` siddaramaiah, - chitraloka.com | Kannada Movie News, Reviews | Image

siddaramaiah,

 • Kannada Film Industry Upset Over State Budget

  thomas dsouza, siddaramaiah image

  The Kannada film industry is pretty upset over the State Budget for the year 2015-16 submitted by Chief Minister Siddaramaiah in Vidhana Soudha. The Government except from notifying a 100 acre land near Mysore for the proposed film city and has not given anything for the welfare of the Kannada film industry this year. So, the Kannada film industry which had submitted a lot of demands this year is pretty upset about that none of the demands have been met by the government.

  KFCC president Thomas D'Souza has come out in open and has that he is very much unhappy about the budget and has expected much from the Government. Thomas says he had submitted a lot of demands for the welfare of the film industry and none of the demands have been met.

  The KFCC is planning to meet the Chief Minister in this regard and hold talks soon.

 • ಕಲಿ ನಿಲ್ಲೋಕೆ ಮಹಾಭಾರತ ಕಾರಣ..!

  real reason behind kali was stopped

  ಶಿವರಾಜ್‍ಕುಮಾರ್, ಸುದೀಪ್ ಅಭಿನಯದ ಸಿನಿಮಾ ದಿ ವಿಲನ್ ಸಿದ್ಧವಾಗುತ್ತಿದೆ. ಪ್ರೇಮ್ ನಿರ್ದೇಶನದಲ್ಲಿ ರೆಡಿಯಾಗುತ್ತಿರುವ ಸಿನಿಮಾ ದಿನೇ ದಿನೇ ಕುತೂಹಲ ಸೃಷ್ಟಿಸುತ್ತಿರುವುದು ನಿಜ. ಆದರೆ, ಈ ಇಬ್ಬರು ಸ್ಟಾರ್‍ಗಳ ಕಾಂಬಿನೇಷನ್‍ನ ಚಿತ್ರ ಮೊದಲು ದಿ ವಿಲನ್ ಆಗಿರಲಿಲ್ಲ, ಕಲಿ ಎಂದಾಗಿತ್ತು. 

  ಕಲಿ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಬಹುತೇಕ ಕನ್ನಡ ಚಿತ್ರರಂಗ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ನಿಂತುಹೋಯ್ತು, ದಿ ವಿಲನ್ ಶುರುವಾಯ್ತು.

  ಕಲಿ ನಿಂತು ಹೋಗಿದ್ದೇಕೆ ಅನ್ನೋ ಅನುಮಾನಗಳಿಗೆ ಈಗ ಸುದೀಪ್ ಉತ್ತರ ಕೊಟ್ಟಿದ್ದಾರೆ.

  ಕಲಿ ಚಿತ್ರದಲ್ಲಿ ಪ್ರೇಮ್, ಮಹಾಭಾರತದ ಒಂದು ಎಳೆಯನ್ನಿಟ್ಟುಕೊಂಡು ಸ್ಕ್ರಿಪ್ಟ್ ಮಾಡಿದ್ದರು. ಅದರಲ್ಲಿ ಸುದೀಪ್‍ಗೆ ಕೆಲವು ನೆಗೆಟಿವ್ ಅಂಶಗಳು ಕಂಡು ಬಂದವು. ಮಹಾಭಾರತದ ಅದೊಂದು ಅಂಶವನ್ನು ಮುಟ್ಟಬೇಡಿ, ಪಾಸಿಟಿವ್ ಸ್ಕ್ರಿಪ್ಟ್ ಆಗಲ್ಲ ಎಂದರು ಸುದೀಪ್. ನಿರ್ಮಾಪಕ ಮನೋಹರ್ ಅವರಿಗೂ ವಿಷಯ ತಿಳಿಸಿದ್ರು. ಅವರಿಗೂ ಸುದೀಪ್ ಹೇಳಿದ್ದು ಸರಿ ಎನ್ನಿಸ್ತು. ಹೀಗಾಗಿ ಕಲಿ ಸಿನಿಮಾ ನಿಂತುಹೋಯ್ತು.

  ಈ ಸಿನಿಮಾ ನಿಂತು ಹೋದರೆ, ಗಾಂಧಿನಗರದಲ್ಲಿ ಏನೇನೋ ಮಾತು ಶುರುವಾಗುತ್ತೆ ಅನ್ನೋ ಭಯ ಪ್ರೇಮ್‍ಗಿತ್ತು. ಆಗ ಸುದೀಪ್, ನಮ್ಮಿಬ್ಬರನ್ನೇ ಇಟ್ಟುಕೊಂಡು ಬೇರೆ ಸ್ಕ್ರಿಪ್ಟ್ ಮಾಡಿ ಎಂದರು. ಆಗ ಶುರುವಾಗಿದ್ದೇ ದಿ ವಿಲನ್. 

 • ಮಾಜಿ ಸಿಎಂಗೆ ಫಿಲಂಚೇಂಬರ್ ಅಭಿನಂದನೆ

  kfcc leaders honor siddaramaiah

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಧಿಕಾರಾವಧಿಯಲ್ಲಿ ಚಿತ್ರರಂಗಕ್ಕೆ ಹಲವು ಕೊಡುಗೆ ನೀಡಿದವರು. ಚಿತ್ರರಂಗದ ಹಲವು ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರಿಗೆ ಫಿಲಂಚೇಂಬರ್‍ನ ನೂತನ ಅಧ್ಯಕ್ಷ ಚಿನ್ನೇಗೌಡ, ಕಾರ್ಯದರ್ಶಿ ಬಾ.ಮಾ.ಹರೀಶ್, ಶಿಲ್ಪ ಶ್ರೀನಿವಾಸ್, ಉಪಾಧ್ಯಕ್ಷರಾದ ಕರಿಸುಬ್ಬು, ಕೆಸಿ ಅಶೋಕ್, ಖಜಾಂಚಿ ಕೆ.ಎಂ.ವೀರೇಶ್ ಅಭಿನಂದನೆ ಸಲ್ಲಿಸಿದರು. ಚಿತ್ರರಂಗದ ಹಲವು ಬೇಡಿಕೆಗಳ ಕುರಿತು ಈಗಿನ ಸಮ್ಮಿಶ್ರ ಸರ್ಕಾರದಲ್ಲೂ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.

 • ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಸಿದ್ದರಾಮಯ್ಯ ಶುಭಾಶಯ

  siddaramaiah wishes best wishes to missing boy team

  ಮಿಸ್ಸಿಂಗ್ ಬಾಯ್ ಚಿತ್ರ, ನಿಧಾನವಾಗಿ ಚಿತ್ರರಸಿಕರವನ್ನು ಆವರಿಸಿಕೊಳ್ಳುತ್ತಿದೆ. ನೈಜ ಘಟನೆ ಆಧರಿತ ಕಥೆ ಹೊಂದಿರುವ ಮಿಸ್ಸಿಂಗ್ ಬಾಯ್ ಸಿನಿಮಾ, ಕಿಚ್ಚ ಸುದೀಪ್, ನಾನಿ, ಶಿವಣ್ಣ ಮೊದಲಾದವರ ಗಮನ ಸೆಳೆದಿದೆ. ಈಗ ರಾಜಕಾರಣಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

  ಚುನಾವಣೆಯ ಬಿಡುವಿಲ್ಲದ ಶೆಡ್ಯೂಲ್ ನಡುವೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಸಿದ್ದರಾಮಯ್ಯ. ಯಾವುದೇ ಚಿತ್ರ, ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು. ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭವಾಗಲಿ ಎಂದಿದ್ದಾರೆ.

  ಸಿದ್ದು ಒಬ್ಬರೇ ಅಲ್ಲ, ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡಾ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ರಘುರಾಮ್ ನಿರ್ದೇಶನದ ಚಿತ್ರದಲ್ಲಿ ಗುರುನಂದನ್, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ 22ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery