` ramya, - chitraloka.com | Kannada Movie News, Reviews | Image

ramya,

  • ನೋ ಚಿಕನ್.. ನೋ ಮಟನ್.. ನೋ ಮೊಟ್ಟೆ.. ಹಾಲೂ ಇಲ್ಲ - ವೀಗನ್ ರಮ್ಯಾ

    ನೋ ಚಿಕನ್.. ನೋ ಮಟನ್.. ನೋ ಮೊಟ್ಟೆ.. ಹಾಲೂ ಇಲ್ಲ - ವೀಗನ್ ರಮ್ಯಾ

    ವೀಗನ್ ಅಂದ್ರೆ ಏನು ಗೊತ್ತಾ..? ಮಾಂಸಾಹಾರ ಮತ್ತು ಪ್ರಾಣಿಜನ್ಯ ವಸ್ತುಗಳನ್ನು ಸಂಪೂರ್ಣ ಬಿಟ್ಟವರನ್ನು ವೀಗನ್ ಅಂತಾರೆ. ಅಂದರೆ ಅಂತಹವರು ಚಿಕನ್, ಮಟನ್, ಮೊಟ್ಟೆ ತಿನ್ನಲ್ಲ. ಅಷ್ಟೇ ಯಾಕೆ.. ಹಾಲು, ಮೊಸರು ತುಪ್ಪಗಳಿಂದಲೂ ದೂರ ಇರ್ತಾರೆ. ಅಂತಹವರನ್ನು ವೀಗನ್ ಅಂತಾರೆ. ಆಕ್ಚಯುಲಿ ಅದು ವೆಜಾನ್.

    ಕನ್ನಡಿಗರ ಮೋಹಕ ತಾರೆ ರಮ್ಯಾ ಈಗ ವೀಗನ್ ಆಗುತ್ತಿದ್ದಾರೆ. ಅಲ್ಲಲ್ಲ.. ಆಗಿಬಿಟ್ಟಿದ್ದಾರೆ. ಮೊದಲೆಲ್ಲ ಮಟನ್, ಚಿಕನ್‍ನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದ ಹುಡುಗಿ ರಮ್ಯಾ. ಮಾಜಿ ಸಂಸದೆಯೂ ಆಗಿರುವ ರಮ್ಯಾಗೆ ಅದೇಕೋ ಏನೋ ವನ್ಯಜೀವಿಗಳ ಮೇಲೆ ಪ್ರೀತಿ ಮೊಳೆತಿದೆ. ಕಾಡು, ವನ್ಯಧಾಮಗಳಿಗೆ ಸಫಾರಿ ಹೋಗುವುದೂ ತಪ್ಪು. ಅದರಿಂದ ಪ್ರಾಣಿಗಳಿಗೆ ಹಿಂಸೆಯಾಗುತ್ತೆ ಎಂದೆಲ್ಲ ಮಾತನಾಡುತ್ತಿದ್ದಾರೆ ರಮ್ಯಾ.

  • ಪವಿತ್ರ ಲೋಕೇಶ್ ಮದುವೆಗೆ ಅವಕಾಶ ಕೊಡಲ್ಲ : ರಮ್ಯಾ

    ಪವಿತ್ರ ಲೋಕೇಶ್ ಮದುವೆಗೆ ಅವಕಾಶ ಕೊಡಲ್ಲ : ರಮ್ಯಾ

    ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಇಬ್ಬರೂ ಈ ವರ್ಷದ ಆರಂಭಕ್ಕೆ ಪರಸ್ಪರ ಮುತ್ತು ಕೊಟ್ಟು ಹೊಸ ಜೀವನ ಆರಂಭ ಮಾಡುತ್ತಿದ್ದೇವೆ ಎಂಬ ಸುಳಿವು ಕೊಟ್ಟಿದ್ದರು. ಪವಿತ್ರಾ ಮತ್ತು ನರೇಶ್ ನಡುವಿನ ಬಾಂಧವ್ಯ ಬೀದಿಗೆ ಬಂದಿದ್ದು ಕಳೆದ ವರ್ಷದ ಜುಲೈನಲ್ಲ. ಮೈಸೂರಿನ ಹೋಟೆಲ್ಲೊಂದರಲ್ಲಿ ವಾಸ್ತವ್ಯ ಹೂಡಿದ್ದ ಪವಿತ್ರಾ ಮತ್ತು ನರೇಶ್ ಅವರನ್ನು ಮೀಡಿಯಾಗಳ ಮುಂದೆ ಬೆತ್ತಲು ಮಾಡಿದ್ದರು ನರೇಶ್ ಅವರ ಪತಿ ರಮ್ಯಾ. ಇಬ್ಬರ ಮಧ್ಯೆ ಅನೈತಿಕ ಸಂಬಂಧವಿದೆ. ನಮ್ಮ ಸಂಸಾರಕ್ಕೆ ಪವಿತ್ರ ಹುಳಿ ಹಿಂಡಿದ್ದಾರೆ ಎಂದು ಕೆಂಡ ಕಾರಿದ್ದರು ರಮ್ಯಾ. ನರೇಶ್ ಅವರ ಅಧಿಕೃತ ಪತ್ನಿಯ ಆರೋಪಕ್ಕೆ ಪವಿತ್ರ ಲೋಕೇಶ್ ಕೊಟ್ಟಿದ್ದ ಉತ್ತರವೇ ಬೇರೆ. ಹೌದು ಎಂದು ಕೂಡಾ ಹೇಳಿರಲಿಲ್ಲ. ಸಂಬಂಧ ಇಲ್ಲವೇ ಇಲ್ಲ ಎಂದು ನಿರಾಕರಿಸಿರಲೂ ಇಲ್ಲ. ಈಗ ಮುತ್ತಿನ ಪ್ರಕರಣ ಮತ್ತೊಮ್ಮೆ ಹಳೆದ ವಿವಾದ ನೆನಪಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ನರೇಶ್ ಪತ್ನಿ ರಮ್ಯಾ..

    2022ರ ಏಪ್ರಿಲ್‍ನಲ್ಲಿ ನರೇಶ್ ಡೈವೋರ್ಸ್‍ಗೆ ಅರ್ಜಿ ಹಾಕಿಕೊಂಡಿದ್ದರು. ನನ್ನ ಗಮನಕ್ಕೇ ತಾರದೆ ಅದನ್ನು ಎಕ್ಸ್-ಪರೇಟ್ ಮೂಲಕ ಗೆಲ್ಲುವ ಸಂಚು ಹೂಡಿದ್ದರು. (ಎಕ್ಸ್-ಪರೇಟ್ ಎಂದರೆ ಕೋರ್ಟಿನಲ್ಲಿ ಪ್ರತಿವಾದಿಯ ಗಮನಕ್ಕೆ ಬಾರದಂತೆ ಕೇಸು ತಮ್ಮ ಪರ ಆಗುವಂತೆ ಮಾಡಿಕೊಳ್ಳುವುದು. ಹಾಗೆಂದು ಇದು ಕೋರ್ಟ್ ಮಾಡುವ ಪ್ರಕ್ರಿಯೆ ಅಲ್ಲ. ಪ್ರತಿವಾದಿಯ ಗಮನಕ್ಕೆ ಕೋರ್ಟ್ ಆಚರಣೆಗಳು, ನೋಟಿಸುಗಳೂ ಸೇರಿದಂತೆ ಯಾವುದೂ ತಿಳಿಯದಂತೆ ನೋಡಿಕೊಳ್ಳುವುದು. ಒಮ್ಮೆ ಆದೇಶ ಬಂದ ಮೇಲೆ ಪ್ರತಿವಾದಿ ಮೇಲ್ಮನವಿ ಅರ್ಜಿ ಹಾಕಿಕೊಳ್ಳಬಹುದೇ ಹೊರತು, ಹಳೆಯ ಆದೇಶ ಅನೂರ್ಜಿತವಾಗುವುದಿಲ್ಲ.) ಹೇಗೋ ಅದೃಷ್ಟವಶಾತ್ ಅದು ನನ್ನ ಗಮನಕ್ಕೆ ಬಂತು. ಈ ವರ್ಷದ ಮಾರ್ಚ್‍ನಲ್ಲಿ ವಿಚಾರಣೆ ಇದೆ. ಹೀಗಿರುವಾಗ ಇವರು ಈ ರೀತಿ ಮಾಡಿದ್ದಾರೆ. ನಾನು ನನ್ನ ಕುಟುಂಬ ನಿರ್ವಹಣೆಗೆ ಹಣ ಕೇಳುತ್ತಿದ್ದೇನೆ ಅಷ್ಟೆ ಎಂದಿದ್ದಾರೆ ರಮ್ಯಾ  ನರೇಶ್.

    ಇದು ಸಿನಿಮಾ ಪ್ರಮೋಷನ್`ಗಾಗಿ ಮಾಡಿದ ವಿಡಿಯೋ ಅಲ್ಲ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ ಎಂದಿರುವ ಪವಿತ್ರಾ ಲೋಕೇಶ್ ವಿವಾದ ಹೆಚ್ಚುವಂತೆ ಮಾಡಿದ್ದಾರೆ. ಅಧಿಕೃತವಾಗಿ ಡೈವೋರ್ಸ್ ಆಗಿಲ್ಲದ ನರೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದಿರುವುದು ಕಾನೂನು ಹೋರಾಟದಲ್ಲಿ ಯಾವ ತಿರುವು ಪಡೆಯಲಿದೆಯೋ ನೋಡಬೇಕು.

  • ಭಾವೀ ಮುಖ್ಯಮಂತ್ರಿ ರಮ್ಯಾಗೆ ಶುಭಾಶಯ..!!!

    will ramya be next cm

    ನಟಿ ರಮ್ಯಾ ಕರ್ನಾಟಕದ ಸಿಎಂ ಆಗ್ತಾರಾ..? ಆ ಪ್ರಶ್ನೆಗೆ ಉತ್ತರ ಹೇಳೋಕಾಗಲ್ಲ. ಆದರೆ, ಭಾವೀ ಮುಖ್ಯಮಂತ್ರಿ ರಮ್ಯಾಗೆ ಶುಭಾಶಯಗಳು ಎಂಬ ಟ್ವೀಟ್‍ಗಳು ರಮ್ಯಾ ಹುಟ್ಟುಹಬ್ಬದ ದಿನ ಸುದ್ದಿ ಮಾಡಿದ್ದಂತೂ ನಿಜ.

    ಸದ್ಯಕ್ಕೆ ರಾಜ್ಯ ರಾಜಕಾರಣದಿಂದ ದೂರ ಇರುವ ರಮ್ಯಾ, ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾ ಉಸ್ತುವಾರಿ ನಾಯಕಿ. ಹೀಗಾಗಿಯೇ ಹುಟ್ಟುಹಬ್ಬದ ದಿನ ಟ್ವಿಟರ್‍ನಲ್ಲಿ ಭಾವೀ ಸಿಎಂ ರಮ್ಯಾ ಎಂಬ ಶುಭಾಶಯ ಹೊರಬಿದ್ದಿರುವುದು ಕುತೂಹಲ ಕೆರಳಿಸಿದೆ. 

    ರಮ್ಯಾ, ರಾಜ್ಯ ರಾಜಕೀಯದಲ್ಲಿ ಅಂಬರೀಷ್ ಗರಡಿಯಲ್ಲಿ ಬೆಳೆದ ಹುಡುಗಿ. ಆದರೆ, ಈಗ ಅಂಬರೀಷ್ ಅವರೇ ರಾಜ್ಯ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ವಿರುದ್ಧ ನಿಂತಿದ್ದ ರಮ್ಯಾಗೆ, ಅದೇ ಕಾರಣಕ್ಕೆ ಸೋಲು ಕೂಡಾ ದಕ್ಕಿದೆ ಎನ್ನವುದು ರಾಜಕೀಯ ವಿಶ್ಲೇಷಣೆ. ಆದರೀಗ ಮಂಡ್ಯ ರಾಜಕಾರಣಕ್ಕೆ ರಮ್ಯಾ ಪ್ರವೇಶಿಸಲಿದ್ದಾರೆ ಎನ್ನುವ ಸುದ್ದಿ ಕೇವಲ ಸುದ್ದಿಯಾಗಿ ಉಳಿದಿಲ್ಲ.

    ಅಂಥಾದ್ದರಲ್ಲಿ ಭಾವೀ ಸಿಎಂ ರಮ್ಯಾಗೆ ಶುಭಾಶಯ ಎಂದು ಶುಭ ಹಾರೈಸಿರುವುದರ ಹಿಂದೆ ಇನ್ನೇನೋ ಅಡಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    Related Articles :-

    ರಮ್ಯಾಗೆ ರಾಹುಲ್ ಗಾಂಧಿ ಶುಭ ಕೋರಿದ್ದು ಸುಳ್ಳಾ..?

  • ಮಂಡ್ಯಕ್ಕೆ ಗುಡ್‍ಬೈ - ರಮ್ಯಾ ಹೇಳಿದರು ಕಾರಣ

    ramya vacates mandya home over night

    ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ, ಸಂಸದೆಯಾದ ಮೇಲೆ ಮಂಡ್ಯದಲ್ಲೇ ಮನೆ ಮಾಡಿಕೊಂಡಿದ್ದರು. ಮಾಜಿಯಾದ ನಂತರವೂ ಮಂಡ್ಯದಲ್ಲೊಂದು ಬಾಡಿಗೆ ಮನೆ ಮಾಡಿಕೊಂಡಿದ್ದ ರಮ್ಯಾ, ಮಂಡ್ಯದಲ್ಲಿ ಇದ್ದದ್ದು ಮಾತ್ರ ಅಪರೂಪ. ಕರ್ನಾಟಕದಿಂದ ಹೆಚ್ಚೂ ಕಡಿಮೆ ದೂರವಾಗಿರುವ ರಮ್ಯಾ, ಈಗ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಂಬರೀಷ್ ಅಂತ್ಯಕ್ರಿಯೆಗಾಗಲೀ, ದರ್ಶನಕ್ಕಾಗಲೀ ಬಾರದ ರಮ್ಯಾಗೆ ಮಂಡ್ಯದ ಜನ ಶ್ರದ್ಧಾಂಜಲಿ ಅರ್ಪಿಸಿದ್ದರು. ಕಾಲು ನೋವು ಎಂದು ರಮ್ಯಾ ಕೊಟ್ಟ ಕಾರಣವನ್ನೂ ಒಪ್ಪಿರಲಿಲ್ಲ. 

    ಈಗ ರಮ್ಯಾ, ಮಂಡ್ಯದ ಮನೆಯನ್ನು ಖಾಲಿ ಮಾಡಿದ್ದಾರೆ. ಅದೂ ರಾತ್ರೋರಾತ್ರಿ. ಮನೆ ಖಾಲಿ ಮಾಡುವಾಗಲೂ ರಮ್ಯಾ ಮಂಡ್ಯಕ್ಕೇನೂ ಬರಲಿಲ್ಲ. ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿ, ಅವರೇ ರಮ್ಯಾ ಅವರ ವಸ್ತುಗಳನ್ನು ಮನೆಯಿಂದ ಸಾಗಿಸಿದ್ದಾರೆ.

    ಮನೆಯ ಮಾಲೀಕ ಸಾದತ್ ಅಲಿ ಖಾನ್, ಮನೆ ತಮಗೆ ಬೇಕು. ಬಿಟ್ಟುಕೊಡಿ ಎಂದು ಕೇಳಿದರು. ಹಾಗಾಗಿ ಮನೆ ಖಾಲಿ ಮಾಡಿದೆ ಎಂದಿದ್ದಾರೆ ರಮ್ಯಾ. 

    ವೋಟು ಹಾಕೋಕೂ ಬರದೆ, ಅಂಬರೀಷ್ ಅಂತಿಮ ದರ್ಶನಕ್ಕೂ ಬರದೆ, ಮನೆ ಮಾಡಿಕೊಂಡಿದ್ದರೂ ಒಂದು ದಿನವೂ ಮನೆಯಲ್ಲಿ ಉಳಿಯದೆ ವಿವಾದ ಮಾಡಿಕೊಂಡಿದ್ದ ರಮ್ಯಾ, ಈಗ ಹೆಚ್ಚೂ ಕಡಿಮೆ ಮಂಡ್ಯಕ್ಕೆ ಶಾಶ್ವತವಾಗಿಯೇ ಗುಡ್ ಬೈ ಹೇಳಿದಂತಾಗಿದೆ.

  • ಮಂಡ್ಯದ ಹೆಣ್ಣು ಸಕ್ಕರೆಯನ್ನೇ ಬಿಟ್ಟುಬಿಟ್ರು..!

    ramya sweets image

    ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ, ಮಂಡ್ಯದ ಹೆಣ್ಣು. ಮಂಡ್ಯದಿಂದಲೇ ಸಂಸದೆಯಾಗಿದ್ದ ಅವರೀಗ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಹೇಳಿ ಕೇಳಿ ಮಂಡ್ಯ ಸಿಹಿ ಸಿಹಿಯಾದ ಕಬ್ಬು ಮತ್ತು ಸಕ್ಕರೆಗೆ ಫೇಮಸ್ಸು. ಈಗ ಆ ಕ್ಷೇತ್ರದ ಸಂಸದೆಯಾಗಿದ್ದ, ಮಂಡ್ಯದ ಹೆಣ್ಣು ಎಂದೇ ಖ್ಯಾತರಾಗಿದ್ದ ರಮ್ಯಾ, ಸಕ್ಕರೆಯನ್ನೇ ಬಿಟ್ಟುಬಿಟ್ಟಿದ್ದಾರಂತೆ.

    ಸಕ್ಕರೆ ಅನ್ನೋದು ರಮ್ಯಾಗೆ ಅಡಿಕ್ಷನ್ ಆಗಿಬಿಟ್ಟಿತ್ತಂತೆ. ಒತ್ತಡ ಹೆಚ್ಚಾದಾಗಲೆಲ್ಲ ಸಿಹಿ ಅಥವಾ ಸಕ್ಕರೆ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರಂತೆ ರಮ್ಯಾ. ಸಕ್ಕರೆ ತಿನ್ನುವ ಚಟವನ್ನು ಬಿಡಬೇಕು ಎಂದುಕೊಂಡರೂ ಎರಡು ಮೂರು ದಿನಗಳಲ್ಲೇ ಮುರಿಯುತ್ತಿದ್ದರಂತೆ. ಅಷ್ಟರಮಟ್ಟಿಗೆ ಅಂಟಿಕೊಂಡಿರೋ ಚಟವನ್ನು ಬಿಡೋಕೆ ಪ್ರತಿಜ್ಞೆ ಮಾಡಿದ್ದಾರೆ ರಮ್ಯಾ. 

    ಅದಕ್ಕೇ ಈ ಬಾರಿ ಅವರು ಸಕ್ಕರೆ ತಿನ್ನುವುದನ್ನು ಬಿಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡುಬಿಟ್ಟಿದ್ದಾರೆ. ಈ ವರ್ಷದ ಕೊನೆಯವರೆಗೆ ಸಕ್ಕರೆಯನ್ನು ಮುಟ್ಟೋದಿಲ್ಲ ಅನ್ನೊದು ರಮ್ಯಾ ಅವರ ಪ್ರತಿಜ್ಞೆ. ಈ ಶುಗರ್ ಚಾಲೆಂಜ್‍ನಲ್ಲಿ ರಮ್ಯಾ ಗೆಲ್ತಾರಾ..? ಜಸ್ಟ್ ವೇಯ್ಟ್ & ಸೀ.

  • ಮಂಡ್ಯದಲ್ಲಿ ಶುರುವಾಯ್ತು ರಮ್ಯಾ ಕ್ಯಾಂಟೀನ್

    ramya canteen in mandya

    ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಈಗ ಫೇಮಸ್ ಆಗುತ್ತಿದೆ. ಅದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿದ ಉಡುಗೊರೆ. ಎಲೆಕ್ಷನ್ ಉಡುಗೊರೆ ಎನ್ನಲು ಕೂಡಾ ಅಡ್ಡಿಯಿಲ್ಲ.

    ಆದರೆ, ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಶುರುವಾಗಿದೆ. ರಾಜ್ಯ ಸರ್ಕಾರ ಜಿಲ್ಲೆ ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವ ಹೇಳಿಕೆ ಕೊಡುತ್ತಿರುವಾಗಲೇ, ಅದಕ್ಕೂ ಮೊದಲೇ ರಮ್ಯಾ ಕ್ಯಾಂಟೀನ್ ಶುರುವಾಗಿರುವುದು ವಿಶೇಷ.

    ಮಂಡ್ಯದ ಕಲಾಮಂದಿರ ರಸ್ತೆ ಬದಿ ರಘು ಎಂಬ ರಮ್ಯಾರ ಅಭಿಮಾನಿ ಈ ಕ್ಯಾಂಟೀನ್ ಆರಂಭಿಸಿದ್ದಾನೆ. ಮೊದಲು ಈಗ ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಕ್ಲೀನಿಲ್ಲ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಎಂದು ಪೊಲೀಸರು ಫುಟ್‍ಪಾತ್ ಹೋಟೆಲ್ ಮುಚ್ಚಿಸಿದ್ದರು. ಅದಾದ ಮೇಲೆ ರಘು ಈ ರಮ್ಯಾ ಕ್ಯಾಂಟೀನ್ ಶುರು ಮಾಡಿದ್ದಾನೆ.

    ಇಂದಿರಾ ಕ್ಯಾಂಟೀನ್‍ನಲ್ಲಿ ತಿಂಡಿ 5 ರೂ ಹಾಗೂ ಊಟ 10 ರೂ. ಆದರೆ, ರಮ್ಯಾ ಕ್ಯಾಂಟೀನ್‍ನಲ್ಲಿ ಎಲ್ಲವೂ 10 ರೂ. ತಾನು ರಮ್ಯಾ ಅವರ ಅಭಿಮಾನಿ ಎಂದಿರುವ ರಘು ಹೋಟೆಲ್‍ನಲ್ಲಿ 10 ರೂ.ಗೆ ಇಡ್ಲಿ, ದೋಸೆ, ಮುದ್ದೆ, ಸೊಪ್‍ಸಾರು, ಕಾಳ್‍ಸಾರು ಎಲ್ಲ ಸಿಗುತ್ತೆ. 

  • ಮಂಡ್ಯದಿಂದ ನಿಲ್ಲಲ್ಲ ರಮ್ಯಾ

    ramya not contesting from mandya

    ರೆಬಲ್‍ಸ್ಟಾರ್ ಅಂಬರೀಷ್, ಅಕ್ಷರಶಃ ರೆಬಲ್ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್‍ನಲ್ಲಿ ಅವರಿಗೆ ಕೇಳದೆಯೇ ಟಿಕೆಟ್ ಕೊಡಲಾಗಿತ್ತು. ಬಿಫಾರಂನ್ನು ಮನೆಗೇ ಕಳಿಸಿಕೊಡಲಾಗಿತ್ತು. ಆದರೆ, ತಮ್ಮನ್ನು ಅವಮಾನಕಾರಿಯಾಗಿ ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದನ್ನು ಮರೆಯದ ಅಂಬರೀಷ್, ಈಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಆಟವಾಡಿಸುತ್ತಿದ್ದಾರೆ. 

    ಹಾಗೆ ನೋಡಿದರೆ, ಮಂಡ್ಯದಲ್ಲಿ ಅಂಬರೀಷ್ ಪ್ರಭಾವ ಮುರಿಯಲೆಂದೇ ಚೆಲುವರಾಯ ಸ್ವಾಮಿಯನ್ನು ಪಕ್ಷಕ್ಕೆ ಕರೆತಂದಿರುವ ಸಿದ್ದರಾಮಯ್ಯ, ಆ ನಿಟ್ಟಿನಲ್ಲಿ ಗೆಲ್ತಾರಾ ಅನ್ನೋದು ಬೇರೆ ಪ್ರಶ್ನೆ. ಇದರ ಮಧ್ಯೆ ಮಂಡ್ಯದಿಂದ ರಮ್ಯಾ ನಿಲ್ತಾರಂತೆ ಅನ್ನೋ ಸುದ್ದಿಗೆ ವೇಗ ಬಂದಿತ್ತು. 

    ಅಂಬರೀಷ್ ಅವರು ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಇವುಗಳಿಗೆಲ್ಲ ಒಂದೇ ಮಾತಿನಲ್ಲಿ ನೋ ಎಂದುಬಿಟ್ಟಿದ್ದಾರೆ ರಮ್ಯಾ.

    ಮಂಡ್ಯದಿಂದ ನಾನು ಸ್ಪರ್ಧಿಸುತ್ತಿಲ್ಲ ಎನ್ನುವುದು ರಮ್ಯಾ ಅವರ ಒನ್‍ಲೈನ್ ಉತ್ತರ. ಅಂದಹಾಗೆ ಕರ್ನಾಟಕದಲ್ಲಿ ಚುನಾವಣೆ ಇಷ್ಟು ರಂಗೇರಿರುವಾಗ ಕೂಡಾ ರಮ್ಯಾ ಎಲ್ಲಿಯೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.

  • ಮತ್ತೆ ಮಂಡ್ಯಕ್ಕೇ ಬರ್ತಾರಂತೆ ರಮ್ಯಾ..!

    ramya re entry to mandya

    ಚಿತ್ರರಂಗವನ್ನೂ ಹೆಚ್ಚೂ ಕಡಿಮೆ ಬಿಟ್ಟೇಬಿಟ್ಟಿರುವ ರಮ್ಯಾ, ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಕೂಡಾ ಕಡಿಮೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ನಿರ್ವಹಣೆ ವಹಿಸಿಕೊಂಡ ಮೇಲೆ ರಮ್ಯಾ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಹೀಗಿರುವಾಗಲೇ, ರಮ್ಯಾ ಮತ್ತೊಮ್ಮೆ ಮಂಡ್ಯಕ್ಕೆ ಬರುವ ಸುದ್ದಿ ಕೇಳಿ ಬರೋಕೆ ಶುರುವಾಗಿದೆ.

    ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ರಮ್ಯಾ ಅವರನ್ನು ಕಣಕ್ಕಿಳಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರಂತೆ. ಅಲ್ಲದೆ, ಅಂಬರೀಷ್ ಜನಪ್ರಿಯತೆ ಕುಸಿದಿದ್ದು, ಮಂಡ್ಯದಲ್ಲಿ ಕಾಂಗ್ರೆಸ್‍ಗೆ ರಮ್ಯಾ ಅವರಿಂದ ಮಾತ್ರ ಶಕ್ತಿ ತುಂಬಲು ಸಾಧ್ಯ ಎಂದು ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಹೈಕಮಾಂಡ್‍ಗೆ ವರದಿ ಕೊಟ್ಟಿದ್ದಾರಂತೆ.

    ಹೀಗಾಗಿ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿಸಿದ್ದಾರಂತೆ. ಈಗಾಗಲೇ ಮಂಡ್ಯದಲ್ಲಿ ಬಾಡಿಗೆಗಿದ್ದ ಮನೆಯನ್ನೇ ಖರೀದಿಸಿರುವ ರಮ್ಯಾ, ಇದೇ ತಿಂಗಳು 29ರಂದು ಗೃಹ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನವೆಂಬರ್ 29 ರಮ್ಯಾ ಅವರ ಬರ್ತ್ ಡೇ ಎನ್ನುವುದು ವಿಶೇಷ.

    ಮಂಡ್ಯದಲ್ಲಿ ಸಾಧತ್ ಅಲಿ ಖಾನ್ ಎಂಬುವವರು ರಮ್ಯಾ ಅವರಿಗೆ ವಾಸ ಮಾಡಲು ತಮ್ಮ ಮನೆಯನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ.  ಅದೇ ಮನೆಯನ್ನು 25 ಲಕ್ಷ ಖರ್ಚು ಮಾಡಿ ನವೀಕರಿಸಿಕೊಂಡಿದ್ದ ರಮ್ಯಾ, ಈಗ ಆ ಮನೆಯನ್ನು ಖರೀದಿ ಮಾಡಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.

    ಆದರೆ, ಮಂಡ್ಯದಲ್ಲಿ ಅಂಬರೀಷ್ ಅವರ ಎದುರು ರಮ್ಯಾ ಮಿಂಚುತ್ತಾರಾ..? ಮಂಕಾಗುತ್ತಾರಾ..? ಅಥವಾ ಅಂಬರೀಷ್ ಅವರೇ ಸೈಡ್‍ಗೆ ಹೋಗ್ತಾರಾ..? ಈಗಲೇ ಪಕ್ಕಾ ಹೇಳೋದು ಕಷ್ಟ. ಏಕೆಂದರೆ, ಅದು ಸಿನಿಮಾ ಅಲ್ಲ, ರಾಜಕೀಯ.

  • ಮದಕರಿ ನಾಯಕನಿಗೆ ನಾಯಕಿ ರಮ್ಯಾ ಅಲ್ಲ..!

    ramya is not heroine for madakari nayaka movie

    ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ದರ್ಶನ್ ಮದಕರಿ ನಾಯಕನಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದ ದಿನದಿಂದಲೂ ಎದ್ದಿರುವ ಪ್ರಶ್ನೆ ಮತ್ತು ಕುತೂಹಲ ಅದೇ. ನಾಯಕಿ ಯಾರು..? ಅಭಿಮಾನಿಗಳೇ ಮುಂದಾಗಿ ಯಾರು ನಾಯಕಿಯಾಗಬೇಕು ಎಂಬ ಸಮೀಕ್ಷೆ ನಡೆಸಿದ್ದೂ ಆಯ್ತು. ಬ್ರೇಕಿಂಗ್ ನ್ಯೂಸೂ ಆಯ್ತು. ಆದರೆ, ಈ ಎಲ್ಲ ಕುತೂಹಲಗಳಿಗೆ, ಗಾಸಿಪ್ಪುಗಳಿಗೆ ಸ್ವತಃ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತೆರೆ ಎಳೆದಿದ್ದಾರೆ.

    ಅದ್ಯಾರು ಇಂತಹ ಸುದ್ದಿ ಹಬ್ಬಿಸ್ತಾರೋ ಗೊತ್ತಿಲ್ಲ. ರಮ್ಯಾ ಅಂತೂ ಬರುತ್ತಿಲ್ಲ. ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ದರ್ಶನ್ ಹೈಟ್ಗೆ ಸರಿಹೊಂದುವ ನಾಯಕಿಯ ಹುಡುಕಾಟದಲ್ಲಿದ್ದಾರಂತೆ. ಅಷ್ಟೇ ಅಲ್ಲ, ಚಿತ್ರತಂಡ ಚಿತ್ರದ ಉಳಿದ ಪಾತ್ರವರ್ಗಗಳ ಆಯ್ಕೆಯನ್ನೂ ಮುಗಿಸಿಲ್ಲವಂತೆ.

    ಸದ್ಯಕ್ಕೆ ದರ್ಶನ್ ಮದಕರಿಯಾಗಿ, ಸುಮಲತಾ ರಾಜಮಾತೆಯಾಗಿ ನಟಿಸುವುದು ಪಕ್ಕಾ ಆಗಿದೆ. ಹಂಸಲೇಖ ಸಂಗೀತ ನೀಡಲಿದ್ದು, ಕಥೆ, ಚಿತ್ರಕಥೆ, ಸಂಭಾಷಣೆ ಹೊಣೆ ಬಿ.ಎಲ್.ವೇಣು ಅವರದ್ದು. ರಾಕ್ಲೈನ್ ವೆಂಕಟೇಶ್, ಈ ಅದ್ಧೂರಿ ಚಿತ್ರದ ನಿರ್ಮಾಪಕ.

  • ಮದುವೆ ಮರೆತಿದ್ದೇಕೆ ರಮ್ಯಾ? ಎಲ್ಲಿ ಹೋದ ಪ್ರಿಯತಮ?

    ಮದುವೆ ಮರೆತಿದ್ದೇಕೆ ರಮ್ಯಾ? ಎಲ್ಲಿ ಹೋದ ಪ್ರಿಯತಮ?

    ನಟಿ ರಮ್ಯಾ ಅವರಿಗೀಗ ಹೆಚ್ಚೂ ಕಡಿಮೆ 40 ವರ್ಷ ವಯಸ್ಸು. ನಟಿಯಾಗಿ, ರಾಜಕಾರಣಿಯಾಗಿ, ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ.. ರಮ್ಯಾ ಹೆಜ್ಜೆಯಿಟ್ಟ ಪ್ರತಿ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದಾರೆ. ವಯಸ್ಸು 40 ಇದ್ದರೂ.. ನೋಡೋಕೆ ಹಾಗನ್ಸಲ್ಲ ಅನ್ನೋದು ರಮ್ಯಾ ಸೌಂದರ್ಯ ಆರಾಧಕರು ಅವರಿಗೆ ಕೊಡೋ ಸರ್ಟಿಫಿಕೇಟು.

    ಚಿತ್ರರಂಗ ಬಿಟ್ಟು ಹೆಚ್ಚೂ ಕಡಿಮೆ ದಶಕವಾಗಿದ್ದರೂ, ರಮ್ಯಾ ಕ್ರೇಜ್ ಕಡಿಮೆಯಾಗಿಲ್ಲ ಅನ್ನೋದು ಅವರಿಗೆ ಸಿಕ್ಕೋ ಕ್ರೆಡಿಟ್ಟು. ಈ ಹಿಂದೆ ಪೋರ್ಚುಗಲ್ ಉದ್ಯಮಿ ರಫೇಲ್ ಎಂಬಾತನ ಜೊತೆ ಹೆಸರು ಕೇಳಿ ಬಂದಿತ್ತು. ಡೇಟಿಂಗ್ ವಿಷಯವನ್ನು ರಮ್ಯಾ ನಿರಾಕರಿಸಲಿಲ್ಲ. ಅದಾದ ನಂತರ ರಫೇಲ್ ಜೊತೆ ಸ್ನೇಹವಷ್ಟೇ ಉಳಿದುಕೊಂಡಿದೆ. ಈಗ ಮತ್ತೊಮ್ಮೆ ಮದುವೆ ಯಾವಾಗ ಅನ್ನೋ ಮಾತು ಕೇಳಿಬಂದಿದೆ.

    ರಮ್ಯಾ ಈ ಪ್ರಶ್ನೆಗೆ ಒಂದು ಹಾಡು ಹಾಡಿ ಉತ್ತರ ಕೊಟ್ಟಿದ್ದಾರೆ. ಆ ಹಾಡಿನ ಸಾರಾಂಶ ತಾತ್ಪರ್ಯ ಇಷ್ಟೆ, ರಮ್ಯ ಅವರ ಆತ್ಮಸಂಗಾತಿ ಇಲ್ಲ. ಬದುಕಿಲ್ಲ. ನನ್ನ ಆತ್ಮಸಂಗಾತಿ ಸತ್ತು ಹೋಗಿರಬಹುದು. ನನಗೆ ಗೊತ್ತಿಲ್ಲ. ಬಹುಶಃ ನನ್ನ ಆತ್ಮಸಂಗಾತಿ ಇಲ್ಲ. ನಿಮ್ಮ ಆತ್ಮವನ್ನು ನಾನು ನೋಡದೇ ಹೋಗಿರಬಹುದು.. ಎಂಬ  ಅರ್ಥ ಬರುವ ಆಲ್ಬಂ ಸಾಂಗ್ ಹಾಡಿದ್ದಾರೆ.

    ನನಗೆ ಸಿನಿಮಾ ಕ್ಷೇತ್ರದಲ್ಲಿರೋ ಸಂಗಾತಿ ಇಷ್ಟವಿಲ್ಲ ಎಂದಿದ್ದ ರಮ್ಯಾ ಪ್ರಬುದ್ಧತೆಯುಳ್ಳ ಸಂಗಾತಿಗಾಗಿ ಹುಡುಕಿದ್ದರು. ಈಗ ಆತ್ಮಸಂಗಾತಿಯೇ ಸತ್ತು ಹೋಗಿರಬಹುದು ಎನ್ನುತ್ತಿದ್ದಾರೆ.

  • ಮುಖ ಸೊಟ್ಟ ಮಾಡಿಕೊಂಡು ಬಂದರು ಚೆಂದದ ರಮ್ಯಾ

    ramya is back with different selfies

    ರಮ್ಯಾ ಅಂದ್ರೆ ನಗು.. ರಮ್ಯಾ ಅಂದ್ರೆ ಬ್ಯೂಟಿ. ಅಂತಾ ಬ್ಯೂಟಿ ಇದ್ದಕ್ಕಿದ್ದಂತೆ ಮುಖ ಸೊಟ್ಟ ಮಾಡಿಕೊಂಡು, ತುಟಿಗಳನ್ನು ಹಿಗ್ಗಲಿಸಿಕೊಂಡು, ಮುಖವನ್ನು ಅಗಲಿಸಿಕೊಂಡು, ವಕ್ರ ವಕ್ರವಾಗಿ ಫೋಟೋ ತೆಗೆದುಕೊಂಡು ನಿಂತರೆ ಏನಾಗಬೇಡ..

    ಈಗ ಅದೇ ಆಗಿದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾಗೆ ವಾಪಸ್ ಬಂದಿದ್ದ ರಮ್ಯಾ, ಆದ್ಯಾತ್ಮದ ಸಂದೇಶಗಳನ್ನೇ ನೀಡುತ್ತಿದ್ದರು. ಓ.. ರಮ್ಯಾ ಯಾಕೋ ಸನ್ಯಾಸಿನಿ ಆಗೋ ಹಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಈ ರೀತಿಯ ಫೋಟೋ ಹಾಕಿ ಶಾಕ್ ಕೊಟ್ಟಿದ್ದಾರೆ ರಮ್ಯಾ.

    ಸರಿ.. ವಾಟ್ ನೆಕ್ಸ್ಟ್ ರಮ್ಯಾ..? ಸಿನಿಮಾನಾ..? ರಾಜಕೀಯನಾ..? ಅಥವಾ ಎಲ್ಲದಕ್ಕೂ ಬೈ ಬೈ ಹೇಳಿ.. ಹೊಸದನ್ನೇನಾದ್ರೂ ಮಾಡ್ತಾರಾ..? ವೇಯ್ಟ್.

  • ಮುಮ್ತಾಜ್ ಆಗಲಿದ್ದಾರೆ ರಮ್ಯಾ..!

    ramya as mumtaz

    ಮೋಹಕ ತಾರೆ ರಮ್ಯಾ ಈಗ ಫುಲ್‍ಟೈಂ ರಾಜಕಾರಣಿಯಾಗಿಬಿಟ್ಟಿದ್ದಾರೆ. ಅವರನ್ನು ಮತ್ತೆ ಚಿತ್ರರಂಗಕ್ಕೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ನಾಗಶೇಖರ್. ಹಾಗಂತ ಅದು ನವೆಂಬರ್‍ನಲ್ಲಿ ನಾನು ಅವಳು ಚಿತ್ರ ಅಲ್ಲ. ಅದು ನಾಗಶೇಖರ್ ನಿರ್ಮಾಣದ ಚಿತ್ರ. 

    ನಿರ್ದೇಶಕ ಎಸ್.ಮಹೇಂದರ್ ಹೇಳಿದ ಕಥೆ ನಾಗಶೇಖರ್‍ಗೆ ಇಷ್ಟವಾಗಿ, ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಚಿತ್ರದ ಹೆಸರೇ ಮಹೇಂದರ್ ಮನಸ್ಸಲ್ಲಿ ಮುಮ್ತಾಜ್. ಚಿತ್ರದ ನಾಯಕಿಯಾಗಿ ಪಾಕಿಸ್ತಾನದ ನಟಿಯೊಬ್ಬರು ಅಭಿನಯಿಸುವ ಸಾಧ್ಯತೆಯಿದ್ದು, ಅತ್ಯಂತ ಪ್ರಮುಖವಾದ ಪಾತ್ರಕ್ಕೆ ರಮ್ಯಾರನ್ನು ಸಂಪರ್ಕಿಸಿದ್ದಾರೆ.

    ಸಂಜು ಮತ್ತು ಗೀತಾ ಚಿತ್ರ ನಿರ್ದೇಶಿಸಿದ್ದ ನಾಗಶೇಖರ್‍ಗೆ ರಮ್ಯಾ ಅವರ ಜೊತೆ ಉತ್ತಮ ಸ್ನೇಹವಿದೆ. ಅದು ಕೆಲಸ ಮಾಡಿ, ರಮ್ಯಾಗೆ ಕಥೆ ಇಷ್ಟವಾಗಿಬಿಟ್ಟರೆ, ರಮ್ಯಾ ಮುಮ್ತಾಜ್ ಆಗಬಹುದು. ಅಂದಹಾಗೆ ಚಿತ್ರಕ್ಕೆ ಗಣೇಶ್ ನಾಯಕರಾಗುವ ಸಾಧ್ಯತೆ ಇದೆ.

    Related Articles:-

    Ramya Might Act In Mahendar Manassalli Mumtaz

  • ಮುಮ್ತಾಜ್ ಆಗ್ತಿಲ್ಲ ರಮ್ಯಾ..!

    ramya will not act in mumtaz

    ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದ ರಮ್ಯಾ, ಎಸ್.ಮಹೇಂದರ್ ನಿರ್ದೇಶನದ `ಮನಸ್ಸಲ್ಲಿ ಮುಮ್ತಾಜ್' ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು. ಆ ಚಿತ್ರಕ್ಕೆ ಸಂಜು ಮತ್ತು ಗೀತಾ ನಿರ್ದೇಶಕ ನಾಗಶೇಖರ್ ನಿರ್ಮಾಪಕರಾಗುತ್ತಿದ್ದ ಹಿನ್ನೆಲೆಯಲ್ಲಿ ರಮ್ಯಾ ಮತ್ತೆ ಬಣ್ಣ ಹಚ್ಚಬಹುದು ಎಂಬ ಮಾತುಗಳೂ ಚಾಲ್ತಿಗೆ ಬಂದಿದ್ದವು. ಈಗ ಅವುಗಳಿಗೆಲ್ಲ ರಮ್ಯಾ ತೆರೆ ಎಳೆದುಬಿಟ್ಟಿದ್ದಾರೆ.

    ನನ್ನನ್ನು ಆ ಚಿತ್ರದಲ್ಲಿ ನಟಿಸುವಂತೆ ಯಾರೂ ಕೇಳಿಲ್ಲ. ಅದೆಲ್ಲ ಸುಳ್ಳು ಸುದ್ದಿ. ನಾನು ಮತ್ತೆ ನಟಿಸುವುದು ಮುಗಿದು ಹೋದ ಕಥೆ. ನನ್ನ ಸಿನಿಮಾ ನಂಟು ಮುಗಿದಾಗಿದೆ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ ರಮ್ಯಾ. ಅಲ್ಲಿಗೆ ರಮ್ಯಾ ಇನ್ನು ಮುಂದೆ ಕನ್ನಡದಲ್ಲಷ್ಟೇ ಅಲ್ಲ, ಯಾವುದೇ ಭಾಷೆಯ ಸಿನಿಮಾದಲ್ಲೂ ನಟಿಸುವುದಿಲ್ಲ. ಏನಿದ್ದರೂ ರಾಜಕೀಯ ಎಂಬುದು ಪಕ್ಕಾ ಆದ ಹಾಗಿದೆ.

    Related Articles :-

    ಮುಮ್ತಾಜ್ ಆಗಲಿದ್ದಾರೆ ರಮ್ಯಾ..!

    Ramya Might Act In Mahendar Manassalli Mumtaz

  • ಮೋದಿಗೆ ಅಮಲು ಎಂದ ರಮ್ಯಾಗೆ ಕ್ಲಾಸ್

    ramya's comments

    ನಟಿ ರಮ್ಯಾಗೂ, ವಿವಾದಗಳಿಗೂ ಎಲ್ಲಿಲ್ಲದ ನಂಟು. ಏನಾದರೊಂದು ಹೇಳಿಕೆ ಕೊಡುವುದು, ಅದು ವಿವಾದವಾದ ನಂತರ, ಸ್ಪಷ್ಟನೆ ಕೊಡೋದು, ಕ್ಷಮೆ ಕೇಳೋದು, ಸಮರ್ಥನೆ ಮಾಡಿಕೊಳ್ಳೋದು ರಮ್ಯಾ ಅವರಿಗೆ ಅಭ್ಯಾಸವೇ ಆಗಿಬಿಟ್ಟಿದೆ. ಈ ಬಾರಿ ಕೂಡಾ ಅವರು ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ನರೇಂದ್ರ ಮೋದಿಗೆ ಅಮಲು ಎಂದು ಹೇಳಿ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದಾರೆ.

    ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ, ಬೆಂಗಳೂರಿನಲ್ಲಿನ ನರೇಂದ್ರ ಮೋದಿ ಭಾಷಣವನ್ನು ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೋದಿ ನಮ್ಮ ಟಾಪ್ ಪ್ರಿಯಾರಿಟಿ ಟೊಮ್ಯಾಟೋ, ಆನಿಯನ್ ಹಾಗೂ  ಪೊಟ್ಯಾಟೋ. ರೈತರನ್ನು ನಾವು ಕಾಪಾಡುತ್ತೇವೆ ಎಂದು ಮಾತನಾಡಿದ್ದರು. ಅದನ್ನೇ ಉಲ್ಟಾ ಮಾಡಿ ಹೇಳಿರುವ ರಮ್ಯಾ, ಮೋದಿ ಅಮಲಿನಲ್ಲಿದ್ದಾಗ ಈ ರೀತಿ ಮಾತನಾಡ್ತಾರೆ ಎಂದು ಟ್ವೀಟ್ ಮಾಡಿಬಿಟ್ಟಿದ್ದಾರೆ. ಅಂದಹಾಗೆ ಇಂಗ್ಲಿಷ್‍ನಲ್ಲಿ ಪಾಟ್ ಅಂದರೆ, ಮಡಕೆ ಎಂದಷ್ಟೇ ಅಲ್ಲ, ಮರಿಜುವಾನ (ಮಾದಕ ದ್ರವ್ಯ) ಅನ್ನೋ ಡ್ರಗ್ಸ್ ಸೇವಿಸಿ ಅಮಲಿನಲ್ಲಿರುವವರನ್ನು ಪಾಟ್ ಎಂದು ಹೇಳ್ತಾರೆ. ಪ್ರಧಾನಿಯೊಬ್ಬರನ್ನು ಟೀಕಿಸುವ ಪದ ಅದಾಗಿರಲಿಲ್ಲ. ಆದರೆ, ಇಲ್ಲಿ ರಮ್ಯಾ, ಟೀಕಿಸುವ ಭರದಲ್ಲಿ ಸಂಯಮದ ಗಡಿ ದಾಟಿಬಿಟ್ಟಿದ್ದಾರೆ. ಸಹಜವಾಗಿಯೇ ಹಲವರು ರಮ್ಯಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್, ಸತತ ಸೋಲಿಗೆ ತಲೆಕೆಟ್ಟು ಆಗಾಗ ವಿದೇಶಕ್ಕೆ ಹೋಗುವವರಿಗೆ ನಶೆಯ ವಿಚಾರ ಚೆನ್ನಾಗಿಯೇ ತಿಳಿದಿರುತ್ತದೆ. ನಟಿ ರಮ್ಯಾ ಹೆಸರಿನಲ್ಲಿಯೇ ರಮ್ ಇದೆ. ಬಹುಶಃ ಆಕೆ ಟ್ವೀಟ್ ಮಾಡುವಾಗಲೆಲ್ಲ ಕುಡಿದೇ ಇರುತ್ತಾರೇನೋ ಎಂದು ಜಾಡಿಸಿದ್ದಾರೆ.

    ನಟ ಜಗ್ಗೇಶ್ `ಮೋದಿಯನ್ನು ಟೀಕಿಸುವ ಯೋಗ್ಯತೆ ರಮ್ಯಾಗಿಲ್ಲ. ಕನ್ನಡ ಮಾತನಾಡಲು ಬಾರದ ಕಾಡುಪಾಪ ಈಕೆ. ಕ್ಯಾಚ್ ಹಾಕ್ಕೊಂಡು ಸಿನಿಮಾ, ದೊಡ್ಡವರ ಆಶೀರ್ವಾದದಲ್ಲಿ ರಾಜಕೀಯ ಮಾಡಿದವರಿಗೆ ಮೋದಿಯವರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ ಎಂದು ಟೀಕಿಸಿದ್ದಾರೆ.

    ಟೀಕೆಗಳ ನಂತರವೂ ರಮ್ಯಾ ಕ್ಷಮೆಯನ್ನೇನೂ ಕೇಳಿಲ್ಲ. ಪಾಟ್ ಎಂದರೆ ಪೊಟ್ಯಾಟೋ, ಆನಿಯನ್, ಟೊಮ್ಯಾಟೋ ಎಂದೇ ಹೇಳಿದ್ದೇನೆ. ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

  • ರಮ್ಯಾ Active Again : ಗರ್ಭಿಣಿ ಆನೆಯ ಕೊಲೆಗೆ ಮಿಡಿದ ಪದ್ಮಾವತಿ..!

    ramy active on social media for kerala elephant tragedy

    ಸ್ಯಾಂಡಲ್ವುಡ್ ಕ್ವೀನ್, ಮಾಜಿ ಸಂಸದೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮಾಜಿ ಮುಖ್ಯಸ್ಥೆ  ರಮ್ಯಾ ಎಲ್ಲಿದ್ದಾರೆ..? ಹೇಗಿದ್ದಾರೆ..? ಏನು ಮಾಡುತ್ತಿದ್ದಾರೆ..? ಇಂತಹ ಪ್ರಶ್ನೆಗಳಿಗೆ ಮೀಡಿಯಾಗಳ ಬಳಿ ಉತ್ತರ ಇರಲಿಲ್ಲ. ಏಕೆಂದರೆ ರಮ್ಯಾ ಸೋಷಿಯಲ್ ಮೀಡಿಯಾದಿಂದಲೇ ಡಿ-ಆಕ್ಟಿವೇಟ್ ಆಗಿದ್ದರು. ಇತ್ತೀಚೆಗೆ ರಮ್ಯಾ ಅವರ ಟ್ವಿಟ್ಟರ್ ಅಕೌಂಟ್ ಆಕ್ಟಿವೇಟ್ ಆಗಿತ್ತು. ಆದರೆ ನೋ ಟ್ವೀಟ್ಸ್. ಹೀಗೆ ಮೌನವಾಗಿದ್ದ ರಮ್ಯಾ, ಈಗ ಮತ್ತೆ ಆಕ್ಟಿವ್ ಆಗಿದ್ದಾರೆ. ಅದಕ್ಕೆ ಕಾರಣವಾಗಿದ್ದು ಕೇರಳದಲ್ಲಿ ಗರ್ಭಿಣಿ ಆನೆಗೆ ಹಣ್ಣಿನಲ್ಲಿ ಸಿಡಿಮದ್ದು ತಿನ್ನಿಸಿ ಕೊಂದ ಪ್ರಕರಣ.

    ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಶುರುವಾಗಿರುವ ಅಭಿಯಾನದಲ್ಲಿ ಪಾಲ್ಗೊಂಡಿರುವ ರಮ್ಯಾ, ಅದರ ಲಿಂಕ್ನ್ನು ಶೇರ್ ಮಾಡಿದ್ದಾರೆ. ನೀವೆಲ್ಲರೂ ಚೆನ್ನಾಗಿದ್ದೀರಿ, ಆರೋಗ್ಯವಾಗಿದ್ದೀರಿ ಎಂಬ ವಿಶ್ವಾಸ, ನಂಬಿಕೆ ಇದೆ. ದಯವಿಟ್ಟು ಸ್ವಲ್ಪ ಸಮಯ ತೆಗೆದುಕೊಂಡು ಈ ಅರ್ಜಿಗೆ ಸಹಿ ಹಾಕಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ರಮ್ಯಾ ಅಜ್ಞಾತವಾಸ ಅಂತ್ಯವಾಗುವ ಲಕ್ಷಣಗಳು ಕಾಣುತ್ತಿವೆ.

  • ರಮ್ಯಾ ಏಕೆ ಬರಲಿಲ್ಲ ? - ಇಲ್ಲಿದೆ ಅಸಲಿ ಕಾರಣ

    why didnt ramya attend ambi's funeral

    ರಮ್ಯಾ ಅಂಬರೀಶ್ ಅಂತ್ಯ ಸಂಸ್ಜಾರಕ್ಕೆ ಬರಲಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಸಿಟ್ಟು ತರಿಸಿತ್ತು. ಮಂಡ್ಯದವರಂತೂ ಇನ್ನೊಮ್ಮೆ ಮಂಡ್ಯ ಕಡೆ ಬರೋಕ್ ಹೋಗಬೇಡ ಎಂದು ಗುಡುಗಿದ್ದರು.

    ramya_hurt.jpgರಮ್ಯ ಬರದೇ ಇರುವುದಕ್ಕೆ ಕಾರಣ ಏನೆಂದು ಈಗ ಗೊತ್ತಾಗಿದೆ. 

    ರಮ್ಯಾ ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

  • ರಮ್ಯಾ ಜೊತೆ ಇದ್ದವರು ಯಾರು? ರಮ್ಯಾ ಕೊಟ್ಟ ಉತ್ತರ

    ರಮ್ಯಾ ಜೊತೆ ಇದ್ದವರು ಯಾರು? ರಮ್ಯಾ ಕೊಟ್ಟ ಉತ್ತರ

    ರಮ್ಯಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದ ಒಂದು ಫೋಟೋ ಭಾರೀ ಕುತೂಹಲ ಸೃಷ್ಟಿಸಿತ್ತು. ಏಕೆಂದರೆ ಆ ಫೋಟೋದಲ್ಲಿ ರಮ್ಯಾ ಜೊತೆಗೊಬ್ಬ ಯುವಕನಿದ್ದ. ಅಭಿಮಾನಿಗಳಿಗೆ.. ಅಷ್ಟು ಸಾಕಿತ್ತು.

    ಯಾರು..?

    ಯಾರು..?

    ಯಾರು..?

    ಯಾರು..?

    ಯಾರು..?

    ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ಅವರದ್ದೇ ಆದ ಕಲ್ಪನೆಗಳು. ಕಥೆಗಳು. ಇವೆಲ್ಲಕ್ಕೂ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ.

    ಆತನ ಹೆಸರು ವಿಹಾನ್ ಅಂತೆ. ರಮ್ಯಾ ಅವರ ಸ್ಟೈಲಿಸ್ಟ್ ಅಂತೆ. ನಿಮ್ಮ ಕುತೂಹಲ ನೋಡಿ ಖುಷಿಯಾಗುತ್ತಿದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ ರಮ್ಯಾ.

    ರಮ್ಯಾ ಚಿತ್ರರಂಗ ಬಿಟ್ಟು ದಶಕ ಕಳೆದಿದ್ದರೆ, ರಾಜಕೀಯ ಬಿಟ್ಟು ಕೆಲವು ವರ್ಷಗಳಾಗಿವೆ. ರಾಜಕೀಯ ಅಭಿಪ್ರಾಯಗಳು ಹೊರಬರುತ್ತಿದ್ದರೂ.. ರಮ್ಯಾ ಆಕ್ಟಿವ್ ರಾಜಕಾರಣದಲ್ಲಿ ಕಾಣಿಸಿಕೊಳ್ತಿಲ್ಲ.

    ಮೂಲಗಳ ಪ್ರಕಾರ ಪುನೀತ್ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡುವ ಪ್ಲಾನ್‍ನಲ್ಲಿದ್ದ ರಮ್ಯಾ, ಪುನೀತ್ ನಿಧನದ ನಂತರ ಚಿತ್ರರಂಗದ ಕಮ್‍ಬ್ಯಾಕ್ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲವಂತೆ.

  • ರಮ್ಯಾ ಜೊತೆ ಕೆಲಸ ಮಾಡಬೇಕಾ..? ಅರ್ಜಿ ಹಾಕಿ. ಆದರೆ...

    ramya image

    ನಿಮಗೆ ರಮ್ಯಾ ಜೊತೆ ಕೆಲಸ ಮಾಡಲು ಆಸಕ್ತಿ ಇದೆಯೇ..?

    ಕನ್ನಡ, ಮಲಯಾಳಂ, ತೆಲುಗು, ಗುಜರಾತಿ ಭಾಷೆ ಗೊತ್ತಿದೆಯೇ? ತರ್ಜುಮೆ ಮಾಡುವುದು ಗೊತ್ತಿದೆಯೇ..? ಹಾಗಾದರೆ ಅರ್ಜಿ ಹಾಕಿ. ಕೆಲಸ ಸಿಕ್ಕರೂ ಸಿಗಬಹುದು. ಆದರೆ, ಕೆಲಸ ಸಿಗೋದು ಚಿತ್ರರಂಗದಲ್ಲಿ ಅಲ್ಲ. ರಾಜಕೀಯದಲ್ಲಿ. ರಮ್ಯಾ ನಟಿಯಷ್ಟೇ ಅಲ್ಲ, ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣೆಗಳ ಮುಖ್ಯಸ್ಥೆಯೂ ಹೌದು.

    ಪಕ್ಷದ ಸಾಮಾಜಿಕ ಜಾಲತಾಣಗಳನ್ನು ವಿಸ್ತರಿಸುವ ಸಲುವಾಗಿ 25 ಕೆಲಸಗಳಿಗೆ ಅರ್ಜಿ ಕರೆದಿದ್ದಾರೆ.

  • ರಮ್ಯಾ ಡಬಲ್ ಗುಡ್ ನ್ಯೂಸ್

    ರಮ್ಯಾ ಡಬಲ್ ಗುಡ್ ನ್ಯೂಸ್

    ದಿವ್ಯ ಸ್ಪಂದನ ರಮ್ಯ ಏನು ಮಾಡಿದರೂ ಸೆನ್ಸೇಷನ್. ಇಂದಿಗೂ ಆಕೆಯ ಬ್ಯೂಟಿ ಮತ್ತು ಕ್ರೇಜ್ ಕಡಿಮೆಯಾಗಿಲ್ಲ. ಇತ್ತೀಚೆತೆ ತಾನೇ ಡಾಲಿ ಧನಂಜಯ್ ಜೊತೆ ಉತ್ತರಕಾಂಡ ಚಿತ್ರದಲ್ಲಿ ನಟಿಸುವ ಮೂಲಕ ಕಮ್ ಬ್ಯಾಕ್ ಘೋಷಿಸಿದ್ದೂ ಆಗಿದೆ. ಈ ಮಧ್ಯೆ ಮತ್ತೂ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ರಮ್ಯಾ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿರುವ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಕುಂಭಳಕಾಯಿ ಆಗಿದೆ. ಚಿತ್ರರಂಗದಲ್ಲಿ ಕುಂಭಳಕಾಯಿ ಆಯಿತು ಎಂದರೆ ಶೂಟಿಂಗ್ ಮುಗೀತು ಎಂದರ್ಥ. ಇತ್ತೀಚೆಗೆ ತಾನೇ ಶುರುವಾದ ಚಿತ್ರ ಅಷ್ಟೇ ವೇಗವಾಗಿ ಚಿತ್ರೀಕರಣ ಮುಗಿಸಿದೆ. ರಾಜ್ ಬಿ.ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿಯೇ ಹೀರೋ. ಹೀರೋಯಿನ್ ಆಗಬೇಕಿದ್ದ ರಮ್ಯಾ ಕೊನೆಗಾಲದಲ್ಲಿ ಹಿಂದೆ ಸರಿದು ಸಿರಿ ರವಿಕುಮಾರ್ ನಾಯಕಿಯಾಗಿದ್ದರು.

    ಇದು ಅಧಿಕೃತ ಗುಡ್ ನ್ಯೂಸ್ ಆದರೆ ಗಾಸಿಪ್‍ನಲ್ಲೂ ಒಂದು ಗುಡ್ ನ್ಯೂಸ್ ಇದೆ. ರಮ್ಯಾ ಮತ್ತೊಮ್ಮೆ ಕಿಚ್ಚ ಸುದೀಪ್ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಸುದೀಪ್ ಅವರ ಮುಂದಿನ ಚಿತ್ರ ಯಾವುದು ಎನ್ನುವುದು ಇನ್ನೂ ಅನೌನ್ಸ್ ಆಗಿಲ್ಲ. ಆಗಲೇ ಸುದ್ದಿ ಶುರುವಾಗಿದೆ. ಸುದೀಪ್ ಚಿತ್ರ ಯಾವುದು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಇದು ಡಬಲ್ ಧಮಾಕಾ. ರಮ್ಯಾ ಹೀರೋಯಿನ್ ಎನ್ನುವುದು. ಈ ಹಿಂದೆ ರಮ್ಯಾ ಮತ್ತು ಸುದೀಪ್ ರಂಗ ಎಸ್‍ಎಸ್‍ಎಲ್‍ಸಿ, ಮುಸ್ಸಂಜೆ ಮಾತು ಮತ್ತು ಕಿಚ್ಚ ಹುಚ್ಚ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ನಿರ್ದೇಶಿಸಿದ್ದ ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕೂ ರಮ್ಯಾ ಅವರೇ ಹೀರೋಯಿನ್ ಆಗಿದ್ದರು. ಈಗ ಮತ್ತೊಮ್ಮೆ ಇಬ್ಬರೂ ಜೊತೆಯಾಗುತ್ತಿದ್ದಾರೆ ಎಂಬ  ಗಾಳಿಯಲ್ಲಿ ಬಂದ ಸುದ್ದಿಯೇ ಸೆನ್ಸೇಷನ್ ಸೃಷ್ಟಿಸಿದೆ.

  • ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

    rachitha ram is the new padmavathi

    ಊರಿಗೊಬ್ಳೇ ಪದ್ಮಾವತಿ.. ಅಂದ್ರೆ ಸಾಕು.. ರಮ್ಯಾ ನೆನಪಾಗ್ತಾರೆ. ಜಾನಿ ಮೇರಾ ನಾಮ್ ಚಿತ್ರದಲ್ಲಿ ದುನಿಯಾ ವಿಜಿ ಮತ್ತು ರಮ್ಯಾ ಕುಣಿದು ಕುಪ್ಪಳಿಸಿದ್ದ ಹಾಡು, ಸೂಪರ್ ಹಿಟ್ ಆಗಿತ್ತು. ಈಗ ಹೊಸ ಪದ್ಮಾವತಿ ಹಾಡು ಬರ್ತಾ ಇದೆ. ಅದು ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ.

    ಆ ಹಾಡಿಗೆ ಹೆಜ್ಜೆ ಹಾಕಿರುವುದು ರಚಿತಾ ರಾಮ್. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ರೈನ್ ಬೋ ಕಾಲೊನಿ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಮುರಳಿ ನೃತ್ಯ ನಿರ್ದೇಶನದಲ್ಲಿ ರಚಿತಾ ಸೌಂದರ್ಯಕ್ಕೆ, ದುನಿಯಾ ವಿಜಿ ಅವರ ಸಿಕ್ಸ್‍ಪ್ಯಾಕ್ ಬಾಡಿಯ ಅನಾವರಣವೂ ಆಗಲಿದೆ.

    ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಎಸ್ ಪಪ್ಪಾದಲ್ಲಿ ಹೊಸ ಪದ್ಮಾವತಿ ಹೇಗೆ ಕಾಣಿಸಿಕೊಳ್ತಾರೋ.. ನೋಡಬೇಕು.