` shankare gowda, - chitraloka.com | Kannada Movie News, Reviews | Image

shankare gowda,

  • 3 ವರ್ಷಗಳ ನಂತರ ಕಚಗುಳಿ ಕೋಮಲ್ ವಾಪಸ್

    kachaguli star back after 3 years

    3 ವರ್ಷಗಳ ನಂತರ ಕಚಗುಳಿ ಇಡಲು ಮತ್ತೆ ಬರುತ್ತಿದ್ದಾರೆ ಕೋಮಲ್. 2016ರಲ್ಲಿ ತೆರೆ ಕಂಡಿದ್ದ ಕಥೆ ಚಿತ್ರಕಥೆ ನಿರ್ದೇಶನ  ಪುಟ್ಟಣ್ಣ ಚಿತ್ರವೇ ಕೊನೆ, ನಂತರ ಕೋಮಲ್ ಅವರ ಯಾವುದೇ ಸಿನಿಮಾ ತೆರೆ ಕಂಡಿರಲಿಲ್ಲ. ತೆರೆ ಮೇಲೆ ಇದ್ದಷ್ಟೂ ಹೊತ್ತು ನಗೆಬುಗ್ಗೆ ಸೃಷ್ಟಿಸುತ್ತಿದ್ದ ಕೋಮಲ್, ಈಗ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. 3 ವರ್ಷಗಳ  ಹಿಂದೆ ತೆರೆ ಕಂಡಿದ್ದ ಪುಟ್ಟಣ್ಣ ಸಿನಿಮಾ, ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿತ್ತು. ಪ್ರಿಯಾಮಣಿ ನಾಯಕಿಯಾಗಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಕೋಮಲ್ ಕೆಂಪೇಗೌಡ-2 ನಲ್ಲಿ ನಟಿಸಿದ್ದರು. ಚಿತ್ರದ ಟೀಸರ್ ಕೂಡಾ ಹೊರಬಂದಿತ್ತು. ಆದರೆ, ಸಡನ್ ಬ್ರೇಕ್ ತೆಗೆದುಕೊಂಡಿದ್ದ ಸಿನಿಮಾ, ಈಗ ರಿಲೀಸ್‍ಗೆ ರೆಡಿಯಾಗುತ್ತಿದೆ.

    ಕೆಂಪೇಗೌಡ ಚಿತ್ರದ ಹೀರೋ ಸುದೀಪ್. ನಿರ್ದೇಶನವೂ ಅವರದ್ದೇ. ಆದರೆ, ಕೆಂಪೇಗೌಡ-2 ಚಿತ್ರದ ಹೀರೋ ಕೋಮಲ್. ನಿರ್ದೇಶಕರು ಬೇರಾರೋ ಅಲ್ಲ, ಕೆಂಪೇಗೌಡ ನಿರ್ಮಾಪಕರಾಗಿದ್ದ ಶಂಕರೇಗೌಡ.

    ಚಿತ್ರಕ್ಕಾಗಿ ಕೋಮಲ್ ಅವರು ದೇಹವನ್ನು ಹುರಿಗೊಳಿಸಿದ್ದಾರೆ. ದಪ್ಪಗೆ ಗುಂಡು ಗುಂಡಾಗಿ ಕಾಣುತ್ತಿದ್ದ ಕೋಮಲ್, ಖಡಕ್ ಆಫೀಸರ್ ಗೆಟಪ್‍ಗೆ ಫಿಟ್ ಆಗುವಂತೆ ಸ್ಲಿಮ್ ಆಗಿದ್ದಾರೆ. ಇದಕ್ಕಾಗಿಯೇ ಚಿತ್ರ ತಡವಾಯಿತು ಅನ್ನೋದು ಚಿತ್ರತಂಡದ ಮಾತು.

    ಚಿತ್ರದ ಟ್ರೇಲರ್, ಹಾಡುಗಳ ಬಿಡುಗಡೆಗೆ ಪ್ಲಾನ್ ಮಾಡುತ್ತಿರುವ ಚಿತ್ರತಂಡ, ಸಿನಿಮಾವನ್ನು ಮೇ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧಗೊಳ್ಳುತ್ತಿದೆ.

  • ಡ್ರಗ್ಸ್ ಕೇಸ್ : ನಿರ್ಮಾಪಕ ಶಂಕರೇಗೌಡ ಅರೆಸ್ಟ್

    ಡ್ರಗ್ಸ್ ಕೇಸ್ : ನಿರ್ಮಾಪಕ ಶಂಕರೇಗೌಡ ಅರೆಸ್ಟ್

    ಡ್ರಗ್ಸ್ ಸರಬರಾಜು ಕೇಸ್‍ನಲ್ಲಿ ಈಗ ನಿರ್ಮಾಪಕ ಶಂಕರೇಗೌಡ ಅರೆಸ್ಟಾಗಿದ್ದಾರೆ. ರಾಗಿಣಿ ಮತ್ತು ಸಂಜನಾ ಜಾಮೀನಿನ ನಂತರ ತಣ್ಣಗಾಗಿದ್ದ ಸ್ಯಾಂಡಲ್‍ವುಡ್ ಮತ್ತು ಡ್ರಗ್ಸ್ ಕೇಸ್ ಮತ್ತೆ ಸದ್ದು ಮಾಡೋಕೆ ಶುರು ಮಾಡಿದೆ. ಈಗಾಗಲೇ ಅರೆಸ್ಟ್ ಆಗಿರುವ ಬಿಗ್ ಬಾಸ್ 4 ಸ್ಪರ್ಧಿ, ಡ್ರಗ್ಸ್ ಪೆಡ್ಲರ್ ಆರೋಪಿ ಮಸ್ತಾನ್ ಚಂದ್ರ ಜೊತೆ ಟಚ್‍ನಲ್ಲಿದ್ದ ಶಂಕರೇಗೌಡ, ಪೇಜ್-3 ಪಾರ್ಟಿ ಮಾಡುತ್ತಿದ್ದರು. ಅಲ್ಲಿ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು ಎನ್ನುವುದು ಪೊಲೀಸರ ಆರೋಪ.

    ಕೆಂಪೇಗೌಡ-2 ಚಿತ್ರ ನಿರ್ಮಾಪಕರಾಗಿ ಸದ್ದು, ಸುದ್ದಿ ಮಾಡಿದ್ದ ಶಂಕರೇಗೌಡ, ಈಗ ಡ್ರಗ್ಸ್ ಕೇಸ್‍ನಲ್ಲಿ ಅರೆಸ್ಟ್ ಆಗಿ ಸುದ್ದಿಯಾಗಿದ್ದಾರೆ.