` ramya, - chitraloka.com | Kannada Movie News, Reviews | Image

ramya,

 • ಇನ್ಮೇಲೆ ಸಿನಿಮಾ ರಂಗಕ್ಕೆ ಬರಲ್ಲ - ರಮ್ಯಾ

  politician ramya says no cinema

  ಚಿತ್ರನಟಿ ರಮ್ಯಾ ಈಗ ರಾಜಕಾರಣದಲ್ಲೇ ಫುಲ್ ಬ್ಯುಸಿ. ಚಿತ್ರರಂಗದಲ್ಲಿರುವಷ್ಟು ದಿನವೂ ಮೋಹಕ ತಾರೆ ಎಂಬ ಬಿರುದಿಗೆ ಪಾತ್ರರಾಗಿದ್ದ ರಮ್ಯಾ, ಈಗ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದಾರೆ. ರಮ್ಯಾ ಅವರ ಅಭಿನಯದ, ತೆರೆ ಕಂಡ ಕಟ್ಟಕಡೆಯ  ಸಿನಿಮಾ ನಾಗರಹಾವು. ಅದೂ ಕೂಡಾ ರಾಜಕೀಯ ಸೇರುವ ಮುನ್ನ ನಟಿಸಿದ್ದ ಸಿನಿಮಾ. 

  ಸಂಸದೆಯಾದ ಮೇಲೆ ಚಿತ್ರರಂಗದಿಂದ ಹೆಚ್ಚೂ ಕಡಿಮೆ ದೂರ ಇರುವ ರಮ್ಯಾ, ಇನ್ನು ಮುಂದೆ ಮತ್ತೆ ಬಣ್ಣ ಹಚ್ಚೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ದೆಹಲಿಯಲ್ಲೇ ಇರುವ ರಮ್ಯಾ, ಮಂಡ್ಯದಲ್ಲೂ ಕಾಣಿಸಿಕೊಂಡಿಲ್ಲ. ರಾಹುಲ್ ಗಾಂಧಿ ಬಂದಾಗಲೂ ಮಂಡ್ಯಕ್ಕೆ ಬರಲಿಲ್ಲ. 

  ದೆಹಲಿಯಲ್ಲಿ ನನ್ನನ್ನು ಯಾರೂ ಗುರುತಿಸೋದಿಲ್ಲ. ಹೀಗಾಗಿ ನಾನು ದೆಹಲಿಯಲ್ಲಿ ನನ್ನ ಖಾಸಗಿ ಜೀವನ ಎಂಜಾಯ್ ಮಾಡ್ತೇನೆ. ಸಿನಿಮಾ ನೋಡುತ್ತಿದ್ದರೆ, ಇವಳು ನಾನೇನಾ ಎನ್ನಿಸುತ್ತೆ. ಇನ್ನು ಮತ್ತೆ ಮೇಕಪ್ ಮಾಡಿಕೊಳ್ಳೋ ಮಾತೇ ಇಲ್ಲ ಎಂದಿದ್ದಾರೆ ರಮ್ಯಾ. 

  ಸ್ಸೋ.. ಇನ್ನು ರಮ್ಯಾ ಅವರನ್ನು ಮಾಜಿ ಚಿತ್ರನಟಿ ಎನ್ನಬಹುದಾ..? 

 • ದರ್ಶನ್ ಮದಕರಿಗೆ ರಮ್ಯಾ ನಾಯಕಿ..!

  will eamya return with darshan's madakari

  ರಾಜಕಾರಣಕ್ಕೆ ಹೋಗಿ, ಸಂಸದೆಯಾಗಿ, ಕಾಂಗ್ರೆಸ್‍ನಲ್ಲಿ ರಾಷ್ಟ್ರೀಯ ಮಟ್ಟದ ನಾಯಕಿಯಾಗಿ ಗುರುತಿಸಿಕೊಂಡ ಮೇಲೆ ಮಾಜಿ ನಟಿಯೇ ಆಗಿಹೋಗಿದ್ದ ರಮ್ಯಾ, ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ.

  ಈ ಸುದ್ದಿ ನಿಜವೇ ಆಗಿಬಿಟ್ಟರೆ, ದತ್ತ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿದ್ದ ರಮ್ಯಾ, 12 ವರ್ಷಗಳ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್‍ಗೆ ನಾಯಕಿಯಾಗುತ್ತಾರೆ. ರಾಕ್‍ಲೈನ್ ಪ್ರೊಡಕ್ಷನ್ಸ್‍ನಲ್ಲಿ ಬೊಂಬಾಟ್ ಚಿತ್ರದ ನಾಯಕಿಯಾಗಿದ್ದ ರಮ್ಯಾ, ರಾಕ್‍ಲೈನ್ ಅವರ ಬೀಗರಾದ ಮುನಿರತ್ನ ಅವರ ಕಠಾರಿವೀರ ಸುರುಸುಂದರಾಂಗಿ ಚಿತ್ರದಲ್ಲಿ ಸುರಸುಂದರಿಯಾಗಿ ಕಾಣಿಸಿಕೊಂಡಿದ್ದರು. ಮುನಿರತ್ನ ಕಾಂಗ್ರೆಸ್ ಶಾಸಕರು.  ದರ್ಶನ್ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಹೀಗಾಗಿ ರಮ್ಯಾ ಮತ್ತೆ ಬಂದರೂ ಅಚ್ಚರಿಯಿಲ್ಲ.

  ರಮ್ಯಾ ಅಭಿನಯದಲ್ಲಿ ಬಿಡುಗಡೆಯಾದ ಕೊನೆಯ ಸಿನಿಮಾ ನಾಗರಹಾವು. ಆ ಚಿತ್ರದಲ್ಲಿ ನಾಗಕನ್ನಿಕೆಯಾಗಿ ಕಾಣಿಸಿಕೊಂಡಿದ್ದ ರಮ್ಯಾ, ಮದಕರಿ ನಾಯಕಿಯಾಗ್ತಾರಾ..? ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

 • ದಿಲ್ ಕಾ ರಾಣಿ ರಮ್ಯಾ ವಾಪಸ್ ಬಂದ್ರಾ..?

  will ramya return

  ಸ್ಯಾಂಡಲ್‍ವುಡ್ ಕ್ವೀನ್ ಎಂದೇ ಹೆಸರಾಗಿದ್ದ ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಬಂದ್ರಾ..? ರಾಜಕೀಯದಿಂದ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿರುವ ರಮ್ಯಾ ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಿದ್ರಾ..? ಇಂಥಾದ್ದೊಂದು ಕುತೂಹಲ ಮೂಡೋಕೆ ಕಾರಣವಾಗಿರೋದು ದಿಲ್ ಕಾ ರಾಜಾ ಸಿನಿಮಾ.

  ದಿಲ್ ಕಾ ರಾಜಾ ರಮ್ಯಾ ನಟಿಸಿರುವ ಕೊನೆಯ ಸಿನಿಮಾ. ವಿಶೇಷ ಅಂದ್ರೆ, ಆ ಚಿತ್ರದ ಶೂಟಿಂಗ್ ಇನ್ನೂ ಮುಗಿಯುವ ಮೊದಲೇ ರಮ್ಯಾ ಚಿತ್ರದಿಂದ ಹೊರನಡೆದಿದ್ದರು. ಪ್ರಜ್ವಲ್ ದೇವರಾಜ್ ಹೀರೋ ಆಗಿದ್ದ ಸಿನಿಮಾ ಅಲ್ಲಿಗೇ ನಿಂತು ಹೋಗಿತ್ತು. ಈಗ ಇದ್ದಕ್ಕಿದ್ದಂತೆ ಆ ಚಿತ್ರದ ಸುದ್ದಿ ಹೊರಬಿದ್ದಿದೆ. ಚಿತ್ರದ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆಯಂತೆ.

  ಹಾಗಾದರೆ ರಮ್ಯಾ ವಾಪಸ್ ಬಂದ್ರಾ..? ವರ್ಷಗಳ ಹಿಂದೆ ನಿಂತು ಹೋಗಿದ್ದ ಸಿನಿಮಾ ಮತ್ತೆ ಶುರುವಾಗುತ್ತಾ.? ಹಾಗೆ ಶುರುವಾಗೋ ಚಿತ್ರದಲ್ಲಿ ರಮ್ಯಾ ಇರ್ತಾರಾ..? ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

 • ನೀರ್ ದೋಸೆ ಕೇಸ್ - ರಮ್ಯಾಗೆ ಮುಖಭಂಗ

  neerdose photo case dismissed

  ನೀರ್‍ದೋಸೆ. ಜಗ್ಗೇಶ್-ವಿಜಯ್ ಪ್ರಸಾದ್-ದತ್ತಣ್ಣ-ಹರಿಪ್ರಿಯಾ-ಸುಮನ್ ರಂಗನಾಥ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾಗೆ ಮೊದಲು ನಾಯಕಿಯಾಗಿದ್ದವರು ರಮ್ಯಾ. ಆಗಿನ್ನೂ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಆನಂತರ ಸಿನಿಮಾದಿಂದ ಹೊರನಡೆದಿದ್ದರು. ಆದರೆ, ಆ ಚಿತ್ರದ ಶೂಟಿಂಗ್ ವೇಳೆ ವಿವಾದವೊಂದನ್ನು ಸೃಷ್ಟಿಸಿದ್ದರು ರಮ್ಯಾ. ಅದು ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್‍ನಲ್ಲಿ ರಮ್ಯಾ ವಾದಕ್ಕೆ ಹಿನ್ನಡೆಯಾಗಿದ್ದು, ಕೇಸ್‍ನ್ನು ನ್ಯಾಯಾಲಯ ವಜಾ ಮಾಡಿದೆ.

  ಪತ್ರಕರ್ತ ಶ್ಯಾಂ ಪ್ರಸಾದ್, ಫೋಟೋ ಜರ್ನಲಿಸ್ಟ್ ನಾಗೇಶ್ ಕುಮಾರ್ ಕುಮಾರ್ ಮತ್ತು ಮನೋಹರ್ ವಿರುದ್ಧ ತಮ್ಮ ಅನುಮತಿಯಿಲ್ಲದೆ ಆಕ್ಷೇಪಾರ್ಹ ಫೋಟೋ ತೆಗೆದಿದ್ದಾರೆ ಎಂದು ರಮ್ಯಾ ಕೇಸ್ ಹಾಕಿದ್ದರು. ಅನುಮತಿಯಿಲ್ಲದೆ ಫೋಟೋ ತೆಗೆಯಲಾಯಿತು ಎಂಬ ರಮ್ಯಾ ವಾದಕ್ಕೆ ಯಾವುದೇ ಸಮರ್ಥನೆ ಅಥವಾ ಸಾಕ್ಷ್ಯ ಸಿಗದ ಕಾರಣ, ಕೋರ್ಟ್ ಕೇಸ್‍ನ್ನು ವಜಾ ಮಾಡಿದೆ. ಎಲ್ಲ ಪತ್ರಕರ್ತರನ್ನೂ ದೋಷಮುಕ್ತಗೊಳಿಸಿದೆ.

  ಪ್ರಧಾನಿ ನರೇಂದ್ರ ಮೋದಿಯನ್ನು ಕಳ್ಳ ಎಂಬಂತೆ ಬಿಂಬಿಸಿದ ಫೋಟೋ ಹಾಕಿದ್ದಕ್ಕೆ ರಮ್ಯಾ ವಿರುದ್ಧ ಎರಡು ಕೇಸ್ ದಾಖಲಾದ ಮರುದಿನವೇ, 2013ರಲ್ಲಿ ರಮ್ಯಾ ಹಾಕಿದ್ದ ಕೇಸ್ ವಜಾ ಆಗಿರುವುದು ವಿಶೇಷ.

 • ಭಾವೀ ಮುಖ್ಯಮಂತ್ರಿ ರಮ್ಯಾಗೆ ಶುಭಾಶಯ..!!!

  will ramya be next cm

  ನಟಿ ರಮ್ಯಾ ಕರ್ನಾಟಕದ ಸಿಎಂ ಆಗ್ತಾರಾ..? ಆ ಪ್ರಶ್ನೆಗೆ ಉತ್ತರ ಹೇಳೋಕಾಗಲ್ಲ. ಆದರೆ, ಭಾವೀ ಮುಖ್ಯಮಂತ್ರಿ ರಮ್ಯಾಗೆ ಶುಭಾಶಯಗಳು ಎಂಬ ಟ್ವೀಟ್‍ಗಳು ರಮ್ಯಾ ಹುಟ್ಟುಹಬ್ಬದ ದಿನ ಸುದ್ದಿ ಮಾಡಿದ್ದಂತೂ ನಿಜ.

  ಸದ್ಯಕ್ಕೆ ರಾಜ್ಯ ರಾಜಕಾರಣದಿಂದ ದೂರ ಇರುವ ರಮ್ಯಾ, ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾ ಉಸ್ತುವಾರಿ ನಾಯಕಿ. ಹೀಗಾಗಿಯೇ ಹುಟ್ಟುಹಬ್ಬದ ದಿನ ಟ್ವಿಟರ್‍ನಲ್ಲಿ ಭಾವೀ ಸಿಎಂ ರಮ್ಯಾ ಎಂಬ ಶುಭಾಶಯ ಹೊರಬಿದ್ದಿರುವುದು ಕುತೂಹಲ ಕೆರಳಿಸಿದೆ. 

  ರಮ್ಯಾ, ರಾಜ್ಯ ರಾಜಕೀಯದಲ್ಲಿ ಅಂಬರೀಷ್ ಗರಡಿಯಲ್ಲಿ ಬೆಳೆದ ಹುಡುಗಿ. ಆದರೆ, ಈಗ ಅಂಬರೀಷ್ ಅವರೇ ರಾಜ್ಯ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ. ಮಂಡ್ಯದಲ್ಲಿ ಅಂಬರೀಷ್ ವಿರುದ್ಧ ನಿಂತಿದ್ದ ರಮ್ಯಾಗೆ, ಅದೇ ಕಾರಣಕ್ಕೆ ಸೋಲು ಕೂಡಾ ದಕ್ಕಿದೆ ಎನ್ನವುದು ರಾಜಕೀಯ ವಿಶ್ಲೇಷಣೆ. ಆದರೀಗ ಮಂಡ್ಯ ರಾಜಕಾರಣಕ್ಕೆ ರಮ್ಯಾ ಪ್ರವೇಶಿಸಲಿದ್ದಾರೆ ಎನ್ನುವ ಸುದ್ದಿ ಕೇವಲ ಸುದ್ದಿಯಾಗಿ ಉಳಿದಿಲ್ಲ.

  ಅಂಥಾದ್ದರಲ್ಲಿ ಭಾವೀ ಸಿಎಂ ರಮ್ಯಾಗೆ ಶುಭಾಶಯ ಎಂದು ಶುಭ ಹಾರೈಸಿರುವುದರ ಹಿಂದೆ ಇನ್ನೇನೋ ಅಡಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

  Related Articles :-

  ರಮ್ಯಾಗೆ ರಾಹುಲ್ ಗಾಂಧಿ ಶುಭ ಕೋರಿದ್ದು ಸುಳ್ಳಾ..?

 • ಮಂಡ್ಯಕ್ಕೆ ಗುಡ್‍ಬೈ - ರಮ್ಯಾ ಹೇಳಿದರು ಕಾರಣ

  ramya vacates mandya home over night

  ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ, ಸಂಸದೆಯಾದ ಮೇಲೆ ಮಂಡ್ಯದಲ್ಲೇ ಮನೆ ಮಾಡಿಕೊಂಡಿದ್ದರು. ಮಾಜಿಯಾದ ನಂತರವೂ ಮಂಡ್ಯದಲ್ಲೊಂದು ಬಾಡಿಗೆ ಮನೆ ಮಾಡಿಕೊಂಡಿದ್ದ ರಮ್ಯಾ, ಮಂಡ್ಯದಲ್ಲಿ ಇದ್ದದ್ದು ಮಾತ್ರ ಅಪರೂಪ. ಕರ್ನಾಟಕದಿಂದ ಹೆಚ್ಚೂ ಕಡಿಮೆ ದೂರವಾಗಿರುವ ರಮ್ಯಾ, ಈಗ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಅಂಬರೀಷ್ ಅಂತ್ಯಕ್ರಿಯೆಗಾಗಲೀ, ದರ್ಶನಕ್ಕಾಗಲೀ ಬಾರದ ರಮ್ಯಾಗೆ ಮಂಡ್ಯದ ಜನ ಶ್ರದ್ಧಾಂಜಲಿ ಅರ್ಪಿಸಿದ್ದರು. ಕಾಲು ನೋವು ಎಂದು ರಮ್ಯಾ ಕೊಟ್ಟ ಕಾರಣವನ್ನೂ ಒಪ್ಪಿರಲಿಲ್ಲ. 

  ಈಗ ರಮ್ಯಾ, ಮಂಡ್ಯದ ಮನೆಯನ್ನು ಖಾಲಿ ಮಾಡಿದ್ದಾರೆ. ಅದೂ ರಾತ್ರೋರಾತ್ರಿ. ಮನೆ ಖಾಲಿ ಮಾಡುವಾಗಲೂ ರಮ್ಯಾ ಮಂಡ್ಯಕ್ಕೇನೂ ಬರಲಿಲ್ಲ. ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಿ, ಅವರೇ ರಮ್ಯಾ ಅವರ ವಸ್ತುಗಳನ್ನು ಮನೆಯಿಂದ ಸಾಗಿಸಿದ್ದಾರೆ.

  ಮನೆಯ ಮಾಲೀಕ ಸಾದತ್ ಅಲಿ ಖಾನ್, ಮನೆ ತಮಗೆ ಬೇಕು. ಬಿಟ್ಟುಕೊಡಿ ಎಂದು ಕೇಳಿದರು. ಹಾಗಾಗಿ ಮನೆ ಖಾಲಿ ಮಾಡಿದೆ ಎಂದಿದ್ದಾರೆ ರಮ್ಯಾ. 

  ವೋಟು ಹಾಕೋಕೂ ಬರದೆ, ಅಂಬರೀಷ್ ಅಂತಿಮ ದರ್ಶನಕ್ಕೂ ಬರದೆ, ಮನೆ ಮಾಡಿಕೊಂಡಿದ್ದರೂ ಒಂದು ದಿನವೂ ಮನೆಯಲ್ಲಿ ಉಳಿಯದೆ ವಿವಾದ ಮಾಡಿಕೊಂಡಿದ್ದ ರಮ್ಯಾ, ಈಗ ಹೆಚ್ಚೂ ಕಡಿಮೆ ಮಂಡ್ಯಕ್ಕೆ ಶಾಶ್ವತವಾಗಿಯೇ ಗುಡ್ ಬೈ ಹೇಳಿದಂತಾಗಿದೆ.

 • ಮಂಡ್ಯದ ಹೆಣ್ಣು ಸಕ್ಕರೆಯನ್ನೇ ಬಿಟ್ಟುಬಿಟ್ರು..!

  ramya sweets image

  ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ, ಮಂಡ್ಯದ ಹೆಣ್ಣು. ಮಂಡ್ಯದಿಂದಲೇ ಸಂಸದೆಯಾಗಿದ್ದ ಅವರೀಗ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಹೇಳಿ ಕೇಳಿ ಮಂಡ್ಯ ಸಿಹಿ ಸಿಹಿಯಾದ ಕಬ್ಬು ಮತ್ತು ಸಕ್ಕರೆಗೆ ಫೇಮಸ್ಸು. ಈಗ ಆ ಕ್ಷೇತ್ರದ ಸಂಸದೆಯಾಗಿದ್ದ, ಮಂಡ್ಯದ ಹೆಣ್ಣು ಎಂದೇ ಖ್ಯಾತರಾಗಿದ್ದ ರಮ್ಯಾ, ಸಕ್ಕರೆಯನ್ನೇ ಬಿಟ್ಟುಬಿಟ್ಟಿದ್ದಾರಂತೆ.

  ಸಕ್ಕರೆ ಅನ್ನೋದು ರಮ್ಯಾಗೆ ಅಡಿಕ್ಷನ್ ಆಗಿಬಿಟ್ಟಿತ್ತಂತೆ. ಒತ್ತಡ ಹೆಚ್ಚಾದಾಗಲೆಲ್ಲ ಸಿಹಿ ಅಥವಾ ಸಕ್ಕರೆ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರಂತೆ ರಮ್ಯಾ. ಸಕ್ಕರೆ ತಿನ್ನುವ ಚಟವನ್ನು ಬಿಡಬೇಕು ಎಂದುಕೊಂಡರೂ ಎರಡು ಮೂರು ದಿನಗಳಲ್ಲೇ ಮುರಿಯುತ್ತಿದ್ದರಂತೆ. ಅಷ್ಟರಮಟ್ಟಿಗೆ ಅಂಟಿಕೊಂಡಿರೋ ಚಟವನ್ನು ಬಿಡೋಕೆ ಪ್ರತಿಜ್ಞೆ ಮಾಡಿದ್ದಾರೆ ರಮ್ಯಾ. 

  ಅದಕ್ಕೇ ಈ ಬಾರಿ ಅವರು ಸಕ್ಕರೆ ತಿನ್ನುವುದನ್ನು ಬಿಡುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡುಬಿಟ್ಟಿದ್ದಾರೆ. ಈ ವರ್ಷದ ಕೊನೆಯವರೆಗೆ ಸಕ್ಕರೆಯನ್ನು ಮುಟ್ಟೋದಿಲ್ಲ ಅನ್ನೊದು ರಮ್ಯಾ ಅವರ ಪ್ರತಿಜ್ಞೆ. ಈ ಶುಗರ್ ಚಾಲೆಂಜ್‍ನಲ್ಲಿ ರಮ್ಯಾ ಗೆಲ್ತಾರಾ..? ಜಸ್ಟ್ ವೇಯ್ಟ್ & ಸೀ.

 • ಮಂಡ್ಯದಲ್ಲಿ ಶುರುವಾಯ್ತು ರಮ್ಯಾ ಕ್ಯಾಂಟೀನ್

  ramya canteen in mandya

  ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಈಗ ಫೇಮಸ್ ಆಗುತ್ತಿದೆ. ಅದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿದ ಉಡುಗೊರೆ. ಎಲೆಕ್ಷನ್ ಉಡುಗೊರೆ ಎನ್ನಲು ಕೂಡಾ ಅಡ್ಡಿಯಿಲ್ಲ.

  ಆದರೆ, ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಶುರುವಾಗಿದೆ. ರಾಜ್ಯ ಸರ್ಕಾರ ಜಿಲ್ಲೆ ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವ ಹೇಳಿಕೆ ಕೊಡುತ್ತಿರುವಾಗಲೇ, ಅದಕ್ಕೂ ಮೊದಲೇ ರಮ್ಯಾ ಕ್ಯಾಂಟೀನ್ ಶುರುವಾಗಿರುವುದು ವಿಶೇಷ.

  ಮಂಡ್ಯದ ಕಲಾಮಂದಿರ ರಸ್ತೆ ಬದಿ ರಘು ಎಂಬ ರಮ್ಯಾರ ಅಭಿಮಾನಿ ಈ ಕ್ಯಾಂಟೀನ್ ಆರಂಭಿಸಿದ್ದಾನೆ. ಮೊದಲು ಈಗ ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಕ್ಲೀನಿಲ್ಲ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಎಂದು ಪೊಲೀಸರು ಫುಟ್‍ಪಾತ್ ಹೋಟೆಲ್ ಮುಚ್ಚಿಸಿದ್ದರು. ಅದಾದ ಮೇಲೆ ರಘು ಈ ರಮ್ಯಾ ಕ್ಯಾಂಟೀನ್ ಶುರು ಮಾಡಿದ್ದಾನೆ.

  ಇಂದಿರಾ ಕ್ಯಾಂಟೀನ್‍ನಲ್ಲಿ ತಿಂಡಿ 5 ರೂ ಹಾಗೂ ಊಟ 10 ರೂ. ಆದರೆ, ರಮ್ಯಾ ಕ್ಯಾಂಟೀನ್‍ನಲ್ಲಿ ಎಲ್ಲವೂ 10 ರೂ. ತಾನು ರಮ್ಯಾ ಅವರ ಅಭಿಮಾನಿ ಎಂದಿರುವ ರಘು ಹೋಟೆಲ್‍ನಲ್ಲಿ 10 ರೂ.ಗೆ ಇಡ್ಲಿ, ದೋಸೆ, ಮುದ್ದೆ, ಸೊಪ್‍ಸಾರು, ಕಾಳ್‍ಸಾರು ಎಲ್ಲ ಸಿಗುತ್ತೆ. 

 • ಮಂಡ್ಯದಿಂದ ನಿಲ್ಲಲ್ಲ ರಮ್ಯಾ

  ramya not contesting from mandya

  ರೆಬಲ್‍ಸ್ಟಾರ್ ಅಂಬರೀಷ್, ಅಕ್ಷರಶಃ ರೆಬಲ್ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್‍ನಲ್ಲಿ ಅವರಿಗೆ ಕೇಳದೆಯೇ ಟಿಕೆಟ್ ಕೊಡಲಾಗಿತ್ತು. ಬಿಫಾರಂನ್ನು ಮನೆಗೇ ಕಳಿಸಿಕೊಡಲಾಗಿತ್ತು. ಆದರೆ, ತಮ್ಮನ್ನು ಅವಮಾನಕಾರಿಯಾಗಿ ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದನ್ನು ಮರೆಯದ ಅಂಬರೀಷ್, ಈಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಆಟವಾಡಿಸುತ್ತಿದ್ದಾರೆ. 

  ಹಾಗೆ ನೋಡಿದರೆ, ಮಂಡ್ಯದಲ್ಲಿ ಅಂಬರೀಷ್ ಪ್ರಭಾವ ಮುರಿಯಲೆಂದೇ ಚೆಲುವರಾಯ ಸ್ವಾಮಿಯನ್ನು ಪಕ್ಷಕ್ಕೆ ಕರೆತಂದಿರುವ ಸಿದ್ದರಾಮಯ್ಯ, ಆ ನಿಟ್ಟಿನಲ್ಲಿ ಗೆಲ್ತಾರಾ ಅನ್ನೋದು ಬೇರೆ ಪ್ರಶ್ನೆ. ಇದರ ಮಧ್ಯೆ ಮಂಡ್ಯದಿಂದ ರಮ್ಯಾ ನಿಲ್ತಾರಂತೆ ಅನ್ನೋ ಸುದ್ದಿಗೆ ವೇಗ ಬಂದಿತ್ತು. 

  ಅಂಬರೀಷ್ ಅವರು ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಇವುಗಳಿಗೆಲ್ಲ ಒಂದೇ ಮಾತಿನಲ್ಲಿ ನೋ ಎಂದುಬಿಟ್ಟಿದ್ದಾರೆ ರಮ್ಯಾ.

  ಮಂಡ್ಯದಿಂದ ನಾನು ಸ್ಪರ್ಧಿಸುತ್ತಿಲ್ಲ ಎನ್ನುವುದು ರಮ್ಯಾ ಅವರ ಒನ್‍ಲೈನ್ ಉತ್ತರ. ಅಂದಹಾಗೆ ಕರ್ನಾಟಕದಲ್ಲಿ ಚುನಾವಣೆ ಇಷ್ಟು ರಂಗೇರಿರುವಾಗ ಕೂಡಾ ರಮ್ಯಾ ಎಲ್ಲಿಯೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.

 • ಮತ್ತೆ ಮಂಡ್ಯಕ್ಕೇ ಬರ್ತಾರಂತೆ ರಮ್ಯಾ..!

  ramya re entry to mandya

  ಚಿತ್ರರಂಗವನ್ನೂ ಹೆಚ್ಚೂ ಕಡಿಮೆ ಬಿಟ್ಟೇಬಿಟ್ಟಿರುವ ರಮ್ಯಾ, ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಕೂಡಾ ಕಡಿಮೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ನಿರ್ವಹಣೆ ವಹಿಸಿಕೊಂಡ ಮೇಲೆ ರಮ್ಯಾ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಹೀಗಿರುವಾಗಲೇ, ರಮ್ಯಾ ಮತ್ತೊಮ್ಮೆ ಮಂಡ್ಯಕ್ಕೆ ಬರುವ ಸುದ್ದಿ ಕೇಳಿ ಬರೋಕೆ ಶುರುವಾಗಿದೆ.

  ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಸಡ್ಡು ಹೊಡೆಯಲು ರಮ್ಯಾ ಅವರನ್ನು ಕಣಕ್ಕಿಳಿಸಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರಂತೆ. ಅಲ್ಲದೆ, ಅಂಬರೀಷ್ ಜನಪ್ರಿಯತೆ ಕುಸಿದಿದ್ದು, ಮಂಡ್ಯದಲ್ಲಿ ಕಾಂಗ್ರೆಸ್‍ಗೆ ರಮ್ಯಾ ಅವರಿಂದ ಮಾತ್ರ ಶಕ್ತಿ ತುಂಬಲು ಸಾಧ್ಯ ಎಂದು ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಹೈಕಮಾಂಡ್‍ಗೆ ವರದಿ ಕೊಟ್ಟಿದ್ದಾರಂತೆ.

  ಹೀಗಾಗಿ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿಸಿದ್ದಾರಂತೆ. ಈಗಾಗಲೇ ಮಂಡ್ಯದಲ್ಲಿ ಬಾಡಿಗೆಗಿದ್ದ ಮನೆಯನ್ನೇ ಖರೀದಿಸಿರುವ ರಮ್ಯಾ, ಇದೇ ತಿಂಗಳು 29ರಂದು ಗೃಹ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನವೆಂಬರ್ 29 ರಮ್ಯಾ ಅವರ ಬರ್ತ್ ಡೇ ಎನ್ನುವುದು ವಿಶೇಷ.

  ಮಂಡ್ಯದಲ್ಲಿ ಸಾಧತ್ ಅಲಿ ಖಾನ್ ಎಂಬುವವರು ರಮ್ಯಾ ಅವರಿಗೆ ವಾಸ ಮಾಡಲು ತಮ್ಮ ಮನೆಯನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ.  ಅದೇ ಮನೆಯನ್ನು 25 ಲಕ್ಷ ಖರ್ಚು ಮಾಡಿ ನವೀಕರಿಸಿಕೊಂಡಿದ್ದ ರಮ್ಯಾ, ಈಗ ಆ ಮನೆಯನ್ನು ಖರೀದಿ ಮಾಡಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.

  ಆದರೆ, ಮಂಡ್ಯದಲ್ಲಿ ಅಂಬರೀಷ್ ಅವರ ಎದುರು ರಮ್ಯಾ ಮಿಂಚುತ್ತಾರಾ..? ಮಂಕಾಗುತ್ತಾರಾ..? ಅಥವಾ ಅಂಬರೀಷ್ ಅವರೇ ಸೈಡ್‍ಗೆ ಹೋಗ್ತಾರಾ..? ಈಗಲೇ ಪಕ್ಕಾ ಹೇಳೋದು ಕಷ್ಟ. ಏಕೆಂದರೆ, ಅದು ಸಿನಿಮಾ ಅಲ್ಲ, ರಾಜಕೀಯ.

 • ಮುಮ್ತಾಜ್ ಆಗಲಿದ್ದಾರೆ ರಮ್ಯಾ..!

  ramya as mumtaz

  ಮೋಹಕ ತಾರೆ ರಮ್ಯಾ ಈಗ ಫುಲ್‍ಟೈಂ ರಾಜಕಾರಣಿಯಾಗಿಬಿಟ್ಟಿದ್ದಾರೆ. ಅವರನ್ನು ಮತ್ತೆ ಚಿತ್ರರಂಗಕ್ಕೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ನಾಗಶೇಖರ್. ಹಾಗಂತ ಅದು ನವೆಂಬರ್‍ನಲ್ಲಿ ನಾನು ಅವಳು ಚಿತ್ರ ಅಲ್ಲ. ಅದು ನಾಗಶೇಖರ್ ನಿರ್ಮಾಣದ ಚಿತ್ರ. 

  ನಿರ್ದೇಶಕ ಎಸ್.ಮಹೇಂದರ್ ಹೇಳಿದ ಕಥೆ ನಾಗಶೇಖರ್‍ಗೆ ಇಷ್ಟವಾಗಿ, ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಚಿತ್ರದ ಹೆಸರೇ ಮಹೇಂದರ್ ಮನಸ್ಸಲ್ಲಿ ಮುಮ್ತಾಜ್. ಚಿತ್ರದ ನಾಯಕಿಯಾಗಿ ಪಾಕಿಸ್ತಾನದ ನಟಿಯೊಬ್ಬರು ಅಭಿನಯಿಸುವ ಸಾಧ್ಯತೆಯಿದ್ದು, ಅತ್ಯಂತ ಪ್ರಮುಖವಾದ ಪಾತ್ರಕ್ಕೆ ರಮ್ಯಾರನ್ನು ಸಂಪರ್ಕಿಸಿದ್ದಾರೆ.

  ಸಂಜು ಮತ್ತು ಗೀತಾ ಚಿತ್ರ ನಿರ್ದೇಶಿಸಿದ್ದ ನಾಗಶೇಖರ್‍ಗೆ ರಮ್ಯಾ ಅವರ ಜೊತೆ ಉತ್ತಮ ಸ್ನೇಹವಿದೆ. ಅದು ಕೆಲಸ ಮಾಡಿ, ರಮ್ಯಾಗೆ ಕಥೆ ಇಷ್ಟವಾಗಿಬಿಟ್ಟರೆ, ರಮ್ಯಾ ಮುಮ್ತಾಜ್ ಆಗಬಹುದು. ಅಂದಹಾಗೆ ಚಿತ್ರಕ್ಕೆ ಗಣೇಶ್ ನಾಯಕರಾಗುವ ಸಾಧ್ಯತೆ ಇದೆ.

  Related Articles:-

  Ramya Might Act In Mahendar Manassalli Mumtaz

 • ಮುಮ್ತಾಜ್ ಆಗ್ತಿಲ್ಲ ರಮ್ಯಾ..!

  ramya will not act in mumtaz

  ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದ ರಮ್ಯಾ, ಎಸ್.ಮಹೇಂದರ್ ನಿರ್ದೇಶನದ `ಮನಸ್ಸಲ್ಲಿ ಮುಮ್ತಾಜ್' ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು. ಆ ಚಿತ್ರಕ್ಕೆ ಸಂಜು ಮತ್ತು ಗೀತಾ ನಿರ್ದೇಶಕ ನಾಗಶೇಖರ್ ನಿರ್ಮಾಪಕರಾಗುತ್ತಿದ್ದ ಹಿನ್ನೆಲೆಯಲ್ಲಿ ರಮ್ಯಾ ಮತ್ತೆ ಬಣ್ಣ ಹಚ್ಚಬಹುದು ಎಂಬ ಮಾತುಗಳೂ ಚಾಲ್ತಿಗೆ ಬಂದಿದ್ದವು. ಈಗ ಅವುಗಳಿಗೆಲ್ಲ ರಮ್ಯಾ ತೆರೆ ಎಳೆದುಬಿಟ್ಟಿದ್ದಾರೆ.

  ನನ್ನನ್ನು ಆ ಚಿತ್ರದಲ್ಲಿ ನಟಿಸುವಂತೆ ಯಾರೂ ಕೇಳಿಲ್ಲ. ಅದೆಲ್ಲ ಸುಳ್ಳು ಸುದ್ದಿ. ನಾನು ಮತ್ತೆ ನಟಿಸುವುದು ಮುಗಿದು ಹೋದ ಕಥೆ. ನನ್ನ ಸಿನಿಮಾ ನಂಟು ಮುಗಿದಾಗಿದೆ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ ರಮ್ಯಾ. ಅಲ್ಲಿಗೆ ರಮ್ಯಾ ಇನ್ನು ಮುಂದೆ ಕನ್ನಡದಲ್ಲಷ್ಟೇ ಅಲ್ಲ, ಯಾವುದೇ ಭಾಷೆಯ ಸಿನಿಮಾದಲ್ಲೂ ನಟಿಸುವುದಿಲ್ಲ. ಏನಿದ್ದರೂ ರಾಜಕೀಯ ಎಂಬುದು ಪಕ್ಕಾ ಆದ ಹಾಗಿದೆ.

  Related Articles :-

  ಮುಮ್ತಾಜ್ ಆಗಲಿದ್ದಾರೆ ರಮ್ಯಾ..!

  Ramya Might Act In Mahendar Manassalli Mumtaz

 • ಮೋದಿಗೆ ಅಮಲು ಎಂದ ರಮ್ಯಾಗೆ ಕ್ಲಾಸ್

  ramya's comments

  ನಟಿ ರಮ್ಯಾಗೂ, ವಿವಾದಗಳಿಗೂ ಎಲ್ಲಿಲ್ಲದ ನಂಟು. ಏನಾದರೊಂದು ಹೇಳಿಕೆ ಕೊಡುವುದು, ಅದು ವಿವಾದವಾದ ನಂತರ, ಸ್ಪಷ್ಟನೆ ಕೊಡೋದು, ಕ್ಷಮೆ ಕೇಳೋದು, ಸಮರ್ಥನೆ ಮಾಡಿಕೊಳ್ಳೋದು ರಮ್ಯಾ ಅವರಿಗೆ ಅಭ್ಯಾಸವೇ ಆಗಿಬಿಟ್ಟಿದೆ. ಈ ಬಾರಿ ಕೂಡಾ ಅವರು ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ನರೇಂದ್ರ ಮೋದಿಗೆ ಅಮಲು ಎಂದು ಹೇಳಿ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದಾರೆ.

  ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ, ಬೆಂಗಳೂರಿನಲ್ಲಿನ ನರೇಂದ್ರ ಮೋದಿ ಭಾಷಣವನ್ನು ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೋದಿ ನಮ್ಮ ಟಾಪ್ ಪ್ರಿಯಾರಿಟಿ ಟೊಮ್ಯಾಟೋ, ಆನಿಯನ್ ಹಾಗೂ  ಪೊಟ್ಯಾಟೋ. ರೈತರನ್ನು ನಾವು ಕಾಪಾಡುತ್ತೇವೆ ಎಂದು ಮಾತನಾಡಿದ್ದರು. ಅದನ್ನೇ ಉಲ್ಟಾ ಮಾಡಿ ಹೇಳಿರುವ ರಮ್ಯಾ, ಮೋದಿ ಅಮಲಿನಲ್ಲಿದ್ದಾಗ ಈ ರೀತಿ ಮಾತನಾಡ್ತಾರೆ ಎಂದು ಟ್ವೀಟ್ ಮಾಡಿಬಿಟ್ಟಿದ್ದಾರೆ. ಅಂದಹಾಗೆ ಇಂಗ್ಲಿಷ್‍ನಲ್ಲಿ ಪಾಟ್ ಅಂದರೆ, ಮಡಕೆ ಎಂದಷ್ಟೇ ಅಲ್ಲ, ಮರಿಜುವಾನ (ಮಾದಕ ದ್ರವ್ಯ) ಅನ್ನೋ ಡ್ರಗ್ಸ್ ಸೇವಿಸಿ ಅಮಲಿನಲ್ಲಿರುವವರನ್ನು ಪಾಟ್ ಎಂದು ಹೇಳ್ತಾರೆ. ಪ್ರಧಾನಿಯೊಬ್ಬರನ್ನು ಟೀಕಿಸುವ ಪದ ಅದಾಗಿರಲಿಲ್ಲ. ಆದರೆ, ಇಲ್ಲಿ ರಮ್ಯಾ, ಟೀಕಿಸುವ ಭರದಲ್ಲಿ ಸಂಯಮದ ಗಡಿ ದಾಟಿಬಿಟ್ಟಿದ್ದಾರೆ. ಸಹಜವಾಗಿಯೇ ಹಲವರು ರಮ್ಯಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

  ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್, ಸತತ ಸೋಲಿಗೆ ತಲೆಕೆಟ್ಟು ಆಗಾಗ ವಿದೇಶಕ್ಕೆ ಹೋಗುವವರಿಗೆ ನಶೆಯ ವಿಚಾರ ಚೆನ್ನಾಗಿಯೇ ತಿಳಿದಿರುತ್ತದೆ. ನಟಿ ರಮ್ಯಾ ಹೆಸರಿನಲ್ಲಿಯೇ ರಮ್ ಇದೆ. ಬಹುಶಃ ಆಕೆ ಟ್ವೀಟ್ ಮಾಡುವಾಗಲೆಲ್ಲ ಕುಡಿದೇ ಇರುತ್ತಾರೇನೋ ಎಂದು ಜಾಡಿಸಿದ್ದಾರೆ.

  ನಟ ಜಗ್ಗೇಶ್ `ಮೋದಿಯನ್ನು ಟೀಕಿಸುವ ಯೋಗ್ಯತೆ ರಮ್ಯಾಗಿಲ್ಲ. ಕನ್ನಡ ಮಾತನಾಡಲು ಬಾರದ ಕಾಡುಪಾಪ ಈಕೆ. ಕ್ಯಾಚ್ ಹಾಕ್ಕೊಂಡು ಸಿನಿಮಾ, ದೊಡ್ಡವರ ಆಶೀರ್ವಾದದಲ್ಲಿ ರಾಜಕೀಯ ಮಾಡಿದವರಿಗೆ ಮೋದಿಯವರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ ಎಂದು ಟೀಕಿಸಿದ್ದಾರೆ.

  ಟೀಕೆಗಳ ನಂತರವೂ ರಮ್ಯಾ ಕ್ಷಮೆಯನ್ನೇನೂ ಕೇಳಿಲ್ಲ. ಪಾಟ್ ಎಂದರೆ ಪೊಟ್ಯಾಟೋ, ಆನಿಯನ್, ಟೊಮ್ಯಾಟೋ ಎಂದೇ ಹೇಳಿದ್ದೇನೆ. ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

 • ರಮ್ಯಾ ಏಕೆ ಬರಲಿಲ್ಲ ? - ಇಲ್ಲಿದೆ ಅಸಲಿ ಕಾರಣ

  why didnt ramya attend ambi's funeral

  ರಮ್ಯಾ ಅಂಬರೀಶ್ ಅಂತ್ಯ ಸಂಸ್ಜಾರಕ್ಕೆ ಬರಲಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಸಿಟ್ಟು ತರಿಸಿತ್ತು. ಮಂಡ್ಯದವರಂತೂ ಇನ್ನೊಮ್ಮೆ ಮಂಡ್ಯ ಕಡೆ ಬರೋಕ್ ಹೋಗಬೇಡ ಎಂದು ಗುಡುಗಿದ್ದರು.

  ramya_hurt.jpgರಮ್ಯ ಬರದೇ ಇರುವುದಕ್ಕೆ ಕಾರಣ ಏನೆಂದು ಈಗ ಗೊತ್ತಾಗಿದೆ. 

  ರಮ್ಯಾ ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

 • ರಮ್ಯಾ ಜೊತೆ ಕೆಲಸ ಮಾಡಬೇಕಾ..? ಅರ್ಜಿ ಹಾಕಿ. ಆದರೆ...

  ramya image

  ನಿಮಗೆ ರಮ್ಯಾ ಜೊತೆ ಕೆಲಸ ಮಾಡಲು ಆಸಕ್ತಿ ಇದೆಯೇ..?

  ಕನ್ನಡ, ಮಲಯಾಳಂ, ತೆಲುಗು, ಗುಜರಾತಿ ಭಾಷೆ ಗೊತ್ತಿದೆಯೇ? ತರ್ಜುಮೆ ಮಾಡುವುದು ಗೊತ್ತಿದೆಯೇ..? ಹಾಗಾದರೆ ಅರ್ಜಿ ಹಾಕಿ. ಕೆಲಸ ಸಿಕ್ಕರೂ ಸಿಗಬಹುದು. ಆದರೆ, ಕೆಲಸ ಸಿಗೋದು ಚಿತ್ರರಂಗದಲ್ಲಿ ಅಲ್ಲ. ರಾಜಕೀಯದಲ್ಲಿ. ರಮ್ಯಾ ನಟಿಯಷ್ಟೇ ಅಲ್ಲ, ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣೆಗಳ ಮುಖ್ಯಸ್ಥೆಯೂ ಹೌದು.

  ಪಕ್ಷದ ಸಾಮಾಜಿಕ ಜಾಲತಾಣಗಳನ್ನು ವಿಸ್ತರಿಸುವ ಸಲುವಾಗಿ 25 ಕೆಲಸಗಳಿಗೆ ಅರ್ಜಿ ಕರೆದಿದ್ದಾರೆ.

 • ರಮ್ಯಾ ಪದ್ಮಾವತಿ.. ರಚಿತಾ ಹೊಸ ಪದ್ಮಾವತಿ..

  rachitha ram is the new padmavathi

  ಊರಿಗೊಬ್ಳೇ ಪದ್ಮಾವತಿ.. ಅಂದ್ರೆ ಸಾಕು.. ರಮ್ಯಾ ನೆನಪಾಗ್ತಾರೆ. ಜಾನಿ ಮೇರಾ ನಾಮ್ ಚಿತ್ರದಲ್ಲಿ ದುನಿಯಾ ವಿಜಿ ಮತ್ತು ರಮ್ಯಾ ಕುಣಿದು ಕುಪ್ಪಳಿಸಿದ್ದ ಹಾಡು, ಸೂಪರ್ ಹಿಟ್ ಆಗಿತ್ತು. ಈಗ ಹೊಸ ಪದ್ಮಾವತಿ ಹಾಡು ಬರ್ತಾ ಇದೆ. ಅದು ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ.

  ಆ ಹಾಡಿಗೆ ಹೆಜ್ಜೆ ಹಾಕಿರುವುದು ರಚಿತಾ ರಾಮ್. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ರೈನ್ ಬೋ ಕಾಲೊನಿ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಮುರಳಿ ನೃತ್ಯ ನಿರ್ದೇಶನದಲ್ಲಿ ರಚಿತಾ ಸೌಂದರ್ಯಕ್ಕೆ, ದುನಿಯಾ ವಿಜಿ ಅವರ ಸಿಕ್ಸ್‍ಪ್ಯಾಕ್ ಬಾಡಿಯ ಅನಾವರಣವೂ ಆಗಲಿದೆ.

  ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಎಸ್ ಪಪ್ಪಾದಲ್ಲಿ ಹೊಸ ಪದ್ಮಾವತಿ ಹೇಗೆ ಕಾಣಿಸಿಕೊಳ್ತಾರೋ.. ನೋಡಬೇಕು.

   

 • ರಮ್ಯಾ ಮದುವೆ ಯಾವಾಗ..? - ರಮ್ಯಾ ಅಮ್ಮ ಹೇಳಿದ್ದೇನು..?

  ramya's mother speaks

  ನಟಿ ರಮ್ಯಾ, ತಮ್ಮ ಸ್ಯಾಂಡಲ್‍ವುಡ್ ಕ್ವೀನ್ ಪಟ್ಟ ಕಳಚಿಟ್ಟು, ಅಪ್ಪಟ ರಾಜಕಾರಣಿಯಾಗಿದ್ದಾರೆ. ವಯಸ್ಸು ಆಗಲೇ 37 ವರ್ಷ. ಚಿತ್ರರಂಗದಲ್ಲಿದ್ದಾಗ ರಮ್ಯಾ ಅವರಿಗೆ ಇಂಥಾದ್ದೊಂದು ಪ್ರಶ್ನೆ ಆಗಾಗ್ಗೆ ಎದುರಾಗುತ್ತಿತ್ತು. ಇದರ ಮಧ್ಯೆ ಬ್ಯುಸಿನೆಸ್‍ಮನ್ ಒಬ್ಬರ ಜೊತೆ ಮದುವೆಯ ಸುಳಿವನ್ನೂ ಕೊಟ್ಟಿದ್ದರು ರಮ್ಯಾ. ಆದರೆ, ಅದೇಕೋ ಏನೋ.. ಅದು ಅಷ್ಟಕ್ಕೇ ನಿಂತು ಹೋಯ್ತು. ಈಗ ರಮ್ಯಾ ಮದುವೆ ಸುದ್ದಿ ಎತ್ತಿರುವುದು ರಮ್ಯಾ ಅವರ ತಾಯಿ ರಂಜಿತಾ.

  ಮಗಳನ್ನು ಮದುವೆಯಾಗು ಎಂದು ಒತ್ತಾಯಿಸುತ್ತಲೇ ಇದ್ದೇನೆ. ಅವಳಿಗೆ ತಾನು ಮದುವೆಯಾಗುವ ಹುಡುಗ ಹೀಗೆಯೇ ಇರಬೇಕು ಎಂಬ ಕನಸುಗಳಿವೆ. ಆದರೆ, ನನಗೆ ಹುಡುಗ ವಿದ್ಯಾವಂತನಾಗಿದ್ದು, ನೋಡೋಕೂ ಚೆನ್ನಾಗಿದ್ದು, ಒಳ್ಳೆಯವನಾಗಿದ್ದರೆ ಸಾಕು. ಇನ್ನು ರಮ್ಯಾಗೆ ರಾಜಕೀಯದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠವಿದೆ. ಅದುವರೆಗೂ ಸುಮ್ಮನಿರು ಅಂತಾಳೆ. ಆದರೆ ಮದುವೆಯಾಗಿಯೇ ಸಾಧನೆ ಮಾಡು ಅಂತಾ ನಾನು ಹೇಳ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರಂಜಿತಾ.

  ರಮ್ಯಾ ತಮ್ಮ ತಾಯಿಯ ಮದುವೆಯ ಡಿಮ್ಯಾಂಡ್‍ಗೆ ಸದ್ಯಕ್ಕಂತೂ ನೋ ಎಂದಿದ್ದಾರೆ. ರಾಜಕೀಯದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಪಣ ತೊಟ್ಟು ಹೊರಟಿದ್ದಾರೆ.

 • ರಮ್ಯಾಗೆ ರಾಹುಲ್ ಗಾಂಧಿ ಶುಭ ಕೋರಿದ್ದು ಸುಳ್ಳಾ..?

  ramya birthday wish confusion

  ರಮ್ಯಾ, ನೀವು ಭಾರತದ ಆಸ್ತಿ, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಆಸ್ತಿ. ಆ ದೇವರು ನಿಮಗೆ ಶುಭವನ್ನುಂಟು ಮಾಡಲಿ. ಹುಟ್ಟುಹಬ್ಬದ ಶುಭಾಶಯಗಳು. 

  ಇಂಥಾದ್ದೊಂದು ಶುಭಾಶಯ ಕೋರಿರುವುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಕಾಂಗ್ರೆಸ್‍ನ ಯುವರಾಜ, ನಟಿ ರಮ್ಯಾ ಅವರಿಗೆ ಶುಭ ಕೋರಿರುವುದು ಸೆನ್ಸೇಷನ್ ಸೃಷ್ಟಿಸಿದೆ.

  ಇಂದು ರಮ್ಯಾ ಅವರ 34ನೇ ಹುಟ್ಟುಹಬ್ಬ. ಹೀಗಾಗಿ ಪಕ್ಷದ ಸೋಷಿಯಲ್ ಮೀಡಿಯಾ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ರಮ್ಯಾ ಅವರಿಗೆ ರಾಹುಲ್ ಗಾಂಧಿ ಶುಭ ಹಾರೈಸಿದ್ದರೂ ಇರಬಹುದು ಎಂದುಕೊಂಡರೆ, ಅದು ಇನ್ನೊಂದು ಗೊಂದಲ ಶುರು ಮಾಡುತ್ತೆ.

  ಏಕೆಂದರೆ, ರಮ್ಯಾ ಅವರ ಅಧಿಕೃತ ಟ್ವಿಟರ್‍ನಲ್ಲಾಗಲಿ ಅಥವಾ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಾಗಲೀ, ಇಂಥಾದ್ದೊಂದು ಶುಭ ಹಾರೈಕೆಯ ಯಾವುದೇ ಟ್ವೀಟ್ ಇಲ್ಲ. ಹಾಗಾದರೆ, ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವುದು ಏನು..? 

  ಏನೇ ಇರಲಿ, ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು.

 • ವೋಟ್ ಹಾಕಲೇ ಇಲ್ಲ ರಮ್ಯಾ..!

  ramya didnt cast her vote

  ರಮ್ಯಾ, ಸ್ಯಾಂಡಲ್‍ವುಡ್ ಕ್ವೀನ್ ಆಗಿದ್ದವರು. ಸಂಸದೆಯಾಗಿದ್ದವರು. ಈಗ ಕಾಂಗ್ರೆಸ್‍ನಲ್ಲಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ. ಮತದಾರರನ್ನು ಮತಗಟ್ಟೆಗೆ ಬಂದು ವೋಟ್ ಮಾಡಿ ಎಂದು ಹೇಳುವುದು ಆಯೋಗದ ಕೆಲಸವಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಹೊಣೆಗಾರಿಕೆಯೂ ಹೌದು. ಆದರೆ, ಇಷ್ಟೆಲ್ಲ ಹೊಣೆಗಾರಿಕೆ ಇರುವ ರಮ್ಯಾ ಮತದಾನ ಮಾಡಲು ಬರಲೇ ಇಲ್ಲ.

  ರಮ್ಯಾ ಅವರ ವೋಟ್ ಇರೋದು ಮಂಡ್ಯ ನಗರದ 10ನೇ ವಾರ್ಡ್‍ನಲ್ಲಿ. ಅಧಿಕೃತವಾಗಿ ಅವರು ವಿದ್ಯಾನಗರದ ನಿವಾಸಿ. ಅಲ್ಲಿ ಅವರ ಮನೆಯೂ ಇದೆ. ಲೋಕಸಭೆಗೆ ಸ್ಪರ್ಧಿಸಿದ್ದಾಗ ಬಂದು ಮತ ಹಾಕಿದ್ದೇ ಕೊನೆ, ರಮ್ಯಾ ನಂತರ ವೋಟ್ ಹಾಕೋಕೆ ಬಂದೇ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಮತ ಹಾಕಲು ಬಾರದ ರಮ್ಯಾ, ಈ ಬಾರಿ ವಿಧಾನಸಭೆ ಚುನಾವಣೆಯಿಂದಲೂ ಮತದಾನ ಮಾಡದೆ ದೂರ ಉಳಿದಿದ್ದಾರೆ.

  ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ, ಸಿಎಂ ಆಗಿರುವ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಮತದಾರರಿಗೆ ಪ್ರಜಾಪ್ರಭುತ್ವದ ಪವಿತ್ರ ಹಕ್ಕು ಚಲಾಯಿಸಿ ಎಂದು ಸಂದೇಶ ಕೊಟ್ಟರು. ಆದರೆ, ಆ ಸಂದೇಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ ರಮ್ಯಾ ಅವರೇ ವೋಟ್ ಹಾಕೋಕೆ ಬರಲಿಲ್ಲ.

India Vs England Pressmeet Gallery

Odeya Audio Launch Gallery