತು ಕಮಿಷನರ್ ಪ್ರತಾಪ್ ರೆಡ್ಡಿಯವರನ್ನು ಭೇಟಿ ಮಾಡಿದ್ದ ರಮ್ಯಾ, ನಂತರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

  • ವೋಟ್ ಹಾಕಲೇ ಇಲ್ಲ ರಮ್ಯಾ..!

    ramya didnt cast her vote

    ರಮ್ಯಾ, ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದವರು. ಸಂಸದೆಯಾಗಿದ್ದವರು. ಈಗ ಕಾಂಗ್ರೆಸ್‍ನಲ್ಲಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಮತದಾರರನ್ನು ಮತಗಟ್ಟೆಗೆ ಬಂದು ವೋಟ್ ಮಾಡಿ ಎಂದು ಹೇಳುವುದು ಆಯೋಗದ ಕೆಲಸವಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಹೊಣೆಗಾರಿಕೆಯೂ ಹೌದು. ಆದರೆ, ಇಷ್ಟೆಲ್ಲ ಹೊಣೆಗಾರಿಕೆ ಇರುವ ರಮ್ಯಾ ಮತದಾನ ಮಾಡಲು ಬರಲೇ ಇಲ್ಲ.

    ರಮ್ಯಾ ಅವರ ವೋಟ್ ಇರೋದು ಮಂಡ್ಯ ನಗರದ 10ನೇ ವಾರ್ಡ್‍ನಲ್ಲಿ. ಅಧಿಕೃತವಾಗಿ ಅವರು ವಿದ್ಯಾನಗರದ ನಿವಾಸಿ. ಅಲ್ಲಿ ಅವರ ಮನೆಯೂ ಇದೆ. ಲೋಕಸಭೆಗೆ ಸ್ಪರ್ಧಿಸಿದ್ದಾಗ ಬಂದು ಮತ ಹಾಕಿದ್ದೇ ಕೊನೆ, ರಮ್ಯಾ ನಂತರ ವೋಟ್ ಹಾಕೋಕೆ ಬಂದೇ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮತ ಹಾಕಲು ಬಾರದ ರಮ್ಯಾ, ಈ ಬಾರಿ ವಿಧಾನಸಭೆ ಚುನಾವಣೆಯಿಂದಲೂ ಮತದಾನ ಮಾಡದೆ ದೂರ ಉಳಿದಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ, ಸಿಎಂ ಆಗಿರುವ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಮತದಾರರಿಗೆ ಪ್ರಜಾಪ್ರಭುತ್ವದ ಪವಿತ್ರ ಹಕ್ಕು ಚಲಾಯಿಸಿ ಎಂದು ಸಂದೇಶ ಕೊಟ್ಟರು. ಆದರೆ, ಆ ಸಂದೇಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ ರಮ್ಯಾ ಅವರೇ ವೋಟ್ ಹಾಕೋಕೆ ಬರಲಿಲ್ಲ.

  • ಸತೀಶ್ ನೀನಾಸಂ ಚಿತ್ರಕ್ಕೆ ರಮ್ಯಾ ಪ್ರಮೋಷನ್

    ಸತೀಶ್ ನೀನಾಸಂ ಚಿತ್ರಕ್ಕೆ ರಮ್ಯಾ ಪ್ರಮೋಷನ್

    ನಟ ಸತೀಶ್ ನೀನಾಸಂ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಟ ಶಶಿಕುಮಾರ್ ಅಭಿನಯದ ಪಗೈವನುಕು ಅರುಳ್ವೈ ಮೂಲಕ ತಮಿಳು ಚಿತ್ರರಂಗದಲ್ಲಿ ಹೆಜ್ಜೆಯಿಟ್ಟಿದ್ದಾರೆ. ಈ  ಸಿನಿಮಾದಲ್ಲಿ ಸತೀಶ್‌, ಆಡುದೊಡ್ಡಿ ರವಿ ಎಂಬ ಪಾತ್ರ ಮಾಡಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ರಮ್ಯಾ ಸತೀಶ್ ಚಿತ್ರಕ್ಕೆ ಪ್ರಮೋಷನ್ ಕೊಟ್ಟಿದ್ದಾರೆ.

    ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ರಮ್ಯಾ ನಮ್ಮ ಕನ್ನಡದ ನಟರೊಬ್ಬರು ತಮಿಳಿನಲ್ಲಿ ನಟಿಸುತ್ತಿರುವುದು ಹೆಮ್ಮೆ ಎಂದಿದ್ದಾರೆ.  ಶೇಕ್ಸ್ಪಿಯರ್ ಅವರ ಮ್ಯಾಕ್ಬೆತ್ ನಾಟಕದ ಸ್ಫೂರ್ತಿಯಲ್ಲಿ ತಯಾರಾಗಿರುವ ಚಿತ್ರವಿದು. ರಮ್ಯಾ ಅಷ್ಟೇ ಅಲ್ಲ, ತಮಿಳಿನ ಸ್ಟಾರ್ ನಿರ್ದೇಶಕ ಸಮುದ್ರಕಿಣಿ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಅನೀಸ್ ಎಂಬುವವರು ನಿರ್ದೇಶನ ಮಾಡಿರುವ ಚಿತ್ರ ಈಗಾಗಲೇ ಚಿತ್ರೀಕರಣ ಪೂರೈಸಿದೆ.

    ಆಡುದೊಡ್ಡಿ ರವಿ ಎಂಬ ಖೈಊದಿಯ ಪಾತ್ರದಲ್ಲಿ ನಟಿಸರುವ ಸತೀಶ್, ರಿಯಲ್ ಖೈದಿಗಳ ಜೊತೆ ನಟಿಸಿರುವುದು ವಿಶೇಷ. ಕೊಲೆ, ಸುಲಿಗೆ ಮಾಡಿ ಜೈಲಿಗೆ ಹೋಗಿ ಬಂದ 17 ಖೈದಿಗಳು ಈ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದಾರೆ. ಚಿತ್ರದಲ್ಲಿ ನನಗೆ ಎರಡು ಶೇಡ್ಗಳಿವೆ. ಸಿನಿಮಾ ಚೆನ್ನಾಗಿ ಬಂದಿದೆ ಎಂದಿದ್ದಾರೆ ಸತೀಶ್.

  • ಸಿನಿಮಾ, ರಾಜಕೀಯ ಎರಡಕ್ಕೂ ಗುಡ್ ಬೈ ಎಂದ ರಮ್ಯಾ

    ಸಿನಿಮಾ, ರಾಜಕೀಯ ಎರಡಕ್ಕೂ ಗುಡ್ ಬೈ ಎಂದ ರಮ್ಯಾ

    ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಒಂದು ಉನ್ನತ ಸ್ಥಾನಕ್ಕೇರಿದವರು.  ನಟಿಯಾಗಿ ಮೋಹಕ ತಾರೆಯಾಗಿ, ಸ್ಯಾಂಡಲ್‍ವುಡ್ ಕ್ವೀನ್ ಆಗಿ ಮೆರೆದ ರಮ್ಯಾ, ಇವತ್ತಿಗೂ ಕನ್ನಡಿಗರ ಹಾರ್ಟ್ ಫೇವರಿಟ್ ನಟಿ. ಅತ್ತ ರಾಜಕೀಯದಲ್ಲೂ ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ ಗುರುತಿಸಿಕೊಂಡಿದ್ದ ರಮ್ಯಾ, ಈಗ ಆ ಎರಡೂ ಕ್ಷೇತ್ರಗಳಿಗೆ ಗುಡ್ ಬೈ ಹೇಳಿರೋದಾಗಿ ಹೇಳಿದ್ದಾರೆ.

    ಇತ್ತೀಚೆಗೆ ಸೋಷಿಯಲ್  ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದ ರಮ್ಯಾ, ಸಿನಿಮಾ ತಮ್ಮ ಜೀವನದಲ್ಲಿನ್ನು ಮುಗಿದ ಅಧ್ಯಾಯ ಎಂದಿದ್ದಾರೆ. ಅಷ್ಟೇ ಅಲ್ಲ, ರಾಜಕೀಯದಲ್ಲಿರ್ತೀರಾ ಎಂಬ ಪ್ರಶ್ನೆಗೂ ಇಲ್ಲ, ರಾಜಕೀಯದಲ್ಲೂ ಇರಲ್ಲ ಎಂದಿದ್ದಾರೆ.

    ಹಾಗಾದರೆ ಮತ್ತೇನು ಮಾಡ್ತೀರಿ ಎಂಬ ಪ್ರಶ್ನೆಗೆ ನಥಿಂಗ್ ರಿಯಲೀ.. ಸಾಮಾನ್ಯ ಬದುಕು ಬದುಕುತ್ತಿರುವೆ. ಎಲ್ಲರೂ ಮಾಡುವಂತ ಸಾಮಾನ್ಯ ಕೆಲಸವನ್ನೇ ಮಾಡುತ್ತಿದ್ದೇನೆ.

    ಒಟ್ಟಿನಲ್ಲೀಗ ಪ್ರತಿದಿನ ವ್ಯಾಯಾಮ, ನಾಯಿಗಳ ಜೊತೆ ಆಟ, ಮನೆಗೆಲಸ, ಕ್ಲೀನಿಂಗ್, ಪುಸ್ತಕಗಳನ್ನು ಓದುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಅಂದಹಾಗೆ ರಮ್ಯಾ ಇತ್ತೀಚೆಗೆ ಓದಿದ ಪುಸ್ತಕ `ದ ಪ್ರಾಬ್ಲಂ ಆಫ್ ಅದರ್ ಮೈಂಡ್'.

  • ಸಿನಿಮಾ, ರಾಜಕೀಯ ಬಿಟ್ಟು ವೇದಾಂತಿಯಾಗುತ್ತಿದ್ದಾರೆ ರಮ್ಯಾ..!

    no cinema, no politics

    ರಮ್ಯಾ ಸ್ಯಾಂಡಲ್‍ವುಡ್‍ನ ಮೋಹಕ ತಾರೆ. ಇವತ್ತಿಗೂ ನಟಿ ರಮ್ಯಾಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇನ್ನು ರಾಜಕೀಯಕ್ಕೆ ಕಾಲಿಟ್ಟು ಸಂಚಲನ ಸೃಷ್ಟಿಸಿದ್ದ ರಮ್ಯಾ, ಮಿಂಚಿನಂತೆ ಹೊಳೆದಿದ್ದರು. ಆದರೆ, ಅಷ್ಟೇ ವೇಗದಲ್ಲಿ ಬಿರುಗಾಳಿಯಂತೆ ಎದ್ದು ತಣ್ಣಗಾಗಿ ಹೋಗಿರುವ ರಮ್ಯಾ, ಈಗ ರಾಜಕೀಯ ಮತ್ತು ಸಿನಿಮಾ ಎರಡೂ ಬೇಡ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ.

    ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ರಮ್ಯಾ ``ನನಗೆ ಸಿನಿಮಾ ಮತ್ತು ರಾಜಕೀಯ ಎರಡೂ ಸಾಕಾಗಿದೆ. ಒಂಟಿಯಾಗಿದ್ದಾಗ ನನ್ನನ್ನು ನಾನು ಕಂಡುಕೊಂಡಿದ್ದೇನೆ. ನಾನು ಅಂತರ್ಮುಖಿ. ಹೀಗಾಗಿ ಜನರೊಂದಿಗೆ ಒಡನಾಟ ಇರುವಂತ ವೃತ್ತಿ ನನಗೆ ಸೆಟ್ ಆಗಲ್ಲ. ನಾನು ನಟಿ ಹಾಗೂ ರಾಜಕಾರಣಿ, ಎರಡನ್ನೂ ಬಯಸಿ ಆಗಲಿಲ್ಲ. ಅವುಗಳಿಂದ ದೂರವಾದ ಮೇಲೆ ಖುಷಿಯಾಗಿದ್ದೇನೆ' ಎಂದಿದ್ದಾರೆ ರಮ್ಯಾ.

    3 ವರ್ಷಗಳ ವೇದಾಂತ ಕೋರ್ಸ್‍ಗೆ ಸೇರಿಕೊಂಡಿರುವ ರಮ್ಯಾ, ಕೆಲವೇ ತಿಂಗಳಲ್ಲಿ ಮೊದಲ ಸ್ಟೇಜ್ ದಾಟಲಿದ್ದಾರೆ. ಕಾಲೇಜು ದಿನಗಳಲ್ಲಿ ಇಷ್ಟಪಟ್ಟು ಮಾಡುತ್ತಿದ್ದ ಪೇಂಟಿಂಗ್‍ನ್ನು ಮತ್ತೆ ಮಾಡೋಕೆ ಶುರು ಮಾಡಿದ್ದಾರೆ. ಹಿಂದೂಸ್ತಾನಿ, ಕರ್ಣಾಟಿಕ್ ಮತ್ತು ವೆಸ್ಟರ್ನ್ ಮ್ಯೂಸಿಕ್ ಕೇಳಿಕೊಂಡು ಖುಷಿಯಾಗಿದ್ದಾರೆ.

    ನಾನು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡಿದ್ದೇ ಹೊರತು, ನನ್ನನ್ನು ತೆಗೆದುಹಾಕಲಿಲ್ಲ. ಈಗಲೂ ನನ್ನ ರಾಜೀನಾಮೆ ಪತ್ರ ನನ್ನ ಬಾಸ್ (ರಾಹುಲ್ ಗಾಂಧಿ) ಬಳಿಯೇ ಇದೆ ಎಂದು ಸ್ಪಷ್ಟಪಡಿಸಿರೋ ರಮ್ಯಾ, ಮತ್ತೆ ರಾಜಕೀಯಕ್ಕೆ ಬರಲ್ಲ ಎಂದಿದ್ದಾರೆ.

  • ಸೀರೆ ಬಿಚ್ಚಿಟ್ಟ ಆರ್‍ಆರ್ ಲವ್ & ಹೇಟ್ ಸ್ಟೋರಿ

    ಸೀರೆ ಬಿಚ್ಚಿಟ್ಟ ಆರ್‍ಆರ್ ಲವ್ & ಹೇಟ್ ಸ್ಟೋರಿ

    ರಕ್ಷಿತಾ ಮತ್ತು ರಮ್ಯಾ. ಒಂದು ದಶಕವಿಡೀ ಚಿತ್ರರಂಗವನ್ನು ಆಳಿದವರು. ರಕ್ಷಿತಾ ಬೇರೆ ಭಾಷೆಗಳಲ್ಲೂ ಕ್ರೇಜಿ ಕ್ವೀನ್ ಆಗಿ ಮೆರೆದವರು. ಸ್ಯಾಂಡಲ್‍ವುಡ್‍ನ ಮೋಹಕ ತಾರೆಯಾದವರು ರಮ್ಯಾ. ಒಂದು ಕಾಲದ ಸ್ಪರ್ಧಿಗಳು.  ಅವರನ್ನು ಮೀರಿಸಲು ಇವರು.. ಇವರನ್ನು ಮೀರಿಸಲು ಅವರು.. ನಡೆಸುತ್ತಿದ್ದ ಫೈಟ್ಸ್ ಕಥೆಗಳು ಸ್ಯಾಂಡಲ್‍ವುಡ್‍ನಲ್ಲಿ ಜೀವಂತವಾಗಿವೆ. ಅವರಿಬ್ಬರ ಮಧ್ಯೆ ಇದ್ದ ಲವ್ & ಹೇಟ್ ಸ್ಟೋರಿ, ಸೀರೆಯಿಂದ ಬಹಿರಂಗವಾಗಿದೆ.

    ಇತ್ತೀಚೆಗೆ ಹುಟ್ಟಹಬ್ಬ ಆಚರಿಸಿಕೊಂಡ ರಕ್ಷಿತಾ ಅವರಿಗೆ ರಮ್ಯಾ ಒಂದು ಚೆಂದದ ಸೀರೆಯನ್ನು ಗಿಫ್ಟ್ ಆಗಿ ಕಳಿಸಿಕೊಟ್ಟಿದ್ದಾರೆ. ನೀನಿಲ್ಲದೆ ನನ್ನ ಸಿನಿ ಜೀವನ ಅಪರಿಪೂರ್ಣವಾಗುತ್ತಿತ್ತು. ಕಿಸ್ ಕಿಸ್ ಅಂತಾ ಶುಭಾಶಯ ಕಳಿಸಿದ್ದಾರೆ ರಮ್ಯಾ.

    ಇದಕ್ಕೆ ಧನ್ಯವಾದ ಹೇಳಿರೋ ರಕ್ಷಿತಾ, ನೀನು ಹೇಳಿದ್ದು ನಿಜ, ನೀನಿಲ್ಲದೆ ನನ್ನ ಸಿನಿ ಲೈಫ್ ಜರ್ನಿ ನಿಜಕ್ಕೂ ಇನ್ ಕಂಪ್ಲೀಟ್ ಆಗಿರುತ್ತಿತ್ತು ಎಂದಿದ್ದಾರೆ.

  • ಸುದೀಪ್ ನಿಂಗೆ ವಯಸ್ಸೇ ಆಗಲ್ವಾ? : ರಮ್ಯಾ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ

    sudeep ramya image

    ನಮ್ಮ ಹೊಸ ಬೆಂಜಮಿನ್ ಬಟನ್ ಕಿಚ್ಚ ಸುದೀಪ್. ನಿಮಗೆ ವಯಸ್ಸೇ ಆಗಲ್ವಾ? ವ್ಹಾವ್.. ಅದ್ಭುತ ಟ್ರೇಲರ್.. ಇಂತಾದ್ದೊಂದು ಟ್ವೀಟ್ ಮಾಡಿದ್ದರು ರಮ್ಯಾ. ಕೋಟಿಗೊಬ್ಬ 3 ಟ್ರೇಲರ್ ಹೊರಬಿದ್ದಾಗ ರಮ್ಯಾ ಮಾಡಿದ್ದ ಟ್ವೀಟ್ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಬೆಂಜಮಿನ್ ಬಟನ್ ಹಾಲಿವುಡ್ ನಟ. ರಮ್ಯಾ ಇಷ್ಟಪಡುವ ನಟ. ಚಿತ್ರವೊಂದರಲ್ಲಿ ಆತ ಮುದುಕನಾಗಿ ಹುಟ್ಟಿ, ಮಗುವಾಗಿ ಅಂತ್ಯಗೊಳ್ಳುತ್ತಾನೆ. ಜೀವನ ಚಕ್ರದ ಉಲ್ಟಾ ಸೈಕಲ್ ಸ್ಟೋರಿ ಅದು.

    ರಮ್ಯಾರ ಈ ಮಾತಿಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. ನೀವು ಸಿನಿಮಾ ಬಿಟ್ಟು ರಾಜಕೀಯದಲ್ಲಿದ್ದರೂ ನಮ್ಮ ಬಗ್ಗೆ ಮಾತನಾಡಿರುವುದು ಖುಷಿ ಕೊಟ್ಟಿದೆ. ವಯಸ್ಸು 50 ದಾಟಿದ್ದರೂ ಕೆಲವು ನಟರು ಫಿಟ್ ಇರುತ್ತಾರೆ. ಅವರು ನನಗೆ ಸ್ಫೂರ್ತಿ. ಇನ್ನೂ ಕೆಲವರು 30 ಅಷ್ಟೇ ಆಗಿದ್ದರೂ 50 ಆಗಿರೋರ ತರಾ ಇರ್ತಾರೆ. ಎರಡೂ ನನಗೆ ಸ್ಫೂರ್ತಿ ಎಂದಿದ್ದಾರೆ ಸುದೀಪ್.