` surya sagar, - chitraloka.com | Kannada Movie News, Reviews | Image

surya sagar,

  • ಅರುಣ್ ಸಾಗರ್ ಪುತ್ರ ಮತ್ತೊಮ್ಮೆ ಬರೆದ ಹೊಸ ಇತಿಹಾಸ

    ಅರುಣ್ ಸಾಗರ್ ಪುತ್ರ ಮತ್ತೊಮ್ಮೆ ಬರೆದ ಹೊಸ ಇತಿಹಾಸ

    ಅಪ್ಪ ಕನ್ನಡ ಚಿತ್ರರಂಗದ ಅದ್ವಿತೀಯ ಕಲಾ ನಿರ್ದೇಶಕ. ಮಗ ಸೂರ್ಯ ಸಾಗರ್ ಇಂಡಿಯಾದಲ್ಲಿಯೇ ಅಪರೂಪವಾದ ಮವಾಯ್‍ಥಾಯ್ ಕಲಿತಿರೋ ಕ್ರೀಡಾಪಟು. ಈಗಾಗಲೇ ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದಕ ಗೆದ್ದು ಭಾರತೀಯ ಕ್ರೀಡಾಪಟುಗಳ ಪುಸ್ತಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೂರ್ಯ ಸಾಗರ್ ಇದೀಗ ಮತ್ತೊಮ್ಮೆ ಥೈಲ್ಯಾಂಡ್‍ನಲ್ಲಿ ಸಾಧನೆ ಬರೆದಿದ್ದಾರೆ.

    ಥೈಲ್ಯಾಂಡ್‍ನ ರಾಜಮೆಡ್ನರ್ನ್ ಕ್ರೀಡಾಂಗಣ ಇದೆಯಲ್ಲ, ಅದು ಖ್ಯಾತವಾಗಿರೋದೇ ಮವಾಯ್‍ಥಾಯ್ ಕ್ರೀಡಾಂಗಣ ಎಂದು. ಕ್ರಿಕೆಟ್‍ನಲ್ಲಿ ಲಾಡ್ರ್ಸ್, ಈಡನ್ ಗಾರ್ಡನ್ ಕ್ರೀಡಾಂಗಣಗಳು ಹೇಗೋ.. ಹಾಗೆ ಮವಾಯ್‍ಥಾಯ್‍ನಲ್ಲಿ ಈ ಕ್ರೀಡಾಂಗಣ. ಇಲ್ಲಿ ಸೂರ್ಯ ಸಾಗರ್ ಆಡಿದ್ದಷ್ಟೇ ಅಲ್ಲ, ಪಂದ್ಯವನ್ನೂ ಗೆದ್ದಿದ್ದಾರೆ. ಇದುವರೆಗಿನ ಇತಿಹಾಸದಲ್ಲಿಯೇ ಇಲ್ಲಿ ಆಡಿ ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಬರೆದಿದ್ದಾರೆ.

    ಸೂರ್ಯ ಸಾಗರ್`ಗೆ ಹಲವು ಸೆಲಬ್ರಿಟಿಗಳು ಕಂಗ್ರಾಟ್ಸ್ ಹೇಳಿ ಅಭಿನಂದಿಸಿದ್ದಾರೆ. ಇದಿನ್ನೂ ಆರಂಭ. ಕಲಿಯೋದು ಇನ್ನೂ ಸಾಕಷ್ಟಿದೆ. ಆಟದಲ್ಲಿ ಇನ್ನೂ ಮೇಲೆ ಹೋಗಬೇಕಿದೆ. ಕರಗತ ಮಾಡಿಕೊಳ್ಳಬೇಕಾದ ಪಟ್ಟುಗಳಿವೆ. ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಸೂರ್ಯ ಸಾಗರ್.

  • ದೇಶಕ್ಕೇ ಹೆಮ್ಮೆ ತಂದ ಅರುಣ್ ಸಾಗರ್ ಪುತ್ರ

    arun sagar's son wins gold for india

    ಇತ್ತೀಚೆಗೆ ದೇಶದ ಎಲ್ಲ ಪತ್ರಿಕೆಗಳ ಕ್ರೀಡಾಪುಟಗಳಲ್ಲಿ ಪ್ರಕಟವಾಗಿದ್ದ ಸುದ್ದಿ ಅದು. ಥೈಲ್ಯಾಂಡ್‍ನಲ್ಲಿ ನಡೆದ ಮ್ಯಾಕ್ಸ್ ಮಯಾಥಾಯ್ ಸ್ಪರ್ಧೆಯಲ್ಲಿ ಕರ್ನಾಟಕದ ಸೂರ್ಯ ಪ್ರಶಸ್ತಿ 

    ಗೆದ್ದಿದ್ದರು. ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಗೆಲುವು ಸಾಧಿಸಿದ್ದರು. ಮಾಯಥಾಯ್ ಎನ್ನುವುದು ಮಾರ್ಶಲ್ ಆಟ್ರ್ಸ್‍ನ ಮುಂದುವರಿದ ಭಾಗ. ವಿಶೇಷವಾದ ಸಮರಕಲೆ. 

    ಅಂದಹಾಗೆ ಚಿತ್ರಲೋಕದಲ್ಲಿ ಈ ಹುಡುಗನ ಬಗ್ಗೆ ಹೇಳುತ್ತಿರುವುದಕ್ಕೆ ವಿಶೇಷ ಕಾರಣವೂ ಇದೆ. ಈ ಹುಡುಗ ಸೂರ್ಯ, ಕನ್ನಡದ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಪುತ್ರ. ಮಗನ ಮಾಯಥಾಯ್ ಕನಸಿಗೆ ನೀರೆರೆದಿರುವ ಅರುಣ್ ಸಾಗರ್, ಹಲವು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಕೊಡಿಸುತ್ತಿದ್ದರು. 

    ನನ್ನ ಮಗ ಭಾರತವೇ ಹೆಮ್ಮೆ ಪಡುವಂತಹ ಸಾಧನೆಗೆ ಮುನ್ನುಡಿ ಬರೆದಿದ್ದಾರೆ. ಒಬ್ಬ ತಂದೆಯಾಗಿ ಇದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನಿದೆ. ಅವನು ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಅರುಣ್ ಸಾಗರ್.

    ಗೆಳೆಯನ ಮಗನ ಸಾಧನೆಗೆ ಕಿಚ್ಚ ಸುದೀಪ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ. ಕಂಗ್ರಾಟ್ಸ್ ಸೂರ್ಯ.